Toyota Innova Hycross ಸ್ಟ್ರಾಂಗ್ ಹೈಬ್ರಿಡ್ ಅನ್ನು ಫ್ಲೆಕ್ಸ್ ಫ್ಯೂಯೆಲ್ ಮಾದರಿಯಾಗಿ ಮಾಡಲು ಮಾಡಲಾದ 7 ಬದಲಾವಣೆಗಳು ಇಲ್ಲಿವೆ
ಟೊಯೋಟಾ ಇನ್ನೋವಾ ಹೈಕ್ರಾಸ್ ಗಾಗಿ tarun ಮೂಲಕ ಆಗಸ್ಟ್ 31, 2023 04:39 pm ರಂದು ಪ್ರಕಟಿಸಲಾಗಿದೆ
- 51 Views
- ಕಾಮೆಂಟ್ ಅನ್ನು ಬರೆಯಿರಿ
ಇವು ಇಥನಾಲ್ ನಿಂದ ಸಮೃದ್ಧವಾದ ಇಂಧನದ ಬೇರೆಯೇ ಗುಣಲಕ್ಷಣಗಳಿಗೆ ಒಗ್ಗಿಕೊಳ್ಳುವ ಸಲುವಾಗಿ ಸಾಮಾನ್ಯ ಪೆಟ್ರೋಲ್ ಎಂಜಿನ್ ಗೆ ಮಾಡಲಾದ ಅಗತ್ಯ ಬದಲಾವಣೆಗಳಾಗಿವೆ
ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಅವರು ಇತ್ತೀಚೆಗೆ ಟೊಯೊಟಾ ಇನೋವಾ ಹೈಕ್ರಾಸ್ ಎಲೆಕ್ಟ್ರಿಫೈಡ್ ಫ್ಲೆಕ್ಸ್ ಫ್ಯೂಯೆಲ್ ಪ್ರಾಯೋಗಿಕ ವಾಹನವನ್ನು ಬಿಡುಗಡೆ ಮಾಡಿದ್ದು, ಇದು 85 ಶೇಕಡಾದಷ್ಟು ಎಥನಾಲ್ ಮಿಶ್ರಣದೊಂದಿಗೆ ಹಸಿರು ಇಂಧನದೊಂದಿಗೆ ರಸ್ತೆಯಲ್ಲಿ ಓಡಾಡುವ ಸಾಮರ್ಥ್ಯ ಹೊಂದಿದೆ. ಈ ಪ್ರಾಯೋಗಿಕ ಮಾದರಿಯ ಹೈಕ್ರಾಸ್ ನ 2 ಲೀಟರ್ ಸಾಮರ್ಥ್ಯದ ಹೈಬ್ರಿಡ್ ಪೆಟ್ರೋಲ್ ಪವರ್ ಟ್ರೇನ್ ಅನ್ನು ಹೊಂದಿದ್ದು, ತಾನಾಗಿಯೇ ಇಂಧನ ಮತ್ತು ವಿದ್ಯುಚ್ಛಕ್ತಿಯ ನಡುವೆ ಅಗತ್ಯವಿರುವುದನ್ನು ಆರಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.
ಆದರೆ, ಅಧಿಕ ಪ್ರಮಾಣದ ಎಥನಾಲ್ ಮಿಶ್ರಣಕ್ಕೆ ಹೊಂದಿಕೊಳ್ಳುವುದಕ್ಕಾಗಿ, ಸ್ಥಳೀಯವಾಗಿ ತಯಾರಿಸಿದ ಎಂಜಿನ್ ಮತ್ತು ಸಂಬಂಧಿತ ಘಟಕಗಳಿಗೆ ಟೊಯೊಟಾ ಸಂಸ್ಥೆಯು ಅನೇಖ ಬದಲಾವಣೆಗಳನ್ನು ಮಾಡಬೇಕಾಯಿತು. ಈ ವಾಹನವು E85 ಇಂಧನಕ್ಕೆ ಹೊಂದಿಕೊಳ್ಳುವುದಕ್ಕಾಗಿ ಈ ಕೆಳಗಿನ ಬದಲಾವಣೆಗಳನ್ನು ಮಾಡಲಾಗಿದೆ:
ಮೋಟಾರ್ ಚಾಲಿತ VVT
ಪೆಟ್ರೋಲ್ ಚಾಲಿತ ಸಾಮಾನ್ಯ ಎಂಜಿನ್, ಶೂನ್ಯಕ್ಕಿಂತಲೂ ಕಡಿಮೆ ತಾಪಮಾನದಲ್ಲಿ ಸ್ಟಾರ್ಟ್ ಆಗುತ್ತದೆ. ಆದರೆ ಎಥನಾಲ್ ನ ತಾಪನ ತಾಪಮಾನವು ಅಧಿಕವಾಗಿರುವುದರಿಂದ ಶೀತಲ ಸ್ಥಳಗಳಲ್ಲಿ ಇದು ಸಮಸ್ಯೆಗಳನ್ನು ಎದುರಿಸಬಹುದು. ಹೀಗಾಗಿ ಎಂಜಿನ್ ಚಾಲೂ ಆಗಲು ಹೆಚ್ಚಿನ ಸಮಯ ಬೇಕಾದೀತು. ಹೀಗಾಗಿ ಎಥನಾಲ್ ಕಾರು ಶೀತಲ ಸ್ಥಳಗಳಲ್ಲಿ ಸಮಸ್ಯೆ ಎದುರಿಸದಂತೆ ಮಾಡುವುದಕ್ಕಾಗಿ ಅಗತ್ಯ ಬದಲಾವಣೆಗಳನ್ನು ಮಾಡಲಾಗಿದೆ. ಹೀಗಾಗಿ ಮೈನಸ್ 15 ಡಿಗ್ರಿ ಸೆಲ್ಶಿಯನ್ ತಾಪಮಾನದಲ್ಲಿಯೂ ಇದು ಕಾರ್ಯ ನಿರ್ವಹಿಸಲಿದೆ.
ಸುಧಾರಿತ ತುಕ್ಕು ನಿರೋಧ ಎಂಜಿನ್
ಎಥನಾಲ್ ನ ರಾಸಾಯನಿಕ ಗುಣಲಕ್ಷಣವು ಪೆಟ್ರೋಲ್ ಗಿಂತಲೂ ಹೆಚ್ಚಿನ ಆಮ್ಲೀಯತೆಯನ್ನು ಹೊಂದಿರುವುದರಿಂದ ಹಾಗೂ ಇದು ಅಧಿಕ ಪ್ರಮಾಣದಲ್ಲಿ ನೀರನ್ನು ಹೀರುವ ಕಾರಣ ಎಂಜಿನ್ ತುಕ್ಕು ಹಿಡಿಯುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಹೀಗಾಗಿ, ಫ್ಲೆಕ್ಸ್ ಫ್ಯೂಯೆಲ್ ಮಾದರಿಯು ಎಥನಾಲ್ ಗೆ ಹೊಂದಿಕೊಳ್ಳುವ ಸ್ಪಾರ್ಕ್ ಪ್ಲಗ್ ಗಳು, ವಾಲ್ವ್ ಮತ್ತು ವಾಲ್ವ್ ಸೀಟುಗಳು ಮತ್ತು ಪಿಸ್ಟನ್ ರಿಂಗ್ ಗಳನ್ನು ಹೊಂದಿರಲಿದ್ದು, ಇವು ತುಕ್ಕು ನಿರೋಧಕವಾಗಿವೆ ಮಾತ್ರವಲ್ಲದೆ ಸವೆತವನ್ನು ಪ್ರತಿರೋಧಿಸುತ್ತವೆ. ಮುಖ್ಯವಾಗಿ, ಅಧಿಕ ಪ್ರಮಾಣದ ಎಥನಾಲ್ ಇಂಧನದ ನೇರ ಸಂಪರ್ಕಕ್ಕೆ ಬರುವ ಎಲ್ಲಾ ಬಿಡಿಭಾಗಗಳನ್ನು ಇದೇ ರೀತಿಯಲ್ಲಿ ತಯಾರಿಸಲಾಗಿದೆ.
ಇದನ್ನು ಸಹ ಓದಿರಿ: ಮಾರುತಿ ಇನ್ವಿಕ್ಟೊ vs ಟೊಯೊಟಾ ಇನೋವಾ ಹೈಕ್ರಾಸ್ vs ಕಿಯಾ ಕಾರೆನ್ಸ್: ಬೆಲೆಗಳ ಹೋಲಿಕೆ
ತ್ರೀ-ವೇ ಕ್ಯಾಟಲಿಸ್ಟ್
ಅತ್ಯಂತ ನವೀನ ತ್ರೀ-ವೇ ಕ್ಯಾಟಲಿಸ್ಟ್ ಅನ್ನು ಎಥನಾಲ್ ಚಾಲಿತ ಕಾರುಗಳಲ್ಲಿ ಬಳಸಲಾಗಿದ್ದು, ಇದು ಪ್ರದೂಷಣೆಯನ್ನು ಗಮನಾರ್ಹ ಪ್ರಮಾಣದಲ್ಲಿ ತಗ್ಗಿಸಲಿದೆ. ಏಕೆಂದರೆ ಎಥನಾಲ್ ದಹನವು, ಸಾಮಾನ್ಯ ಪೆಟ್ರೋಲ್ ಗಿಂತಲೂ ಭಿನ್ನವಾಗಿ NoX ಮತ್ತು ಇಂಗಾಲದ ಹೊರಸೂಸುವಿಕೆಯೊಂದಿಗೆ ಭಿನ್ನವಾದ ಹೈಡ್ರೋಕಾರ್ಬನ್ ಗಳನ್ನು ಇದು ಉತ್ಪಾದಿಸುತ್ತದೆ. ಈ ರೀತಿಯಾಗಿ ಇದು BS6 ಹಂತ 2 ಅನುಸರಣೆ ಮಾನದಂಡಗಳನ್ನು ಇದು ಅನುಸರಿಸುತ್ತದೆ.
ಅಧಿಕ ಒತ್ತಡದ ಫ್ಯೂಯೆಲ್ ಇಂಜೆಕ್ಟರ್ ಗಳು
ಇದು ಪೆಟ್ರೊಲ್ ಎಂಜಿನಿಗೆ ಮಾಡಲಾಗಿರುವ ಪ್ರಮುಖ ಬದಲಾವಣೆಯಾಗಿದೆ. ಎಥನಾಲ್ ಇಂಧನವು ಪೆಟ್ರೋಲ್ ಗಿಂತಲೂ ಹೆಚ್ಚಿನ ತಾಪಮಾನದಲ್ಲಿ ಉರಿಯುತ್ತದೆ. ಹೀಗಾಗಿ ಅಗತ್ಯವಿರುವ ಕಾರ್ಯಕ್ಷಮತೆಯನ್ನು ನೀಡಲು ಎಂಜಿನ್ ಗೆ ಹೆಚ್ಚಿನ ಶಕ್ತಿಯ ಅಗತ್ಯವಿದೆ. ಎಥನಾಲ್ ಚಾಲಿತ ಹೈಕ್ರಾಸ್ ವಾಹನವು ಅಧಿಕ ಒತ್ತಡದ ಫ್ಯೂಯೆಲ್ ಇಂಜೆಕ್ಟರ್ ಗಳನ್ನು (ಡೈರೆಕ್ಟ್ ಫ್ಯೂಯೆಲ್ ಇಂಜೆಕ್ಷನ್) ಬಳಸಲಿದೆ. ಇದು ಅಗತ್ಯವಿರುವ ಹರಿವಿನ ದರವನ್ನು ಒದಗಿಸಲಿದೆ. ಜೊತೆಗೆ ಅಧಿಕ ತಾಪವನ್ನು ಒದಗಿಸಲು ಮತ್ತು ತುಕ್ಕು ನಿರೋಧಕ ಗುಣವನ್ನು ತೋರ್ಪಡಿಸಲು ಈ ಇಂಜೆಕ್ಟರ್ ಗಳು ಬಲವರ್ಧನೆಗೆ ಒಳಪಟ್ಟಿವೆ.
ಇಂಧನದ ಟ್ಯಾಂಕ್ ಗೆ ಬದಲಾವಣೆ
ಇನೋವಾ ಹೈಕ್ರಾಸ್ ವಾಹನದ ಇಂಧನದ ಟ್ಯಾಂಕ್ ಮತ್ತು ಇಂಧನದ ಪೈಪ್ ಅನ್ನು ಮಾರ್ಪಡಿಸುವುದಕ್ಕಾಗಿ ಆಂಟಿ ಆಕ್ಸಿಡಂಟ್ ಸಾಮಗ್ರಿಗಳು ಮತ್ತು ಲೇಪನಗಳನ್ನು ಬಳಸಲಾಗಿದೆ. ತುಕ್ಕು ಮತ್ತು ಸವೆತವನ್ನು ನಿಯಂತ್ರಿಸಿ ದೀರ್ಘ ಕಾಲದಲ್ಲಿ ಸುಗಮ ಚಾಲನೆಯನ್ನು ಖಾತರಿಪಡಿಸುವುದಕ್ಕಾಗಿ ಈ ಬದಲಾವಣೆಯನ್ನು ಮಾಡಲಾಗಿದೆ.
ಎಥನಾಲ್ ಸೆನ್ಸಾರ್
ಸಾಮಾನ್ಯ ಹೈಕ್ರಾಸ್ ವಾಹನಕ್ಕೆ ಹೋಲಿಸಿದರೆ ಫ್ಲೆಕ್ಸ್ ಫ್ಯೂಯೆಲ್ ಎಂ.ಪಿ.ವಿ ಯಲ್ಲಿ ಮಾಡಲಾಗಿರುವ ಇನ್ನೊಂದು ಪ್ರಮುಖ ಬದಲಾವಣೆ ಎಂದರೆ, ಇದು ಎಥನಾಲ್ ಸೆನ್ಸಾರ್ ನೊಂದಿಗೆ ಬರಲಿದೆ. ಇದು ಇಂಧನದಲ್ಲಿರುವ ಎಥನಾಲ್ ಮಿಶ್ರಣ ಅಥವಾ ಸಾಂದ್ರೀಕರಣವನ್ನು ಅಳೆಯುತ್ತದೆ. ಎಂಜಿನ್ ನಲ್ಲಿರುವ ಇತರ ಅಂಶಗಳಲ್ಲಿ ಹೊಂದಾಣಿಕೆ ಮಾಡುವುದಕ್ಕಾಗಿ ಈ ಫ್ಲೆಕ್ಸ್ ಫ್ಯೂಯೆಲ್ ಸೆನ್ಸಾರ್, ಮಾಹಿತಿಯನ್ನು ವಿಶೇಷ ಇ.ಸಿ.ಯು ಗೆ ರವಾನಿಸುತ್ತದೆ. ಸಾಮಾನ್ಯ ಪೆಟ್ರೋಲ್ ಮಾದರಿಗಳು ಇಂಧನದಲ್ಲಿರುವ ಒಕ್ಟೇನ್ ರೇಟಿಂಗ್ ಅನ್ನು ಹೇಗೆ ಕಂಡುಹಿಡಿಯುತ್ತವೆಯೋ ಅದೇ ರೀತಿ ಈ ಸೆನ್ಸಾರ್ ಸಹ ಕಾರ್ಯ ನಿರ್ವಹಿಸಲಿದೆ. ಅಲ್ಲದೆ, ಒಂದು ವೇಳೆ E85 ಪಂಪ್ ನ ಸಮೀಪದಲ್ಲಿ ಇಲ್ಲದೆ ಇದ್ದರೆ ಹಾಗೂ ಕಡಿಮೆ ಪ್ರಮಾಣದ E20 ಮಿಶ್ರಣವನ್ನು ಟಾಪಪ್ ಮಾಡುವುದಾದರೆ, ಎಂಜಿನ್ ಸರಾಗವಾಗಿ ಕಾರ್ಯ ನಿರ್ವಹಿಸುವುದಕ್ಕಾಗಿ, ಕಾರಿನ ಸಿಸ್ಟಂ, ನಿಮ್ಮ ಇಂಧನ ಟ್ಯಾಂಕ್ ನಲ್ಲಿರುವ ಪ್ರಸ್ತುತ ಮಿಶ್ರಣದ ಮೌಲ್ಯಮಾಪನ ಮಾಡಬೇಕು.
ಇದನ್ನು ಸಹ ಓದಿರಿ: ಭಾರತದಲ್ಲಿ ಮುಂಬರುವ ಎಲೆಕ್ಟ್ರಿಕ್ ಕಾರುಗಳು
ಇ.ಸಿ.ಯು ವಿಗೆ ಮಾಡಲಾಗಿರುವ ಬದಲಾವಣೆಗಳು
ಹೈಕ್ರಾಸ್ ಫ್ಲೆಕ್ಸ್ ಫ್ಯೂಯೆಲ್ ನ ಇ.ಸಿ.ಯು (ಎಂಜಿನ್ ಕಂಟ್ರೋಲ್ ಯೂನಿಟ್), ಎಥನಾಲ್ ಸೆನ್ಸಾರ್ ಗುರುತಿಸಿರುವ ಎಥನಾಲ್ ಪ್ರಮಾಣವನ್ನು ಆಧರಿಸಿ ಎಲೆಕ್ಟ್ರಾನಿಕ್ ರೂಪದಲ್ಲಿ ನಿಯಂತ್ರಿಸಲಾದ, ಎಂಜಿನ್ ನ ಕಾರ್ಯಗಳನ್ನು ನಿರ್ಧರಿಸುತ್ತದೆ. ಇದಕ್ಕೆ ಅನುಗುಣವಾಗಿ ಸೆಟ್ಟಿಂಗ್ ಗಳನ್ನು ನಿರ್ಣಯಿಸುತ್ತದೆ. ಹೀಗಾಗಿ E20 ಇರಲಿ ಅಥವಾ E85 ಆಗಿರಲಿ, ಎಥನಾಲ್ ಮಿಶ್ರಣದ ವಿವಿಧ ಪ್ರಮಾಣಗಳಲ್ಲಿ ಅಥವಾ ಕೇವಲ ಪೆಟ್ರೋಲ್ ಆಗಿರಲಿ, ಯಾವುದೇ ಸನ್ನಿವೇಶದಲ್ಲಿ ಎಂಜಿನ್ ಎಲ್ಲೆಯಿಲ್ಲದೆ ಕಾರ್ಯನಿರ್ವಹಿಸುವುದನ್ನು ಇದು ಖಚಿತಪಡಿಸುತ್ತದೆ. ಇದುವೇ ಫ್ಲೆಕ್ಸ್ ಫ್ಯೂಯೆಲ್ ವಾಹನದ ನಿಜವಾದ ವ್ಯಾಖ್ಯಾನವಾಗಿದೆ.
