ನಿಮ್ಮ ಮಾರುತಿ ಗ್ರ್ಯಾಂಡ್ ವಿಟಾರಾವನ್ನು ಮನೆಗೆ ಡ್ರೈವ್ ಮಾಡಲು ನೀವು 9 ತಿಂಗಳ ತನಕ ಕಾಯಬೇಕು
ಈ ಕಾಂಪ್ಯಾಕ್ಟ್ ಎಸ್‌ಯುವಿಯ ಜನಪ್ರಿಯತೆಯೇ ಇದನ್ನು ಮಾರುತಿಯ ಶ್ರೇಣಿಯಲ್ಲಿ ಹೆಚ್ಚು ಬೇಡಿಕೆಯುಳ್ಳ ವಾಹನಗಳಲ್ಲಿ ಒಂದಾಗಿಸಿದೆ
ಗ್ರ್ಯಾಂಡ್ ವಿಟಾರಾ ಮಾರುತಿಯ ಪ್ರಸ್ತುತ ಫ್ಲ್ಯಾಗ್‌ಶಿಪ್‌ಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು ಈಗಾಗಲೇ 1.15 ಲಕ್ಷಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಸಂಚಯಿಸಿದೆ. ಮೈಲ್ಡ್- ಮತ್ತು ಸ್ಟ್ರಾಂಗ್ ಹೈಬ್ರಿಡ್ ಪವರ್‌ಟ್ರೈನ್‌ಗಳಲ್ಲಿ ಲಭ್ಯವಿರುವ ಈ ಕಾಂಪ್ಯಾಕ್ಟ್ ಎಸ್‌ಯುವಿ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದೆ. ಇದು ಈಗ ಮಾರುತಿಯ ಅತ್ಯಂತ ಜನಪ್ರಿಯ ಮಾಡೆಲ್‌ಗಳಲ್ಲಿ ಒಂದಾಗಿದ್ದು, ಎಷ್ಟೆಂದರೆ, ದೇಶದ ಕೆಲವು ಭಾಗಗಳಲ್ಲಿ ಇದರ ಕಾಯುವಿಕೆ ಅವಧಿಯು ಒಂಭತ್ತು ತಿಂಗಳ ತನಕ ಹೋಗಿದೆ.
ಇದನ್ನೂ ಓದಿ: ಮಾರುತಿ ಗ್ರ್ಯಾಂಡ್ ವಿಟಾರಾ ಬ್ಲ್ಯಾಕ್ 5 ಚಿತ್ರಗಳಲ್ಲಿ
ಜನವರಿ 2023 ರಂತೆ ಭಾರತದ 20 ಪ್ರಮುಖ ನಗರಗಳಲ್ಲಿ ಗ್ರ್ಯಾಂಡ್ ವಿಟಾರಾದ ಕಾಯುವ ಅವಧಿ ಇಲ್ಲಿದೆ:
ನಗರ |
ಕಾಯುವ ಅವಧಿ |
ನವದೆಹಲಿ |
2.5 ರಿಂದ 4 ತಿಂಗಳು |
ಬೆಂಗಳೂರು |
2 ತಿಂಗಳು |
ಮುಂಬಯಿ |
5.5 ರಿಂದ 6 ತಿಂಗಳು |
ಹೈದರಾಬಾದ್ |
ಕಾಯುವಿಕೆ ಇಲ್ಲ |
ಪುಣೆ |
5 ರಿಂದ 5.5 ತಿಂಗಳು |
ಚೆನ್ನೈ |
3 ರಿಂದ 4 ತಿಂಗಳು |
ಜೈಪುರ |
5 ರಿಂದ 5.5 ತಿಂಗಳು |
ಅಹಮದಾಬಾದ್ |
6 ತಿಂಗಳು |
ಗುರುಗ್ರಾಮ |
6.5 ರಿಂದ 7 ತಿಂಗಳು |
ಲಖನೌ |
5.5 ರಿಂದ 6 ತಿಂಗಳು |
ಕೋಲ್ಕತ್ತಾ |
3 ರಿಂದ 4 ತಿಂಗಳು |
ಥಾಣೆ |
5.5 ರಿಂದ 6 ತಿಂಗಳು |
ಸೂರತ್ |
6 ತಿಂಗಳು |
ಗಾಝಿಯಾಬಾದ್ |
5 ರಿಂದ 6 ತಿಂಗಳು |
ಚಂಡೀಗಢ |
6 ತಿಂಗಳು |
ಕೊಯಮತ್ತೂರು |
ಕಾಯುವಿಕೆ ಇಲ್ಲ |
ಪಾಟ್ನಾ |
5 ತಿಂಗಳು |
ಫರೀದಾಬಾದ್ |
6.5 ರಿಂದ 7 ತಿಂಗಳು |
ಇಂದೋರ್ |
5 ರಿಂದ 6 ತಿಂಗಳು |
ನೋಯ್ಡಾ |
8 ರಿಂದ 9 ತಿಂಗಳು |
ಟೇಕ್ ಅವೇಗಳು
-
ಹೈದರಾಬಾದ್ ಮತ್ತು ಕೊಯಮತ್ತೂರಿನಲ್ಲಿ ಕಾಯುವಿಕೆ ಅವಧಿ ಇಲ್ಲವಾದ್ದರಿಂದ, ಈ ಎರಡು ನಗರಗಳಲ್ಲಿ ನೀವು ಗ್ರ್ಯಾಂಡ್ ವಿಟಾರಾವನ್ನು ಕೂಡಲೇ ಮನೆಗೆ ತೆಗೆದುಕೊಂಡು ಹೋಗಬಹುದು.
-
ಬೆಂಗಳೂರಿನಲ್ಲಿ ಡೆಲಿವರಿ ತೆಗೆದುಕೊಂಡು ಹೋಗಲು ನೀವು ಎರಡು ತಿಂಗಳು ಕಾಯಬೇಕು; ಮತ್ತು ದೆಹಲಿ, ಕೋಲ್ಕತ್ತಾ ಹಾಗೂ ಚೆನ್ನೈಯಲ್ಲಿ ಕಾಯುವ ಸಮಯ ನಾಲ್ಕು ತಿಂಗಳವರೆಗೆ ಹೋಗಿದೆ.
-
ಪುಣೆ, ಪಾಟ್ನಾ ಮತ್ತು ಜೈಪುರದಲ್ಲಿ, ಮಾರುತಿ ಎಸ್‌ಯುವಿಯ ಕಾಯುವ ಅವಧಿಯು ಐದು ಮತ್ತು ಐದೂವರೆ ತಿಂಗಳ ನಡುವೆ ಆಗಿದೆ.
-
ಮುಂಬೈ, ಅಹಮದಾಬಾದ್, ಲಖನೌ, ಥಾಣೆ, ಸೂರತ್, ಗಾಝಿಯಾಬಾದ್, ಚಂಡೀಗಢ ಮತ್ತು ಇಂದೋರ್‌ನಲ್ಲಿ ಅದರ ಕಾಯುವ ಅವಧಿ ಆರು ತಿಂಗಳ ತನಕ ಹೋಗಬಹುದು.
- ಗುರುಗ್ರಾಮ ಮತ್ತು ಫರೀದಾಬಾದ್‌ನ ಖರೀದಿದಾರರಿಗೆ ಇದರ ಡೆಲಿವರಿ ಸಮಯವು ಏಳು ತಿಂಗಳ ತನಕ ಏರಿದೆ.
-
ಕೊನೆಯದಾಗಿ, ನೋಯ್ಡಾ ಅತ್ಯಂತ ಹೆಚ್ಚು ಕಾಯುವ ಸಮಯ ಹೊಂದಿದ್ದು, ಇಲ್ಲಿ ನಿಮ್ಮ ಗ್ರ್ಯಾಂಡ್ ವಿಟಾರಾ ಡೆಲಿವರಿ ಪಡೆಯಲು ನೀವು ಒಂಭತ್ತು ತಿಂಗಳ ತನಕ ಕಾಯಬೇಕಾಗಿದೆ.
-
ಮಾರುತಿ ಇತ್ತೀಚೆಗೆ ತನ್ನ ಮೊದಲ ಶ್ರೇಣಿಯಲ್ಲಿ ಗ್ರ್ಯಾಂಡ್ ವಿಟಾರಾದ ಸಿಎನ್ಜಿ ವೇರಿಯೆಂಟ್ ಅನ್ನು ಪರಿಚಯಿಸಿದ್ದು, ಇದೂ ಕೂಡಾ ಅತ್ಯಂತ ಹೆಚ್ಚು ಕಾಯುವ ಸಮಯವನ್ನು ಹೊಂದುವ ನಿರೀಕ್ಷೆಯಿದೆ.
ಇನ್ನಷ್ಚು ಓದಿ: ಮಾರುತಿ ಗ್ರ್ಯಾಂಡ್ ವಿಟಾರಾರದ ಆನ್ ರೋಡ್ ಬೆಲೆ
Write your Comment on Maruti ಗ್ರಾಂಡ್ ವಿಟರಾ
I am from Assam,Nagaon,I waited for 4 months .I have booked my grand vitara sigma variant on 30th or 31st of october till now i have not got my delivery.can anyone pls help me why it is taking solong