• ಟಾಟಾ ಪಂಚ್‌ ಮುಂಭಾಗ left side image
1/1
  • Tata Punch
    + 76ಚಿತ್ರಗಳು
  • Tata Punch
  • Tata Punch
    + 7ಬಣ್ಣಗಳು
  • Tata Punch

ಟಾಟಾ ಪಂಚ್‌

with ಫ್ರಂಟ್‌ ವೀಲ್‌ option. ಟಾಟಾ ಪಂಚ್‌ Price starts from ₹ 6 ಲಕ್ಷ & top model price goes upto ₹ 10.20 ಲಕ್ಷ. This model is available with 1199 cc engine option. This car is available in ಪೆಟ್ರೋಲ್ ಮತ್ತು ಸಿಎನ್‌ಜಿ options with both ಮ್ಯಾನುಯಲ್‌ & ಆಟೋಮ್ಯಾಟಿಕ್‌ transmission. It's & . ಪಂಚ್‌ has got 5 star safety rating in global NCAP crash test & has 2 safety airbags. & 366 litres boot space. This model is available in 8 colours.
change car
1072 ವಿರ್ಮಶೆಗಳುrate & win ₹ 1000
Rs.6 - 10.20 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ
view ಮಾರ್ಚ್‌ offer
ಈ ತಿಂಗಳ ಅತ್ಯುತ್ತಮ ಕೊಡುಗೆಗಳನ್ನು ಕಳೆದುಕೊಳ್ಳಬೇಡಿ

ಟಾಟಾ ಪಂಚ್‌ ನ ಪ್ರಮುಖ ಸ್ಪೆಕ್ಸ್

engine1199 cc
ಪವರ್72.41 - 86.63 ಬಿಹೆಚ್ ಪಿ
torque115 Nm
ಟ್ರಾನ್ಸ್ಮಿಷನ್ಮ್ಯಾನುಯಲ್‌ / ಆಟೋಮ್ಯಾಟಿಕ್‌
ಡ್ರೈವ್ ಟೈಪ್ಫ್ರಂಟ್‌ ವೀಲ್‌
mileage18.8 ಗೆ 20.09 ಕೆಎಂಪಿಎಲ್
ಪಾರ್ಕಿಂಗ್ ಸೆನ್ಸಾರ್‌ಗಳು
ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್
ಸನ್ರೂಫ್
ಸ್ಬಯಂಚಾಲಿತ ಹವಾಮಾನ ನಿಯಂತ್ರಣ
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಪಂಚ್‌ ಇತ್ತೀಚಿನ ಅಪ್ಡೇಟ್

ಇತ್ತೀಚಿನ ಅಪ್‌ಡೇಟ್: ಟಾಟಾ ಪಂಚ್ ಈಗ ಎಲ್ಲಾ ಪವರ್‌ಟ್ರೇನ್ ಆಯ್ಕೆಗಳಲ್ಲಿ ಸನ್‌ರೂಫ್ ಸೌಕರ್ಯವನ್ನು ನೀಡುತ್ತಿದೆ.  ಇದಕ್ಕೆ ಸಂಬಂಧಿಸಿದಂತೆ, ನಾವು ಪಂಚ್‌ನಲ್ಲಿನ ವೈಟಿಂಗ್ ಪಿರಿಯೆಡ್ ನ್ನು ಹ್ಯುಂಡೈ ಎಕ್ಸ್‌ಟರ್‌ನೊಂದಿಗೆ ಹೋಲಿಸಿದ್ದೇವೆ. 

ಬೆಲೆ: ಬೆಂಗಳೂರಿನಲ್ಲಿ  ಪಂಚ್‌ನ ಎಕ್ಸ್ ಶೋರೂಂ ಬೆಲೆ 6 ಲಕ್ಷ ರೂ.ನಿಂದ ದಿಂದ  10.10 ಲಕ್ಷ ರೂ. ವರೆಗೆ ಇದೆ 

ವೇರಿಯೆಂಟ್ ಗಳು: ಟಾಟಾ ಇದನ್ನು ನಾಲ್ಕು ವಿಶಾಲವಾದ ವೇರಿಯೆಂಟ್ ಗಳಲ್ಲಿ ನೀಡುತ್ತದೆ. ಅದೆಂದರೆ,  ಪ್ಯೂರ್, ಅಡ್ವೆಂಚರ್, ಅಕಂಪ್ಲಿಶೇಡ್ ಮತ್ತು ಕ್ರಿಯೇಟಿವ್. ಹೊಸ ಕ್ಯಾಮೊ ಆವೃತ್ತಿಯನ್ನು ಅಡ್ವೆಂಚರ್ ಮತ್ತು ಅಕಾಂಪ್ಲಿಶ್ಡ್ ಟ್ರಿಮ್‌ಗಳಲ್ಲಿ ನೀಡಲಾಗುತ್ತದೆ.

ಆಸನ ಸಾಮರ್ಥ್ಯ: ಇದರಲ್ಲಿ ಐದು ಜನರು ಕುಳಿತುಕೊಳ್ಳಬಹುದು.

ಬೂಟ್ ಸ್ಪೇಸ್: ಟಾಟಾದ ಈ ಮೈಕ್ರೋ ಎಸ್ಯುವಿ 366 ಲೀಟರ್ ಬೂಟ್ ಸ್ಪೇಸ್ ಸಾಮರ್ಥ್ಯವನ್ನು ನೀಡುತ್ತದೆ. 

ಎಂಜಿನ್ ಮತ್ತು ಟ್ರಾನ್ಸ್ ಮಿಸನ್: ಇದು 88PS/115Nm ಉತ್ಪಾದಿಸುವ 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದನ್ನು 5-ಸ್ಪೀಡ್ ಮ್ಯಾನ್ಯುವಲ್ ಅಥವಾ 5-ಸ್ಪೀಡ್ ಆಟೋಮ್ಯಾಟಿಕ್ ನೊಂದಿಗೆ ಜೋಡಿಸಲಾಗುತ್ತದೆ. CNG ವೇರಿಯೆಂಟ್ ಗಳು CNG ಮೋಡ್‌ನಲ್ಲಿ 73.5PS ಮತ್ತು 103Nm ನಷ್ಟು ಶಕ್ತಿಯನ್ನು ಹೊರಹಾಕಲು 5-ಸ್ಪೀಡ್ ಮ್ಯಾನ್ಯುವಲ್‌ ನೊಂದಿಗೆ ಅದೇ ಎಂಜಿನ್ ಅನ್ನು ಹೊಂದಿದೆ. 

ಇದರ ಇಂಧನ ಮೈಲೇಜ್ ನ ಅಂಕಿಅಂಶಗಳನ್ನು ಕೆಳಗೆ ವಿವರಿಸಲಾಗಿದೆ:

  • ಪೆಟ್ರೋಲ್ ಮಾನ್ಯುಯಲ್:  ಪ್ರತಿ ಲೀ.ಗೆ 20.09 ಕಿ.ಮೀ

  • ಪೆಟ್ರೋಲ್ ಆಟೋಮ್ಯಾಟಿಕ್: ಪ್ರತಿ ಲೀ.ಗೆ 18.8 ಕಿ.ಮೀ 

  • ಸಿಎನ್ಜಿ : ಪ್ರತಿ ಕೆ.ಜಿಗೆ 26.99 ಕಿ.ಮೀ

ಗ್ರೌಂಡ್ ಕ್ಲಿಯರೆನ್ಸ್: ಟಾಟಾ ಪಂಚ್ 187 ಎಂಎಂ ಗ್ರೌಂಡ್ ಕ್ಲಿಯರೆನ್ಸ್‌ನೊಂದಿಗೆ ಬರುತ್ತದೆ.

ವೈಶಿಷ್ಟ್ಯಗಳು: ಟಾಟಾ ಪಂಚ್‌ ತನ್ನ ವೈಶಿಷ್ಟ್ಯಗಳ ಪಟ್ಟಿಯಲ್ಲಿ ಕನೆಕ್ಟೆಡ್ ಕಾರ್ ತಂತ್ರಜ್ಞಾನದೊಂದಿಗೆ 7-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ, 7-ಇಂಚಿನ ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಪ್ಯಾನೆಲ್, ಆಟೋ ಹವಾನಿಯಂತ್ರಣ ಮತ್ತು ಕ್ರೂಸ್ ಕಂಟ್ರೋಲ್ ಗಳು ಒಳಗೊಂಡಿದೆ. 

ಸುರಕ್ಷತೆ: ಇದರ ಸುರಕ್ಷತೆಯ ಭಾಗವನ್ನು ನಾವು ಗಮನಿಸುವಾಗ, ಇದು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್, ರಿಯರ್ ಡಿಫಾಗರ್‌ಗಳು, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, ರಿಯರ್ ವ್ಯೂ ಕ್ಯಾಮೆರಾ ಮತ್ತು ಐಎಸ್‌ಒಫಿಕ್ಸ್ ಆಂಕರ್‌ಗಳನ್ನು ಪಡೆಯುತ್ತದೆ.

ಪ್ರತಿಸ್ಪರ್ಧಿಗಳು: ಟಾಟಾ ಪಂಚ್ ಗೆ ಮಾರುಕಟ್ಟೆಯಲ್ಲಿ ಹ್ಯುಂಡೈ ಎಕ್ಸ್‌ಟರ್ ಮತ್ತು ಮಾರುತಿ ಇಗ್ನಿಸ್‌ ಗಳು ಪ್ರತಿಸ್ಪರ್ಧಿಯಾಗಿದೆ. ಅದರ ಬೆಲೆಯನ್ನು ಪರಿಗಣಿಸಿ, ಇದು ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕಿಗರ್‌ನ ಕೆಲವು ಟ್ರಿಮ್‌ಗಳೊಂದಿಗೆ ಸಹ ಸ್ಪರ್ಧಿಸುತ್ತದೆ.

 2023 ಟಾಟಾ ಪಂಚ್ EV: ಹೊಸ ಬಾಹ್ಯ ಮತ್ತು ಇಂಟೀರಿಯರ್ ವಿವರಗಳನ್ನು ತೋರಿಸುವ ಪಂಚ್ EV ಪರೀಕ್ಷಾ  ಆವೃತ್ತಿಯನ್ನು ಅನ್ನು ಮತ್ತೊಮ್ಮೆ ಬೇಹುಗಾರಿಕೆ ಮಾಡಲಾಗಿದೆ.

ಮತ್ತಷ್ಟು ಓದು
ಟಾಟಾ ಪಂಚ್‌ Brochure

ಡೌನ್ಲೋಡ್ the brochure to view detailed specs and features

download brochure
ಕರಪತ್ರವನ್ನು ಡೌನ್ಲೋಡ್ ಮಾಡಿ
ಪಂಚ್‌ ಪಿಯೋರ್‌(Base Model)1199 cc, ಮ್ಯಾನುಯಲ್‌, ಪೆಟ್ರೋಲ್, 20.09 ಕೆಎಂಪಿಎಲ್2 months waitingRs.6 ಲಕ್ಷ*
ಪಂಚ್‌ ಪ್ಯೂರ್‌ ರಿದಮ್‌1199 cc, ಮ್ಯಾನುಯಲ್‌, ಪೆಟ್ರೋಲ್, 20.09 ಕೆಎಂಪಿಎಲ್2 months waitingRs.6.38 ಲಕ್ಷ*
ಪಂಚ್‌ ಆಡ್ವೆನ್ಚರ್1199 cc, ಮ್ಯಾನುಯಲ್‌, ಪೆಟ್ರೋಲ್, 20.09 ಕೆಎಂಪಿಎಲ್2 months waitingRs.7 ಲಕ್ಷ*
ಪಂಚ್‌ ಪಿಯೋರ್‌ ಸಿಎನ್‌ಜಿ(Base Model)1199 cc, ಮ್ಯಾನುಯಲ್‌, ಸಿಎನ್‌ಜಿ, 26.99 ಕಿಮೀ / ಕೆಜಿ
ಅಗ್ರ ಮಾರಾಟ
2 months waiting
Rs.7.23 ಲಕ್ಷ*
ಪಂಚ್‌ ಎಡ್ವೆಂಚರ್‌ ರಿದಮ್‌1199 cc, ಮ್ಯಾನುಯಲ್‌, ಪೆಟ್ರೋಲ್, 20.09 ಕೆಎಂಪಿಎಲ್
ಅಗ್ರ ಮಾರಾಟ
2 months waiting
Rs.7.35 ಲಕ್ಷ*
ಪಂಚ್‌ ಆಡ್ವೆನ್ಚರ್ ಎಎಂಟಿ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.8 ಕೆಎಂಪಿಎಲ್2 months waitingRs.7.60 ಲಕ್ಷ*
ಪಂಚ್‌ ಆಕಂಪ್ಲಿಶ್ಡ್‌1199 cc, ಮ್ಯಾನುಯಲ್‌, ಪೆಟ್ರೋಲ್, 20.09 ಕೆಎಂಪಿಎಲ್2 months waitingRs.7.85 ಲಕ್ಷ*
ಪಂಚ್‌ ಆಡ್ವೆನ್ಚರ್ ಸಿಎನ್‌ಜಿ1199 cc, ಮ್ಯಾನುಯಲ್‌, ಸಿಎನ್‌ಜಿ, 26.99 ಕಿಮೀ / ಕೆಜಿ2 months waitingRs.7.95 ಲಕ್ಷ*
ಪಂಚ್‌ ಆಡ್ವೆನ್ಚರ್ rhythm ಎಎಂಟಿ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.8 ಕೆಎಂಪಿಎಲ್2 months waitingRs.7.95 ಲಕ್ಷ*
ಪಂಚ್‌ ಎಕಂಪ್ಲಿಶ್‌ಡ್‌ ಡ್ಯಾಝಲ್‌1199 cc, ಮ್ಯಾನುಯಲ್‌, ಪೆಟ್ರೋಲ್, 20.09 ಕೆಎಂಪಿಎಲ್2 months waitingRs.8.25 ಲಕ್ಷ*
ಪಂಚ್‌ ಅಡ್ವೆಂಚರ್ ರಿದಮ್ ಸಿಎನ್‌ಜಿ1199 cc, ಮ್ಯಾನುಯಲ್‌, ಸಿಎನ್‌ಜಿ, 26.99 ಕಿಮೀ / ಕೆಜಿ2 months waitingRs.8.30 ಲಕ್ಷ*
ಪಂಚ್‌ ಆಕಂಪ್ಲಿಶ್ಡ್‌ ಎಸ್‌1199 cc, ಮ್ಯಾನುಯಲ್‌, ಪೆಟ್ರೋಲ್, 20.09 ಕೆಎಂಪಿಎಲ್2 months waitingRs.8.35 ಲಕ್ಷ*
ಪಂಚ್‌ ಆಕಂಪ್ಲಿಶ್ಡ್‌ ಎಎಂಟಿ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.8 ಕೆಎಂಪಿಎಲ್2 months waitingRs.8.45 ಲಕ್ಷ*
ಪಂಚ್‌ ಅಕಂಪ್ಲಿಶ್ಡ್ ಡ್ಯಾಝಲ್ ಎಸ್1199 cc, ಮ್ಯಾನುಯಲ್‌, ಪೆಟ್ರೋಲ್, 20.09 ಕೆಎಂಪಿಎಲ್2 months waitingRs.8.75 ಲಕ್ಷ*
ಪಂಚ್‌ ಆಕಂಪ್ಲಿಶ್ಡ್‌ dazzle ಎಎಂಟಿ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.8 ಕೆಎಂಪಿಎಲ್2 months waitingRs.8.85 ಲಕ್ಷ*
ಪಂಚ್‌ ಕ್ರಿಯೇಟಿವ್ ಡ್ಯುಯಲ್‌ ಟೋನ್‌1199 cc, ಮ್ಯಾನುಯಲ್‌, ಪೆಟ್ರೋಲ್, 20.09 ಕೆಎಂಪಿಎಲ್2 months waitingRs.8.85 ಲಕ್ಷ*
ಪಂಚ್‌ ಆಕಂಪ್ಲಿಶ್ಡ್‌ ಎಸ್‌ ಎಎಂಟಿ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.8 ಕೆಎಂಪಿಎಲ್2 months waitingRs.8.95 ಲಕ್ಷ*
ಪಂಚ್‌ ಆಕಂಪ್ಲಿಶ್ಡ್‌ ಸಿಎನ್‌ಜಿ1199 cc, ಮ್ಯಾನುಯಲ್‌, ಸಿಎನ್‌ಜಿ, 26.99 ಕಿಮೀ / ಕೆಜಿ2 months waitingRs.8.95 ಲಕ್ಷ*
ಪಂಚ್‌ ಕ್ರಿಯೇಟಿವ್ ಎಸ್‌ dt1199 cc, ಮ್ಯಾನುಯಲ್‌, ಪೆಟ್ರೋಲ್, 20.09 ಕೆಎಂಪಿಎಲ್2 months waitingRs.9.30 ಲಕ್ಷ*
ಪಂಚ್‌ ಅಕಂಪ್ಲಿಶ್ಡ್ ಡ್ಯಾಝಲ್ ಎಸ್ ಎಎಮ್‌ಟಿ1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.8 ಕೆಎಂಪಿಎಲ್2 months waitingRs.9.35 ಲಕ್ಷ*
ಪಂಚ್‌ ಕ್ರಿಯೇಟಿವ್ ಎಎಮ್‌ಟಿ ಡ್ಯುಯಲ್‌ ಟೋನ್‌1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.8 ಕೆಎಂಪಿಎಲ್2 months waitingRs.9.45 ಲಕ್ಷ*
ಪಂಚ್‌ ಕ್ರಿಯೇಟಿವ್ ಫ್ಲ್ಯಾಗ್‌ಶಿಪ್ ಡ್ಯುಯಲ್‌ ಟೋನ್‌1199 cc, ಮ್ಯಾನುಯಲ್‌, ಪೆಟ್ರೋಲ್, 20.09 ಕೆಎಂಪಿಎಲ್2 months waitingRs.9.60 ಲಕ್ಷ*
ಪಂಚ್‌ ಅಕಂಪ್ಲಿಶ್ಡ್ ಡ್ಯಾಝಲ್ ಎಸ್ ಸಿಎನ್‌ಜಿ(Top Model)1199 cc, ಮ್ಯಾನುಯಲ್‌, ಸಿಎನ್‌ಜಿ, 26.99 ಕಿಮೀ / ಕೆಜಿ2 months waitingRs.9.85 ಲಕ್ಷ*
ಪಂಚ್‌ ಕ್ರಿಯೇಟಿವ್ ಎಸ್ ಎಎಮ್‌ಟಿ ಡ್ಯುಯಲ್‌ ಟೋನ್‌1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.8 ಕೆಎಂಪಿಎಲ್2 months waitingRs.9.90 ಲಕ್ಷ*
ಪಂಚ್‌ ಕ್ರಿಯೇಟಿವ್ ಫ್ಲ್ಯಾಗ್‌ಶಿಪ್ ಎಎಮ್‌ಟಿ ಡ್ಯುಯಲ್‌ ಟೋನ್‌(Top Model)1199 cc, ಆಟೋಮ್ಯಾಟಿಕ್‌, ಪೆಟ್ರೋಲ್, 18.8 ಕೆಎಂಪಿಎಲ್2 months waitingRs.10.20 ಲಕ್ಷ*
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಟಾಟಾ ಪಂಚ್‌ ಇದೇ ಕಾರುಗಳೊಂದಿಗೆ ಹೋಲಿಕೆ

ಟಾಟಾ ಪಂಚ್‌ ವಿಮರ್ಶೆ

ಪಂಚ್‌ ಮೂಲಕ ಸ್ಪರ್ಧೆಯಲ್ಲಿ ಟಾಟಾ ತನ್ನ ನಾಕೌಟ್ ಹೊಡೆತವನ್ನು ಕೊಡಲು ಯತ್ನಿಸುತ್ತಿದೆ. ಆದರೆ ಟಾಟಾ ಅವರು ಅದರಲ್ಲಿ ಯಶಸ್ವಿಯಾಗಿದ್ದಾರೆಯೇ?

ಅಪ್ ಡೇಟ್: ಟಾಟಾ ಕಂಪನಿ ಪಂಚ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಪರಿಚಯಾತ್ಮಕ ಬೆಲೆಗಳು 5.49 ಲಕ್ಷ ರೂಪಾಯಿಯಿಂದ 9.4 ಲಕ್ಷ ರೂಪಾಯಿವರೆಗೆ (ಎಕ್ಸ್ ಶೋ ರೂಂ, ಭಾರತ) ಇದೆ.

ಮಾರುತಿ ಸ್ವಿಫ್ಟ್ ಮತ್ತು ಹ್ಯುಂಡೈ ಗ್ರಾಂಡ್ ಐ10 ನಿಯೋಸ್‌ನಂತಹ ಕಾರುಗಳನ್ನು ಹಿಂದಿಕ್ಕುವುದು ಅಷ್ಟು ಸಲೀಸಾಗಿಲ್ಲ. ಫೋರ್ಡ್, ಮಹೀಂದ್ರಾ ಮತ್ತು ಷೆವರ್ಲೆಟ್ ಅನೇಕ ಬಾರಿ ಪ್ರಯತ್ನಿಸಿದರೂ ಸ್ವಲ್ಪ ಯಶಸ್ಸು ಮಾತ್ರ ಗಳಿಸಲು ಸಾಧ್ಯವಾಯಿತು. ಈ ಇಬ್ಬರು ಸ್ಟಾಲ್ವಾರ್ಟ್‌ಗಳನ್ನು ಸೋಲಿಸಲು ನಿಮಗೆ ವಿಭಿನ್ನವಾದಂತಹ ವಿಧಾನವನ್ನು ಹೊಂದಿರುವ ಕಾರು ಬೇಕು. ಪಂಚ್ ಉಳಿದವರು ನೀಡುತ್ತಿರುವುದನ್ನು ಮೀರಿದ ಕೌಶಲ್ಯಯುತ ಸೆಟ್‌ಗಳನ್ನು ಹೊಂದಿದೆ. ಮಿನಿ ಎಸ್‌ಯುವಿಯನ್ನು ಬಿಡುಗಡೆ ಮಾಡುವ ಮೂಲಕ ಟಾಟಾ ಅದನ್ನು ಮಾಡಲು ಪ್ರಯತ್ನಿಸಿದೆ. ಹಾಗಾದರೆ ಟಾಟಾ ಪಂಚ್ ಆ ನಿಟ್ಟಿನಲ್ಲಿ ಬೇಕಾಗುವಷ್ಟು  ಉತ್ತಮವಾಗಿದೆಯೇ? ಉತ್ತರಗಳನ್ನು ಪಡೆಯಲು ಮುಂದೆ ಓದಿ.

ಎಕ್ಸ್‌ಟೀರಿಯರ್

ಕಾರಿನ ನೋಟವೇ ನಿಮಗೆ ಪ್ರಮುಖ ಅಂಶ ಆದರೆ, ಪಂಚ್ ತುಂಬಾನೇ ಆಕರ್ಷಕವಾಗಿ ಕಾಣುತ್ತದೆ. ಮುಂಭಾಗದಲ್ಲಿ ಇದು ದೊಡ್ಡದಾದ ಬಾನೆಟ್ ಮತ್ತು ಉಬ್ಬಿದ ಪ್ಯಾನೆಲ್‌ಗಳಿಂದ ಉತ್ತಮ ನೋಟ ಸಾಧ್ಯವಾಗಿದೆ. ಎಲ್‌ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳು ಮತ್ತು ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ನ ಪ್ಲೇಸ್‌ಮೆಂಟ್ ನಿಮಗೆ ಹ್ಯಾರಿಯರ್ ಅನ್ನು ನೆನಪಿಸುತ್ತದೆ ಮತ್ತು ಟಾಟಾ ವಿನ್ಯಾಸಕರು ಗ್ರಿಲ್ ಮತ್ತು ಬಂಪರ್‌ನ ಕೆಳಗಿನ ಅರ್ಧದ ಮೇಲೆ ಟ್ರೈ-ಆರೋ ಪ್ಯಾಟರ್ನ್ ಅನ್ನು ಸೇರಿಸಿದ್ದಾರೆ ಅದು ಸ್ವಲ್ಪ ಶಕ್ತಿಯನ್ನು ನೀಡುತ್ತದೆ. ಪ್ರೊಫೈಲ್‌ನಲ್ಲಿ ಇದು ನಿಸ್ಸಂಶಯವಾಗಿ ಒಂದು ಎಸ್‌ಯುವಿ ಆಗಿರುವ ಸಂದರ್ಭವನ್ನು ನೇರವಾದ A-ಪಿಲ್ಲರ್ ಮತ್ತು ಎತ್ತರವನ್ನು ಹೊಂದಿದೆ, ಇದು ಅದರ ದೊಡ್ಡ ಸಹೋದರ ನೆಕ್ಸಾನ್‌ಗಿಂತಲೂ ಹೆಚ್ಚು. ಮಸಲ್‌ನ ಕೊರತೆಯೂ ಇಲ್ಲ, ಇದರಲ್ಲಿ ನೀವು ಶೈನ್‌ ಆಗುವ ವೀಲ್‌ನ ಕಮಾನುಗಳನ್ನು ನೋಡಬಹುದು. ಟಾಪ್‌-ಎಂಡ್‌ ಮೊಡೆಲ್‌ಗಳಲ್ಲಿ ನೀವು ಡ್ಯುಯಲ್-ಟೋನ್ ಪೇಂಟ್‌ನ ಆಯ್ಕೆಯನ್ನು ಸಹ ಪಡೆಯುತ್ತೀರಿ ಮತ್ತು ತೀಕ್ಷ್ಣವಾಗಿ ಕತ್ತರಿಸಿದ 16-ಇಂಚಿನ ಅಲಾಯ್‌ ವೀಲ್‌ಗಳು ನೋಟವನ್ನು ಪೂರ್ಣಗೊಳಿಸುತ್ತವೆ. ಲೊವರ್‌ ವೇರಿಯೆಂಟ್‌ಗಳಲ್ಲಿ ನೀವು 15-ಇಂಚಿನ ಸ್ಟೀಲ್‌ನ ರಿಮ್‌ಗಳನ್ನು ಪಡೆಯುತ್ತಿರಿ. ಆದರೆ ಆಯ್ಕೆಯ ಪ್ಯಾಕ್‌ನ ಸಹಾಯದಿಂದ ಉನ್ನತ ಸುಸಜ್ಜಿತ ವೇರಿಯೆಂಟ್‌ನ ಕೆಳಗೆ ನೀವು ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, LED DRL ಗಳು ಮತ್ತು ಕಪ್ಪು ಬಣ್ಣದ ಎ-ಪಿಲ್ಲರ್, ಹಾಗು ಅದೇ 16-ಇಂಚಿನ ಮಿಶ್ರಲೋಹಗಳನ್ನು ಆಯ್ಕೆ ಮಾಡಬಹುದು. ಹಿಂಬದಿಯ ವಿನ್ಯಾಸವು ಸಹ ಮಸಲ್‌ಗಳನ್ನು ಹೊಂದಿದೆ ಮತ್ತು ನೀವು ಬಂಪರ್‌ನಲ್ಲಿ ಅದೇ ತ್ರಿ-ಆರೋ ಮಾದರಿಯನ್ನು ಕಾಣಬಹುದು. ಆದರೆ ಇದರ ಹೈಲೈಟ್ ಎಂದರೆ ಟೈಲ್ ಲ್ಯಾಂಪ್‌ಗಳು. ಟಾಪ್ ವೆರಿಯೆಂಟ್‌ಗಳಲ್ಲಿ, ನೀವು ಎಲ್ಇಡಿ ಲೈಟಿಂಗ್ ಮತ್ತು ಟಿಯರ್‌ಡ್ರಾಪ್‌ ಆಕಾರವನ್ನು ಟ್ರೈ-ಆರೋ ಪ್ಯಾಟರ್ನ್‌ನೊಂದಿಗೆ ಪಡೆಯುತ್ತೀರಿ. ಅದು ಅದ್ಭುತವಾಗಿ ಬೆಳಗುತ್ತದೆ. 

ಪಂಚ್ ಹೆಚ್ಚು ಭವ್ಯವಾದ ನೋಟಕ್ಕೆ ಸಹಾಯ ಮಾಡುವುದು ಅದರ ಗಾತ್ರವಾಗಿದೆ. ಇದರ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಇದು ಅಗಲ ಮತ್ತು ಎತ್ತರವಾಗಿದೆ, ಅದರೆ ಮಾರುತಿ ಸ್ವಿಫ್ಟ್‌ಗಿಂತ ಉದ್ದದಲ್ಲಿ ಸ್ವಲ್ಪ ಚಿಕ್ಕದಾಗಿದೆ. ವಾಸ್ತವವಾಗಿ, ಎತ್ತರವನ್ನು ಹೋಲಿಸಿದರೆ ಇದು ನೆಕ್ಸಾನ್‌ಗಿಂತ ಎತ್ತರವಾಗಿದೆ ಮತ್ತು ಇತರ ಪ್ಯಾರಾಮೀಟರ್‌ಗಳಲ್ಲಿ ಸ್ವಲ್ಪ ಚಿಕ್ಕದಾಗಿದೆ. ನೀವು ಅದರ 190 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ನೋಡಿದಾಗ ಈ ಕಾರು ಹ್ಯಾಚ್‌ಬ್ಯಾಕ್‌ಗಿಂತ ಎಸ್‌ಯುವಿ ಎಂದು ನಿಮಗೆ ಮನವರಿಕೆ ಮಾಡಲು ಪ್ರಯತ್ನಿಸುವಂತಿದೆ. 

  ಪಂಚ್ ಸ್ವಿಫ್ಟ್ ಗ್ರಾಂಡ್ ಐ10 ನಿಯೋಸ್ ನೆಕ್ಸಾನ್
ಉದ್ದ 3827 ಮಿ.ಮೀ 3845ಮಿಮೀ 3805 ಮಿ.ಮೀ 3993 ಮಿ.ಮೀ
ಅಗಲ 1742 ಮಿ.ಮೀ 1735ಮಿ.ಮೀ 1680ಮಿ.ಮೀ 1811 ಮಿ.ಮೀ
ಎತ್ತರ 1615 ಮಿ.ಮೀ 1530ಮಿ.ಮೀ 1520ಮಿ.ಮೀ 1606 ಮಿ.ಮೀ
ವೀಲ್‌ಬೇಸ್‌ 2445ಮಿಮೀ 2450ಮಿ.ಮೀ 2450ಮಿ.ಮೀ 2498 ಮಿ.ಮೀ

ಇಂಟೀರಿಯರ್

ಅಬ್ಬರದ ಮತ್ತು ಮುಂಭಾಗದ ಬಾಹ್ಯ ವಿನ್ಯಾಸಕ್ಕೆ ಹೋಲಿಸಿದರೆ, ಪಂಚ್‌ನ ಒಳಭಾಗವು ತುಂಬಾ ಸರಳ ಮತ್ತು ಆಧುನಿಕ ಮತ್ತು ಕ್ಲಾಸಿಯಾಗಿ ಕಾಣುತ್ತದೆ. ಸೆಂಟರ್ ಕನ್ಸೋಲ್‌ನಲ್ಲಿ ಕನಿಷ್ಠ ಬಟನ್‌ಗಳಿರುವುದರಿಂದ ಡ್ಯಾಶ್ ವಿನ್ಯಾಸವು ಸ್ವಚ್ಛವಾಗಿ ಕಾಣುತ್ತದೆ. ಬಿಳಿ ಪ್ಯಾನೆಲ್‌ ಉತ್ತಮವಾದ ಹರಿವನ್ನು ನೀಡುವ ಮೂಲಕ ಕ್ಯಾಬಿನ್ ಅದಕ್ಕಿಂತ ಅಗಲವಾಗಿ ಕಾಣುವಂತೆ ಸಹಾಯ ಮಾಡುತ್ತದೆ. ಡ್ಯಾಶ್‌ಬೋರ್ಡ್‌ನಲ್ಲಿ ಫ್ಲೋಟಿಂಗ್ 7-ಇಂಚಿನ ಡಿಸ್ಪ್ಲೇಯನ್ನು ಇರಿಸಲಾಗಿದೆ. ಇದು ನಿಮ್ಮ ಕಣ್ಣಿನ ನೋಟದ ಕೆಳಗೆ ಬರುವುದರಿಂದ ಚಲನೆಯಲ್ಲಿಯೂ ಬಳಸಲು ಸುಲಭವಾಗುತ್ತದೆ.

ಇಂಟಿರಿಯರ್‌ನ ಗುಣಮಟ್ಟದ ಬಗ್ಗೆ ಹೇಳುವುದಾದರೆ, ಇದು ಸಾಂಪ್ರದಾಯಿಕವಾಗಿ ಟಾಟಾ ವಾಹನಗಳ ದೌರ್ಬಲ್ಯವಾಗಿದೆ. ಅದರೆ ಈ ದೃಷ್ಟಿಕೋನ ಪಂಚ್‌ನೊಂದಿಗೆ ಬದಲಾಗಲಿದೆ ಎಂದು ತೋರುತ್ತದೆ. ಸಹಜವಾಗಿ, ಅದರ ಪ್ರತಿಸ್ಪರ್ಧಿಗಳಂತೆ ಪಂಚ್ ಸಹ ಸಾಫ್ಟ್-ಟಚ್ ಪ್ಲಾಸ್ಟಿಕ್‌ಗಳನ್ನು ಪಡೆಯುವುದಿಲ್ಲ ಆದರೆ ಟಾಟಾ ಬಳಸಿದ ಟೆಕಶ್ಚರ್‌ಗಳು ಸರಿಯಾಗಿ ಪ್ರೀಮಿಯಂ ಅನ್ನು ಅನುಭವಿಸಲು ಸಹಾಯ ಮಾಡುತ್ತದೆ. ಉದಾಹರಣೆಗೆ, ಡ್ಯಾಶ್‌ನಲ್ಲಿನ ಬಿಳಿ ಪ್ಯಾನೆಲ್‌ ನಲ್ಲಿ ಫೇಡ್‌ ಆಗುತ್ತಿರುವ ಟ್ರೈ-ಆರೋದ ಮಾದರಿಯನ್ನು ಹೊಂದಿದೆ. ಅದು ವಿಶಿಷ್ಟವಾಗಿ ಕಾಣುತ್ತದೆ ಮತ್ತು ಮೇಲಿನ ಕಪ್ಪು ಇನ್ಸರ್ಟ್ ಸಹ ಆಸಕ್ತಿದಾಯಕ ವಿನ್ಯಾಸವನ್ನು ಹೊಂದಿದೆ.  ಅದು ಆಕರ್ಷಕವಾಗಿ ಕಾಣುತ್ತದೆ ಮತ್ತು ಸ್ಪರ್ಶಕ್ಕೆ ಪ್ರೀಮಿಯಂ ಅನ್ನು ಅನುಭವಿಸುತ್ತದೆ. ಡ್ಯಾಶ್‌ನ ಕೆಳಭಾಗದಲ್ಲಿ ಬಳಸುವ ಪ್ಲಾಸ್ಟಿಕ್‌ಗಳು ಸಹ ಡ್ಯಾಶ್‌ನ ಮೇಲಿನ ಭಾಗದಂತೆಯೇ ಒಂದೇ ರೀತಿಯ ಮೆಟಿರೀಯಲ್‌ನ್ನು ಹೊಂದಿರುತ್ತವೆ, ಇದು ಗುಣಮಟ್ಟವು ಸ್ಥಿರವಾಗಿ ಕಾಣಲು ಸಹಾಯ ಮಾಡುತ್ತದೆ. ಗೇರ್ ಲಿವರ್, ಪವರ್ ವಿಂಡೋ ಬಟನ್‌ಗಳು ಮತ್ತು ಸ್ಟೇರಿಂಗ್‌ ವೀಲ್‌ ನಲ್ಲಿರುವ ಟಚ್‌ಪಾಯಿಂಟ್‌ಗಳು ಚೆನ್ನಾಗಿ ಫಿನಿಶಿಂಗ್‌ನ್ನು ಪಡೆದಿದೆ. ಆಲ್ಟ್ರೋಜ್‌ನಲ್ಲಿ ಬಳಸುವ ಸ್ಟೀರಿಂಗ್ ವೀಲ್ ಅನ್ನು ಇಲ್ಲಿ ಕೂಡ ಬಳಸಿಕೊಳ್ಳಲಾಗಿದೆ ಮತ್ತು ಅದರ ಚಕ್ರದಲ್ಲಿರುವ ಸಣ್ಣದಾದ ಡಯಾಮೀಟರ್‌ ಮತ್ತು ದಪ್ಪವಾಗಿ ಸುತ್ತುವರಿದ ರಿಮ್ ಇದಕ್ಕೆ ಇನ್ನಷ್ಟು ಸ್ಪೋರ್ಟಿಯಾದ ಅನುಭವ ನೀಡಲು ಸಹಾಯ ಮಾಡುತ್ತದೆ.

ಕಡಿಮೆ ಡ್ಯಾಶ್ ಮತ್ತು ವಿಂಡೋ ಲೈನ್ ಸ್ಪಷ್ಟವಾಗಿ ಕಾಣುತ್ತದೆ. ಹಾಗೆಯೇ ಮುಂಭಾಗದಲ್ಲಿ ದಪ್ಪವಾಗಿರುವ A-ಪಿಲ್ಲರ್ ಸ್ವಲ್ಪ ಬ್ಲೈಂಡ್ ಸ್ಪಾಟ್ ಅನ್ನು ಸೃಷ್ಟಿಸುತ್ತದೆ, ವಿಶೇಷವಾಗಿ ಜಂಕ್ಷನ್‌ಗಳನ್ನು ದಾಟುವಾಗ ಇದರ ಅನುಭವ ನಮಗಾಗುತ್ತದೆ. ಇದನ್ನು ಹೊರತು ಪಡಿಸಿದರೆ ಮುಂಭಾಗವು ಉತ್ತಮವಾಗಿದೆ. ಡ್ರೈವಿಂಗ್‌ನ ಸ್ಥಾನವನ್ನು ಗಮನಿಸುವಾಗ, ಆಲ್ಟ್ರೊಜ್‌ನಲ್ಲಿರುವಂತೆ ಇದರಲ್ಲಿಯೂ ಸ್ಟೀರಿಂಗ್ ವೀಲ್ ಅನ್ನು ನಿಮ್ಮ ದೇಹದಿಂದ ಸ್ವಲ್ಪ ಎಡಕ್ಕೆ ಇರಿಸಲಾಗುತ್ತದೆ. ಇದಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತದೆ. ಅದರ ಹೊರತಾಗಿ, ಸೀಟಿನ ಎತ್ತರ ಮತ್ತು ಸ್ಟೀರಿಂಗ್ ಟಿಲ್ಟ್‌ಗಾಗಿ ದೀರ್ಘ ಶ್ರೇಣಿಯ ಹೊಂದಾಣಿಕೆಯು ನಿಮ್ಮ ಆದ್ಯತೆಯ ಡ್ರೈವಿಂಗ್ ಪೊಸಿಸನ್‌ನ್ನು ಸುಲಭವಾಗಿ ಪಡೆಯಲು ಸಹಾಯ ಮಾಡುತ್ತದೆ.

ಸೌಕರ್ಯದ ದೃಷ್ಟಿಯಿಂದ, ಮುಂಭಾಗದ ಆಸನಗಳು ವಿಶಾಲ ಮತ್ತು ಸುಸಜ್ಜಿತವಾಗಿದ್ದು, ದೀರ್ಘ ಪ್ರಯಾಣಕ್ಕೂ ಸಹ ಆರಾಮದಾಯಕವಾಗಿದೆ. ಹಿಂದಿನ ಸೀಟ್‌ನಲ್ಲಿ ನೀಡಿರುವ ಸ್ಥಳಾವಕಾಶ ನಿಮಗೆ ಖಂಡಿತವಾಗಿಯೂ ಆಶ್ಚರ್ಯವನ್ನು ಉಂಟು ಮಾಡುತ್ತದೆ.  ಮುಂಭಾಗದ ಎತ್ತರದ ಆಸನಗಳಿಂದಾಗಿ ನೀವು ಹೆಡ್‌ರೂಮ್ ಮತ್ತು ಮೊಣಕಾಲು ಇಡಲು ಸಾಕಷ್ಟು ಜಾಗವನ್ನು ಪಡೆಯುತ್ತಿರಿ. ಇದರಿಂದಾಗಿ ನಿಮಗೆ ಕಾಲುಗಳನ್ನು ಉದ್ದಕ್ಕೆ ಚಾಚಿ, ವಿಶ್ರಾಂತಿ ಪಡೆಯಲು ಬೇಕಾಗುವಷ್ಟು ಸ್ಥಳ ಸಿಗುತ್ತದೆ. ಸೀಟ್‌ ನಲ್ಲಿ ತೊಡೆಯ ಕೆಳಗೆ ಸಾಕಷ್ಟು ಬೆಂಬಲ ನೀಡಲು ಉತ್ತಮವಾದ ಆಕಾರದಲ್ಲಿದೆ ಮತ್ತು ಬ್ಯಾಕ್‌ರೆಸ್ಟ್ ಆಂಗಲ್‌ ಸಹ ಆರಾಮದಾಯಕವಾಗಿದೆ. ನಾವು ಇದರಲ್ಲಿರುವ ಕೊರತೆಯನ್ನು ಪಟ್ಟಿ ಮಾಡುವುದಾದರೆ, ಇದರ ಸೀಟ್‌ನ ಕುಶನ್‌ ತುಂಬಾ ಮತ್ತನೆಯಾಗಿದೆ ಮತ್ತು ದೀರ್ಘ ಪ್ರಯಾಣದಲ್ಲಿ ಇದರಿಂದಾಗಿ ನೀವು ಸ್ವಲ್ಪ ಕಿರಿಕಿರಿಯನ್ನು ಅನುಭವಿಸಬಹುದು.

ಪ್ರಾಯೋಗಿಕತೆ

ಪ್ರಾಯೋಗಿಕತೆಯ ವಿಷಯದಲ್ಲಿ, ಮುಂಭಾಗದ ಪ್ರಯಾಣಿಕರು ಸಂತೋಷವಾಗಿರುತ್ತಾರೆ. ಮುಂದೆ ನೀವು ಕಾರಿನ ಮಾಹಿತಿ ಪುಸ್ತಕ ಮತ್ತು ಡೊಕ್ಯುಮೆಂಟ್ಸ್‌ಗಳನ್ನು ಇರಿಸಿಕೊಳ್ಳಲು ಪ್ರತ್ಯೇಕ ಕಂಪಾರ್ಟ್‌ಮೆಂಟ್‌ನೊಂದಿಗೆ ದೊಡ್ಡ ಗ್ಲೋವ್‌ಬಾಕ್ಸ್‌ನ್ನು ಪಡೆಯುತ್ತೀರಿ. ಡೋರ್ ಪಾಕೆಟ್‌ಗಳು ಅಷ್ಟೇನು ದೊಡ್ಡ ಪ್ರಮಾಣದಲ್ಲಿಲ್ಲ, ಆದರೆ ಉತ್ತಮವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಸುಲಭವಾಗಿ ಒಂದು-ಲೀಟರ್ ಬಾಟಲಿಗಾಗುವಷ್ಟು ಜಾಗವನ್ನು ಕಲ್ಪಿಸುತ್ತದೆ. ಸ್ಟೀರಿಂಗ್ ಕಾಲಮ್‌ನ ಬಲಭಾಗದಲ್ಲಿ ಮತ್ತು ಸೆಂಟರ್ ಕನ್ಸೋಲ್‌ನ ಕೆಳಗೆ ನೀವು ಮೊಬೈಲ್ ಅಥವಾ ವ್ಯಾಲೆಟ್ ಇಡಲು ಬೇಕಾಗುವಷ್ಟು ಸಣ್ಣ ಸ್ಥಳವನ್ನು ಸಹ ಪಡೆಯುತ್ತೀರಿ. ಗೇರ್ ಲಿವರ್‌ನ ಹಿಂದೆ ಎರಡು ಕಪ್ ಹೋಲ್ಡರ್‌ಗಳನ್ನು ಉತ್ತಮವಾಗಿ ವಿನ್ಯಾಸಗೊಳಿಸಲಾಗಿದೆ. ಆದರೆ ಮುಂಭಾಗದ ಪ್ರಯಾಣಿಕರ ಸೀಟ್‌ಗೆ ಹೋಲಿಸಿದರೆ ಅವುಗಳನ್ನು ಸ್ವಲ್ಪ ಹಿಂದೆ ಇರಿಸಲಾಗಿದೆ ಎಂದು ಭಾಸವಾಗುತ್ತದೆ. ಮತ್ತು ನೀವು ಅವುಗಳನ್ನು ಹಿಂದಿನ ಪ್ರಯಾಣಿಕರಿಗೆ ಬಿಟ್ಟುಕೊಡಬೇಕಾಗುತ್ತದೆ. ಏಕೆಂದರೆ ಅವರು ಯಾವುದೇ ರೀತಿಯ ಕಪ್‌ ಹೊಲ್ಡರ್‌ಗಳನ್ನು ಪಡೆಯುವುದಿಲ್ಲ! ಟಾಪ್-ಎಂಡ್ ಮೊಡೆಲ್‌ಗಳಲ್ಲಿ, ನೀವು ಹಿಂಭಾಗದಲ್ಲಿ ಆರ್ಮ್‌ರೆಸ್ಟ್ ಅನ್ನು ಪಡೆಯುತ್ತೀರಿ. ಆದರೆ ಹಿಂದಿನ ಪ್ರಯಾಣಿಕರು ಯಾವುದೇ ಕಪ್ ಹೋಲ್ಡರ್‌ಗಳನ್ನು ಮತ್ತು ಯುಎಸ್‌ಬಿ ಅಥವಾ 12 V ಚಾರ್ಜಿಂಗ್ ಪೋರ್ಟ್ ಅನ್ನು ಸಹ ಪಡೆಯುವುದಿಲ್ಲ. ಮೇಲಿನ ಭಾಗದಲ್ಲಿ, ನೀವು ಸಾಕಷ್ಟು ಡೋರ್ ಪಾಕೆಟ್‌ಗಳು ಮತ್ತು ಸೀಟ್‌ಬ್ಯಾಕ್ ಪಾಕೆಟ್‌ಗಳನ್ನು ಪಡೆಯುತ್ತೀರಿ.

ಬೂಟ್ ಸ್ಪೇಸ್‌ನ್ನು ಗಮನಿಸುವಾಗ, ಈ ಬೆಲೆಯ ರೆಂಜ್‌ನಲ್ಲಿ ಇದು ಉತ್ತಮವಾದದ್ದನ್ನು ನೀಡುತ್ತಿಲ್ಲ. 360-ಲೀಟರ್ ಬೂಟ್ ಚೆನ್ನಾಗಿರುವ ಆಕಾರದಲ್ಲಿದೆ, ಆಳವಾಗಿದೆ ಮತ್ತು ವಾರಾಂತ್ಯದ ಪ್ರಯಾಣಕ್ಕೆ ಬೇಕಾಗುವ ಬ್ಯಾಗ್‌ಗಳನ್ನು ಇದರಲ್ಲಿ ಸುಲಭವಾಗಿ ಇಡಬಹುದು. ಲೋಡಿಂಗ್ ಲಿಪ್ ಸ್ವಲ್ಪ ಎತ್ತರದಲ್ಲಿರುವುದರಿಂದ, ಇದು ದೊಡ್ಡ ಮತ್ತು ಭಾರವಾದ ವಸ್ತುಗಳನ್ನು ಲೋಡ್ ಮಾಡಲು ಹೆಚ್ಚಿನ ಶ್ರಮವನ್ನು ಬಯಸುತ್ತದೆ. ಹಿಂಬದಿಯ ಆಸನವು ಅಗತ್ಯವಿದ್ದಾಗ ನಿಮಗೆ ಹೆಚ್ಚುವರಿ ಲೋಡಿಂಗ್ ಜಾಗವನ್ನು ನೀಡಲು ಮಡಚಿಕೊಳ್ಳುತ್ತದೆ. ಆದರೆ ಸೀಟುಗಳು ಸಮತಟ್ಟಾಗಿ ಮಡಚಿಕೊಳ್ಳುವುದಿಲ್ಲ ಮತ್ತು ಮಡಚಿದಾಗ ಸೀಟ್‌ ದೊಡ್ಡ  ಪರ್ವತದಂತೆ ಕಾಣುತ್ತದೆ. 

  ಟಾಟಾ ಪಂಚ್ ಮಾರುತಿ ಇಗ್ನಿಸ್ ಮಾರುತಿ ಸ್ವಿಫ್ಟ್
ಬೂಟ್ ಸ್ಪೇಸ್ 366 ಲೀ 260 ಲೀ 268 ಲೀ

ವೈಶಿಷ್ಟ್ಯಗಳು ಮತ್ತು ಸುರಕ್ಷತೆ

ಪ್ಯೂರ್

ವೈಶಿಷ್ಟ್ಯಗಳಿಗೆ ಬಂದಾಗ, ಬೇಸ್‌ ವೇರಿಯೆಂಟ್‌ಗಳು ಹೆಚ್ಚೇನು ಕೊಡುಗೆಗಳನ್ನು ನೀಡುವುದಿಲ್ಲ. ಇದು ಮುಂಭಾಗದಲ್ಲಿ ಪವರ್ ವಿಂಡೋ, ಟಿಲ್ಟ್ ಸ್ಟೀರಿಂಗ್ ಮತ್ತು ದೇಹದ ಬಣ್ಣದ ಬಂಪರ್‌ಗಳಂತಹ  ಸಮಾನ್ಯ ವಿಷಯಗಳನ್ನು ಪಡೆಯುತ್ತದೆ. ಆದರೆ ಇತರ ಫೀಚರ್‌ನ್ನು ಆಯ್ಕೆ ಮಾಡಬಹುದಾದ ವ್ಯವಸ್ಥೆಯ ಸಹಾಯದಿಂದ, ನೀವು ಕಾರಿನಲ್ಲಿ ಅಳವಡಿಸಲಾಗಿರುವ ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ ನೊಂದಿಗೆ ಆಡಿಯೊ ಸಿಸ್ಟಮ್‌ನ್ನು ಪಡೆಯಬಹುದು.  

ಅಡ್ವೆಂಚರ್ 

ಅಡ್ವೆಂಚರ್ ವೇರಿಯೆಂಟ್‌ನ್ನು ಗಮನಿಸುವಾಗ, ಇದು ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಎಲೆಕ್ಟ್ರಿಕ್ ಒಆರ್‌ವಿಎಮ್‌ಗಳು, ಎಲ್ಲಾ ನಾಲ್ಕು ಪವರ್ ವಿಂಡೋಗಳು ಮತ್ತು ರಿಮೋಟ್ ನಲ್ಲಿ ಕೀಲೆಸ್ ಎಂಟ್ರಿಯಂತಹ ಪ್ರಮುಖ ವೈಶಿಷ್ಟ್ಯಗಳನ್ನು ಪಡೆಯುತ್ತದೆ. ಆದರೆ ಇತರ ಫೀಚರ್‌ನ್ನು ಆಯ್ಕೆ ಮಾಡಬಹುದಾದ ವ್ಯವಸ್ಥೆಯ ಸಹಾಯದಿಂದ, ನೀವು 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 6 ಸ್ಪೀಕರ್‌ನ ಸೌಂಡ್ ಸಿಸ್ಟಮ್ ಮತ್ತು ರಿವರ್ಸಿಂಗ್ ಕ್ಯಾಮೆರಾವನ್ನು ಸಹ ಇದಕ್ಕೆ ಅಳವಡಿಸಬಹುದು.  

ಆಕಂಪ್ಲಿಶಡ್‌

ಆಕಂಪ್ಲಿಶಡ್‌ ವೇರಿಯೆಂಟ್‌ನಲ್ಲಿ, ನೀವು ಎಲ್‌ಇಡಿ ಟೈಲ್ ಲ್ಯಾಂಪ್‌ಗಳು, ಕ್ರೂಸ್ ಕಂಟ್ರೋಲ್, ಎತ್ತರ-ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್ ಮತ್ತು  ಬಟನ್ ಮೂಲಕ ಎಂಜಿನ್ ಸ್ಟಾರ್ಟ್‌ನಂತಹ ಕೆಲವು ಉತ್ತಮ ವೈಶಿಷ್ಟ್ಯಗಳನ್ನು ಪಡೆಯಲು ಪ್ರಾರಂಭಿಸುತ್ತೀರಿ. ಆದರೆ ಇತರ ಫೀಚರ್‌ನ್ನು ಆಯ್ಕೆ ಮಾಡಬಹುದಾದ ವ್ಯವಸ್ಥೆಯ ಸಹಾಯದಿಂದ, ನೀವು 16-ಇಂಚಿನ ಆಲಾಯ್‌ ವೀಲ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು ಮತ್ತು ಬ್ಲ್ಯಾಕ್ಡ್-ಔಟ್ A-ಪಿಲ್ಲರ್ (ಸೈಡ್‌ ಮಿರರ್‌ನ ಪಕ್ಕದಲ್ಲಿ ಇರುವ ಕಪ್ಪು ಲೇಔಟ್‌) ಅನ್ನು ಕೂಡ ಸೇರಿಸಬಹುದು.

ಕ್ರಿಯೇಟಿವ್

ಟಾಪ್‌ ಎಂಡ್‌ ಆಗಿರುವ ಕ್ರಿಯೇಟಿವ್ ವೇರಿಯೇಂಟ್‌ ನಲ್ಲಿ, ನೀವು ಸ್ವಯಂ ಮಡಿಸುವ ಒಆರ್‌ವಿಎಮ್‌ಗಳು (ಸೈಡ್‌ ಮಿರರ್), ಆಟೋಮ್ಯಾಟಿಕ್ ಕ್ಲೈಮೇಟ್‌ ಕಂಟ್ರೋಲ್‌, ಡ್ರೈವರ್‌ ಗೆ ಬೆಂಬಲವಾಗಿ 7-ಇಂಚಿನ ಡಿಸ್‌ಪ್ಲೇ ಮತ್ತು ಹಿಂದಿನ ಸೀಟ್ ಆರ್ಮ್‌ರೆಸ್ಟ್‌ನಂತಹ ಪ್ರೀಮಿಯಂ ವೈಶಿಷ್ಟ್ಯಗಳನ್ನು ಪಡೆ‌ಯುತ್ತೀರಿ.  ನೀವು ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು, ರೈನ್-ಸೆನ್ಸಿಂಗ್ ವೈಪರ್‌ಗಳು, IRA ಕನೆಕ್ಟೆಡ್‌ ಕಾರ್ ಟೆಕ್ ಅನ್ನು ಆಯ್ಕೆಯಾಗಿ ಮತ್ತು 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನಂತಹ ಕೆಲವು ಹೆಡ್‌ಲೈನ್ ವೈಶಿಷ್ಟ್ಯಗಳನ್ನು ಸಹ ಪಡೆಯುತ್ತೀರಿ. ದುರದೃಷ್ಟವಶಾತ್, ಕಾರಿನ ಉಳಿದ ಭಾಗಗಳಿಗೆ ಹೋಲಿಸಿದರೆ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸ್ವಲ್ಪ ಹಳೆಯದಾಗಿದೆ. ಸ್ಕ್ರೀನ್‌ನ ರೆಸಲ್ಯೂಶನ್ ಅಷ್ಟೇನು ಉತ್ತಮವಾಗಿಲ್ಲ, ಗ್ರಾಫಿಕ್ಸ್‌ನ ಗುಣಮಟ್ಟ ಸ್ವಲ್ಪ ಹಳೆಯದಾಗಿದೆ ಮತ್ತು ನೀವು ಯಾವುದೇ ಮ್ಯಾನುಯಲ್‌ ಬಟನ್‌ಗಳನ್ನು ಪಡೆಯದಿರುವುದು, ವಿಶೇಷವಾಗಿ ಚಲಿಸುವಾಗ ಬಳಕ ಮಾಡಲು ಹೆಚ್ಚು ಕಷ್ಟಕರವಾಗುತ್ತದೆ.

ಪ್ಯೂರ್‌ ಅಡ್ವೆಂಚರ್  ಆಕಂಪ್ಲೀಶಡ್‌ ಕ್ರಿಯೇಟಿವ್ 
ಮುಂಭಾಗದಲ್ಲಿ ಪವರ್‌ ವಿಂಡೋಗಳು 4 ಇಂಚಿನ ಇನ್ಫೋಟೈನ್ಮೆಂಟ್ 7 ಇಂಚಿನ ಟಚ್ ಸ್ಕ್ರೀನ್ 16 ಇಂಚಿನ ಅಲಾಯ್‌ ವೀಲ್‌ಗಳು
ಟಿಲ್ಟ್ ಸ್ಟೀರಿಂಗ್ 4 ಸ್ಪೀಕರ್‌ಗಳು 6 ಸ್ಪೀಕರ್‌ಗಳು ಎಲ್ಇಡಿ ಡಿಆರ್‌ಎಲ್‌ಗಳು
ಬಾಡಿ ಕಲರ್‌ನ ಬಂಪರ್‌ಗಳು ಸ್ಟಿಯರಿಂಗ್ ಮೌಂಟೆಡ್ ಕಂಟ್ರೊಲ್ಸ್ ರಿವರ್ಸಿಂಗ್‌ ಕ್ಯಾಮೆರಾ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು
  USB ಚಾರ್ಜಿಂಗ್‌  ಪೋರ್ಟ್  ಎಲ್‌ಇಡಿ ಟೈಲ್ ಲ್ಯಾಂಪ್‌ಗಳು ರೂಫ್ ರೈಲ್ಸ್ 
ಆಯ್ಕೆ ಪ್ಯಾಕ್ ಎಲೆಕ್ಟ್ರಿಕ್ ಒಆರ್‌ವಿಎಮ್‌ ಮುಂಭಾಗದಲ್ಲಿ ಫಾಗ್ ಲ್ಯಾಂಪ್  7 ಇಂಚಿನ ಡ್ರೈವರ್ ಡಿಸ್ಪ್ಲೇ
4 ಇಂಚಿನ ಇನ್ಫೋಟೈನ್ಮೆಂಟ್  ಎಲ್ಲಾ ನಾಲ್ಕು ಪವರ್ ವಿಂಡೋಗಳು ಬಟನ್ ಮೂಲಕ ಸ್ಟಾರ್ಟ್ ಆಟೋ ಹೆಡ್‌ಲ್ಯಾಂಪ್‌ಗಳು
4 ಸ್ಪೀಕರ್‌ಗಳು ಅಂಟಿ-ಗ್ಲೇರ್‌ ಕೋಟಿಂಗ್‌ ಇರುವ ಒಳಭಾಗದ ಮಿರರ್‌  ಕ್ರೂಸ್‌ ಕಂಟ್ರೋಲ್ ಮಳೆ ಸೆನ್ಸಿಂಗ್ ವೈಪರ್‌ಗಳು
ಸ್ಟೀರಿಂಗ್‌ನಲ್ಲಿ ಆಡಿಯೋ ಕಂಟ್ರೋಲ್‌ ಕೀ ಬಳಸದೆಯೂ ರಿಮೋಟ್‌ನಲ್ಲಿ ಎಂಟ್ರಿ ಎತ್ತರ ಹೊಂದಾಣಿಕೆ ಮಾಡಬಲ್ಲ ಡ್ರೈವರ್ ಸೀಟ್ ಸ್ವಯಂ ಮಡಿಸುವ ORVM ಗಳು
  ವೀಲ್ ಕವರ್ಸ್  ಟ್ರಾಕ್ಷನ್ ಪ್ರೊ (AMTಯಲ್ಲಿ ಮಾತ್ರ) ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್
  ಬಾಡಿ ಕಲರ್ ನ ORVM   ಕೂಲ್‌ ಆಗಿರುವ ಗ್ಲೋವ್‌ಬಾಕ್ಸ್‌
  ಫಾಲೋ-ಮಿ-ಹೋಮ್ ಹೆಡ್‌ಲ್ಯಾಂಪ್‌ಗಳು ಆಯ್ಕೆಯ ಪ್ಯಾಕ್ ಹಿಂದಿನ ವೈಪರ್ ಮತ್ತು ವಾಷರ್
    16 ಇಂಚಿನ ಅಲಾಯ್‌ ವೀಲ್‌ಗಳು ಹಿಂದಿನ ಡಿಫಾಗರ್
  ಆಯ್ಕೆಯ ಪ್ಯಾಕ್ ಎಲ್ಇಡಿ ಡಿಆರ್‌ಎಲ್‌ಗಳು ಸೈಡ್‌ ಮಿರರ್‌ನ ಕೆಳಭಾಗದಲ್ಲಿ ಲೈಟ್‌ಗಳು
  7 ಇಂಚಿನ ಟಚ್ ಸ್ಕ್ರೀನ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು ಹಿಂದಿನ ಸೀಟಿನಲ್ಲಿ ಆರ್ಮ್ ರೆಸ್ಟ್
  6 ಸ್ಪೀಕರ್‌ಗಳು ಬ್ಲಾಕೆಡ್ ಔಟ್ A ಪಿಲ್ಲರ್  ಲೆದರ್ ಸ್ಟೀರಿಂಗ್ ಮತ್ತು ಗೇರ್ ಲಿವರ್
  ರಿವರ್ಸಿಂಗ್‌ ಕ್ಯಾಮೆರಾ    
      ಆಯ್ಕೆ ಪ್ಯಾಕ್
      IRA ಕನೆಕ್ಟೆಡ್‌ ಕಾರ್ ಟೆಕ್ನಾಲಾಜಿ

 

ಸುರಕ್ಷತೆ

 ಸುರಕ್ಷತಾ ವೈಶಿಷ್ಟ್ಯಗಳ ವಿಷಯದಲ್ಲಿ, ಪಂಚ್‌ನ ಬೇಸ್‌ ವೇರಿಯೆಂಟ್‌ನಿಂದ ಅದೇ ಪಟ್ಟಿಯೊಂದಿಗೆ ಬರುತ್ತದೆ. ನೀವು ಡ್ಯುಯಲ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS ಮತ್ತು ಹಿಂದಿನ ಸೀಟಿಗಾಗಿ ISOFIX ಚೈಲ್ಡ್ ಸೀಟ್ ಆಂಕಾರೇಜ್ ಪಾಯಿಂಟ್‌ಗಳನ್ನು ಪಡೆಯುತ್ತೀರಿ. ಟಾಟಾ ತನ್ನ ಟಾಪ್‌ ವೇರಿಯೆಂಟ್‌ ಗಳಲ್ಲಿ  ಅಥವಾ ಇಎಸ್‌ಪಿ (ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್)ಯಲ್ಲಿ ಹೆಚ್ಚಿನ ಏರ್‌ಬ್ಯಾಗ್‌ಗಳನ್ನು ನೀಡಿದ್ದರೆ, ಸುರಕ್ಷತಾ ಪ್ಯಾಕೇಜ್ ಇನ್ನೂ ಉತ್ತಮವಾಗಿ ಇರುತ್ತಿತ್ತು. ಅಲ್ಲದೆ, ಪಂಚ್ ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್‌ನಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಗಳಿಸಿದೆ, ಇದು ನೆಕ್ಸಾನ್‌ ಮತ್ತು ಅಲ್ಟ್ರೋಜ್‌ನ ನಂತರ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಗಳಿಸಿದ  ಟಾಟಾದ ಮೂರನೇ ಕಾರಾಗಿದೆ.

ಕಾರ್ಯಕ್ಷಮತೆ

ಟಾಟಾ ಪಂಚ್ ಕೇವಲ ಒಂದು ಎಂಜಿನ್ ಆಯ್ಕೆಯೊಂದಿಗೆ ಬರುತ್ತದೆ. 1199 ಸಿಸಿಯ ಮೂರು-ಸಿಲಿಂಡರ್‌ನ ಈ ಎಂಜಿನ್‌, 86PS ಪವರ್ ಮತ್ತು 113 Nm ಟಾರ್ಕ್ ಅನ್ನು ಉತ್ಪಾದನೆ ಮಾಡುತ್ತದೆ.  ಆಲ್ಟ್ರೋಜ್‌ನಲ್ಲಿ ಬಳಸುವ ಅದೇ ಮೋಟಾರು ಇದಾಗಿದೆ. ಆದರೆ ಟಾಟಾ ಅವರು ಕಾರ್ಯಕ್ಷಮತೆ ಮತ್ತು ಪರಿಷ್ಕರಣೆಯನ್ನು ಸುಧಾರಿಸಲು ಇದರಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದಾರೆ ಎಂದು ಹೇಳಿಕೊಳ್ಳುತ್ತದೆ.

ನೀವು ಎಂಜಿನ್ ಅನ್ನು ಪ್ರಾರಂಭಿಸಿದ ತಕ್ಷಣವೇ ಇದರಲ್ಲಾಗಿರುವ ಸುಧಾರಣೆ ನಿಮ್ಮ ಗಮನಕ್ಕ ಬರುತ್ತದೆ. ನೀವು ಕಡಿಮೆ ವೈಬ್ರೇಷನ್‌ ನ್ನು ಅನುಭವಿಸುತ್ತೀರಿ ಮತ್ತು ಮೋಟಾರ್ ಹೆಚ್ಚು ಸರಾಗವಾಗಿ ಮತ್ತು ಶಾಂತವಾಗಿ ಕಾರ್ಯ ನಿರ್ವಹಿಸುತ್ತದೆ. ಖಂಡಿತವಾಗಿ, ನೀವು 4000rpm ನಲ್ಲಿ ವಾಹನವನ್ನು ಚಲಾಯಿಸಿದಾಗ ಮೋಟಾರು ಸಾಕಷ್ಟು ಧ್ವನಿಯನ್ನು ಪಡೆಯುತ್ತದೆ ಆದರೆ ಅದು ಎಂದಿಗೂ ಅತಿಯಾಗಿದೆ ಎಂದು ಅನಿಸುವುದಿಲ್ಲ. ಈ ಎಂಜಿನ್ ಕಡಿಮೆ ಎಂಜಿನ್ ವೇಗದಲ್ಲಿಯೂ ಸಹ ಅದು ಉತ್ತಮವಾಗಿ ಸ್ಪಂದಿಸುವ ಸ್ವಭಾವದಿಂದಾಗಿ ಪಂಚ್ ಅನ್ನು ವಿಶ್ರಾಂತ ನಗರ ಪ್ರಯಾಣಿಕರನ್ನಾಗಿ ಮಾಡುತ್ತದೆ.  1500rpm ಗಿಂತ ಕಡಿಮೆ ವೇಗದಲ್ಲಿ ಇದು ಬಲವಾಗಿ ಮತ್ತು ಸುಲಭವಾಗಿ ಎಳೆಯುತ್ತದೆ, ಅಂದರೆ ನಿಯಮಿತವಾಗಿ  ಗೇರ್‌ಶಿಫ್ಟ್‌ಗಳನ್ನು ಮಾಡುತ್ತದೆ. ಇದರ ಗೇರ್‌ಶಿಫ್ಟ್ ನ ಗುಣಮಟ್ಟವು ಈ ಹಿಂದೆ ಯಾವುದೇ ಟಾಟಾ ಕಾರಿನಲ್ಲಿ ನಾವು ಅನುಭವಿಸಿದಕ್ಕಿಂತ ಅತ್ಯುತ್ತಮವಾಗಿದೆ. ಇದು ಸಕಾರಾತ್ಮಕ ಕ್ರಿಯೆಯನ್ನು ಹೊಂದಿದೆ, ಮೃದುವಾಗಿ ಗೇರ್‌ ಲಿವರ್‌ನ ಬಳಸಿದಾಗಲೂ ಇದು ಸುಲಭವಾಗಿ ಸ್ಲಾಟ್‌ಗಳಲ್ಲಿ ಗೇರ್‌ಗಳನ್ನು ಹಾಕುತ್ತದೆ. ಕ್ಲಚ್ ತುಂಬಾ ಹಗುರವಾಗಿದೆ ಮತ್ತು ಅದು ಕ್ರೀಯೆ ಮಾಡುವ ರೀತಿಯಲ್ಲಿ ಪ್ರಗತಿಯ ಅನುಭವವಾಗುತ್ತದೆ. ಆದರೆ ನಗರ ಚಾಲನೆಗೆ ನಮ್ಮ ಆಯ್ಕೆಯು AMT ವೇರಿಯೆಂಟ್‌ ಆಗಿರುತ್ತದೆ. ಈ ಬೇಸಿಕ್‌ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ ಲೈಟ್ ಥ್ರೊಟಲ್‌ನಲ್ಲಿ ತುಂಬಾನೇ ಮೃದುವಾಗಿರುತ್ತದೆ ಮತ್ತು ಟ್ರಾಫಿಕ್‌ನಲ್ಲಿ ಸಾಗುವುದು ತುಂಬಾ ಸುಲಭವಾಗಲಿದೆ. ಶಿಫ್ಟ್‌ಗಳು ಕಡಿಮೆ ವೇಗದಲ್ಲಿ ಆಶ್ಚರ್ಯಕರವಾಗಿ ಮೃದುವಾಗಿರುತ್ತವೆ, ಹಾಗೆಯೇ ಇದು ನಮ್ಮ ನಗರದ ಟ್ರಾಫಿಕ್‌ನ್ನು ನಿಭಾಯಿಸಲು ಆದರ್ಶ ಸಂಗಾತಿಯಾಗಿದೆ. ಇದರ ಕೊರತೆಯ ಬಗ್ಗೆ ಮಾತನಾಡುವಾಗ, ನೀವು ಓವರ್‌ಟೇಕ್ ಅನ್ನು ಕಾರ್ಯಗತಗೊಳಿಸಲು ಥ್ರೊಟಲ್‌ನಲ್ಲಿ (ಎಂಜಿನ್‌ಗೆ ಇಂಧನ ರವಾನಿಸುವ ಕೇಂದ್ರ) ಹೆಚ್ಚಾಗಿ ಬಳಸಲು ಹೋದರೆ ಅದು ಡೌನ್‌ಶಿಫ್ಟ್ ಮಾಡಲು ತನ್ನದೇ ಆದ ಸಮಯವನ್ನು ತೆಗೆದುಕೊಳ್ಳುತ್ತದೆ ಮತ್ತು ಇಲ್ಲಿಯೇ ಈ ಗೇರ್‌ಬಾಕ್ಸ್ ನಿಮಗೆ ನಿಧಾನವಾದ ಅನುಭವವನ್ನು ನೀಡುತ್ತದೆ. 

ಈ ಎಂಜಿನ್‌ನ ಅತಿ ದೊಡ್ಡ ನ್ಯೂನ್ಯತೆ ಹೆದ್ದಾರಿಯಲ್ಲಿ ಹೊರ ಬೀಳುತ್ತದೆ. ಪಂಚ್ ಸುಮಾರು 80-100 ಕಿ.ಮೀ ವೇಗದಲ್ಲಿ ಆರಾಮದಾಯಕವಾಗಿ ಚಲಿಸುತ್ತದೆ. ಆದರೆ ನೀವು ತ್ವರಿತವಾಗಿ ಓವರ್‌ಟೇಕ್ ಮಾಡಲು ಬಯಸಿದಾಗ, ನೀವು ಪಂಚ್‌ನ ದೊಡ್ಡ ಕೊರತೆಯನ್ನು ಅನುಭವಿಸುತ್ತೀರಿ. ಈ ಮೋಟಾರ್ ತ್ವರಿತವಾಗಿ ವೇಗವನ್ನು ಪಡೆಯಲು ಹೆಣಗಾಡುತ್ತದೆ ಮತ್ತು ಸ್ವಲ್ಪ  ಉಸಿರುಗಟ್ಟಿದ ವಾತಾವರಣವನ್ನು ಅನುಭವಿಸುತ್ತದೆ. ನೀವು ಎತ್ತರದ ಪ್ರದೇಶಕ್ಕೆ ಚಾಲನೆ ಮಾಡುವಾಗ ಈ ಸಮಸ್ಯೆಯು ಹೆಚ್ಚು ಎದ್ದುಕಾಣುತ್ತದೆ, ಅಲ್ಲಿ ಯೋಗ್ಯವಾದ ವೇಗವನ್ನು ಸಾಧಿಸಲು ನೀವು ನಿರಂತರವಾಗಿ ಗೇರನ್ನು ಬದಲಾಯಿಸಬೇಕಾಗುತ್ತದೆ.

ಪಂಚ್‌ನ ವೇಗವರ್ಧನೆಯು ಅದರ ಪ್ರಮುಖ ಪ್ರತಿಸ್ಪರ್ಧಿಗಳ ವಿರುದ್ಧ ಹೇಗೆ ಸ್ಪರ್ಧೆಯನ್ನು ಒಡ್ಡುತ್ತದೆ ಮತ್ತು ಅಂಕಿಅಂಶಗಳು ನಿಮಗೆ ಅದೇ ಕಥೆಯನ್ನು ಹೇಗೆ ಹೇಳುತ್ತವೆ ಎಂಬುದನ್ನು ಕಂಡುಹಿಡಿಯಲು ನಾವು ನಮ್ಮ VBOX ಟೈಮಿಂಗ್ ಗೇರ್ ಅನ್ನು ಪಟ್ಟಿ ಮಾಡಿದ್ದೇವೆ. 0 ದಿಂದ 100 ಕಿ.ಮೀಯಷ್ಟು ವೇಗವನ್ನು ಪಡೆಯಲು ಮ್ಯಾನುಯಲ್‌ 16.4 ಸೆಕೆಂಡುಗಳು ಮತ್ತು AMT ನಿಧಾನವಾಗಿ 18.3 ಸೆಕೆಂಡುಗಳನ್ನು ವರೆಗೆ ಸಮಯವನ್ನು ತೆಗೆದುಕೊಳ್ಳುತ್ತದೆ. ಕೆಳಗಿನ ಕೋಷ್ಟಕದಲ್ಲಿ ನೀವು ನೋಡುವಂತೆ ವೇಗವರ್ಧನೆಯಲ್ಲಿ ಅದು ಅದರ ಪ್ರತಿಸ್ಪರ್ಧಿಗಳಿಗಿಂತ ಸ್ವಲ್ಪ ನಿಧಾನವಾಗಿದೆ. 

  ಟಾಟಾ ಪಂಚ್ ಮಾರುತಿ ಇಗ್ನಿಸ್ ಮಾರುತಿ ಸ್ವಿಫ್ಟ್ ಹುಂಡೈ ಗ್ರಾಂಡ್ ಐ10 ನಿಯೋಸ್
ಗಂಟೆಗೆ 0-100ಕಿಮೀ 16.4ಸೆ 13.6ಸೆ 11.94 ಸೆ 13 ಸೆ

ರೈಡ್ ಅಂಡ್ ಹ್ಯಾಂಡಲಿಂಗ್

ರೈಡಿಂಗ್‌ನ ಗುಣಮಟ್ಟವು ಪಂಚ್‌ನ ದೊಡ್ಡ ಶಕ್ತಿಗಳಲ್ಲಿ ಒಂದಾಗಿದೆ. ರಸ್ತೆಯಲ್ಲಿರುವ ಹಿಗ್ಗುತಗ್ಗುಗಳನ್ನು ಲೆಕ್ಕಿಸದೆಯೇ ಅದು ತನ್ನ ಹಾದಿಯಲ್ಲಿರುವ ಎಲ್ಲವನ್ನೂ ನಿಭಾಯಿಸಿ ಆರಾಮವಾಗಿ ಸಾಗುತ್ತದೆ. ಕಡಿಮೆ ವೇಗದಲ್ಲಿ, ಪಂಚ್ ಅದರ 190 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು ದೀರ್ಘ-ಪ್ರಯಾಣದ ಸಸ್ಪೆನ್ಸನ್‌ ಅತಿ ದೊಡ್ಡ ಸ್ಪೀಡ್ ಬ್ರೇಕರ್‌ಗಳನ್ನು ಸುಲಭವಾಗಿ ನಿಭಾಯಿಸುತ್ತದೆ. ಗುಂಡಿಗಳು ಮತ್ತು ಕಳಪೆ ರಸ್ತೆಗಳನ್ನು ಸಹ ಇದು ಸುಲಭವಾಗಿ ನಿಭಾಯಿಸಲಾಗುತ್ತದೆ ಮತ್ತು ಸಸ್ಪೆನ್ಸನ್‌  ಮೌನವಾಗಿ ತನ್ನ ಕೆಲಸವನ್ನು ಮಾಡುತ್ತದೆ. ಹೆದ್ದಾರಿಯಲ್ಲಿಯೂ ಸಹ, ಪಂಚ್ ಆರಾಮದಾಯಕವಾದ ಸವಾರಿ ಗುಣಮಟ್ಟವನ್ನು ಹೊಂದಿದೆ ಮತ್ತು ಹೆಚ್ಚು ಮುಖ್ಯವಾಗಿ ಇದು ಸ್ಥಿರವಾಗಿರುತ್ತದೆ, ಇದು ದೂರದ ಡ್ರೈವ್‌ ಅನ್ನು ಆರಾಮದಾಯಕವಾಗಿ ಮಾಡುತ್ತದೆ.

ಪಂಚ್ ಅನ್ನು ನಿರ್ವಹಿಸುವ ವಿಷಯದಲ್ಲಿ ಸುರಕ್ಷಿತ ಮತ್ತು ಊಹಿಸಬಹುದಾಗಿದ್ದು, ಆದರೆ ಸ್ಪೋರ್ಟಿಯಾಗಿಲ್ಲ. ಇದು ಮೂಲೆಗಳಲ್ಲಿ ಸ್ವಲ್ಪ ರೊಲ್‌ ಆಗುತ್ತದೆ ಮತ್ತು ಅಂತಿಮವಾಗಿ ಇದು ಆಲ್ಟ್ರೊಜ್‌ನಂತಹ ಕಡಿಮೆ ಸ್ಲಂಗ್ ಹ್ಯಾಚ್‌ನ ಸೂಕ್ಷ್ಮತೆ ಮತ್ತು ಸಮತೋಲನವನ್ನು ಹೊಂದಿರುವುದಿಲ್ಲ. ಬ್ರೇಕಿಂಗ್ ವಿಷಯಕ್ಕೆ ಬಂದಾಗ, ಪಂಚ್ ಉತ್ತಮ ಪೆಡಲ್ ಅನುಭವದೊಂದಿಗೆ ನಿಲ್ಲಿಸುವ ಶಕ್ತಿಯನ್ನು ಹೆಚ್ಚಾಗಿ ಹೊಂದಿದೆ. 

ಆಫ್-ರೋಡಿಂಗ್

ಟಾಟಾವು ಪಂಚ್ ಸುಸಜ್ಜಿತವಾದ ಎಸ್‌ಯುವಿ ಎಂದು ಸಾಕಷ್ಟು ಪ್ರಚಾರ ಮಾಡುತ್ತಿದೆ ಮತ್ತು ಅದನ್ನು ಸಾಬೀತುಪಡಿಸಲು, ಟ್ರಾಕ್ಸನ್‌ನ್ನು ಪರೀಕ್ಷಿಸಲು ಎತ್ತರದ ರಸ್ತೆಗಳು, ಇಳಿಜಾರುಗಳು, ಆಕ್ಸಲ್ ಟ್ವಿಸ್ಟರ್‌ಗಳು, ನೀರು ನಿಂತ ಜಾಗದಲ್ಲಿ  ಮತ್ತು ಸ್ಲಿಪರಿ ವಿಭಾಗವನ್ನು ಒಳಗೊಂಡಿರುವ ಸಣ್ಣ ಆಫ್-ರೋಡ್ ಪರೀಕ್ಷೆಯನ್ನು ಇದಕ್ಕೆ ನೀಡಲಾಗಿತ್ತು. ಈ ಎಲ್ಲಾ ಪರೀಕ್ಷೆಗಳಲ್ಲಿ, ಪಂಚ್ ಆಶ್ಚರ್ಯಕರವಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿತು. ಹಾಗೆಯೇ ನಾವು ಈ ಮೂರು ಅಂಶಗಳಿಂದ ಹೆಚ್ಚು ಪ್ರಭಾವಿತರಾಗಿದ್ದೇವೆ. ಮೊದಲನೆಯದು ಆಕ್ಸಲ್ ಟ್ವಿಸ್ಟರ್ ಪರೀಕ್ಷೆಯಾಗಿದ್ದು, ಅದರ ದೀರ್ಘ-ಪ್ರಯಾಣದ ಸಸ್ಪೆನ್ಸನ್‌ನಿಂದಾಗಿ ಸಾಮಾನ್ಯ ಹ್ಯಾಚ್‌ಬ್ಯಾಕ್‌ಗಳು ಕಷ್ಟಪಡಬಹುದಾದ ಎಳೆತವನ್ನು ನಿಭಾಯಿಸಲು ಪಂಚ್‌ಗೆ ಸುಲಭವಾಗಿ ಸಾಧ್ಯವಾಯಿತು. ಏರಡನೆಯದರಲ್ಲಿ, ನೀರು ನಿಂತ ಜಾಗದಲ್ಲಿ ಪರೀಕ್ಷೆಯಿತ್ತು. ಅದರಲ್ಲಿ ನಾವು 370 ಮಿಮೀ ನಷ್ಟು ನೀರಿನ ಆಳದಲ್ಲಿ ನಡೆಸಿದ ಡ್ರೈವಿಂಗ್‌ ಟೆಸ್ಟ್‌ನಲ್ಲಿಯೂ ಇದು ಸುಲಭವಾಗಿ ಪಾಸ್‌ ಮಾಡಿದೆ. ಆಫ್-ರೋಡ್ ಮಾನದಂಡಗಳ ಪ್ರಕಾರ ಇದು ಕಡಿಮೆಯಾದರೂ (ಥಾರ್‌ನ ನೀರಿನ ವೇಡಿಂಗ್ ಆಳವು 650 ಮಿಮೀ) ಇದು ಮುಂಬೈನಂತಹ ನಗರಗಳಿಗೆ ಪರಿಪೂರ್ಣವೆಂದು ಸಾಬೀತುಪಡಿಸುತ್ತದೆ.  ಅಲ್ಲಿ ಮಳೆಯ ಸಮಯದಲ್ಲಿ ಪ್ರವಾಹವು ತುಂಬಾ ಸಾಮಾನ್ಯವಾಗಿದೆ.

ವರ್ಡಿಕ್ಟ್

ನಾವು ಪಂಚ್‌ನಲ್ಲಿ ಕಾಣಬಹುದಾದ ಒಂದು ನ್ಯೂನತೆ ಎಂದರೆ ಅದು ಪೆಟ್ರೋಲ್ ಎಂಜಿನ್ ಹೊಂದಿದೆ. ಇದು ನಗರದ ಪ್ರಯಾಣಕ್ಕೆ ಉತ್ತಮವಾಗಿದ್ದು, ಹೆದ್ದಾರಿಯಲ್ಲಿ ಬಹುಮುಖವಾಗಿರುವುದನ್ನು ತಡೆಯುವ ಪೂರ್ತಿ ಶಕ್ತಿಯ ಕೊರತೆಯಿದೆ. ಅದರ ಹೊರತಾಗಿ ಈ ಪ್ರಭಾವಶಾಲಿ ಕಾರನ್ನು ದೋಷಪೂರಿತ ಎಂದು ಹೇಳುವುದು ಸುಲಭವಲ್ಲ. ಪಂಚ್ ವಿಶಾಲ ಮತ್ತು ಆರಾಮದಾಯಕವಾಗಿದ್ದು, ಆಯ್ಕೆಯ ಪ್ಯಾಕ್‌ಗಳಿಗೆ ಧನ್ಯವಾದ ಹೇಳಬೇಕು. ಅಲ್ಲದೇ ಕಡಿಮೆ ರೂಪಾಂತರಗಳನ್ನು ಕೂಡಾ ನಿಮ್ಮ ಅವಶ್ಯಕತೆಗಳಿಗೆ ತಕ್ಕಂತೆ ಕಸ್ಟಮೈಸ್ ಮಾಡಬಹುದಾಗಿದೆ.

ಸ್ಫರ್ಧೆಯಲ್ಲಿ ಪಂಚ್ ಕಾರು ಹೈಲೈಟ್ ಆಗುವ ನಾಲ್ಕು ಬೃಹತ್ ಅಂಶಗಳಿವೆ. ಮೊದಲನೆಯದು ಸವಾರಿಯು ಗುಣಮಟ್ಟದ್ದಾಗಿದ್ದು, ಚಾಲನೆ ಮಾಡುತ್ತಿರುವ ರಸ್ತೆಯನ್ನು ಲೆಕ್ಕಿಸದಷ್ಟು ಅದ್ಭುತವಾಗಿದೆ. ಎರಡನೆಯದು ಒರಟು ರಸ್ತೆ ಸಾಮರ್ಥ್ಯ ಹೊಂದಿದ್ದು, ಇದು ಯಾವುದೇ ಪ್ರತಿಸ್ಪರ್ಧಿಗಳಿಗಿಂತ ಮೈಲುಗಳಷ್ಟು ದೂರ ಉತ್ತಮವಾಗಿದೆ. ಮೂರನೆಯ ಅಂಶವು ವಿನ್ಯಾಸವಾಗಿದ್ದು ಬೆಲೆಯಲ್ಲಿ ಹೆಚ್ಚು ಗಮನಾರ್ಹವಾಗಿದೆ ಮತ್ತು ಕೊನೆಯದು ಗುಣಮಟ್ಟದಿಂದ ಕೂಡಿದ್ದಾಗಿದೆ. ಹಳೆಯ ಟಾಟಾ ವಾಹನಗಳಿಗೆ ಹೋಲಿಸಿದರೆ, ಪಂಚ್ ಒಂದು ದೊಡ್ಡ ಜಿಗಿತವನ್ನು ಕಂಡಿದ್ದು ಹೊಸ ವಿಭಾಗದ ಮಾನದಂಡವನ್ನು ಹೊಂದಿಸಬಹುದಾಗಿದೆ.

ಟಾಟಾ ಪಂಚ್‌

ನಾವು ಇಷ್ಟಪಡುವ ವಿಷಯಗಳು

  • ಅತ್ಯುತ್ತಮ ಲುಕ್
  • ಉತ್ತಮ ಗುಣಮಟ್ಟದ ಕ್ಯಾಬಿನ್
  • ಉತ್ತಮ ಆಂತರಿಕ ಸ್ಥಳ ಮತ್ತು ಸೌಕರ್ಯ
  • ಕೆಟ್ಟ ರಸ್ತೆಗಳ ಮೇಲೆ ಆರಾಮ ಸವಾರಿ
  • ಸಣ್ಣ ಪ್ರಮಾಣದ ಆಫ್ ರೋಡ್ ಸಾಮರ್ಥ್ಯ
  • 5-ಸ್ಟಾರ್ ಗ್ಲೋಬಲ್ NCAP ಸುರಕ್ಷತಾ ರೇಟಿಂಗ್

ನಾವು ಇಷ್ಟಪಡದ ವಿಷಯಗಳು

  • ಹೈವೇ ಡ್ರೈವಿಂಗ್ ಗೆ ಎಂಜಿನ್ ನ ಶಕ್ತಿಯ ಕೊರತೆ ಇದೆ.
  • ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಗುಣಮಟ್ಟದ ಕೊರತೆ
  • ಹಿಂದಿನ ಸೀಟಿನ ಪ್ರಯಾಣಿಕರಿಗೆ ಚಾರ್ಜಿಂಗ್ ಪೋರ್ಟ್ ಅಥವಾ ಕಪ್ ಹೋಲ್ಡರ್‌ಗಳು ಲಭ್ಯವಿಲ್ಲ.

ಎಆರ್‌ಎಐ mileage18.8 ಕೆಎಂಪಿಎಲ್
ಇಂಧನದ ಪ್ರಕಾರಪೆಟ್ರೋಲ್
ಎಂಜಿನ್‌ನ ಸಾಮರ್ಥ್ಯ1199 cc
no. of cylinders3
ಮ್ಯಾಕ್ಸ್ ಪವರ್86.63bhp@6000rpm
ಗರಿಷ್ಠ ಟಾರ್ಕ್115nm@3250+/-100rpm
ಆಸನ ಸಾಮರ್ಥ್ಯ5
ಟ್ರಾನ್ಸ್ಮಿಷನ್ typeಆಟೋಮ್ಯಾಟಿಕ್‌
ಬೂಟ್‌ನ ಸಾಮರ್ಥ್ಯ366 litres
ಇಂಧನ ಟ್ಯಾಂಕ್ ಸಾಮರ್ಥ್ಯ37 litres
ಬಾಡಿ ಟೈಪ್ಎಸ್ಯುವಿ
ನೆಲದ ತೆರವುಗೊಳಿಸಲಾಗಿಲ್ಲ187 (ಎಂಎಂ)
ಸರ್ವಿಸ್ ವೆಚ್ಚrs.4712, avg. of 5 years

ಒಂದೇ ರೀತಿಯ ಕಾರುಗಳೊಂದಿಗೆ ಪಂಚ್‌ ಅನ್ನು ಹೋಲಿಕೆ ಮಾಡಿ

Car Name
ಸ೦ಚಾರಣೆಮ್ಯಾನುಯಲ್‌ / ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌ಆಟೋಮ್ಯಾಟಿಕ್‌ / ಮ್ಯಾನುಯಲ್‌ಮ್ಯಾನುಯಲ್‌ / ಆಟೋಮ್ಯಾಟಿಕ್‌
Rating
1072 ವಿರ್ಮಶೆಗಳು
444 ವಿರ್ಮಶೆಗಳು
1022 ವಿರ್ಮಶೆಗಳು
1349 ವಿರ್ಮಶೆಗಳು
729 ವಿರ್ಮಶೆಗಳು
428 ವಿರ್ಮಶೆಗಳು
617 ವಿರ್ಮಶೆಗಳು
452 ವಿರ್ಮಶೆಗಳು
548 ವಿರ್ಮಶೆಗಳು
280 ವಿರ್ಮಶೆಗಳು
ಇಂಜಿನ್1199 cc1199 cc - 1497 cc 1197 cc 1199 cc - 1497 cc 1199 cc998 cc - 1197 cc 1197 cc 1197 cc 999 cc998 cc - 1197 cc
ಇಂಧನಪೆಟ್ರೋಲ್ / ಸಿಎನ್‌ಜಿಡೀಸಲ್ / ಪೆಟ್ರೋಲ್ಪೆಟ್ರೋಲ್ / ಸಿಎನ್‌ಜಿಡೀಸಲ್ / ಪೆಟ್ರೋಲ್ / ಸಿಎನ್‌ಜಿಪೆಟ್ರೋಲ್ / ಸಿಎನ್‌ಜಿಪೆಟ್ರೋಲ್ / ಸಿಎನ್‌ಜಿಪೆಟ್ರೋಲ್ / ಸಿಎನ್‌ಜಿಪೆಟ್ರೋಲ್ / ಸಿಎನ್‌ಜಿಪೆಟ್ರೋಲ್ಪೆಟ್ರೋಲ್ / ಸಿಎನ್‌ಜಿ
ಹಳೆಯ ಶೋರೂಮ್ ಬೆಲೆ6 - 10.20 ಲಕ್ಷ8.15 - 15.80 ಲಕ್ಷ6.13 - 10.28 ಲಕ್ಷ6.65 - 10.80 ಲಕ್ಷ5.65 - 8.90 ಲಕ್ಷ7.51 - 13.04 ಲಕ್ಷ5.99 - 9.03 ಲಕ್ಷ6.66 - 9.88 ಲಕ್ಷ6 - 11.27 ಲಕ್ಷ5.54 - 7.38 ಲಕ್ಷ
ಗಾಳಿಚೀಲಗಳು266222-622-622
Power72.41 - 86.63 ಬಿಹೆಚ್ ಪಿ113.31 - 118.27 ಬಿಹೆಚ್ ಪಿ67.72 - 81.8 ಬಿಹೆಚ್ ಪಿ72.41 - 108.48 ಬಿಹೆಚ್ ಪಿ72.41 - 84.48 ಬಿಹೆಚ್ ಪಿ76.43 - 98.69 ಬಿಹೆಚ್ ಪಿ76.43 - 88.5 ಬಿಹೆಚ್ ಪಿ76.43 - 88.5 ಬಿಹೆಚ್ ಪಿ71.01 - 98.63 ಬಿಹೆಚ್ ಪಿ55.92 - 88.5 ಬಿಹೆಚ್ ಪಿ
ಮೈಲೇಜ್18.8 ಗೆ 20.09 ಕೆಎಂಪಿಎಲ್17.01 ಗೆ 24.08 ಕೆಎಂಪಿಎಲ್19.2 ಗೆ 19.4 ಕೆಎಂಪಿಎಲ್18.05 ಗೆ 23.64 ಕೆಎಂಪಿಎಲ್19 ಗೆ 20.09 ಕೆಎಂಪಿಎಲ್20.01 ಗೆ 22.89 ಕೆಎಂಪಿಎಲ್22.38 ಗೆ 22.56 ಕೆಎಂಪಿಎಲ್22.35 ಗೆ 22.94 ಕೆಎಂಪಿಎಲ್17.4 ಗೆ 20 ಕೆಎಂಪಿಎಲ್23.56 ಗೆ 25.19 ಕೆಎಂಪಿಎಲ್

ಟಾಟಾ ಪಂಚ್‌ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ

ಟಾಟಾ ಪಂಚ್‌ ಬಳಕೆದಾರರ ವಿಮರ್ಶೆಗಳು

4.5/5
ಆಧಾರಿತ1072 ಬಳಕೆದಾರರ ವಿಮರ್ಶೆಗಳು
  • ಎಲ್ಲಾ (1072)
  • Looks (290)
  • Comfort (338)
  • Mileage (278)
  • Engine (146)
  • Interior (141)
  • Space (111)
  • Price (210)
  • More ...
  • ಇತ್ತೀಚಿನ
  • ಸಹಾಯಕವಾಗಿದೆಯೆ
  • CRITICAL
  • All Rounder SUV

    Been using Punch Adventure since past 1 year and i have done many tours and it perfoms great on that...ಮತ್ತಷ್ಟು ಓದು

    ಇವರಿಂದ sangeetha
    On: Mar 18, 2024 | 346 Views
  • Brillant Technology

    I am a tata punch owner using it for more than 1 year and getting mileage of around 20 to 25 kmpl wh...ಮತ್ತಷ್ಟು ಓದು

    ಇವರಿಂದ anurag
    On: Mar 15, 2024 | 523 Views
  • Tata Punch A Peppy Drive

    Users rave about the Tata Punch for its eye catching design and compact yet spacious interior. Many ...ಮತ್ತಷ್ಟು ಓದು

    ಇವರಿಂದ sukanya
    On: Mar 14, 2024 | 1132 Views
  • Tata Punch Is A Total Game Changer

    The Tata Punch is a total game changer for me Its compact, comfortable, and driving it is a breeze. ...ಮತ್ತಷ್ಟು ಓದು

    ಇವರಿಂದ narang
    On: Mar 13, 2024 | 1062 Views
  • Mini SUV With A Punch

    A good performance sub compact SUV, The Tata punch has a spacious cabin and an attractive design. A ...ಮತ್ತಷ್ಟು ಓದು

    ಇವರಿಂದ vinay
    On: Mar 12, 2024 | 621 Views
  • ಎಲ್ಲಾ ಪಂಚ್‌ ವಿರ್ಮಶೆಗಳು ವೀಕ್ಷಿಸಿ

ಟಾಟಾ ಪಂಚ್‌ ಮೈಲೇಜ್

ಹಕ್ಕು ಸಾಧಿಸಿದ ARAI ಮೈಲೇಜ್: ಟಾಟಾ ಪಂಚ್‌ petrolis 20.09 ಕೆಎಂಪಿಎಲ್ . ಟಾಟಾ ಪಂಚ್‌ cngvariant has ಎ mileage of 26.99 ಕಿಮೀ / ಕೆಜಿ.ಸ್ವಯಂಚಾಲಿತ ರೂಪಾಂತರಗಳಿಗೆ ಹಕ್ಕು ಪಡೆದ ARAI ಮೈಲೇಜ್: .

ಮತ್ತಷ್ಟು ಓದು
ಇಂಧನದ ಪ್ರಕಾರಟ್ರಾನ್ಸ್ಮಿಷನ್ಎಆರ್‌ಎಐ mileage
ಪೆಟ್ರೋಲ್ಮ್ಯಾನುಯಲ್‌20.09 ಕೆಎಂಪಿಎಲ್
ಪೆಟ್ರೋಲ್ಆಟೋಮ್ಯಾಟಿಕ್‌18.8 ಕೆಎಂಪಿಎಲ್
ಸಿಎನ್‌ಜಿಮ್ಯಾನುಯಲ್‌26.99 ಕಿಮೀ / ಕೆಜಿ

ಟಾಟಾ ಪಂಚ್‌ ವೀಡಿಯೊಗಳು

  • Tata Punch vs Nissan Magnite vs Renault Kiger | पंच या sub-4 SUV? | Space And Practicality Compared
    14:47
    Tata Punch vs Nissan Magnite vs Renault Kiger | पंच या sub-4 SUV? | Space And Practicality Compared
    ಮಾರ್ಚ್‌ 24, 2022 | 424212 Views
  • Tata Punch - SUV Enough? Can it knock out competition? | First Drive Review | Powerdrift
    12:43
    Tata Punch - SUV Enough? Can it knock out competition? | First Drive Review | Powerdrift
    ಜೂನ್ 15, 2023 | 52644 Views
  • Tata Punch Launch Date, Expected Price, Features and More! | सबके छक्के छुड़ा देगी?
    5:07
    Tata Punch Launch Date, Expected Price, Features and More! | सबके छक्के छुड़ा देगी?
    ಜೂನ್ 15, 2023 | 167726 Views
  • Tata Punch Confirmed Details Out | What’s Hot, What’s Not? | ZigFF
    3:23
    Tata Punch Confirmed Details Out | What’s Hot, What’s Not? | ZigFF
    ಅಕ್ಟೋಬರ್ 19, 2021 | 12673 Views
  • Tata Punch Crash Test Rating: ⭐⭐⭐⭐⭐ | यहाँ भी SURPRISE है! | #in2mins
    2:31
    Tata Punch Crash Test Rating: ⭐⭐⭐⭐⭐ | यहाँ भी SURPRISE है! | #in2mins
    ಜೂನ್ 15, 2023 | 36274 Views

ಟಾಟಾ ಪಂಚ್‌ ಬಣ್ಣಗಳು

  • atomic ಆರೆಂಜ್
    atomic ಆರೆಂಜ್
  • grassland ಬೀಜ್
    grassland ಬೀಜ್
  • tropical mist
    tropical mist
  • ಉಲ್ಕೆ ಕಂಚು
    ಉಲ್ಕೆ ಕಂಚು
  • tornado ನೀಲಿ
    tornado ನೀಲಿ
  • calypso ಕೆಂಪು
    calypso ಕೆಂಪು
  • ಆರ್ಕಸ್ ವೈಟ್
    ಆರ್ಕಸ್ ವೈಟ್
  • ಡೇಟೋನಾ ಗ್ರೇ
    ಡೇಟೋನಾ ಗ್ರೇ

ಟಾಟಾ ಪಂಚ್‌ ಚಿತ್ರಗಳು

  • Tata Punch Front Left Side Image
  • Tata Punch Side View (Left)  Image
  • Tata Punch Rear Left View Image
  • Tata Punch Grille Image
  • Tata Punch Front Fog Lamp Image
  • Tata Punch Headlight Image
  • Tata Punch Taillight Image
  • Tata Punch Side Mirror (Body) Image
space Image
Found what ನೀವು were looking for?

ಟಾಟಾ ಪಂಚ್‌ Road Test

ಪರಿಗಣಿಸಲು ಹೆಚ್ಚಿನ ಕಾರು ಆಯ್ಕೆಗಳು
Ask QuestionAre you Confused?

Ask anything & get answer ರಲ್ಲಿ {0}

ಪ್ರಶ್ನೆಗಳು & ಉತ್ತರಗಳು

  • ಇತ್ತೀಚಿನ ಪ್ರಶ್ನೆಗಳು

What is the ground clearance of Tata Punch?

Vikas asked on 13 Mar 2024

The ground clearance of Tata Punch is 187 mm.

By CarDekho Experts on 13 Mar 2024

What is the boot space of Tata Punch?

Vikas asked on 12 Mar 2024

The Tata Punch offers a generous boot capacity of 366 litres.

By CarDekho Experts on 12 Mar 2024

What is the seating capacity of Tata Punch?

Vikas asked on 8 Mar 2024

The seating capacity of Tata Punch is 5.

By CarDekho Experts on 8 Mar 2024

Where is the service center?

Vikas asked on 5 Mar 2024

For this, we would suggest you visit the nearest authorized service centre of Ta...

ಮತ್ತಷ್ಟು ಓದು
By CarDekho Experts on 5 Mar 2024

What is the wheelbase of Tata Punch?

Vikas asked on 1 Mar 2024

Tata Punch wheelbase is 2445mm

By CarDekho Experts on 1 Mar 2024
space Image

ಭಾರತ ರಲ್ಲಿ ಪಂಚ್‌ ಬೆಲೆ

ನಗರರಸ್ತೆ ಬೆಲೆ
ಬೆಂಗಳೂರುRs. 7.49 - 12.80 ಲಕ್ಷ
ಮುಂಬೈRs. 7.24 - 12.12 ಲಕ್ಷ
ತಳ್ಳುRs. 7.25 - 12.14 ಲಕ್ಷ
ಹೈದರಾಬಾದ್Rs. 7.19 - 12.42 ಲಕ್ಷ
ಚೆನ್ನೈRs. 7.29 - 12.62 ಲಕ್ಷ
ಅಹ್ಮದಾಬಾದ್Rs. 6.96 - 11.55 ಲಕ್ಷ
ಲಕ್ನೋRs. 6.99 - 11.83 ಲಕ್ಷ
ಜೈಪುರRs. 7.13 - 11.85 ಲಕ್ಷ
ಪಾಟ್ನಾRs. 7.11 - 11.92 ಲಕ್ಷ
ಚಂಡೀಗಡ್Rs. 6.70 - 11.29 ಲಕ್ಷ
ನಿಮ್ಮ ನಗರವನ್ನು ಆರಿಸಿ
space Image

ಟ್ರೆಂಡಿಂಗ್ ಟಾಟಾ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಎಸ್ಯುವಿ Cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್
view ಮಾರ್ಚ್‌ offer

Similar Electric ಕಾರುಗಳು

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ
×
We need your ನಗರ to customize your experience