• English
  • Login / Register

ಹೋಂಡಾ WR-V: ಮೊದಲ ಡ್ರೈವ್ ವಿಮರ್ಶೆ

Published On ಮೇ 14, 2019 By tushar for ಹೋಂಡಾ ಡವೋಆರ್‌-ವಿ 2017-2020

ಹೋಂಡಾ ಜಾಜ್ ನ ಪ್ರಾಯೋಗಿಕತೆ ಮತ್ತು BR-V ಯ ಡಿಸೈನ್ ಅನ್ನು ಒಟ್ಟುಗೂಡಿಸಿದೆ. ಇದು ಒಂದು ನೀವು ಕೊಳ್ಳಬಹುದಾದ  ಕಾಕ್ಟೈಲ್ ಹೌದ?

Honda WRV

ಹೋಂಡಾ WR-V ಯ ಚಾಲನೆ ನೋಡಿ

ವಿಭಿನ್ನವಾಗಿದೆ- ಈ ಪದ ನಿಮಗೆ WR-V ಯನ್ನು ನೋಡಿದಾಗ ಬರುವ ಮೊದಲ ಮಾತು. ಹೋಂಡಾ ತನ್ನ ಸಬ್ 4 metre ಕ್ರಾಸ್ಒವರ್ ಅನ್ನು ಬಿಡುಗಡೆ ಮಾಡಲು ಬಹಳ ಸಮಯ ತೆಗೆದುಕೊಂಡಿತು. ಆದರೆ ನಮಗೆ ತಿಳಿದು ಬಂದಿತು, ಇದು ಜಾಜ್ ನ  ನೂತನ ಶೈಲಿಯ ವಸ್ತುಗಳನ್ನು ಒಳಗೊಂಡ  ಅವತರಣಿಕೆ ಮಾತ್ರ ಅಲ್ಲ ಎಂದು. WR-V ಗೆ ಅದರದೇ ಆಡವೈಶಿಷ್ಟ್ಯತೆ ಇದೆ. ಅಷ್ಟು ಮಾತ್ರ ಸಾಕೆ ನಿಮಗೆ ಇದನ್ನು ಜಾಜ್ ಬದಲಿಗೆ ಕೊಳ್ಳಲು ಅಥವಾ ಅದರ ಪ್ರತಿಸ್ಪರ್ದಿಗಳಿಗೆ ವಿರುದ್ಧವಾಗಿ ನಿಲ್ಲಲು ಸಾಧ್ಯವಿದೆಯೇ?

ಡಿಸೈನ್

Honda WRV

ಬುಚ್ ವಿನ್ಯಾಸ ಮತ್ತು ಹೋಂಡಾ- ಈ ಎರೆಡು ಪದಗಳನ್ನು ಸಾಮಾನ್ಯವಾಗಿ ಒಂದೇಬಾರಿ ಉಪಯೋಗಿಸುವುದಿಲ್ಲ., ಆದರೆ WR-V ನೋಡಲು ಬಹಳಷ್ಟು ಒರಟಾಗಿ ಕಾಣಿಸುತ್ತದೆ. ಜಾಜ್ ನ ವೇದಿಕೆಮೇಲೆ ಮಾಡಲ್ಪಟ್ಟಿದ್ದರೂ ಸಹ. ಅದಕ್ಕೆ ವ್ಯಾಪಕ ಡಿಸೈನ್ ಬದಲಾವಣೆಗಳು ಕಾರಣವಾಗುತ್ತದೆ. WRV ಗೆ ದೊಡ್ಡ ಮಟ್ಟದ ನಿಲುವು ಇದೆ ಹ್ಯಾಚ್ ವೇದಿಕೆಯ ಕ್ರಾಸ್ಒವರ್ ಆಗಿ. ನಯಗೊಳಿಸಿದ ಹೆಡ್ ಲೈಟ್ ಗಳನ್ನು ತೆಗೆಯಲಾಗಿದೆ ಮತ್ತು ಚುರುಕಾದ ಹೊಸ ಹೆಡ್ ಲ್ಯಾಂಪ್ ಸೆಟ್ ಅನ್ನು ಕ್ರೆಸೆಂಟ್ ಮೂನ್ ಶೈಲಿಯ ಡೇ ಟೈಮ್ LED ರನ್ನಿಂಗ್ ಲೈಟ್ ಗಳನ್ನೂ ಸಹ ಕೊಡಲಾಗಿದೆ.

