ವಿದೇಶಿ ಮಾರುಕಟ್ಟೆಗಾಗಿ 2024 Maruti Suzuki Swift ವಿಶೇಷಣಗಳು ಬಹಿರಂಗ, ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ

published on ಮಾರ್ಚ್‌ 28, 2024 09:06 pm by rohit for ಮಾರುತಿ ಸ್ವಿಫ್ಟ್

  • 32 Views
  • ಕಾಮೆಂಟ್‌ ಅನ್ನು ಬರೆಯಿರಿ

ಯುನೈಟೆಡ್‌ ಕಿಂಗ್‌ಡಮ್‌ ದೇಶದ ಮಾರುಕಟ್ಟೆ ಆಧಾರಿತ ನಾಲ್ಕನೇ-ಜನರೇಶನ್‌ನ ಸ್ವಿಫ್ಟ್ ಹೊಸ 1.2-ಲೀಟರ್ 3-ಸಿಲಿಂಡರ್ Z ಸರಣಿ ಪೆಟ್ರೋಲ್ ಎಂಜಿನ್ ಜೊತೆಗೆ ಮ್ಯಾನುವಲ್ ಮತ್ತು ಸಿವಿಟಿ ಆಟೋಮ್ಯಾಟಿಕ್‌ ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ಬರುತ್ತದೆ

2024 Suzuki Swift UK specifications revealed

  • ಸುಜುಕಿಯು ಹೊಸ ಸ್ವಿಫ್ಟ್ ಅನ್ನು 2024 ರ ಏಪ್ರಿಲ್ ವೇಳೆಯಲ್ಲಿ ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಬಿಡುಗಡೆ ಮಾಡಲಿದೆ.
  • ಇದು ಈ ಹಿಂದಿನ ಭಾರತ ಆಧಾರಿತ ಮಾಡೆಲ್‌ಗಿಂತ 15 ಮಿಮೀ ಉದ್ದವಾಗಿದೆ, ಆದರೆ ಅದೇ ಅಗಲ ಮತ್ತು ವೀಲ್‌ಬೇಸ್ ಹೊಂದಿದೆ.
  • UK ನಲ್ಲಿ 2WD ಮತ್ತು AWD ಆಯ್ಕೆಗಳಲ್ಲಿ ಲಭ್ಯವಾಗಲಿದ್ದು, ಇಂಡಿಯಾ-ಸ್ಪೆಕ್ ಮಾಡೆಲ್ 2WD ಕೊಡುಗೆಯಾಗಿ ಮಾತ್ರ ನೀಡಲಾಗುತ್ತದೆ. 
  • 9-ಇಂಚಿನ ಟಚ್‌ಸ್ಕ್ರೀನ್, ಆಟೋಮ್ಯಾಟಿಕ್‌ ಎಸಿ, ರಿವರ್ಸಿಂಗ್ ಕ್ಯಾಮೆರಾ ಮತ್ತು ADAS ನಂತಹ ವೈಶಿಷ್ಟ್ಯಗಳನ್ನು ಪಡೆಯುತ್ತದೆ.
  • 2024ರ ಏಪ್ರಿಲ್ ವೇಳೆಗೆ ಭಾರತದ ಬಿಡುಗಡೆಯನ್ನು ನಿರೀಕ್ಷಿಸಲಾಗಿದೆ; ಎಕ್ಸ್ ಶೋರೂಂ ಬೆಲೆಗಳು 6 ಲಕ್ಷ ರೂ.ನಿಂದ ಪ್ರಾರಂಭವಾಗಬಹುದು. 

ನಾಲ್ಕನೇ ತಲೆಮಾರಿನ ಮಾರುತಿ ಸುಜುಕಿ ಸ್ವಿಫ್ಟ್ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸುವ ನಿರೀಕ್ಷೆಯಿದೆ. ಇದನ್ನು ಈಗಾಗಲೇ ತನ್ನ ತಾಯ್ನಾಡಿನಲ್ಲಿ (ಜಪಾನ್ ಎಂದು ಓದಿ) ಬಿಡುಗಡೆ ಮಾಡಲಾಗಿದೆ ಮತ್ತು ಏಪ್ರಿಲ್‌ನಲ್ಲಿ UK ಮಾರುಕಟ್ಟೆಗೆ ಪ್ರವೇಶಿಸಲಿದೆ. ಈಗ, UK-ಸ್ಪೆಕ್ ಸ್ವಿಫ್ಟ್‌ನ ಆಯಾಮಗಳು, ಪವರ್‌ಟ್ರೇನ್ ವಿವರಗಳು, ವೇರಿಯೆಂಟ್‌ಗಳು ಮತ್ತು ಕೆಲವು ಪ್ರಮುಖ ವೈಶಿಷ್ಟ್ಯಗಳನ್ನು ಒಳಗೊಂಡಂತೆ ಸುಜುಕಿ ಎಲ್ಲಾ ವಿವರಗಳನ್ನು ಬಹಿರಂಗಪಡಿಸಿದೆ. ಅವುಗಳನ್ನು ಪರಿಶೀಲಿಸೋಣ:

ಹೊಸ ಸ್ವಿಫ್ಟ್‌ನ ಆಯಾಮಗಳು

ಆಯಾಮಗಳು

ಯುಕೆ-ಸ್ಪೆಕ್ ಸ್ವಿಫ್ಟ್

ಪ್ರಸ್ತುತ ಭಾರತ-ಸ್ಪೆಕ್ ಸ್ವಿಫ್ಟ್

ವ್ಯತ್ಯಾಸ

ಉದ್ದ

3860 ಮಿ.ಮೀ

3845 ಮಿ.ಮೀ

+15 ಮಿಮೀ

ಅಗಲ

1735 ಮಿ.ಮೀ

1735 ಮಿ.ಮೀ

ವ್ಯತ್ಯಾಸವಿಲ್ಲ

ಎತ್ತರ

1495 ಮಿ.ಮೀ (2WD)/ 1520 ಮಿ.ಮೀ (AWD)

1530 ಮಿ.ಮೀ

-35 ಮಿಮೀ / -10 ಮಿಮೀ

ವೀಲ್‌ಬೇಸ್‌

2450 ಮಿ.ಮೀ

2450 ಮಿ.ಮೀ

ವ್ಯತ್ಯಾಸವಿಲ್ಲ

UK-spec Suzuki Swift side

ಯುಕೆ-ಸ್ಪೆಕ್ ಹೊಸ ಸ್ವಿಫ್ಟ್ ಪ್ರಸ್ತುತ ಮಾರಾಟದಲ್ಲಿರುವ ಇಂಡಿಯಾ-ಸ್ಪೆಕ್ ಮಾಡೆಲ್‌ಗಿಂತ 15 ಎಂಎಂ ಉದ್ದವಾಗಿದೆ. ಅದರ ಅಗಲ ಮತ್ತು ವೀಲ್‌ಬೇಸ್ ಇಂಡಿಯಾ-ಸ್ಪೆಕ್ ಸ್ವಿಫ್ಟ್‌ಗೆ ಹೋಲುತ್ತದೆ. ಯುಕೆ-ಸ್ಪೆಕ್ ಮಾಡೆಲ್‌ ನಮ್ಮ ದೇಶದಲ್ಲಿ ಮಾರಾಟದಲ್ಲಿರುವ  ಮಾಡೆಲ್‌ಗಿಂತ 35 ಎಂಎಂ ವರೆಗೆ ಚಿಕ್ಕದಾಗಿದೆ.

ಪವರ್‌ಟ್ರೇನ್ ಆಫರ್

UK-spec Suzuki Swift

ಜಪಾನ್-ಸ್ಪೆಕ್ ಹ್ಯಾಚ್‌ಬ್ಯಾಕ್‌ನಲ್ಲಿ ಕಂಡುಬರುವಂತೆ ಸುಜುಕಿ ಯುಕೆ-ಸ್ಪೆಕ್ ಸ್ವಿಫ್ಟ್ ಅನ್ನು ಹೊಸ 1.2-ಲೀಟರ್ 3-ಸಿಲಿಂಡರ್ Z ಸರಣಿಯ ಪೆಟ್ರೋಲ್ ಎಂಜಿನ್‌ನೊಂದಿಗೆ ನೀಡುತ್ತಿದೆ. ಅದರ ಪವರ್ ಔಟ್‌ಪುಟ್ ಜಪಾನ್-ಸ್ಪೆಕ್ ಮೊಡೆಲ್‌ನಂತೆಯೇ ಇದ್ದರೂ, ಇದು ಸ್ವಲ್ಪ ಹೆಚ್ಚು ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎರಡೂ ಮಾರುಕಟ್ಟೆಗಳಲ್ಲಿ ಗ್ರಾಹಕರು ಹೊಸ ಹ್ಯಾಚ್‌ಬ್ಯಾಕ್ ಅನ್ನು 12V ಮೈಲ್ಡ್‌-ಹೈಬ್ರಿಡ್ ಸಿಸ್ಟಮ್ ಮತ್ತು ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್‌ ಆಯ್ಕೆಗಳೊಂದಿಗೆ ಹೊಂದಬಹುದು. ಜಪಾನ್-ಸ್ಪೆಕ್ ಮಾಡೆಲ್‌ನಂತೆಯೇ, UK ಯಲ್ಲಿಯೂ ಆಲ್-ವೀಲ್ ಡ್ರೈವ್ (AWD) ಆಯ್ಕೆಯೊಂದಿಗೆ ಸುಜುಕಿ ಸ್ವಿಫ್ಟ್ ಅನ್ನು ನೀಡುವುದನ್ನು ಮುಂದುವರಿಸುತ್ತದೆ.

ಹೊಸ ಸ್ವಿಫ್ಟ್ ಭಾರತಕ್ಕೆ ಬಂದಾಗ, ಅದು ಅದೇ ರೀತಿಯ ಗೇರ್‌ಬಾಕ್ಸ್‌ ಆಯ್ಕೆಗಳನ್ನು ಉಳಿಸಿಕೊಳ್ಳುತ್ತದೆ ಮತ್ತು 2WD ಸೆಟಪ್‌ನೊಂದಿಗೆ ಮಾತ್ರ ಮುಂದುವರಿಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ.

ಇದನ್ನು ಓದಿ: Wagon R ಮತ್ತು Balenoದ ಸುಮಾರು 16,000 ಕಾರುಗಳನ್ನು ಹಿಂಪಡೆದ Maruti

ವೈಶಿಷ್ಟ್ಯದ ಹೈಲೈಟ್‌ಗಳು 

UK-spec Suzuki Swift cabin

ಹೊಸ ಯುಕೆ-ಸ್ಪೆಕ್ ಸ್ವಿಫ್ಟ್‌ಗಾಗಿ ನವೀಕರಿಸಲಾದ ಕ್ಯಾಬಿನ್ ಮತ್ತು ವೈಶಿಷ್ಟ್ಯವು ಜಪಾನೀಸ್ ಹ್ಯಾಚ್‌ಬ್ಯಾಕ್‌ನಂತೆಯೇ ಇದೆ. ಇದು 9-ಇಂಚಿನ ಟಚ್‌ಸ್ಕ್ರೀನ್ ಯುನಿಟ್‌, 16-ಇಂಚಿನ ಅಲಾಯ್‌ ವೀಲ್‌ಗಳು, ಆಟೋಮ್ಯಾಟಿಕ್‌ ಎಸಿ, ಎಲ್‌ಇಡಿ ಹೆಡ್‌ಲೈಟ್‌ಗಳು, ಎಲೆಕ್ಟ್ರಿಕಲಿ ಅಡ್ಜಸ್ಟ್ ಮಾಡಬಹುದಾದ ಒಆರ್‌ವಿಎಂಗಳು ಮತ್ತು ಕನೆಕ್ಟೆಡ್‌ ಕಾರ್ ಟೆಕ್‌ನೊಂದಿಗೆ ಒದಗಿಸಲಾಗುವುದು. ಇದರ ಸುರಕ್ಷತಾ ಪ್ಯಾಕೇಜ್‌ ಲೇನ್ ಡಿಪರ್ಚರ್‌ ವಾರ್ನಿಂಗ್‌ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಜೊತೆಗೆ ರಿವರ್ಸಿಂಗ್ ಕ್ಯಾಮೆರಾ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳಂತಹ ಬಹು ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳನ್ನು (ADAS) ಒಳಗೊಂಡಿದೆ.

ಪೂರ್ಣ ADAS ಸೂಟ್ ಅಥವಾ ಬಿಸಿಯಾದ ಸೀಟ್‌ಗಳನ್ನು ಹೊರತುಪಡಿಸಿ ಈ ಹಲವು ವೈಶಿಷ್ಟ್ಯಗಳು ಇಂಡಿಯಾ-ಸ್ಪೆಕ್ ಹೊಸ-ಜೆನ್ ಮಾರುತಿ ಸ್ವಿಫ್ಟ್‌ನಲ್ಲಿಯು ಲಭ್ಯವಾಗಲಿದೆ ಎಂಬ ನಿರೀಕ್ಷೆಯಿದೆ. 

ನಿರೀಕ್ಷಿತ ಭಾರತ ಬಿಡುಗಡೆ ಮತ್ತು ಬೆಲೆ

UK-spec Suzuki Swift rear

ಭಾರತದಲ್ಲಿ 2024ರ ಮಾರುತಿ ಸುಜುಕಿ ಸ್ವಿಫ್ಟ್ ಏಪ್ರಿಲ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ, ಇದರ ಎಕ್ಸ್ ಶೋ ರೂಂ ಬೆಲೆಗಳು 6 ಲಕ್ಷ ರೂ.ನಿಂದ ಪ್ರಾರಂಭವಾಗುವ ಸಾಧ್ಯತೆಯಿದೆ. ಇದು ಹ್ಯುಂಡೈ ಗ್ರಾಂಡ್ i10 ನಿಯೋಸ್‌ನೊಂದಿಗೆ ತನ್ನ ಪೈಪೋಟಿಯನ್ನು ಮುಂದುವರೆಸುತ್ತದೆ ಮತ್ತು ಸಬ್-4m ಕ್ರಾಸ್‌ಒವರ್ MPV, ರೆನಾಲ್ಟ್ ಟ್ರೈಬರ್‌ಗೆ ಪರ್ಯಾಯವಾಗಿದೆ.

ಇನ್ನಷ್ಟು ಓದಿ: ಸ್ವಿಫ್ಟ್ AMT

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಮಾರುತಿ ಸ್ವಿಫ್ಟ್

Read Full News

explore ಇನ್ನಷ್ಟು on ಮಾರುತಿ ಸ್ವಿಫ್ಟ್

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience