ಫೇಸ್‌ಲಿಫ್ಟ್ ಆಗಿರುವ ಕಿಯಾ ಸೋನೆಟ್ ಈ ದಿನಾಂಕದಂದು ಭಾರತದಲ್ಲಿ ಬಿಡುಗಡೆಯಾಗಲಿದೆ
ಕಿಯಾ ಸೊನೆಟ್ ಗಾಗಿ rohit ಮೂಲಕ ಜನವರಿ 10, 2024 05:19 pm ರಂದು ಪ್ರಕಟಿಸಲಾಗಿದೆ
- 180 Views
- ಕಾಮೆಂಟ್ ಅನ್ನು ಬರೆಯಿರಿ
ಕಿಯಾ ತನ್ನ ಸೋನೆಟ್ ಫೇಸ್ಲಿಫ್ಟ್ ಅನ್ನು ಜನವರಿ 12 ರಂದು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ, ಇದರ ಬೆಲೆಗಳು ಸುಮಾರು 8 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ (ಎಕ್ಸ್ ಶೋರೂಂ).
-
2020 ರಲ್ಲಿ ಇದನ್ನು ಭಾರತದಲ್ಲಿ ಪರಿಚಯಿಸಿದ ನಂತರ ಇದು ಮೊದಲ ಪ್ರಮುಖ ರಿಫ್ರೆಶ್ ಆಗಿದೆ.
-
ಅಪ್ಡೇಟ್ ಆಗಿರುವ SUV ಗಾಗಿ ರೂ.25,000 ಪಾವತಿ ಮಾಡಿ ಬುಕ್ಕಿಂಗ್ ಮಾಡಬಹುದು
-
ರಿವೈಸ್ ಆಗಿರುವ ಗ್ರಿಲ್ ಮತ್ತು ಶಾರ್ಪ್ ಆಗಿರುವ ಹೆಡ್ಲೈಟ್ಗಳು ಮತ್ತು DRL ಗಳನ್ನು ಒಳಗೊಂಡಂತೆ ಹೊರಭಾಗದಲ್ಲಿ ತಾಜಾ ಡಿಸೈನ್ ಅನ್ನು ಪಡೆದಿದೆ.
-
ಕ್ಯಾಬಿನ್ ಅಪ್ಡೇಟ್ ಗಳಲ್ಲಿ ರೀಡಿಸೈನ್ ಗೊಳಿಸಲಾದ ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ಮತ್ತು ಸೆಲ್ಟೋಸ್ ನಲ್ಲಿ ಇರುವಂತಹ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಅನ್ನು ಒಳಗೊಂಡಿವೆ.
-
ಹೆಚ್ಚುವರಿ ಫೀಚರ್ ಗಳಲ್ಲಿ ಸೆಮಿ-ಪವರ್ಡ್ ಡ್ರೈವರ್ ಸೀಟ್, 360-ಡಿಗ್ರಿ ಕ್ಯಾಮೆರಾ ಮತ್ತು ADAS ಅನ್ನು ಒಳಗೊಂಡಿರುತ್ತವೆ.
-
ಇದನ್ನು ಪೆಟ್ರೋಲ್ ಮತ್ತು ಡೀಸೆಲ್ ಪವರ್ಟ್ರೇನ್, ಈ ಎರಡೂ ಆಯ್ಕೆಗಳಲ್ಲಿ ಒದಗಿಸಲಾಗುತ್ತದೆ; ಆ ಮೂಲಕ ಡೀಸೆಲ್-MT ಮತ್ತೆ ವಾಪಾಸ್ ಬಂದಿದೆ.
ಫೇಸ್ಲಿಫ್ಟ್ ಆಗಿರುವ ಕಿಯಾ ಸೋನೆಟ್ ಬಗ್ಗೆ ಬಹುತೇಕ ಎಲ್ಲಾ ಮಾಹಿತಿಗಳು ಈಗ ಹೊರಬಿದ್ದಿದೆ ಮತ್ತು ಅದರ ಜೊತೆಗೆ ಕೆಲವು ಡೀಲರ್ಶಿಪ್ಗಳಿಗೆ ಮಾಡೆಲ್ ಗಳು ಕೂಡ ತಲುಪಿವೆ. ಈಗ ಈ ಹೊಸ SUV ಯ ಅತ್ಯಂತ ಪ್ರಮುಖ ವಿಷಯವಾದ ಬಿಡುಗಡೆಯ ದಿನಾಂಕದ ಬಗ್ಗೆ ತಿಳಿಯುವುದು ಮಾತ್ರ ಬಾಕಿಯಿದೆ. ಇಷ್ಟು ದಿನ ಕಾಯುತ್ತಿದ್ದ ನಿಮಗೆ ಒಂದು ಒಳ್ಳೆಯ ಸುದ್ದಿಯೆಂದರೆ ರೆನಾಲ್ಟ್ ತನ್ನ ಅಪ್ಡೇಟ್ ಆಗಿರುವ ಸೋನೆಟ್ ಅನ್ನು ಭಾರತದಲ್ಲಿ ಜನವರಿ 12 ರಂದು ಪರಿಚಯಿಸುತ್ತಿದೆ. ಹೊಸ ಸೋನೆಟ್ನ ಬಿಡುಗಡೆಯ ಮುಂಚೆ ಅದರ ಕೆಲವು ಪ್ರಮುಖ ವಿವರಗಳು ಇಲ್ಲಿದೆ:
ಹೊಸದಾದ ಹೊರಭಾಗದ ಡಿಸೈನ್
2020 ರಲ್ಲಿ ಪರಿಚಯಿಸಲಾದ ಸೋನೆಟ್ ಸಬ್ಕಾಂಪ್ಯಾಕ್ಟ್ SUV ತನ್ನ ಮೊದಲ ಪ್ರಮುಖ ರಿಫ್ರೆಶ್ ಪಡೆಯುತ್ತಿದೆ. ಅದರ ಹೊರಭಾಗದ ಅಪ್ಡೇಟ್ ಗಳಲ್ಲಿ ರಿವೈಸ್ ಆಗಿರುವ ಗ್ರಿಲ್, ಉದ್ದವಾದ ಫಾಂಗ್-ಆಕಾರದ LED DRL ಗಳೊಂದಿಗೆ ರಿವೈಸ್ ಆಗಿರುವ LED ಹೆಡ್ ಲೈಟ್ ಗಳು, ಸ್ಲೀಕ್ ಆಗಿರುವ LED ಫಾಗ್ ಲ್ಯಾಂಪ್ ಗಳು, ರಿವೈಸ್ ಆಗಿರುವ ಕನೆಕ್ಟೆಡ್ LED ಟೈಲ್ ಲೈಟ್ ಗಳು ಮತ್ತು ಟ್ವೀಕ್ ಮಾಡಿದ ಬಂಪರ್ ಗಳು ಸೇರಿವೆ. ನೀವು ಅಲಾಯ್ ಗಳಿಗೆ ಅಪ್ಡೇಟ್ ಆಗಿರುವ ಡಿಸೈನ್ ಅನ್ನು ಕೂಡ ಪಡೆಯಬಹುದು. ಆದರೆ ಇದು ನೀವು ಆರಿಸಿಕೊಳ್ಳುವ ಟ್ರಿಮ್ ಗಳಾದ ಟೆಕ್ ಲೈನ್, ಜಿಟಿ ಲೈನ್, ಅಥವಾ ಎಕ್ಸ್-ಲೈನ್ ಟ್ರಿಮ್ ಆಧಾರದ ಮೇಲೆ ಡಿಸೈನ್ ವಿಭಿನ್ನವಾಗಿರುತ್ತದೆ.
ಇಂಟೀರಿಯರ್ ಮತ್ತು ಫೀಚರ್ ಗಳು
ಹೊಸ ಮಾಡೆಲ್ ನ ಇಂಟೀರಿಯರ್ ಅದರ ಹಿಂದಿನ ಮಾಡೆಲ್ ನ ಇಂಟೀರಿಯರ್ ಗೆ ತುಂಬಾ ಹೋಲುತ್ತದೆ, ಇದರಲ್ಲಿ ರಿವೈಸ್ ಆಗಿರುವ ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ನಂತಹ ಸಣ್ಣ ಅಪ್ಡೇಟ್ ಗಳನ್ನು ಒಳಗೊಂಡಿದೆ. ಇಲ್ಲಿ ಸನ್ರೂಫ್, ವೈರ್ಲೆಸ್ ಫೋನ್ ಚಾರ್ಜಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್ಗಳು ಮತ್ತು ಕ್ರೂಸ್ ಕಂಟ್ರೋಲ್ನಂತಹ ಫೀಚರ್ ಗಳನ್ನು ಮುಂದುವರಿಸಲಾಗಿದೆ. ಇದರ ಜೊತೆಗೆ ಕಿಯಾ ಈಗ ಸೆಲ್ಟೋಸ್ ಗೆ ಹೋಲುವ 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಮತ್ತು ಹ್ಯುಂಡೈ ವೆನ್ಯೂನಿಂದ ಸ್ಫೂರ್ತಿ ಪಡೆದಿರುವ 4-ವೇ ಪವರ್ಡ್ ಡ್ರೈವರ್ ಸೀಟ್ ಅನ್ನು ಪರಿಚಯಿಸಿದೆ.
ಎರಡು ದೊಡ್ಡ ಸುರಕ್ಷತಾ ಫೀಚರ್ ಗಳು, ಲೆವೆಲ್-1 ಸುಧಾರಿತ ಡ್ರೈವ್ ಅಸ್ಸಿಸ್ಟಂಸ್ ಸಿಸ್ಟಮ್ಸ್ (ADAS) ಮತ್ತು 360-ಡಿಗ್ರಿ ಕ್ಯಾಮೆರಾ ರೂಪದಲ್ಲಿ ಬಂದಿವೆ. ಆರು ಏರ್ಬ್ಯಾಗ್ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಮತ್ತು ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ ಗಳಂತಹ ಹೆಚ್ಚುವರಿ ಸುರಕ್ಷತಾ ಕಿಟ್ಗಳನ್ನು ಸೋನೆಟ್ ಮುಂದುವರಿಸುತ್ತಿದೆ.
ಇದಕ್ಕೆ ಸಂಬಂಧಿಸಿದಂತೆ: 2024 ಕಿಯಾ ಸೋನೆಟ್: ನೀವು ಇದಕ್ಕಾಗಿ ಕಾಯಬೇಕೇ ಅಥವಾ ಅದರ ಪ್ರತಿಸ್ಪರ್ಧಿಗಳ ಡೀಲ್ ಉತ್ತಮವಾಗಿದೆಯೇ?
ಎಂಜಿನ್ ನಲ್ಲಿ ಏನಿದೆ?
ಕಿಯಾ ಫೇಸ್ಲಿಫ್ಟ್ ಆಗಿರುವ ಸೋನೆಟ್ ಅನ್ನು ಈ ಕೆಳಗಿನ ಪವರ್ಟ್ರೇನ್ ಆಯ್ಕೆಗಳೊಂದಿಗೆ ನೀಡುತ್ತಿದೆ:
ನಿರ್ದಿಷ್ಟ ವಿವರಗಳು |
1.2-ಲೀಟರ್ ಪೆಟ್ರೋಲ್ |
1-ಲೀಟರ್ ಟರ್ಬೊ-ಪೆಟ್ರೋಲ್ |
1.5-ಲೀಟರ್ ಡೀಸೆಲ್ |
ಪವರ್ |
83 PS |
120 PS |
116 PS |
ಟಾರ್ಕ್ |
115 Nm |
172 Nm |
250 Nm |
ಟ್ರಾನ್ಸ್ಮಿಷನ್ |
5-ಸ್ಪೀಡ್ MT |
6- ಸ್ಪೀಡ್ iMT, 7- ಸ್ಪೀಡ್ DCT |
6- ಸ್ಪೀಡ್ iMT, 6- ಸ್ಪೀಡ್ MT (ಹೊಸ), 6- ಸ್ಪೀಡ್ AT |
ಹೇಳಲಾಗಿರುವ ಮೈಲೇಜ್ |
18.83 ಕೆಎಂಪಿಎಲ್ |
18.7 ಕೆಎಂಪಿಎಲ್, 19.2 ಕೆಎಂಪಿಎಲ್ |
22.3 ಕೆಎಂಪಿಎಲ್, T.B.D.^, 18.6 ಕೆಎಂಪಿಎಲ್ |
ಟು ಬಿ ಡಿಕ್ಲೇರ್ಡ್
ಫೇಸ್ಲಿಫ್ಟ್ನೊಂದಿಗೆ, ಸೋನೆಟ್ 2023 ರ ಆರಂಭದಲ್ಲಿ ನಿಲ್ಲಿಸಲಾದ ಡೀಸೆಲ್-MT ಆಯ್ಕೆಯನ್ನು ಮರಳಿ ತಂದಿದೆ. ಡೀಸೆಲ್ ಮ್ಯಾನ್ಯುವಲ್ನ ಕ್ಲೈಮ್ ಮಾಡಲಾಗಿರುವ ಮೈಲೇಜ್ ಅನ್ನು ಕಿಯಾ ಇನ್ನೂ ಬಹಿರಂಗಪಡಿಸಿಲ್ಲ.
ಬೆಲೆ ಮತ್ತು ಪ್ರತಿಸ್ಫರ್ಧಿಗಳು
ಫೇಸ್ಲಿಫ್ಟೆಡ್ ಆಗಿರುವ ಕಿಯಾ ಸೋನೆಟ್ ಸುಮಾರು 8 ಲಕ್ಷ ರೂಪಾಯಿಯ (ಎಕ್ಸ್ ಶೋರೂಂ) ಆರಂಭಿಕ ಬೆಲೆಯಿಂದ ಶುರುವಾಗಬಹುದು ಎಂದು ನಾವು ನಿರೀಕ್ಷಿಸುತ್ತಿದ್ದೇವೆ. ಇದು ಹ್ಯುಂಡೈ ವೆನ್ಯೂ, ಮಾರುತಿ ಬ್ರೆಝಾ, ಟಾಟಾ ನೆಕ್ಸಾನ್, ಮಹೀಂದ್ರ XUV300, ನಿಸ್ಸಾನ್ ಮ್ಯಾಗ್ನೈಟ್, ರೆನಾಲ್ಟ್ ಕಿಗರ್, ಮತ್ತು ಸಬ್-4m ಕ್ರಾಸ್ಒವರ್ ಆಗಿರುವ ಮಾರುತಿ ಫ್ರಾಂಕ್ಸ್ನಿಂದ ಸ್ಪರ್ಧೆಯನ್ನು ಎದುರಿಸಲಿದೆ
ಇನ್ನಷ್ಟು ಓದಿ: ಸೋನೆಟ್ ಆಟೋಮ್ಯಾಟಿಕ್