Honda WRV

ಖಂಡಿತವಾಗಿ, ಕಪ್ಪು ಬಣ್ಣದ ಕ್ಲಾಡ್ಡಿಂಗ್ ಸುತ್ತಲೂ ಇದೆ, ಮತ್ತು ಪ್ಲಾಸ್ಟಿಕ್ ಸಿಲ್ವರ್ ಸ್ಕಿಡ್ ಪ್ಲೇಟ್ ಸಹ, ಆದರೆ ಇದರ ಕ್ವಾಲಿಟಿ ಸಾದಾರಣವಾಗಿ ಕಾಣುತ್ತದೆ. ಬದಿಗಳಲ್ಲಿ ಡೋರ್ ಪ್ಯಾನೆಲ್ ಗಳು ಮತ್ತು ಕ್ಯಾರೆಕ್ಟರ್ ಲೈನ್ ಗಳು ನಿಮಗೆ ಜಾಜ್ ನೆನಪಿಸುತ್ತದೆ, ಆದರೆ ಇದರಲ್ಲಿ ರಸ್ತೆಯಲ್ಲಿನ ನಿಲುವಿನ ಗುಣಮಟ್ಟ ಹೆಚ್ಚಿದೆ. ವಾಸ್ತವದಲ್ಲಿ, WR-V 44mm ಹೆಚ್ಚು ಉದ್ದ 57mm ಹೆಚ್ಚು ಅಗಲವಿದೆ, ಜಾಜ್ ಗೆ ಹೋಲಿಸಿದರೆ. ಇದು 40mm ಹೆಚ್ಚು ಅಗಲವಿದೆ ಸಹ, ಮತ್ತು ವೀಲ್ ಬೇಸ್ ಸಹ 25mm ಹೆಚ್ಚಿದೆ.

Honda WRV

WR-V  ಎಲ್ಲಾ ವಿಷಯಗಳು ದೊಡ್ಡದಿದ್ದರೆ ಚೆನ್ನಾಗಿರುತ್ತದೆ (ದೊಡ್ಡದು ಉತ್ತ್ತಮ )ನಿಯಮವನ್ನು ಪಾಲಿಸುತ್ತದೆ. ಹಾಗಾಗಿ ವೀಲ್ ಗಳು ಸಹ ದೊಡ್ಡದಾಗಿದೆ, 16-inch ನ ಸೆಟ್ 195/60-ಸೆಕ್ಷನ್ ಟೈಯರ್ ಜೊತೆಗೆ ಬರುತ್ತದೆ. ಹೌದು, ಗ್ರೌಂಡ್ ಕ್ಲಿಯರೆನ್ಸ್ ಅನ್ನು ಸಹ 188mm ( ಜಾಜ್ ಗಿಂತ 23mm  ಹೆಚ್ಚು) ಗೆ ಹೆಚ್ಚಿಸಲಾಗಿದೆ. ಇದು ಸೆಗ್ಮೆಂಟ್ ಲೀಡಿಂಗ್ ಅಲ್ಲ, ಆದರೆ ನಮ್ಮ ರಸ್ತೆಗಳಿಗೆ ಹೊಂದುಕೊಳ್ಳುತ್ತದೆ, ಎಲ್ಲ ಸೀಟ್ ಗಳಲ್ಲಿ ಪ್ಯಾಸೆಂಜರ್ ಗಳು ಇದ್ದಾಗಲೂ ಸಹ.

Honda WRV

ಬೂಮ್ರಂಗ್ ಶೈಲಿಯ ಟೈಲ್ ಲೈಟ್ ಗಳು, ಟೈಲ್ ಗೇಟ್ ಒಳಗೆ ಸರಿಯಾಗಿ ಕೂರುತ್ತದೆ. ಮತ್ತು ಕೆಳಮಟ್ಟದಲ್ಲಿ ಇರಿಸಲಾಗಿರುವ ನಂಬರ್ ಪ್ಲೇಟ್ ಮತ್ತು ಕ್ರೋಮ್ ಅಪ್ಪ್ಲಿಕ್ ಅದರಮೇಲೆ ಇರಿಸಲಾಗಿದ್ದು ಅದು ನಿಮಗೆ ಹುಂಡೈ ಕ್ರೆಟಾ ವನ್ನು ಜ್ಞಾಪಿಸುತ್ತದೆ. ಒಪ್ಪಿಕೊಳ್ಳಬಹುದಾದ ವಿಷಯವೆಂದರೆ ಸ್ಟೈಲಿಂಗ್ ಸ್ವಲ್ಪ ಹೆಚ್ಚಾಗಿದೆ, ಆದರೆ WR-V ನೋಡಲು SUV ತರಹ ಕಾಣುವುದರಲ್ಲಿ ಯಶಸ್ವಿಯಾಗಿದೆ. ಹಾಗಂತ ಇದನ್ನು ಆಫ್ ರೋಡ್ ಡ್ರೈವಿಂಗ್ ಗೆ ತೆಗೆದುಕೊಂಡುಹೋಗುವಹಾಗಿಲ್ಲ.

Honda WRV

ಟ್ರಿವಿಯಾ: ಬ್ರೆಝಿಲಿಯನ್ WR-V  ನಾವು ಪಡೆಯುವದಕ್ಕಿಂತ ವಿಭಿನ್ನವಾಗಿಲ್ಲ. ಆದರೆ ಅದರ ಗ್ರೌಂಡ್ ಕ್ಲಿಯರೆನ್ಸ್ 200mm ಇದೆ. ಏಕೆಂದರೆ ಬ್ರೆಜಿಲ್ ನಲ್ಲಿ ವಿಭಿನ್ನವಾದ ಅಳತೆಗೋಲು ಉಪಯೋಗಿಸುತ್ತಾರೆ ಮತ್ತು ಅಲ್ಲಿ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಕಾರ್ ನ ಮಧ್ಯಬಾಗದಲ್ಲಿ ಅಳೆಯುತ್ತಾರೆ, ಕನಿಷ್ಠ  ಕ್ಲಿಯರೆನ್ಸ್ ಅಲ್ಲ.

Honda WRV

ಅಂತರಿಕಗಳು

Honda WRV Interior

ಹೊರಗಿನ ಶೈಲಿಯಂತೆ ಅಂತರಿಕಗಳೂ ಸಹ ವಿಭಿನ್ನವಾಗಿದೆ, ಕ್ಯಾಬಿನ್ ಪರಿಚಿತವಾಗಿದೆ. ಈ WR-V ಯಲ್ಲಿ ಜಾಜ್ ತರಹದ ಚಮತ್ಕಾರಿ ಡ್ಯಾಶ್ ಬೋರ್ಡ್ ಇದೆ, ಆದರೆ ಇನ್ಫೋಟೈನ್ಮೆಂಟ್ ಸಿಸ್ಟಮ್ ಹೋಂಡಾ ಸಿಟಿ ಫೇಸ್ ಲಿಫ್ಟ್ ನಿಂದ ಅಳವಡಿಸಲಾಗಿದೆ  (ಇನ್ಫೋಟೈನ್ಮೆಂಟ್ಸಿಸ್ಟಮ್ ಬಗ್ಗೆ ಹೆಚ್ಚು ತಿಳಿಯಲು : 2017 ಹೋಂಡಾ ಸಿಟಿ ವಿಮರ್ಶೆ).  ಸ್ಟಿಯರಿಂಗ್ ಸಹ ರಾಕೇ ಮತ್ತು ರೀಚ್ ಸಹ ಸರಿಹೊಂದಿಸಬಹುದಾಗಿದೆ. (40mm ಅಷ್ಟು ಜರುಗಿಸಬಹುದು ಎರೆಡಕ್ಕೂ).

Honda WRV

ಇದರಲ್ಲಿ ಸಿರೂಇಸೆ ಕಂಟ್ರೋಲ್ ಮತ್ತು ಪುಶ್ ಬಟನ್ ಸ್ಟಾರ್ಟರ್ ಸಹ ಇದೆ, ಆದರೆ ನೀವು ಡೀಸೆಲ್ ಆಯ್ಕೆ ಮಾಡಿದರೆ ಮಾತ್ರ. ಕೊಳ್ಳುವವರಿಗೆ ಉತ್ಸಾಹ ತುಂಬುವ ವಿಷಯವೆಂದರೆ ಇದರಲ್ಲಿ ಬರುವ ಸನ್ ರೂಫ್, ಮತ್ತು ಇದು ಸಿಟಿ ಯಲ್ಲಿನಂತೆ  ಒನ್ ಟಚ್ ಆಪರೇಷನ್ ಹೊಂದಿದೆ. ಮತ್ತು ಇದರಲ್ಲಿ ಕೆಲವು ಅನನ್ಯ ವಾದ ವಿಷಯಗಳು ಇವೆ ಅದೆಂದರೆ ಚಿಕ್ಕ ಗೇರ್ ಲೀವರ್ , ಉಪಯೋಗಿಸಲು ಸುಲಭವಾಗಿದೆ.

Honda WRV

ಹುಂಡೈ i20 ಆಕ್ಟಿವ್ ನಂತೆ ಇದರಲ್ಲಿ ಎರೆಡು ಬಗೆಯ ಆಂತರಿಕ ಬಣ್ಣಗಳ ಆಯ್ಕೆ ಇದೆ- ಕಪ್ಪು ಹಾಗು ಬ್ಲ್ಯೂಇಶ್ ಗ್ರೇ  ಮತ್ತು ಕಪ್ಪು ಮತ್ತು ಸಿಲ್ವರ್. ಆದರೂ ಬಣ್ಣಗಳ ಭಿನ್ನತೆ ಕೇವಲ ಸೀಟ್ ಮತ್ತು ಡೋರ್ ಪ್ಯಾಡ್ ಮೇಲ್ಪದರಗಳಿಗೆ ಮಾತ್ರ ಅನ್ವಯಿಸುತ್ತದೆ.

Honda WRV

ನಾವು ಜಾಜ್ ನಲ್ಲಿ ನೋಡಿದಂತೆ ಕ್ಯಾಬಿನ್ ಸ್ಪೇಸ್ ದಾರಾಳವಾಗಿದೆ ಮತ್ತು ಒಟ್ಟು ಕುಟುಂಬದ ಜೊತೆ ಟ್ರಿಪ್ ಗೆ ಹೋಗಲು ಯಾವುದೇ ಆತಂಕವಿರುವುದಿಲ್ಲ. ಅದರಲ್ಲೂ ನಿಮಗೆ ಹೆಚ್ಚು ಬಾಟಲ್ ಹೋಲ್ಡರ್ ಗಳು, ಎರೆಡು ಹಿಂಬದಿ ಸೀಟ್ ಬ್ಯಾಕ್ ಪಾಕೆಟ್ ಗಳು 363-litre ಬೂಟ್ ( ಜಾಜ್ = 354-litre) ಕೊಡಲಾಗಿದೆ. ಆದರೆ ದೇವರು ಕೊಡುತ್ತಾನೆ ಹಾಗು ತೆಗೆದುಕೊಳ್ಳುತ್ತಾನೆ ಕೂಡ

Honda WRV

ಹೋಂಡಾ ಕೆಲವು ಒಳ್ಳೆ ಫೀಚರ್ ಗಳನ್ನು ಕೊಟ್ಟಿದ್ದರೂ, ಸೆಂಟ್ರಲ್ ಆರ್ಮ್ ರೆಸ್ಟ್ ಸ್ಟೋರೇಜ್ ಜೊತೆಗೆ ಸೇರಿಸಿ, ಜಾಜ್ ನ ಮ್ಯಾಜಿಕ್ ಸೀಟ್ ಗಳು ಮಿಸ್ ಆಗಿವೆ, ಹಾಗು 60:40 ಸ್ಪ್ಲಿಟ್ ಸೀಟ್ ಸಹ ಇಲ್ಲ. ನಿಮಗೆ ಸರಿಹೊಂದಿಸಬಹುದಾದ ಹಿಂಬದಿ ಹೆಡ್ ರೆಸ್ಟ್ ಸಹ ಇಲ್ಲ, ಅದರಲ್ಲೂ ರೂ  10 ಲಕ್ಷ  ಹೆಚ್ಚು ಆನ್ ರೋಡ್ ಬೆಲೆಬಾಳುವ ಕಾರ್ ನಲ್ಲಿ !

ಹೆಚ್ಚುವರಿಯಾಗಿ,  ಒಟ್ಟಾರೆ ಫಿಟ್ ಮತ್ತು ಫಿನಿಷ್ ಗುಣಮಟ್ಟ ಇನ್ನು ಚೆನ್ನಾಗಿರಬಹುದಿತ್ತು, ಅದರಲ್ಲೂ ನೀವು WR-V ಯು ಜಾಜ್ ಗಿಂತಲೂ ಹೆಚ್ಚು ಬೆಲೆ ಹೊಂದಿದೆ ಎಂದು ತಿಳಿದಾಗ. ಮತ್ತೊಂದು ಅನಾನುಕೂಲತೆ ಎಂದರೆ ವಿಟಾರಾ ಬ್ರೆಝ ಗೆ ವ್ಯತಿರಿಕ್ತವಾಗಿ ನಿಮಗೆ ಕಮಾಂಡಿಂಗ್ ಆಗಿರುವ ಡ್ರೈವಿಂಗ್ ಸ್ಥಾನ ದೊರೆಯುವುದಿಲ್ಲ, ಇದ್ದಿದ್ದರೆ ಅದು  SUV ಯಾ ಅನುಭವಕ್ಕೆ ಪೂರಕವಾಗಿರುತ್ತಿತ್ತು.

Image result for Honda Jazz magic seats cardekho

ಎಂಜಿನ್ ಹಾಗು ಕಾರ್ಯದಕ್ಷತೆ

Honda WRV

WR-V ನಲ್ಲಿ ಜಾಜ್ ನಂತೆಯೇ ಪವರ್ ಟ್ರೈನ್ ಆಯ್ಕೆ ಇದೆ, CVT  ಆಯ್ಕೆ ಹೊರತುಪಡಿಸಿ, ಈ ಆಯ್ಕೆ  ಜಾಜ್ ನಲ್ಲಿ ಕೊಡಲಾಗಿತ್ತು, ಹಾಗು  1.2  ಪೆಟ್ರೋಲ್ ಹೊಸ ಐದು ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್  ಪಡೆಯುತ್ತದೆ ಸಹ. ಹೋಂಡಾ ಹೇಳುವಂತೆ ಟ್ರಾನ್ಸ್ಮಿಷನ್ BR-V ನಲ್ಲಿ ಇರುವ ಟ್ರಾನ್ಸ್ಮಿಷನ್ ವೇದಿಕೆ ಮೇಲೆ ಮಾಡಲಾಗಿದೆ ಮತ್ತು ವೇಗಗತಿ ಹೆಚ್ಚು ಮಾಡಲು ಅನುಕೂಲವಾಗಿದೆ. ಆದರೆ ನಮ್ಮWR-V.  ಡ್ರೈವ್ ನಲ್ಲಿ ಅಸ್ಟೇನು ಅಗ್ರಾಹ್ಯ ಅನುಭವ ಆಗಲಿಲ್ಲ.

ವಾಸ್ತವದಲ್ಲಿ 90PS ಪೆಟ್ರೋಲ್ ಸ್ವಲ್ಪ ಎಳೆಯುವಂತೆ ಕಾಣುತ್ತದೆ. ನೀವು ಒಬ್ಬರೇ ಡ್ರೈವ್ ಮಾಡುತ್ತಿದ್ದರೆ, ಮೋಟಾರ್ ಚೆನ್ನಾಗಿ ಕೆಲಸ ಮಾಡುತ್ತದೆ, ಆದರೆ ಎಲ್ಲ ಸೀಟ್ ಗಳಲ್ಲಿ ಪ್ಯಾಸೆಂಜರ್ ಗಳು ಇದ್ದಾರೆ ನೀವು ಎಂಜಿನ್ rpm ಹೆಚ್ಚಿಸಬೇಕಾಗುತ್ತದೆ ಹಾಗು ಬಹಳಷ್ಟು ಬರಿ ಗೇರ್ ಬದಲಾಯಿಸಬೇಕಾಗುತ್ತದೆ. ಉತ್ತಮ ವಿಷಯವೆಂದರೆ ಎಂಜಿನ್ ನಯವಾಗಿದೆ ಹಾಗು ಶಬ್ದವೂ ಸಹ ಉತ್ತಮವಾಗಿದೆ. ಇದರಲ್ಲಿರುವ 110Nm ಟಾರ್ಕ್5,000rpm ನಲ್ಲಿ  ಪಡೆಯಬಹುದು, ಹಾಗಾಗಿ ಇಳಿಜಾರುಗಳಲ್ಲಿ ಹತ್ತಲು ಸ್ವಲ್ಪ ಕಷ್ಟಪಡಬೇಕಾಗಬಹುದು ಮತ್ತು ಬೆಟ್ಟಗಳಲ್ಲಿ  ಡ್ರೈವಿಂಗ್ ಹೋರಾಟ ಮಾಡಬೇಕಾಗಬಹುದು. WR-V ಪೆಟ್ರೋಲ್ ಸಹ  ತತ್ಸಮಾನ ಜಾಜ್ ಗಿಂತಲೂ  62kg ಹೆಚ್ಚು ಬಾರವಾಗಿದೆ ಗೇರ್ ಗಳ  ಬದಲಾವಣೆಯೊಂದಿಗೆ ಸಹ ಮೈಲೇಜ್ 17.5kmpl ಗೆ ಇಳಿಯುತ್ತದೆ.

1.5- ಲೀಟರ್  ಡೀಸೆಲ್ ಎಂಜಿನ್ 100PS ಪವರ್ ಹಾಗು 200Nm ಟಾರ್ಕ್  ಕೊಡುತ್ತದೆ ಮತ್ತು ಸಿಕ್ಸ್ ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ಮಿಷನ್ ಹೊಂದಿದೆ ಸಹ.  ಮೋಟಾರ್ ಲೊ ಎಂಡ್ ತಾರ್ಕ್ ಅನ್ನು ಚೆನ್ನಾಗಿ ಕೊಡುತ್ತದೆ ಮತ್ತು ಲೊ ರೇವ್ ಮಾತು ಹೈ ಗೇರ್ ಸಂಯೋಜನೆ ಚೆನ್ನಾಗಿ ಹೊಂದುತ್ತದೆ. ಪವರ್ ನ ಬೆಳವಣಿಗೆ ನಯವಾಗಿದ್ದು ಬಹಳಷ್ಟು ಸಮಯದಲ್ಲಿ ನೇರವಾಗಿ ಇರುತ್ತದೆ, ಇದು ಡ್ರೈವ್ ಮಾಡಲು ಸುಲಭವಾಗಿರುತ್ತದೆ ಆದರೆ ಮನೋರಂಜನೆಗೆ ಅಲ್ಲ.

Honda WRV

ಎಂಜಿನ್ ಹೆಚ್ಚು  ಶ್ರಮಪಡುವುದು ಹೆಚ್ಚು ಶಬ್ದ ಹೊರಸೂಸಲೂ ಸಹ ಕಾರಣವಾಗುತ್ತದೆ, ಹೆಚ್ಚು ವೇಗಗತಿ ಪಡೆಯದೆ., ಆದರೆ ಸ್ಟೈಲ್ ಶಾಂತವಾಗಿದೆ, ನಿಮಗೆನಗರಗಳಲ್ಲಿ ಅಥವಾ ಹೈ ವೆ ಯಲ್ಲಿ ಹೆಚ್ಚು ವೇಗವಾಗಿ ಹೋಗಲು ಯಾವುದೇ ಸಮಸ್ಯೆ ಇರುವುದಿಲ್ಲ. ಕುಟುಂಬದ ಉಪಯೋಗಕ್ಕೆ ಕಾರ್ ಕೊಳ್ಳುವವರಿಗೆ ಇದು ಉತ್ತಮ ಎಂಜಿನ್ . ವೇರೆಯಿಂಟ್ ಮೇಲೆ ನಿಂತಿರುವಂತೆ WR-V  ಡೀಸೆಲ್  ಜಾಜ್ ಗಿಂತಲೂ 31-50kg ಹೆಚ್ಚು ಭಾರವಾಗಿದ, ಆದರೆ ಕಾರ್ಯದಕ್ಷತೆಯಲ್ಲಿ ಹೆಚ್ಚು ಬದಲಾವಣೆಗಳಿಲ್ಲ. ಆದರೂ ಮೈಲೇಜ್   25.5kmpl ನಿಂದ  1.8kmpl ಅಷ್ಟು ಕಡಿಮೆ ಆಗುತ್ತದೆ.

ರೈಡ್ ಮತ್ತು ಹ್ಯಾಂಡಲಿಂಗ್

Honda WRV

ಹೋಂಡಾ  ಹೇಳುವಂತೆ WR-V ಸಸ್ಪೆನ್ಷನ್ ಕಂಪೆನೆನ್ಟ್ ಗಳನ್ನೂ ಮಿಡ್ ಸೈಜ್ SUV  ಆದ HR-Vಇಂದ ತೆಗೆದುಕೊಳ್ಳಲಾಗಿದೆ. ದೊಡ್ಡ ವೀಲ್ ಟ್ರಾವೆಲ್ ಹಾಗು ದೊಡ್ಡ ವೀಲ್ ಗಳೊಂದಿಗೆ, WR-V ಪಾಟ್ ಹೋಲ್ ಗಳನ್ನು ತೊಂದರೆಯಿಲ್ಲದೆ  ನಿಭಾಯಿಸುತ್ತದೆ. ಕ್ರಾಸ್ಒವರ್ ನ ಕಠಿಣ ರೋಡ್ ಗಳಲ್ಲಿನ ದಕ್ಷತೆ ಆದರ ವೇದಿಕೆಯ  ಹ್ಯಾಚ್ ಬ್ಯಾಕ್  ಗಿಂತಲೂ ಚೆನ್ನಾಗಿದೆ. ಆದರೆ ಒಟ್ಟಾರೆ ಸಸ್ಪೆನ್ಷನ್ ಮೃದುವಾಗಿದೆ, ವಿಶೇಷವಾಗಿ ಪೆಟ್ರೋಲ್ ಎಂಜಿನ್ ಆವೃತ್ತಿಯಲ್ಲಿ.

ಹಾಗಾಗಿ ಇದರಲ್ಲಿ ಆಗಾಗ್ಗೆ ಲಂಬಕೋನದ ಅಳಗುವಿಕೆ ಇರುತ್ತದೆ, ಮತ್ತು ಬದಿಯಲ್ಲಿ ಎಳೆದಹಾಗೆ ಇರುತ್ತದೆ ಕೂಡ.  ಇದರಿಂದ  ಹೆಚ್ಚು ವೇಗಗಳಲ್ಲಿ ಒಂದು ಶಾಂತವಾದ ವಾತಾವರಣ ಕಾದಡಿದಂತಾಗುತ್ತದೆ. ತಿರುವುಗಳಲ್ಲಿ WR-V ಯಲ್ಲಿ ಬಹಳಷ್ಟು ಬಾಡಿ ರೋಲ್ ಇದೆ. ಹಾಗಾಗಿ ಇದು ಅಷ್ಟೇನು ಮನೋರಂಜಿಸುವುದಿಲ್ಲ. ಆದರೆ WR-V ಯಲ್ಲಿ ಸುರಕ್ಷತೆ ಚೆನ್ನಾಗಿದೆ ಮತ್ತು ಹೆಚ್ಚು ವೇಗಗಳಲ್ಲಿ ದೊಡ್ಡ ವೀಲ್ ಬೇಸ್ ಹಾಗು ಅಗಲವಾದ ಟೈರ್ ಗಳು ಇರುವುದರಿಂದ ಡ್ರೈವ್ ಮಾಡಲು ಸುಲಭವಾಗುತ್ತದೆ.

ಹ್ಯಾಂಡಲಿಂಗ್ ಸಹ ಚೆನ್ನಾಗಿದೆ. SUV ತರಹದ ಬದಲಾವಣೆಗಳು ಇದ್ದರೂ WR-V ಒಂದು ಹ್ಯಾಚ್ ಬ್ಯಾಕ್ ತರಹ ವರ್ತಿಸುತ್ತದೆ. ಸ್ಟಿಯರಿಂಗ್ ನಲ್ಲಿ ಹೆಚ್ಚು ಫೀಡ್ಬ್ಯಾಕ್ ಸಿಕ್ಕಿದರೆ ಇದನ್ನು ಡ್ರೈವ್ ಮಾಡಲೂ ಸಹ ಚೆನ್ನಾಗಿರುತ್ತದೆ. ಹಾಗಾಗಿ ಇದು ತುಂಬಾ ಸೂಕ್ಷ್ಮವಾದ ಸ್ಟಿಯರಿಂಗ್ ಹೊಂದಿದ್ದರೂ ಇದು ಹೆಚ್ಚು ಉತ್ಸಾಹಿಗಳಿಗೆ ಅಸ್ಟೇನು ಮೆಚ್ಚುಗೆಯಾಗುವುದಿಲ್ಲ.

