• English
  • Login / Register

MG ಕಾಮೆಟ್: 1,500 ಕಿ.ಮೀ ಡ್ರೈವ್‌ ಮಾಡಿದ ಅನುಭವದ ಕುರಿತು.. ಉಪಯುಕ್ತ ವಿಮರ್ಶೆ

Published On ಮೇ 20, 2024 By ujjawall for ಎಂಜಿ ಕಾಮೆಟ್ ಇವಿ

  • 1 View
  • Write a comment

MG ಕಾಮೆಟ್ ನಗರದ ಟ್ರಾಫಿಕ್‌ ಮತ್ತು ದಟ್ಟಣೆಗೆ ಉತ್ತಮ ಪರಿಹಾರವಾಗಿದೆ, ಆದರೆ ಇದರಲ್ಲೂ ಕೆಲವು ನ್ಯೂನತೆಗಳಿವೆ

ಕಾಮೆಟ್‌. ಇದು ಕೇವಲ ಆಕಾಶ ಮತ್ತು ಈ ಪ್ರಪಂಚದಿಂದ ಹೊರಗಿರುವ ಹೆಸರಲ್ಲ, ಆದರೆ ಕಾರಿನ ಸಂಪೂರ್ಣ ಅನುಭವವೂ ಆಗಿದೆ. ಇದು ನಿಜವಾಗಿಯೂ ಭಾರತದ ರಸ್ತೆಯಲ್ಲಿರುವ ಯಾವುದೇ ಕಾರುಗಳಿಗಿಂತ ಭಿನ್ನವಾಗಿದೆ. ಮತ್ತು ನಾನು ಈ 'ಬೇರೆನೇ ಜಗತ್ತಿನ' ಅನುಭವವನ್ನು ಕೇವಲ ಮೂರು ತಿಂಗಳಿನಿಂದ ಖುಷಿಯಿಂದ ಆನಂದಿಸುತ್ತಿರುವಾಗ - ನನ್ನ ಎಲ್ಲಾ ದೈನಂದಿನ ಪ್ರಯಾಣಕ್ಕಾಗಿ ಮತ್ತು ಕೆಲವು ಸಣ್ಣ ರಸ್ತೆ ಪ್ರಯಾಣಗಳಿಗಾಗಿ ಕಾಮೆಟ್‌ನೊಂದಿಗೆ ಸಾಗಿದ್ದರೂ, ಇದರ ಕುರಿತು ನನ್ನ ಬಳಿ ಕೆಲ ಸಣ್ಣ ಟೀಕೆಗಳಿವೆ.

ಸಣ್ಣ ಗಾತ್ರ, ದೊಡ್ಡ ಬಾಗಿಲುಗಳು

2974 ಮಿಮೀ ಉದ್ದದೊಂದಿಗೆ, MG ಕಾಮೆಟ್ ಅನ್ನು ಸಂಪೂರ್ಣವಾಗಿ ನಗರದ ಪ್ರಯಾಣಕ್ಕೆ ಕೇಂದ್ರಿಕರಿಸಿದಂತಿದೆ. ನಾನು ಮೊದಲ ದೀರ್ಘಾವಧಿಯ ವರದಿಯಲ್ಲಿ ನಗರದಲ್ಲಿ ಕಾಮೆಟ್‌ನೊಂದಿಗಿನ ನನ್ನ ಅನುಭವವನ್ನು ಚರ್ಚಿಸಿದ್ದೇನೆ ಮತ್ತು ಆ ಅವಲೋಕನವು ಇನ್ನೂ ನಿಜವಾಗಿದೆ, ಆದರೆ ಈಗ ಅದಕ್ಕೆ ಒಂದು ಸಲಹೆಗಳನ್ನು ಸೇರಿಸಲಾಗಿದೆ.

ನೀವು ವಿನ್ಯಾಸದ ಕುರಿತು ಕುತೂಹಲ ಹೊಂದಿದ್ದರೆ, ಕಾಮೆಟ್ ದೊಡ್ಡ ಬಾಗಿಲುಗಳನ್ನು ಹೊಂದಿದೆ ಎಂದು ನೀವು ಗಮನಿಸಿರಬಹುದು. ಮತ್ತು ಇದು ಕಾರಿನ ಗಾತ್ರಕ್ಕೆ ಮಾತ್ರವಲ್ಲ. ಅದರ ಕಾಂಪ್ಯಾಕ್ಟ್ ಆಯಾಮಗಳನ್ನು ಗಮನಿಸುವಾಗ, ಸಾಮಾನ್ಯಕ್ಕಿಂತ ದಟ್ಟಣೆಯ ಸ್ಥಳಗಳಲ್ಲಿ ಅದನ್ನು ಡ್ರೈವ್‌ ಮಾಡುವುದು ಸುಲಭವಾಗಿರಲಿದೆ. ಮತ್ತು ಪಾರ್ಕಿಂಗ್ ಮಾಡುವಾಗ ಅದು ಸಮಸ್ಯೆಯಲ್ಲ, ಒಳಗೆ ಮತ್ತು ಹೊರಗೆ ಹೋಗುವುದು ಸ್ವಲ್ಪ ಸಮಸ್ಯೆಯಾಗಲಿದೆ.

ಸಾಮಾನ್ಯ ಕಾರುಗಳಲ್ಲಿ, ಕಾರಿನ ಒಳಗೆ ಹೋಗಲು ಹೆಚ್ಚಿನ ಸಂದರ್ಭಗಳಲ್ಲಿ ನೀವು ಖಂಡಿತವಾಗಿಯೂ ಕಷ್ಟಪಡುತ್ತೀರಿ ಆದರೆ ಅಂತಿಮವಾಗಿ ಹೇಗಾದರೂ ಒಳಗೆ ಹೋಗುತ್ತೀರಿ. ಆದರೆ ಕಾಮೆಟ್‌ನಲ್ಲಿ ಇದು ಸಾಧ್ಯವಿಲ್ಲ. ಬೃಹತ್ ಬಾಗಿಲುಗಳು ಕಷ್ಟದಲ್ಲಿ ಒಳಗೆ ಹೋಗಬಹುದಾದ ಅಂತರವನ್ನು ಇನ್ನಷ್ಟು ಕಿರಿದಾಗಿಸಲು ಕಾರಣವಾಗುತ್ತವೆ ಮತ್ತು ಆಸನಗಳು ಸಹ ಸಾಮಾನ್ಯಕ್ಕಿಂತ ಸ್ವಲ್ಪ ಮುಂದೆ ಇರುತ್ತವೆ. ಆ ಕಾಂಬಿನೇಷನ್‌ ಅತ್ಯಂತ ಬಿಗಿಯಾದ ಜಾಗದಲ್ಲಿ ಕಾಮೆಟ್‌ನಲ್ಲಿ ಒಳಗೆ ಮತ್ತು ಹೊರಗೆ ಹೋಗಲು ಅಸಾಧ್ಯವಾಗುತ್ತದೆ.

ಪರಿಹಾರ? ನೀವು ಅದನ್ನು ಒಂದು ಬದಿಗೆ ಬಹಳ ಹತ್ತಿರದಲ್ಲಿ ನಿಲ್ಲಿಸಿ, ಯಾವುದೇ ಅಂಚನ್ನು ಬಿಡಬೇಡಿ ಮತ್ತು ಎದುರು ಭಾಗದಿಂದ ಕೆಳಗೆ ಇಳಿಯಿರಿ. ಆದ್ದರಿಂದ ನೀವು ಪ್ರಯಾಣಿಕರ ಕಡೆಯಿಂದ ಕೆಳಗಿಳಿಯಬೇಕಾದರೂ ಸಹ, ಚಾಲಕ ಮತ್ತು ಪ್ರಯಾಣಿಕರ ಸೀಟ್‌ನ ನಡುವೆ ಇರುವ ಮಧ್ಯದ ಜಾಗಕ್ಕೆ ಧನ್ಯವಾದ ಹೇಳಲೇಬೇಕು. ಅಥವಾ, ಸ್ವಲ್ಪ ದೊಡ್ಡದಾದ ಸ್ಥಳವನ್ನು ನೀವು ಕಂಡುಕೊಳ್ಳುತ್ತೀರಿ. ಅದರ ಹೊರತು ಬೇರೆ ದಾರಿಯಿಲ್ಲ.

ಪ್ರಾಯೋಗಿಕ ... ಆದರೆ ಸಾಕಾಗುವುದಿಲ್ಲ

ಸಿಟಿ ಕೇಂದ್ರಿತವಾಗಲು ಉದ್ದೇಶಿಸಿರುವ ಕಾರು ಆಗಿರುವುದರಿಂದ, MG ಕಾಮೆಟ್ ಪ್ರಾಯೋಗಿಕತೆಯಲ್ಲಿ ಸ್ವಲ್ಪ ಕಡಿಮೆಯಾಗಿದೆ. ನೀವು 1-ಲೀಟರ್‌ನ ಬಾಟಲಿಗಳು ಮತ್ತು ನಿಮ್ಮ ಕ್ಲೀನಿಂಗ್ ಬಟ್ಟೆ ಅಥವಾ ಸನ್‌ಗ್ಲಾಸ್‌ ಕವರ್‌ನಂತಹ ಇತರ ವಸ್ತುಗಳನ್ನು ಸಂಗ್ರಹಿಸಲು ಬಳಸಬಹುದಾದ ಡೋರ್ ಪಾಕೆಟ್‌ಗಳನ್ನು ಪಡೆಯುತ್ತೀರಿ. ಇದು ಲ್ಯಾಪ್‌ಟಾಪ್ ನ ಕವರ್‌ಗಳನ್ನು ಅನ್ನು ಸಂಗ್ರಹಿಸಲು ಸಾಕಷ್ಟು ದೊಡ್ಡದಾಗಿದೆ, ಅದು ಒಳ್ಳೆಯದಿದೆ.

ನಿಮ್ಮ ಪಾನೀಯಗಳನ್ನು ಎರಡು ಕಪ್ ಹೋಲ್ಡರ್‌ಗಳಲ್ಲಿ ಇಡಬಹುದು, ಆದರೆ ಅವುಗಳ ಸ್ಥಾನವು AC ವೆಂಟ್‌ಗಳ ಮುಂದೆಯೇ ಇರುತ್ತದೆ, ಇದು ನಿಖರವಾಗಿ ಸೂಕ್ತವಲ್ಲ. ನೀವು ತಂಪು ಪಾನೀಯವನ್ನು ಸೇವಿಸುತ್ತಿದ್ದರೆ ಅದು ಒಳ್ಳೆಯದು, ಆದರೆ ನೀವು ಬಿಸಿ ಚಾಕೊಲೇಟ್ ಅಥವಾ ಚಹಾವನ್ನು ಸೇವಿಸುತ್ತಿದ್ದರೆ ... ಅದು ಹೆಚ್ಚು ಕಾಲ ಬಿಸಿಯಾಗಿ ಉಳಿಯುವುದಿಲ್ಲ ಎಂದು ಹೇಳಬಹುದು.

ಅದರ ಹೊರತಾಗಿ, ಡ್ಯಾಶ್‌ಬೋರ್ಡ್‌ನ ಕೆಳಗೆ ಉದ್ದವಾದ ಸ್ಲ್ಯಾಬ್ ಇದೆ, ಇದನ್ನು ನಿಮ್ಮ ಮೊಬೈಲ್‌ಗಳು, ವ್ಯಾಲೆಟ್‌ಗಳು ಮತ್ತು ವಸ್ತುಗಳನ್ನು ಇರಿಸಿಕೊಳ್ಳಲು ಬಳಸಬಹುದು. ಆದರೆ ಬೇಸ್‌ ಫ್ಲ್ಯಾಟ್‌ ಇರುವುದರಿಂದ ಅವು ಹಾಗೆಯೇ ಚಲಿಸುತ್ತವೆ. ನಿಮ್ಮ ಫೋನ್ ಅಥವಾ ವಾಲೆಟ್ ಅನ್ನು ಡೋರ್ ಆರ್ಮ್‌ರೆಸ್ಟ್‌ನಲ್ಲಿ ಇಡುವುದು ಉತ್ತಮ ಆಯ್ಕೆಯಾಗಿದೆ.

ನಿಮ್ಮ ಸಡಿಲವಾದ ಚೀಲಗಳಿಗೆ ನೀವು ಎರಡು ಹುಕ್ಸ್‌ಗಳನ್ನು (0.5kg ಪೇಲೋಡ್) ಪಡೆಯುತ್ತೀರಿ, ಆದರೆ ಅವುಗಳನ್ನು ಎಂದಿಗೂ ಬಳಸಲಾಗುವುದಿಲ್ಲ. ಮತ್ತು ಅವುಗಳು ಸಹ, ಚಾಲನೆ ಮಾಡುವಾಗ ಚೀಲಗಳು ತಿರುಗಲು ಪ್ರಾರಂಭಿಸುತ್ತವೆ ಮತ್ತು ನಿರಂತರವಾಗಿ ನಿಮ್ಮ ಕಾಲಿಗೆ ಹೊಡೆಯುತ್ತವೆ, ಇದು ಒಂದು ಹಂತದ ನಂತರ ಕಿರಿಕಿರಿಯನ್ನು ಉಂಟುಮಾಡುತ್ತದೆ. ಕಾಮೆಟ್‌ನ ಕ್ಯಾಬಿನ್‌ಗೆ ಗ್ಲೋವ್‌ಬಾಕ್ಸ್ ಅಥವಾ ಮುಚ್ಚಿದ ಶೇಖರಣಾ ಸ್ಥಳವು ಇಲ್ಲದಿರುವುದು ಖಂಡಿತವಾಗಿಯೂ ಒಂದು ದೊಡ್ಡ ಮಿಸ್ ಆಗಿದೆ ಮತ್ತು ಹಿಂದಿನ ಪ್ರಯಾಣಿಕರು ಸಹ ಯಾವುದೇ ಸ್ಟೋರೇಜ್‌ ಸ್ಥಳವನ್ನು ಹೊಂದಿಲ್ಲದಿರುವುದರಿಂದ, ಅವರು ಇದರ ಬಗ್ಗೆ ದೂರು ನೀಡುತ್ತಾರೆ.

