ಕಿಯಾ ಸೋನೆಟ್ ಕಾರಿಗೆ ಹೋಲಿಸಿದರೆ Tata Nexon Facelift ಹೊಂದಿರುವ 7 ವೈಶಿಷ್ಟ್ಯಗಳು

published on ಸೆಪ್ಟೆಂಬರ್ 20, 2023 04:27 pm by shreyash for ಟಾಟಾ ನೆಕ್ಸ್ಂನ್‌

  • 17 Views
  • ಕಾಮೆಂಟ್‌ ಅನ್ನು ಬರೆಯಿರಿ

ಎರಡೂ SUV ಗಳು ಸಾಕಷ್ಟು  ಸುಸಜ್ಜಿತವಾಗಿದ್ದರೂ ನೆಕ್ಸನ್‌ ಮಾತ್ರ ಕಿಯಾ ಸೋನೆಟ್‌ ಗಿಂತ ಹೆಚ್ಚಿನ ವಿಶೇಷತೆಗಳನ್ನು ಹೊಂದಿದೆ

2023 Nexon vs Sonet

ಟಾಟಾ ನೆಕ್ಸನ್‌ ಫೇಸ್‌ ಲಿಫ್ಟ್‌ ವಾಹನವನ್ನು ಅತ್ಯಾಧುನಿಕ ಶೈಲಿ ಮತ್ತು ವೈಶಿಷ್ಟ್ಯಗಳ ಪರಿಷ್ಕರಣೆಯೊಂದಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದ್ದು, 7-ಸ್ಪೀಡ್‌ ಡ್ಯುವಲ್‌ ಕ್ಲಚ್‌ ಟ್ರಾನ್ಸ್‌ ಮಿಶನ್ (DCT)‌ ಸೇರಿದಂತೆ ಹೆಚ್ಚುವರಿ ಟ್ರಾನ್ಸ್‌ ಮಿಶನ್‌ ಆಯ್ಕೆಗಳನ್ನು ಇದು ಹೊಂದಿದೆ. ಟಾಟಾ ಸಂಸ್ಥೆಯ ಈ ಸಬ್‌ ಕಾಂಪ್ಯಾಕ್ಟ್ SUV‌ ಯು  ಕಿಯಾ ಸೋನೆಟ್‌ ಜೊತೆಗೆ ಸ್ಪರ್ಧಿಸುತ್ತಿದೆ. ಕಿಯಾ ಸೋನೆಟ್‌ ಕಾರು ಸಹ ಪ್ರೀಮಿಯಂ ಸೌಲಭ್ಯಗಳು ಮತ್ತು ಅನೇಕ ಪವರ್‌ ಟ್ರೇನ್‌ ಆಯ್ಕೆಗಳೊಂದಿಗೆ ಬರುತ್ತದೆ. ಆದರೆ ಪರಿಷ್ಕೃತ ನೆಕ್ಸನ್‌ ಕಾರಿನಲ್ಲಿರುವ ಕೆಲವೊಂದು ವೈಶಿಷ್ಟ್ಯಗಳನ್ನು ಇದು ಹೊಂದಿಲ್ಲ. ಸೋನೆಟ್‌ ಕಾರಿಗೆ ಹೋಲಿಸಿದರೆ 2023ರ ನೆಕ್ಸನ್‌ ವಾಹನವು ಏನೆಲ್ಲ ಹೆಚ್ಚುವರಿ ವೈಶಿಷ್ಟ್ಯಗಳನ್ನು ಹೊಂದಿದೆ ಎನ್ನುವುದನ್ನು ನೋಡೋಣ.