ಸುರಕ್ಷತೆ

Honda WRV

ಹೋಂಡಾ WR-V  ಎಲ್ಲ ವೇರಿಯೆಂಟ್ ಗಳಲ್ಲೂ ಡುಯಲ್ ಫ್ರಂಟ್ ಏರ್ಬ್ಯಾಗ್ ಗಳು ಮತ್ತು ABS with EBD ಸ್ಟ್ಯಾಂಡರ್ಡ್ ಆಗಿ ಇರುತ್ತದೆ. ಇದರಲ್ಲಿ ಹಿಂಬದಿಯ ಕ್ಯಾಮೆರಾ ವಿಭಿನ್ನ ನೋಟಗಳ ಜೊತೆಗೆ ಇದೆ ಆದರೆ ಸಿಟಿ ಹಾಗು ಜಾಜ್ ನಂತೆ ನಿಮಗೆ ಪಾರ್ಕಿಂಗ್ ಸೆನ್ಸರ್ ಗಳು ದೊರೆಯುವುದಿಲ್ಲ.

ಅಂತಿಮ ಅನಿಸಿಕೆ

Honda WRV

WR-V  ಯು ಜಾಜ್ ಗಿಂತಲೂ ಹೆಚ್ಚು ಪರಿಗಣಿಸಲಪಡಬಹುದೇ?   ಹೌದು, ವಿಭಿನ್ನವಾದ ಸ್ಟೈಲಿಂಗ್ ಹೊರತಾಗಿ ಇದರಲ್ಲಿ ಬಹಳಷ್ಟು ಒಳ್ಳೆ ಫೀಚರ್ ಗಳು ಇವೆ. ಇದರಲ್ಲಿ ಬಹಳಷ್ಟನ್ನು ಹೋಂಡಾ ಸಿಟಿ ಒಂದಿಗೆ ಹಂಚಿಕೊಳ್ಳಲಾಗಿದೆ. ಇದರ  ಬೆಲೆ ಪ್ರೀಮಿಯಂ  ಜಾಜ್  ಗಿಂತಲೂ Rs 70,000-1ಲಕ್ಷ ಹೆಚ್ಚು ಇರುವುದು ನಮಗೆ ಒಪ್ಪಿಗೆ ಆಗುತ್ತದೆ. ಮತ್ತು ಇದರಲ್ಲಿರುವ ವಿಷಯಗಳಿಗೆ ಒತ್ತುಕೊಡುತ್ತದೆ. ನೀವು ಅದಕ್ಕಿಂತ ಹೆಚ್ಚಿಗೆ ಕೊಡಬಹುದಾದರೆ ಅದು ಕೇವಲ ನಿಮ್ಮ ಪಾಕೆಟ್ ಅನ್ನು ಕಡಿಮೆ ಬಾರಾ ಮಾಡುತ್ತದೆ.

ತರ್ಕದೊಂದಿಗೆ, ಇದು ಪ್ರೇತಿಸ್ಪರ್ದಿಗಳಿಗಿಂತ ವಿಭಿನ್ನವಾಗಿ ಕಾಣುತ್ತದೆ ಅವುಗಳೆಂದರೆ ಹುಂಡೈ i20 ಆಕ್ಟಿವ್, VW ಕ್ರಾಸ್ ಪೋಲೊ, ಟೊಯೋಟಾ ಎಟಿಯೋಸ್ ಅಥವಾ ಅರ್ಬನ್ ಕ್ರಾಸ್.  ಆದರೆ ಇದರ ಹೊರತರಬಹುದಾದ ಬೆಲೆಯನ್ನು ಪರಿಗಣಿಸಿದರೆ ಇತರ ಕ್ರಾಸ್ಒವರ್ ಗಳಿಗೆ ಅಂದರೆ ಫೋರ್ಡ್ ಎಕೋಸ್ಪೋರ್ಟ್ ಅಥವಾ ಮಾರುತಿ ಸುಜುಕಿ ವಿಟಾರಾ ಬ್ರೆಝ ಗೆ ಹೋಲಿಸದರೆ ಇದು ಮಾರಾಟದಲ್ಲಿ ಹಿಂದುಳಿಯಬಹುದು.

In the meantime, Honda has launched its WRV at Rs 7.75 lakh (ex-showroom, Delhi), have a look at it.

ಇತ್ತೀಚಿನ ಹ್ಯಾಚ್ಬ್ಯಾಕ್ ಕಾರುಗಳು

ಮುಂಬರುವ ಕಾರುಗಳು

ಇತ್ತೀಚಿನ ಹ್ಯಾಚ್ಬ್ಯಾಕ್ ಕಾರುಗಳು

×
We need your ನಗರ to customize your experience