• English
  • Login / Register

ಶೀಘ್ರದಲ್ಲೇ ಹೊಸ ಟೈಗನ್ ಗೆ ಜಿಟಿ ವೇರಿಯೆಂಟ್‌ಗಳು ಮತ್ತು ವಿಶೇಷ ಆವೃತ್ತಿಗಳನ್ನು ನೀಡಲಿರುವ ಫೋಕ್ಸ್‌ವ್ಯಾಗನ್

ವೋಕ್ಸ್ವ್ಯಾಗನ್ ಟೈಗುನ್ ಗಾಗಿ rohit ಮೂಲಕ ಏಪ್ರಿಲ್ 19, 2023 05:26 pm ರಂದು ಪ್ರಕಟಿಸಲಾಗಿದೆ

  • 22 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ಫೀಚರ್‌ಗಳು ಮತ್ತು ವೇರಿಯೆಂಟ್‌ಗಳನ್ನು 2023 ರ ಜೂನ್ ನಿಂದ ಪರಿಚಯಿಸಲಾಗುವುದು.

Volkswagen Taigun new variants and special editions

  • ಫೋಕ್ಸ್‌ವ್ಯಾಗನ್ GT+ MT ಮತ್ತು GT DCT ವೇರಿಯೆಂಟ್‌ಗಳನ್ನು ಟೈಗನ್‌ನ ಕಾರ್ಯನಿರ್ವಹಣೆಯ ಲೈನ್ ರೇಂಜ್‌ಗೆ ಸೇರಿಸಲಿದೆ.
  •  ಎರಡೂ ಸಹ GT ಲೈನ್‌ಅಪ್‌ನೊಂದಿಗೆ ಪ್ರಸ್ತುತ ಲಭ್ಯವಿರುವ 1.5-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ ಅನ್ನು ಪಡೆಯಲಿವೆ.
  •  ಈ ಟೈಗನ್ ಅನ್ನು ಹೊಸ “ಲಾವಾ ಬ್ಲ್ಯೂ” ಮತ್ತು “ಡೀಪ್ ಬ್ಲ್ಯಾಕ್ ಪರ್ಲ್” ಬಣ್ಣಗಳಲ್ಲೂ ಸಹ ನೀಡಲಾಗುವುದು.
  •  ಇದು “ಕಾರ್ಬನ್ ಸ್ಟೀಲ್ ಗ್ರೇ” ಶೇಡ್‌ನಲ್ಲಿ ಮ್ಯಾಟ್ ಫಿನಿಶ್ ಅನ್ನು ಸಹ ಪಡೆಯುತ್ತದೆ.
  •  ಫೋಕ್ಸ್‌ವ್ಯಾಗನ್ ಎಸ್‌ಯುವಿಯ “ಟ್ರಯಲ್” ಮತ್ತು “ಸ್ಪೋರ್ಟ್” ಎಂಬ ಎರಡು ಕಾನ್ಸೆಪ್ಟ್‌ಗಳನ್ನು ಕೆಲವು ಕಾಸ್ಮೆಟಿಕ್ ವರ್ಧನೆಯೊಂದಿಗೆ ಪರಿಚಯಿಸಿತು.
  •  ಏಪ್ರಿಲ್ 2023 ರಿಂದ ನಂತರ ತಯಾರಿಸಲಾದ ಎಲ್ಲಾ ಮಾಡೆಲ್‌ಗಳು ಈಗ ಸೀಟ್‌ಬೆಲ್ಟ್ ರಿಮೈಂಡರ್ ಅನ್ನು ಪ್ರಮಾಣಿತವಾಗಿ ಪಡೆಯುತ್ತವೆ.

 ತನ್ನ ವಾರ್ಷಿಕ ಪತ್ರಿಕಾಗೋಷ್ಠಿಯಲ್ಲಿ, ಫೋಕ್ಸ್‌ವ್ಯಾಗನ್ ತನ್ನ ಸ್ಥಳೀಯ ಭಾರತೀಯ ಉತ್ಪನ್ನಗಳಾದ, ಟೈಗನ್ ಮತ್ತು ವರ್ಟಸ್‌ಗಾಗಿ ಅನೇಕ ಯೋಜನೆಗಳನ್ನು ಬಹಿರಂಗಪಡಿಸಿದೆ. ಈ ವಿಷಯದಲ್ಲಿ, ಜೂನ್‌ನಿಂದ ಲಭ್ಯವಾಗುವಂತೆ ಕಾಂಪ್ಯಾಕ್ಟ್ ಎಸ್‌ಯುವಿ ಪ್ರದರ್ಶಿಸಿದ ನವೀಕರಣಗಳ ಮೇಲೆ ನಾವು ಕೇಂದ್ರೀಕರಿಸುತ್ತದೆ:

 

ಹೊಸ ಜಿಟಿ ವೇರಿಯೆಂಟ್‌ಗಳು

Volkswagen Taigun GT Plus MT

ಫೋಕ್ಸ್‌ವ್ಯಾಗನ್ ಎಸ್‌ಯುವಿಯ “ಫರ್ಮಾರ್ಮೆನ್ಸ್‌ ಲೈನ್” ಜಿಟಿ ವೇರಿಯೆಂಟ್‌ಗಳಿಗಾಗಿ ಹೊಸ ವೇರಿಯೆಂಟ್‌ಗಳನ್ನು ಪರಿಚಯಿಸುತ್ತಿದ್ದು, ಅವುಗಳು ಎಂಬ ಜಿಟಿ ವೇರಿಯೆಂಟ್ 150PS 1.5-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್‌ನೊಂದಿಗೆ GT ಪ್ಲಸ್ MT ಮತ್ತು GT DCT ಎಂಬ ಎರಡು ಹೊಸ ವೇರಿಯೆಂಟ್‌ಗಳನ್ನು ಪರಿಚಯಿಸಿದೆ. ಇಲ್ಲಿಯವರೆಗೆ, GT ಪ್ಲಸ್ ಟ್ರಿಮ್ 7-ಸ್ಪೀಡ್ DCT ಗೇರ್‌ಬಾಕ್ಸ್ ಅನ್ನು ಮಾತ್ರ ಪಡೆದುಕೊಂಡಿದೆ ಆದರೆ GT ಕೇವಲ ಆರು-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ ಅನ್ನು ಪಡೆಯುತ್ತದೆ.

Volkswagen Taigun GT DCT

ಇದು ಕಡಿಮೆ ಟ್ರಿಮ್‌ನಲ್ಲಿ DCT ಆಯ್ಕೆಯನ್ನು ಹೆಚ್ಚು ಆ್ಯಕ್ಸೆಸೇಬಲ್ ಆಗಿ ಮಾಡುತ್ತದೆ ಮತ್ತು ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಟಾಪ್-ಸ್ಪೆಕ್ GT ಪ್ಲಸ್ ವೇರಿಯೆಂಟ್ ಅನ್ನು ಹೆಚ್ಚು ಕೈಗೆಟಕುವಂತೆ ಮಾಡುತ್ತದೆ.

 ಇದನ್ನೂ ಓದಿ:  ವರ್ಟಸ್ GT ಗಾಗಿ ಮ್ಯಾನ್ಯುವಲ್ ಆಯ್ಕೆಯನ್ನು ಸೇರಿಸಲಿರುವ ಫೋಕ್ಸ್‌ವ್ಯಾಗನ್ 

 

ಕಾಸ್ಮೆಟಿಕ್ ಪರಿಷ್ಕರಣೆಗಳು

Volkswagen Taigun Deep Black Pearl shade

ಈ VW SUV ಮೂರು ತಾಜಾ ಎಕ್ಸ್‌ಟೀರಿಯರ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ: ಲಾವಾ ಬ್ಲ್ಯೂ, ಡೀಪ್ ಬ್ಲ್ಯಾಕ್ ಪರ್ಲ್ ಮತ್ತು ಕಾರ್ಬನ್ ಸ್ಟೀಲ್ ಮ್ಯಾಟ್. ಸ್ಕೋಡಾ-ಆಧಾರಿತ ನೀಲಿ ಬಣ್ಣವನ್ನು ರೇಂಜ್‌ನಾದ್ಯಂತ ನೀಡಿದರೆ, ಇನ್ನೆರಡು ಟೈಗನ್ ಜಿಟಿ ವೇರಿಯೆಂಟ್‌ಗಳೊಂದಿಗೆ ಮತ್ತು ಸೀಮಿತ ಸಂಖ್ಯೆಯಲ್ಲಿ ಮಾತ್ರ ನೀಡಲಾಗುವುದು. ಈ ಡೀಪ್ ಬ್ಲ್ಯಾಕ್ ಪರ್ಲ್ ಫಿನಿಶ್ ಕೆಂಪು ಬ್ರೇಕ್ ಕ್ಯಾಲಿಪರ್‌ಗಳು, ಸೀಟುಗಳಿಗೆ ಕೆಂಪು ಬಣ್ಣದ ಸ್ಟಿಚಿಂಗ್‌ಗಳು, ಕೆಂಪು ಆ್ಯಂಬಿಯೆಂಟ್ ಬೆಳಕನ್ನು ಒಳಗೊಂಡಂತೆ ವಿಶಿಷ್ಟವಾದ GT-ನಿರ್ದಿಷ್ಟ ನವೀಕರಣಗಳನ್ನು ಪಡೆಯುತ್ತದೆ. ಮತ್ತೊಂದೆಡೆ, ಮ್ಯಾಟ್ ಆವೃತ್ತಿಯು ORVM ಗಳು, ಡೋರ್ ಹ್ಯಾಂಡಲ್‌ಗಳು ಮತ್ತು ಹಿಂಭಾಗದ ಸ್ಪಾಯ್ಲರ್‌ಗಳಾಗಿ ಗ್ಲಾಸ್-ಬ್ಲ್ಯಾಕ್ ಫಿನಿಶ್ ಅನ್ನು ಸಹ ಹೊಂದಿದೆ.

 

ವಿಶೇಷ  ಆವೃತ್ತಿಗಳು

Volkswagen Taigun Trail concept

ಹೊಸ ವೇರಿಯೆಂಟ್‌ಗಳು ಮತ್ತು ಬಣ್ಣಗಳ ಆಯ್ಕೆಯೊಂದಿಗೆ, ಫೋಕ್ಸ್‌ವ್ಯಾಗನ್ ತನ್ನ ಹೊಸ ‘GT ಲಿಮಿಟೆಡ್ ಕಲೆಕ್ಷನ್’ – ಟ್ರಯಲ್ ಮತ್ತು ಸ್ಪೋರ್ಟ್‌ನ ಭಾಗವಾಗಿ ಎಸ್‌ಯುವಿಯ ಎರಡು ಕಾನ್ಸೆಪ್ಟ್‌ನ ಆವೃತ್ತಿಗಳನ್ನು ಪ್ರದರ್ಶಿಸಿದೆ. ಈ “ಟ್ರಯಲ್” ಕಾನ್ಸೆಪ್ಟ್ “ಟ್ರಯಲ್” ಪ್ರೇರಿತ ಬಾಡಿ ಸೈಡ್ ಗ್ರಾಫಿಕ್ಸ್ ಮತ್ತು ಲೆದರ್ ಮೇಲ್ಗವಸು, 16-ಇಂಚಿನ ಬ್ಲ್ಯಾಕ್-ಔಟ್ ಅಲಾಯ್ ವ್ಹೀಲ್‌ಗಳು, ರೂಫ್ ರ್‍ಯಾಲಿ  ಪಡಲ್ ಲ್ಯಾಂಪ್‌ಗಳಂತಹ ವ್ಯತ್ಯಾಸಗಳನ್ನು ಹೊಂದಿದೆ.

Volkswagen Taigun Sport concept

ಈ “ಸ್ಪೋರ್ಟ್” ಕಾನ್ಸೆಪ್ಟ್ ಕೂಡ “ಸ್ಪೋರ್ಟ್” ನಿರ್ದಿಷ್ಟ ಬಾಡಿ ಗ್ರಾಫಿಕ್ಸ್ ಮತ್ತು ಲೆದರ್ ಮೇಲ್ಗವಸು, 17-ಇಂಚಿನ ಡ್ಯುಯಲ್-ಟೋನ್ ಅಲಾಯ್ ವ್ಹೀಲ್‌ಗಳು, ಮತ್ತು ರೆಡ್ ಇನ್‌ಸರ್ಟ್ ಜೊತೆಗೆ ಬ್ಲ್ಯಾಕ್-ಔಟ್ ORVMಗಳನ್ನು ಪಡೆದಿದೆ.

ಇದನ್ನೂ ಓದಿ: ಬೇಸಿಗೆಯಲ್ಲಿ ಪಾಲಿಸಬೇಕಾದ 7  ಕಾರ್ ಕೇರ್ ಸಲಹೆಗಳು

 

 

ಸಾಮಾನ್ಯ ನವೀಕರಣಗಳು

ಟೈಗನ್‌ನ ಎಲ್ಲಾ ವೇರಿಯೆಂಟ್‌ಗಳು ಈಗ ಏಪ್ರಿಲ್ 1, 2023 ರಿಂದ ತಯಾರಿಸಲಾದ ಮಾಡೆಲ್‌ಗಳಿಂದ ಸೀಟ್‌ಬೆಲ್ಟ್ ರಿಮೈಂಡರ್ ಅನ್ನು ಪ್ರಮಾಣಿತವಾಗಿ ಪಡೆಯುತ್ತದೆ. ಗ್ಲೋಬಲ್ NCAP ಪರೀಕ್ಷಿಸಿದಂತೆ ಇದು ಈಗಾಗಲೇ ಸುರಕ್ಷಿತ ಮೇಡ್ ಇನ್ ಇಂಡಿಯಾ ಎಸ್‌ಯುವಿಗಳಲ್ಲಿ ಒಂದಾಗಿದೆ.

Volkswagen Taigun Trail concept side

ಈ ಎಸ್‌ಯುವಿ ಪ್ರಸ್ತುತ ರೂ.11.62 ಲಕ್ಷದಿಂದ ರೂ. 19.06 ಲಕ್ಷದವರೆಗೆ (ಎಕ್ಸ್-ಶೋರೂಮ್ ದೆಹಲಿ) ಮಾರಾಟವಾಗುತ್ತಿದೆ. ಮಾರುತಿ ಗ್ರ್ಯಾಂಡ್ ವಿಟಾರಾ, ಕಿಯಾ ಸೆಲ್ಟೋಸ್, MG ಆಸ್ಟರ್, ಮತ್ತು ಸ್ಕೋಡಾ ಕುಶಾಕ್‌ನೊಂದಿಗೆ ಸ್ಪರ್ಧಿಸುತ್ತದೆ.

ಇನ್ನಷ್ಟು ಇಲ್ಲಿ ಓದಿ : ಟೈಗನ್ ಆನ್ ರೋಡ್ ಬೆಲೆ

 

was this article helpful ?

Write your Comment on Volkswagen ಟೈಗುನ್

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
  • ಟಾಟಾ ಸಿಯೆರಾ
    ಟಾಟಾ ಸಿಯೆರಾ
    Rs.10.50 ಲಕ್ಷಅಂದಾಜು ದಾರ
    ಸೆಪಟೆಂಬರ್, 2025: ನಿರೀಕ್ಷಿತ ಲಾಂಚ್‌
  • ಕಿಯಾ syros
    ಕಿಯಾ syros
    Rs.9.70 - 16.50 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಬಿವೈಡಿ sealion 7
    ಬಿವೈಡಿ sealion 7
    Rs.45 - 49 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
  • ಎಂಜಿ majestor
    ಎಂಜಿ majestor
    Rs.46 ಲಕ್ಷಅಂದಾಜು ದಾರ
    ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
  • ಟಾಟಾ ಹ್ಯಾರಿಯರ್ ಇವಿ
    ಟಾಟಾ ಹ್ಯಾರಿಯರ್ ಇವಿ
    Rs.30 ಲಕ್ಷಅಂದಾಜು ದಾರ
    ಮಾರಚ್‌, 2025: ನಿರೀಕ್ಷಿತ ಲಾಂಚ್‌
×
We need your ನಗರ to customize your experience