ಚಾರ್ಜಿಂಗ್ ವಿಷಯದಲ್ಲಿ, ಕಾಮೆಟ್ 3 ಯುಎಸ್‌ಬಿ ಮಾದರಿಯ ಪೋರ್ಟ್‌ಗಳನ್ನು ಪಡೆಯುತ್ತದೆ, ಅವುಗಳಲ್ಲಿ ಒಂದು IRVM ನ ಕೆಳಗಿದೆ(ಡ್ಯಾಶ್‌ಕ್ಯಾಮ್‌ಗಳಿಗಾಗಿ) ಮತ್ತು 12 V ಸಾಕೆಟ್‌ ಅನ್ನು ಸಹ ಹೊಂದಿದೆ. ಆದರೆ, 2024ರ ಸಮಯದಲ್ಲಿಯೂ ಇದರಲ್ಲಿ ಯಾವುದೇ ಟೈಪ್-ಸಿ ಪೋರ್ಟ್‌ಗಳಿಲ್ಲ!

 ಟೀಕೆಗಳಿರುವ ಜಾಗಗಳು

ನಾನು ಕಾಮೆಟ್‌ನ 10.25-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಇಷ್ಟಪಡುತ್ತೇನೆ, ಆದರೆ ಅದನ್ನು ಪರಿಪೂರ್ಣವಾಗಿಸುವಲ್ಲಿ ಕೇವಲ ಒಂದು ಸರಳವಾದ ವಿಷಯವು ಮಿಸ್‌ ಆಗಿದೆ: ಅದುವೇ ವಾಲ್ಯೂಮ್ ನಾಬ್. ಅತ್ಯಂತ ಅಗತ್ಯವಿರುವ ಸೌಕರ್ಯ ಅಲ್ಲದಿದ್ದರೂ, ಖಂಡಿತವಾಗಿಯೂ ಇದು ಪ್ರಯಾಣಿಕರು ಮೆಚ್ಚುವ ಸಂಗತಿಯಾಗಿದೆ. ಯಾಕೆಂದರೆ, ಆಂಡ್ರಾಯ್ಡ್ ಆಟೋ ಅಥವಾ ಆಪಲ್ ಕಾರ್‌ಪ್ಲೇ ಆಕ್ಟಿವ್‌ ಆಗಿರುವಾಗ   ಪ್ರಯಾಣಿಕರಿಗೆ ಸೌಂಡ್‌ನ ಮೇಲೆ ಯಾವುದೇ ನಿಯಂತ್ರಣವಿರುವುದಿಲ್ಲ.

ಕಾಮೆಟ್ ಅನ್ನು ಎರಡು-ಸೀಟರ್‌ಗಳಾಗಿ ಬಳಸುವ ಸಾಧ್ಯತೆಯಿರುವುದರಿಂದ, ಮುಂಭಾಗದ ಪ್ರಯಾಣಿಕರಿಗೆ ಪ್ರಯಾಣವನ್ನು ಹೆಚ್ಚು ಆರಾಮದಾಯಕವಾಗಿಸಲು ಇದು ಕೆಲವು ಕೆಲಸಗಳನ್ನು ಮಾಡಬಹುದಿತ್ತು. ಉದಾಹರಣೆಗೆ, ಸೀಟ್ ಬೇಸ್ ಸ್ವಲ್ಪ ಚಿಕ್ಕದಾಗಿದೆ. ಪರಿಣಾಮವಾಗಿ, ತೊಡೆಯ ಕೆಳಭಾಗದ ಸಪೋರ್ಟ್‌ ಕಡಿಮೆ ಎನಿಸುತ್ತದೆ ಮತ್ತು ಸ್ವಲ್ಪ ಲಾಂಗ್‌ ಡ್ರೈವ್‌ನಲ್ಲಿ ಬೇಗನೇ ಆಯಾಸವಾಗುತ್ತದೆ.

MG ಪ್ರಯಾಣಿಕರಿಗೆ ಸೀಟ್ ಬೆಲ್ಟ್ ಸ್ಟಾಪರ್ ಅನ್ನು ಸಹ ನೀಡಬಹುದಿತ್ತು. ಪ್ರಸ್ತುತ, ಅವರು ಸೀಟ್ ಬೆಲ್ಟ್ ಅನ್ನು ಬಳಸಲು ತುಂಬಾ ಕಷ್ಟಪಡಬೇಕಾಗುತ್ತದೆ., ಇದು ಸುಲಭವಾಗಿ ಸಿಗುವುದಕ್ಕಿಂತ ಸ್ವಲ್ಪ ದೂರದಲ್ಲಿದೆ.

ಹಾಗಾಗಿ, ಇವುಗಳು ನಾನು ಕಾಮೆಟ್‌ನೊಂದಿಗೆ ಕಳೆದ ಸಮಯದಲ್ಲಿ ನಾನು ಕಂಡ ಕೆಲ ಸಣ್ಣ ಲೋಪಗಳು.  ಖಂಡಿತವಾಗಿಯೂ ಇವುಗಳು ದೊಡ್ಡ ಸಮಸ್ಯೆಗಳಲ್ಲ, ಆದರೆ ನೀವು ಇದನ್ನು ಮನೆಗೆ ತರಲು ಯೋಜಿಸುತ್ತಿದ್ದರೆ ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳು ಆಗಿದೆ. ಈ ಸಣ್ಣ ತೊಂದರೆಗಳ ಹೊರತಾಗಿಯೂ ಇದು ನಿಮ್ಮ ನಗರ ಕೇಂದ್ರಿತ ರೈಡ್‌ಗಳಿಗೆ ಉತ್ತಮ ಪರಿಹಾರವಾಗಿದೆ, ಮತ್ತು ನೀವು ನಮ್ಮ 1000 ಕಿಮೀ ಡ್ರೈವ್‌ನ ಕುರಿತ ವಿಮರ್ಶೆಯನ್ನು ಓದಬಹುದು, ಇದು ಕಾಮೆಟ್‌ನೊಂದಿಗೆ ಸಾಗಿದ ಕುರಿತು ನಿಮಗೆ ಸಂಪೂರ್ಣ ವಿವರಗಳನ್ನು ನೀಡುತ್ತದೆ. ಮುಂದಿನ ವರದಿಯಲ್ಲಿ, MG ಯನ್ನು ಹಿಂತಿರುಗಿಸುವ ಮೊದಲು ನಾವು ಅದರೊಂದಿಗಿನ ನಮ್ಮ ಅಂತಿಮ ಅನುಭವವನ್ನು ಸಂಕ್ಷಿಪ್ತಗೊಳಿಸುತ್ತೇವೆ. ಮತ್ತೆ ಸಿಗೋಣ! 

ಧನಾತ್ಮಕ ಅಂಶಗಳು: ಗಾತ್ರ, ವಿನ್ಯಾಸ, ವೈಶಿಷ್ಟ್ಯಗಳು, ನಗರದಲ್ಲಿ ಬಳಕೆ ಸುಲಭ

ನಕಾರಾತ್ಮಕತೆಗಳು: ಸೀಮಿತ ಪ್ರಾಯೋಗಿಕತೆ, ಆಸನ ಸೌಕರ್ಯವನ್ನು ಇನ್ನೂ ಉತ್ತಮವಾಗಿಸಬಹುದಿತ್ತು

ಸ್ವೀಕರಿಸಿದ ದಿನಾಂಕ: ಜನವರಿ 2, 2024

ಪಡೆದಾಗ ಕ್ರಮಿಸಿದ್ದ ದೂರ: 30 ಕಿ.ಮೀ

ಇಲ್ಲಿಯವರೆಗೆ ಕ್ರಮಿಸಿದ ದೂರ: 1500 ಕಿ.ಮೀ.

Published by
ujjawall

ಇತ್ತೀಚಿನ ಹ್ಯಾಚ್ಬ್ಯಾಕ್ ಕಾರುಗಳು

ಮುಂಬರುವ ಕಾರುಗಳು

ಇತ್ತೀಚಿನ ಹ್ಯಾಚ್ಬ್ಯಾಕ್ ಕಾರುಗಳು

×
We need your ನಗರ to customize your experience