• English
  • Login / Register

ಟರ್ಬೋ ವೇರಿಯೆಂಟ್‌ಗಳಿಗೆ ಎಕ್ಸ್‌ಕ್ಲೂಸಿವ್ ಆಗಿವೆ ಹೊಸ ವರ್ನಾದ ಈ 5 ಫೀಚರ್‌ಗಳು

ಹುಂಡೈ ವೆರ್ನಾ ಗಾಗಿ ansh ಮೂಲಕ ಮಾರ್ಚ್‌ 24, 2023 01:59 pm ರಂದು ಪ್ರಕಟಿಸಲಾಗಿದೆ

  • 18 Views
  • ಕಾಮೆಂಟ್‌ ಅನ್ನು ಬರೆಯಿರಿ

ಅಧಿಕ ಶಕ್ತಿಶಾಲಿ ಪವರ್‌ಟ್ರೇನ್ ಹೊರತುಪಡಿಸಿ, ಟರ್ಬೋ ವೇರಿಯೆಂಟ್‌ಗಳು ಕೂಡಾ ವಿಭಿನ್ನ ಕ್ಯಾಬಿನ್ ಥೀಮ್ ಮತ್ತು ಹೆಚ್ಚಿನ ಫೀಚರ್‌ಗಳನ್ನು ಪಡೆದಿವೆ.

Hyundai Verna: Regular vs Turbo

ಹ್ಯುಂಡೈ ಅಂತಿಮವಾಗಿ ಆರನೇ-ಪೀಳಿಗೆ ವರ್ನಾ ಅನ್ನು ಬಿಡುಗಡೆ ಮಾಡಿದ್ದು, ಈಗ ಇದು ದಟ್ಟ ಹೊಸ ವಿನ್ಯಾಸ, ದೊಡ್ಡ ಪ್ರಮಾಣಗಳು ಮತ್ತು ಹೊಸ ಫೀಚರ್‌ಗಳನ್ನು ಪಡೆದಿದೆ. ಈ ಸೆಡಾನ್ ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದ್ದು, ಎರಡೂ ಪೆಟ್ರೋಲ್: 1.5-ಲೀಟರ್ ನೈಸರ್ಗಿಕ ಆ್ಯಸ್ಪಿರೇಟೆಡ್ ಯೂನಿಟ್ (115PS ಹಾಗೂ 144Nm) ಮತ್ತು a 1.5-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ (160PS ಹಾಗೂ 253Nm). ಟರ್ಬೋ ಚಾರ್ಜ್ಡ್ ಎಂಜಿನ್ ಹೊಂದಿರುವ ವರ್ನಾ ಹೆಚ್ಚು ಶಕ್ತಿಶಾಲಿ ಮಾತ್ರವಲ್ಲದೇ ಹೆಚ್ಚು ಇಂಧನ-ದಕ್ಷತೆಯನ್ನು ಸಹ ಹೊಂದಿದೆ ಆದರೆ ಕೆಲವು ವಿಶೇಷ ಬಿಟ್ಸ್ ಅನ್ನು ಪಡೆದಿದೆ.

ಸ್ಪೋರ್ಟಿಯರ್ ಎಕ್ಸ್‌ಟೀರಿಯರ್

Hyundai Verna: Fiery Red Dual-tone

Hyundai Verna: Atlas White Dual-tone

ಟರ್ಬೋ-ಪೆಟ್ರೋಲ್ ಎಂಜಿನ್ ಅನ್ನು 2023 ವರ್ನಾದ ಟಾಪ್-ಸ್ಪೆಕ್ SX ಮತ್ತು SX(O) ವೇರಿಯೆಂಟ್‌ಗಳೊಂದಿಗೆ ನೀಡಲಾಗಿದೆ. ಆ ವೇರಿಯೆಂಟ್ ಮತ್ತು ಪವರ್‌ಟ್ರೇನ್ ಸಂಯೋಜನೆಯು ಮಾತ್ರ ಡ್ಯುಯಲ್-ಟೋನ್ ಎಕ್ಸ್‌ಟೀರಿಯರ್ ಬಣ್ಣಗಳು, ಮುಂಭಾಗದ ಕೆಂಪು ಕ್ಯಾಲಿಪರ್‌ಗಳು ಮತ್ತು 16-ಇಂಚಿನ ಅಲಾಯ್ ವ್ಹೀಲ್‌ಗಳ ಆಯ್ಕೆಯನ್ನು ಪಡೆದಿದೆ. ಈ ಎಲ್ಲಾ ವಿವರಗಳು, ಕಾರ್ಯಕ್ಷಮತೆ-ಆಧಾರಿತ ವೇರಿಯೆಂಟ್‌ಗಳನ್ನು ಸ್ಪೋರ್ಟಿ ಸ್ಟೈಲಿಂಗ್ ವಿವರಗಳೊಂದಿಗೆ ಎದ್ದು ಕಾಣುವಂತೆ ಮಾಡುತ್ತದೆ.