ಇನೋವಾ ಹೈಕ್ರಾಸ್ ಎಲೆಕ್ಟ್ರಿಫೈಡ್ ಫ್ಲೆಕ್ಸ್ ಫ್ಯೂಯೆಲ್ ವಾಹನವು ಒಟ್ಟು ಸಮಯದ 60 ಶೇಕಡಾದಷ್ಟು ಮಟ್ಟಿಗೆ ಎಲೆಕ್ಟ್ರಿಕ್ ಶಕ್ತಿಯಲ್ಲಿ ಹಾಗೂ ಉಳಿದ ಮಟ್ಟಿಗೆ ಜೈವಿಕ ಇಂಧನದಲ್ಲಿ ಕಾರ್ಯ ನಿರ್ವಹಿಸಬಲ್ಲದು. ಹೀಗಾಗಿ ಇದು ಆರ್ಥಿಕವಾಗಿ ಮಿತವ್ಯಯಿ ಎನಿಸಲಿದೆ ಮಾತ್ರವಲ್ಲದೆ 100 ಶೇಕಡಾದಷ್ಟು ಎಥನಾಲ್ ನಲ್ಲಿ ಚಲಿಸುವ ವಾಹನಕ್ಕಿಂತಲೂ ಹೆಚ್ಚಿನ ಪರಿಸರ ಸ್ನೇಹಿ ಎನಿಸಲಿದೆ.
ಆದರೂ ಇದು ನಿರ್ಮಾಣ ಹಂತಕ್ಕೆ ತಲುಪಲು ಸಾಕಷ್ಟು ಸಮಯ ತೆಗೆದುಕೊಳ್ಳಬಹುದು. ಭಾರತೀಯ ರಸ್ತೆಗಳಿಗೆ ಇದನ್ನು ಸಿದ್ದಪಡಿಸುವ ಮೊದಲು ಸಾಕಷ್ಟು ಪರೀಕ್ಷೆಗಳು ಮತ್ತು ಮಾಪನಕ್ಕೆ ಇದು ಒಳಪಡುವ ಅಗತ್ಯವಿದೆ. ಎರಡು ಸಾವಿರದ ಇಪ್ಪತ್ತೈದರ ಸುಮಾರಿಗೆ ಎಲ್ಲಾ ವಾಹನಗಳು ಮೊದಲ E20 (ಎಥನಾಲ್ 20 ಶೇಕಡಾ ಮಿಶ್ರಣ) ಅನುಸರಣೆಯ ವಾಹನಗಳೆನಿಸಲಿವೆ. ಸುಮಾರು 3 - 4 ವರ್ಷಗಳ ನಂತರ ಟೊಯೊಟಾ ಇನೋವಾ ಹೈಕ್ರಾಸ್ ಹೈಬ್ರೀಡ್ ಫ್ಲೆಕ್ಸ್ ಫ್ಯೂಯೆಲ್ ಪರೀಕ್ಷಾರ್ಥ ಮಾದರಿಯು ತಯಾರಿಗೆ ಸಿದ್ಧಗೊಳ್ಳಲಿದೆ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಟೊಯೊಟಾ ಇನೋವಾ ಹೈಕ್ರಾಸ್ ಅಟೊಮ್ಯಾಟಿಕ್
0 out of 0 found this helpful