• English
  • Login / Register

Maruti Brezza ಗಿಂತ ಹೆಚ್ಚುವರಿಯಾಗಿ ಈ 5 ಫೀಚರ್‌ಗಳನ್ನು ನೀಡಲಿರುವ Skoda Kylaq

ಸ್ಕೋಡಾ kylaq ಗಾಗಿ shreyash ಮೂಲಕ ಅಕ್ಟೋಬರ್ 21, 2024 08:20 pm ರಂದು ಪ್ರಕಟಿಸಲಾಗಿದೆ

  • 89 Views
  • ಕಾಮೆಂಟ್‌ ಅನ್ನು ಬರೆಯಿರಿ

ಕೈಲಾಕ್ ಹೆಚ್ಚು ಪ್ರೀಮಿಯಂ ಆಗಿರುವ ಫೀಚರ್‌ಗಳನ್ನು ನೀಡುವುದು ಮಾತ್ರವಲ್ಲದೆ, ಇದು ಬ್ರೆಝಾಕ್ಕಿಂತ ಹೆಚ್ಚು ಶಕ್ತಿಶಾಲಿ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ

Skoda Kylaq Is Likely To Offer These 5 Features Over Maruti Brezza

ಸ್ಕೋಡಾ ಕೈಲಾಕ್, ಜೆಕ್ ಮೂಲದ ವಾಹನ ತಯಾರಕರಿಂದ ಸಿದ್ಧವಾಗುತ್ತಿರುವ ಮೊದಲ ಭಾರತ-ಬೌಂಡ್ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ಆಗಿದ್ದು, ನವೆಂಬರ್ 6 ರಂದು ತನ್ನ ಜಾಗತಿಕ ಚೊಚ್ಚಲ ಪ್ರವೇಶವನ್ನು ಮಾಡಲು ತಯಾರಾಗುತ್ತಿದೆ. ಕೈಲಾಕ್‌ಗೆ ನೇರ ಪ್ರತಿಸ್ಪರ್ಧಿ ಎಂದರೆ ಮಾರುತಿ ಬ್ರೆಝಾ, ಇದು ಭಾರತದಲ್ಲಿ ಹೆಚ್ಚು ಮಾರಾಟವಾಗುವ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿಗಳಲ್ಲಿ ಒಂದಾಗಿದೆ. ಬ್ರೆಝಾಕ್ಕಿಂತ ಹೆಚ್ಚುವರಿಯಾಗಿ ಸ್ಕೋಡಾ ಕೈಲಾಕ್ ಪಡೆಯುವ ಟಾಪ್ 5 ವಿಷಯಗಳನ್ನು ನಾವು ಈಗ ವಿವರಿಸಿದ್ದೇವೆ.

ದೊಡ್ಡದಾದ 10-ಇಂಚಿನ ಟಚ್‌ಸ್ಕ್ರೀನ್

Skoda Kushaq 10-inch touchscreen

ಸ್ಕೋಡಾ ಕೈಲಾಕ್‌ 10-ಇಂಚಿನ ಟಚ್‌ಸ್ಕ್ರೀನ್ ಅನ್ನು ಹೊಂದಿದ್ದು, ಸ್ಲಾವಿಯಾ ಮತ್ತು ಕುಶಾಕ್‌ನಂತಹ ಇತರ ಸ್ಕೋಡಾ ಮೊಡೆಲ್‌ಗಳಲ್ಲಿ ಕಂಡುಬರುವಂತೆಯೇ ಇರುತ್ತದೆ. ಇದು ವಯರ್‌ಲೆಸ್‌ ಆಂಡ್ರಾಯ್ಡ್ ಆಟೋ ಮತ್ತು ಆಪಲ್‌ ಕಾರ್‌ಪ್ಲೇಗೆ ಸಪೋರ್ಟ್‌ ಮಾಡುತ್ತದೆ. ಮತ್ತೊಂದೆಡೆ, ಮಾರುತಿ ಬ್ರೆಝಾ ಸಣ್ಣ 9-ಇಂಚಿನ ಟಚ್‌ಸ್ಕ್ರೀನ್‌ನೊಂದಿಗೆ ಬರುತ್ತದೆ, ಹಾಗೆಯೇ ಇದು ವೈರ್‌ಲೆಸ್ ಸ್ಮಾರ್ಟ್‌ಫೋನ್ ಕನೆಕ್ಷನ್‌ ಅನ್ನು ಹೊಂದಿದೆ. 

ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ

Skoda Slavia digital driver's display

ಮಾರುತಿ ಬ್ರೆಝಾ ಒಳಗಿನ ಅನಲಾಗ್ ಇನ್ಸ್‌ಟ್ರುಮೆಂಟ್ ಕ್ಲಸ್ಟರ್‌ಗಿಂತ ಭಿನ್ನವಾಗಿ, ಸ್ಕೋಡಾ ಕೈಲಾಕ್ 8-ಇಂಚಿನ ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯೊಂದಿಗೆ ಬರುವ ಸಾಧ್ಯತೆಯಿದೆ. ಟಾಟಾ ನೆಕ್ಸಾನ್‌, ಮಹೀಂದ್ರಾ ಎಕ್ಸ್‌ಯುವಿ 3XO, ಮತ್ತು ಕಿಯಾ ಸೊನೆಟ್‌ನಂತಹ ಈ ಸೆಗ್ಮೆಂಟ್‌ನ ಪ್ರತಿಸ್ಪರ್ಧಿಗಳು ಇನ್ನೂ ದೊಡ್ಡ ಡ್ರೈವರ್ ಡಿಸ್‌ಪ್ಲೇಯನ್ನು ಪಡೆಯುತ್ತವೆ (ಅಳತೆ 10.25 ಇಂಚುಗಳು).

ಇದನ್ನೂ ಓದಿ: Maruti Swift ಬ್ಲಿಟ್ಜ್ ಲಿಮಿಟೆಡ್-ಎಡಿಷನ್‌ ಬಿಡುಗಡೆ, 39,500 ರೂ.ಮೌಲ್ಯದ ಆಕ್ಸಸ್ಸರಿಗಳ ಸೇರ್ಪಡೆ

ಚಾಲಿತ ಮತ್ತು ವೆಂಟಿಲೇಟೆಡ್‌ ಸೀಟ್‌ಗಳು

Skoda Kushaq sunroof

ಸ್ಕೋಡಾವು ಇತ್ತೀಚೆಗೆ ಮುಂಬರುವ ಕೈಲಾಕ್ ಎಸ್‌ಯುವಿ ಬಗ್ಗೆ ಕೆಲವು ಮಾಹಿತಿಯನ್ನು ಬಹಿರಂಗಪಡಿಸಿದೆ, ಇದು ವೆಂಟಿಲೇಶನ್ ಫಂಕ್ಷನ್‌ನೊಂದಿಗೆ 6-ವೇ ಚಾಲಿತ ಮುಂಭಾಗದ ಸೀಟ್‌ಗಳನ್ನು ಪಡೆಯುತ್ತದೆ ಎಂದು ಖಚಿತಪಡಿಸುತ್ತದೆ. ಹೋಲಿಸುವಾಗ, ಮಾರುತಿ ಬ್ರೆಝಾ ಮ್ಯಾನ್ಯುವಲ್ ಸೀಟ್ ಹೊಂದಾಣಿಕೆಯನ್ನು ಹೊಂದಿದೆ ಮತ್ತು  ಮುಂಭಾಗದ ಸೀಟ್‌ಗಳಲ್ಲಿ ವೆಂಟಿಲೇಶನ್‌ ಕಾರ್ಯವನ್ನು ಹೊಂದಿರುವುದಿಲ್ಲ.

ಎಲ್ಲಾ ವೇರಿಯೆಂಟ್‌ಗಳಲ್ಲಿ 6 ಏರ್‌ಬ್ಯಾಗ್‌ಗಳು

Skoda Kushaq six airbags

ಇತರ ಸ್ಕೋಡಾ ಕಾರುಗಳಂತೆ, ಕೈಲಾಕ್ ಎಲ್ಲಾ ವೇರಿಯೆಂಟ್‌ಗಳಲ್ಲಿ 6 ಏರ್‌ಬ್ಯಾಗ್‌ಗಳನ್ನು ಪಡೆಯುತ್ತದೆ. ಬ್ರೆಝಾಗೆ ಹೋಲಿಸಿದರೆ, ಅದರ ಟಾಪ್-ಸ್ಪೆಕ್ ZXi ಪ್ಲಸ್ ವೇರಿಯೆಂಟ್‌ ಮಾತ್ರ 6 ಏರ್‌ಬ್ಯಾಗ್‌ಗಳನ್ನು ಪಡೆಯುತ್ತದೆ, ಆದರೆ ಇತರ ಟ್ರಿಮ್‌ಗಳು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳೊಂದಿಗೆ ಮಾತ್ರ ಬರುತ್ತವೆ.

ಟರ್ಬೊ-ಪೆಟ್ರೋಲ್ ಎಂಜಿನ್

Skoda sub-4m SUV rear spied

ಸ್ಕೋಡಾವು ತನ್ನ ಕೈಲಾಕ್ ಅನ್ನು 1-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ನೀಡುತ್ತದೆ, ಇದು 115 ಪಿಎಸ್‌ ಮತ್ತು 178 ಎನ್‌ಎಮ್‌ ಅನ್ನು 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್‌ ಆಟೋಮಾಟಿಕ್‌ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸುತ್ತದೆ.

ಮಾರುತಿಯು ಬ್ರೆಝಾವನ್ನು 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾತ್ರ ನೀಡುತ್ತದೆ ಅದು 103 ಪಿಎಸ್‌ ಮತ್ತು 137 ಎನ್‌ಎಮ್‌ನಷ್ಟು ಔಟ್‌ಪುಟ್‌ಅನ್ನು ಉತ್ಪಾದಿಸುತ್ತದೆ. ಇದು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್‌ ಟ್ರಾನ್ಸ್‌ಮಿಷನ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ. ಬ್ರೆಝಾವು ಕಡಿಮೆ ಔಟ್‌ಪುಟ್‌ನ ಉತ್ಪಾದನೆಯೊಂದಿಗೆ (88ಪಿಎಸ್‌/121.5 ಎನ್‌ಎಮ್‌) ಒಪ್ಶನಲ್‌ ಸಿಎನ್‌ಜಿ ಪವರ್‌ಟ್ರೇನ್ ಆಯ್ಕೆಯನ್ನು ಪಡೆಯುತ್ತದೆ ಮತ್ತು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ಬರುತ್ತದೆ.

ನಿರೀಕ್ಷಿತ ಬೆಲೆ ಮತ್ತು ಪ್ರತಿಸ್ಪರ್ಧಿಗಳು

 ಸ್ಕೋಡಾ ಕೈಲಾಕ್‌ನ ಎಕ್ಸ್‌ಶೋರೂಮ್‌ ಬೆಲೆಯು 8.50 ಲಕ್ಷ ರೂ.ನಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ. ಇದು ಟಾಟಾ ನೆಕ್ಸಾನ್, ಮಾರುತಿ ಬ್ರೆಝಾ, ಹ್ಯುಂಡೈ ವೆನ್ಯೂ, ಕಿಯಾ ಸೋನೆಟ್, ಮಹೀಂದ್ರಾ ಎಕ್ಸ್‌ಯುವಿ 3XO, ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕಿಗರ್‌ಗಳಿಗೆ ಪ್ರತಿಸ್ಪರ್ಧಿಯಾಗಲಿದೆ. ಇದು ಮಾರುತಿ ಫ್ರಾಂಕ್ಸ್ ಮತ್ತು ಟೊಯೋಟಾ ಟೈಸರ್‌ನಂತಹ ಸಬ್‌-4ಎಮ್‌ ಕ್ರಾಸ್‌ಒವರ್‌ಗಳೊಂದಿಗೆ ಸ್ಪರ್ಧಿಸುತ್ತದೆ.

ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

ಇನ್ನಷ್ಟು ಓದಿ : ಬ್ರೆಝಾ ಆನ್ ರೋಡ್ ಬೆಲೆ

was this article helpful ?

Write your Comment on Skoda kylaq

2 ಕಾಮೆಂಟ್ಗಳು
1
V
vijender singh
Oct 23, 2024, 1:39:46 PM

What will be Standard average.

Read More...
    ಪ್ರತ್ಯುತ್ತರ
    Write a Reply
    1
    R
    rajesh masurkar
    Oct 23, 2024, 9:46:05 AM

    Still no info about the mileage in kylaq

    Read More...
      ಪ್ರತ್ಯುತ್ತರ
      Write a Reply

      explore similar ಕಾರುಗಳು

      Similar cars to compare & consider

      ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

      ಕಾರು ಸುದ್ದಿ

      • ಟ್ರೆಂಡಿಂಗ್ ಸುದ್ದಿ
      • ಇತ್ತಿಚ್ಚಿನ ಸುದ್ದಿ

      trending ಎಸ್‌ಯುವಿ ಕಾರುಗಳು

      • ಲೇಟೆಸ್ಟ್
      • ಉಪಕಮಿಂಗ್
      • ಪಾಪ್ಯುಲರ್
      • ಟಾಟಾ ಸಿಯೆರಾ
        ಟಾಟಾ ಸಿಯೆರಾ
        Rs.10.50 ಲಕ್ಷಅಂದಾಜು ದಾರ
        ಸೆಪಟೆಂಬರ್, 2025: ನಿರೀಕ್ಷಿತ ಲಾಂಚ್‌
      • ಕಿಯಾ syros
        ಕಿಯಾ syros
        Rs.9.70 - 16.50 ಲಕ್ಷಅಂದಾಜು ದಾರ
        ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
      • ಬಿವೈಡಿ sealion 7
        ಬಿವೈಡಿ sealion 7
        Rs.45 - 49 ಲಕ್ಷಅಂದಾಜು ದಾರ
        ಮಾರಚ್‌, 2025: ನಿರೀಕ್ಷಿತ ಲಾಂಚ್‌
      • ಎಂಜಿ majestor
        ಎಂಜಿ majestor
        Rs.46 ಲಕ್ಷಅಂದಾಜು ದಾರ
        ಫೆಬರವಾರಿ, 2025: ನಿರೀಕ್ಷಿತ ಲಾಂಚ್‌
      • ಟಾಟಾ ಹ್ಯಾರಿಯರ್ ಇವಿ
        ಟಾಟಾ ಹ್ಯಾರಿಯರ್ ಇವಿ
        Rs.30 ಲಕ್ಷಅಂದಾಜು ದಾರ
        ಮಾರಚ್‌, 2025: ನಿರೀಕ್ಷಿತ ಲಾಂಚ್‌
      ×
      We need your ನಗರ to customize your experience