• English
  • Login / Register

2024 ಭಾರತ್ ಮೊಬಿಲಿಟಿ ಎಕ್ಸ್‌ಪೋ: Tata Safari ರೆಡ್ ಡಾರ್ಕ್ ಎಡಿಷನ್‌ ಅನಾವರಣ

ಟಾಟಾ ಸಫಾರಿ ಗಾಗಿ ansh ಮೂಲಕ ಫೆಬ್ರವಾರಿ 02, 2024 11:10 am ರಂದು ಪ್ರಕಟಿಸಲಾಗಿದೆ

  • 37 Views
  • ಕಾಮೆಂಟ್‌ ಅನ್ನು ಬರೆಯಿರಿ

 ಫೇಸ್‌ಲಿಫ್ಟ್ ನ ಹಿಂದಿನ ಸಫಾರಿ ರೆಡ್ ಡಾರ್ಕ್ ಆವೃತ್ತಿಯಂತೆ, ಹೊಸದು ಸಹ ಯಾವುದೇ ವೈಶಿಷ್ಟ್ಯದ ಸೇರ್ಪಡೆಗಳೊಂದಿಗೆ ಬರುವುದಿಲ್ಲ

Tata Safari Red Dark Edition Showcased At The 2024 Bharat Mobility Expo

  • ಈ ವಿಶೇಷ ಆವೃತ್ತಿಯು ಟಾಟಾ ಸಫಾರಿಯ ಅಕಾಂಪ್ಲಿಶ್ಡ್+ 6-ಆಸನಗಳ ಆಟೋಮ್ಯಾಟಿಕ್‌ ವೇರಿಯೆಂಟ್‌ ಅನ್ನು ಆಧರಿಸಿದೆ.
  • ಹೆಡ್‌ಲೈಟ್‌ಗಳು, ಕೆಂಪು ಬ್ರೇಕ್ ಕ್ಯಾಲಿಪರ್‌ಗಳು ಮತ್ತು ಕೆಂಪು 'ಸಫಾರಿ' ಬ್ಯಾಡ್ಜಿಂಗ್‌ನಲ್ಲಿ ಸಂಪೂರ್ಣ ಕಪ್ಪು ಬಾಡಿ ಕಲರ್‌ ಮತ್ತು ಕೆಂಪು ಇನ್ಸರ್ಟ್‌ಗಳೊಂದಿಗೆ ಬರುತ್ತದೆ.
  •  ಒಳಗೆ, ಇದು ಕೆಂಪು ಆಪ್ಹೊಲ್ಸ್‌ಟೆರಿ, ಕಪ್ಪು ಕ್ಯಾಬಿನ್ ಥೀಮ್ ಮತ್ತು ಡ್ಯಾಶ್‌ಬೋರ್ಡ್, ಸೆಂಟರ್ ಕನ್ಸೋಲ್ ಹಾಗು ಡೋರ್‌ಗಳಲ್ಲಿ ಕೆಂಪು ಇನ್ಸರ್ಟ್‌ಗಳನ್ನು ಪಡೆಯುತ್ತದೆ. 
  • ಅನುಗುಣವಾದ ಡಾರ್ಕ್ ವೇರಿಯೆಂಟ್‌ನ ಬೆಲೆಯ ಪ್ರೀಮಿಯಂನೊಂದಿಗೆ ಈ ವರ್ಷದಲ್ಲಿ ಬಿಡುಗಡೆಯಾಗಬಹುದೆಂದು ನಿರೀಕ್ಷಿಸಲಾಗಿದೆ. 

 2023 ರ ಆಟೋ ಎಕ್ಸ್‌ಪೋದಲ್ಲಿ ಟಾಟಾ ಮೊದಲ ಬಾರಿಗೆ  ಪ್ರಿ-ಫೇಸ್‌ಲಿಫ್ಟ್ ಸಫಾರಿಗಾಗಿ ರೆಡ್ ಡಾರ್ಕ್ ಆವೃತ್ತಿಯನ್ನು ಪರಿಚಯಿಸಿತು ಮತ್ತು ಈಗ ಕಾರು ತಯಾರಕರು ಪ್ರಸ್ತುತ ಎಸ್‌ಯುವಿ ಆವೃತ್ತಿಗೆ ಅದೇ ವಿಶೇಷ ಆವೃತ್ತಿಯನ್ನು ಪರಿಚಯಿಸಿದ್ದಾರೆ. ಈ ಟಾಟಾ ಸಫಾರಿ ರೆಡ್ ಡಾರ್ಕ್ ಆವೃತ್ತಿಯು ಫೇಸ್‌ಲಿಫ್ಟೆಡ್ ಮಾಡೆಲ್‌ನ ಅಕಾಂಪ್ಲಿಶ್ಡ್+ 6-ಆಸನಗಳ ಆಟೋಮ್ಯಾಟಿಕ್‌ ವೇರಿಯೆಂಟ್‌ನ್ನು ಆಧರಿಸಿದೆ, ಇದು ಹಲವಾರು ಕಾಸ್ಮೆಟಿಕ್ ಬದಲಾವಣೆಗಳೊಂದಿಗೆ ಬರುತ್ತದೆ. ಇದರ ಆಫರ್‌ನಲ್ಲಿ ಏನೆಲ್ಲಾ ಇದೆ ಎಂಬುದನ್ನು ಪರಿಶೀಲಿಸಿ. 

ಎಕ್ಸ್‌ಟೀರಿಯರ್‌

Tata Safari Red Dark Edition Front
Tata Safari Red Dark Edition Rear

ಟಾಟಾ ಸಫಾರಿಯ ಪ್ರಸ್ತುತ ರೆಡ್ ಡಾರ್ಕ್ ಆವೃತ್ತಿಯು ಪೂರ್ವ-ಫೇಸ್‌ಲಿಫ್ಟ್ ಆವೃತ್ತಿಯಂತೆಯೇ ಅದೇ ರೀತಿಯ ಅಂಶಗಳನ್ನು ಪಡೆಯುತ್ತದೆ. ಎಸ್‌ಯುವಿಯ ಸುತ್ತಲೂ ರೆಡ್‌ ಇನ್ಸರ್ಟ್‌ನೊಂದಿಗೆ ಸಂಪೂರ್ಣ ಕಪ್ಪು ಕ್ಯಾಬಿನ್ ಅನ್ನು ಪಡೆಯುತ್ತದೆ. ಈ ಕೆಂಪು ಇನ್ಸರ್ಟ್‌ಗಳು ಹೆಡ್‌ಲೈಟ್‌ಗಳು, ಕೆಂಪು ಬ್ರೇಕ್ ಕ್ಯಾಲಿಪರ್‌ಗಳಲ್ಲಿ ತೆಳುವಾದ ಪಟ್ಟಿಯಂತೆ ಮತ್ತು ಮುಂಭಾಗದಲ್ಲಿ ಹಾಗು ಹಿಂಭಾಗದ ಡೋರ್‌ನಲ್ಲಿ ಕೆಂಪು 'ಸಫಾರಿ' ಬ್ಯಾಡ್ಜಿಂಗ್‌ನಲ್ಲಿ ಇರುತ್ತದೆ. ಇದು ಮುಂಭಾಗದ ಫೆಂಡರ್‌ಗಳಲ್ಲಿ '#ಡಾರ್ಕ್' ಬ್ಯಾಡ್ಜ್ ಅನ್ನು ಸಹ ಹೊಂದಿದೆ. ಈ ಬದಲಾವಣೆಗಳ ಹೊರತಾಗಿ, ಇದು 19-ಇಂಚಿನ ಕಪ್ಪು  ಅಲಾಯ್‌ ವೀಲ್‌ಗಳನ್ನು ಸಹ ಪಡೆಯುತ್ತದೆ.

ಕ್ಯಾಬಿನ್‌

Tata Safari Red Dark Edition Front Seats
Tata Safari Red Dark Edition Rear Seats

ಒಳಭಾಗವನ್ನು ಗಮನಿಸುವಾಗ, ಇದರ ಸೀಟ್‌ಗಳು ಕೆಂಪು ಬಣ್ಣದ ಲೆಥೆರೆಟ್ ಅಪ್ಹೋಲ್ಸ್‌ಟೆರಿಯನ್ನು ಹೊಂದಿದ್ದು, ಹೆಡ್‌ರೆಸ್ಟ್‌ಗಳಲ್ಲಿ '#ಡಾರ್ಕ್' ಲೋಗೋವನ್ನು ಮುದ್ರಿಸಲಾಗಿದೆ. ಕ್ಯಾಬಿನ್ ಕೆಂಪು ವಿನ್ಯಾಸದ ಅಂಶಗಳೊಂದಿಗೆ ಕಪ್ಪು ಥೀಮ್ ಅನ್ನು ಹೊಂದಿದೆ. ಈ ಅಂಶಗಳು ಡ್ಯಾಶ್‌ಬೋರ್ಡ್‌ನಲ್ಲಿ ಕೆಂಪು ಎಂಬಿಯೆಂಟ್‌ ಲೈಟ್‌ನ ರೂಪದಲ್ಲಿ ಇರುತ್ತವೆ ಮತ್ತು ಸೆಂಟರ್ ಕನ್ಸೋಲ್‌ನಲ್ಲಿ ಗ್ರ್ಯಾಬ್ ಹ್ಯಾಂಡಲ್‌ಗಳು ಮತ್ತು ಡೋರ್‌ಗಳು ಸಹ ಕೆಂಪು ಪ್ಯಾಡಿಂಗ್ ಅನ್ನು ಪಡೆಯುತ್ತವೆ. ಸಫಾರಿಯನ್ನು 7- ಮತ್ತು 6-ಸೀಟರ್ ಕಾನ್ಫಿಗರೇಶನ್‌ಗಳಲ್ಲಿ ನೀಡಲಾಗಿದ್ದರೂ, ಈ ರೆಡ್ ಡಾರ್ಕ್ ಆವೃತ್ತಿಯನ್ನು 6-ಸೀಟ್‌ನ ಆವೃತ್ತಿಯಲ್ಲಿ ಮಾತ್ರ ನೀಡಲಾಗುತ್ತದೆ. 

ಪವರ್‌ಟ್ರೇನ್‌

ಟಾಟಾ ಸಫಾರಿಯು 2-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಮಾತ್ರ ಬರುತ್ತಿದ್ದು, ಇದು 170 ಪಿಎಸ್‌ ಮತ್ತು 350 ಎನ್‌ಎಮ್‌ ನಷ್ಟು ಪವರ್‌ನ ಉತ್ಪಾದಿಸುತ್ತದೆ. ಈ ಡೀಸೆಲ್ ಎಂಜಿನ್‌ನ್ನು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗುತ್ತದೆ. ಆದಾಗಿಯೂ, ರೆಡ್ ಡಾರ್ಕ್ ಆವೃತ್ತಿಯು ಅಟೋಮ್ಯಾಟಿಕ್‌ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ಬರುತ್ತದೆ.

ತಂತ್ರಜ್ಞಾನ ಮತ್ತು ಸುರಕ್ಷತೆ  

Tata Safari Red Dark Edition Cabin

ಪ್ರೀ ಫೇಸ್‌ಲಿಫ್ಟ್ ಸಫಾರಿಯ ರೆಡ್ ಡಾರ್ಕ್ ಆವೃತ್ತಿಯು ಕೆಲವು ವೈಶಿಷ್ಟ್ಯಗಳ ಸೇರ್ಪಡೆಗಳೊಂದಿಗೆ ಬಂದಿದ್ದರೂ, ಅದು ಈ ಹೊಸ ಆವೃತ್ತಿಯಲ್ಲಿ ನೀಡಲಾಗುತ್ತಿಲ್ಲ. ಆದಾಗಿಯೂ, ಹಿಂದಿನ ರೆಡ್ ಡಾರ್ಕ್ ಆವೃತ್ತಿಯಲ್ಲಿ ಬಂದ ವೈಶಿಷ್ಟ್ಯಗಳು ಫೇಸ್‌ಲಿಫ್ಟೆಡ್ ಸಫಾರಿಯ ರೆಗುಲರ್‌ ಆವೃತ್ತಿಯಲ್ಲಿಯಲ್ಲಿ ಈಗಾಗಲೇ ಕೊಡುಗೆಯಲ್ಲಿವೆ. ಇದು 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್‌ಸ್ ಡಿಸ್ಪ್ಲೇ, 10-ಸ್ಪೀಕರ್ JBL ಸೌಂಡ್ ಸಿಸ್ಟಮ್, ಪೆನರೋಮಿಕ್‌ ಸನ್‌ರೂಫ್, ಎಲೆಕ್ಟ್ರಿಕ್ ಟೈಲ್‌ಗೇಟ್, 6-ವೇ ಪವರ್‌ಡ್‌ ಡ್ರೈವರ್ ಸೀಟ್ ಜೊತೆಗೆ ಮೆಮೊರಿ ಮತ್ತು ವೆಲ್‌ಕಮ್‌ ಫಂಕ್ಷನ್‌, ಮತ್ತು ಎಲೆಕ್ಟ್ರಿಕ್ ಬಾಸ್ ಮೋಡ್‌ನೊಂದಿಗೆ  4-ವೇ ಪವರ್ಡ್‌ ಮುಂಭಾಗದ ಪ್ರಯಾಣಿಕರ ಸೀಟ್‌ ಅನ್ನು ಒಳಗೊಂಡಿದೆ. 

ಇದನ್ನೂ ಓದಿ: ಭಾರತ್ ಮೊಬಿಲಿಟಿ ಎಕ್ಸ್‌ಪೋ 2024 ರಲ್ಲಿ ಟಾಟಾ ಕರ್ವ್‌ನ ಉತ್ಪಾದನೆಗೆ ಹತ್ತಿರವಿರುವ ಅವತಾರ್‌ನಲ್ಲಿ ಪ್ರದರ್ಶನ   

ಸುರಕ್ಷತೆಗೆ ಸಂಬಂಧಿಸಿದಂತೆ, ಇದು ಏಳು ಏರ್‌ಬ್ಯಾಗ್‌ಗಳು, ಇಬಿಡಿ ಜೊತೆಗೆ ಎಬಿಎಸ್‌, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್‌ಸಿ), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (ಟಿಪಿಎಮ್‌ಎಸ್‌), ಹಿಲ್ ಹೋಲ್ಡ್ ಅಸಿಸ್ಟ್, ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಲೇನ್ ಕೀಪ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಆಟೋ ಎಮರ್ಜೆನ್ಸಿ ಬ್ರೇಕಿಂಗ್‌ನಂತಹ ADAS (ಸುಧಾರಿತ ಚಾಲಕ ಸಹಾಯ ವ್ಯವಸ್ಥೆ) ವೈಶಿಷ್ಟ್ಯಗಳ ಹೋಸ್ಟ್ ನೊಂದಿಗೆ ಬರುತ್ತವೆ. 

ಬಿಡುಗಡೆ ಮತ್ತು ಬೆಲೆ

Tata Safari Red Dark Edition Side

ಟಾಟಾ ಸಫಾರಿ ರೆಡ್ ಡಾರ್ಕ್ ಆವೃತ್ತಿಯು ಮುಂಬರುವ ತಿಂಗಳುಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದು ರೆಗುಲರ್‌ ಅಕಾಂಪ್ಲಿಶ್ಡ್ + 6-ಸೀಟರ್‌ ಆಟೋಮ್ಯಾಟಿಕ್‌ ವೇರಿಯೆಂಟ್‌ಗಿಂತ 1 ಲಕ್ಷದವರೆಗೆ ಹೆಚ್ಚಿನ ಬೆಲೆಯನ್ನು ಹೊಂದಿರಬಹುದು. ಇದರ ಎಕ್ಸ್ ಶೋರೂಂ ಬೆಲೆ 26.99 ಲಕ್ಷ ರೂ. ನಷ್ಟಿದೆ. 

ಇನ್ನಷ್ಟು ಓದಿ : ಟಾಟಾ ಸಫಾರಿ ಡೀಸೆಲ್ 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Tata ಸಫಾರಿ

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience