• English
  • Login / Register

32 ಕಿ.ಮೀ ಮೈಲೇಜ್‌ ನೀಡುವ 2024 Maruti Swift ಸಿಎನ್‌ಜಿ 8.20 ಲಕ್ಷ ರೂ.ಗೆ ಬಿಡುಗಡೆ

ಮಾರುತಿ ಸ್ವಿಫ್ಟ್ ಗಾಗಿ rohit ಮೂಲಕ ಸೆಪ್ಟೆಂಬರ್ 12, 2024 04:21 pm ರಂದು ಪ್ರಕಟಿಸಲಾಗಿದೆ

  • 75 Views
  • ಕಾಮೆಂಟ್‌ ಅನ್ನು ಬರೆಯಿರಿ

ಸ್ವಿಫ್ಟ್ ಸಿಎನ್‌ಜಿ Vxi, Vxi (O), ಮತ್ತು Zxi ಎಂಬ ಮೂರು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ, ಇದರ ಪೆಟ್ರೋಲ್-ಮ್ಯಾನುವಲ್ ಆವೃತ್ತಿಗಿಂತ ಇದು 90,000 ರೂ.ನಷ್ಟು ಹೆಚ್ಚಿನ ಬೆಲೆಯನ್ನು ಹೊಂದಿದೆ

2024 Maruti Swift CNG launched

  • ಮಾರುತಿಯು ಹೊಸ ಸ್ವಿಫ್ಟ್‌ನ ಪೆಟ್ರೋಲ್ ಆವೃತ್ತಿಗಳನ್ನು 2024ರ ಮೇ ತಿಂಗಳಿನಲ್ಲಿ ಬಿಡುಗಡೆ ಮಾಡಿತು.
  • ದೆಹಲಿಯಲ್ಲಿ ಸಿಎನ್‌ಜಿ ಆವೃತ್ತಿಗಳ ಎಕ್ಸ್ ಶೋರೂಂ ಬೆಲೆಗಳು 8.20 ಲಕ್ಷ ರೂ.ನಿಂದ 9.20 ಲಕ್ಷ ರೂ.ವರೆಗೆ ಇರಲಿದೆ. 
  • ಸಿಎನ್‌ಜಿ ಆವೃತ್ತಿಗಳು ಅದೇ 1.2-ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್‌ ಅನ್ನು ಪಡೆಯುತ್ತವೆ ಆದರೆ ಇಲ್ಲಿ ಇದು 69 ಪಿಎಸ್/102 ಎನ್‌ಎಮ್‌ ಅಷ್ಟು ಉತ್ಪಾದಿಸುತ್ತದೆ ಮತ್ತು 5-ಸ್ಪೀಡ್‌ ಮ್ಯಾನುಯಲ್‌ ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ಬರುತ್ತದೆ.
  • ಮಾರುತಿಯು ಸ್ವಿಫ್ಟ್ ಸಿಎನ್‌ಜಿಯನ್ನು 7 ಇಂಚಿನ ಟಚ್‌ಸ್ಕ್ರೀನ್, ಆಟೋ ಎಸಿ ಮತ್ತು ಆರು ಏರ್‌ಬ್ಯಾಗ್‌ಗಳೊಂದಿಗೆ ನೀಡುತ್ತದೆ.
  • ದೆಹಲಿಯಲ್ಲಿ ಸ್ವಿಫ್ಟ್‌ನ ಎಕ್ಸ್ ಶೋರೂಂ ಬೆಲೆಗಳು 6.49 ಲಕ್ಷ ರೂ.ನಿಂದ 9.60 ಲಕ್ಷ ರೂ.ವರೆಗೆ ಇರುತ್ತದೆ. 

ನಾಲ್ಕನೇ ತಲೆಮಾರಿನ ಮಾರುತಿ ಸ್ವಿಫ್ಟ್ ಅನ್ನು  2024ರ ಮೇ ತಿಂಗಳಿನಲ್ಲಿ ನಮ್ಮ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದಾಗ, ಅದು ಸಿಎನ್‌ಜಿ ಆಯ್ಕೆಯೊಂದಿಗೆ ಲಭ್ಯವಿರಲಿಲ್ಲ. ಮಾರುತಿಯು ಈಗ ಈ ಕೊರತೆಯನ್ನು ಪರಿಹರಿಸಿದೆ ಮತ್ತು ಹ್ಯಾಚ್‌ಬ್ಯಾಕ್‌ನ ಸಿಎನ್‌ಜಿ ಆವೃತ್ತಿಗಳನ್ನು ಬಿಡುಗಡೆ ಮಾಡಿದೆ. ಒಪ್ಶನಲ್‌ ಸಿಎನ್‌ಜಿ ಕಿಟ್‌ ಅನ್ನು ಮೂರು ಆವೃತ್ತಿಗಳಲ್ಲಿ ನೀಡಲಾಗುತ್ತಿದೆ, ಅವುಗಳ ಬೆಲೆ ಈ ಕೆಳಗಿನಂತಿರುತ್ತದೆ:

ವೇರಿಯೆಂಟ್‌

ಸಾಮಾನ್ಯ ಬೆಲೆ

ಸಿಎನ್‌ಜಿ ಬೆಲೆ

ವ್ಯತ್ಯಾಸ

ವಿಎಕ್ಸ್‌ಐ

7.30 ಲಕ್ಷ ರೂ.

8.20 ಲಕ್ಷ ರೂ.

  • 90,000 ರೂ

ವಿಎಕ್ಸ್‌ಐ (ಒಪ್ಶನಲ್‌)

7.57 ಲಕ್ಷ ರೂ.

8.47 ಲಕ್ಷ ರೂ.

  • 90,000 ರೂ

ಝೆಡ್‌ಎಕ್ಸ್‌ಐ

8.30 ಲಕ್ಷ ರೂ.

9.20 ಲಕ್ಷ ರೂ.

  • 90,000 ರೂ. 

ಸಿಎನ್‌ಜಿ ವೇರಿಯೆಂಟ್‌ಗಳು ಅವುಗಳ ಅನುಗುಣವಾದ ಪೆಟ್ರೋಲ್-ಮ್ಯಾನುವಲ್ ಆವೃತ್ತಿಗಿಂತ ಇದು 90,000 ರೂ.ನಷ್ಟು ಹೆಚ್ಚಿನ ಬೆಲೆಯನ್ನು ಹೊಂದಿದೆ. 

ಸಿಎನ್‌ಜಿ ಎಂಜಿನ್ ಮತ್ತು ಗೇರ್‌ಬಾಕ್ಸ್ ವಿವರಗಳು

ಮಾರುತಿಯು ಸ್ವಿಫ್ಟ್‌ನ ಸಿಎನ್‌ಜಿ ಆವೃತ್ತಿಗಳನ್ನು ಕೆಳಗಿನ ಎಂಜಿನ್ ಮತ್ತು ಗೇರ್‌ಬಾಕ್ಸ್ ಆಯ್ಕೆಯೊಂದಿಗೆ ಒದಗಿಸಿದೆ:

ಮೊಡೆಲ್‌

ಸ್ವಿಫ್ಟ್‌ನ ಸಿಎನ್‌ಜಿ

ಎಂಜಿನ್‌

1.2-ಲೀಟರ್‌ ಪೆಟ್ರೋಲ್‌+ಸಿಎನ್‌ಜಿ

ಪವರ್‌

69 ಪಿಎಸ್‌

ಟಾರ್ಕ್‌

102 ಎನ್‌ಎಮ್‌

ಗಗೇರ್‌ಬಾಕ್ಸ್‌

5-ಸ್ಪೀಡ್‌ ಮ್ಯಾನುಯಲ್‌

ಕ್ಲೈಮ್‌ ಮಾಡಲಾದ ಮೈಲೇಜ್‌

32.85 ಕಿ.ಮೀ/ಕೆ.ಜಿ

ಅದೇ 1.2-ಲೀಟರ್ ಪೆಟ್ರೋಲ್ ಎಂಜಿನ್ ಇತರ ಆವೃತ್ತಿಗಳಲ್ಲಿ ಲಭ್ಯವಿದೆ, ಇದರಲ್ಲಿ ಇದು 82 ಪಿಎಸ್‌ ಮತ್ತು 112 ಎನ್‌ಎಮ್‌ಅನ್ನು ಮಾಡುತ್ತದೆ. ಇದು 5-ಸ್ಪೀಡ್‌ ಎಎಮ್‌ಟಿ ಆಯ್ಕೆಯನ್ನು ಸಹ ನೀಡುತ್ತದೆ.

ಇದನ್ನೂ ಓದಿ: ಟಾಟಾದಿಂದ ಹಬ್ಬಗಳ ಸೀಸನ್ ಶುರು: ಆಯ್ದ ಟಾಟಾ ಕಾರುಗಳ ಮೇಲೆ 2.05 ಲಕ್ಷದವರೆಗೆ ಬೆಲೆ ಕಡಿತ

ಫೀಚರ್‌ಗಳು

2024 Maruti Swift 7-inch touchscreen

ಯಾಂತ್ರಿಕ ಬದಲಾವಣೆಗಳ ಹೊರತಾಗಿ, ಸ್ವಿಫ್ಟ್ ಸಿಎನ್‌ಜಿಯು ಆಫರ್‌ನಲ್ಲಿರುವ ವೇರಿಯಂಟ್‌ಗಳೊಂದಿಗೆ ಹೊಂದಿಸಿದ ಫೀಚರ್‌ನಲ್ಲಿ ಯಾವುದೇ ಪರಿಷ್ಕರಣೆಗಳನ್ನು ಪಡೆಯುವುದಿಲ್ಲ. ಪ್ರಮುಖ ಫೀಚರ್‌ಗಳಲ್ಲಿ 7-ಇಂಚಿನ ಟಚ್‌ಸ್ಕ್ರೀನ್, ಹಿಂಬದಿಯ ದ್ವಾರಗಳೊಂದಿಗೆ ಆಟೋ ಕ್ಲೈಮೇಟ್‌ ಕಂಟ್ರೋಲ್‌, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಕನೆಕ್ಟೆಡ್‌ ಕಾರ್ ಟೆಕ್ ಸೇರಿವೆ.

ಇದರ ಸುರಕ್ಷತಾ ಕಿಟ್ ಆರು ಏರ್‌ಬ್ಯಾಗ್‌ಗಳನ್ನು (ಎಲ್ಲಾ ಆವೃತ್ತಿಗಳಲ್ಲಿ), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಹಿಲ್-ಹೋಲ್ಡ್ ಅಸಿಸ್ಟ್ ಮತ್ತು ರಿವರ್ಸಿಂಗ್ ಕ್ಯಾಮೆರಾವನ್ನು ಒಳಗೊಂಡಿದೆ.

 ಬೆಲೆ ಮತ್ತು ಪ್ರತಿಸ್ಪರ್ಧಿಗಳು

2024 Maruti Swift rear

ಮಾರುತಿ ಸ್ವಿಫ್ಟ್ ಸಿಎನ್‌ಜಿಯ ಏಕೈಕ ನೇರ ಪ್ರತಿಸ್ಪರ್ಧಿ ಹ್ಯುಂಡೈ ಗ್ರಾಂಡ್ ಐ10 ನಿಯೋಸ್ ಸಿಎನ್‌ಜಿ. ಹ್ಯುಂಡೈ ಹ್ಯಾಚ್‌ಬ್ಯಾಕ್ ಹೊರತಾಗಿ, ಮಾರುತಿ ಸ್ವಿಫ್ಟ್ ಟಾಟಾ ಪಂಚ್ ಮತ್ತು ಹ್ಯುಂಡೈ ಎಕ್ಸ್‌ಟರ್‌ನ ಸಿಎನ್‌ಜಿ ಆವೃತ್ತಿಗಳಿಗೆ ಆಯ್ಕೆಯಾಗಿದೆ.

ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ 

ಇನ್ನಷ್ಟು ಓದಿ :  ಮಾರುತಿ ಸ್ವಿಫ್ಟ್‌ ಎಎಮ್‌ಟಿ

was this article helpful ?

Write your Comment on Maruti ಸ್ವಿಫ್ಟ್

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience