Tata Harrier ಮತ್ತು Safari ಪಡೆಯಲಿದೆ ಹೊಚ್ಚ ಹೊಸ ADAS ಫೀಚರ್‌ಗಳು ಮತ್ತು ಕಲರ್ ಆಯ್ಕೆಗಳು
ಟಾಟಾ ಹ್ಯಾರಿಯರ್ ಗಾಗಿ gajanan ಮೂಲಕ ನವೆಂಬರ್ 18, 2024 03:17 pm ರಂದು ಪ್ರಕಟಿಸಲಾಗಿದೆ
- 44 Views
- ಕಾಮೆಂಟ್ ಅನ್ನು ಬರೆಯಿರಿ
ಟಾಟಾ ಹ್ಯಾರಿಯರ್ ಮತ್ತು ಸಫಾರಿ ಈಗ ಹೊಸ ಲೇನ್ ಕೀಪಿಂಗ್ ಅಸಿಸ್ಟ್ ಫಂಕ್ಷನ್‌ಗಳನ್ನು ಮತ್ತು ಎಲ್ಲಾ ಮಾಡೆಲ್‌ಗಳಲ್ಲಿ ಹೊಸ ಕಲರ್‌ಗಳೊಂದಿಗೆ ಬರುತ್ತವೆ
-
ಟಾಟಾ ಹ್ಯಾರಿಯರ್ ಮತ್ತು ಸಫಾರಿ ಈಗ ಲೇನ್ ಸೆಂಟ್ರಿಂಗ್‌ನೊಂದಿಗೆ ಹೊಸ ಲೇನ್ ಕೀಪಿಂಗ್ ಅಸಿಸ್ಟ್ ಮತ್ತು ಅಡಾಪ್ಟಿವ್ ಸ್ಟೀರಿಂಗ್ ಅಸಿಸ್ಟ್ ಅನ್ನು ಒಳಗೊಂಡಿದೆ.
-
ಹ್ಯಾರಿಯರ್‌ನ ಕೆಳ ಮಟ್ಟದ ಮತ್ತು ಟಾಪ್-ಸ್ಪೆಕ್ ವೇರಿಯಂಟ್‌ಗಳು ಪ್ರತಿ ವೇರಿಯಂಟ್ ಅನ್ನು ಅವಲಂಬಿಸಿ 2 ಹೆಚ್ಚುವರಿ ಕಲರ್ ಆಯ್ಕೆಗಳನ್ನು ಪಡೆಯುತ್ತವೆ.
-
ಕೆಳ ಮಟ್ಟದ ಸಫಾರಿ ವೇರಿಯಂಟ್‌ಗಳು 2 ಹೆಚ್ಚುವರಿ ಕಲರ್ ಆಯ್ಕೆಗಳೊಂದಿಗೆ ಬರುತ್ತವೆ, ಆದರೆ ಟಾಪ್-ಸ್ಪೆಕ್ ಟ್ರಿಮ್ ಒಂದು ಹೆಚ್ಚುವರಿ ಕಲರ್ ಆಯ್ಕೆಯನ್ನು ಮಾತ್ರ ಪಡೆಯುತ್ತದೆ.
-
ಈ ಎರಡೂ ಟಾಟಾ ಎಸ್‌ಯುವಿಗಳಿಗೆ ಯಾವುದೇ ಇತರ ಮೆಕ್ಯಾನಿಕಲ್ ಅಥವಾ ಫೀಚರ್ ಬದಲಾವಣೆಗಳನ್ನು ಮಾಡಲಾಗಿಲ್ಲ.
-
ಹ್ಯಾರಿಯರ್ ಬೆಲೆಯು ರೂ 14.99 ಲಕ್ಷದಿಂದ ರೂ 25.89 ಲಕ್ಷದವರೆಗೆ ಇದೆ, ಹಾಗೆಯೆ ಸಫಾರಿಯ ಬೆಲೆಯು ರೂ 15.49 ಲಕ್ಷದಿಂದ ರೂ 26.79 ಲಕ್ಷದವರೆಗೆ (ಎಕ್ಸ್ ಶೋರೂಂ ಪ್ಯಾನ್-ಇಂಡಿಯಾ) ಇದೆ.
ಫೇಸ್‌ಲಿಫ್ಟ್ ಆಗಿರುವ ಟಾಟಾ ಹ್ಯಾರಿಯರ್ ಮತ್ತು ಟಾಟಾ ಸಫಾರಿಯನ್ನು ಅಕ್ಟೋಬರ್ 2023 ರಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಯಿತು. ಮಾರುಕಟ್ಟೆಗೆ ಬಂದಾಗಿನಿಂದ, ಹೊಸತಾಗಿ ಕಾಣಲು ಇವುಗಳಿಗೆ ಕೆಲವು ಡಿಸೈನ್ ಟ್ವೀಕ್‌ಗಳನ್ನು ಮಾಡಲಾಗಿದೆ. ಎರಡೂ ಟಾಟಾ ಎಸ್‌ಯುವಿಗಳು ಈಗಾಗಲೇ 11 ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆಂಟ್ ಸಿಸ್ಟಮ್‌ಗಳನ್ನು (ADAS) ಹೊಂದಿದ್ದವು, ಆದರೆ ಈಗ ಅವುಗಳಿಗೆ ಲಾಂಚ್ ಸಮಯದಲ್ಲಿ ಲಭ್ಯವಿಲ್ಲದ ಎರಡು ಹೊಸ ಫೀಚರ್‌ಗಳನ್ನು ಸೇರಿಸಲಾಗಿದೆ. ಟಾಟಾ ಅದರ ಕಲರ್ ಆಯ್ಕೆಗಳನ್ನು ಕೂಡ ಅಪ್ಡೇಟ್ ಮಾಡಿದೆ, ಆ ಮೂಲಕ ಪ್ರತಿ ವೇರಿಯಂಟ್‌ಗೂ ಹೊಸ ಪೈಂಟ್ ಶೇಡ್‌ಗಳನ್ನು ಸೇರಿಸಿದೆ.
ಟಾಟಾ ಹ್ಯಾರಿಯರ್ ಮತ್ತು ಹ್ಯಾರಿಯರ್‌ಗಾಗಿ ಹೊಸ ADAS ಫೀಚರ್‌ಗಳು
ಡ್ರೈವರ್ ಅಸ್ಸಿಸ್ಟಂಸ್ ಪ್ಯಾಕ್‌ನ ಸೂಟ್ ಈಗ ಲೇನ್-ಕೀಪಿಂಗ್ ಅಸಿಸ್ಟ್ ಮತ್ತು ಲೇನ್ ಸೆಂಟ್ರಿಂಗ್‌ನೊಂದಿಗೆ ಅಡಾಪ್ಟಿವ್ ಸ್ಟೀರಿಂಗ್ ಅಸಿಸ್ಟ್ ಅನ್ನು ಒಳಗೊಂಡಿದೆ. ಲೇನ್ ಕೀಪಿಂಗ್ ಅಸಿಸ್ಟ್ ನಿರಂತರವಾಗಿ ಕಾರಿನ ಲೇನ್ ಸ್ಥಾನವನ್ನು ಪರಿಶೀಲಿಸುತ್ತದೆ ಮತ್ತು ಕಾರು ಆಕಸ್ಮಿಕವಾಗಿ ಲೇನ್‌ನಿಂದ ಹೊರಹೋಗುವುದನ್ನು ತಡೆಯಲು ಸ್ಟೀರಿಂಗ್ ವೀಲ್ ಅನ್ನು ನಿಧಾನವಾಗಿ ತಿರುಗಿಸುತ್ತದೆ. ಮತ್ತೊಂದೆಡೆ, ಅಡಾಪ್ಟಿವ್ ಸ್ಟೀರಿಂಗ್ ಅಸಿಸ್ಟ್ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನೊಂದಿಗೆ ಕಾರನ್ನು ಸ್ಥಿರವಾದ ವೇಗದಲ್ಲಿ ಇರಿಸಿಕೊಳ್ಳಲು ಮತ್ತು ಅದರ ಲೇನ್‌ನಲ್ಲಿಯೇ ಇರುವುದನ್ನು ಖಚಿತಪಡಿಸಿಕೊಳ್ಳಲು ಕೆಲಸ ಮಾಡುತ್ತದೆ.
ಸಫಾರಿ ಮತ್ತು ಹ್ಯಾರಿಯರ್ ADAS ನೊಂದಿಗೆ ಬರುತ್ತವೆ, ಇದು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಅಟಾನೊಮಸ್ ತುರ್ತು ಬ್ರೇಕಿಂಗ್, ಫಾರ್ವರ್ಡ್ ಕೊಲಿಷನ್ ವಾರ್ನಿಂಗ್ ಮತ್ತು ಹೈ ಬೀಮ್ ಅಸಿಸ್ಟ್‌ನoತಹ 11 ಫೀಚರ್‌ಗಳನ್ನು ಒಳಗೊಂಡಿದೆ.
ಟಾಟಾ ಹ್ಯಾರಿಯರ್ ಕಲರ್ ಬದಲಾವಣೆಗಳು
ಟಾಟಾ ಹ್ಯಾರಿಯರ್ ವೇರಿಯಂಟ್‌ಗಳು |
ಟಾಟಾ ಹ್ಯಾರಿಯರ್ ಕಲರ್‌ಗಳು |
ಸ್ಮಾರ್ಟ್ |
ಲೂನಾರ್ ವೈಟ್ ಆಶ್ ಗ್ರೇ ಕೋರಲ್ ರೆಡ್ (ಹೊಸ) ಪೆಬಲ್ ಗ್ರೇ (ಹೊಸ) |
ಪ್ಯೂರ್ |
ಲೂನಾರ್ ವೈಟ್ ಆಶ್ ಗ್ರೇ ಕೋರಲ್ ರೆಡ್ (ಹೊಸ) ಪೆಬಲ್ ಗ್ರೇ (ಹೊಸ) |
ಅಡ್ವೆಂಚರ್ |
ಲೂನಾರ್ ವೈಟ್ ಕೋರಲ್ ರೆಡ್ ಪೆಬಲ್ ಗ್ರೇ ಸೀವೀಡ್ ಗ್ರೀನ್ ಆಶ್ ಗ್ರೇ (ಹೊಸ) |
ಫಿಯರ್‌ಲೆಸ್ |
ಲೂನಾರ್ ವೈಟ್ ಕೋರಲ್ ರೆಡ್ ಪೆಬಲ್ ಗ್ರೇ ಸೀವೀಡ್ ಗ್ರೀನ್ ಆಶ್ ಗ್ರೇ (ಹೊಸ) ಸನ್‌ಲಿಟ್ ಯಲ್ಲೋ (ಫಿಯರ್‌ಲೆಸ್ -ಮಾತ್ರ) |
ಇದನ್ನು ಕೂಡ ಓದಿ: ಭಾರತದಲ್ಲಿ 6 ಏರ್‌ಬ್ಯಾಗ್‌ಗಳನ್ನು ಹೊಂದಿರುವ ಹತ್ತು ಕೈಗೆಟುಕುವ ಬೆಲೆಯ ಕಾರುಗಳ ಪಟ್ಟಿ ಇಲ್ಲಿವೆ
ಟಾಟಾ ಸಫಾರಿಯ ಅಪ್ಡೇಟ್ ಆಗಿರುವ ವೇರಿಯಂಟ್-ವಾರು ಕಲರ್‌ಗಳು
ಟಾಟಾ ಸಫಾರಿ ವೇರಿಯಂಟ್‌ಗಳು |
ಟಾಟಾ ಸಫಾರಿ ಕಲರ್‌ಗಳು |
ಸ್ಮಾರ್ಟ್ |
ಸ್ಟೆಲ್ಲರ್ ಫ್ರಾಸ್ಟ್ ಲೂನಾರ್ ಸ್ಲೇಟ್ ಸ್ಟಾರ್‌ಡಸ್ಟ್ ಆಶ್ (ಹೊಸ) ಗ್ಯಾಲ್ಯಾಕ್ಟಿಕ್ ಸಫೈರ್ (ಹೊಸ) |
ಪ್ಯೂರ್ |
ಸ್ಟೆಲ್ಲರ್ ಫ್ರಾಸ್ಟ್ ಲೂನಾರ್ ಸ್ಲೇಟ್ ಸ್ಟಾರ್‌ಡಸ್ಟ್ ಆಶ್ (ಹೊಸ) ಗ್ಯಾಲ್ಯಾಕ್ಟಿಕ್ ಸಫೈರ್ (ಹೊಸ) |
ಅಡ್ವೆಂಚರ್ |
ಸ್ಟೆಲ್ಲರ್ ಫ್ರಾಸ್ಟ್ ಸ್ಟಾರ್‌ಡಸ್ಟ್ ಆಶ್ ಗ್ಯಾಲ್ಯಾಕ್ಟಿಕ್ ಸಫೈರ್ ಸೂಪರ್‌ನೋವಾ ಕಾಪರ್ ಲೂನಾರ್ ಸ್ಲೇಟ್ (ಹೊಸ) |
ಅಕಂಪ್ಲಿಶ್ಡ್ |
ಸ್ಟೆಲ್ಲರ್ ಫ್ರಾಸ್ಟ್ ಸ್ಟಾರ್‌ಡಸ್ಟ್ ಆಶ್ ಗ್ಯಾಲ್ಯಾಕ್ಟಿಕ್ ಸಫೈರ್ ಕಾಸ್ಮಿಕ್ ಗೋಲ್ಡ್ ಸೂಪರ್‌ನೋವಾ ಕಾಪರ್ ಲೂನಾರ್ ಸ್ಲೇಟ್ (ಹೊಸ) |
ಟಾಟಾ ಎರಡೂ ಎಸ್‌ಯುವಿಗಳ ವೇರಿಯಂಟ್‌ಗಳಿಗೆ ಇನ್ನಷ್ಟು ಕಲರ್ ಆಯ್ಕೆಗಳನ್ನು ಮಾತ್ರ ಸೇರಿಸಿದೆ, ಆದರೆ ಯಾವುದೇ ಹೊಸ ಶೇಡ್‌ಗಳನ್ನು ಪರಿಚಯಿಸಿಲ್ಲ.
ಟಾಟಾ ಹ್ಯಾರಿಯರ್ ಮತ್ತು ಸಫಾರಿ ಎಂಜಿನ್ ಸ್ಪೆಸಿಫಿಕೇಷನ್‌ಗಳು
ಹ್ಯಾರಿಯರ್ ಮತ್ತು ಸಫಾರಿ 2-ಲೀಟರ್, ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್‌ನಿಂದ ಚಾಲಿತವಾಗಿದ್ದು ಅದು 170 PS ಮತ್ತು 350 Nm ಅನ್ನು ಉತ್ಪಾದಿಸುತ್ತದೆ. ಇದನ್ನು 6-ಸ್ಪೀಡ್ ಮ್ಯಾನ್ಯುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ.
ಇದನ್ನು ಕೂಡ ಓದಿ: ಮಾರುತಿ ಅಕ್ಟೋಬರ್ 2024 ರಲ್ಲಿ ಕಾಂಪ್ಯಾಕ್ಟ್ ಮತ್ತು ಮೀಡಿಯಮ್ ಗಾತ್ರದ ಹ್ಯಾಚ್‌ಬ್ಯಾಕ್ ಮಾರಾಟದಲ್ಲಿ ಅಗ್ರಸ್ಥಾನವನ್ನು ಮುಂದುವರೆಸಿದೆ
ಟಾಟಾ ಹ್ಯಾರಿಯರ್ ಮತ್ತು ಸಫಾರಿ ಬೆಲೆಗಳು ಮತ್ತು ಪ್ರತಿಸ್ಪರ್ಧಿಗಳು
ಹ್ಯಾರಿಯರ್ ಬೆಲೆಯು ರೂ. 14.99 ಲಕ್ಷ ಮತ್ತು ರೂ. 25.89 ಲಕ್ಷದ ನಡುವೆ ಇದೆ ಮತ್ತು ಮಹೀಂದ್ರಾ XUV700, MG ಹೆಕ್ಟರ್ ಮತ್ತು ಜೀಪ್ ಕಂಪಾಸ್‌ಗೆ ಪ್ರತಿಸ್ಪರ್ಧಿಯಾಗಿದೆ. ಹಾಗೆಯೇ, ಸಫಾರಿಯ ಬೆಲೆಯು ರೂ 15.49 ಲಕ್ಷದಿಂದ ಪ್ರಾರಂಭವಾಗಿ ರೂ 26.79 ಲಕ್ಷದವರೆಗೆ ಇದೆ. ಇದು MG ಹೆಕ್ಟರ್ ಪ್ಲಸ್, ಮಹೀಂದ್ರಾ XUV700 ಮತ್ತು ಹ್ಯುಂಡೈ ಅಲ್ಕಾಜರ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ.
ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ಯಾನ್-ಇಂಡಿಯಾ ಬೆಲೆಯಾಗಿದೆ
ವಾಹನ ಜಗತ್ತಿನ ನಿರಂತರ ಅಪ್ಡೇಟ್‌ಗಳನ್ನು ಪಡೆಯಲು ಕಾರ್‌ದೇಖೊ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ.
ಇನ್ನಷ್ಟು ಓದಿ: ಟಾಟಾ ಹ್ಯಾರಿಯರ್ ಡೀಸೆಲ್