ಚಾಲಕನಿಗಾಗಿ ಸೂಕ್ತ ಡಿಜಿಟಲ್‌ ಡಿಸ್ಪ್ಲೇ

2023ರ ನೆಕ್ಸನ್‌ ಮಾದರಿಯು ಚಾಲಕನ 10.25 ಇಂಚಿನ ಡಿಜಿಟಲ್‌ ಡಿಸ್ಪ್ಲೇಯ ಮೂಲಕ ಗಣನೀಯ ಪ್ರಮಾಣದ ಪರಿಷ್ಕರಣೆಯನ್ನು ಕಂಡಿದೆ. ಇದಕ್ಕೆ ಬದಲಾಗಿ ಕಿಯಾ ಸೋನೆಟ್‌ ಕಾರು, 4.2 ಇಂಚಿನ ಮಲ್ಟಿ ಇನ್ಫೊಮೇಶನ್‌ ಡಿಸ್ಪ್ಲೇ ಜೊತೆಗೆ ಸೆಮಿ ಡಿಜಿಟಲ್‌ ಇನ್ಸ್‌ ಟ್ರುಮೆಂಟ್‌ ಕ್ಲಸ್ಟರ್‌ ಅನ್ನು ಹೊಂದಿದೆ.

2023 Tata Nexon Digital Driver's Display

ಸೋನೆಟ್‌ ಕಾರಿನ MID ಯು ಸರಾಸರಿ ಇಂಧನ ದಕ್ಷತೆ, ಎಷ್ಟು ಅಂತರದಲ್ಲಿ ಖಾಲಿಯಾಗುತ್ತದೆ, ಟರ್ನ್‌ ಬೈ ಟರ್ನ್‌ ನೇವಿಗೇಶನ್‌, ಟ್ರಿಪ್‌ ಮಾಹಿತಿ ಮತ್ತು ಟೈರ್‌ ನ ಒತ್ತಡ ಇತ್ಯಾದಿ ದತ್ತಾಂಶವನ್ನು ತೋರಿಸುತ್ತದೆ. ಇದಕ್ಕೆ ಪ್ರತಿಯಾಗಿ ನೆಕ್ಸನ್‌ ನಲ್ಲಿರುವ ಘಟಕವು ವಿವಿಧ ಗ್ರಾಫಿಕ್‌ ಗಳೊಂದಿಗೆ ವಿಸ್ತೃತ ಮಾಹಿತಿಯನ್ನು ಪ್ರದರ್ಶಿಸುತ್ತದೆ ಮಾತ್ರವಲ್ಲದೆ, ಕಾರ್‌ ಪ್ಲೇ ಮತ್ತು ಆಂಡ್ರಾಯ್ಡ್‌ ಅಟೋ ಮೂಲಕ ಆಪಲ್‌ ಮ್ಯಾಪ್ಸ್‌ ಅಥವಾ ಗೂಗಲ್‌ ಮ್ಯಾಪ್ಸ್‌ ನಿಂದ ನಿಮ್ಮ ನೇವಿಗೇಶನ್‌ ಅನ್ನು ಸಿಂಕ್‌ ಮಾಡಲು ಅನುವು ಮಾಡಿಕೊಡುತ್ತದೆ ಹಾಗೂ ಚಾಲಕನ ಡಿಸ್ಪ್ಲೇಯಲ್ಲಿ ನೇರವಾಗಿ ಮ್ಯಾಪ್‌ ಸ್ಕ್ರೀನ್‌ ಅನ್ನು ತೋರಿಸುತ್ತದೆ.

 

ಬ್ಲೈಂಡ್‌ ಸ್ಪಾಟ್‌ ಮಾನಿಟರ್‌ ಜೊತೆಗೆ 360 ಡಿಗ್ರಿ ಕ್ಯಾಮೆರಾ

ಪರಿಷ್ಕೃತ ನೆಕ್ಸನ್‌ ನಲ್ಲಿರುವ 360 ಡಿಗ್ರಿ ಕ್ಯಾಮರಾವು ಇನ್ನೊಂದು ಗಮನಾರ್ಹ ವೈಶಿಷ್ಟ್ಯವೆಂದರೆ, ಕಿಯಾ ಸೋನೆಟ್‌ ಕಾರಿಗಿಂತ ಭಿನ್ನತೆಯನ್ನು ಕಾಯ್ದುಕೊಳ್ಳುವಲ್ಲಿ ಸಹಾಯ ಮಾಡಿದೆ.  ಈ ವೈಶಿಷ್ಟ್ಯವನ್ನು ಹೊಂದಿರುವ ಮೊದಲ ಸಬ್‌ ಕಾಂಪ್ಯಾಕ್ಟ್‌ SUV ಇದಲ್ಲದಿದ್ದರೂ (ನಿಸ್ಸಾನ್‌ ಮ್ಯಾಗ್ನೈಟ್‌ ಈಗಾಲೇ ಇದನ್ನು ಹೊಂದಿದೆ), ಈ ಮಾದರಿಯು ಬ್ಲೈಂಡ್‌ ವ್ಯೂ ಮಾನಿಟರ್‌ ಅನ್ನು ಒದಗಿಸುತ್ತದೆ. ಈ ವೈಶಿಷ್ಟ್ಯವು ಟರ್ನ್‌ ಸಿಗ್ನಲ್‌ ಗಳ ಜೊತೆಗೂಡಿ ಕೆಲಸ ಮಾಡುತ್ತದೆ ಹಾಗೂ ಇನ್ಫೊಟೈನ್‌ ಮೆಂಟ್‌ ಪರದೆಯಲ್ಲಿ ಬ್ಲೈಂಡ್‌ ವ್ಯೂ ಮಾನಿಟರ್‌ ಬರುತ್ತದೆ.

Tata Nexon facelift 360-degree camera

 ಇದನ್ನು ಸಹ ಓದಿರಿ: ಮಾರುತಿ ಬ್ರೆಜ್ಜಾಕ್ಕೆ ಹೋಲಿಸಿದರೆ ಹೊಸ ಟಾಟಾ ನೆಕ್ಸನ್‌ ಈ 5 ವಿಶೇಷತೆಗಳನ್ನು ಹೊಂದಿದೆ

ಎತ್ತರ ಹೊಂದಿಸಬಹುದಾದ ಸಹಚಾಲಕನ ಸೀಟು

ಟಾಟಾ ನೆಕ್ಸನ್‌ ಕಾರು ಚಾಲಕನ ಹಾಗೂ ಸಹ ಚಾಲಕನ ಸೀಟುಗಳ ಎತ್ತರವನ್ನು ಹೊಂದಿಸಬಹುದಾದ ಸೌಲಭ್ಯವನ್ನು ಹೊಂದಿದ್ದರೆ, ಕಿಯಾ ಸೋನೆಟ್‌ ಕಾರಿನಲ್ಲಿ ಚಾಲಕನ ಸೀಟಿನ ಎತ್ತರವನ್ನು ಮಾತ್ರವೇ ಹೊಂದಿಸಬಹುದು. ಆದರೆ ಸೋನೆಟ್‌ ಮಾದರಿಯು ಪವರ್ಡ್‌ ಡ್ರೈವರ್ಸ್‌ ಸೀಟ್‌ ವೈಶಿಷ್ಟ್ಯವನ್ನು ಹೊಂದಿದ್ದು, ಪರಿಷ್ಕೃತ ಟಾಟಾ ನೆಕ್ಸನ್‌ ಕಾರಿನಲ್ಲಿ ಇದು ಲಭ್ಯವಿಲ್ಲ.

ಹೆಚ್ಚು ಸ್ಪೀಕರ್‌ ಗಳು

Tata Nexon facelift 8-speaker music system

ಕಿಯಾ ಸೋನೆಟ್‌ ಕಾರು ಬ್ರಾಂಡೆಡ್‌ 7 ಸ್ಪೀಕರ್‌ ಬೋಸ್‌ ಆಡಿಯೋ ಸಿಸ್ಟಂ ಹೊಂದಿದ್ದರೆ, 2023ರ ನೆಕ್ಸನ್‌ ಕಾರಿನಲ್ಲಿರುವ JBL ಆಡಿಯೋ ಸಿಸ್ಟಂ 4 ಸ್ಪೀಕರ್‌ ಗಳು, 4 ಟ್ವೀಟರ್‌ ಗಳು ಮತ್ತು ಸಬ್‌ ವೂಫರ್‌ ಜೊತೆಗೆ ಬರುತ್ತದೆ. ಹೆಚ್ಚು ಸ್ಪೀಕರ್‌ ಗಳು ಇರುವ ಕಾರಣ ಧ್ವನಿಯ ವಿಚಾರದಲ್ಲಿ ಅದ್ಭುತ ಅನುಭವ ದೊರೆಯಲಿದೆ. ಆದರೆ ನೈಜ ಅನುಭವ ತಿಳಿಯಬೇಕಾದರೆ ಅವುಗಳನ್ನು ಪರೀಕ್ಷಿಸಿಯೇ ನೋಡಬೇಕು.

ಮಳೆ ಸಂವೇದಿ ವೈಪರ್‌ ಗಳು

2023ರ ಟಾಟಾ ನೆಕ್ಸನ್‌ ಮಾದರಿಯು ತನ್ನ ಹಳೆಯ ಆವೃತ್ತಿಯಲ್ಲಿದ್ದ ಮಳೆ ಸಂವೇದಿ ವೈಪರ್‌ ಗಳನ್ನು ಉಳಿಸಿಕೊಂಡಿದೆ. ಆದರೆ ಸೋನೆಟ್‌ ಮಾದರಿಯು ಈ ವೈಶಿಷ್ಟ್ಯವನ್ನು ಹೊಂದಿಲ್ಲ. ಅಲ್ಲದೆ, ಪರಿಷ್ಕೃತ ಟಾಟಾ ನೆಕ್ಸನ್‌ ಕಾರು, ಸ್ಪಾಯ್ಲರ್‌ ನ ಕೆಳಗೆ ರಿಯರ್‌ ವೈಪರ್‌ ಅನ್ನು ಹೊಂದಿದ್ದು, ಸೋನೆಟ್‌ ನ ರಿಯರ್‌ ವೈಪರ್‌ ಅನ್ನು ಸಾಂಪ್ರದಾಯಿಕವಾಗಿ ಇರಿಸಲಾಗಿದ್ದು, ಬೂಟ್‌ ಲಿಡ್‌ ನ ಸ್ವಲ್ಪ ಮೇಲೆ ರಿಯರ್‌ ಗ್ಲಾಸ್‌ ನ ಮೇಲೆ ಇದನ್ನು ಕಾಣಬಹುದು.

ಇದನ್ನು ಸಹ ಓದಿರಿ: ಹ್ಯುಂಡೈ ವೆನ್ಯು ಕಾರಿಗೆ ಹೋಲಿಸಿದರೆ ಟಾಟಾ ನೆಕ್ಸನ್‌ ಹೊಂದಿರುವ 7 ವೈಶಿಷ್ಟ್ಯಗಳು

