Login or Register ಅತ್ಯುತ್ತಮ CarDekho experience ಗೆ
Login

5 ಡೋರ್ ಮಹೀಂದ್ರಾ ಮತ್ತೆ ಕಂಡುಬಂದಿದೆ ಥಾರ್ ಹೊಸ ವಿನ್ಯಾಸದ ಬದಲಾವಣೆಯೊಂದಿಗೆ

published on ಫೆಬ್ರವಾರಿ 02, 2023 12:37 pm by rohit for ಮಹೀಂದ್ರ ಥಾರ್‌ 5-ಡೋರ್‌

ಈ ಎಸ್‌ಯುವಿಯ ಸ್ಪೈಡ್ ಟೆಸ್ಟ್ ಮ್ಯೂಲ್ ಹಿಂಭಾಗದಲ್ಲಿ ಮಾರುತಿ ಸ್ವಿಫ್ಟ್ ತರಹದ ಡೋರ್ ಪಿಲ್ಲರ್-ಮೌಂಟೆಡ್ ಹ್ಯಾಂಡಲ್‌ಗಳನ್ನು ಹೊಂದಿದೆ

  • ಈ ಸ್ಪೈಡ್ ಮಾಡೆಲ್ ಮರೆಮಾಡಿದ ರೂಪದಲ್ಲಿ ಕಂಡುಬಂದಿದೆ.

  • ಮ್ಯಾನ್ಯುವಲ್ ಮತ್ತು ಆಟೊಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಪೆಟ್ರೋಲ್ ಮತ್ತು ಡಿಸೇಲ್ ಇಂಜಿನ್ ಆಯ್ಕೆಯನ್ನು ಸಹ ಹೊಂದಿದೆ.

  • ರಿಯರ್-ವ್ಹೀಲ್-ಡ್ರೈವ್ (RWD) ಮತ್ತು ಫೋರ್-ವ್ಹೀಲ್-ಡ್ರೈವ್ (4WD) ಎರಡೂ ಸಂರಚನೆಯನ್ನು ಹೊಂದಿದೆ.

  • ತ್ರೀ ಡೋರ್ ಮಾಡೆಲ್‌ಗಿಂತ ಪ್ರೀಮಿಯಂನಲ್ಲಿ 2024 ರಲ್ಲಿ ಮಾರಾಟಕ್ಕೆ ಬರುವ ನಿರೀಕ್ಷೆಯಿದೆ.

ಫೈವ್-ಡೋರ್-ಮಹೀಂದ್ರಾ ಥಾರ್ ನ ಹೊಸ ಸ್ಪೈ ಶಾಟ್‌ಗಳು ಆನ್‌ಲೈನ್‌ನಲ್ಲಿ ಕಾಣಬಹುದಾಗಿದೆ. ಈ ಎಸ್‌ಯುವಿಯು ಮರೆಮಾಡಿದ ರೂಪದಲ್ಲಿ ಕಂಡುಬಂದಿದ್ದರೂ, ಕೆಲವು ಹೊಸ ವಿವರಗಳನ್ನು ಗಮನಿಸಲಾಗಿದೆ. ಅವು ಯಾವುದೆಂಬುದನ್ನು ಕೆಳಗೆ ನೋಡೋಣ:

ಹೊಸತೇನಿದೆ?

ಇತ್ತೀಚಿನ ಚಿತ್ರಗಳಿಂದ ನಮಗೆ ತಿಳಿಯಬಹುದಾದ ಗಮನಾರ್ಹ ಬದಲಾವಣೆಯೆಂದರೆ, ಫೈವ್-ಡೋರ್ ಥಾರ್ ಸಿ-ಪಿಲ್ಲರ್-ಮೌಂಟೆಡ್ ರಿಯರ್ ಡೋರ್ ಹ್ಯಾಂಡಲ್‌ಗಳನ್ನು ಪಡೆದಿದೆ (ಮಾರುತಿ ಸ್ವಿಫ್ಟ್‌ನಲ್ಲಿರುವಂತೆಯೇ). ಅದನ್ನು ಹೊರತುಪಡಿಸಿದರೆ, ಹಿಂದೆ ಗುರುತಿಸಲಾದ ಟೆಸ್ಟ್ ಮ್ಯೂಲ್‌ಗಳಲ್ಲಿರುವಂತೆಯೇ ಅದೇ ರೀತಿಯ ಅಲೋಯ್ ವ್ಹೀಲ್‌ಗಳು, ಹೆಚ್ಚುವರಿ ಬಾಗಿಲುಗಳ ಸೆಟ್, ಎಲ್‌ಇಡಿ ಟೈಲ್‌ಲೈಟ್‌ಗಳು ‘ಥಾರ್' ಎಂದು ಉಲ್ಲೇಖಿಸಲಾದ ವೈಶಿಷ್ಟ್ಯಗಳನ್ನು ಕಾಣಬಹುದಾಗಿದೆ.

ಇದನ್ನೂ ಓದಿ: ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಮತ್ತು XUV700 ಗಳಿಗೆ ರೂ. 65,000 ದಷ್ಟು ಹೆಚ್ಚುವರಿ ಹಣ ನೀಡಲು ಸಿದ್ಧರಾಗಿ

ಪವರ್ ಟ್ರೇನ್ ವಿವರಗಳು

ಈಗಾಗಲೇ ನಾವು ನೋಡಿರುವ ಥ್ರೀ-ಡೋರ್ ಥಾರ್‌ನಂತೆಯೇ ಈ ಫೈವ್-ಡೋರ್ ಥಾರ್‌ಗೆ ಸಹ ಪೆಟ್ರೋಲ್ ಮತ್ತು ಡಿಸೇಲ್ ಇಂಜಿನ್‌ಗಳನ್ನು ಒದಗಿಸಲಾಗುವುದು, ಆದರೆ ಹೆಚ್ಚಿನ ಟ್ಯೂನ್‌ನಲ್ಲಿ ಎಂಬುದನ್ನು ನಾವು ಗಮನಿಸಬೇಕಾಗಿದೆ. ಥ್ರೀ-ಡೋರ್ ಮಾಡೆಲ್‌ನಲ್ಲಿ 2-ಲೀಟರ್ ಟರ್ಬೋ-ಪೆಟ್ರೋಲ್ ಇಂಜಿನ್ 150PS ಅನ್ನು ಹೊರಹಾಕುತ್ತದೆ, ಆದರೆ ಡಿಸೇಲ್ 130PS ಅನ್ನು ಹೊರಹಾಕುತ್ತದೆ ಎಂದು ಹೇಳಲಾಗಿದೆ. ಪ್ರಸ್ತುತ ಲಭ್ಯವಿರುವ ಮಾಡೆಲ್‌ನಲ್ಲಿ ಇತ್ತೀಚೆಗೆ ನಾವು ನೋಡಿದಂತೆ 2WD ವೇರಿಯೆಂಟ್‌ಗಳ ಆಯ್ಕೆಯೊಂದಿಗೆ ಫೈವ್-ಡೋರ್ ಥಾರ್ ಅನ್ನು ಸಹ ನೀಡುವ ನಿರೀಕ್ಷೆಯಿದೆ. ಕಾರು ತಯಾರಕರು ಈ ಎಸ್‌ಯುವಿಯನ್ನು ಸಿಕ್ಸ್-ಸ್ಪೀಡ್ ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಎರಡೂ ಆಯ್ಕೆಗಳೊಂದಿಗೆ ಸಜ್ಜುಗೊಳಿಸುವ ಯೋಜನೆಯನ್ನು ಹೊಂದಿದ್ದಾರೆ.

ಇದನ್ನೂ ಓದಿ: ವಿಂಟೇಜ್ ಯುಗದ ಜೀಪ್‌ನಂತೆಯೇ ಕಾಣುವ ಚಾಪ್ಡ್ ರೂಫ್ ಹೊಂದಿರುವ ಭಾರತದ ಮೊದಲ ಮಹೀಂದ್ರಾ ಥಾರ್

ಯಾವಾಗ ಬರಬಹುದೆಂದು ನಿರೀಕ್ಷಿಸಲಾಗಿದೆ?

ಥ್ರೀ-ಡೋರ್ ಮಾಡೆಲ್‌ನ ಪ್ರೀಮಿಯಂ ಮೇಲೆ ಕಮಾಂಡ್ ಹೊಂದಿ 2024 ರ ಆರಂಭದಲ್ಲಿ ಮಹೀಂದ್ರಾ ಫೈವ್-ಡೋರ್ ಥಾರ್ ಅನ್ನು ಬಿಡುಗಡೆ ಮಾಡಬಹುದೆಂದು ನಿರೀಕ್ಷೆಯಿದೆ. ಇಲ್ಲಿ ಉಲ್ಲೇಖಿಸಬಹುದಾದ ಒಂದು ಅಂಶವೆಂದರೆ, ಈ ಥ್ರೀ-ಡೋರ್ ಎಸ್‌ಯುವಿಯು ರೂ. 9.99 ಲಕ್ಷದಿಂದ ರೂ. 16.49 ಲಕ್ಷದವರೆಗೆ ಮಾರಾಟವಾಗಿದೆ (ಎಕ್ಸ್-ಶೋರೂಮ್, ದೆಹಲಿ). ಇದು the ಮಾರುತಿ ಜಿಮ್ನಿ ಮತ್ತು ಫೋರ್ಸ್ ಗುರ್ಖಾ ದ ವಿರುದ್ಧವಾಗಿ ಹೋಗಲಿದೆ ಮತ್ತು ಎರಡನೆಯದು ತನ್ನ ಫೈವ್-ಡೋರ್ ಆವೃತ್ತಿಯನ್ನು ಶೀಘ್ರದಲ್ಲಿಯೇ ಪಡೆಯಲಿದೆ.

ಚಿತ್ರ ಕೃಪೆ- Shivay21

ಇಲ್ಲಿ ಇನ್ನಷ್ಟು ಓದಿ : ಥಾರ್ ಡಿಸೇಲ್

r
ಅವರಿಂದ ಪ್ರಕಟಿಸಲಾಗಿದೆ

rohit

  • 41 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಮಹೀಂದ್ರ ಥಾರ್‌ 5-Door

Read Full News

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