2023ರ ಹ್ಯುಂಡೈ ವರ್ನಾ SX ವೇರಿಯೆಂಟ್ ವಿಶ್ಲೇಷಣೆ: ಇದಾಗಿದ್ಯಾ ಅತ್ಯಂತ ಮಿತವ್ಯಯಕಾರಿ?
ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮತ್ತು ಟರ್ಬೋ ಪವರ್‌ಟ್ರೇನ್ ಆಯ್ಕೆಗಳೆರಡಕ್ಕೂ ಇದು ಪ್ರವೇಶ ಹಂತದ ವೇರಿಯೆಂಟ್ ಆಗಿದೆ.
ಆರನೇ-ಪೀಳಿಗೆ ಹ್ಯುಂಡೈ ವರ್ನಾದ ಎರಡನೇ ಸ್ಥಾನದಲ್ಲಿರುವ SX ವೇರಿಯೆಂಟ್ ಸ್ಟಾಂಡರ್ಡ್ ಮತ್ತು ಟರ್ಬೋ ವೇರಿಯೆಂಟ್‌ಗಳ ನಡುವಿನ ಸಂಪರ್ಕವಾಗಿದೆ. ಇದು ಹೊಸ ಟರ್ಬೋ ಪವರ್‌ಟ್ರೇನ್ ಆರಂಭಿಕ ಸ್ಥಾನದಲ್ಲಿದ್ದು, ಸ್ವಾಭಾವಿಕವಾಗಿ ಚೂಷಿಸಲ್ಪಡುವ ಯೂನಿಟ್ ಮತ್ತು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಯೂನಿಟ್‌ಗಳನ್ನು ಹೊಂದಿದೆ. ಹಾಗಾಗಿ ನೀವು ಇದನ್ನು ಆಯ್ಕೆ ಮಾಡಬಹುದೇ ಎಂಬುದನ್ನು ನಾವೀಗ ನೋಡೋಣ:
ವೇರಿಯೆಂಟ್ |
1.5-ಲೀಟರ್ N.A. ಪೆಟ್ರೋಲ್ |
1.5-ಲೀಟರ್ ಟರ್ಬೋ-ಪೆಟ್ರೋಲ್ |
||
MT |
CVT |
MT |
DCT |
|
SX |
ರೂ 12.99 ಲಕ್ಷ |
ರೂ 14.24 ಲಕ್ಷ |
ರೂ 14.84 ಲಕ್ಷ |
ರೂ 16.08 ಲಕ್ಷ |
SX(O) |
ರೂ 14.66 ಲಕ್ಷ |
ರೂ 16.20 ಲಕ್ಷ |
ರೂ 15.99 ಲಕ್ಷ |
ರೂ 17.38 ಲಕ್ಷ |
ವ್ಯತ್ಯಾಸ |
ರೂ 1.67 ಲಕ್ಷ |
ರೂ 1.96 ಲಕ್ಷ |
ರೂ 1.15 ಲಕ್ಷ |
ರೂ 1.30 ಲಕ್ಷ |
ವರ್ನಾ SX ಅನ್ನು ಯಾಕೆ ಆಯ್ಕೆ ಮಾಡಬೇಕು ?
SX ವೇರಿಯೆಂಟ್‌ನೊಂದಿಗೆ, ಈ ವರ್ನಾ ಟಾಪ್-ಸ್ಪೆಕ್ SX(O) ಟ್ರಿಮ್‌ನಂತೆಯೇ ಕಾಣುತ್ತದೆ, ಇದಕ್ಕೆ ಕಾರಣ LED ಹೆಡ್‌ಲೈಟ್‌ಗಳು, ಕ್ರೋಮ್ ಡೋರ್ ಹ್ಯಾಂಡಲ್‌ಗಳು ಮತ್ತು 16-ಇಂಚಿನ -ಟೋನ್ ಅಲಾಯ್ ವ್ಹೀಲ್‌ಗಳು. ಅಲ್ಲದೇ ಈ SX ವೇರಿಯೆಂಟ್ ಖರೀದಿದಾರರಿಗೆ ಪೆಡಲ್ ಶಿಫ್ಟರ್‌ಗಳನ್ನು ಹೊಂದಿರುವ (ಎರಡೂ ಇಂಜಿನ್‌ಗಳೊಂದಿಗೆ) ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನ ಅನುಕೂಲತೆಯನ್ನು ನೀಡುತ್ತದೆ. ಅಲ್ಲದೇ ಪವರ್-ಫೋಲ್ಡಿಂಗ್ ORVMಗಳು, ರಿಯರ್ ವ್ಯೂ ಕ್ಯಾಮರಾ ಹಾಗೂ ಸ್ಟೀರಿಂಗ್ ವ್ಹೀಲ್ ಮತ್ತು ಗೇರ್ ಸೆಲೆಕ್ಟರ್‌ಗೆ ಲೆದರೆಟ್ ಕವರ್‌ನಂತಹ ಫೀಚರ್‌ಗಳನ್ನು ಒಳಗೊಂಡಿದೆ. ಈ SX ಸನ್‌ರೂಫ್, ಆ್ಯಂಬಿಯೆಂಟ್ ಚಾರ್ಜಿಂಗ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಫ್ರಂಟ್ ಪಾರ್ಕಿಂಗ್ ಸೆನ್ಸರ್‌ಗಳನ್ನು ಒಳಗೊಂಡಿರುವುದರಿಂದ ಈ ಸೆಡಾನ್ ಉತ್ತಮವಾಗಿ ಸಿದ್ಧಗೊಂಡಿದೆ.
ವರ್ನಾ SX ಟರ್ಬೋವನ್ನು ಯಾಕೆ ಆಯ್ಕೆ ಮಾಡಬೇಕು?
ಈ ವೇರಿಯೆಂಟ್‌ನಲ್ಲಿ ಹ್ಯುಂಡೈ ಹೊಸ ಟರ್ಬೋಚಾರ್ಜ್ ಹೊಂದಿರುವ ಪವರ್‌ಟ್ರೇನ್ ಮತ್ತು ಬ್ಲ್ಯಾಕ್ ವ್ಹೀಲ್‌ಗಳು, ರೆಡ್ ಬ್ರೇಕ್ ಕ್ಯಾಪಿಲ್ಲರ್‌ಗಳು, ಸಂಪೂರ್ಣ-ಬ್ಲ್ಯಾಕ್ ಇಂಟೀರಿಯರ್ ಮತ್ತು ಡ್ಯುಯಲ್-ಟೋನ್ ಪೈಂಟ್ ಆಯ್ಕೆಗಳಂತಹ ವಿಶಿಷ್ಟ ಸ್ಪರ್ಶಗಳನ್ನು ಸೆಡಾನ್‌ಗೆ ನೀಡುತ್ತಿದೆ. ಸ್ಟಾಂಡರ್ಡ್ SXಗೆ ಹೋಲಿಸಿದರೆ ಇದು ಬ್ಲೂಲಿಂಕ್ ಸಂಪರ್ಕಿತ ಕಾರ್ ಟೆಕ್‌ನೊಂದಿಗೆ ದೊಡ್ಡದಾದ ಇನ್ಫೋಟೈನ್‌ಮೆಂಟ್‌ನಂತಹ ಹೆಚ್ಚಿನ ಫೀಚರ್‌ಗಳನ್ನು ಪಡೆದಿದೆ.
ಇನ್ನೊಂದು ಇಂಜಿನ್‌ಗೆ ಹೋಲಿಸಿದರೆ,ಹೆಚ್ಚು ಶಕ್ತಿಶಾಲಿ ಇಂಜಿನ್, ಕಾಸ್ಮೆಟಿಕ್ ಬದಲಾವಣೆಗಳು ಮತ್ತು ದೊಡ್ಡದಾದ ಇನ್‌ಫೋಟೈನ್‌ಮೆಂಟ್ ಹೊಂದಿರುವ ಇದರ ಪ್ರೀಮಿಯಂ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಮಾಡೆಲ್‌ಗಳಿಗೆ ರೂ. 1.85 ದಷ್ಟು ಹೆಚ್ಚಾಗಿದೆ.
ಇದರಲ್ಲಿ ಏನೇನಿದೆ ಎಂಬುದರ ವಿವರಗಳು:
ಎಕ್ಸ್‌ಟೀರಿಯರ್ |
ಇಂಟೀರಿಯರ್ |
ಅರಾಮದಾಯಕತೆ ಮತ್ತ್ತು ಅನುಕೂಲ |
ಇನ್ಫೋಟೇನ್‌ಮೆಂಟ್ |
ಸುರಕ್ಷತೆ |
|
ಹೈಲೈಟ್ ಪೀಚರ್‌ಗಳು |
|
|
|
|
|
ಇತರ ಫೀಚರ್‌ಗಳು |
|
|
|
|
|
ನೀವು ಬಯಸಿದರೆ SX ಟರ್ಬೋ ಆರಿಸಿ |
|
|
|
|
|
ನೀವು ಬಯಸಿದರೆ SX(O) ಗೆ ನವೀಕರಿಸಿ |
|
|
|
|
|
ವರ್ನಾ SX ಅನ್ನು ಯಾಕೆ ಕೈಬಿಡಬೇಕು?
ಹ್ಯುಂಡೈ ರೇಂಜ್‌ನ ಅಗ್ರಸ್ಥಾನದಲ್ಲಿರುವ SX(O) ನಲ್ಲಿ ನೀಡಲಾದ ಎಲ್ಲಾ ಪ್ರೀಮಿಯಂ ಕಂಫರ್ಟ್‌ಗಳನ್ನು ವರ್ನಾದ SX ವೇರಿಯೆಂಟ್‌ನಲ್ಲಿ ಸಜ್ಜುಗೊಳಿಸಿದ್ದರೂ, SX(O) ನಲ್ಲಿ ADAS, ವಾತಾಯನದ ಮತ್ತು ಹೀಟಡ್ ಫ್ರಂಟ್ ಸೀಟುಗಳು ಮತ್ತು N.A. ಪೆಟ್ರೋಲ್ ಪವರ್‌ಟ್ರೇನ್‌ನಲ್ಲಿ ದೊಡ್ಡದಾದ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್‌ನಂತಹ ಕೆಲವು ವಿಶಿಷ್ಟ ಫೀಚರ್‌ಗಳು ಇವೆ. SX ಗೆ ಹೋಲಿಸಿದರೆ ಈ ಎಲ್ಲವನ್ನೂ ಎರಡು ಲಕ್ಷಕ್ಕಿಂದ ಕಡಿಮೆ ಪ್ರೀಮಿಯಂನಲ್ಲಿ ಪಡೆಯಬಹುದು.
ವೇರಿಯೆಂಟ್ |
ನಿರ್ಣಯ |
ಸುರಕ್ಷತೆಯ ಮೇಲೆ ಸಾಕಷ್ಟು ಗಮನ ಹೊಂದಿರುವ ಮೂಲಭೂತ ಅಂಶಗಳನ್ನು ಮಾತ್ರ ಒಳಗೊಂಡಿದೆ; ಕಟ್ಟುನಿಟ್ಟಾದ ಬಜೆಟ್‌ನಲ್ಲಿದ್ದರೆ ಮಾತ್ರ ಪರಿಗಣಿಸಿ |
|
ಸಮರ್ಥನೀಯ ಬೆಲೆ ಹೆಚ್ಚಳಕ್ಕೆ ಉಪಯುಕ್ತ ಹೆಚ್ಚುವರಿ ಫೀಚರ್‌ಗಳೊಂದಿಗೆ ಪ್ರವೇಶ ಹಂತದ ವೇರಿಯೆಂಟ್ |
|
SX |
ವಿಶೇಷವಾಗಿ CVT ಆಟೋಮ್ಯಾಟಿಕ್ ಅಥವಾ ಪ್ರವೇಶದ ಹಂತದ ಟರ್ಬೋ ವೇರಿಯೆಶಿಫಾರಸು ಮಾಡಲಾದ ವೇರಿಯೆಂಟ್ |
ನಿಮಗೆ ಸಾಕಷ್ಟು ಉತ್ತಮ ಫೀಚರ್‌ಗಳು ಮತ್ತು ADAS ಹೊಂದಿರುವ ಟಾಪ್-ಸ್ಪೆಕ್ ಪೆಟ್ರೋಲ್ -CVT ಅಥವಾ ಟರ್ಬೋ ವೇರಿಯೆಂಟ್ ಬೇಕಿದ್ದಲ್ಲಿ ಮಾತ್ರವೇ ಆಯ್ಕೆ ಮಾಡಿ |
ಎಲ್ಲಾ ಬೆಲೆಗಳು ಭಾರತದಾದ್ಯಂತದ ಪ್ರಾಸ್ತಾವಿಕ ಎಕ್ಸ್-ಶೋರೂಂ ಬೆಲೆಗಳಾಗಿವೆ
ಇನ್ನಷ್ಟು ಓದಿ : ಹ್ಯುಂಡೈ ವರ್ನಾದ ಆನ್‌ರೋಡ್ ಬೆಲೆ