ವಿಭಿನ್ನ ಕ್ಯಾಬಿನ್ ಥೀಮ್

Hyundai Verna Turbo-petrol Cabin

ಟರ್ಬೋ ರಹಿತ ವೇರಿಯೆಂಟ್‌ಗಳು ಡ್ಯುಯಲ್ ಟೋನ್ ಕಪ್ಪು ಮತ್ತು ಬೀಜ್ ಕ್ಯಾಬಿನ್ ಥೀಮ್ ಪಡೆದರೆ, ಟರ್ಬೋ ವೇರಿಯೆಂಟ್‌ಗಳು ಸಂಪೂರ್ಣ ಕಪ್ಪು ಕ್ಯಾಬಿನ್ ಜೊತೆಗೆ ಸ್ಟೀಯರಿಂಗ್ ವ್ಹೀಲ್‌ಗಳ ಮೇಲೆ ಕೆಂಪು ಒಳಜೋಡಣೆ, ಗೇರ್ ಶಿಫ್ಟರ್, ಮೇಲ್ಹೊದಿಕೆ ಮತ್ತು ಒಳಭಾಗದ ಡೋರ್ ಹ್ಯಾಂಡಲ್‌ಗಳನ್ನು ಪಡೆಯುತ್ತವೆ. ಅವು ಡ್ಯಾಶ್‌ಬೋರ್ಡ್‌ನ ಉದ್ದಕ್ಕೂ ಕೆಂಪು ಆ್ಯಂಬಿಯಂಟ್ ಲೈಟ್ ಸ್ಟ್ರಿಪ್‌ ಅನ್ನು ಸಹ ಪಡೆಯುತ್ತವೆ. ಈ ಕೆಂಪು ಒಳಜೋಡಣೆಯು ಒಳಭಾಗದಿಂದಲೂ ಸಹ ಟರ್ಬೋ ವೇರಿಯೆಂಟ್‌ಗಳ ಸ್ಪೋರ್ಟಿ ಭಾವನೆಯನ್ನು ಹೆಚ್ಚಿಸುತ್ತವೆ.

ಹೆಚ್ಚಿನ ADAS

Hyundai Verna

ಈ ಹೊಸ ಹ್ಯುಂಡೈ ವರ್ನಾ, ಮುಂಭರುವ ಘರ್ಷಣೆಯ ವಾರ್ನಿಂಗ್, ಮುಂಬರುವ ಘರ್ಷಣೆಯನ್ನು ತಪ್ಪಿಸುವ ಸಹಾಯ, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್, ಲೇನ್-ಕೀಪ್ ಅಸಿಸ್ಟ್ ಹೈ ಬೀಮ್ ಅಸಿಸ್ಟ್ ಮತ್ತು ಚಾಲಕನ ಅಟೆನ್ಶನ್ ವಾರ್ನಿಂಗ್‌ನಂತಹ ರಡಾರ್-ಆಧಾರಿತ ADAS ಅನ್ನು ಹೊಂದಿದೆ. ಆದಾಗ್ಯೂ, ಪ್ರಮುಖ ವಾಹನ ನಿರ್ಗಮನ ಅಲರ್ಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ಗಳು ಟಾಪ್-ಸ್ಪೆಕ್ ಟರ್ಬೋ-ಪೆಟ್ರೋಲ್  DCT SX(O) ವೇರಿಯೆಂಟ್‌ಗಳಿಗೆ ಎಕ್ಸ್‌ಕ್ಲೂಸಿವ್ ಆಗಿ ನೀಡಲಾಗಿದೆ.

ರಿಯರ್ ಡಿಸ್ಕ್ ಬ್ರೇಕ್‌ಗಳು

Hyundai Verna: Rear Disc Brakes

 SX(O) ಟರ್ಬೋ DCT ವೇರಿಯೆಂಟ್‌ಗೆ ಮಾತ್ರ ಸೀಮಿತವಾದ ಮತ್ತೊಂದು ಫೀಚರ್‌ ಎಂದರೆ ರಿಯರ್ ಡಿಸ್ಕ್ ಬ್ರೇಕ್‌ಗಳು. ಉಳಿದ ಎಲ್ಲಾ ವೇರಿಯೆಂಟ್‌ಗಳು ಹಿಂಭಾಗದಲ್ಲಿ ಡ್ರಮ್ ಬ್ರೇಕ್‌ಗಳನ್ನು ಪಡೆದಿವೆ.

 

ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್

Hyundai Verna Turbo-petrol Electronic Parking Brake

 ಒಂದು ದೊಡ್ಡ ಫೀಚರ್ ವ್ಯತ್ಯಾಸವಲ್ಲದಿದ್ದರೂ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಕಾರನ್ನು ಹೆಚ್ಚು ಪ್ರೀಮಿಯಂ ಎನಿಸುವಂತೆ ಮಾಡುತ್ತದೆ ಮತ್ತು ಅನುಕೂಲತೆಯನ್ನು ಹೆಚ್ಚಿಸುತ್ತದೆ. ವರ್ನಾದ ಟರ್ಬೋ ಆವೃತ್ತಿಯು ಈ ಕಾರ್ಯವನ್ನು ಟಾಪ್-ಸ್ಪೆಕ್ SX(O) DCT ವೇರಿಯೆಂಟ್‌ಗಳಲ್ಲಿ ಮಾತ್ರ ಪಡೆದಿದೆ, ಆದರೆ ಈ ಸೆಡಾನ್‌ನ ಇತರ ಎಲ್ಲಾ ವೇರಿಯೆಂಟ್‌ಗಳು ಸಾಂಪ್ರದಾಯಿಕ ಹ್ಯಾಂಡ್ ಬ್ರೇಕ್‌ನೊಂದಿಗೆ ಬರುತ್ತವೆ.

ಇದನ್ನೂ ಓದಿ: ಸಂಪೂರ್ಣ ಹೊಸ ವರ್ನಾದ ವೇರಿಯೆಂಟ್-ವಾರು ಫೀಚರ್‌ಗಳನ್ನು ಅನ್ವೇಷಿಸಿ

 ಈ 2023 ಹ್ಯುಂಡೈ ವರ್ನಾ ರೂ. 10.90 ಲಕ್ಷದಿಂದ ರೂ. 17.38 ಲಕ್ಷಗಳವರೆಗೆ ಬೆಲೆಯನ್ನು ಹೊಂದಿದೆ ಮತ್ತು ಟರ್ಬೋ-ಪೆಟ್ರೋಲ್ ವೇರಿಯೆಂಟ್‌ಗಳು ರೂ. 14.84 ಲಕ್ಷ (ಪ್ರಾಸ್ತಾವಿಕ, ಎಕ್ಸ್-ಶೋರೂಮ್) ಆರಂಭಿಕ ಬೆಲೆಯನ್ನು ಹೊಂದಿದೆ. ಇದು, ಹೋಂಡಾ ಸಿಟಿಸ್ಕೋಡಾ ಸ್ಲಾವಿಯಾ, ಫೋಕ್ಸ್‌ವ್ಯಾಗನ್ ವರ್ಟಸ್ ಮತ್ತು ಮಾರುತಿ ಸಿಯಾಜ್ ಗೆ ಪ್ರತಿಸ್ಪರ್ಧಿಯಾಗಿದೆ. 

ಇನ್ನೂ ಹೆಚ್ಚಿನದನ್ನು ಇಲ್ಲಿ ಓದಿ ವರ್ನಾ ಆನ್ ರೋಡ್ ಬೆಲೆ

 

 

ಅವರಿಂದ ಪ್ರಕಟಿಸಲಾಗಿದೆ
was this article helpful ?

Write your Comment on Hyundai ವೆರ್ನಾ

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಸೆಡಾನ್‌ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience