ಈ 7 ವಿಷಯಗಳಲ್ಲಿ ಮಾರುತಿ ಫ್ರಾಂಕ್ಸ್ ಮತ್ತು ಟೊಯೋಟಾ ಟೈಸರ್ ಅನ್ನು ಮೀರಿಸಲಿರುವ Skoda Kylaq
ಹೆಚ್ಚು ಶಕ್ತಿಯುತವಾದ ಟರ್ಬೊ-ಪೆಟ್ರೋಲ್ ಎಂಜಿನ್‌ನಿಂದ ಸನ್‌ರೂಫ್‌ವರೆಗೆ, ಫ್ರಾಂಕ್ಸ್-ಟೈಸರ್ ಜೋಡಿಗಿಂತ ಹೆಚ್ಚಾಗಿ ಕೈಲಾಕ್ ಪಡೆಯಲಿರುವ 7 ವಿಷಯಗಳು ಇಲ್ಲಿವೆ
ಭಾರತದಲ್ಲಿ ಸ್ಕೋಡಾದ ಅತ್ಯಂತ ಕೈಗೆಟುಕುವ ಕಾರು ಆಗಿರುವ ಸ್ಕೋಡಾ ಕೈಲಾಕ್ ಶೀಘ್ರದಲ್ಲೇ ಅನಾವರಣಗೊಳ್ಳಲಿದೆ ಮತ್ತು ಈ ಸಬ್-ಎಮ್ ಎಸ್‌ಯುವಿ ಕುರಿತು ಹೆಚ್ಚಿನ ವಿವರಗಳಿಗಾಗಿ ನಾವು ಕಾಯುತ್ತಿರುವಾಗ, ಝೆಕ್ ಮೂಲದ ಈ ಕಾರು ತಯಾರಕರು ಇದು 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಒಳಗೊಂಡಿರುತ್ತದೆ ಎಂದು ಖಚಿತಪಡಿಸಿದ್ದಾರೆ. ಎಂಜಿನ್‌ನ ಹೊರತಾಗಿ, ಇದು ಇತರ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಗಳು ಮತ್ತು ಮಾರುತಿ ಫ್ರಾಂಕ್ಸ್ ಮತ್ತು ಟೊಯೊಟಾ ಟೈಸರ್‌ನಂತಹ ಕ್ರಾಸ್‌ಒವರ್‌ಗಳೊಂದಿಗೆ ಸ್ಪರ್ಧಿಸಲು ಹಲವಾರು ಫೀಚರ್‌ಗಳೊಂದಿಗೆ ಬರುತ್ತದೆ. ಸೆಗ್ಮೆಂಟ್ ಲೀಡರ್ ಮಾರುತಿ ಬ್ರೆಝಾ ಮೇಲೆ ಕೈಲಾಕ್ ಪಡೆಯುವ ಫೀಚರ್‌ಗಳ ಪಟ್ಟಿಯನ್ನು ನಾವು ಈಗಾಗಲೇ ವಿವರಿಸಿದ್ದೇವೆ ಮತ್ತು ಈಗ ಮಾರುತಿ ಫ್ರಾಂಕ್ಸ್ ಮತ್ತು ಟೊಯೊಟಾ ಟೈಸರ್ ಜೋಡಿಗಿಂತ ಹೆಚ್ಚಾಗಿ ಅದು ಏನನ್ನು ಪಡೆಯಬಹುದು ಎಂಬುದನ್ನು ನೋಡೋಣ.
ಹೆಚ್ಚು ಶಕ್ತಿಶಾಲಿ ಟರ್ಬೊ-ಪೆಟ್ರೋಲ್ ಎಂಜಿನ್
ಕೈಲಾಕ್ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ ಎಂದು ಸ್ಕೋಡಾ ದೃಢಪಡಿಸಿದೆ, ಇದನ್ನು ಸ್ಕೋಡಾ ಕುಶಾಕ್ ಮತ್ತು ಸ್ಲಾವಿಯಾದಲ್ಲಿಯೂ ಬಳಸಲಾಗುತ್ತದೆ. ಈ ಎಂಜಿನ್ 115 ಪಿಎಸ್ ಮತ್ತು 178 ಎನ್‌ಎಮ್ ನಷ್ಟು ಔಟ್‌ಪುಟ್ ಅನ್ನು ಉತ್ಪಾದಿಸುತ್ತದೆ ಮತ್ತು 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಬಹುದು.
ಹೋಲಿಕೆಯಲ್ಲಿ, ಮಾರುತಿ ಫ್ರಾಂಕ್ಸ್ ಮತ್ತು ಟೊಯೋಟಾ ಟೈಸರ್ ಸಹ 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ, ಆದರೆ ಇದು 100 ಪಿಎಸ್ ಮತ್ತು 148 ಎನ್‌ಎಮ್‌ನಷ್ಟು ಉತ್ಪಾದಿಸುತ್ತದೆ, ಇದು ಸ್ಕೋಡಾ ಎಸ್‌ಯುವಿಗಿಂತ 15 ಪಿಎಸ್ ಮತ್ತು 30 ಎನ್‌ಎಮ್ ನಷ್ಟು ಕಡಿಮೆ ಔಟ್‌ಪುಟ್ ಅನ್ನು ಉತ್ಪಾದಿಸುತ್ತದೆ.
6 ಸ್ಟ್ಯಾಂಡರ್ಡ್ ಏರ್‌ಬ್ಯಾಗ್‌ಗಳು
ಮಾರುತಿ ಫ್ರಾಂಕ್ಸ್ ಮತ್ತು ಟೊಯೊಟಾ ಟೈಸರ್‌ನಂತೆಯೇ ಸ್ಕೋಡಾ ಕೈಲಾಕ್ ಆರು ಏರ್‌ಬ್ಯಾಗ್‌ಗಳೊಂದಿಗೆ ಬರಲಿದೆ. ಆದರೆ, ಕೈಲಾಕ್ ಅದರ ಬೇಸ್ ವೇರಿಯೆಂಟ್‌ನಿಂದ ಎಲ್ಲಾ ವೇರಿಯೆಂಟ್‌ಗಳಲ್ಲಿಯೂ ಆರು ಏರ್‌ಬ್ಯಾಗ್‌ಗಳನ್ನು ನೀಡುವ ನಿರೀಕ್ಷೆಯಿದೆ. ಫ್ರಾಂಕ್ಸ್ ಮತ್ತು ಟೈಸರ್‌ಗಳು ಈ ಫೀಚರ್ ಅನ್ನು ಕ್ರಮವಾಗಿ ತಮ್ಮ ಡೆಲ್ಟಾ ಪ್ಲಸ್ (ಒಪ್ಶನಲ್) ಮತ್ತು ಜಿ ವೇರಿಯೆಂಟ್‌ಗಳಿಂದ ನೀಡುತ್ತದೆ. ಫ್ರಾಂಕ್ಸ್ ಮತ್ತು ಟೈಸರ್‌ನ ಲೋವರ್ ವೇರಿಯೆಂಟ್‌ಗಳು ಕೇವಲ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳೊಂದಿಗೆ ಬರುತ್ತವೆ.
ವೆಂಟಿಲೇಟೆಡ್ ಮತ್ತು ಎಲೆಕ್ಟ್ರಿಕಲಿ ಅಡ್ಜಸ್ಟೇಬಲ್ ಸೀಟುಗಳು
ಕೈಲಾಕ್ ವೆಂಟಿಲೇಶನ್ ಸೌಕರ್ಯದೊಂದಿಗೆ ಬಟನ್‌ನಲ್ಲಿ ಹೊಂದಾಣಿಕೆ ಮಾಡಬಹುದಾದ ಮುಂಭಾಗದ ಸೀಟ್‌ಗಳನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಮಾರುತಿ ಫ್ರಾಂಕ್ಸ್ ಮತ್ತು ಟೊಯೋಟಾ ಟೈಸರ್ ಮ್ಯಾನುವಲ್ ಆಡ್ಜಸ್ಟ್‌ಮೆಂಟ್ ಅನ್ನು ಮಾತ್ರ ನೀಡುತ್ತವೆ ಮತ್ತು ಎತ್ತರ ಹೊಂದಾಣಿಕೆಯು ಚಾಲಕ ಸೀಟಿಗೆ ಸೀಮಿತವಾಗಿದೆ.
ಇದನ್ನೂ ಓದಿ: Skoda Kylaq ಮತ್ತು ಅದರ ಪ್ರತಿಸ್ಪರ್ಧಿಗಳ ಪವರ್‌ಟ್ರೇನ್ ವಿಶೇಷಣಗಳ ಹೋಲಿಕೆ, ಯಾವುದು ಬೆಸ್ಟ್ ?
ಲೆಥೆರೆಟ್ ಸೀಟ್ ಕವರ್
ಕೈಲಾಕ್ ಲೆಥೆರೆಟ್ ಕವರ್‌ನೊಂದಿಗೆ ಹೆಚ್ಚು ಪ್ರೀಮಿಯಂ ಆದ ಸೀಟಿಂಗ್ ಅನುಭವವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ ಮತ್ತು ಡೋರ್ ಪ್ಯಾಡ್‌ಗಳಲ್ಲಿ ಲೆಥೆರೆಟ್ ಪ್ಯಾಡಿಂಗ್ ಅನ್ನು ಸಹ ಕಾಣಬಹುದು. ಮತ್ತೊಂದೆಡೆ, ಮಾರುತಿ ಫ್ರಾಂಕ್ಸ್ ಮತ್ತು ಟೊಯೋಟಾ ಟೈಸರ್ ಫ್ಯಾಬ್ರಿಕ್ ಸೀಟ್‌ಗಳೊಂದಿಗೆ ಬರುತ್ತವೆ, ಅವುಗಳ ಟಾಪ್-ಎಂಡ್ ವೇರಿಯೆಂಟ್‌ಗಳಲ್ಲಿಯೂ ಸಹ ಇದನ್ನೇ ನೀಡಲಾಗಿದೆ.
ದೊಡ್ಡದಾದ ಟಚ್‌ಸ್ಕ್ರೀನ್
ಕೈಲಾಕ್ 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಒಳಗೊಂಡಿರುವ ನಿರೀಕ್ಷೆಯಿದೆ, ಇದು ದೊಡ್ಡ ಕುಶಾಕ್ ಮತ್ತು ಸ್ಲಾವಿಯಾವನ್ನು ಹೋಲುತ್ತದೆ. ಹೋಲಿಸುವಾಗ, ಮಾರುತಿ ಫ್ರಾಂಕ್ಸ್ ಮತ್ತು ಟೊಯೋಟಾ ಟೈಸರ್ 9-ಇಂಚಿನ ಸ್ಕ್ರೀನ್ ಅನ್ನು ನೀಡುತ್ತವೆ, ಬ್ರೆಝಾದಲ್ಲಿ ಸಹ ಇದನ್ನೇ ನೀಡಲಾಗುತ್ತದೆ.
ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ
ಕೈಲಾಕ್ ಕುಶಾಕ್ ಮತ್ತು ಸ್ಲಾವಿಯಾದಂತೆ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಮಾರುತಿ ಫ್ರಾಂಕ್ಸ್ ಮತ್ತು ಟೊಯೊಟಾ ಟೈಸರ್ ಹೆಚ್ಚುವರಿ ವಾಹನ ಮಾಹಿತಿಗಾಗಿ ಮಲ್ಟಿ-ಇಂಫಾರ್ಮೆಶನ್ ಡಿಸ್‌ಪ್ಲೇ (MID) ಜೊತೆಗೆ ಸ್ಪೀಡೋಮೀಟರ್ ಮತ್ತು ಟ್ಯಾಕೋಮೀಟರ್‌ಗಾಗಿ ಅನಲಾಗ್ ಡಯಲ್‌ಗಳನ್ನು ಒಳಗೊಂಡಿರುವ ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ನೊಂದಿಗೆ ಬರುತ್ತದೆ.
ಇದನ್ನೂ ಓದಿ: Skoda Kylaqನ ಈ ಅಂಶಗಳ ಬಗ್ಗೆ ಹೆಚ್ಚು ಉತ್ಸುಕರಾಗಿರುವ ನಮ್ಮ ಇನ್‌ಸ್ಟಾಗ್ರಾಮ್ ಫಾಲೋವರ್ಸ್..!!
ಸಿಂಗಲ್-ಪ್ಯಾನ್ ಸನ್‌ರೂಫ್
ಮಾರುತಿ ಬ್ರೆಝಾ ಸಿಂಗಲ್-ಪೇನ್ ಸನ್‌ರೂಫ್‌ನೊಂದಿಗೆ ಬಂದಿದ್ದರೂ, ಮಾರುತಿ ಫ್ರಾಂಕ್ಸ್ ಮತ್ತು ಟೊಯೋಟಾ ಟೈಸರ್ ಈ ಜನಪ್ರಿಯ ಫೀಚರ್ ಅನ್ನು ನೀಡುವುದಿಲ್ಲ. ಆದರೆ, ಕೈಲಾಕ್‌ನೊಂದಿಗೆ ಸಿಂಗಲ್ ಪೇನ್ ಸನ್‌ರೂಫ್ ಅನ್ನು ನೀಡುವ ನಿರೀಕ್ಷೆಯಿದೆ.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಮಾರುತಿ ಫ್ರಾಂಕ್ಸ್‌ನ ಬೆಲೆ 7.51 ಲಕ್ಷ ರೂ.ನಿಂದ 13.04 ಲಕ್ಷ ರೂ.ನಷ್ಟಿದ್ದರೆ, ಟೊಯೋಟಾ ಟೈಸರ್‌ನ ಬೆಲೆ 7.74 ಲಕ್ಷ ರೂ.ನಿಂದ13.08 ಲಕ್ಷ ರೂ.ವರೆಗೆ ಇದೆ.
ಸ್ಕೋಡಾ ಕೈಲಾಕ್ ಬೆಲೆ 8.50 ಲಕ್ಷದಿಂದ ನಿರೀಕ್ಷಿಸಲಾಗಿದೆ. ಇದು ಮಾರುತಿ ಬ್ರೆಝಾ, ಮಹೀಂದ್ರಾ ಎಕ್ಸ್‌ಯುವಿ 3XO, ಹ್ಯುಂಡೈ ವೆನ್ಯೂ ಮತ್ತು ಕಿಯಾ ಸೋನೆಟ್ ಸೇರಿದಂತೆ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ ಮತ್ತು ಮಾರುತಿ ಫ್ರಾಂಕ್ಸ್ ಮತ್ತು ಟೊಯೋಟಾ ಟೈಸರ್ ಸಬ್-4ಎಮ್ ಕ್ರಾಸ್‌ಒವರ್‌ಗಳಿಗೆ ಪ್ರತಿಸ್ಪರ್ಧಿಯಾಗಿ ಕಾರ್ಯನಿರ್ವಹಿಸುತ್ತದೆ.
ಎಲ್ಲಾ ಬೆಲೆಗಳು ಭಾರತದಾದ್ಯಂತದ ಎಕ್ಸ್ ಶೋರೂಂ ಆಗಿದೆ
ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ
ಇದರ ಬಗ್ಗೆ ಇನ್ನಷ್ಟು ಓದಿ: ಫ್ರಾಂಕ್ಸ್ ಎಎಮ್‌ಟಿ