ಉಳಿತಾಯದ ತಿಂಗಳು! ಈ ಜುಲೈನಲ್ಲಿ Renault ಕಾರುಗಳ ಮೇಲೆ ರೂ 48,000 ವರೆಗೆ ರಿಯಾಯಿತಿ ಪಡೆಯಿರಿ!
ರೆನಾಲ್ಟ್ ಕ್ವಿಡ್ ಗಾಗಿ shreyash ಮೂಲಕ ಜುಲೈ 09, 2024 08:24 pm ರಂದು ಪ್ರಕಟಿಸಲಾಗಿದೆ
- 53 Views
- ಕಾಮೆಂಟ್ ಅನ್ನು ಬರೆಯಿರಿ
ರೆನಾಲ್ಟ್ ತನ್ನ ಎಲ್ಲಾ ಕಾರುಗಳ ಮೇಲೆ ರೂ 4,000 ರ ಆಪ್ಷನಲ್ ಗ್ರಾಮೀಣ ರಿಯಾಯಿತಿಯನ್ನು ನೀಡುತ್ತಿದೆ, ಆದರೆ ಇದನ್ನು ಕಾರ್ಪೊರೇಟ್ ರಿಯಾಯಿತಿಯೊಂದಿಗೆ ಕಂಬೈನ್ ಮಾಡಲು ಸಾಧ್ಯವಿಲ್ಲ
-
ಎಲ್ಲಾ ಮೂರು ರೆನಾಲ್ಟ್ ಕಾರುಗಳು ಒಂದೇ ರೀತಿಯ ಪ್ರಯೋಜನಗಳನ್ನು ನೀಡುತ್ತವೆ.
-
ಈ ಕೊಡುಗೆಗಳಲ್ಲಿ ನಗದು ರಿಯಾಯಿತಿ, ವಿನಿಮಯ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯಿತಿಗಳು ಸೇರಿವೆ.
-
ಎಲ್ಲಾ ಕೊಡುಗೆಗಳು ಜುಲೈ ತಿಂಗಳ ಅಂತ್ಯದವರೆಗೆ ಮಾನ್ಯವಾಗಿರುತ್ತವೆ.
ಈ ಜುಲೈ ತಿಂಗಳಲ್ಲಿ ನೀವು ರೆನಾಲ್ಟ್ ಕಾರನ್ನು ಖರೀದಿಸಲು ನೋಡುತ್ತಿದ್ದರೆ, ನೀವು ಎಲ್ಲಾ ಮೂರು ಮಾಡೆಲ್ ಗಳಾದ ರೆನಾಲ್ಟ್ ಕ್ವಿಡ್, ರೆನಾಲ್ಟ್ ಕಿಗರ್ ಮತ್ತು ರೆನಾಲ್ಟ್ ಟ್ರೈಬರ್ ನಲ್ಲಿ ಹಣ ಉಳಿಸಬಹುದು. ಸಿಗುವ ಪ್ರಯೋಜನಗಳಲ್ಲಿ ನಗದು ರಿಯಾಯಿತಿ, ವಿನಿಮಯ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯಿತಿಗಳು ಸೇರಿವೆ. ಬನ್ನಿ, ಮಾಡೆಲ್-ವಾರು ಆಫರ್ ವಿವರಗಳನ್ನು ನೋಡೋಣ.
ರೆನಾಲ್ಟ್ ಕ್ವಿಡ್
ಕೊಡುಗೆಗಳು |
ಮೊತ್ತ |
ನಗದು ರಿಯಾಯಿತಿ |
ರೂ. 15,000 ವರೆಗೆ |
ವಿನಿಮಯ ಬೋನಸ್ |
ರೂ. 15,000 ವರೆಗೆ |
ಲಾಯಲ್ಟಿ ಬೋನಸ್ |
ರೂ. 10,000 ವರೆಗೆ |
ಕಾರ್ಪೊರೇಟ್ ರಿಯಾಯಿತಿ |
ರೂ. 8,000 ವರೆಗೆ |
ಗರಿಷ್ಠ ಪ್ರಯೋಜನಗಳು |
ರೂ. 48,000 ವರೆಗೆ |
-
ಬೇಸ್ RXE ಮಾಡೆಲ್ ಅನ್ನು ಹೊರತುಪಡಿಸಿ ಕ್ವಿಡ್‌ನ ಎಲ್ಲಾ ವರ್ಷನ್ ಗಳ ಮೇಲೆ ತಿಳಿಸಿರುವ ರಿಯಾಯಿತಿಗಳು ಅನ್ವಯಿಸುತ್ತವೆ.
-
ಬೇಸ್-ಸ್ಪೆಕ್ RXE ವೇರಿಯಂಟ್ ನೊಂದಿಗೆ ರೂ 10,000 ಲಾಯಲ್ಟಿ ಬೋನಸ್ ಅನ್ನು ಮಾತ್ರ ಪಡೆಯಬಹುದು.
-
ರೆನಾಲ್ಟ್ ಕ್ವಿಡ್ ಬೆಲೆಯು ರೂ 4.70 ಲಕ್ಷದಿಂದ ರೂ 6.45 ಲಕ್ಷದ ನಡುವೆ ಇದೆ.
ರೆನಾಲ್ಟ್ ಟ್ರೈಬರ್
ಕೊಡುಗೆಗಳು |
ಮೊತ್ತ |
ನಗದು ರಿಯಾಯಿತಿ |
ರೂ. 15,000 ವರೆಗೆ |
ವಿನಿಮಯ ಬೋನಸ್ |
ರೂ. 15,000 ವರೆಗೆ |
ಲಾಯಲ್ಟಿ ಬೋನಸ್ |
ರೂ. 10,000 ವರೆಗೆ |
ಕಾರ್ಪೊರೇಟ್ ರಿಯಾಯಿತಿ |
ರೂ. 8,000 ವರೆಗೆ |
ಗರಿಷ್ಠ ಪ್ರಯೋಜನಗಳು |
ರೂ. 48,000 ವರೆಗೆ |
-
ಮೇಲೆ ತಿಳಿಸಲಾದ ಪ್ರಯೋಜನಗಳು ಅದರ ಬೇಸ್ RXE ಮಾಡೆಲ್ ಅನ್ನು ಹೊರತುಪಡಿಸಿ, ಟ್ರೈಬರ್ ಸಬ್-4m ಕ್ರಾಸ್ಒವರ್ MPV ಯ ಎಲ್ಲಾ ವರ್ಷನ್ ಗಳಿಗೆ ಅನ್ವಯಿಸುತ್ತದೆ.
-
ಬೇಸ್-ಸ್ಪೆಕ್ RXE ವೇರಿಯಂಟ್ ಗಾಗಿ, ಲಾಯಲ್ಟಿ ಬೋನಸ್ ಮಾತ್ರ ಅನ್ವಯಿಸುತ್ತದೆ.
-
ರೆನಾಲ್ಟ್ ಟ್ರೈಬರ್ ಬೆಲೆಯು ರೂ. 6 ಲಕ್ಷ ಮತ್ತು ರೂ. 8.97 ಲಕ್ಷದ ನಡುವೆ ಇದೆ
ಇದನ್ನು ಕೂಡ ಓದಿ: ಜೂನ್ 2024 ರ ಟಾಪ್ ಬೇಡಿಕೆಯ ಕಾರ್ ಬ್ರ್ಯಾಂಡ್‌ಗಳು ಇಲ್ಲಿವೆ
ರೆನಾಲ್ಟ್ ಕೈಗರ್
ಕೊಡುಗೆಗಳು |
ಮೊತ್ತ |
ನಗದು ರಿಯಾಯಿತಿ |
ರೂ. 15,000 ವರೆಗೆ |
ವಿನಿಮಯ ಬೋನಸ್ |
ರೂ. 15,000 ವರೆಗೆ |
ಲಾಯಲ್ಟಿ ಬೋನಸ್ |
ರೂ. 10,000 ವರೆಗೆ |
ಕಾರ್ಪೊರೇಟ್ ರಿಯಾಯಿತಿ |
ರೂ. 8,000 ವರೆಗೆ |
ಗರಿಷ್ಠ ಪ್ರಯೋಜನಗಳು |
ರೂ. 48,000 ವರೆಗೆ |
-
ಕ್ವಿಡ್ ಮತ್ತು ಟ್ರೈಬರ್‌ಗಳಂತೆಯೇ ಕಿಗರ್ ಕೂಡ ಅದೇ ಪ್ರಯೋಜನಗಳನ್ನು ಪಡೆಯುತ್ತದೆ. ಆದರೆ, ಕಿಗರ್‌ನ ಬೇಸ್-ಸ್ಪೆಕ್ RXE ವೇರಿಯಂಟ್ ನೊಂದಿಗೆ ಈ ರಿಯಾಯಿತಿಗಳು ಲಭ್ಯವಿಲ್ಲ.
-
RXE ವೇರಿಯಂಟ್ ಕೇವಲ ರೂ. 10,000 ಗಳ ಲಾಯಲ್ಟಿ ಬೋನಸ್ ಅನ್ನು ಮಾತ್ರ ನೀಡುತ್ತಿದೆ.
-
ರೆನಾಲ್ಟ್ ಕಿಗರ್ ಬೆಲೆಯು ರೂ. 6 ಲಕ್ಷದಿಂದ ರೂ.11.23 ಲಕ್ಷದ ನಡುವೆ ಇದೆ.
ಗಮನಿಸಿ
-
ರೆನಾಲ್ಟ್ ಎಲ್ಲಾ ಕಾರುಗಳ ಮೇಲೆ ರೂ 4,000 ರ ಆಪ್ಷನಲ್ ಗ್ರಾಮೀಣ ರಿಯಾಯಿತಿಯನ್ನು ನೀಡುತ್ತಿದೆ.
-
ನಿಮ್ಮ ರಾಜ್ಯ ಮತ್ತು ನಗರವನ್ನು ಆಧರಿಸಿ ತಿಳಿಸಲಾದ ರಿಯಾಯಿತಿಗಳು ಬದಲಾಗಬಹುದು. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಿಮ್ಮ ಹತ್ತಿರದ ರೆನಾಲ್ಟ್ ಡೀಲರ್‌ಶಿಪ್ ಅನ್ನು ಸಂಪರ್ಕಿಸಿ.
-
ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ಬೆಲೆಯಾಗಿದೆ.
ನಿರಂತರ ಅಪ್ಡೇಟ್ ಗಳಿಗಾಗಿ ಕಾರ್ದೇಖೋ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ
ಇನ್ನಷ್ಟು ಓದಿ: ರೆನಾಲ್ಟ್ ಕ್ವಿಡ್ AMT