ಹೆಡ್ಸ್ ಅಪ್ ಡಿಸ್‌ಪ್ಲೇ ಜೊತೆಗೆ ಭಾರತದಲ್ಲಿ ರೂ. 20 ಲಕ್ಷಗಿಂತಲೂ ಕಡಿಮೆ ಬೆಲೆಗೆ ದೊರೆಯುವ 7 ಕಾರುಗಳು
ಹೆಡ್ಸ್ ಅಪ್ ಡಿಸ್ಪ್ಲೇಯು ಚಾಲಕನು ರಸ್ತೆಯ ಮೇಲೆಯೇ ತನ್ನ ಗಮನವನ್ನು ಕೇಂದ್ರೀಕರಿಸಲು ಸಹಾಯ ಮಾಡುವುದಕ್ಕಾಗಿ ಡ್ಯಾಶ್ ಬೋರ್ಡ್ ಗಿಂತಲೂ ಎತ್ತರದ ಸ್ಥಳದಲ್ಲಿ ಇನ್ಸ್ ಟ್ರುಮೆಂಟಲ್ ಕ್ಲಸ್ಟರ್ ನಿಂದ ಅಗತ್ಯ ವಿವರಗಳನ್ನು ಒದಗಿಸುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಮಾಸ್ ಮಾರ್ಕೆಟ್ ಮಾದರಿಗಳಲ್ಲಿ ಅನೇಕ ಐಷಾರಾಮಿ ಮತ್ತು ಪ್ರೀಮಿಯಂ ಸೌಲಭ್ಯಗಳು ದೊರೆಯುತ್ತಿವೆ. ಇದರಲ್ಲಿ ಹೆಡ್ಸ್ ಅಪ್ ಡಿಸ್ಪ್ಲೇಯು ಸಹ ಸೇರಿದ್ದು, 2019ರಲ್ಲಿ ಕಿಯಾ ಸೆಲ್ಟೋಸ್ ಮೂಲಕ ಇದು ಮಾರುಕಟ್ಟೆಗೆ ಬಂದಿತ್ತು. ಮಾರುತಿ, ಟೊಯೊಟಾ ಮುಂತಾದ ಕಾರು ತಯಾರಕ ಸಂಸ್ಥೆಗಳ ಕಾರಣ ಈ ಹೆಡ್ಸ್ ಅಪ್ ಡಿಸ್ಪ್ಲೇಯು ರೂ. 10 ಲಕ್ಷಕ್ಕಿಂತಲೂ ಕಡಿಮೆ ಬೆಲೆಯ ಕಾರುಗಳಲ್ಲಿಯೂ ಲಭ್ಯ. ಇದು ಏನನ್ನೆಲ್ಲ ಒದಗಿಸುತ್ತದೆ ಎಂಬುದನ್ನು ನೋಡೋಣ:
ಹೆಡ್ಸ್ ಅಪ್ ಡಿಸ್ಪ್ಲೇ (HUD) ಎಂದರೇನು?
ಕಾರುಗಳ ಬೆಲೆಗಳು ಮತ್ತು ಸೆಗ್ಮೆಂಟ್ ಗಳನ್ನು ಆಧರಿಸಿ ಬೇರೆ ಬೇರೆ ರೀತಿಯ ಹೆಡ್ಸ್ ಅಪ್ ಡಿಸ್ಪ್ಲೇಗಳು ಲಭ್ಯ. ಈ ವೈಶಿಷ್ಟ್ಯವನ್ನು ಹೊಂದಿರುವ ಹೆಚ್ಚಿನ ಮಾಸ್ ಮಾರ್ಕೆಟ್ ಕಾರುಗಳು ಚಾಲಕನ ಪಕ್ಕದ ಡ್ಯಾಶ್ ಬೋರ್ಡ್ ನಲ್ಲಿ ಇರಿಸಲಾಗುವ ಪಾರದರ್ಶಕ ಪ್ಯಾನೆಲ್ ಅನ್ನು ಬಳಸುತ್ತವೆ. ಇದು ಮುಂದಿನ ರಸ್ತೆಗೆ ಅನುರೂಪವಾಗಿ ಇರುತ್ತದೆ. ಇದು ಇನ್ಸ್ ಟ್ರುಮೆಂಟ್ ಕ್ಲಸ್ಟರ್ ನಿಂದ ಕೆಲವೊಂದು ಮಾಹಿತಿಗಳನ್ನು ಡಿಸ್ಪ್ಲೇಗೆ ರವಾನಿಸುತ್ತದೆ. ಈ ಡಿಸ್ಪ್ಲೇಯು ತನ್ನ ಹೌಸಿಂಗ್ ನಿಂದ ಇದನ್ನು ಪ್ರದರ್ಶಿಸುತ್ತದೆ. ಹೀಗಾಗಿ ಚಾಲಕನು ರಸ್ತೆಯ ಮೇಲಿನಿಂದ ತನ್ನ ಗಮನವನ್ನು ಆಚೀಚೆ ವರ್ಗಾಯಿಸುವ ಅಗತ್ಯವಿರುವುದಿಲ್ಲ.
ರೂ. 20 ಲಕ್ಷಕ್ಕಿಂತಲೂ ಕಡಿಮೆ ಬೆಗೆ ನಿಮಗೆ ಯಾವೆಲ್ಲ ಮಾದರಿಗಳು HUD ಯನ್ನು ಒದಗಿಸುತ್ತವೆ ಎಂಬುದನ್ನು ನೋಡೋಣ:
ಮಾರುತಿ ಬಲೇನೊ
- 2022ರ ಆರಂಭದಲ್ಲಿ, ಮಾರುತಿ ಬಲೇನೊ ಹೆಡ್ಸ್ ಅಪ್ ಡಿಸ್ಪ್ಲೇ ಪಡೆದ ರೂ. 10 ಲಕ್ಷಕ್ಕಿಂತ ಕಡಿಮೆ ಬೆಲೆಯ ಮೊದಲ ಮಾದರಿ ಎನಿಸಿತು.
- ಟಾಪ್ ಸ್ಪೆಕ್ ಆಲ್ಫಾ ಟ್ರಿಮ್ ಮಾದರಿಯಲ್ಲಿ ಲಭ್ಯವಿರುವ ಇದರ ಹೆಡ್ಸ್ ಅಪ್ ಡಿಸ್ಪ್ಲೇಯು ವಾಹನದ ವೇಗ, ಗೇರ್ ಪೊಸಿಷನ್ ಇಂಡಿಕೇಟರ್ (AMT ಮಾತ್ರ), ಟ್ಯಾಕೋಮೀಟರ್ ರೀಡ್ ಔಟ್ (RPM) ಇತ್ಯಾದಿಗಳನ್ನು ತೋರಿಸುತ್ತದೆ.
- ಮಾರುತಿ ಬಲೇನೊ ಆಲ್ಫಾ ಕಾರು ರೂ. 9.33 ಲಕ್ಷದಿಂದ ಲಭ್ಯ.
ಟೊಯೊಟಾ ಗ್ಲಾಂಜ
- ಪರಿಷ್ಕೃತ ಬಲೇನೊ ಕಾರು ರಸ್ತೆಗಿಳಿದ ತಕ್ಷಣವೇ ಟೊಯೊಟಾ ಗ್ಲಾಂಜ ಕಾರಿಗೂ ಹೊಸತನವನ್ನು ನೀಡಲಾಯಿತು (ಇದು ಬಲೇನೊ ಕಾರಿನ ರಿಬ್ಯಾಜ್ಡ್ ಆವೃತ್ತಿಯಾಗಿದೆ).
- ಪರಿಷ್ಕರಣೆಯ ಮೂಲಕ ಈ ಟೊಯೊಟಾ ಹ್ಯಾಚ್ ಬ್ಯಾಕ್ ಕಾರು ಹೆಡ್ಸ್ ಅಪ್ ಡಿಸ್ಪ್ಲೇಯನ್ನು ಪಡೆದಿದ್ದು, ಇದನ್ನು ಟಾಪ್ ಸ್ಪೆಕ್ V ಟ್ರಿಮ್ ಕಾರುಗಳಿಗೆ ಮೀಸಲಿರಿಸಲಾಗಿದೆ.
- ಟೊಯೊಟಾ ಗ್ಲಾಂಜ V ಕಾರು ರೂ. 9.73 ಲಕ್ಷದಿಂದ ಲಭ್ಯ.
ಇದನ್ನು ಸಹ ಓದಿರಿ: ಹೊಸ ಗೂಗಲ್ ಮ್ಯಾಪ್ಸ್ ಪರಿಷ್ಕರಣೆಯು ನಿಮ್ಮ ಪ್ರಯಾಣಕ್ಕೆ ಇನ್ನಷ್ಟು ಉತ್ತಮ ರೀತಿಯಲ್ಲಿ ಯೋಜನೆ ರೂಪಿಸಲು ಸಹಾಯ ಮಾಡಲಿದೆ
ಮಾರುತಿ ಫ್ರಾಂಕ್ಸ್
- ಸಬ್-4m ಕ್ರಾಸ್ ಓವರ್ SUV ಎನಿಸಿರುವ ಮಾರುತಿ ಫ್ರಾಂಕ್ಸ್ ಅನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಮಾರುತಿ ಬಲೇನೊ ಕಾರು ಒಂದು ಆಧಾರವಾಗಿ ಪರಿಣಮಿಸಿತು. ಫ್ರಾಂಕ್ಸ್ ಅನ್ನು 2023ರಲ್ಲಿ ಬಿಡುಗಡೆ ಮಾಡಲಾಯಿತು.
- ಪ್ರೀಮಿಯರ್ ಹ್ಯಾಚ್ ಬ್ಯಾಕ್ ಅನ್ನು ಇದು ಆಧರಿಸಿದ್ದು, ಹೆಡ್ಸ್ ಅಪ್ ಡಿಸ್ಪ್ಲೇ ಸೇರಿದಂತೆ ಬಲೇನೊ ಕಾರಿನ ಹೆಚ್ಚಿನ ವೈಶಿಷ್ಟ್ಯಗಳನ್ನು ಇದು ಹೊಂದಿದೆ. ಹೆಡ್ಸ್ ಅಪ್ ಡಿಸ್ಪ್ಲೇಯು ಕ್ರಾಸ್ ಓವರ್ ಕಾರಿನ ಟಾಪ್ ಸ್ಪೆಕ್ ಆಲ್ಫಾ ಟ್ರಿಮ್ ನಲ್ಲಿ ಮಾತ್ರವೇ ಲಭ್ಯ.
- ಮಾರುತಿ ಫ್ರಾಂಕ್ಸ್ ಆಲ್ಫಾ ಕಾರು ರೂ. 11.47 ಲಕ್ಷದಿಂದ ಲಭ್ಯ.
ಮಾರುತಿ ಬ್ರೆಜ್ಜಾ
- ಸಾಕಷ್ಟು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಮಾರುತಿ ಬ್ರೆಜ್ಜಾ ಕಾರಿನ ಎರಡನೇ ತಲೆಮಾರಿನ ಅವತಾರವನ್ನು 2022ರ ಮಧ್ಯದಲ್ಲಿ ಹೊರತರಲಾಯಿತು.
- ಪರಿಷ್ಕರಣೆಯ ಅಂಗವಾಗಿ ಈ ಸಬ್-4m SUV ಯು ಫುಲಿ ಲೋಡೆಡ್ ZXi+ ವೇರಿಯಂಟ್ ಗಳಲ್ಲಿ ಹೆಡ್ಸ್ ಅಪ್ ಡಿಸ್ಪ್ಲೇಯನ್ನು ಹೊಂದಿದೆ. ಇದು ಬಲೇನೊ ಕಾರಿನಂತೆಯೇ ಗೇರ್ ಪೊಸಿಷನ್ ಇಂಡಿಕೇಟರ್, ಕ್ರೂಸ್ ಕಂಟ್ರೋಲ್ ಮತ್ತು ಡಿಜಿಟಲ್ ಸ್ಪೀಡೋಮೀಟರ್ ಇತ್ಯಾದಿಗಳನ್ನು ತೋರಿಸುತ್ತದೆ.
- ಮಾರುತಿ ಬ್ರೆಜ್ಜಾ ZXi+ ಟ್ರಿಮ್ ಕಾರಿನ ಬೆಲೆಯು ರೂ. 12.48 ಲಕ್ಷದಿಂದ ಪ್ರಾರಂಭವಾಗುತ್ತದೆ.
ಮಾರುತಿ ಗ್ರಾಂಡ್ ವಿಟಾರ
- ಮಾರುತಿ ಸಂಸ್ಥೆಯು 2022ರ ಮಧ್ಯದಲ್ಲಿ ಹೊರತಂದ ನೂತನ SUVಗೆ ಗ್ರಾಂಡ್ ವಿಟಾರ ಎಂದು ನಾಮಕರಣ ಮಾಡಲಾಯಿತು.
- ಇದು ಇಂದಿನ ಮಾರುಕಟ್ಟೆಯಲ್ಲಿ ಮಾರಾಟಕ್ಕಿರುವ ಅತ್ಯಾಧುನಿಕ ಮಾರುತಿ ಕಾರು ಎನಿಸಿದ್ದು, ಅನುಕೂಲಕರ ಹೆಡ್ಸ್ ಅಪ್ ಡಿಸ್ಪ್ಲೇ ಸೌಲಭ್ಯಗಳನ್ನು ಹೊಂದಿದೆ. ಈ ಸೌಲಭ್ಯವು ಸ್ಟ್ರಾಂಗ್ - ಹೈಬ್ರೀಡ್ ವೇರಿಯಂಟ್ ಗಳಲ್ಲಿ ಮಾತ್ರವೇ ಲಭ್ಯ (Zeta+ ಮತ್ತು Alpha+).
- ಮಾರುತಿಯ ಈ ಕಾರಿನಲ್ಲಿರುವ ಹೆಡ್ಸ್ ಅಪ್ ಡಿಸ್ಪ್ಲೇಯು ಹೆಚ್ಚು ವಿವರವನ್ನು ಒದಗಿಸುತ್ತಿದ್ದು, ಈ SUV ಯ ಬ್ಯಾಟರಿ ಮತ್ತು ನೇವಿಗೇಶನ್ ಗೆ ಸಂಬಂಧಿಸಿದ ಮಾಹಿತಿಯನ್ನೂ ನೀಡುತ್ತದೆ.
- ಮಾರುತಿಯ ಗ್ರಾಂಡ್ ವಿಟಾರ ಹೈಬ್ರೀಡ್ ಕಾರು ರೂ. 18.29 ಲಕ್ಷದಿಂದ ಲಭ್ಯ.
ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್
- ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಕಾರು, ಮಾರುತಿ ಗ್ರಾಂಡ್ ವಿಟಾರದಲ್ಲಿರುವ ಪವರ್ ಟ್ರೇನ್ ಅನ್ನೇ ಒಳಗೊಂಡಿದ್ದು, ಹೆಡ್ಸ್ ಡಿಸ್ಪ್ಲೇಯನ್ನು ಸಹ ಹೊಂದಿದೆ.
- ಈ ಅನುಕೂಲಕರ ಸೌಲಭ್ಯವನ್ನು ಈ ಹೈಬ್ರೀಡ್ ಸಾಲಿನ G ಮತ್ತು V ಟ್ರಿಮ್ ಗಳಲ್ಲಿ ಮಾತ್ರವೇ ನೀಡಲಾಗುತ್ತಿದೆ.
- ಟೊಯೊಟಾ ಸಂಸ್ಥೆಯು ಈ SUV ಯ ಸ್ಟ್ರಾಂಗ್ - ಹೈಬ್ರೀಡ್ ವೇರಿಯಂಟ್ ಗಳ (ಹೆಡ್ಸ್ ಅಪ್ ಡಿಸ್ಪ್ಲೇಯೊಂದಿಗೆ) ಬೆಲೆಯನ್ನು ರೂ. 18.49 ಲಕ್ಷದಿಂದ ನಿಗದಿಪಡಿಸಿದೆ.
ಕಿಯಾ ಸೆಲ್ಟೋಸ್
- ಹೊಸ ಕಿಯಾ ಸೆಲ್ಟೋಸ್ ಕಾರು ಈ ಅನುಕೂಲಕರ ವೈಶಿಷ್ಟ್ಯವನ್ನು ಕೇವಲ X ಲೈನ್ ವೇರಿಯಂಟ್ ಗಳಲ್ಲಿ ಒದಗಿಸುತ್ತಿದ್ದು, ವೇಗ ಮತ್ತು ನೇವಿಗೇಶನ್ ಮುಂತಾದ ವಿವರಗಳನ್ನು ಇದರಲ್ಲಿ ನೋಡಬಹುದು. ಈ ಕಾರಿನ ವಿನ್ಯಾಸವು ಮೇಲೆ ಪಟ್ಟಿ ಮಾಡಲಾದ ಕಾರುಗಳಿಗಿಂತ ಭಿನ್ನವಾಗಿದೆ.
- ಇದರ ಬೆಲೆಯು ರೂ. 19.60 ಲಕ್ಷದಿಂದ ಪ್ರಾರಂಭವಾಗುತ್ತದೆ.
ಈ ಎಲ್ಲಾ ಕಾರುಗಳು ಸದ್ಯಕ್ಕೆ ಭಾರತದಲ್ಲಿ ರೂ. 20 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಹೆಡ್ಸ್ ಅಪ್ ಡಿಸ್ಪ್ಲೇಯೊಂದಿಗೆ ದೊರೆಯುತ್ತವೆ. ಇವುಗಳಲ್ಲಿ ನಿಮ್ಮ ಆಯ್ಕೆ ಯಾವುದು ಮತ್ತು ಯಾಕೆ? ಭವಿಷ್ಯದಲ್ಲಿ ಯಾವ ಕಾರು ಈ ಸೌಲಭ್ಯವನ್ನು ನೀಡಬೇಕು? ನಿಮ್ಮ ಪ್ರತಿಕ್ರಿಯೆಗಳನ್ನು ಈ ಕೆಳಗೆ ಹಂಚಿಕೊಳ್ಳಿರಿ.
ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್-ಶೋರೂಂ ಬೆಲೆಗಳಾಗಿವೆ
ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಬಲೇನೊ AMT