2023 ಹ್ಯುಂಡೈ ವರ್ನಾವನ್ನು ನೀವು ಖರೀದಿಸಬಹುದು 9 ವಿಭಿನ್ನ ಶೇಡ್‌ಗಳಲ್ಲಿ
ಇದನ್ನು ಏಳು ಮೋನೋಟೋನ್ ಮತ್ತು ಎರಡು ಡ್ಯುಯಲ್-ಟೋನ್ ಕಲರ್ ಆಯ್ಕೆಗಳಲ್ಲಿ ನೀಡಲಾಗಿದೆ
- ಆರನೇ-ಪೀಳಿಗೆ ವರ್ನಾದ ಬೆಲೆ ರೂ. 10.90 ಲಕ್ಷದಿಂದ ರೂ. 17.38 ಲಕ್ಷದ ತನಕ ಇದೆ (ಪ್ರಾಸ್ತಾವಿಕ ಎಕ್ಸ್-ಶೋರೂಂ)
- ಎರಡು ಪೆಟ್ರೋಲ್ ಇಂಜಿನ್‌ಗಳನ್ನು ಪಡೆದಿದೆ: 115PSನ ಸ್ವಾಭಾವಿಕವಾಗಿ ಚೂಷಿಸಲ್ಪಡುವ ಇಂಜಿನ್ ಮತ್ತು 160PSನ ಟರ್ಬೋಚಾರ್ಜ್ ಯೂನಿಟ್.
- ಈ ಸೆಡಾನ್ ಹ್ಯುಂಡೈನ ಇತ್ತೀಚಿನ ಪ್ಯಾರಾಮೆಟ್ರಿಕ್ ಡಿಸೈನ್ ಲ್ಯಾಂಗ್ವೇಜ್ ವಿವರಗಳನ್ನು ಫ್ರಂಟ್ ಮತ್ತು ರಿಯರ್‌ನಲ್ಲಿ ಹೊಂದಿದೆ.
- ಸಂಯೋಜಿತ ಡ್ಯುಯಲ್ ಡಿಸ್‌ಪ್ಲೇಗಳು, ಹೀಟಡ್ ಮತ್ತು ವಾತಾಯನದ ಫ್ರಂಟ್ ಸೀಟುಗಳು, ಆರು ಏರ್‌ಬ್ಯಾಗ್‌ಗಳು ಮತ್ತು ADAS ಫೀಚರ್‌ಗಳನ್ನು ಹೊಂದಿದೆ.
- ಈಗಾಗಲೇ 8,000 ಕ್ಕೂ ಹೆಚ್ಚಿನ ಬುಕಿಂಗ್‌ಗಳನ್ನು ಸ್ವೀಕರಿಸಿದೆ.
ಸುದೀರ್ಘ ಕಾಯುವಿಕೆಯ ನಂತರ ಹ್ಯುಂಡೈ ಕೊನೆಗೂ ಆರನೇ-ಪೀಳಿಗೆ ವರ್ನಾ ವನ್ನು ಅನಾವರಣಗೊಳಿಸಿ ಅದರ ಬೆಲೆಗಳನ್ನು ಬಹಿರಂಗಪಡಿಸಿದೆ. ಇದು ನಿರ್ಗಮಿತ ಮಾಡೆಲ್‌ಗಿಂತ ದೊಡ್ಡದಿದ್ದು, ಇದರ ಫೀಚರ್‌ಗಳು ಬೋಲ್ಡ್ ನ್ಯೂ ಸ್ಟೈಲಿಂಗ್ ಜೊತೆಗೆ ಪ್ಯಾರಾಮೆಟ್ರಿಕ್ ಡಿಸೈನ್ ವಿವರಗಳನ್ನು ಫ್ರಂಟ್ ಮತ್ತು ರಿಯರ್‌ನಲ್ಲಿ ಹೊಂದಿದೆ. ಈ ಹೊಸ ನೋಟವು ಮೂರು ಅಂಶಗಳಿಂದ ಪ್ರಾಬಲ್ಯ ಹೊಂದಿದೆ: ಸುತ್ತುವರೆದ LED ಲೈಟ್ ಸ್ಟ್ರಿಪ್‌ಗಳು ಫ್ರಂಟ್ ಮತ್ತು ರಿಯರ್, ನಯವಾದ ನಾಚ್‌ಬ್ಯಾಕ್-ಶೈಲಿಯ ರೂಫ್‌ಲೈನ್ ಮತ್ತು ರಿಯರ್ ಪ್ರೊಫೈಲ್‌ನ ರಿಯರ್ ಅರ್ಧದಲ್ಲಿ ಕೋನೀಯ ಕಡಿತಗಳು. ಈ ಸೆಡಾನ್‌ಗೆ ಬುಕಿಂಗ್ ಈಗ ಒಂದು ತಿಂಗಳಿನಿಂದ ತೆರೆದಿವೆ, ಆದರೆ ಈ ಕಾರುತಯಾರಕರು ಲಭ್ಯವಿರುವ ಎಲ್ಲಾ ಕಲರ್ ಆಯ್ಕೆಗಳನ್ನು ಈಗಷ್ಟೇ ಬಹಿರಂಗಪಡಿಸಿದೆ.
ಹಾಗಾಗಿ ನೀವು 2023 ವರ್ನಾವನ್ನು ಕಾಯ್ದಿರಿಸುವುದಕ್ಕೂ ಮೊದಲು ಅದರ ಬಣ್ಣದ ಪ್ಯಾಲೆಟ್ ಅನ್ನು ನೋಡಿ:
-
ಅಟ್ಲಾಸ್ ವೈಟ್
-
ಫೇರಿ ರೆಡ್
-
ಆಬೇಸ್ ಬ್ಲ್ಯಾಕ್
-
ಟೈಫೂನ್ ಸಿಲ್ವರ್
-
ಟೆಲ್ಲೂರಿಯನ್ ಬ್ರೌನ್
-
ಟೈಟನ್ ಗ್ರೇ
-
ಸ್ಟೇರಿ ನೈಟ್
-
ಅಟ್ಲಾಸ್ ವೈಟ್ ಡ್ಯುಯಲ್-ಟೋನ್
-
ಫೇರಿ ರೆಡ್ ಡ್ಯುಯಲ್ ಟೋನ್
ಪವರ್‌ಟ್ರೇನ್
ಈ 2023 ವರ್ನಾ ಎರಡು ಪೆಟ್ರೋಲ್ ಇಂಜಿನ್ ಆಯ್ಕೆಗಳೊಂದಿಗೆ ಬರುತ್ತಿದೆ: 1.5-ಲೀಟರ್ ಸ್ವಾಭಾವಿಕವಾಗಿ ಚೂಷಿಸಲ್ಪಡುವ ಯೂನಿಟ್, ಇದು 115PS ಮತ್ತು 144Nm ಉತ್ಪಾದಿಸುತ್ತದೆ ಮತ್ತು 6-ಸ್ಪೀಡ್ ಮ್ಯಾನುವಲ್ ಅಥವಾ CVT ಗೇರ್‌ಬಾಕ್ಸ್‌ನೊಂದಿಗೆ ಇದನ್ನು ಜೋಡಿಸಲಾಗಿದೆ ಮತ್ತೊಂದು 1.5-ಲೀಟರ್ ಟರ್ಬೋಚಾರ್ಜ್ ಇಂಜಿನ್, ಇದು 160PS ಮತ್ತು 253Nm ಉತ್ಪಾದಿಸುತ್ತದೆ ಮತ್ತು 7-ಸ್ಪೀಡ್ ಮ್ಯಾನುವಲ್ ಅಥವಾ DCTಯೊಂದಿಗೆ ಇದನ್ನು ಜೋಡಿಸಲಾಗಿದೆ. ಡ್ಯುಯಲ್ ಟೋನ್ ಆಯ್ಕೆಯು ಬ್ಲ್ಯಾಕ್ ಅಲಾಯ್ ವ್ಹೀಲ್‌ಗಳನ್ನು ಹೊಂದಿರುವ ಹೊಸ ವರ್ನಾದ ಟರ್ಬೋ ವೇರಿಯೆಂಟ್‌ಗಳಿಗೆ ಸೀಮಿತವಾಗಿದೆ.
ಫೀಚರ್‌ಗಳು ಮತ್ತು ಸುರಕ್ಷತೆ
ಇದರ ಫೀಚರ್‌ಗಳ ಪಟ್ಟಿಯು ಡ್ಯುಯಲ್ ಸಂಯೋಜಿತ ಡಿಸ್‌ಪ್ಲೇಗಳು (10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೊಟೈನ್‌ಮೆಂಟ್ ಮತ್ತು ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ), ಸಿಂಗಲ್-ಪೇನ್ ಸನ್‌ರೂಫ್, ಹೀಟಡ್ ಮತ್ತು ವಾತಾಯನದ ಫ್ರಂಟ್ ಸೀಟುಗಳು, ಸ್ವಿಚ್ ಮಾಡಬಹುದಾದ ನಿಯಂತ್ರಣಗಳನ್ನು ಹೊಂದಿದ ಇನ್‌ಫೋಟೈನ್‌ಮೆಂಟ್ ಮತ್ತು AC, 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್ ಅನ್ನು ಒಳಗೊಂಡಿದೆ.
ಇದನ್ನೂ ಓದಿ: ಹೊಸ ಹ್ಯುಂಡೈ ವರ್ನಾ ಇಲೆಕ್ಟ್ರಿಫಿಕೇಶನ್ ಇಲ್ಲದೆಯೇ ಹೆಚ್ಚಿನ ಇಂಧನ ದಕ್ಷತೆ ಹೊಂದಿರುವ ಸೆಡಾನ್ ಹೌದೇ?
ಕಾರಿನ ಒಳಗಿನ ಪ್ರಯಾಣಿಕರ ಸುರಕ್ಷತೆಯನ್ನು ಖಾತ್ರಿಪಡಿಸುವುದಕ್ಕಾಗಿ, ಈ 2023 ವರ್ನಾ ಆರು ಏರ್‌ಬ್ಯಾಗ್‌ಗಳು, ABS ಜೊತೆಗೆ EBD, ಎಲ್ಲಾ ಪ್ರಯಾಣಿಕರಿಗೆ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು ಮತ್ತು ರಿಯರ್ ಡಿಫಾಗರ್ ಅನ್ನು ಸ್ಟಾಂಡರ್ಡ್ ಆಗಿ ಪಡೆದಿದೆ.ಅಲ್ಲದೇ ಇದು ಸುಧಾರಿತ ಡ್ರೈವರ್-ಅಸಿಸ್ಟೆಂಟ್ ಸಿಸ್ಟಮ್‌ಗಳು (ADAS) ಇದರ ಜೊತೆಗೆ ಲೇನ್-ಕೀಪ್ ಅಸಿಸ್ಟ್, ಬ್ಲೈಂಡ್-ಸ್ಪಾಟ್ ಅಲರ್ಟ್, ಫಾರ್ವರ್ಡ್ ಕೊಲಿಶನ್ ವಾರ್ನಿಂಗ್, ಡ್ರೈವರ್ ಅಟೆನ್ಷನ್ ವಾರ್ನಿಂಗ್ ಮತ್ತು ಹೊಂದಿಸಬಲ್ಲ ಕ್ರ್ಯೂಸ್ ಕಂಟ್ರೋಲ್ ಫೀಚರ್‌ಗಳನ್ನು ಹೊಂದಿದೆ.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಹ್ಯುಂಡೈ ಈ ಆರನೇ-ಪೀಳಿಗೆ ವರ್ನಾದ ಬೆಲೆಯನ್ನು ರೂ. 10.90 ಲಕ್ಷದಿಂದ ರೂ. 17.38 ಲಕ್ಷದ ತನಕ (ಪರಿಚಯಾತ್ಮಕ ಎಕ್ಸ್-ಶೋರೂಂ) ನಿಗದಿಪಡಿಸಿದೆ ಹಾಗೂ ಇದು ಹೋಂಡಾ ಸಿಟಿ, ಸ್ಕೋಡಾ ಸ್ಲೇವಿಯಾ, ಫೋಕ್ಸ್‌ವಾಗನ್ ವರ್ಟಸ್ ಮತ್ತು ಮಾರುತಿ ಸಿಯಾಝ್‌ಗೆ ಪ್ರತಿಸ್ಪರ್ಧಿಯಾಗಿ ಮುಂದುವರೆದಿದೆ.
ಇನ್ನಷ್ಟು ಓದಿ : ವರ್ನಾದ ಆನ್ ರೋಡ್ ಬೆಲೆ