Login or Register ಅತ್ಯುತ್ತಮ CarDekho experience ಗೆ
Login

2023 ರ ಮೇನಲ್ಲಿ ಬಿಡುಗಡೆಯಾಗಬಹುದೆಂದು ನಿರೀಕ್ಷಿಸಲಾದ 6 ಕಾರುಗಳು

published on ಮೇ 05, 2023 10:48 am by tarun for ಮಾರುತಿ ಜಿಮ್ನಿ

2023 ರ ಬಹುನಿರೀಕ್ಷಿತ ಕಾರುಗಳು ಅಂತಿಮವಾಗಿ ಮೇ ತಿಂಗಳಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಬಹುದು

ಸಂಭ್ರಮದ ಮತ್ತು ಪ್ರಮುಖ ಬಿಡುಗಡೆಯನ್ನೊಳಗೊಂಡ ಮತ್ತೊಂದು ತಿಂಗಳು ನಮ್ಮ ಮುಂದಿದೆ. 2023 ರ ಐದನೇ ತಿಂಗಳಿನಲ್ಲಿ ಕೆಲವು ಕಾರುಗಳು ಬಿಡುಗಡೆಯ ಹೊಸ್ತಿಲಿನಲ್ಲಿ ನಿಂತಿದ್ದು ಇವುಗಳಿಗಾಗಿ ನೀವು ಒಂದು ವರ್ಷಕ್ಕೂ ಹೆಚ್ಚು ಕಾಲ ಕಾಯುತ್ತಿರಬಹುದು. ಮಾರುತಿಯು ಅಂತಿಮವಾಗಿ ದೊಡ್ಡ ಮಟ್ಟದ ಕಾರುಗಳನ್ನು ಬಿಡುಗಡೆಗೊಳಿಸುವ ಯೋಜನೆಯನ್ನು ಹೊಂದಿದೆ, ಮಾತ್ರವಲ್ಲದೇ ಕಿಯಾ ಸಹ ಏನಾದರೂ ಯೋಜನೆಯನ್ನು ಹಾಕಿಕೊಂಡಿಬಹುದು. ಮೇ ತಿಂಗಳಿನಲ್ಲಿ ನಾವು ನಿರೀಕ್ಷಿಸುತ್ತಿರುವ ಆರು ಕಾರುಗಳ ಪಟ್ಟಿಯು ಇಲ್ಲಿದೆ

ಮಾರುತಿ ಜಿಮ್ನಿ

ನಿರೀಕ್ಷಿತ ಬೆಲೆ – ರೂ. 10 ಲಕ್ಷಕ್ಕೂ ಮೇಲ್ಪಟ್ಟು

ಆಟೋ ಎಕ್ಸ್‌ಪೋ 2023 ರಲ್ಲಿ ಇದನ್ನು ಅನಾವರಣಗೊಳಿಸಿದ ನಂತರ, ಈ ತಿಂಗಳಿನಲ್ಲಿ ನಾವು ಈ ಮಾರುತಿ ಜಿಮ್ನಿ ಅನ್ನು ಪಡೆಯುವ ಸಾಧ್ಯತೆಯಿದೆ. ಈ ಜಿಪ್ಸಿಗೆ ಬದಲಿಯಾಗಿ ಇದನ್ನು ಐದು-ಬಾಗಿಲಿನ ಆವೃತ್ತಿಯಲ್ಲಿ 4X4 ಪ್ರಮಾಣಿತವಾಗಿ ನೀಡಲಾಗುವುದು. ಇದು 5-ಸ್ಪೀಡ್ ಮ್ಯಾನ್ಯುವಲ್ ಮತ್ತು 4-ಸ್ಪೀಡ್ ಆಟೋಮ್ಯಾಟಿಕ್ ಆಯ್ಕೆಗಳೊಂದಿಗೆ ಮಾರುತಿಯ ವಿಶ್ವಾಸಾರ್ಹ 103PS 1.5-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆದಿದೆ. 9-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಆಟೋಮ್ಯಾಟಿಕ್ ಎಸಿ, ಕ್ರೂಸ್ ಕಂಟ್ರೋಲ್, ರಿಯರ್ ಪಾರ್ಕಿಂಗ್ ಕ್ಯಾಮರಾ, ಮತ್ತು ಆರು ಏರ್‌ಬ್ಯಾಗ್‌ಗಳು ಇದರಲ್ಲಿನ ಆನ್‌ಬೋರ್ಡ್ ಫೀಚರ್‌ಗಳಾಗಿವೆ. ಅದೇ ಲೈಫ್‌ಸ್ಟೈಲ್ ಎಸ್‌ಯುವಿ ಜಾಗಕ್ಕೆ ವಿಭಿನ್ನ ಶೈಲಿಯನ್ನು ಹೊಂದಿರುವ ಮಹೀಂದ್ರಾ ಥಾರ್‌ಗೆ ಅಸಾಧಾರಣ ಪ್ರತಿಸ್ಪರ್ಧಿಯಾಗಿರಲಿದೆ.

ಟಾಟಾ ಆಲ್ಟ್ರೋಸ್ ಸಿಎನ್‌ಜಿ

ನಿರೀಕ್ಷಿತ ಬೆಲೆ – ರೂ. 7.35 ಲಕ್ಷದಿಂದ ಮೇಲ್ಪಟ್ಟು

ಈಗ ಸಿಎನ್‌ಜಿ ಬ್ಯಾಂಡ್‌ವ್ಯಾಗನ್‌ಗೆ ಸೇರ್ಪಡೆಗೊಳ್ಳುತ್ತಿರುವುದು ಮೇ ತಿಂಗಳ ಆರಂಭದಲ್ಲಿ ಬಿಡುಗಡೆಯಾಗುತ್ತಿರುವ ಟಾಟಾ ಆಲ್ಟ್ರೋಝ್. ಈ ಆಲ್ಟ್ರೋಸ್ ಸಿಎನ್‌ಜಿ ಪ್ರಮುಖ ಅಂಶವೆಂದರೆ ಅದರ ಡ್ಯುಯಲ್ ಸಿಎನ್‌ಜಿ ಸಿಲಿಂಡರ್ ಸೆಟಪ್ ಆಗಿದ್ದು, ಇದು ಸಾಂಪ್ರದಾಯಿಕ ಸಿಎನ್‌ಜಿ ಸೆಟಪ್‌ಗಳಿಗೆ ಹೋಲಿಸಿದರೆ ಸಾಕಷ್ಟು ಬೂಟ್ ಸ್ಪೇಸ್ ಅನ್ನು ಹೊಂದಿದೆ. ಇದು 73.5PS ಮತ್ತು 103Nm ಬಿಡುಗಡೆಗೊಳಿಸುವ 1.2-ಲೀಟರ್ ಪೆಟ್ರೋಲ್-ಸಿಎನ್‌ಜಿ ಎಂಜಿನ್ ಅನ್ನು ಹೊಂದಿದ್ದು, ಇದು ಐದು-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ. ಇದಕ್ಕೆ ಪರ್ಯಾಯವಾಗಿ, ನೀವು ಮಾರುತಿ ಬಲೆನೊ ಮತ್ತು ಟೊಯೋಟಾ ಗ್ಲಾನ್ಝಾ ಸಿಎನ್‌ಜಿ ಅನ್ನು ಪರಿಶೀಲಿಸಬಹುದು.

ಹ್ಯುಂಡೈ ಎಕ್ಸ್‌ಟರ್

ನಿರೀಕ್ಷಿತ ಬೆಲೆ – ರೂ. 6 ಲಕ್ಷಕ್ಕೂ ಮೇಲ್ಪಟ್ಟು

ಭಾರತಕ್ಕಾಗಿ ಹ್ಯುಂಡೈನ ಎಲ್ಲಾ ಹೊಸ ಎಸ್‌ಯುವಿ ಮೇ ತಿಂಗಳಲ್ಲಿ ಅನಾವರಣಗೊಳ್ಳಬಹುದು. ಈ ಎಕ್ಸ್‌ಟರ್ ಮೈಕ್ರೋ ಎಸ್‌ಯುವಿ ಆಗಿದ್ದು ಅದನ್ನು ವೆನ್ಯೂವಿನ ಕೆಳಗಿನ ಸ್ಥಾನದಲ್ಲಿ ಇರಿಸಲಾಗಿದೆ. ಬಾಕ್ಸಿ ತರಹದ ಮತ್ತು ನೇರವಾದ ಸ್ಟೈಲಿಂಗ್‌ನೊಂದಿಗೆ ಇದು ಗ್ರ್ಯಾಂಡ್ i10 ನಿಯೋಸ್‌ಗೆ ಗಟ್ಟುಮುಟ್ಟಾದ ಮತ್ತು ಎಸ್‌ಯುವಿ ತರಹದ ಪರ್ಯಾಯವಾಗಬಹುದು. ಫೀಚರ್‌ಗಳ ವಿಷಯದಲ್ಲಿ ಇದು, ಎಲೆಕ್ಟ್ರಿಕ್ ಸನ್‌ರೂಫ್, ದೊಡ್ಡ ಟಚ್‌ಸ್ಕ್ರೀನ್ ಸಿಸ್ಟಮ್, ಕ್ರೂಸ್ ಕಂಟ್ರೋಲ್, ವೈರ್‌ಲೆಸ್ ಚಾರ್ಜರ್, ಆರು ಏರ್‌ಬ್ಯಾಗ್‌ಗಳು, ಮತ್ತು ರಿಯರ್ ಕ್ಯಾಮರಾವನ್ನು ಪಡೆಯುತ್ತದೆ. ಹ್ಯುಂಡೈ ಈ ಮೈಕ್ರೋ ಎಸ್‌ಯುವಿಯನ್ನು ನಿಯೋಸ್‌ನ 1.2-ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯೊಂದಿಗೆ ನೀಡುತ್ತದೆ. ಇದು ಟರ್ಬೋ-ಪೆಟ್ರೋಲ್ ಎಂಜಿನ್ ಅನ್ನು ಸಹ ಹೊಂದಿರುವ ಸಾಧ್ಯತೆಯಿದೆ.

ಕಿಯಾ ಸೆಲ್ಟೋಸ್ 2023

ನಿರೀಕ್ಷಿತ ಬೆಲೆ – ರೂ. 11 ಲಕ್ಷದಿಂದ ಮೇಲ್ಪಟ್ಟು

ಮೇ ತಿಂಗಳಿನಲ್ಲಿ ನಾವು ನವೀಕೃತ ಕಿಯಾ ಸೆಲ್ಟೋಸ್ ನ ಅನಾವರಣವನ್ನು ಅಥವಾ ಕನಿಷ್ಠ ಅವುಗಳ ಕುರಿತಾದ ವಿವರಗಳನ್ನು ಪಡೆಯುವ ನಿರೀಕ್ಷೆಯಿದೆ. ಈ ಕಾಂಪ್ಯಾಕ್ಟ್ ಎಸ್‌ಯುವಿ ಅದರ ಮೂಲಕ ರೂಪುರೇಖೆಯನ್ನು ಒಳಗೊಂಡಂತೆ ಹೊರಭಾಗ ಮತ್ತು ಒಳಭಾಗದಲ್ಲಿ ಗಮನಾರ್ಹವಾದ ನವೀಕೃತ ನೋಟವನ್ನು ಪಡೆಯುತ್ತದೆ. ಈಗಾಗಲೇ ಫೀಚರ್‌-ಭರಿತವಾಗಿರುವ ಇದು, ಟಚ್‌ಸ್ಕ್ರೀನ್ ಸಿಸ್ಟಮ್‌ಗಾಗಿ ಡ್ಯುಯಲ್ 10.25-ಇಂಚಿನ ಸ್ಕ್ರೀನ್‌ಗಳು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಪ್ಯಾನರಾಮಿಕ್ ಸನ್‌ರೂಫ್, ಹೀಟೆಡ್ ಫ್ರಂಟ್ ಸೀಟುಗಳು, ಮತ್ತು ADAS (ಸುಧಾರಿತ ಚಾಲಕ ಸಹಾಯ ವ್ಯವಸ್ಥೆ) ಅನ್ನು ಪಡೆಯುತ್ತದೆ. 1.5-ಲೀಟರ್ ಪೆಟ್ರೋಲ್ ಮತ್ತು ಡಿಸೇಲ್ ಎಂಜಿನ್‌ಗಳು ಅದೇ ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳೊಂದಿಗೆ ಮುಂದುವರಿಯುತ್ತವೆ. ಕ್ಯಾರೆನ್ಸ್‌ನ 160PS 1.5-ಲೀಟರ್ ಟರ್ಬೋ-ಪೆಟ್ರೋಲ್ ಯೂನಿಟ್ ಅನ್ನು ನವೀಕೃತಗೊಳಿಸಲಾಗುವುದು.

ಬಿಎಂಡಬ್ಲ್ಯೂ X3 M40i

ನಿರೀಕ್ಷಿತ ಬೆಲೆ - ರೂ 90 ಲಕ್ಷ

ಬಿಎಂಡಬ್ಲ್ಯೂ X3 ನ ಸ್ಪೋಪ್ಟಿಯೆಸ್ಟ್ ವೇರಿಯೆಂಟ್ ಈಗಾಗಲೇ ಆರ್ಡರ್‌ಗೆ ಲಭ್ಯವಿದ್ದು ಇದು ಮೇ ತಿಂಗಳಲ್ಲಿ ಮಾರಾಟಕ್ಕೆ ಬರಲಿದೆ. ಈ M40i ವೇರಿಯೆಂಟ್ ಒಳಭಾಗ ಮತ್ತು ಹೊರಭಾಗದಲ್ಲಿ ‘ಎಂ ಸ್ಪೋರ್ಟ್’ ನಿರ್ದಿಷ್ಟ ಅಂಶಗಳನ್ನು ಪಡೆಯುವುದರಿಂದ ಇದು ಸಾಮಾನ್ಯ X3 ವೇರಿಯೆಂಟ್‌ಗಳಿಗಿಂತ ಹೆಚ್ಚು ದೃಢವಾಗಿ ಕಾಣುವಂತೆ ಮಾಡುತ್ತದೆ. X3 M40i ಜೊತೆಗೆ 360PS ಮತ್ತು 500Nm ಕಾರ್ಯಕ್ಷಮತೆಯನ್ನು ಕ್ಲೈಮ್ ಮಾಡುವ 3-ಲೀಟರ್ ಟ್ವಿನ್-ಟರ್ಬೋ ಇನ್‌ಲೈನ್ ಆರು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ನೀಡಲಾಗುವುದು. ಇದು ಕೇವಲ 4.9 ಸೆಕೆಂಡುಗಳಲ್ಲಿ 100kmph ವೇಗ ಸಾಧಿಸುತ್ತದೆ.

ಬಿಎಂಡಬ್ಲ್ಯೂ M2

ನಿರೀಕ್ಷಿತ ಬೆಲೆ – ರೂ. 1 ಕೋಟಿ

ಸ್ಪೋರ್ಟಿ ಬಿಎಂಡಬ್ಲ್ಯೂಗಳ ಬಗ್ಗೆ ಮಾತನಾಡಬೇಕೆಂದರೆ, ಇದು ಜರ್ಮನ್ ಕಾರು ತಯಾರಕರ ಸ್ಪೋರ್ಟಿಯಸ್ಟ್ ಕಾರುಗಳಲ್ಲಿ ಒಂದಾಗಿದೆ. ಕಾಂಪ್ಯಾಕ್ಟ್ ಸ್ಪೋರ್ಟ್ ಕೂಪ್ ಆಗಿರುವ, ಈ M2, ವಿಶ್ವದ ಅತ್ಯಂತ ಸರಾಸರಿ ಬಿಎಂಡಬ್ಲ್ಯೂಗಳಲ್ಲಿ ಒಂದಾಗಿದೆ ಮತ್ತು ಅದರ ಇತ್ತೀಚಿನ ತಲೆಮಾರಿನ ಕಾರು ಭಾರತಕ್ಕೆ ಆಮದಾಗುವ ಮೂಲಕ ಮೇ ತಿಂಗಳಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ. ಇದು 3-ಲೀಟರ್ ಟ್ವಿನ್-ಟರ್ಬೋ ಆರು-ಸಿಲಿಂಡರ್ ಎಂಜಿನ್ ಅನ್ನು ಹೊಂದಿದ್ದು, 460PS ಮತ್ತು 550Nm ಅನ್ನು ನೀಡುತ್ತದೆ. ಇದು 3.9 ಸೆಕೆಂಡುಗಳಲ್ಲಿ 0-100kmph ಸಾಧಿಸುತ್ತದೆ.

(ಎಲ್ಲಾ ಬೆಲೆಗಳು ಎಕ್ಸ್-ಶೋರೂಮ್)

t
ಅವರಿಂದ ಪ್ರಕಟಿಸಲಾಗಿದೆ

tarun

  • 15 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಮಾರುತಿ ಜಿಮ್ನಿ

Read Full News

explore similar ಕಾರುಗಳು

ಹುಂಡೈ ಎಕ್ಸ್‌ಟರ್

ಪೆಟ್ರೋಲ್19.4 ಕೆಎಂಪಿಎಲ್
ಸಿಎನ್‌ಜಿ27.1 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಬಿಎಂಡವೋ ಎಕ್ಸ3

ಡೀಸಲ್16.55 ಕೆಎಂಪಿಎಲ್
ಪೆಟ್ರೋಲ್16.35 ಕೆಎಂಪಿಎಲ್
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