• English
    • Login / Register

    ನೀವು ತಿಳಿಯಲೇಬೇಕಾದ ಸಿಟ್ರಾನ್ C3 ಏರ್‌ಕ್ರಾಸ್‌ನ 5 ಪ್ರಮುಖಾಂಶಗಳು

    ಮೇ 03, 2023 11:07 pm ರಂದು tarun ಮೂಲಕ ಪ್ರಕಟಿಸಲಾಗಿದೆ

    20 Views
    • ಕಾಮೆಂಟ್‌ ಅನ್ನು ಬರೆಯಿರಿ

    ಮೂರು-ಸಾಲುಗಳ ಈ ಹೊಸ ಕಾಂಪ್ಯಾಕ್ಟ್ ಎಸ್‌ಯುವಿ ಆಗಸ್ಟ್ ವೇಳೆಗೆ ಮಾರುಕಟ್ಟೆಯನ್ನು ಪ್ರವೇಶಿಸಲಿದೆ

    Citroen C3 Aircross

    ಸಿಟ್ರಾನ್ ಭಾರತದಲ್ಲಿನ ತನ್ನ ನಾಲ್ಕನೆಯ ಕೊಡುಗೆಯನ್ನು ಅನಾವರಣಗೊಳಿಸಿದ್ದು, ಇದನ್ನು C3 ಏರ್‌ಕ್ರಾಸ್ ಎಂದು ಹೆಸರಿಸಲಾಗಿದೆ. ಇದು ಹ್ಯುಂಡೈ ಕ್ರೆಟಾದಂತಹ ಕಾರುಗಳಿಗೆ ತೀವ್ರ ಪೈಪೋಟಿ ನೀಡುವ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗಕ್ಕೆ ಪ್ರವೇಶಿಸಲಿದೆ ಮತ್ತು  7-ಸೀಟುಗಳ ವಿನ್ಯಾಸದ ವಿಶಿಷ್ಟತೆಯನ್ನು ಹೊಂದಿರಲಿದೆ. C3 ಏರ್‌ಕ್ರಾಸ್ ಕುರಿತು ಹಲವು ವಿವರಗಳು ಇನ್ನೂ ಬಹಿರಂಗವಾಗದಿದ್ದರೂ, ಅದರ ಬಗ್ಗೆ ನೀವು ತಿಳಿಯಬೇಕಾದ ಐದು ವಿಷಯಗಳು ಇಲ್ಲಿವೆ:

     

    ಇತರ ಸಿಟ್ರಾನ್‌ಗಳಿಂದ ಪ್ರೇರಿತ

    Citroen C3 Aircross

    C3 ಏರ್‌ಕ್ರಾಸ್‌ನ ವಿನ್ಯಾಸವು C3 ಹ್ಯಾಚ್‌ಬ್ಯಾಕ್ ಮತ್ತು C5 ಏರ್‌ಕ್ರಾಸ್‌ನ ಸಮ್ಮಿಳಿತವಾಗಿದೆ. ಮುಂಭಾಗದ ಪ್ರೊಫೈಲ್ ಮತ್ತು ಸಿಲ್ವರ್ ಸ್ಕಿಡ್ ಪ್ಲೇಟ್ ನಮಗೆ ದೊಡ್ಡ ಎಸ್‌ಯುವಿಯನ್ನು ನೆನಪಿಸುತ್ತದೆ. ಇನ್ನೊಂದೆಡೆ, C3 ನಿಂದ ಪ್ರೇರಿತವಾದ ಹ್ಯಾಲೊಜೆನ್ ಹೆಡ್‌ಲ್ಯಾಂಪ್‌ಗಳೊಂದಿಗೆ ಕ್ರೋಮ್ ವಿವರವಾದ ಸ್ಪ್ಲಿಟ್ ಗ್ರಿಲ್ ಅನ್ನು ಎಲ್‌ಇಡಿ ಡಿಆರ್‌ಎಲ್‌ಗಳನ್ನು ಪಡೆಯುತ್ತದೆ. 

    17-ಇಂಚಿನ ಅಲಾಯ್ ವ್ಹೀಲ್‌ಗಳು ಸಂಪೂರ್ಣವಾಗಿ ಹೊಸದಾಗಿವೆ ಮತ್ತು ಗಟ್ಟುಮುಟ್ಟಾದ ನೋಟವನ್ನು ಪಡೆಯಲು ನೀವು ತೆಳುವಾದ ಬಾಡಿ ಕ್ಲಾಡಿಂಗ್ ಅನ್ನು ಕಾಣಬಹುದು. ಹಿಂಭಾಗದ ಪ್ರೊಫೈಲ್‌ನ ಸುತ್ತಲಿನ ಟೈಲ್ ಲ್ಯಾಂಪ್‌ಗಳು, ಬಾಡಿ-ಕ್ಲಾಡಿಂಗ್ ಇಂಟಿಗ್ರೇಟೆಡ್ ಬಂಪರ್ ಮತ್ತು ಸ್ಕಿಡ್ ಪ್ಲೇಟ್‌ನೊಂದಿಗೆ ನೇರವಾದ ಮತ್ತು ದೃಢವಾದ ನೋಟವನ್ನು ಇದು ಹೊಂದಿದೆ.

     

     

    ಗಾತ್ರದ ವಿವರಗಳು

    Citroen C3 Aircross

     

    ಉದ್ದ

    4300mm

    ಅಗಲ

    1796mm

    ಎತ್ತರ

    1654mm

    ಗ್ರೌಂಡ್ ಕ್ಲಿಯರೆನ್ಸ್

    200mm

    ವ್ಹೀಲ್‌ಬೇಸ್

    2671mm

    ಬೂಟ್ ಸಾಮರ್ಥ್ಯ

    511 ಲೀಟರ್‌ಗಳವರೆಗೆ (ತೆಗೆದುಹಾಕಬಹುದಾದ ಮೂರನೇ ಸಾಲು)

    ಕಾಂಪ್ಯಾಕ್ಟ್ ಎಸ್‌ಯುವಿಗಳಲ್ಲಿ, ಈ C3 ಏರ್‌ಕ್ರಾಸ್ ಅತ್ಯುತ್ತಮ ಇನ್-ಕ್ಲಾಸ್ ವ್ಹೀಲ್‌ಬೇಸ್ ಅನ್ನು ಹೊಂದಿದೆ ಮತ್ತು ಇತರ ಆಯಾಮಗಳು ಉಳಿದ ಪ್ರತಿಸ್ಪರ್ಧಿಗಳಿಗೆ ಸಮನಾಗಿದೆ. ಇದು ಐದು- ಮತ್ತು ಏಳು-ಸೀಟುಗಳ ಫಾರ್ಮ್ಯಾಟ್‌ಗಳಲ್ಲಿ ಲಭ್ಯವಿದ್ದು, ಎರಡನೆಯದರಲ್ಲಿ ಮೂರನೇ ಸಾಲಿನ ಸೀಟುಗಳನ್ನು ತೆಗೆದುಹಾಕಬಹುದಾದ ಅನುಕೂಲಕರ ವ್ಯವಸ್ಥೆಯಿದೆ.  

    ಎಷ್ಟೊಂದು ಫೀಚರ್‌ಗಳು?

    Citroen C3 Aircross

     ಅದರ ಹ್ಯಾಚ್‌ಬ್ಯಾಕ್ ಆವೃತ್ತಿಯಂತೆಯೇ, ಈ C3 ಏರ್‌ಕ್ರಾಸ್ ಸೀಮಿತ ಫೀಚರ್‌ಗಳನ್ನು ಮಾತ್ರ ಹೊಂದಿಲ್ಲ. ನೀವು 10-ಇಂಚಿನ ಇನ್‌ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್  ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ, 7-ಇಂಚಿನ ಡಿಜಿಟಲ್ ಡಿಸ್‌ಪ್ಲೇ, ಎರಡನೇ ಸಾಲಿನ ರೂಫ್-ಮೌಂಟೆಡ್ ಎಸಿ ವೆಂಟ್‌ಗಳು, ಮತ್ತು ಐದು ವೇಗದ-ಚಾರ್ಜಿಂಗ್ ಪೋರ್ಟ್‌ಗಳನ್ನು ಹೊಂದಿದೆ. 

     ಇಲ್ಲಿ ನೀಡಬೇಕಾಗಿದ್ದ ಆಟೋಮ್ಯಾಟಿಕ್ ಎಸಿ ಮತ್ತು ಕ್ರೂಸ್ ಕಂಟ್ರೋಲ್‌ನಂತಹ ಫೀಚರ್‌ಗಳನ್ನು ಇದು ಪಡೆಯುವುದಿಲ್ಲ. ಇದರ ವಿಭಾಗದಲ್ಲಿನ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ, ಇದು ವೆಂಟಿಲೇಟೆಸಡ್ ಸೀಟುಗಳು, ವೈರ್‌ಲೆಸ್ ಚಾರ್ಜಿಂಗ್ ಮತ್ತು ಸನ್‌ರೂಫ್‌ನಂತಹ ಪ್ರೀಮಿಯಂ ಫೀಚರ್‌ಗಳನ್ನು ಪಡೆಯುವುದಿಲ್ಲ.

     ಸುರಕ್ಷತೆಯ ವಿಷಯದಲ್ಲಿ, ಇದು ಮುಂಭಾಗದಲ್ಲಿ ಎರಡು ಏರ್‌ಬ್ಯಾಗ್‌ಗಳು, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್, ಮತ್ತು ಹಿಲ್ ಹೋಲ್ಡ್ ಅಸಿಸ್ಟ್ (ಪ್ರಮಾಣಿತ) ಅನ್ನು ಪಡೆಯುತ್ತದೆ. ಬಿಡುಗಡೆಗೆ ಸಮೀಪಿಸುತ್ತಿದ್ದಂತೆ ಸುರಕ್ಷತಾ ಫೀಚರ್‌ಗಳ ಕುರಿತು ಹೆಚ್ಚಿನ ವಿವರಗಳನ್ನು ನಾವು ಪಡೆಯಬಹುದು, ಆದರೆ ಬಿಡುಗಡೆಯ ಸಮಯದಲ್ಲಿ ಇದು ಆರು ಏರ್‌ಬ್ಯಾಗ್‌ಗಳನ್ನು ಕಳೆದುಕೊಳ್ಳಬಹುದು.

     

    ಪವರ್‌ಟ್ರೇನ್ ಆಯ್ಕೆಗಳು

    Citroen C3 Aircross

     ಬಿಡುಗಡೆಯ ಸಮಯದಲ್ಲಿ ಸಿಟ್ರಾನ್ ಈ C3 ಏರ್‌ಕ್ರಾಸ್‌ ಕೇವಲ ಒಂದು ಪವರ್‌ಟ್ರೇನ್ ಅನ್ನು ಮಾತ್ರ ಪಡೆಯುತ್ತದೆ – ಆರು-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ಗೆ ಜೊತೆಯಾದ 1.2-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್. ಇದು 110PS ಮತ್ತು 190Nm ಬಿಡುಗಡೆ ಮಾಡುವ C3 ಹ್ಯಾಚ್‌ಬ್ಯಾಕ್‌ನೊಂದಿಗೆ ನೀಡಲಾದಂತೆಯೇ ಇರುತ್ತದೆಯಾದರೂ ಈ ಎಸ್‌ಯುವಿ ಸ್ವಲ್ಪ ವಿಭಿನ್ನವಾದ ಟ್ಯೂನ್ ಅನ್ನು ಪಡೆಯಬಹುದು. ಇದರ ಪ್ಲ್ಯಾಟ್‌ಫಾರ್ಮ್ ಎಲೆಕ್ಟ್ರಿಕ್ ಪವರ್‌ಟ್ರೇನ್ ಅನ್ನು ಸಹ ಪಡೆಯುವ ಸಾಮರ್ಥ್ಯವನ್ನು ಹೊಂದಿರುವುದರಿಂದ C3 ಏರ್‌ಕ್ರಾಸ್‌ನೊಂದಿಗೆ ಇವಿ ಅನ್ನು ಸಹ ಯೋಜಿಸಲಾಗಿದೆ. 

     

     

    ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

    Citroen C3 Aircross

    ಸಿಟ್ರಾನ್ C3 ಏರ್‌ಕ್ರಾಸ್‌ನ ಬೆಲೆಯು ರೂ. 9 ಲಕ್ಷದಿಂದ (ಎಕ್ಸ್-ಶೋರೂಮ್) ಪ್ರಾರಂಭವಾಗಬಹುದು ಎಂದು ನಾವು ನಿರೀಕ್ಷಿಸಿದ್ದೇವೆ. ಇದು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಟ್, ಫೋಕ್ಸ್‌ವ್ಯಾಗನ್ ಟೈಗನ್, ಸ್ಕೋಡಾ ಕುಶಾಕ್, ಎಂಜಿ ಆಸ್ಟರ್, ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತು ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್‌ಗೆ ಪ್ರತಿಸ್ಪರ್ಧಿಯಾಗಿರಲಿದೆ. 

    ಇನ್ನಷ್ಟು ಇಲ್ಲಿ ಓದಿ : C3 ಆನ್ ರೋಡ್ ಬೆಲೆ

    was this article helpful ?

    Write your Comment on Citroen ಏರ್‌ಕ್ರಾಸ್‌

    Similar cars to compare & consider

    ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

    ಕಾರು ಸುದ್ದಿ

    • ಟ್ರೆಂಡಿಂಗ್ ಸುದ್ದಿ
    • ಇತ್ತಿಚ್ಚಿನ ಸುದ್ದಿ

    ಟ್ರೆಂಡಿಂಗ್ ಎಸ್‌ಯುವಿ ಕಾರುಗಳು

    • ಲೇಟೆಸ್ಟ್
    • ಉಪಕಮಿಂಗ್
    • ಪಾಪ್ಯುಲರ್
    ×
    We need your ನಗರ to customize your experience