2 ತಿಂಗಳ ನಂತರ Toyota Innova Hycross ನ ಟಾಪ್-ಎಂಡ್ ಬುಕಿಂಗ್‌ಗಳು ಮತ್ತೆ ಪ್ರಾರಂಭ
ಈ ಹಿಂದೆ 2024ರ ಮೇ ತಿಂಗಳಿನಲ್ಲಿ ಟಾಪ್-ಎಂಡ್ ಅವೃತ್ತಿಯ ಬುಕಿಂಗ್ ಅನ್ನು ನಿಲ್ಲಿಸಲಾಗಿತ್ತು
-
ಟೊಯೊಟಾ ಜೆಡ್‌ಎಕ್ಸ್ ಮತ್ತು ಜೆಡ್‌ಎಕ್ಸ್(ಒಪ್ಶನಲ್) ಆವೃತ್ತಿಗಳ ಬುಕಿಂಗ್ ಅನ್ನು ಪುನಃ ಪ್ರಾರಂಭಿಸಲಾಗಿದೆ.
-
ಆಸಕ್ತ ಗ್ರಾಹಕರು 50,000 ಟೋಕನ್ ಮೊತ್ತಕ್ಕೆ ಈ ಆವೃತ್ತಿಗಳನ್ನು ಬುಕ್ ಮಾಡಬಹುದು.
-
ಟಾಪ್ ಆವೃತ್ತಿಗಳು ಮಧ್ಯದ ಸಾಲಿಗೆ ಒಟ್ಟೋಮನ್ ಸೀಟ್‌ಗಳು, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ADAS ಅನ್ನು ಹೊಂದಿದೆ.
-
ಇ-ಸಿವಿಟಿ ಜೊತೆಗೆ 184ಪಿಎಸ್ 2-ಲೀಟರ್ ಸ್ಟ್ರಾಂಗ್-ಹೈಬ್ರಿಡ್ ಪವರ್‌ಟ್ರೇನ್‌ನಿಂದ ಚಾಲಿತವಾಗುತ್ತದೆ.
ಟೊಯೊಟಾ ಇನ್ನೋವಾ ಹೈಕ್ರಾಸ್‌ನ ಟಾಪ್-ಎಂಡ್ ಎಡ್‌ಎಕ್ಸ್ ಮತ್ತು ಜೆಡ್‌ಎಕ್ಸ್ (ಒಪ್ಶನಲ್) ಆವೃತ್ತಿಗಳು 2 ತಿಂಗಳ ವಿರಾಮದ ನಂತರ ಮತ್ತೊಮ್ಮೆ ಬುಕಿಂಗ್‌ಗೆ ಲಭ್ಯವಿವೆ. ಹೈಕ್ರಾಸ್ ಖರೀದಿಸಲು ಬಯಸುವವರಿಗೆ ಇದು ಶುಭ ಸುದ್ದಿಯಾಗಿದೆ, ಏಕೆಂದರೆ ಅವರು ಅಂತಿಮವಾಗಿ ರೀತಿಯ ಡಾಮ್‌ಡೂಮ್ ಸಂಭ್ರಮದೊಂದಿಗೆ ಟಾಪ್-ಎಂಡ್ ಆವೃತ್ತಿಗಳನ್ನು ತಮ್ಮ ಮನೆಯ ಕಡೆಗೆ ಸಾಗಿಸಬಹುದು. ನೀವು ಬುಕಿಂಗ್ ಮಾಡಲು ಆಸಕ್ತಿ ಹೊಂದಿದ್ದರೆ, ನೀವು ಟೊಯೋಟಾ ಡೀಲರ್‌ಶಿಪ್ ಅಥವಾ ಅದರ ಆನ್‌ಲೈನ್ ವೆಬ್‌ಸೈಟ್‌ನಲ್ಲಿ 50,000 ಟೋಕನ್ ಮೊತ್ತಕ್ಕೆ ಬುಕ್ ಮಾಡಬಹುದು.
ಈ ಜನಪ್ರಿಯ ಎಮ್‌ಪಿವಿಯ ಉನ್ನತ-ಮಟ್ಟದ ಆವೃತ್ತಿಗಳ ಬುಕಿಂಗ್ ಅನ್ನು ಈ ಹಿಂದೆ ಎರಡು ಬಾರಿ ತಡೆಹಿಡಿಯಲಾಗಿದೆ ಎಂಬುವುದನ್ನು ನಾವಿಲ್ಲಿ ಗಮನಿಸಬೇಕು. ಸಮರ್ಪಕವಾದ ಪೂರೈಕೆಯ ಸಮಸ್ಯೆಗಳಿಂದಾಗಿ 2023ರ ಏಪ್ರಿಲ್‌ನಲ್ಲಿ ಮೊದಲ ಬಾರಿಗೆ ತಡೆಹಿಡಿಯಲಾಯಿತು, ಆದರೆ ತಯಾರಕರು 2024ರ ಮೇ ತಿಂಗಳಿನಲ್ಲಿ ಎರಡನೇ ಬಾರಿಗೆ ಬುಕಿಂಗ್‌ನ ತಡೆಹಿಡಿದಾಗ ಕಾರಣದ ಬಗ್ಗೆ ಪ್ರತಿಕ್ರಿಯಿಸಿರಲಿಲ್ಲ.
ಹೈಕ್ರಾಸ್‌ನ ಟಾಪ್-ಎಂಡ್ ಎಡ್‌ಎಕ್ಸ್ ಮತ್ತು ಜೆಡ್‌ಎಕ್ಸ್ (ಒ)ನ ಫೀಚರ್‌ಗಳು
ಇನ್ನೋವಾ ಹೈಕ್ರಾಸ್‌ನ ಜೆಡ್‌ಎಕ್ಸ್ ಮತ್ತು ಜೆಡ್‌ಎಕ್ಸ್ (O) ಆವೃತ್ತಿಗಳ ಬುಕಿಂಗ್ ಅನ್ನು ಮರು-ತೆರೆಯುವುದರೊಂದಿಗೆ ನೀವು ಇದರ ಒಳಭಾಗದಲ್ಲಿ ಲೆಥೆರೆಟ್ ಕವರ್, ಎರಡನೇ ಸಾಲಿಗೆ ಒಟ್ಟೋಮನ್ ಸೀಟ್‌ಗಳು, 9-ಸ್ಪೀಕರ್ JBL ಸೌಂಡ್ ಸಿಸ್ಟಮ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, 18-ಇಂಚಿನ ಅಲಾಯ್‌ಗಳು, ಮತ್ತು ಸಂಪೂರ್ಣವಾಗಿ ಲೋಡ್ ಮಾಡಲಾದ ZX (O) ಆವೃತ್ತಿಗೆ ಸೀಮಿತವಾಗಿ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳಂತಹ (ADAS) ಸೌಕರ್ಯಗಳನ್ನು ಪಡೆಯುತ್ತೀರಿ ಎಂದರ್ಥ.
ಈ ಆವೃತ್ತಿಗಳಲ್ಲಿ ನೀಡಲಾದ ಇತರ ಫೀಚರ್‌ಗಳೆಂದರೆ ವೈರ್‌ಲೆಸ್ ಆಪಲ್ ಕಾರ್‌ಪ್ಲೇನೊಂದಿಗೆ 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಡಿಜಿಟಲ್ ಡ್ರೈವರ್‌ಸ್ ಡಿಸ್ಪ್ಲೇ, ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಆಟೋ ಹೋಲ್ಡ್‌ನೊಂದಿಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಆಗಿದೆ.
ಎಡ್‌ಎಕ್ಸ್ ಮತ್ತು ಜೆಡ್‌ಎಕ್ಸ್ (ಒ)ನ ಎಂಜಿನ್
ಇನ್ನೋವಾ ಹೈಕ್ರಾಸ್‌ನ ಟಾಪ್-ಎಂಡ್ ಆವೃತ್ತಿಯು 184 ಪಿಎಸ್ 2-ಲೀಟರ್ ಸ್ಟ್ರಾಂಗ್-ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ ಮಾತ್ರ ಲಭ್ಯವಿದೆ, ಅದು ಮುಂಭಾಗದ ಚಕ್ರಗಳನ್ನು e-CVT ಮೂಲಕ ಚಾಲನೆ ಮಾಡುತ್ತದೆ. ಲೋವರ್-ಎಂಡ್ ಆವೃತ್ತಿಗಳು 173ಪಿಎಸ್ 2-ಲೀಟರ್ ನ್ಯಾಚುರಲಿ ಎಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತವೆ, ಇದು ಫ್ರಂಟ್-ವೀಲ್ ಡ್ರೈವ್ ಮತ್ತು ಸಿವಿಟಿಯೊಂದಿಗೆ ಬರುತ್ತದೆ.
ಟೊಯೋಟಾ ಇನ್ನೋವಾ ಹೈಕ್ರಾಸ್‌ನ ಬೆಲೆಗಳು ಮತ್ತು ಪ್ರತಿಸ್ಪರ್ಧಿಗಳು
ಟೊಯೊಟಾ ಇನ್ನೋವಾ ಹೈಕ್ರಾಸ್‌ನ ಜೆಡ್‌ಎಕ್ಸ್ ಮತ್ತು ಜೆಡ್‌ಎಕ್ಸ್ (O) ಆವೃತ್ತಿಗಳು ಕ್ರಮವಾಗಿ 30.34 ಲಕ್ಷ ರೂ. ಮತ್ತು 30.98 ಲಕ್ಷ ರೂ.(ಎಕ್ಸ್-ಶೋರೂಂ ದೆಹಲಿ) ಬೆಲೆಯನ್ನು ಹೊಂದಿದೆ. ಇನ್ನೋವಾ ಹೈಕ್ರಾಸ್‌ನ ಎಕ್ಸ್ ಶೋ ರೂಂನ ಬೆಲೆಗಳು 18.92 ಲಕ್ಷ ರೂ.ನಿಂದ ಪ್ರಾರಂಭವಾಗುತ್ತವೆ. ಇದು ಟೊಯೋಟಾ ಇನ್ನೋವಾ ಕ್ರಿಸ್ಟಾ ಮತ್ತು ಕಿಯಾ ಕ್ಯಾರೆನ್ಸ್‌ಗೆ ಪ್ರೀಮಿಯಂ ಪರ್ಯಾಯವಾಗಿದೆ. ವರ್ಷದ ಕೊನೆಯಲ್ಲಿ, ಇನ್ನೋವಾ ಹೈಕ್ರಾಸ್ ಮುಂಬರುವ ಕಿಯಾ ಕಾರ್ನಿವಲ್‌ಗೂ ಸ್ಪರ್ಧೆಯನ್ನು ಒಡ್ಡಲಿದೆ.
ಇನ್ನಷ್ಟು ಓದಿ : ಇನ್ನೋವಾ ಹೈಕ್ರಾಸ್ ಆಟೋಮ್ಯಾಟಿಕ್