2024 ಹ್ಯುಂಡೈ ಕ್ರೆಟಾದ ಸಂಪೂರ್ಣ ವಿವರಗಳನ್ನು ಬಿಡುಗಡೆಗೆ ಮುಂಚೆ ಅಧಿಕೃತವಾಗಿ ಬಹಿರಂಗಪಡಿಸಲಾಗಿದೆ
ಹುಂಡೈ ಕ್ರೆಟಾ ಗಾಗಿ shreyash ಮೂಲಕ ಜನವರಿ 11, 2024 06:24 pm ರಂದು ಪ್ರಕಟಿಸಲಾಗಿದೆ
- 355 Views
- ಕಾಮೆಂಟ್ ಅನ್ನು ಬರೆಯಿರಿ
ಹುಂಡೈ ಕ್ರೆಟಾ ಫೇಸ್‌ಲಿಫ್ಟ್ ಭಾರತದಲ್ಲಿ ಜನವರಿ 16 ರಂದು ಮಾರುಕಟ್ಟೆಗೆ ಬರಲಿದೆ.
-
ಹುಂಡೈ ಕ್ರೆಟಾ ಫೇಸ್ಲಿಫ್ಟ್ಗಾಗಿ ಬುಕ್ಕಿಂಗ್ಗಳನ್ನು ರೂ. 25,000 ಪಾವತಿ ಮಾಡಿ ಮಾಡಬಹುದು.
-
ಮುಂಭಾಗವು ಹೊಸ ಲೈಟಿಂಗ್ ಸೆಟಪ್ಗಳು ಮತ್ತು ಬಂಪರ್ಗಳೊಂದಿಗೆ ಸಂಪೂರ್ಣ ಮೇಕ್ಓವರ್ಗೆ ಒಳಗಾಗಿದೆ.
-
ಒಳಭಾಗದಲ್ಲಿ, 2024 ಕ್ರೆಟಾ ಇಂಟಗ್ರೇಟ್ ಆಗಿರುವ ಸ್ಕ್ರೀನ್ ಸೆಟಪ್ ಮತ್ತು ಹೊಸ ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ಅನ್ನು ಹೊಂದಿದೆ.
-
ಸುರಕ್ಷತೆಯ ದೃಷ್ಟಿಯಿಂದ, ಕ್ರೆಟಾ ಈಗ ಲೆವೆಲ್ 2 ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ ನೊಂದಿಗೆ (ADAS) ಸಜ್ಜುಗೊಂಡಿದೆ.
-
ಪವರ್ಟ್ರೇನ್ ಆಯ್ಕೆಗಳಲ್ಲಿ ಈಗ ಹೊಸ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (160 PS / 253 Nm) ಅನ್ನು ನೀಡಲಾಗಿದೆ ಮತ್ತು ಇದನ್ನು 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್ಮಿಷನ್ (DCT) ಗೆ ಜೋಡಿಸಲಾಗಿದೆ.
2024 ಹ್ಯುಂಡೈ ಕ್ರೆಟಾ ಜನವರಿ 16 ರಂದು ಭಾರತದಲ್ಲಿ ಬಿಡುಗಡೆಗೆ ಸಿದ್ಧವಾಗಿದೆ ಮತ್ತು ಅದಕ್ಕೂ ಮುಂಚೆ, ಹ್ಯುಂಡೈ ಅಪ್ಡೇಟ್ ಆಗಿರುವ SUV ಯ ಹೊಸ ಚಿತ್ರಗಳನ್ನು ಹೊರಹಾಕಿದೆ, ಮತ್ತು ಈ ಚಿತ್ರಗಳು ಅದರ ಸಂಪೂರ್ಣ ಡಿಸೈನ್ ಅನ್ನು ಬಹಿರಂಗಪಡಿಸುತ್ತದೆ. ಇದು ಅಪ್ಡೇಟ್ ಆಗಿರುವ ಫಾಸಿಯಾ, ಹೊಸ ಫೀಚರ್ ಗಳು ಮತ್ತು ಹೆಚ್ಚು ಶಕ್ತಿಶಾಲಿಯಾಗಿರುವ ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆಯುತ್ತದೆ. 2024 ಕ್ರೆಟಾದ ಬುಕಿಂಗ್ಗಳು ಈಗಾಗಲೇ ರೂ 25,000 ಟೋಕನ್ ಮೊತ್ತ ಪಾವತಿಯೊಂದಿಗೆ ಶುರುವಾಗಿದೆ. ಹೊಸದಾಗಿ ಬಿಡುಗಡೆಯಾದ ಚಿತ್ರಗಳಲ್ಲಿ ಅದರ ಲುಕ್ ಅನ್ನು ನೋಡೋಣ.
ಹಿಂದಿಗಿಂತ ಹೆಚ್ಚು ಬಲಿಷ್ಠವಾಗಿದೆ
ಆನ್ಲೈನ್ನಲ್ಲಿ ಸ್ಪೈ ಶಾಟ್ಗಳಿಂದ ಅದರ ಹೊಸದಾದ ಹೊರಗಿನ ಡಿಸೈನ್ ಅನ್ನು ನಾವು ಈಗಾಗಲೇ ನೋಡಿದ್ದೇವೆ. ಈಗ ಬಂದಿರುವ ಅಧಿಕೃತ ಚಿತ್ರಗಳು ಹೆಚ್ಚು ವಿವರವಾದ ನೋಟವನ್ನು ನೀಡುತ್ತವೆ. 2024 ಹ್ಯುಂಡೈ ಕ್ರೆಟಾ ಅದರ ಹಿಂದಿನ ವರ್ಷನ್ ಗೆ ಹೋಲಿಸಿದರೆ ಹೆಚ್ಚು ಬಲಿಷ್ಠವಾದ ಮತ್ತು ಆಕರ್ಷಕ ಲುಕ್ ಅನ್ನು ಪ್ರದರ್ಶಿಸುತ್ತದೆ. SUV ಯ ಮುಂಭಾಗವು ಹೊಸ ರೆಕ್ಟ್ಅಂಗ್ಯುಲರ್ ಗ್ರಿಲ್, ತಲೆಕೆಳಗಾದ L-ಆಕಾರದ ಡಿಸೈನ್ ನ ಬಾನೆಟ್ ನಷ್ಟು-ಅಗಲದ LED DRL ಸ್ಟ್ರಿಪ್ ಮತ್ತು ಹೆಡ್ಲೈಟ್ಗಳಿಗಾಗಿ ಅಪ್ಡೇಟ್ ಆಗಿರುವ ಚೌಕಾಕಾರದ ಜಾಗವನ್ನು ಒಳಗೊಂಡಿರುವ ಸಮಗ್ರ ಅಪ್ಡೇಟ್ ಅನ್ನು ಪಡೆದಿದೆ. ಕೆಳಗಿನ ಭಾಗದಲ್ಲಿ, ಸ್ಕೀಡ್ ಪ್ಲೇಟ್ ಈಗ ಹೆಚ್ಚು ಪ್ರಮುಖವಾಗಿ ಕಾಣಿಸುತ್ತದೆ ಮತ್ತು ಅದು ಸಿಲ್ವರ್ ಫಿನಿಶಿಂಗ್ ಅನ್ನು ಪಡೆದಿದೆ.
ಹೊಸ ಅಲಾಯ್ ವೀಲ್ ಗಳ ಸೆಟ್ ಅನ್ನು ಪಡೆದಿರುವುದನ್ನು ಹೊರತುಪಡಿಸಿ, SUV ಯ ಪ್ರೊಫೈಲ್ ನಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇನ್ನು ಹಿಂಭಾಗದಲ್ಲಿ, ಕ್ರೆಟಾ ಫೇಸ್ಲಿಫ್ಟ್ ಅದರ ಮುಂಭಾಗದಲ್ಲಿರುವಂತೆಯೇ ತಲೆಕೆಳಗಾದ L-ಆಕಾರದ ಕನೆಕ್ಟೆಡ್ LED ಟೈಲ್ ಲ್ಯಾಂಪ್ಗಳನ್ನು ಹೊಂದಿದೆ. ಬಂಪರ್ ಡಿಸೈನ್ ಅನ್ನು ಕೂಡ ಸ್ವಲ್ಪ ಬದಲಾಯಿಸಲಾಗಿದೆ, ಆಗ ಸಿಲ್ವರ್ ನಲ್ಲಿರುವ ದೊಡ್ಡದಾದ ಸ್ಕಿಡ್ ಪ್ಲೇಟ್ ಅನ್ನು ಸಹ ಒಳಗೊಂಡಿದೆ.
ಇದನ್ನು ಕೂಡ ಓದಿ: ಫೇಸ್‌ಲಿಫ್ಟ್ ಆಗಿರುವ ಕಿಯಾ ಸೋನೆಟ್ ಈ ದಿನಾಂಕದಂದು ಭಾರತದಲ್ಲಿ ಬಿಡುಗಡೆಯಾಗಲಿದೆ
ರೀವಾಂಪ್ ಮಾಡಲಾಗಿರುವ ಕ್ಯಾಬಿನ್
2024 ಕ್ರೆಟಾದ ಡ್ಯಾಶ್ಬೋರ್ಡ್ ವಿನ್ಯಾಸವನ್ನು ಸಂಪೂರ್ಣವಾಗಿ ರೀವಾಂಪ್ ಮಾಡಲಾಗಿದೆ. ಇದರಲ್ಲಿ ಈಗ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ಗಾಗಿ ಡ್ಯುಯಲ್ ಇಂಟಿಗ್ರೇಟೆಡ್ 10.25-ಇಂಚಿನ ಸ್ಕ್ರೀನ್ ಮತ್ತು ಹೊಸದಾಗಿ ಸೇರಿಸಲಾದ ಡಿಜಿಟಲ್ ಡ್ರೈವರ್ಸ್ ಡಿಸ್ಪ್ಲೇ ಅನ್ನು ಹೊಂದಿದೆ. ಪ್ಯಾಸೆಂಜರ್-ಸೈಡ್ ಡ್ಯಾಶ್ಬೋರ್ಡ್ನ ಮೇಲಿನ ಭಾಗವು ಈಗ ಸೈಡ್ ಎಸಿ ವೆಂಟ್ ಅನ್ನು ಹೊಂದಿರುವ ಪಿಯಾನೋ ಬ್ಲ್ಯಾಕ್ ಪ್ಯಾನೆಲ್ ಅನ್ನು ಹೊಂದಿದೆ ಮತ್ತು ಅದರ ಕೆಳಗೆ ಆಂಬಿಯೆಂಟ್ ಲೈಟಿಂಗ್ ನೊಂದಿಗೆ ಹೊಸ ತೆರೆದ ಸ್ಟೋರೇಜ್ ಜಾಗವನ್ನು ನೀಡಲಾಗಿದೆ. ಇದರಲ್ಲಿ ಈಗ ಟಚ್ ಕಂಟ್ರೋಲ್ ನೊಂದಿಗೆ ಹೊಸ ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ಅನ್ನು ಕೂಡ ಹೊಂದಿದೆ.
ಕ್ರೆಟಾ ಫೇಸ್ಲಿಫ್ಟ್ನಲ್ಲಿರುವ ಇತರ ಫೀಚರ್ ಗಳಲ್ಲಿ 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್, ಪನೋರಮಿಕ್ ಸನ್ರೂಫ್, ವೈರ್ಲೆಸ್ ಫೋನ್ ಚಾರ್ಜಿಂಗ್, 8-ವೇ ಪವರ್-ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್ಗಳನ್ನು ಒಳಗೊಂಡಿದೆ. ಆರು ಏರ್ಬ್ಯಾಗ್ಗಳು, 360-ಡಿಗ್ರಿ ಕ್ಯಾಮೆರಾದೊಂದಿಗೆ ಪ್ಯಾಸೆಂಜರ್ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ ಮತ್ತು ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ ನ (ADAS) ಪರಿಚಯದೊಂದಿಗೆ ಸುರಕ್ಷತಾ ಮಟ್ಟವನ್ನು ಈಗ ಇನ್ನೂ ಹೆಚ್ಚಿಸಲಾಗಿದೆ.
ಇದನ್ನು ಕೂಡ ಓದಿ: ಸ್ಕೋಡಾ ಎನ್ಯಾಕ್ EV ಯನ್ನು 2024 ರಲ್ಲಿ ಆಗಬಹುದಾದ ಸಂಭವನೀಯ ಬಿಡುಗಡೆಗೆ ಮುಂಚೆ ಸ್ಪೈ ಮಾಡಲಾಗಿದೆ
ಪವರ್ಟ್ರೇನ್ಸ್ ವಿವರಗಳು
ಹುಂಡೈ ಕ್ರೆಟಾ ಫೇಸ್ಲಿಫ್ಟ್ ನಲ್ಲಿ ಈಗ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು (160 PS / 253 Nm) 7-ಸ್ಪೀಡ್ ಡ್ಯುಯಲ್-ಕ್ಲಚ್ ಟ್ರಾನ್ಸ್ಮಿಷನ್ನೊಂದಿಗೆ ಜೋಡಿಸಲಾಗಿದೆ. SUV ಯ ಹಿಂದಿನ ವರ್ಷನ್ ನಲ್ಲಿ ಇದ್ದ ಇತರ ಎರಡು ಎಂಜಿನ್ ಆಯ್ಕೆಗಳನ್ನು ಹುಂಡೈ ಉಳಿಸಿಕೊಂಡಿದೆ: 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ (115 PS / 144 Nm) 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಅಥವಾ CVT ಯೊಂದಿಗೆ ಲಭ್ಯವಿದೆ, ಮತ್ತು 1.5- ಲೀಟರ್ ಡೀಸೆಲ್ ಎಂಜಿನ್ ಅನ್ನು (116 PS / 250 Nm) 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ನೊಂದಿಗೆ ಜೋಡಿಸಲಾಗಿದೆ.
ನಿರೀಕ್ಷಿಸಬಹುದಾದ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಹ್ಯುಂಡೈ ಕ್ರೆಟಾ ಫೇಸ್ಲಿಫ್ಟ್ ಬೆಲೆಯು ರೂ 11 ಲಕ್ಷದಿಂದ (ಎಕ್ಸ್ ಶೋರೂಂ) ಶುರುವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಇದು ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್, ಫೋಕ್ಸ್ವ್ಯಾಗನ್ ಟೈಗನ್, ಸ್ಕೋಡಾ ಕುಶಾಕ್ ಮತ್ತು ಹೋಂಡಾ ಎಲಿವೇಟ್ಗಳ ಜೊತೆಗೆ ಸ್ಪರ್ಧಿಸಲಿದೆ.
ಇನ್ನಷ್ಟು ಓದಿ: ಹುಂಡೈ ಕ್ರೆಟಾ ಆಟೋಮ್ಯಾಟಿಕ್