ಟಾಟಾ Harrier ಮತ್ತು Safari ಮಾಲೀಕರಿಗೆ ಇಲ್ಲಿದೆ ಸಿಹಿ ಸುದ್ದಿ, ಎಸ್‌ಯುವಿಗಳು ಪಡೆದುಕೊಂಡಿವೆ ಗ್ಲೋಬಲ್ NCAP ಸೇಫರ್ ಚಾಯ್ಸ್ ಪ್ರಶಸ್ತಿ
ಟಾಟಾ ಹ್ಯಾರಿಯರ್ ಗಾಗಿ shreyash ಮೂಲಕ ಸೆಪ್ಟೆಂಬರ್ 06, 2024 10:38 am ರಂದು ಪ್ರಕಟಿಸಲಾಗಿದೆ
- 49 Views
- ಕಾಮೆಂಟ್ ಅನ್ನು ಬರೆಯಿರಿ
ಟಾಟಾ ಹ್ಯಾರಿಯರ್ ಮತ್ತು ಸಫಾರಿ 5 ಸ್ಟಾರ್ ಸುರಕ್ಷತಾ ರೇಟಿಂಗ್‌ಗಳ ಜೊತೆಗೆ, ಗ್ಲೋಬಲ್ NCAPಯಿಂದ ಇದುವರೆಗೆ ಟೆಸ್ಟ್ ಮಾಡಿರುವ ಭಾರತೀಯ ಎಸ್‌ಯುವಿಗಳಲ್ಲಿ ಅತಿ ಹೆಚ್ಚು ಸ್ಕೋರ್ ಕೂಡ ಗಳಿಸಿವೆ
-
ಎರಡೂ ಎಸ್‌ಯುವಿಗಳು ಆಟೊನೊಮಸ್ ಎಮರ್ಜೆನ್ಸಿ ಬ್ರೇಕಿಂಗ್ (AEB), ಸ್ಪೀಡ್ ಅಸ್ಸಿಸ್ಟಂಸ್ ಮತ್ತು ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ (BSD) ಸಿಸ್ಟಮ್ ಅನ್ನು ಹೊಂದಿವೆ.
-
ಇದು ವಯಸ್ಕ ಪ್ರಯಾಣಿಕರ ಸುರಕ್ಷತೆಯಲ್ಲಿ 33.05/34 ಮತ್ತು ಮಕ್ಕಳ ಸುರಕ್ಷತೆಯಲ್ಲಿ 45/49 ಸ್ಕೋರ್ ಪಡೆದಿದೆ.
-
ಎರಡೂ SUV ಗಳಲ್ಲಿನ ಸುರಕ್ಷತಾ ಫೀಚರ್ ಗಳಲ್ಲಿ 7 ಏರ್‌ಬ್ಯಾಗ್‌ಗಳು (6 ಸ್ಟ್ಯಾಂಡರ್ಡ್ ಆಗಿ), 360-ಡಿಗ್ರಿ ಕ್ಯಾಮೆರಾ ಮತ್ತು ಲೆವೆಲ್ 2 ADAS ಸೇರಿವೆ.
ಟಾಟಾ ಮೋಟಾರ್ಸ್ ಭಾರತದ ಮಾಸ್ ಮಾರುಕಟ್ಟೆಯ ಕಾರುಗಳ ಸುರಕ್ಷತೆಯ ವಿಷಯದಲ್ಲಿ ಸ್ಪಷ್ಟವಾಗಿ ಮುಂಚೂಣಿಯಲ್ಲಿದೆ. ಟಿಯಾಗೋ ಮತ್ತು ಟಿಗೋರ್ ಹೊರತುಪಡಿಸಿ, ಭಾರತದಲ್ಲಿ ಪ್ರಸ್ತುತವಾಗಿ ಮಾರಾಟದಲ್ಲಿರುವ ಟಾಟಾದ ಪ್ರತಿಯೊಂದು ಮಾಡೆಲ್ ಕೂಡ ಗ್ಲೋಬಲ್ NCAP ನಿಂದ 5-ಸ್ಟಾರ್ ರೇಟಿಂಗ್ ಅನ್ನು ಪಡೆದಿದೆ. ಅಕ್ಟೋಬರ್ 2023 ರಲ್ಲಿ ಪರೀಕ್ಷಿಸಲಾದ ಫೇಸ್‌ಲಿಫ್ಟ್ ಆಗಿರುವ ಟಾಟಾ ಹ್ಯಾರಿಯರ್ ಮತ್ತು ಟಾಟಾ ಸಫಾರಿಗಾಗಿ ಕಾರು ತಯಾರಕರು ಗ್ಲೋಬಲ್ NCAP ಸೇಫರ್ ಚಾಯ್ಸ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಒಂದು ಸಣ್ಣ ಪರಿಚಯ
ಎರಡೂ ಟಾಟಾ ಎಸ್‌ಯುವಿಗಳು ವಯಸ್ಕ ಪ್ರಯಾಣಿಕರ ಮತ್ತು ಮಕ್ಕಳ ಸುರಕ್ಷತೆಗಾಗಿ ಪೂರ್ತಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿವೆ ಮತ್ತು ಅದರ ಜೊತೆಗೆ ತಮ್ಮ ಪರ್ಫಾರ್ಮೆನ್ಸ್ ಗಾಗಿ ಕೂಡ ಗ್ಲೋಬಲ್ NCAPಯಿಂದ ಹೆಚ್ಚಿನ ಸ್ಕೋರ್ ಅನ್ನು ಗಳಿಸಿವೆ.
