Login or Register ಅತ್ಯುತ್ತಮ CarDekho experience ಗೆ
Login

2024 MG ಆಸ್ಟರ್ ಅನ್ನು ಲಾಂಚ್ ಮಾಡಲಾಗಿದೆ: ಮೊದಲಿಗಿಂತ ಹೆಚ್ಚು ಕೈಗೆಟುಕುವ ಬೆಲೆ ಮತ್ತು ಟೆಕ್-ತುಂಬಿರುವ ಫೀಚರ್ ಗಳು

published on ಜನವರಿ 15, 2024 06:59 pm by shreyash for ಎಂಜಿ ಅಸ್ಟೋರ್

9.98 ಲಕ್ಷ ರೂಪಾಯಿಯ ಹೊಸ ಬೇಸ್-ಸ್ಪೆಕ್ 'ಸ್ಪ್ರಿಂಟ್' ವೇರಿಯಂಟ್ ನೊಂದಿಗೆ, MG ಆಸ್ಟರ್ ಮಾರುಕಟ್ಟೆಯಲ್ಲಿ ಅತ್ಯಂತ ಕೈಗೆಟುಕುವ ಬೆಲೆಯ ಕಾಂಪ್ಯಾಕ್ಟ್ SUV ಆಗಿದೆ.

  • SUVಯ 2024 ರ ಅಪ್ಡೇಟ್ ಗಳಲ್ಲಿ ವೆಂಟಿಲೆಟ್ ಆಗಿರುವ ಫ್ರಂಟ್ ಸೀಟ್ ಗಳು, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಆಟೋ- ಡಿಮ್ಮಿಂಗ್ IRVM ನಂತಹ ಫೀಚರ್ ಗಳನ್ನು ಒಳಗೊಂಡಿದೆ.

  • 10.1-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಈಗ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇಯನ್ನು ಸಪೋರ್ಟ್ ಮಾಡುವ ಸಾಫ್ಟ್‌ವೇರ್ ಅಪ್‌ಡೇಟ್ ಅನ್ನು ಕೂಡ ಪಡೆದುಕೊಂಡಿದೆ.

  • ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ: 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಮತ್ತು 1.3-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್.

  • ಆಸ್ಟರ್‌ನ ಬೆಲೆಯು ಈಗ ರೂ 9.98 ಲಕ್ಷದಿಂದ ಶುರುವಾಗಿ ರೂ 17.90 ಲಕ್ಷದವರೆಗೆ (ಎಕ್ಸ್ ಶೋರೂಂ ಭಾರತದಾದ್ಯಂತ) ಇರುತ್ತದೆ.

MG ಆಸ್ಟರ್ ಅನ್ನು 2021 ರಲ್ಲಿ ಪರ್ಸನಲ್ AI ಅಸಿಸ್ಟೆಂಟ್ ಮತ್ತು ಸುಧಾರಿತ ಡ್ರೈವರ್ ಅಸ್ಸಿಸ್ಟನ್ಸ್ ಸಿಸ್ಟಮ್ಸ್ (ADAS) ಫೀಚರ್ ಗಳನ್ನು ಪಡೆಯುವ ಸೆಗ್ಮೆಂಟ್ ನ ಮೊದಲ ಕಾಂಪ್ಯಾಕ್ಟ್ SUV ಆಗಿ ಮೊದಲ ಬಾರಿಗೆ ಭಾರತದಲ್ಲಿ ಬಿಡುಗಡೆ ಮಾಡಲಾಗಿತ್ತು. ಈಗ 2024 ರಲ್ಲಿ, MG ತನ್ನ ಆಸ್ಟರ್‌ಗೆ ಹೊಸ ಫೀಚರ್ ಅಪ್ಡೇಟ್ ಗಳ ಜೊತೆಗೆ, ಅದರ ಎಲ್ಲಾ ವೇರಿಯಂಟ್ ಲೈನ್ ಅಪ್ ನಲ್ಲಿ ಕೂಡ ಬದಲಾವಣೆಗಳನ್ನು ತಂದಿದೆ. ಹೊಸ ಎಂಟ್ರಿ ಲೆವೆಲ್ ಸ್ಪ್ರಿಂಟ್ ವೇರಿಯಂಟ್ ನ ಪರಿಚಯದೊಂದಿಗೆ, ಆಸ್ಟರ್‌ನ ಆರಂಭಿಕ ಬೆಲೆಯನ್ನು ಕೂಡ ಕಡಿಮೆ ಮಾಡಿ ರೂ 9.98 ಲಕ್ಷಕ್ಕೆ (ಎಕ್ಸ್ ಶೋರೂಂ) ತಂದು ನಿಲ್ಲಿಸಲಾಗಿದೆ.

ನಾವು ಹೊಸ ಅಪ್‌ಡೇಟ್‌ಗಳನ್ನು ನೋಡುವ ಮೊದಲು, MG ಆಸ್ಟರ್‌ನ ಅಪ್ಡೇಟ್ ಆಗಿರುವ ವೇರಿಯಂಟ್-ವಾರು ಬೆಲೆಗಳನ್ನು ನೋಡೋಣ.

ವೇರಿಯಂಟ್

ಬೆಲೆ

ಪೆಟ್ರೋಲ್ ಮಾನ್ಯುಯಲ್

ಸ್ಪ್ರಿಂಟ್

ರೂ 9.98 ಲಕ್ಷ

ಶೈನ್

ರೂ 11.68 ಲಕ್ಷ

ಸೆಲೆಕ್ಟ್

ರೂ 12.98 ಲಕ್ಷ

ಶಾರ್ಪ್ ಪ್ರೊ

ರೂ 14.41 ಲಕ್ಷ

ಪೆಟ್ರೋಲ್ ಆಟೋಮ್ಯಾಟಿಕ್ (CVT)

ಸೆಲೆಕ್ಟ್

ರೂ 13.98 ಲಕ್ಷ

ಶಾರ್ಪ್ ಪ್ರೊ

ರೂ 15.68 ಲಕ್ಷ

ಸ್ಯಾವಿ ಪ್ರೊ (ಐವರಿ ಇಂಟೀರಿಯರ್ ನೊಂದಿಗೆ)

ರೂ 16.58 ಲಕ್ಷ

ಸ್ಯಾವಿ ಪ್ರೊ (ಸಂಗ್ರಿಯಾ ಇಂಟೀರಿಯರ್ ನೊಂದಿಗೆ)

ರೂ 16.68 ಲಕ್ಷ

ಟರ್ಬೊ-ಪೆಟ್ರೋಲ್ ಆಟೋಮ್ಯಾಟಿಕ್

ಸ್ಯಾವಿ ಪ್ರೊ

ರೂ 17.90 ಲಕ್ಷ

ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಭಾರತದಾದ್ಯಂತ

ಗಮನಿಸಿ: MG ಆಸ್ಟರ್‌ನ ಡ್ಯುಯಲ್-ಟೋನ್ ಎಕ್ಸ್ಟೀರಿಯರ್ ಶೇಡ್ ಗಳಿಗೆ ಗ್ರಾಹಕರು ಹೆಚ್ಚುವರಿ ರೂ 20,000 ಪಾವತಿಸಬೇಕಾಗುತ್ತದೆ

MG ತನ್ನ ಆಸ್ಟರ್‌ನ ಸಂಪೂರ್ಣ ವೇರಿಯಂಟ್ ಶ್ರೇಣಿಯನ್ನು ರಿವೈಸ್ ಮಾಡಿದೆ, ಹಿಂದೆ ನೀಡಲಾಗಿದ್ದ ಸ್ಟೈಲ್ ವೇರಿಯಂಟ್ ಅನ್ನು ಹೆಚ್ಚು ಕೈಗೆಟುಕುವ ಬೆಲೆಯ ಸ್ಪ್ರಿಂಟ್ ವೇರಿಯಂಟ್ ನೊಂದಿಗೆ ಬದಲಿಸಿದೆ. ಆಸ್ಟರ್ ಈಗ ಮೊದಲಿಗಿಂತ 84,000 ರೂಪಾಯಿ ಕಡಿಮೆ ಬೆಲೆಯಲ್ಲಿ ಪ್ರಾರಂಭವಾಗುತ್ತಿದೆ. ಇದು ಭಾರತದಲ್ಲಿ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿ ಮಾಡಬಹುದಾದ ಕಾಂಪ್ಯಾಕ್ಟ್ SUV ಆಗಿದೆ. ಅಲ್ಲದೆ, SUV ಯ ಸೂಪರ್ ಮತ್ತು ಸ್ಮಾರ್ಟ್ ವೇರಿಯಂಟ್ ಗಳನ್ನು ಹೊಸ ಶೈನ್ ಮತ್ತು ಸೆಲೆಕ್ಟ್ ವೇರಿಯಂಟ್ ಗಳೊಂದಿಗೆ ಬದಲಾಯಿಸಲಾಗಿದೆ, ಹಾಗೆಯೇ ಶಾರ್ಪ್ ಮತ್ತು ಸ್ಯಾವಿ ಟ್ರಿಮ್‌ಗಳ ಹೆಸರಿನ ಮುಂದೆ 'ಪ್ರೊ' ಪದವನ್ನು ಸೇರಿಸಲಾಗಿದೆ, ಇದು ಈಗ ಆಸ್ಟರ್ ಹಿಂದಿಗಿಂತ ಹೆಚ್ಚು ಫೀಚರ್-ಲೋಡ್ ಆಗಿದೆ ಎಂಬುದನ್ನು ಸೂಚಿಸುತ್ತದೆ.

ಈ ಹಿಂದೆ, ಆಸ್ಟರ್‌ನ ಟಾಪ್-ಸ್ಪೆಕ್ ಟರ್ಬೊ-ಪೆಟ್ರೋಲ್ ಸ್ಯಾವಿ ವೇರಿಯಂಟ್ ನ ಬೆಲೆ ರೂ 18.68 ಲಕ್ಷ ಇತ್ತು, ಈಗ ಅಪ್ಡೇಟ್ ಆಗಿರುವ ಸ್ಯಾವಿ ಪ್ರೊ ಟ್ರಿಮ್ ರೂ 17.90 ಲಕ್ಷಕ್ಕೆ ಸಿಗಲಿದೆ, ಇದು ಮೊದಲಿಗಿಂತ ರೂ 78,000 ಕಡಿಮೆಯಾಗಿದೆ.

ಇದನ್ನು ಕೂಡ ಓದಿ: ಫೇಸ್‌ಲಿಫ್ಟ್ ಆಗಿರುವ ಕಿಯಾ ಸೋನೆಟ್ ಮತ್ತಷ್ಟು ಫೀಚರ್ ಗಳು ಮತ್ತು ADAS ನೊಂದಿಗೆ ಬಿಡುಗಡೆಯಾಗಿದೆ, ಬೆಲೆಗಳು ರೂ 7.99 ಲಕ್ಷದಿಂದ ಪ್ರಾರಂಭವಾಗಲಿದೆ

  • ನಿಮ್ಮ ಬಾಕಿ ಇರುವ ಚಲನ್ ಅನ್ನು ಪರಿಶೀಲಿಸಿ

  • ಉಪಯೋಗಿಸಿದ ಕಾರಿನ ಮೌಲ್ಯಮಾಪನ

ಹೊಸ ಅಪ್ಡೇಟ್ ಗಳು

MG ಆಸ್ಟರ್‌ನಲ್ಲಿನ 2024 ರ ಅಪ್ಡೇಟ್ ಗಳಲ್ಲಿ ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಆಟೋ-ಡಿಮ್ಮಿಂಗ್ IRVM ನಂತಹ ಹೊಸ ಫೀಚರ್ ಗಳು ಒಳಗೊಂಡಿವೆ. ಈಗ MG SUVಯ ಎಲ್ಲಾ ವೇರಿಯಂಟ್ ಗಳಲ್ಲಿ ಸ್ಟ್ಯಾಂಡರ್ಡ್ ಆಗಿರುವ 10.1-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಸ್ಮಾರ್ಟ್ 2.0 UI ನೊಂದಿಗೆ ಅಪ್‌ಗ್ರೇಡ್ ಮಾಡಲಾಗಿದೆ. ಇದು ಹವಾಮಾನ, ಸುದ್ದಿ, ಕ್ಯಾಲ್ಕುಲೇಟರ್ ಮತ್ತು ಇನ್ನಷ್ಟು ಹೆಚ್ಚಿನ ವಾಯ್ಸ್ ಕಮಾಂಡ್ ಗಳೊಂದಿಗೆ ಜಿಯೋ ವಾಯ್ಸ್ ರೆಕೋಗ್ನಿಷನ್ ಸಿಸ್ಟಮ್ ನಂತಹ ಹೆಚ್ಚು ಕನೆಕ್ಟೆಡ್ ಕಾರ್ ಫೀಚರ್ ಗಳನ್ನು ನೀಡುತ್ತದೆ. ಇನ್ಫೋಟೈನ್‌ಮೆಂಟ್ ಸಿಸ್ಟಮ್ ಈಗ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಅನ್ನು ಕೂಡ ಸಪೋರ್ಟ್ ಮಾಡುತ್ತದೆ.

ಆಸ್ಟರ್‌ನಲ್ಲಿರುವ ಇತರ ಫೀಚರ್ ಗಳೆಂದರೆ 6-ವೇ ಪವರ್-ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್ ಮತ್ತು ಪನೋರಮಿಕ್ ಸನ್‌ರೂಫ್. ಪ್ಯಾಸೆಂಜರ್ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಅಸೆಂಟ್ ಮತ್ತು ಡೀಸೆಂಟ್ ಕಂಟ್ರೋಲ್, ಹೀಟೆಡ್ ORVM ಗಳು, 360-ಡಿಗ್ರಿ ಕ್ಯಾಮೆರಾ ಮತ್ತು ಅದರ ಜೊತೆಗೆ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಫಾರ್ವರ್ಡ್ ಕೊಲಿಷನ್ ವಾರ್ನಿಂಗ್, ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ ಮತ್ತು ಲೇನ್ ಕೀಪಿಂಗ್/ಡಿಪಾರ್ಚರ್ ಅಸಿಸ್ಟ್ ಅನ್ನು ಒಳಗೊಂಡಿರುವ ಸುಧಾರಿತ ಡ್ರೈವರ್ ಅಸ್ಸಿಸ್ಟಂಸ್ ಸಿಸ್ಟಮ್ (ADAS) ಅನ್ನು ಕೂಡ ನೀಡಲಾಗಿದೆ.

ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳಿಲ್ಲ

ಆಸ್ಟರ್‌ನ ಪವರ್‌ಟ್ರೇನ್ ಮತ್ತು ಟ್ರಾನ್ಸ್‌ಮಿಷನ್ ಆಯ್ಕೆಗಳಲ್ಲಿ MG ಯಾವುದೇ ಬದಲಾವಣೆ ಮಾಡಿಲ್ಲ. ಇದು ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ: 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ನೊಂದಿಗೆ (110 PS / 144 Nm) 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ CVT, ಮತ್ತು 1.3-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ ನೊಂದಿಗೆ (140 PS / 220 Nm) 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್.

ಪ್ರತಿಸ್ಪರ್ಧಿಗಳು

MG ಆಸ್ಟರ್ ಬೆಲೆಯು ಈಗ ರೂ 9.98 ಲಕ್ಷದಿಂದ ಶುರುವಾಗಿ ರೂ 17.90 ಲಕ್ಷದವರೆಗೆ ಇದೆ (ಎಕ್ಸ್ ಶೋರೂಂ ಭಾರತದಾದ್ಯಂತ). ಇದು ಕಿಯಾ ಸೆಲ್ಟೋಸ್, ಹ್ಯುಂಡೈ ಕ್ರೆಟಾ, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೋಟಾ ಹೈರ್ಡರ್, ಹೋಂಡಾ ಎಲಿವೇಟ್, ಪೋಕ್ಸ್ ವ್ಯಾಗನ್ ಟೈಗುನ್ ಮತ್ತು ಸ್ಕೋಡಾ ಕುಶಾಕ್ ಮುಂತಾದವುಗಳ ಜೊತೆಗೆ ಸ್ಪರ್ಧಿಸಲಿದೆ.

ಇನ್ನಷ್ಟು ಓದಿ : MG ಆಸ್ಟರ್ ಆನ್ ರೋಡ್ ಬೆಲೆ

s
ಅವರಿಂದ ಪ್ರಕಟಿಸಲಾಗಿದೆ

shreyash

  • 217 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಎಂಜಿ ಅಸ್ಟೋರ್

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