2024ರ ಡಿಸೆಂಬರ್‌ನಲ್ಲಿ ಹೆಚ್ಚು ಮಾರಾಟವಾದ ಟಾಪ್ 15 ಕಾರುಗಳು ಇವು
ಡಿಸೆಂಬರ್ ಮಾರಾಟದ ಅಂಕಿ-ಅಂಶದಲ್ಲಿ ಮೊದಲ ನಾಲ್ಕು ಸ್ಥಾನಗಳಲ್ಲಿ ಮಾರುತಿ ಕಾಣಿಸಿಕೊಂಡರೆ, ಟಾಟಾ ಮತ್ತು ಹುಂಡೈ ನಂತರದ ಸ್ಥಾನಗಳಲ್ಲಿವೆ
ಮತ್ತೊಂದು ತಿಂಗಳು ಕಳೆದಿದೆ ಮತ್ತು ಮಾರುತಿ ಕಂಪನಿಯು ಮತ್ತೆ ಮಾರಾಟ ಪಟ್ಟಿಯಲ್ಲಿ ಪ್ರಾಬಲ್ಯ ಸಾಧಿಸಿದೆ, ಟಾಪ್ 15 ಅತ್ಯುತ್ತಮ ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಮಾರುತಿಯ ಎಂಟು ಕಾರುಗಳು ಸ್ಥಾನ ಪಡೆದಿವೆ. 2024ರ ಡಿಸೆಂಬರ್‌ನಲ್ಲಿ ಬ್ರೆಝಾ ಮೊದಲ ಸ್ಥಾನವನ್ನು ಅಲಂಕರಿಸಿದರೆ, ವ್ಯಾಗನ್ ಆರ್ ಮತ್ತು ಡಿಜೈರ್ ನಂತರದ ಸ್ಥಾನದಲ್ಲಿದ್ದು, ಹ್ಯುಂಡೈ ಕ್ರೆಟಾ ಎರಡನೇ ಸ್ಥಾನದಿಂದ ಏಳನೇ ಸ್ಥಾನಕ್ಕೆ ಮತ್ತು ಟಾಟಾ ಪಂಚ್ ಮೂರನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಕುಸಿದವು. 2024ರ ಡಿಸೆಂಬರ್‌ನಲ್ಲಿ ಮಾರಾಟವಾದ ಟಾಪ್ 15 ಕಾರುಗಳ ಮಾರಾಟದ ಅಂಕಿಅಂಶಗಳನ್ನು ನಾವು ವಿವರವಾಗಿ ನೋಡೋಣ.
ಮೊಡೆಲ್ |
2024ರ ಡಿಸೆಂಬರ್ |
2023ರ ಡಿಸೆಂಬರ್ |
2024 ನವೆಂಬರ್ |
ಮಾರುತಿ ಬ್ರೆಝಾ |
17,336 |
12,844 |
14,918 |
ಮಾರುತಿ ವ್ಯಾಗನ್ ಆರ್ |
17,303 |
8,578 |
13,982 |
ಮಾರುತಿ ಡಿಜೈರ್ |
16,573 |
14,012 |
11,779 |
ಮಾರುತಿ ಎರ್ಟಿಗಾ |
16,056 |
12,975 |
15,150 |
ಟಾಟಾ ಪಂಚ್ |
15,073 |
13,787 |
15,435 |
ಟಾಟಾ ನೆಕ್ಸಾನ್ |
13,536 |
15,284 |
15,329 |
ಹ್ಯುಂಡೈ ಕ್ರೆಟಾ |
12,608 |
9,243 |
15,452 |
ಮಹೀಂದ್ರಾ ಸ್ಕಾರ್ಪಿಯೋ |
12,195 |
11,355 |
12,704 |
ಮಾರುತಿ ಈಕೊ |
11,678 |
10,034 |
10,589 |
ಮಾರುತಿ ಫ್ರಾಂಕ್ಸ್ |
10,752 |
9,692 |
14,882 |
ಮಾರುತಿ ಸ್ವಿಫ್ಟ್ |
10,421 |
11,843 |
14,737 |
ಹ್ಯುಂಡೈ ವೆನ್ಯೂ |
10,265 |
10,383 |
9,754 |
ಟೊಯೊಟೊ ಇನ್ನೋವಾ |
9,700 |
7,832 |
7,867 |
ಮಾರುತಿ ಬಲೆನೊ |
9,112 |
10,669 |
16,293 |
ಮಹೀಂದ್ರಾ ಥಾರ್ |
7,659 |
5,793 |
8,708 |
ಇದನ್ನೂ ಓದಿ: 2024ರ ಡಿಸೆಂಬರ್‌ನ ಕಾರು ಮಾರಾಟದ ಅಂಕಿ-ಅಂಶಗಳಲ್ಲಿ Maruti, Tata, ಮತ್ತು Mahindraದ್ದೇ ಪಾರುಪತ್ಯ..
ಗಮನಿಸಿದ ಪ್ರಮುಖ ಅಂಶಗಳು
-
2024ರ ನವೆಂಬರ್‌ನಲ್ಲಿ ಆರನೇ ಸ್ಥಾನದಲ್ಲಿದ್ದ ಮಾರುತಿ ಬ್ರೆಝಾ ಡಿಸೆಂಬರ್‌ನಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿತು. ಮಾರುತಿ 17,300 ಕ್ಕೂ ಹೆಚ್ಚು ಬ್ರೆಝಾ ಕಾರುಗಳನ್ನು ಡೆಲಿವೆರಿ ನೀಡಿದೆ, ಇದು ಕಳೆದ ತಿಂಗಳಿಗಿಂತ ಸುಮಾರು 5,000ದಷ್ಟು ಹೆಚ್ಚುವರಿ ಕಾರನ್ನು ಮತ್ತು ವರ್ಷದಿಂದ ವರ್ಷಕ್ಕೆ (YoY) 35 ಪ್ರತಿಶತದಷ್ಟು ಬೆಳವಣಿಗೆಯನ್ನು ಕಂಡಿದೆ.
-
ಈ ಪಟ್ಟಿಯಲ್ಲಿ ಮಾರುತಿ ವ್ಯಾಗನ್ ಆರ್ ಎರಡನೇ ಸ್ಥಾನದಲ್ಲಿದ್ದು, ಕೇವಲ 30 ಕಾರುಗಳಿಂದ ಬ್ರೆಝಾದ ನಂತರ ಸ್ಥಾನವನ್ನು ಪಡೆದಿದೆ. ಈ ಪಟ್ಟಿಯಲ್ಲಿ ಹ್ಯಾಚ್‌ಬ್ಯಾಕ್ ವರ್ಷದಿಂದ ವರ್ಷದ ಅಂಕಿ-ಅಂಶದಲ್ಲಿ ಅತಿದೊಡ್ಡ ಬೆಳವಣಿಗೆಯನ್ನು ಕಂಡಿದ್ದು, 2023ರ ಡಿಸೆಂಬರ್‌ನಲ್ಲಿ ಮಾರಾಟವಾಗಿದ್ದಕ್ಕಿಂತ ಎರಡು ಪಟ್ಟು ಹೆಚ್ಚು ಕಾರುಗಳನ್ನು ಮಾರಾಟ ಮಾಡಿದೆ.
-
ಭಾರತೀಯ ಕಾರು ತಯಾರಕ ಕಂಪೆನಿಯು ತನ್ನ ಮಾರುತಿ ಡಿಜೈರ್‌ನ 16,500 ಕ್ಕೂ ಹೆಚ್ಚು ಸೆಡಾನ್ ಕಾರುಗಳನ್ನು ಡೆಲಿವೆರಿ ನೀಡುವುದರೊಂದಿಗೆ ಮೂರನೇ ಸ್ಥಾನಕ್ಕೆ ಏರಿದೆ. ಈ ಮಾರಾಟದ ಅಂಕಿ ಅಂಶವು ವರ್ಷದಿಂದ ವರ್ಷಕ್ಕೆ ಶೇ. 18 ರಷ್ಟು ಬೆಳವಣಿಗೆಯನ್ನು ಕಂಡಿದೆ.
-
ಮಾರುತಿಯು ಎರ್ಟಿಗಾದ 16,000 ಯೂನಿಟ್‌ಗಳನ್ನು ಮಾರಾಟ ಮಾಡಿರುವುದಾಗಿ ವರದಿ ನೀಡಿದೆ, ಇದರಿಂದಾಗಿ ನವೆಂಬರ್ ತಿಂಗಳಿನಿಂದ ಒಂದು ಸ್ಥಾನ ಏರಿಕೆಯಾಗಿದೆ. ಕಾರು ತಯಾರಕರು 2024ರ ನವೆಂಬರ್‌ನಲ್ಲಿ 15,100 ಕಾರುಗಳಿಗೂ ಹೆಚ್ಚು ಎಮ್‌ಪಿವಿಗಳನ್ನು ಮಾರಾಟ ಮಾಡಿದ್ದಾರೆ ಮತ್ತು ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ಅಂಕಿಅಂಶಗಳು ಶೇಕಡಾ 24 ರಷ್ಟು ಬೆಳವಣಿಗೆಯನ್ನು ವರದಿ ಮಾಡಿವೆ.
-
ಟಾಟಾವು ಪಂಚ್‌ನ 15,000 ಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದೆ, ಇದರಿಂದಾಗಿ ವರ್ಷದಿಂದ ವರ್ಷಕ್ಕೆ ಶೇ 9 ರಷ್ಟು ಬೆಳವಣಿಗೆಯಾಗಿದೆ. 2024ರ ನವೆಂಬರ್‌ನಲ್ಲಿ 15,400 ಯೂನಿಟ್‌ಗಳಿಗೂ ಹೆಚ್ಚು ಪಂಚ್ ಮಾರಾಟವಾಗಿತ್ತು, ಹಾಗಾಗಿ ಇದು ಈ ಮೈಕ್ರೋ ಎಸ್‌ಯುವಿಯ ತಿಂಗಳಿನಿಂದ ತಿಂಗಳ (MoM) ಅಂಕಿಅಂಶದಲ್ಲಿ ಕುಸಿತವನ್ನು ಸೂಚಿಸುತ್ತದೆ. ಈ ಸಂಖ್ಯೆಗಳಲ್ಲಿ ಪಂಚ್ ಇವಿ ಕೂಡ ಸೇರಿದೆ.
-
ಟಾಟಾವು ನೆಕ್ಸಾನ್‌ನ ಒಟ್ಟು ಮಾರಾಟ ಅಂಕಿಅಂಶಗಳಲ್ಲಿ 13,500 ಕ್ಕಿಂತ ಸ್ವಲ್ಪ ಹೆಚ್ಚು ವರದಿ ಮಾಡಿದೆ, ಇದರ ಪರಿಣಾಮವಾಗಿ ವರ್ಷದಿಂದ ವರ್ಷಕ್ಕೆ ಶೇ 11 ರಷ್ಟು ಕುಸಿತ ಕಂಡುಬಂದಿದೆ. 2024ರ ನವೆಂಬರ್‌ನಲ್ಲಿ ನೆಕ್ಸಾನ್‌ನ ಮಾರಾಟದ ಅಂಕಿಅಂಶಗಳು 15,300 ಯೂನಿಟ್‌ಗಳನ್ನು ತಲುಪಿದ್ದವು. ಈ ಸಂಖ್ಯೆಗಳು ನೆಕ್ಸಾನ್‌ನ ಇವಿ ಆವೃತ್ತಿಯನ್ನು ಸಹ ಒಳಗೊಂಡಿವೆ ಎಂಬುದನ್ನು ದಯವಿಟ್ಟು ಗಮನಿಸಿ.
ಇದನ್ನೂ ಸಹ ಓದಿ: 2024ರ ಡಿಸೆಂಬರ್‌ನ ಕಾರು ಮಾರಾಟದ ಅಂಕಿ-ಅಂಶಗಳಲ್ಲಿ Maruti, Tata, ಮತ್ತು Mahindraದ್ದೇ ಪಾರುಪತ್ಯ..
-
ಹ್ಯುಂಡೈಯು 12,600 ಯೂನಿಟ್‌ಗಳಿಗೂ ಹೆಚ್ಚು ಕ್ರೆಟಾವನ್ನು ಮಾರಾಟ ಮಾಡಿದ್ದು, ಇದು ಕಳೆದ ತಿಂಗಳ ಅಂಕಿಅಂಶಗಳಿಗೆ ಹೋಲಿಸಿದರೆ ಕುಸಿತವಾಗಿದ್ದು, ಇದರ ಪರಿಣಾಮವಾಗಿ ಎರಡನೇ ಸ್ಥಾನದಿಂದ ಏಳನೇ ಸ್ಥಾನಕ್ಕೆ ಕುಸಿದಿದೆ. ಆದರೆ ವರ್ಷದಿಂದ ವರ್ಷದ ಅಂಕಿ ಅಂಶಗಳಲ್ಲಿ ಇದು, ಕ್ರೆಟಾ ಶೇಕಡಾ 36 ರಷ್ಟು ಬೆಳವಣಿಗೆಯನ್ನು ವರದಿ ಮಾಡಿದೆ.
-
ಮಹೀಂದ್ರಾವು ಸ್ಕಾರ್ಪಿಯೊದ ಸುಮಾರು 12,200 ಯುನಿಟ್‌ಗಳನ್ನು ಮಾರಾಟ ಮಾಡಿದೆ, ಇದರ ಪರಿಣಾಮವಾಗಿ ವರ್ಷದಿಂದ ವರ್ಷಕ್ಕೆ ಶೇ. 7 ರಷ್ಟು ಬೆಳವಣಿಗೆಯನ್ನು ಕಂಡಿದೆ. ಆದರೆ 2024ರ ನವೆಂಬರ್‌ನಲ್ಲಿ, ಈ ಎಸ್‌ಯುವಿಯ 12,700 ಯೂನಿಟ್‌ಗಳಿಗೂ ಹೆಚ್ಚು ಮಾರಾಟವಾಗಿತ್ತು.
-
ಮಾರುತಿ ಈಕೊದ 11,600 ಯೂನಿಟ್‌ಗಳನ್ನು ಮಾರಾಟ ಮಾಡಿದೆ, ಇದರಿಂದಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 16 ರಷ್ಟು ಧನಾತ್ಮಕ ಅಂಕಿ ಅಂಶ ಕಂಡುಬಂದಿದೆ. ತಿಂಗಳಿನಿಂದ ತಿಂಗಳಿಗೆ (MoM) ಸಂಖ್ಯೆಗಳ ಪ್ರಕಾರ, ಈಕೊ ನವೆಂಬರ್‌ನಲ್ಲಿ ಸುಮಾರು 1,100 ರಷ್ಟು ಕಡಿಮೆ ಯೂನಿಟ್‌ಗಳನ್ನು ಮಾರಾಟ ಮಾಡಿತ್ತು.
-
ಸುಮಾರು 10,800 ಮಾರಾಟದೊಂದಿಗೆ, ಮಾರುತಿ ಫ್ರಾಂಕ್ಸ್ ಈ ಪಟ್ಟಿಯಲ್ಲಿ ಹತ್ತನೇ ಕಾರು ಆಗಿದ್ದು, ವರ್ಷದಿಂದ ವರ್ಷಕ್ಕೆ ಶೇ 11 ರಷ್ಟು ಬೆಳವಣಿಗೆ ಕಂಡಿದೆ. 2024ರ ನವೆಂಬರ್‌ನಲ್ಲಿ, ಫ್ರಾಂಕ್ಸ್ ಸುಮಾರು 14,900 ಯುನಿಟ್‌ಗಳನ್ನು ಮಾರಾಟ ಮಾಡಿತ್ತು.
-
ಈ ಪಟ್ಟಿಯಲ್ಲಿರುವ ಮಾರುತಿಯ ಎರಡನೇ ಹ್ಯಾಚ್‌ಬ್ಯಾಕ್ ಸ್ವಿಫ್ಟ್, ಕೇವಲ 10,400 ರಷ್ಟು ಕಾರುಗಳನ್ನು ಮಾರಾಟ ಮಾಡಿದೆ, ಇದರ ಪರಿಣಾಮವಾಗಿ ವರ್ಷದಿಂದ ವರ್ಷದ ಅಂಕಿಅಂಶದಲ್ಲಿ ಶೇ. 12 ರಷ್ಟು ಕುಸಿತ ಕಂಡುಬಂದಿದೆ. ಕಳೆದ ತಿಂಗಳು 14,700 ಯೂನಿಟ್‌ಗಳಿಗೂ ಹೆಚ್ಚು ಸ್ವಿಫ್ಟ್ ಕಾರುಗಳ ಮಾರಾಟವಾಗಿದೆ.
-
ಹ್ಯುಂಡೈಯು 10,200 ಕ್ಕೂ ಹೆಚ್ಚು ವೆನ್ಯೂ ಕಾರುಗಳನ್ನು ಡೆಲಿವೆರಿ ನೀಡಿದೆ, ಇದು 2023ರ ಡಿಸೆಂಬರ್‌ಗಿಂತ ಮಾರಾಟದಲ್ಲಿ ಶೇಕಡಾ 1 ರಷ್ಟು ಕುಸಿತವನ್ನು ಕಂಡಿದೆ. 2024ರ ನವೆಂಬರ್‌ನಲ್ಲಿ, 9,700 ಕ್ಕೂ ಹೆಚ್ಚು ಯೂನಿಟ್‌ಗಳನ್ನು ಮಾರಾಟ ಮಾಡಿದ ವೆನ್ಯೂ, ಸಕಾರಾತ್ಮಕ ಮಾಸಿಕ ಫಲಿತಾಂಶವನ್ನು ವರದಿ ಮಾಡಿದೆ. ಈ ಸಂಖ್ಯೆಗಳು ವೆನ್ಯೂ ಎನ್ ಲೈನ್ ಅನ್ನು ಸಹ ಒಳಗೊಂಡಿವೆ.
-
ಟೊಯೋಟಾವು ಇನ್ನೋವಾ ಮತ್ತು ಇನ್ನೋವಾ ಹೈಕ್ರಾಸ್‌ನ 9,700 ಕಾರುಗಳನ್ನು ಮಾರಾಟ ಮಾಡಿದೆ ಎಂದು ವರದಿ ಮಾಡಿದೆ. ಇದು ಈ ಜಪಾನಿನ ಕಾರು ತಯಾರಕರಿಗೆ ವರ್ಷದಿಂದ ವರ್ಷಕ್ಕೆ 24 ಪ್ರತಿಶತದಷ್ಟು ಬೆಳವಣಿಗೆಗೆ ಸಹಕಾರಿಯಾಗಿದೆ. 2024ರ ನವೆಂಬರ್‌ನಲ್ಲಿ, ಎರಡೂ ಕಾರುಗಳು ಸೇರಿ 7,800 ಯೂನಿಟ್‌ಗಳಿಗೂ ಹೆಚ್ಚು ಮಾರಾಟವಾದವು.
-
ಈ ಪಟ್ಟಿಯಲ್ಲಿ ಮಾರುತಿ ಬಲೆನೊ ಕೊನೆಯ ಸ್ಥಾನದಲ್ಲಿದ್ದು, ಮಾರಾಟದ ಸಂಖ್ಯೆಯು ಕೇವಲ 9,100 ಯೂನಿಟ್‌ಗಳನ್ನು ತಲುಪಲಷ್ಟೇ ಶಕ್ತವಾಗಿದೆ. ಕಳೆದ ತಿಂಗಳು 16,200 ಕ್ಕೂ ಹೆಚ್ಚು ಯುನಿಟ್‌ಗಳ ಮಾರಾಟದೊಂದಿಗೆ ಬಲೆನೊ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ, ಹ್ಯಾಚ್‌ಬ್ಯಾಕ್ ಕೂಡ 15 ಪ್ರತಿಶತದಷ್ಟು ಕುಸಿತವನ್ನು ಕಂಡಿದೆ.
ಇನ್ನಷ್ಟು ಓದಲು: 2025ರಲ್ಲಿ ಹೊಸ ವೇರಿಯೆಂಟ್ ಮತ್ತು ಫೀಚರ್‌ಗಳನ್ನು ಪಡೆಯಲಿರುವ Hyundai Grand i10 Nios, Venue, ಮತ್ತು Verna
ಕಾರುಗಳ ಲೋಕದ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