ಅಡಲ್ಟ್ ಒಕ್ಯುಪೆಂಟ್ ಪ್ರೊಟೆಕ್ಷನ್ (AOP) ಸ್ಕೋರ್ |
33.05/34 |
ಚೈಲ್ಡ್ ಒಕ್ಯುಪೆಂಟ್ ಪ್ರೊಟೆಕ್ಷನ್ (COP) ಸ್ಕೋರ್ |
45/49 |
ಎರಡೂ SUV ಗಳ ಬಾಡಿಶೆಲ್ ಮತ್ತು ಫುಟ್‌ವೆಲ್ ಜಾಗವನ್ನು 'ಸ್ಟೇಬಲ್' ಎಂದು ಪರಿಗಣಿಸಲಾಗಿದೆ ಮತ್ತು ಇನ್ನಷ್ಟು ಲೋಡ್ ಅನ್ನು ನಿಭಾಯಿಸುವ ಶಕ್ತಿಯನ್ನು ಹೊಂದಿದೆ. ಹೆಚ್ಚಿನ ವಿವರಗಳಿಗಾಗಿ ಹ್ಯಾರಿಯರ್ ಮತ್ತು ಸಫಾರಿಗಾಗಿ ನಮ್ಮ ಸಂಪೂರ್ಣ ಕ್ರ್ಯಾಶ್ ಪರೀಕ್ಷಾ ವರದಿಯನ್ನು ನೀವು ಓದಬಹುದು.
ನೀಡಲಾಗಿರುವ ಸುರಕ್ಷತಾ ಫೀಚರ್ ಗಳು
ಹ್ಯಾರಿಯರ್ ಮತ್ತು ಸಫಾರಿಯು 7 ಏರ್‌ಬ್ಯಾಗ್‌ಗಳು (6 ಸ್ಟ್ಯಾಂಡರ್ಡ್ ಆಗಿ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಬ್ಲೈಂಡ್ ವ್ಯೂ ಮಾನಿಟರಿಂಗ್‌ನೊಂದಿಗೆ 360-ಡಿಗ್ರಿ ಕ್ಯಾಮೆರಾ ಮತ್ತು ISOFIX ಚೈಲ್ಡ್ ಸೀಟ್ ಮೌಂಟ್ ನಂತಹ ಫೀಚರ್ ಗಳನ್ನು ಒಳಗೊಂಡಿದೆ. ಈ SUVಗಳ ಟಾಪ್-ಸ್ಪೆಕ್ ವೇರಿಯಂಟ್ ಗಳು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮತ್ತು ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ ಸೇರಿದಂತೆ ಲೆವೆಲ್ 2 ಅಡ್ವಾನ್ಸ್ಡ್ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ ಗಳ (ADAS) ಸಂಪೂರ್ಣ ಸೂಟ್ ಅನ್ನು ಕೂಡ ಒಳಗೊಂಡಿದೆ.
ಇದನ್ನು ಕೂಡ ಓದಿ: ಟಾಟಾ ಕರ್ವ್: SUV-ಕೂಪ್‌ನೊಂದಿಗೆ ನೀಡಲಾಗಿರುವ ವಿವಿಧ ಇಂಟೀರಿಯರ್ ಕಲರ್ ಆಯ್ಕೆಗಳ ವಿವರ ಇಲ್ಲಿದೆ
ಗ್ಲೋಬಲ್ NCAP ಸೇಫರ್ ಚಾಯ್ಸ್ ಅವಾರ್ಡ್ ಬಗ್ಗೆ ಇನ್ನಷ್ಟು ವಿವರಗಳು
ಗ್ಲೋಬಲ್ NCAP ಸೇಫರ್ ಚಾಯ್ಸ್ ಪ್ರಶಸ್ತಿಯನ್ನು ಮೊದಲ ಬಾರಿಗೆ 2018 ರಲ್ಲಿ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪರಿಚಯಿಸಲಾಯಿತು. ಈ ಪ್ರಶಸ್ತಿಯನ್ನು ಅತ್ಯಂತ ಉನ್ನತ ಮಟ್ಟದ ಸುರಕ್ಷತಾ ಪರ್ಫಾರ್ಮೆನ್ಸ್ ಅನ್ನು ಹೊಂದಿರುವ ಕಾರು ತಯಾರಕರಿಗೆ ಮಾತ್ರ ನೀಡಲಾಗುತ್ತದೆ. ಈ ವಿಷಯದಲ್ಲಿ, ಸಫಾರಿ ಮತ್ತು ಹ್ಯಾರಿಯರ್ ಕ್ರ್ಯಾಶ್ ಪರೀಕ್ಷೆಗಳಲ್ಲಿ ಉತ್ತಮ ಸ್ಕೋರ್ ಅನ್ನು ಪಡೆದಿವೆ ಮತ್ತು ಆಟೊನೊಮಸ್ ಎಮರ್ಜೆನ್ಸಿ ಬ್ರೇಕಿಂಗ್ (AEB), ಸ್ಪೀಡ್ ಅಸ್ಸಿಸ್ಟಂಸ್ ಮತ್ತು ಬ್ಲೈಂಡ್ ಸ್ಪಾಟ್ ಡಿಟೆಕ್ಷನ್ (BSD) ಸಿಸ್ಟಮ್ ಗಳ ಮಾನದಂಡಗಳನ್ನು ಕೂಡ ಪೂರೈಸಿದೆ.
ಈ ಪ್ರಶಸ್ತಿಗೆ ಅರ್ಹತೆ ಪಡೆಯಲು ಕಾರು ಪೂರೈಸಬೇಕಾದ ಅವಶ್ಯಕತೆಗಳ ಪಟ್ಟಿ ಇಲ್ಲಿದೆ:
-
ವಯಸ್ಕ ಪ್ರಯಾಣಿಕರ ಮತ್ತು ಮಕ್ಕಳ ಸುರಕ್ಷತಾ ಪರೀಕ್ಷೆಗಳಲ್ಲಿ 5-ಸ್ಟಾರ್‌ಗಳು.
-
ಗ್ಲೋಬಲ್ NCAP ನ ಪರೀಕ್ಷಾ ಮಾನದಂಡದಲ್ಲಿ ಟಾಪ್ ಸ್ಕೋರ್ ಪಡೆಯಲು ಕಾರು ಸ್ಪೀಡ್ ಅಸ್ಸಿಸ್ಟಂಸ್ ಸಿಸ್ಟಮ್ ಅನ್ನು ಹೊಂದಿರಬೇಕು.
-
UN ರೆಗ್ಯುಲೇಟರಿ ಪರ್ಫಾರ್ಮೆನ್ಸ್ ಅವಶ್ಯಕತೆಗಳನ್ನು ಪೂರೈಸಲು AEB ಇರಬೇಕು.
-
BSD ಅನ್ನು ಸ್ಟಾಂಡ್ ಅಲೋನ್ ಆಗಿ ಹೊಂದಿರಬೇಕು ಮತ್ತು ಗ್ಲೋಬಲ್ NCAPಯ ಪರ್ಫಾರ್ಮೆನ್ಸ್ ಅವಶ್ಯಕತೆಗಳನ್ನು ಪೂರೈಸಬೇಕು.
ಟಾಟಾದಿಂದ 5-ಸ್ಟಾರ್ ರೇಟಿಂಗ್ ಪಡೆಯಬಹುದಾದ ಮುಂದಿನ ಕಾರುಗಳು
ಸುರಕ್ಷತೆಯ ಬಗ್ಗೆ ಟಾಟಾಗೆ ಇರುವ ಟ್ರ್ಯಾಕ್ ರೆಕಾರ್ಡ್ ಅನ್ನು ನೋಡಿದರೆ, ಭವಿಷ್ಯದಲ್ಲಿ ಅದರ ಇನ್ನಷ್ಟು ಕಾರುಗಳು 5-ಸ್ಟಾರ್-ರೇಟಿಂಗ್ ಅನ್ನು ಪಡೆಯಬಹುದು. ಟಾಟಾ ಕರ್ವ್ ICE ಮತ್ತು ಟಾಟಾ ಕರ್ವ್ EV ಅನ್ನು ಇನ್ನೂ ಕೂಡ ಗ್ಲೋಬಲ್ ಅಥವಾ ಭಾರತ್ NCAP ನಿಂದ ಕ್ರ್ಯಾಶ್-ಟೆಸ್ಟ್ ಮಾಡಲಾಗಿಲ್ಲ, ಆದರೆ ಸುರಕ್ಷತೆಯ ಮೇಲೆ ಟಾಟಾ ಬಲವಾದ ಗಮನವನ್ನು ಹರಿಸುವ ಕಾರಣ ಈ ಮಾಡೆಲ್ ಗಳು ಕೂಡ ಹೆಚ್ಚಿನ ರೇಟಿಂಗ್‌ಗಳನ್ನು ಪಡೆಯುವ ಸಾಧ್ಯತೆಯಿದೆ.
ಆಟೋಮೋಟಿವ್ ಜಗತ್ತಿನ ನಿರಂತರ ಅಪ್ಡೇಟ್ ಗಳನ್ನು ಪಡೆಯಲು ಕಾರ್ದೇಖೋ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ.
ಇನ್ನಷ್ಟು ಓದಿ: ಹ್ಯಾರಿಯರ್ ಡೀಸೆಲ್
0 out of 0 found this helpful