- + 27ಚಿತ್ರಗಳು
- + 10ಬಣ್ಣಗಳು
ರೆನಾಲ್ಟ್ ಕ್ವಿಡ್
change carರೆನಾಲ್ಟ್ ಕ್ವಿಡ್ ನ ಪ್ರಮುಖ ಸ್ಪೆಕ್ಸ್
ಇಂಜಿನ್ | 999 cc |
ಪವರ್ | 67.06 ಬಿಹೆಚ್ ಪಿ |
torque | 91 Nm |
ಟ್ರಾನ್ಸ್‌ಮಿಷನ್ | ಮ್ಯಾನುಯಲ್ / ಆಟೋಮ್ಯಾಟಿಕ್ |
mileage | 21.46 ಗೆ 22.3 ಕೆಎಂಪಿಎಲ್ |
ಫ್ಯುಯೆಲ್ | ಪೆಟ್ರೋಲ್ |
- ಕೀಲಿಕೈ ಇಲ್ಲದ ನಮೂದು
- central locking
- ಏರ್ ಕಂಡೀಷನರ್
- ಬ್ಲೂಟೂತ್ ಸಂಪರ್ಕ
- touchscreen
- ಪವರ್ ವಿಂಡೋಸ್
- ಹಿಂಭಾಗದ ಕ್ಯಾಮೆರಾ
- ಸ್ಟಿಯರಿಂಗ್ mounted controls
- lane change indicator
- android auto/apple carplay
- advanced internet ಫೆಅತುರ್ಸ್
- key ವಿಶೇಷಣಗಳು
- top ವೈಶಿಷ್ಟ್ಯಗಳು
ಕ್ವಿಡ್ ಇತ್ತೀಚಿನ ಅಪ್ಡೇಟ್
ರೆನಾಲ್ಟ್ ಕ್ಡಿಡ್ ಕುರಿತ ಇತ್ತೀಚಿನ ಅಪ್‌ಡೇಟ್ ಏನು?
ರೆನಾಲ್ಟ್ ತನ್ನ ಕ್ವಿಡ್ ಅನ್ನು ಈ ಹಬ್ಬದ ಸೀಸನ್‌ನಲ್ಲಿ 65,000 ರೂ.ವರೆಗಿನ ಪ್ರಯೋಜನಗಳೊಂದಿಗೆ ನೀಡುತ್ತಿದೆ. ಸಂಬಂಧಿತ ಸುದ್ದಿಯಲ್ಲಿ, ರೆನಾಲ್ಟ್ ಕ್ವಿಡ್‌ನ ನೈಟ್ ಮತ್ತು ಡೇ ಎಡಿಷನ್ ಅನ್ನು ಬಿಡುಗಡೆ ಮಾಡಿದೆ. ಇದು ಹ್ಯಾಚ್‌ಬ್ಯಾಕ್‌ನ ಲಿಮಿಟೆಡ್ ಎಡಿಷನ್ ಆಗಿದ್ದು, ಡ್ಯುಯಲ್-ಟೋನ್ ಬಾಡಿ ಬಣ್ಣ ಮತ್ತು ಸ್ಪೋರ್ಟಿಯರ್ ಲುಕ್‌ನೊಂದಿಗೆ ಬರುತ್ತದೆ.
ಇದರ ಬೆಲೆ ಎಷ್ಟು?
ಕ್ವಿಡ್‌ನ ಬೆಲೆಗಳು 4.70 ಲಕ್ಷ ರೂ.ನಿಂದ 6.45 ಲಕ್ಷ ರೂ.ವರೆಗೆ ಇರುತ್ತದೆ. ಎಎಮ್‌ಟಿ ವೇರಿಯೆಂಟ್‌ಗಳ ಬೆಲೆಗಳು 5.45 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ. ಈ ಹ್ಯಾಚ್ ಬ್ಯಾಕ್ ನ ನೈಟ್ ಅಂಡ್ ಡೇ ಎಡಿಷನ್‌ನ ಬೆಲೆ 5 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ (ಎಲ್ಲಾ ಬೆಲೆಗಳು ಎಕ್ಸ್ ಶೋ ರೂಂ ದೆಹಲಿ).
ರೆನಾಲ್ಟ್ ಕ್ಡಿಡ್‌ನಲ್ಲಿ ಎಷ್ಟು ವೇರಿಯೆಂಟ್‌ಗಳಿವೆ ?
ಕ್ವಿಡ್ RXE, RXL(O), RXT, ಮತ್ತು ಕ್ಲೈಂಬರ್ ಎಂಬ ನಾಲ್ಕು ವಿಶಾಲವಾದ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ನೈಟ್ ಅಂಡ್ ಡೇ ಎಡಿಷನ್ ಬೇಸ್ ಮೊಡೆಲ್‌ಗಿಂತ ಒಂದು ಮೇಲಿರುವ RXL(O) ವೇರಿಯೆಂಟ್ ಅನ್ನು ಆಧರಿಸಿದೆ.
ನೀಡುವ ಹಣಕ್ಕಿಂತ ಹೆಚ್ಚಿನ ಮೌಲ್ಯವನ್ನು ಹೊಂದಿರುವ ವೇರಿಯೆಂಟ್ ಯಾವುದು ?
ಕ್ವಿಡ್‌ನ ಎರಡನೇ-ಟಾಪ್ ಆರ್‌ಎಕ್ಸ್‌ಟಿ ವೇರಿಯೆಂಟ್ ಅನ್ನು ಅತ್ಯುತ್ತಮ ವೇರಿಯೆಂಟ್ ಎಂದು ಪರಿಗಣಿಸಬಹುದು. ಇದು 8-ಇಂಚಿನ ಟಚ್‌ಸ್ಕ್ರೀನ್, ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡಬಹುದಾದ ORVM ಗಳು, ಎಲ್ಲಾ ನಾಲ್ಕು ಪವರ್ ವಿಂಡೋಗಳು ಮತ್ತು ಡೇ/ನೈಟ್ IRVMನಂತಹ ಸೌಕರ್ಯಗಳೊಂದಿಗೆ ಬರುತ್ತದೆ. ಇದರ ಸುರಕ್ಷತಾ ಫೀಚರ್‌ಗಳು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮಾತ್ರವಲ್ಲದೆ ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾವನ್ನು ಒಳಗೊಂಡಿವೆ. ಕ್ವಿಡ್‌ನ ಆರ್‌ಎಕ್ಸ್‌ಟಿ ವೇರಿಯೆಂಟ್‌ನ ಬೆಲೆಗಳು 5.50 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋರೂಂ ದೆಹಲಿ) ಪ್ರಾರಂಭವಾಗುತ್ತದೆ.
ರೆನಾಲ್ಡ್ ಕ್ವಿಡ್ ಯಾವ ಫೀಚರ್‌ಗಳನ್ನು ಪಡೆಯುತ್ತದೆ?
ಕ್ವಿಡ್ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕೀಲೆಸ್ ಎಂಟ್ರಿ, ಬಟನ್‌ನಲ್ಲಿ ಅಡ್ಜಸ್ಟ್ ಮಾಡಬಹುದಾದ ORVM ಗಳು, ಎಲ್ಲಾ ನಾಲ್ಕು ಪವರ್ ವಿಂಡೋಗಳು ಮತ್ತು ಮ್ಯಾನ್ಯುವಲ್ ಎಸಿಯಂತಹ ಫೀಚರ್‌ಗಳೊಂದಿಗೆ ಲೋಡ್ ಆಗುತ್ತದೆ.
ಎಷ್ಟು ವಿಶಾಲವಾಗಿದೆ?
ನೀವು 6 ಅಡಿ ಎತ್ತರಕ್ಕಿಂತ ಕಡಿಮೆಯಿದ್ದರೆ (ಸುಮಾರು 5'8"), ಕ್ವಿಡ್‌ನ ಹಿಂಬದಿಯ ಸೀಟ್‌ನಲ್ಲಿ ಮೊಣಕಾಲು ಇಡುವಲ್ಲಿ ಮತ್ತು ಹೆಡ್‌ರೂಮ್‌ನಲ್ಲಿ ಉತ್ತಮ ಸ್ಥಳಾವಕಾಶವನ್ನು ಒದಗಿಸುತ್ತವೆ. ಆದರೆ, ನೀವು 6 ಅಡಿ ಅಥವಾ ಅದಕ್ಕಿಂತ ಹೆಚ್ಚು ಎತ್ತರದವರಾಗಿದ್ದರೆ, ಹಿಂದಿನ ಸೀಟಿನಲ್ಲಿ ಸ್ವಲ್ಪ ಇಕ್ಕಟ್ಟಾದ ಅನುಭವವಾಗಬಹುದು. ಅಲ್ಲದೆ, ಮೂರು ವಯಸ್ಕರಿಗೆ ಆರಾಮವಾಗಿ ಅವಕಾಶ ಕಲ್ಪಿಸಲು ಹಿಂದಿನ ಸೀಟಿನ ಅಗಲವು ಸಾಕಾಗುವುದಿಲ್ಲ.
ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳು ಲಭ್ಯವಿದೆ?
ಇದು 1-ಲೀಟರ್ ಪೆಟ್ರೋಲ್ ಎಂಜಿನ್ (68 ಪಿಎಸ್ /91 ಎನ್‌ಎಮ್) ನಿಂದ ಚಾಲಿತವಾಗಿದೆ, ಇದು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 5-ಸ್ಪೀಡ್ ಎಮ್‌ಟಿಯೊಂದಿಗೆ ಲಭ್ಯವಿದೆ.
ಎಷ್ಟು ಬಣ್ಣದ ಆಯ್ಕೆಗಳಿವೆ?
ಗ್ರಾಹಕರು ಕ್ವಿಡ್‌ಗಾಗಿ ಐದು ಮೊನೊಟೋನ್ ಮತ್ತು ಐದು ಡ್ಯುಯಲ್-ಟೋನ್ ಕಲರ್‌ನ ಆಯ್ಕೆಗಳನ್ನು ಪಡೆಯಬಹುದು, ಅವುಗಳೆಂದರೆ, ಐಸ್ ಕೂಲ್ ವೈಟ್, ಫಿಯರಿ ರೆಡ್, ಔಟ್‌ಬ್ಯಾಕ್ ಬ್ರೋಂಜ್, ಮೂನ್‌ಲೈಟ್ ಸಿಲ್ವರ್ ಮತ್ತು ಝನ್ಸ್‌ಕರ್ ಬ್ಲೂ. ಔಟ್‌ಬ್ಯಾಕ್ ಬ್ರೋಂಜ್‌ನ ಹೊರತಾಗಿ ಮೇಲಿನ ಬಣ್ಣಗಳ ಡ್ಯುಯಲ್-ಟೋನ್ ಕಲರ್‌ಗಳು ಬ್ಲ್ಯಾಕ್ ರೂಫ್‌ನೊಂದಿಗೆ ಬರುತ್ತವೆ. ಡ್ಯುಯಲ್-ಟೋನ್ ಬಣ್ಣದ ಪಟ್ಟಿಯಲ್ಲಿ ಮೆಟಲ್ ಮಸ್ಟರ್ಡ್ ಒಳಗೊಂಡಿದೆ.
ನೀವು ರೆನಾಲ್ಡ್ ಕ್ವಿಡ್‌ನ ಖರೀದಿಸಬೇಕೇ?
ರೆನಾಲ್ಟ್ ಕ್ವಿಡ್ ಪ್ರಸ್ತುತ ಭಾರತದಲ್ಲಿ ಲಭ್ಯವಿರುವ ಅತ್ಯಂತ ಕೈಗೆಟುಕುವ ಕಾರುಗಳಲ್ಲಿ ಒಂದಾಗಿದೆ. ಇದು ಎಸ್‌ಯುವಿ ತರಹದ ಶೈಲಿಯನ್ನು ಹೊಂದಿದೆ ಮತ್ತು ಸಣ್ಣ ಕುಟುಂಬಕ್ಕೆ ಉತ್ತಮ ಸ್ಥಳ ಮತ್ತು ಅರಾಮದಾಯಕ ಸೌಕರ್ಯಗಳನ್ನು ಒದಗಿಸುತ್ತದೆ. ಇದರ ಎಂಜಿನ್ ಫರ್ಪಾರ್ಮೆನ್ಸ್ ನಗರ ಮತ್ತು ಹೆದ್ದಾರಿ ಚಾಲನೆ ಎರಡಕ್ಕೂ ಉತ್ತಮವಾಗಿದೆ. ಉತ್ತಮ ಫೀಚರ್‌ಗಳು ಮತ್ತು ಸಾಕಷ್ಟು ಎಂಜಿನ್ ಪರ್ಫಾರ್ಮೆನ್ಸ್‌ನೊಂದಿಗೆ ನೀವು ಒರಟಾದ-ಕಾಣುವ ಸಣ್ಣ ಹ್ಯಾಚ್‌ಬ್ಯಾಕ್‌ಗಾಗಿ ಹುಡುಕುತ್ತಿದ್ದರೆ, ಕ್ವಿಡ್ ಪರಿಗಣಿಸಲು ಯೋಗ್ಯವಾಗಿದೆ.
ನನ್ನ ಪರ್ಯಾಯಗಳು ಯಾವುವು?
ರೆನಾಲ್ಟ್ ಕ್ವಿಡ್ ಮಾರುತಿ ಆಲ್ಟೊ ಕೆ 10 ಮತ್ತು ಮಾರುತಿ ಸುಜುಕಿ ಎಸ್-ಪ್ರೆಸ್ಸೊದೊಂದಿಗೆ ಸ್ಪರ್ಧಿಸುತ್ತದೆ, ಕ್ಲೈಂಬರ್ ವೇರಿಯೆಂಟ್ ಟಾಟಾ ಪಂಚ್ ಮತ್ತು ಹ್ಯುಂಡೈ ಎಕ್ಸ್‌ಟರ್ ಮೈಕ್ರೋ ಎಸ್‌ಯುವಿಗಳ ಲೋವರ್-ಸ್ಪೆಕ್ ವೇರಿಯೆಂಟ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ.
ಕ್ವಿಡ್ 1.0 ಆರ್ಎಕ್ಸ್ಇ(ಬೇಸ್ ಮಾಡೆಲ್)999 cc, ಮ್ಯಾನುಯಲ್, ಪೆಟ್ರೋಲ್, 21.46 ಕೆಎಂಪಿಎಲ್ | Rs.4.70 ಲಕ್ಷ* | ||
ಕ್ವಿಡ್ ಆರ್ಎಕ್ಸ್ಎಲ್ opt night ಮತ್ತು day ಎಡಿಷನ್999 cc, ಮ್ಯಾನುಯಲ್, ಪೆಟ್ರೋಲ್, 21.46 ಕೆಎಂಪಿಎಲ್ | Rs.5 ಲಕ್ಷ* | ||
ಕ್ವಿಡ್ 1.0 ಆರ್‌ಎಕ್ಸ್‌ಎಲ್ ಒಪ್ಶನಲ್999 cc, ಮ್ಯಾನುಯಲ್, ಪೆಟ್ರೋಲ್, 21.46 ಕೆಎಂಪಿಎಲ್ | Rs.5 ಲಕ್ಷ* | ||
ಕ್ವಿಡ್ 1.0 ಆರ್ಎಕ್ಸ್ಎಲ್ opt ಎಎಂಟಿ999 cc, ಆಟೋಮ್ಯಾಟಿಕ್, ಪೆಟ್ರೋಲ್, 21.46 ಕೆಎಂಪಿಎಲ್ | Rs.5.45 ಲಕ್ಷ* | ||
ಕ್ವಿಡ್ 1.0 ಆರ್ಎಕ್ಸ್ಟಿ ಅಗ್ರ ಮಾರಾಟ 999 cc, ಮ್ಯಾನುಯಲ್, ಪೆಟ್ರೋಲ್, 21.46 ಕೆಎಂಪಿಎಲ್ | Rs.5.50 ಲಕ್ಷ* | ||