ಸ್ಟ್ಯಾಂಡರ್ಡ್ ಆಗಿರುವ ಆರು ಏರ್‌ ಬ್ಯಾಗುಗಳು

ಕಿಯಾ ಸೋನೆಟ್‌ ಕಾರು ಅದು ಬಿಡುಗಡೆಯಾದ ಸಮಯದಿಂದಲೇ ತನ್ನ ಟಾಪ್‌ ಸ್ಪೆಕ್‌ ವೇರಿಯಂಟ್‌ ನಲ್ಲಿ ಆರು ಏರ್‌ ಬ್ಯಾಗುಗಳನ್ನು ಹೊಂದಿದ್ದು ಸದ್ಯಕ್ಕೆ ಪ್ರಮಾಣಿತ ನಾಲ್ಕು ಏರ್‌ ಬ್ಯಾಗುಗಳನ್ನು ಇದು ನೀಡುತ್ತದೆ. ಟಾಟಾದ ಸಬ್‌ ಕಾಂಪ್ಯಾಕ್ಟ್‌ SUV ಯು ಹಿಂದೆ ಹಳೆಯ GNCAP ಕ್ರ್ಯಾಶ್‌ ಟೆಸ್ಟ್‌ ಪ್ರಕಾರ 5 ಸ್ಟಾರ್‌ ಸುರಕ್ಷಾ ರೇಟಿಂಗ್‌ ಪಡೆದಾಗ ಪ್ರಮಾಣಿತ ಡ್ಯುವಲ್‌ ಫ್ರಂಟ್‌ ಏರ್‌ ಬ್ಯಾಗುಗಳನ್ನು ಮಾತ್ರವೇ ಹೊಂದಿತ್ತು. ಆದರೆ ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸುವುದಕ್ಕಾಗಿ ಎಲ್ಲಾ ವೇರಿಯಂಟ್‌ ಗಳಲ್ಲಿ ಇದು ಆರು ಏರ್‌ ಬ್ಯಾಗುಗಳನ್ನು ಹೊಂದಿರಲಿದೆ. 

Tata Nexon facelift six airbags

ಡೀಸೆಲ್‌ ಜೊತೆಗೆ ಸೂಕ್ತ ಮ್ಯಾನುವಲ್‌ ಟ್ರಾನ್ಸ್‌ ಮಿಶನ್

ಈ ವೈಶಿಷ್ಟ್ಯವು ಈ ವಿಭಾಗದಲ್ಲಿ ಕಿಯಾ ಸೋನೆಟ್‌ ನಲ್ಲಿ 6-ಸ್ಪೀಡ್ iMT (ಕ್ಲಚ್‌ ಪಡೆಲ್‌ ಇಲ್ಲದೆಯೇ ಮ್ಯಾನುವಲ್) ಜೊತೆಗೆ ಮಾತ್ರವೇ ಲಭ್ಯವಿದ್ದು, ಡೀಸೆಲ್‌ ಚಾಲಿತ ವೇರಿಯಂಟ್‌ ಗಳಲ್ಲಿ ಇದು ಏಕೈಕ ʻʻಮ್ಯಾನುವಲ್‌ʼʼ ಆಯ್ಕೆಯಾಗಿದೆ. ಇದು ಅನೇಕ ಪ್ರಯೋಜನಗಳನ್ನು ಹೊಂದಿದ್ದರೂ, ಅನೇಕ ಖರೀದಿದಾರರು ಹೆಚ್ಚು ಚಿರಪರಿಚಿತ ಮ್ಯಾನುವಲ್‌ ಟ್ರಾನ್ಸ್‌ ಮಿಶನ್‌ ಅನ್ನೇ ಇಷ್ಟಪಡುತ್ತಾರೆ. ಹೀಗಾಗಿ 2023ರ ಟಾಟಾ ನೆಕ್ಸನ್‌ ಮಾದರಿಯ ಡೀಸೆಲ್‌ ಮಾದರಿಗಳನ್ನು ಇದನ್ನೇ ತಮ್ಮ ಗ್ರಾಹಕರಿಗೆ ನೀಡಲಿವೆ. ನೆಕ್ಸನ್‌ ಕಾರಿನ 1.5 ಲೀಟರ್‌ ಡೀಸೆಲ್‌ ಯೂನಿಟ್‌ ಅನ್ನು 6-ಸ್ಪೀಡ್‌ ಮ್ಯಾನುವಲ್‌ ಅಥವಾ 6-ಸ್ಪೀಡ್ AMT ಟ್ರಾನ್ಸ್‌ ಮಿಶನ್‌ ಜೊತೆಗೆ ಪಡೆಯಬಹುದು. ಇದೇ ವೇಳೆ ಕಿಯಾ ಸೋನೆಟ್‌ ಕಾರಿನ ಡೀಸೆಲ್‌ ಎಂಜಿನ್‌, 6-ಸ್ಪೀಡ್‌ ಟಾರ್ಕ್‌ ಕನ್ವರ್ಟರ್‌ ಅಟೋಮ್ಯಾಟಿಕ್‌ ಟ್ರಾನ್ಸ್‌ ಮಿಶನ್‌ ಆಯ್ಕೆಯನ್ನು ಹೊಂದಿದೆ.

ಬೆಲೆಗಳು

ಟಾಟಾ ನೆಕ್ಸನ್‌ ಫೇಸ್‌ ಲಿಫ್ಟ್‌ ಮಾದರಿಯು ರೂ. 8.10 ಲಕ್ಷದಿಂದ ರೂ. 15.50 ಲಕ್ಷದವರೆಗೆ (ಪ್ರಾರಂಭಿಕ) ಬೆಲೆಯನ್ನು ಹೊಂದಿದ್ದರೆ, ಕಿಯಾ ಸಂಸ್ಥೆಯು ಸೋನೆಟ್‌ ಮಾದರಿಯ ಬೆಲೆಯನ್ನು ರೂ. 7.79 ಲಕ್ಷದಿಂದ ರೂ. 14.89 ಲಕ್ಷದ ತನಕ (ಎಲ್ಲಾ ಬೆಲೆಗಳು ಎಕ್ಸ್‌ - ಶೋರೂಂ ಆಗಿವೆ) ನಿಗದಿಪಡಿಸಿದೆ. ಈ ಎರಡೂ SUVಗಳು ಮಾರುತಿ ಬ್ರೆಜ್ಜಾ, ಹ್ಯುಂಡೈ ವೆನ್ಯು, ಮಹೀಂದ್ರಾ XUV300, ರೆನಾಲ್ಟ್‌ ಕೀಗರ್‌ ಮತ್ತು ನಿಸ್ಸಾನ್‌ ಮ್ಯಾಗ್ನೈಟ್‌ ಜೊತೆಗೆ ಸ್ಪರ್ಧಿಸಲಿವೆ. 

ಸಂಬಂಧಿತ: ಟಾಟಾ ನೆಕ್ಸನ್ vs ಹ್ಯುಂಡೈ ವೆನ್ಯು vs ಕಿಯಾ ಸೋನೆಸ್ vs ಮಾರುತಿ ಬ್ರೆಜ್ಜಾ vs ಮಹೀಂದ್ರಾ XUV300: ಬೆಲೆಗಳ ಹೋಲಿಕೆ

ಕಿಯಾ ಸಂಸ್ಥೆಯು ತನ್ನ ಪರಿಷ್ಕೃತ ಸೋನೆಟ್‌ ಮಾದರಿಯನ್ನು ಪರೀಕ್ಷೆಗೆ ಒಳಪಡಿಸುತ್ತಿದ್ದು, 2024ರಲ್ಲಿ ಬಿಡುಗಡೆಯಾಗುವ ಸಂಭವವಿದೆ. ಈ ಪರಿಷ್ಕರಣೆಯೊಂದಿಗೆ, ಕಿಯಾ ಸೋನೆಟ್‌ ಕಾರು ತನ್ನ ಪ್ರಸ್ತುತ ಆವೃತ್ತಿಗಿಂತಲೂ ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ರಸ್ತೆಗಿಳಿಯುವ ಸಾಧ್ಯತೆ ಇದೆ. 

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ನೆಕ್ಸನ್ ಆಟೋಮ್ಯಾಟಿಕ್ 

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಟಾಟಾ ನೆಕ್ಸ್ಂನ್‌

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience