ಮತ್ತೆ ಕಾಣಿಸಿಕೊಂಡ 5-ಡೋರ್ Mahindra Thar, ಮಾರುಕಟ್ಟೆಗೆ ಬರಲು ಸಿದ್ದವಾಗಿದೆ ಈ ಕಾರು..!
ಮಹೀಂದ್ರ ಥಾರ್ ರಾಕ್ಸ್ ಗಾಗಿ rohit ಮೂಲಕ ನವೆಂಬರ್ 28, 2023 05:22 pm ರಂದು ಪ್ರಕಟಿಸಲಾಗಿದೆ
- 190 Views
- ಕಾಮೆಂಟ್ ಅನ್ನು ಬರೆಯಿರಿ
ಐದು ಬಾಗಿಲುಗಳ ಮಹೀಂದ್ರಾ ಥಾರ್ ಅನ್ನು 2024ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಂಭವವಿದ್ದು, ಬೆಲೆಯು ರೂ. 15 ಲಕ್ಷದಿಂದ ಪ್ರಾರಂಭಗೊಳ್ಳಲಿದೆ (ಎಕ್ಸ್-ಶೋರೂಂ).
- ಕಾಣಿಸಿಕೊಂಡಿರುವ ಮಾದರಿಯು LED ಹೆಡ್ ಲೈಟ್ ಗಳು ಮತ್ತು ಟೇಲ್ ಲೈಟ್ ಗಳು, ಅಲೋಯ್ ವೀಲ್ ಗಳು ಮತ್ತು ಸಿಂಗಲ್ ಪೇನ್ ಸನ್ ರೂಫ್ ಅನ್ನು ಹೊಂದಿದೆ.
- ಇದರ ಕ್ಯಾಬಿನ್ ನಲ್ಲಿ ದೊಡ್ಡದಾದ ಟಚ್ ಸ್ಕ್ರೀನ್, ಡ್ಯುವಲ್ ಜೋನ್ AC ಮತ್ತು ರಿಯರ್ AC ವೆಂಟ್ ಗಳನ್ನು ಕಾಣಬಹುದು.
- ಮಹೀಂದ್ರಾ ಸಂಸ್ಥೆಯು ಇದನ್ನು ಥಾರ್ ಮಾದರಿಯ 3 ಬಾಗಿಲುಗಳ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಗಳ ಜೊತೆಗೆ ನೀಡಲಿದ್ದರೂ, ಔಟ್ಪುಟ್ ಅನ್ನು ಪರಿಷ್ಕರಿಸಲಿದೆ.
- ರಿಯರ್ ವೀಲ್ ಡ್ರೈವ್ (RWD) ಮತ್ತು 4 ವೀಲ್ ಡ್ರೈವ್ (4WD) ಇವೆರಡೂ ಆಯ್ಕೆಗಳೊಂದಿಗೆ ದೊರೆಯಲಿದೆ.
ಹೊಸ ವರ್ಷವಾದ 2024 ಅನ್ನು ಸಂಭ್ರಮದಿಂದ ಸ್ವಾಗತಿಸಲು ಕ್ಷಣಗಣನೆ ಪ್ರಾರಂಭಿಸಿರುವ ಹೊತ್ತಿಗಾಗಲೇ ಅನೇಕ ಕಾರುಗಳು (ಅನೇಕ SUV ಗಳು ಸೇರಿದಂತೆ) ನಮ್ಮ ಮಾರುಕಟ್ಟೆಗೆ ಪಾದಾರ್ಪಣೆ ಮಾಡಲು ಸಿದ್ಧವಾಗಿವೆ. ಈ SUVಗಳ ಪಟ್ಟಿಯಲ್ಲಿ 5 ಬಾಗಿಲುಗಳ ಮಹೀಂದ್ರಾ ಥಾರ್ ಸಹ ಸೇರಿದ್ದು, ಸಾಕಷ್ಟು ಮರೆಮಾಚಿದ ಸ್ಥಿತಿಯಲ್ಲಿ ಇದು ಅನೇಕ ಬಾರಿ ಕಾಣಿಸಿಕೊಂಡಿದೆ. ಮಹೀಂದ್ರಾದ ಈ ಉದ್ದನೆಯ ಆಫ್ ರೋಡರ್ ವಾಹನವು ಇನ್ನೊಮ್ಮೆ ಕಾಣಿಸಿಕೊಂಡಿದ್ದು, ಉತ್ಪಾದನೆಗೆ ಸಿದ್ಧವಾಗಿರುವಂತೆ ಕಾಣುತ್ತದೆ.
ಗಮನಿಸಲಾದ ಅಂಶಗಳು
ಈ SUV ಯನ್ನು ಉತ್ಪಾದನೆಗೆ ಸಿದ್ಧವಾದ LED ಹೆಡ್ ಲೈಟ್ ಗಳು ಮತ್ತು ಟೇಲ್ ಲೈಟ್ ಗಳು, ಹೊಸದಾಗಿ ವಿನ್ಯಾಸಗೊಳಿಸಿದ ಗ್ರಿಲ್, ಅಲೋಯ್ ವೀಲ್ ಗಳು ಮತ್ತು ಹ್ಯಾಲೋಜೆನ್ ಫಾಗ್ ಲ್ಯಾಂಪ್ ಗಳ ಜೊತೆಗೆ ಕಾಣಬಹುದಾಗಿದೆ. ಹಿಂದಿನ ಸ್ಪೈ ಶಾಟ್ ಗಳಲ್ಲಿ ಕಂಡಂತೆಯೇ ಇದು ಸಿಂಗಲ್ ಪೇನ್ ಸನ್ ರೂಫ್ ಮತ್ತು ವೃತ್ತಾಕಾರದ LED DRL ಗಳನ್ನು ಹೊಂದಿತ್ತು. ಹೆಚ್ಚುವರಿ ಬಾಗಿಲುಗಳು ಮತ್ತು ಉದ್ದನೆಯ ವೀಲ್ ಬೇಸ್ ಅನ್ನು ಈ 5 ಬಾಗಿಲುಗಳ ಮಾದರಿಯ ಪರಿಷ್ಕೃತ ಪಟ್ಟಿಯಲ್ಲಿ ಕಾಣಬಹುದು.
ಕ್ಯಾಬಿನ್ ಹೇಗಿದೆ?
ಈ SUV ಯ ಹೊರಾಂಗಣ ಮಾತ್ರವೇ 3 ಬಾಗಿಲುಗಳ ಆವೃತ್ತಿಯಿಂದ ಭಿನ್ನವಾಗಿಲ್ಲ. ಬದಲಾಗಿ ಒಳಾಂಗಣದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದೆ. ದೊಡ್ಡದಾದ ಟಚ್ ಸ್ಕ್ರೀನ್ (ಬಹುಶಃ ಸ್ಪೋರ್ಪಿಯೊ N ನಿಂದ ಎರವಲು ಪಡೆಯಲಾಗಿದೆ) ಮತ್ತು ಹೊಸ ಕ್ಯಾಬಿನ್ ಥೀಮ್ ಇರುವ ಕುರಿತು ಹಳೆಯ ಸ್ಪೈ ಶಾಟ್ ಸುಳಿವು ನೀಡಿತ್ತು.
ದೊಡ್ಡದಾದ ಟಚ್ ಸ್ಕ್ರೀನ್ ಮತ್ತು ಸನ್ ರೂಫ್ ಮಾತ್ರವಲ್ಲದೆ, 5 ಬಾಗಿಲುಗಳ ಥಾರ್ ವಾಹನವು ಡ್ಯುವಲ್ ಜೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ರಿಯರ್ AV ವೆಂಟ್ ಗಳನ್ನು ಪಡೆಯುವ ಸಾಧ್ಯತೆ ಇದೆ. ಇದರ ಸುರಕ್ಷತಾ ಪಟ್ಟಿಯಲ್ಲಿ ಆರು ಏರ್ ಬ್ಯಾಗ್ ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ರಿವರ್ಸಿಂಗ್ ಕ್ಯಾಮರಾ, ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ (TPMS) ಇತ್ಯಾದಿಗಳು ಒಳಗೊಂಡಿವೆ.
ಹುಡ್ ಅಡಿಯಲ್ಲಿ ಅದೇ ಪವರ್ ಟ್ರೇನ್ ಗಳು
ಮಹೀಂದ್ರಾ ಸಂಸ್ಥೆಯು ಈಗಿನ 3 ಬಾಗಿಲುಗಳ ಮಾದರಿಯಲ್ಲಿರುವ ಅದೇ 2 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2 ಡೀಸೆಲ್ ಎಂಜಿನ್ ಜೊತೆಗೆ (ಬಹುಶಃ ವರ್ಧಿತ ಔಟ್ಪುಟ್ ಗಳೊಂದಿಗೆ) ಉದ್ದನೆಯ ವೀಲ್ ಹೊಂದಿರುವ ಥಾರ್ ವಾಹನವನ್ನು ಪರಿಚಯಿಸಲಿದೆ. ಎರಡೂ ಘಟಕಗಳು ಮ್ಯಾನುವಲ್ ಮತ್ತು ಅಟೋಮ್ಯಾಟಿಕ್ ಟ್ರಾನ್ಸ್ ಮಿಶನ್ ಆಯ್ಕೆಗಳನ್ನು ಹೊಂದಿರಲಿದೆ. ಐದು ಬಾಗಿಲುಗಳ ಥಾರ್ ವಾಹನವು ರಿಯರ್ ವೀಲ್ ಡ್ರೈವ್ (RWD) ಮತ್ತು 4 ವೀಲ್ ಡ್ರೈವ್ (4WD) ಇವೆರಡೂ ಆಯ್ಕೆಗಳೊಂದಿಗೆ ದೊರೆಯಲಿದೆ.
ಇದನ್ನು ಸಹ ಓದಿರಿ: ಕ್ಯಾಲೆಂಡರ್ ವರ್ಷದ ಕೊನೆಗೆ ಹೊಸ ಕಾರನ್ನು ಖರೀದಿಸುವುದರಿಂದ ಉಂಟಾಗುವ ಅನುಕೂಲತೆಗಳು ಮತ್ತು ಅನನುಕೂಲತೆಗಳು
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಐದು ಬಾಗಿಲುಗಳ ಮಹೀಂದ್ರಾ ಥಾರ್ ಕಾರು ರೂ. 15 ಲಕ್ಷದಷ್ಟು (ಎಕ್ಸ್-ಶೋರೂಂ) ಆರಂಭಿಕ ಬೆಲೆಯನ್ನು ಹೊಂದಿರಲಿದೆ. ಇದು ಮಾರುತಿ ಜಿಮ್ನಿ ವಾಹನಕ್ಕೆ ಉದ್ದನೆಯ ಬದಲಿ ಆಯ್ಕೆ ಎನಿಸಲಿದ್ದು, ಮುಂಬರುವ 5 ಬಾಗಿಲುಗಳ ಫೋರ್ಸ್ ಗೂರ್ಖಾಕ್ಕೆ ಸ್ಪರ್ಧೆಯನ್ನು ನೀಡಲಿದೆ.
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಥಾರ್ ಅಟೋಮ್ಯಾಟಿಕ್