• English
  • Login / Register

ಕಾಸ್ಮೆಟಿಕ್ ಮತ್ತು ಫೀಚರ್ ಅಪ್‌ಗ್ರೇಡ್‌ಗಳೊಂದಿಗೆ Citroen Aircrossನ ಎಕ್ಸ್‌ಪ್ಲೋರರ್ ಬಿಡುಗಡೆ

ಸಿಟ್ರೊನ್ aircross ಗಾಗಿ ansh ಮೂಲಕ ನವೆಂಬರ್ 05, 2024 07:18 pm ರಂದು ಪ್ರಕಟಿಸಲಾಗಿದೆ

  • 80 Views
  • ಕಾಮೆಂಟ್‌ ಅನ್ನು ಬರೆಯಿರಿ

ನೀವು ಸ್ಟ್ಯಾಂಡರ್ಡ್ ಲಿಮಿಟೆಡ್‌ ಎಡಿಷನ್‌ ಅನ್ನು ಆರಿಸಿಕೊಳ್ಳಬಹುದು ಅಥವಾ ಒಪ್ಶನಲ್‌ ಪ್ಯಾಕ್‌ಗಾಗಿ ನೀವು ಹೆಚ್ಚುವರಿ ಹಣವನ್ನು ಪಾವತಿಸಬಹುದು, ಇದು ಹಿಂಬದಿ ಸೀಟಿಗೆ  ಮತ್ತಷ್ಟು ಮನರಂಜನಾ ಪ್ಯಾಕೇಜ್ ಅನ್ನು ಸೇರಿಸುತ್ತದೆ

Citroen Aircross Xplorer Edition Launched

 ಈ ಹಿಂದೆ ಸಿ3 ಏರ್‌ಕ್ರಾಸ್ ಎಂದು ಕರೆಯಲಾಗುತ್ತಿದ್ದ ಸಿಟ್ರೊಯೆನ್ ಏರ್‌ಕ್ರಾಸ್ ಇದೀಗ ಎಕ್ಸ್‌ಪ್ಲೋರರ್ ಹೆಸರಿನ ಹೊಸ ಸೀಮಿತ-ಸಮಯದ ಸ್ಪೇಷಲ್‌ ಎಡಿಷನ್‌ ಅನ್ನು ಪಡೆದುಕೊಂಡಿದೆ. ಈ ಲಿಮಿಟೆಡ್‌ ಎಡಿಷನ್‌ ಎಸಯುವಿ ವಿನ್ಯಾಸಕ್ಕೆ ಕಾಸ್ಮೆಟಿಕ್ ಆಪ್‌ಡೇಟ್‌ ಅನ್ನು ಸೇರಿಸುತ್ತದೆ ಮತ್ತು ಸ್ಟ್ಯಾಂಡರ್ಡ್ ಪ್ಯಾಕ್‌ಗೆ 24,000 ರೂ. ಮತ್ತು ಒಪ್ಶನಲ್‌ ಪ್ಯಾಕ್‌ಗಾಗಿ 51,700 ರೂ. ಹೆಚ್ಚುವರಿ ವೆಚ್ಚದೊಂದಿಗೆ ಕೆಲವು ಫೀಚರ್‌ಗಳನ್ನು ತರುತ್ತದೆ. ಈ ಲಿಮಿಟೆಡ್‌ ಎಡಿಷನ್‌ ಮಿಡ್-ಸ್ಪಡ್ ಪ್ಲಸ್ ಮತ್ತು ಎಸ್‌ಯುವಿಯ ಟಾಪ್-ಸ್ಪೆಕ್ ಮ್ಯಾಕ್ಸ್ ವೇರಿಯೆಂಟ್‌ಗಳೊಂದಿಗೆ ಲಭ್ಯವಿದೆ ಮತ್ತು ಅದು ಏನು ನೀಡುತ್ತದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ಕಾಸ್ಮೆಟಿಕ್ ಮತ್ತು ಫೀಚರ್ ಅಪ್‌ಗ್ರೇಡ್‌ಗಳು

Citroen Aircross Xplorer Edition
Citroen Aircross Xplorer Edition Hood

ಹೊರಭಾಗದಲ್ಲಿ, ಈ ಸ್ಪೇಷಲ್‌ ಎಡಿಷನ್‌ನ ಸ್ಟ್ಯಾಂಡರ್ಡ್‌ ಆವೃತ್ತಿಯು, ಸ್ಟ್ಯಾಂಡರ್ಡ್ ವೇರಿಯೆಂಟ್‌ನ ಬೆಲೆಗಿಂತ 24,000 ರೂ.ಗಳನ್ನು ಹೆಚ್ಚುವರಿಯಾಗಿ ಕೇಳುತ್ತದೆ, ಖಾಕಿ ಬಣ್ಣದ ಇನ್ಸರ್ಟ್ಸ್‌ಗಳೊಂದಿಗೆ ಪ್ರೊಫೈಲ್‌ಗಳಲ್ಲಿ ಬಾಡಿ ಡಿಕಾಲ್‌ಗಳನ್ನು ಪಡೆಯುತ್ತದೆ. ಹೊರಭಾಗವು ಕಪ್ಪು ಹುಡ್ ಗಾರ್ನಿಶ್‌ ಅನ್ನು ಸಹ ಪಡೆಯುತ್ತದೆ.

Citroen Aircross Xplorer Edition Dashcam
Citroen Aircross Xplorer Edition Rear Seat Entertainment Package

ಒಳಭಾಗದಲ್ಲಿ, ಇದು ಪ್ರಕಾಶಿತ ಸೈಡ್ ಸಿಲ್, ಫುಟ್‌ವೆಲ್ ಲೈಟಿಂಗ್ ಮತ್ತು ಡ್ಯಾಶ್‌ಕ್ಯಾಮ್ ಅನ್ನು ನೀಡುತ್ತದೆ. ಈ ಸ್ಪೇಷಲ್‌ ಎಡಿಷನ್‌ನ ಒಪ್ಶನಲ್‌ ಪ್ಯಾಕ್‌ ಅನ್ನು ನೀವು ಆರಿಸಿಕೊಂಡರೆ, ಇದರ ಬೆಲೆ 51,700 ರೂ, ನೀವು ಇತರ ಕಾಸ್ಮೆಟಿಕ್ ಮತ್ತು ಫೀಚರ್‌ನ ಅಪ್‌ಡೇಟ್‌ಗಳ ಮೇಲೆ ಡ್ಯುಯಲ್-ಪೋರ್ಟ್ ಅಡಾಪ್ಟರ್‌ನೊಂದಿಗೆ ಹಿಂಭಾಗದ ಸೀಟ್ ಎಂಟರ್‌ಟೈನ್‌ಮೆಂಟ್ ಪ್ಯಾಕೇಜ್ ಅನ್ನು ಪಡೆಯುತ್ತೀರಿ.

ಸಿಟ್ರೊಯೆನ್ ಏರ್‌ಕ್ರಾಸ್‌: ವಿವರವಾದ ಮಾಹಿತಿ

Citroen Aircross Engine

ಏರ್‌ಕ್ರಾಸ್ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ, ಮೊದಲನೆಯದು 1.2-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಎಂಜಿನ್ (82 ಪಿಎಸ್‌ ಮತ್ತು 115 ಎನ್‌ಎಮ್‌) ಇದು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ಜೋಡಿಯಾಗಿದೆ. ಎರಡನೇಯದು 1.2-ಲೀಟರ್ ಟರ್ಬೋಚಾರ್ಜ್ಡ್ ಯುನಿಟ್ (110 ಪಿಎಸ್‌ ಮತ್ತು 205 ಎನ್‌ಎಮ್‌ವರೆಗೆ), ಇದು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್‌ ಆಟೋಮ್ಯಾಟಿಕ್‌ ಆಯ್ಕೆಯನ್ನು ಪಡೆಯುತ್ತದೆ. ಈ ಎರಡೂ ಎಂಜಿನ್‌ಗಳು ಹೊಸ ಎಕ್ಸ್‌ಪ್ಲೋರರ್ ಎಡಿಷನ್‌ನೊಂದಿಗೆ ಲಭ್ಯವಿದೆ.

Citroen Aircross Dashboard

ಫೀಚರ್‌ಗಳ ವಿಷಯದಲ್ಲಿ, ಇದು 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಟೋಮ್ಯಾಟಿಕ್‌ ಕ್ಲೈಮೇಟ್‌ ಕಂಟ್ರೋಲ್‌ ಮತ್ತು ಸ್ಟೀರಿಂಗ್ ಮೌಂಟೆಡ್  ಕಂಟ್ರೋಲ್‌ಗಳೊಂದಿಗೆ ಬರುತ್ತದೆ.

ಇದನ್ನೂ ಓದಿ: ಈ 7 ವಿಷಯಗಳಲ್ಲಿ ಮಾರುತಿ ಫ್ರಾಂಕ್ಸ್ ಮತ್ತು ಟೊಯೋಟಾ ಟೈಸರ್ ಅನ್ನು ಮೀರಿಸಲಿರುವ Skoda Kylaq

ಸುರಕ್ಷತೆಯನ್ನು 6 ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್‌, ಹಿಲ್ ಹೋಲ್ಡ್ ಅಸಿಸ್ಟ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ರಿಯರ್‌ವ್ಯೂ ಕ್ಯಾಮೆರಾದಿಂದ ನೋಡಿಕೊಳ್ಳಲಾಗುತ್ತದೆ.

ಬೆಲೆ ಮತ್ತು ಪ್ರತಿಸ್ಪರ್ಧಿಗಳು

Citroen Aircross

 ಸಿಟ್ರೊಯೆನ್ ಏರ್‌ಕ್ರಾಸ್ 8.49 ಲಕ್ಷ ರೂ.ನಿಂದ 14.55 ಲಕ್ಷ ರೂ.ವರೆಗೆ (ಎಕ್ಸ್-ಶೋ ರೂಂ, ಪ್ಯಾನ್-ಇಂಡಿಯಾ) ಬೆಲೆಯನ್ನು ಹೊಂದಿದೆ ಮತ್ತು ಇದು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೋಟಾ ಹೈರೈಡರ್, ವೋಕ್ಸ್‌ವ್ಯಾಗನ್ ಟೈಗುನ್ ಮತ್ತು ಸ್ಕೋಡಾ ಕುಶಾಕ್‌ನಂತಹ ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಪ್ರತಿಸ್ಪರ್ಧಿಯಾಗಿದೆ.

ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

ಇನ್ನಷ್ಟು ಓದಿ : ಸಿಟ್ರೊಯೆನ್ ಏರ್‌ಕ್ರಾಸ್ ಆನ್‌ರೋಡ್‌ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Citroen aircross

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience