ಟಾಟಾ ಟಿಯಾಗೋ

Rs.5 - 8.45 ಲಕ್ಷ*
*ಹಳೆಯ ಶೋರೂಮ್ ಬೆಲೆ ನವ ದೆಹಲಿ

ಟಾಟಾ ಟಿಯಾಗೋ ನ ಪ್ರಮುಖ ಸ್ಪೆಕ್ಸ್

ಇಂಜಿನ್1199 cc
ಪವರ್72.41 - 84.82 ಬಿಹೆಚ್ ಪಿ
torque95 Nm - 113 Nm
ಟ್ರಾನ್ಸ್ಮಿಷನ್ಆಟೋಮ್ಯಾಟಿಕ್‌ / ಮ್ಯಾನುಯಲ್‌
mileage19 ಗೆ 20.09 ಕೆಎಂಪಿಎಲ್
ಫ್ಯುಯೆಲ್ಸಿಎನ್‌ಜಿ / ಪೆಟ್ರೋಲ್
  • key ವಿಶೇಷಣಗಳು
  • top ವೈಶಿಷ್ಟ್ಯಗಳು

ಟಿಯಾಗೋ ಇತ್ತೀಚಿನ ಅಪ್ಡೇಟ್

ಟಾಟಾ ಟಿಯಾಗೊದ ಇತ್ತೀಚಿನ ಅಪ್‌ಡೇಟ್ ಏನು?

ಟಾಟಾ ಮೋಟಾರ್ಸ್ ಇತ್ತೀಚೆಗೆ ಸಿಎನ್‌ಜಿ ಎಎಮ್‌ಟಿ (ಆಟೋಮೆಟೆಡ್‌ ಮ್ಯಾನುವಲ್ ಟ್ರಾನ್ಸ್‌ಮಿಷನ್) ಆವೃತ್ತಿಗಳನ್ನು ಪರಿಚಯಿಸುವ ಮೂಲಕ ಟಿಯಾಗೋದ ಆವೃತ್ತಿಗಳ ಪಟ್ಟಿಯನ್ನು ವಿಸ್ತರಿಸಿದೆ. ಇದು ಸೆಗ್ಮೆಂಟ್‌ನಲ್ಲಿ ಮೊದಲ ಬಾರಿಯಾಗಿದೆ ಮತ್ತು ವಾಸ್ತವವಾಗಿ, ಕ್ಲಚ್ ಪೆಡಲ್‌ ರಹಿತವಾದ ಚಾಲನಾ ಅನುಭವದ ಅನುಕೂಲದೊಂದಿಗೆ ಸಿಎನ್‌ಜಿ ಪವರ್‌ಟ್ರೇನ್‌ನ ಆರ್ಥಿಕತೆಯನ್ನು ಒದಗಿಸುವ ಮಾರುಕಟ್ಟೆಯಲ್ಲಿರುವ ಏಕೈಕ ಕಾರು ಇದಾಗಿದೆ. 

ಟಿಯಾಗೋದ ಬೆಲೆ ಎಷ್ಟು?

ದೆಹಲಿಯಲ್ಲಿ ಟಾಟಾ ಟಿಯಾಗೊದ ಎಕ್ಸ್ ಶೋರೂಂ ಬೆಲೆಗಳು 5.65 ಲಕ್ಷ ರೂ.ಗಳಿಂದ 8.90 ಲಕ್ಷ ರೂ.ಗಳ ವರೆಗೆ ಇದೆ. 

ಟಾಟಾ ಟಿಯಾಗೊದಲ್ಲಿ ಎಷ್ಟು ಆವೃತ್ತಿಗಳಿವೆ ?

ಟಾಟಾ ಟಿಯಾಗೊವನ್ನು  XE, XM, XT(O), XT, XZ, ಮತ್ತು XZ+ ಎಂಬ ಆರು ವಿಶಾಲವಾದ ಆವೃತ್ತಿಗಳಲ್ಲಿ ನೀಡಲಾಗುತ್ತದೆ. ಈ ಆವೃತ್ತಿಗಳು ಬೇಸಿಕ್‌ ಮೊಡೆಲ್‌ಗಳಿಗಿಂತ ಹೆಚ್ಚು ಸುಧಾರಿತ ಫೀಚರ್‌ಗಳೊಂದಿಗೆ ಆಯ್ಕೆಗಳ ರೇಂಜ್‌ ಅನ್ನು ಒದಗಿಸುತ್ತವೆ, ಖರೀದಿದಾರರು ತಮ್ಮ ಅಗತ್ಯತೆಗಳು ಮತ್ತು ಆದ್ಯತೆಗಳಿಗೆ ಸೂಕ್ತವಾದ ಟಿಯಾಗೋವನ್ನು ಆಯ್ಕೆ ಮಾಡಲು ಅನುಮತಿಸುತ್ತದೆ.

ನೀಡುವ ಹಣಕ್ಕೆ ಹೆಚ್ಚು ಮೌಲ್ಯವನ್ನು ಒದಗಿಸುವ ಆವೃತ್ತಿ ಯಾವುದು ? 

ಟಾಟಾ ಟಿಯಾಗೊ ಎಕ್ಸ್‌ಟಿ ರಿದಮ್ ಆವೃತ್ತಿಯು 6.60 ಲಕ್ಷ ರೂ. (ಎಕ್ಸ್-ಶೋರೂಮ್) ಬೆಲೆಗೆ ಹಣಕ್ಕೆ ಹೆಚ್ಚು ಮೌಲ್ಯದ ಆಯ್ಕೆಯಾಗಿದ್ದು, ಫೀಚರ್‌ಗಳು ಮತ್ತು ಬೆಲೆಯ ನಡುವೆ ಉತ್ತಮ ಸಮತೋಲನವನ್ನು ಹೊಂದಿದೆ. ಈ ಆವೃತ್ತಿಯು ಆಂಡ್ರಾಯ್ಡ್ ಆಟೋ ಮತ್ತು ಆಪಲ್‌ ಕಾರ್‌ಪ್ಲೇ ಹೊಂದಾಣಿಕೆಯೊಂದಿಗೆ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಹರ್ಮನ್-ಕಾರ್ಡನ್ ಟ್ಯೂನ್ ಮಾಡಿದ 8-ಸ್ಪೀಕರ್ ಸೌಂಡ್ ಸಿಸ್ಟಮ್, ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡಬಹುದಾದ ORVM ಗಳು ಮತ್ತು ರಿಯರ್‌ವ್ಯೂ ಕ್ಯಾಮೆರಾವನ್ನು ಒಳಗೊಂಡಿದೆ. ಈ ಫೀಚರ್‌ಗಳು ಒಟ್ಟಾರೆ ಚಾಲನೆ ಮತ್ತು ಮಾಲೀಕತ್ವದ ಅನುಭವವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ.

ಟಿಯಾಗೊ ಯಾವ ಫೀಚರ್‌ಗಳನ್ನು ಪಡೆಯುತ್ತದೆ?

ಟಾಟಾ ಟಿಯಾಗೊವು ಆಧುನಿಕ ಫೀಚರ್‌ಗಳೊಂದಿಗೆ ಸುಸಜ್ಜಿತವಾಗಿದ್ದು, ಸೌಕರ್ಯ ಮತ್ತು ಅನುಕೂಲತೆಯನ್ನು ಹೆಚ್ಚಿಸಿದೆ. ಪ್ರಮುಖ ಫೀಚರ್‌ಗಳಲ್ಲಿ ಆಪಲ್‌ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಜೊತೆಗೆ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡಿಜಿಟಲ್ ಡ್ರೈವರ್‌ನ ಡಿಸ್ಪ್ಲೇ, 8-ಸ್ಪೀಕರ್ ಸೌಂಡ್ ಸಿಸ್ಟಮ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ಕೂಲ್ಡ್ ಗ್ಲೋವ್‌ಬಾಕ್ಸ್ ಸೇರಿವೆ. ಈ ಸೌಕರ್ಯಗಳು ಟಿಯಾಗೋ ಅನ್ನು ಅದರ ಸೆಗ್ಮೆಂಟ್‌ನಲ್ಲಿ ಸ್ಪರ್ಧಾತ್ಮಕ ಆಯ್ಕೆಯನ್ನಾಗಿ ಮಾಡುತ್ತದೆ.

ಇದು ಎಷ್ಟು ವಿಶಾಲವಾಗಿದೆ?

ಟಾಟಾ ಟಿಯಾಗೊ ವಿಶಾಲವಾದ ಮತ್ತು ಆರಾಮದಾಯಕವಾದ ಒಳಭಾಗವನ್ನು ಹೊಂದಿದ್ದು, ಲಾಂಗ್ ಡ್ರೈವ್‌ಗಳಲ್ಲಿ ಸಾಕಷ್ಟು ಬೆಂಬಲವನ್ನು ನೀಡುವ ಉತ್ತಮ-ಪ್ಯಾಡ್ಡ್ ಸೀಟ್‌ಗಳನ್ನು ಹೊಂದಿದೆ. ಚಾಲಕನ ಸೀಟ್‌ನ  ಎತ್ತರವನ್ನು ಎಡ್ಜಸ್ಟ್‌ ಮಾಡಬಹುದು. ಹಿಂಬದಿಯ ಬೆಂಚ್ ಸರಿಯಾದ ಕುಶನ್‌ ಅನ್ನು ಹೊಂದಿದೆ, ಆದರೆ ಲಾಂಗ್‌ ಡ್ರೈವ್‌ನಲ್ಲಿ ಕೇವಲ ಇಬ್ಬರು ಪ್ರಯಾಣಿಕರಿಗೆ ಮಾತ್ರ ಆರಾಮದಾಯಕವಾಗಬಹುದು. ಬೂಟ್ ಸ್ಪೇಸ್ ವಿಶಾಲವಾಗಿದೆ, ಪೆಟ್ರೋಲ್ ಮೊಡೆಲ್‌ಗಳಲ್ಲಿ  242 ಲೀಟರ್ ವರೆಗೆ ಪಡೆಯುತ್ತದೆ. ಸಿಎನ್‌ಜಿ ಮಾಡೆಲ್‌ಗಳು ಕಡಿಮೆ ಬೂಟ್ ಸ್ಪೇಸ್ ನೀಡುತ್ತವೆಯಾದರೂ, ನೀವು ಇದರಲ್ಲಿ 2 ಸಣ್ಣ ಟ್ರಾಲಿ ಬ್ಯಾಗ್‌ಗಳು ಅಥವಾ 2-3 ಸಾಫ್ಟ್ ಬ್ಯಾಗ್‌ಗಳನ್ನು ಇಡಬಹುದು, ಕಡಿಮೆ ಬೂಟ್ ಸ್ಪೇಸ್ ಬಳಸುವ ಡ್ಯುಯಲ್-ಸಿಲಿಂಡರ್ ತಂತ್ರಜ್ಞಾನಕ್ಕೆ ಧನ್ಯವಾದಗಳು.

ಇದರಲ್ಲಿ ಯಾವ ಎಂಜಿನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳು ಲಭ್ಯವಿದೆ?

ಟಾಟಾ ಟಿಯಾಗೊವು 1.2-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ ಅದು 86 ಪಿಎಸ್‌ ಪವರ್ ಮತ್ತು 113 ಎನ್‌ಎಮ್‌ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 5-ಸ್ಪೀಡ್ ಎಎಮ್‌ಟಿಯೊಂದಿಗೆ ಲಭ್ಯವಿದೆ. ಸಿಎನ್‌ಜಿ ಆವೃತ್ತಿಗಳ ಎಂಜಿನ್ 73.5 ಪಿಎಸ್‌ ಮತ್ತು 95 ಎನ್‌ಎಮ್‌ ಅನ್ನು ಉತ್ಪಾದಿಸುತ್ತದೆ ಮತ್ತು ಎರಡೂ ಗೇರ್‌ಬಾಕ್ಸ್‌ಗಳ ಆಯ್ಕೆಗಳೊಂದಿಗೆ ಲಭ್ಯವಿದೆ. ಈ ಆಯ್ಕೆಗಳು ಖರೀದಿದಾರರು ತಮ್ಮ ಆದ್ಯತೆಗಳು ಮತ್ತು ಚಾಲನಾ ಅಗತ್ಯಗಳಿಗೆ ಅನುಗುಣವಾಗಿ ಸಾಂಪ್ರದಾಯಿಕ ಪೆಟ್ರೋಲ್, ಆಟೋಮೆಟೆಡ್‌ ಮ್ಯಾನುಯಲ್‌ ಮತ್ತು ಸಿಎನ್‌ಜಿ ಆಯ್ಕೆಗಳನ್ನು ಪರಿಗಣಿಸಲು ಅನುಮತಿಸುತ್ತದೆ.

ಟಿಯಾಗೊದಲ್ಲಿ ಮೈಲೇಜ್‌ ಏಷ್ಟಿದೆ ?

ಟಾಟಾ ಟಿಯಾಗೊದ ಇಂಧನ ದಕ್ಷತೆಯು ಎಂಜಿನ್ ಮತ್ತು ಗೇರ್‌ಬಾಕ್ಸ್‌ ಆಯ್ಕೆಯನ್ನು ಅವಲಂಬಿಸಿ ಬದಲಾಗುತ್ತದೆ. ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಹೊಂದಿರುವ ಪೆಟ್ರೋಲ್ ಆವೃತ್ತಿಗಾಗಿ, ಇದು ಪ್ರತಿ ಲೀ.ಗೆ 20.01 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಪೆಟ್ರೋಲ್ ಎಎಮ್‌ಟಿ ಆವೃತ್ತಿಯು ಪ್ರತಿ ಲೀ.ಗೆ 19.43 ಕಿ.ಮೀ ಯಷ್ಟು ದೂರವನ್ನು ಕ್ರಮಿಸುತ್ತದೆ. ಸಿಎನ್‌ಜಿ ಮೋಡ್‌ನಲ್ಲಿ, ಟಿಯಾಗೋ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಪ್ರಭಾವಶಾಲಿಯಾಗಿ ಪ್ರತಿ ಕೆ.ಜಿ.ಗೆ  26.49 ಕಿ.ಮೀ.ಯಷ್ಟು ಮತ್ತು ಎಎಮ್‌ಟಿಯಲ್ಲಿ ಪ್ರತಿ ಕೆ.ಜಿ.ಗೆ 28.06 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಇವು ARAI ನಿಂದ ರೇಟ್ ಮಾಡಲಾದ ಇಂಧನ ದಕ್ಷತೆಯ ಅಂಕಿಅಂಶಗಳಾಗಿವೆ ಮತ್ತು ಭಾರತೀಯ ರಸ್ತೆಗಳ ಪರಿಸ್ಥಿತಿಯ ಅವಲಂಬಿಸಿ ಸಂಖ್ಯೆಗಳು ಭಿನ್ನವಾಗಿರಬಹುದು.

ಟಾಟಾ ಟಿಯಾಗೊ ಎಷ್ಟು ಸುರಕ್ಷಿತ?

ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, ಎಬಿಎಸ್ ಜೊತೆಗೆ ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ಮತ್ತು ಕಾರ್ನರಿಂಗ್‌ ಸ್ಟೇಬಿಲಿಟಿ ಕಂಟ್ರೋಲ್‌ ಅನ್ನು ಒಳಗೊಂಡಿರುವ ಟಾಟಾ ಟಿಯಾಗೊಗೆ ಸುರಕ್ಷತೆಯು ಆದ್ಯತೆಯಾಗಿದೆ. ಟಿಯಾಗೊ 4/5-ಸ್ಟಾರ್ ಗ್ಲೋಬಲ್ NCAP ಕ್ರ್ಯಾಶ್ ಸೇಫ್ಟಿ ರೇಟಿಂಗ್ ಅನ್ನು ಸಹ ಗಳಿಸಿದೆ. 

ಎಷ್ಟು ಬಣ್ಣದ ಆಯ್ಕೆಗಳಿವೆ? 

ಟಾಟಾ ಟಿಯಾಗೊವು ಮಿಡ್‌ನೈಟ್‌ ಪ್ಲಮ್, ಡೇಟೋನಾ ಗ್ರೇ, ಓಪಲ್ ವೈಟ್, ಅರಿಜೋನಾ ಬ್ಲೂ, ಟೊರ್ನಾಡೋ ಬ್ಲೂ ಮತ್ತು ಫ್ಲೇಮ್ ರೆಡ್ ಎಂಬ ಆರು ಬಣ್ಣಗಳಲ್ಲಿ ಲಭ್ಯವಿದೆ. ನಾವು ವಿಶೇಷವಾಗಿ ಫ್ಲೇಮ್ ರೆಡ್ ಅನ್ನು ಇಷ್ಟಪಡುತ್ತೇವೆ, ಇದು ಬಣ್ಣದ ಆಯ್ಕೆಗಳ ಪಟ್ಟಿಯಲ್ಲಿ ಎದ್ದು ಕಾಣುತ್ತದೆ, ಏಕೆಂದರೆ ಅದು ಬೋಲ್ಡ್‌ ಮತ್ತು ಎನೆರ್ಜಿಟಿಕ್‌ ಆಗಿ ಕಾಣುತ್ತದೆ. ತಮ್ಮ ಕಾರಿನ ಮೇಲೆ ಎಲ್ಲರ ಗಮನವನ್ನು ಸೆಳೆಯಲು ಬಯಸುವವರಿಗೆ ಇದು ಸೂಕ್ತವಾಗಿದೆ.

ಟಾಟಾ ಟಿಯಾಗೋವನ್ನು ಖರೀದಿಸಬಹುದಾ ? 

ಟಾಟಾ ಟಿಯಾಗೊ ಬಜೆಟ್ ಸ್ನೇಹಿ ಹ್ಯಾಚ್‌ಬ್ಯಾಕ್‌ ಆಗಿ ಕಾರು ಖರೀದಿಸಲು ಇಚ್ಚಿಸುವವರಿಗೆ ಬಲವಾದ ಆಯ್ಕೆಯಾಗಿದೆ. ಅದರ ಹೊಸ ಸಿಎನ್‌ಜಿ ಎಎಮ್‌ಟಿ  ಆವೃತ್ತಿಗಳು, ವಿವಿಧ ಫೀಚರ್‌ಗಳು ಮತ್ತು ಉತ್ತಮ ಇಂಧನ ದಕ್ಷತೆಯೊಂದಿಗೆ, ಇದು ಎಲ್ಲಾ ರೇಂಜ್‌ನ ಖರೀದಿದಾರರನ್ನು ಕವರ್‌ ಮಾಡುತ್ತದೆ. ಟಿಯಾಗೋದ ಪ್ರಾಯೋಗಿಕ ವಿನ್ಯಾಸ, ಆಧುನಿಕ ಸೌಕರ್ಯಗಳು, ಸಾಲಿಡ್‌ ಆಗಿರುವ ನಿರ್ಮಾಣದ ಗುಣಮಟ್ಟ ಮತ್ತು ಸುರಕ್ಷತಾ ಪ್ಯಾಕೇಜ್‌ಗಳೊಂದಿಗೆ ಸಂಯೋಜಿಸಲ್ಪಟ್ಟಿದೆ, ಇದು ಎಂಟ್ರಿ-ಲೆವೆಲ್‌ನ ಹ್ಯಾಚ್‌ಬ್ಯಾಕ್ ಸೆಗ್ಮೆಂಟ್‌ನಲ್ಲಿ ಪ್ರಬಲ ಸ್ಪರ್ಧಿಯಾಗಿದೆ.

ನನ್ನ ಪರ್ಯಾಯಗಳು ಯಾವುವು?

ಸ್ಪರ್ಧಾತ್ಮಕ ಹ್ಯಾಚ್‌ಬ್ಯಾಕ್ ಮಾರುಕಟ್ಟೆಯಲ್ಲಿ, ಟಾಟಾ ಟಿಯಾಗೊ ಮಾರುತಿ ಸೆಲೆರಿಯೊ, ಮಾರುತಿ ವ್ಯಾಗನ್ ಆರ್ ಮತ್ತು ಸಿಟ್ರೊಯೆನ್ ಸಿ3 ನಂತಹ ಮೊಡೆಲ್‌ಗಳಿಗೆ ಸ್ಪರ್ಧೆಯನ್ನು ಒಡ್ಡುತ್ತದೆ. ಎಲೆಕ್ಟ್ರಿಕ್ ಆಯ್ಕೆಗಳನ್ನು ಪರಿಗಣಿಸುವವರಿಗೆ, ಟಾಟಾ ಟಿಯಾಗೊ ಇವಿಯು ಇದೇ ಸೆಗ್ಮೆಂಟ್‌ನಲ್ಲಿ ಪರಿಸರ ಸ್ನೇಹಿ ಪರ್ಯಾಯವನ್ನು ನೀಡುತ್ತದೆ. 

ಮತ್ತಷ್ಟು ಓದು
ಟಾಟಾ ಟಿಯಾಗೋ brochure
ಡೌನ್ಲೋಡ್ brochure for detailed information of specs, features & prices.
ಕರಪತ್ರವನ್ನು ಡೌನ್‌ಲೋಡ್ ಮಾಡಿ
ಟಿಯಾಗೋ XE(ಬೇಸ್ ಮಾಡೆಲ್)1199 cc, ಮ್ಯಾನುಯಲ್‌, ಪೆಟ್ರೋಲ್, 20.09 ಕೆಎಂಪಿಎಲ್2 months waitingRs.5 ಲಕ್ಷ*view ಫೆಬ್ರವಾರಿ offer
ಟಿಯಾಗೋ ಎಕ್ಸೆಎಮ್‌1199 cc, ಮ್ಯಾನುಯಲ್‌, ಪೆಟ್ರೋಲ್, 20.09 ಕೆಎಂಪಿಎಲ್2 months waitingRs.5.70 ಲಕ್ಷ*view ಫೆಬ್ರವಾರಿ offer
ಟಿಯಾಗೋ XE ಸಿಎನ್‌ಜಿ1199 cc, ಮ್ಯಾನುಯಲ್‌, ಸಿಎನ್‌ಜಿ, 26.49 ಕಿಮೀ / ಕೆಜಿ2 months waitingRs.6 ಲಕ್ಷ*view ಫೆಬ್ರವಾರಿ offer
ಅಗ್ರ ಮಾರಾಟ
ಟಿಯಾಗೋ ಎಕ್ಸ್ಟಟಿ1199 cc, ಮ್ಯಾನುಯಲ್‌, ಪೆಟ್ರೋಲ್, 20.09 ಕೆಎಂಪಿಎಲ್2 months waiting
Rs.6.30 ಲಕ್ಷ*view ಫೆಬ್ರವಾರಿ offer
ಅಗ್ರ ಮಾರಾಟ
ಟಿಯಾಗೋ ಎಕ್ಸೆಎಮ್‌ ಸಿಎನ್‌ಜಿ1199 cc, ಮ್ಯಾನುಯಲ್‌, ಸಿಎನ್‌ಜಿ, 26.49 ಕಿಮೀ / ಕೆಜಿ2 months waiting
Rs.6.70 ಲಕ್ಷ*view ಫೆಬ್ರವಾರಿ offer
ಎಲ್ಲಾ ರೂಪಾಂತರಗಳು ವೀಕ್ಷಿಸಿ

ಟಾಟಾ ಟಿಯಾಗೋ comparison with similar cars

ಟಾಟಾ ಟಿಯಾಗೋ
Rs.5 - 8.45 ಲಕ್ಷ*
Sponsored
ರೆನಾಲ್ಟ್ ಕ್ವಿಡ್
Rs.4.70 - 6.45 ಲಕ್ಷ*
ಟಾಟಾ ಪಂಚ್‌
Rs.6 - 10.32 ಲಕ್ಷ*
ಟಾಟಾ ಟಿಗೊರ್
Rs.6 - 9.50 ಲಕ್ಷ*
ಟಾಟಾ ಆಲ್ಟ್ರೋಝ್
Rs.6.65 - 11.30 ಲಕ್ಷ*
ಮಾರುತಿ ಸ್ವಿಫ್ಟ್
Rs.6.49 - 9.64 ಲಕ್ಷ*
ಮಾರುತಿ ವ್ಯಾಗನ್ ಆರ್‌
Rs.5.64 - 7.47 ಲಕ್ಷ*
ಮಾರುತಿ ಸೆಲೆರಿಯೊ
Rs.5.37 - 7.04 ಲಕ್ಷ*
Rating4.4806 ವಿರ್ಮಶೆಗಳುRating4.3862 ವಿರ್ಮಶೆಗಳುRating4.51.3K ವಿರ್ಮಶೆಗಳುRating4.3334 ವಿರ್ಮಶೆಗಳುRating4.61.4K ವಿರ್ಮಶೆಗಳುRating4.5327 ವಿರ್ಮಶೆಗಳುRating4.4415 ವಿರ್ಮಶೆಗಳುRating4318 ವಿರ್ಮಶೆಗಳು
Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಮ್ಯಾನುಯಲ್‌ / ಆಟೋಮ್ಯಾಟಿಕ್‌Transmissionಆಟೋಮ್ಯಾಟಿಕ್‌ / ಮ್ಯಾನುಯಲ್‌
Engine1199 ccEngine999 ccEngine1199 ccEngine1199 ccEngine1199 cc - 1497 ccEngine1197 ccEngine998 cc - 1197 ccEngine998 cc
Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್Fuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಡೀಸಲ್ / ಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿFuel Typeಪೆಟ್ರೋಲ್ / ಸಿಎನ್‌ಜಿ
Power72.41 - 84.82 ಬಿಹೆಚ್ ಪಿPower67.06 ಬಿಹೆಚ್ ಪಿPower72 - 87 ಬಿಹೆಚ್ ಪಿPower72.41 - 84.48 ಬಿಹೆಚ್ ಪಿPower72.49 - 88.76 ಬಿಹೆಚ್ ಪಿPower68.8 - 80.46 ಬಿಹೆಚ್ ಪಿPower55.92 - 88.5 ಬಿಹೆಚ್ ಪಿPower55.92 - 65.71 ಬಿಹೆಚ್ ಪಿ
Mileage19 ಗೆ 20.09 ಕೆಎಂಪಿಎಲ್Mileage21.46 ಗೆ 22.3 ಕೆಎಂಪಿಎಲ್Mileage18.8 ಗೆ 20.09 ಕೆಎಂಪಿಎಲ್Mileage19.28 ಕೆಎಂಪಿಎಲ್Mileage23.64 ಕೆಎಂಪಿಎಲ್Mileage24.8 ಗೆ 25.75 ಕೆಎಂಪಿಎಲ್Mileage23.56 ಗೆ 25.19 ಕೆಎಂಪಿಎಲ್Mileage24.97 ಗೆ 26.68 ಕೆಎಂಪಿಎಲ್
Boot Space242 LitresBoot Space279 LitresBoot Space366 LitresBoot Space419 LitresBoot Space-Boot Space265 LitresBoot Space341 LitresBoot Space-
Airbags2Airbags2Airbags2Airbags2Airbags2-6Airbags6Airbags2Airbags6
Currently Viewingವೀಕ್ಷಿಸಿ ಆಫರ್‌ಗಳುಟಿಯಾಗೋ vs ಪಂಚ್‌ಟಿಯಾಗೋ vs ಟಿಗೊರ್ಟಿಯಾಗೋ vs ಆಲ್ಟ್ರೋಝ್ಟಿಯಾಗೋ vs ಸ್ವಿಫ್ಟ್ಟಿಯಾಗೋ vs ವ್ಯಾಗನ್ ಆರ್‌ಟಿಯಾಗೋ vs ಸೆಲೆರಿಯೊ
ಇಎಮ್‌ಐ ಆರಂಭ
Your monthly EMI
Rs.12,634Edit EMI
ಆಸಕ್ತಿಯು <interestrate>% 48 ತಿಂಗಳುಗಳು ಗೆ
ವೀಕ್ಷಿಸಿ ಎಮಿ ಕೊಡುಗೆಗಳು

ಟಾಟಾ ಟಿಯಾಗೋ ವಿಮರ್ಶೆ

CarDekho Experts
""ಟಾಟಾ ಟಿಯಾಗೊವು ಅದರ ನೋಟದಿಂದ ಅದರ ಫೀಚರ್‌ಗಳ ಪಟ್ಟಿಯವರೆಗೆ, ಯಾವಾಗಲೂ ಪ್ರಭಾವಶಾಲಿ ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್ ಆಗಿದೆ. ಎಎಮ್‌ಟಿಯೊಂದಿಗೆ ಸಿಎನ್‌ಜಿ ಆಯ್ಕೆಯ ಪರಿಚಯವು ಅದನ್ನು ಈ ಸೆಗ್ಮೆಂಟ್‌ನಲ್ಲಿ ಹೆಚ್ಚು ಬಹುಮುಖ ಮತ್ತು ಶಕ್ತಿಯುತವಾಗಿ ಮಾಡುತ್ತದೆ.""

Overview

ಎಕ್ಸ್‌ಟೀರಿಯರ್

ಇಂಟೀರಿಯರ್

ಸುರಕ್ಷತೆ

ಬೂಟ್‌ನ ಸಾಮರ್ಥ್ಯ

ಕಾರ್ಯಕ್ಷಮತೆ

ರೈಡ್ ಅಂಡ್ ಹ್ಯಾಂಡಲಿಂಗ್

ವರ್ಡಿಕ್ಟ್

ಟಾಟಾ ಟಿಯಾಗೋ

  • ನಾವು ಇಷ್ಟಪಡುವ ವಿಷಯಗಳು
  • ನಾವು ಇಷ್ಟಪಡದ ವಿಷಯಗಳು
  • 2022 ರ ಆಪ್‌ಡೇಟ್‌ ಟಿಯಾಗೊವನ್ನು ಮೊದಲಿಗಿಂತ ಉತ್ತಮವಾಗಿ ಕಾಣುವಂತೆ ಮಾಡಿದೆ.
  • ಇದು 4-ಸ್ಟಾರ್ ಗ್ಲೋಬಲ್ NCAP ಸುರಕ್ಷತಾ ರೇಟಿಂಗ್ ಅನ್ನು ಹೊಂದಿದೆ.
  • CNG ಕಿಟ್ ಈಗ ಎಲ್ಲಾ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ ಮತ್ತು ಎಎಮ್‌ಟಿ ಆಯ್ಕೆಯನ್ನು ಪಡೆಯುತ್ತದೆ.
ಟಾಟಾ ಟಿಯಾಗೋ offers
Benefits On Tata Tiago Total Discount Offer Upto ₹...
21 ದಿನಗಳು ಉಳಿದಿವೆ
view ಸಂಪೂರ್ಣ offer

ಟಾಟಾ ಟಿಯಾಗೋ ಕಾರು ಸುದ್ದಿ ಮತ್ತು ಅಪ್ಡೇಟ್ಸ್

  • ಇತ್ತೀಚಿನ ಸುದ್ದಿ
  • ರೋಡ್ ಟೆಸ್ಟ್
Tata Nexon CNGಯಲ್ಲಿಯೂ ಈಗ ಡಾರ್ಕ್ ಎಡಿಷನ್‌ ಲಭ್ಯ, ಬೆಲೆಗಳು 12.70 ಲಕ್ಷ ರೂ.ನಿಂದ ಪ್ರಾರಂಭ

ನೆಕ್ಸಾನ್ ಸಿಎನ್‌ಜಿ ಡಾರ್ಕ್ ಅನ್ನು ಕ್ರಿಯೇಟಿವ್ ಪ್ಲಸ್ ಎಸ್, ಕ್ರಿಯೇಟಿವ್ ಪ್ಲಸ್ ಪಿಎಸ್ ಮತ್ತು ಫಿಯರ್‌ಲೆಸ್ ಪ್ಲಸ್ ಪಿಎಸ್ ಎಂಬ ಮೂರು ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತಿದೆ

By shreyash Jan 27, 2025
Tata Tiago, Tiago EV ಮತ್ತು Tigorಗೆ ವೇರಿಯೆಂಟ್‌ ಮತ್ತು ವೇರಿಯೆಂಟ್‌ಗಳ ಸೇರ್ಪಡೆ, ಬೆಲೆಗಳಲ್ಲಿ ರೂ 30,000 ವರೆಗೆ ಏರಿಕೆ

ಆರಂಭಿಕ ಹಂತದ ಟಾಟಾ ಕಾರುಗಳು ದೊಡ್ಡದಾದ ಫ್ರೀ-ಸ್ಟ್ಯಾಂಡಿಂಗ್ ಟಚ್‌ಸ್ಕ್ರೀನ್, ಆಪ್‌ಡೇಟ್‌ ಮಾಡಲಾದ ಡ್ರೈವರ್ ಡಿಸ್‌ಪ್ಲೇ ಮತ್ತು ಮೊಡೆಲ್‌ ವರ್ಷದ ಪರಿಷ್ಕರಣೆಗಳ ಭಾಗವಾಗಿ ಹೊಸ ವೇರಿಯೆಂಟ್‌ಗಳನ್ನು ಪಡೆಯುತ್ತವೆ

By dipan Jan 13, 2025
ಟಾಟಾದಿಂದ ಹಬ್ಬಗಳ ಸೀಸನ್ ಶುರು: ಆಯ್ದ ಟಾಟಾ ಕಾರುಗಳ ಮೇಲೆ 2.05 ಲಕ್ಷದವರೆಗೆ ಬೆಲೆ ಕಡಿತ

ಈ ಕಡಿಮೆ ಬೆಲೆಗಳು ಮತ್ತು ರಿಯಾಯಿತಿಗಳು ಅಕ್ಟೋಬರ್ 2024 ರ ಅಂತ್ಯದವರೆಗೆ ಲಭ್ಯವಿದೆ

By dipan Sep 10, 2024
2024ರ ಫೆಬ್ರವರಿಯಲ್ಲಿ ಬಿಡುಗಡೆಯಾದ ಎಲ್ಲಾ ಹೊಸ ಕಾರುಗಳು: Tata Tiago ಮತ್ತು Tigor ಸಿಎನ್‌ಜಿ ಎಎಮ್‌ಟಿ, Mahindra Thar ಅರ್ಥ್ ಎಡಿಷನ್‌, Skoda Slavia ಸ್ಟೈಲ್ ಎಡಿಷನ್‌ ಮತ್ತು ಇನ್ನಷ್ಟು

ಮುಂದಿನ ದಿನಗಳಲ್ಲಿ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲು ಸಿದ್ಧವಾಗಿರುವ ಹಲವು ಕಾರುಗಳು ತಮ್ಮ ಜಾಗತಿಕ ಚೊಚ್ಚಲ ಪ್ರವೇಶವನ್ನು ಮಾಡಿದವು, ಆದರೆ ಕೆಲವು ಪರಿಕಲ್ಪನೆಯ ರೂಪದಲ್ಲಿ ಪ್ರದರ್ಶಿಸಲ್ಪಟ್ಟವು

By shreyash Mar 06, 2024
CNG ಆಟೋಮ್ಯಾಟಿಕ್ ಆಯ್ಕೆಯು ಈಗ ಅಸ್ತಿತ್ವದಲ್ಲಿದೆ, ಇದನ್ನು ಕಾರುಗಳಲ್ಲಿ ಪರಿಚಯಿಸಲು ಏಕೆ ಹೆಚ್ಚು ಸಮಯ ತೆಗೆದುಕೊಂಡಿತು ಎಂಬುದನ್ನು ತಿಳಿಯೋಣ

ಟಾಟಾ ಟಿಯಾಗೊ ಸಿಎನ್‌ಜಿ ಮತ್ತು ಟಿಗೊರ್ ಸಿಎನ್‌ಜಿ ಭಾರತೀಯ ಮಾರುಕಟ್ಟೆಯಲ್ಲಿ ಹಸಿರು ಇಂಧನದೊಂದಿಗೆ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್ ಆಯ್ಕೆಯನ್ನು ಪಡೆದ ಮೊದಲ ಕಾರುಗಳಾಗಿವೆ.

By rohit Mar 01, 2024

ಟಾಟಾ ಟಿಯಾಗೋ ಬಳಕೆದಾರರ ವಿಮರ್ಶೆಗಳು

ಜನಪ್ರಿಯ Mentions

ಟಾಟಾ ಟಿಯಾಗೋ ಬಣ್ಣಗಳು

ಟಾಟಾ ಟಿಯಾಗೋ ಚಿತ್ರಗಳು

ಟಾಟಾ ಟಿಯಾಗೋ ಎಕ್ಸ್‌ಟೀರಿಯರ್

Recommended used Tata Tiago cars in New Delhi

ಟ್ರೆಂಡಿಂಗ್ ಟಾಟಾ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್

Popular ಹ್ಯಾಚ್ಬ್ಯಾಕ್ cars

  • ಟ್ರೆಂಡಿಂಗ್
  • ಲೇಟೆಸ್ಟ್
  • ಉಪಕಮಿಂಗ್

Rs.18.90 - 26.90 ಲಕ್ಷ*
Rs.21.90 - 30.50 ಲಕ್ಷ*
Rs.17.49 - 21.99 ಲಕ್ಷ*
Are you confused?

Ask anythin g & get answer ರಲ್ಲಿ {0}

Ask Question

ಪ್ರಶ್ನೆಗಳು & ಉತ್ತರಗಳು

ImranKhan asked on 12 Jan 2025
Q ) Does the Tata Tiago come with alloy wheels?
ImranKhan asked on 11 Jan 2025
Q ) Does Tata Tiago have a digital instrument cluster?
ImranKhan asked on 10 Jan 2025
Q ) Does the Tata Tiago have Apple CarPlay and Android Auto?
SrinivasP asked on 15 Dec 2024
Q ) Tata tiago XE cng has petrol tank
DevyaniSharma asked on 8 Jun 2024
Q ) What is the fuel tank capacity of Tata Tiago?
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