5 ಚಿತ್ರಗಳಲ್ಲಿ 2023 ಟಾಟಾ ಹ್ಯಾರಿಯರ್ ಡಾರ್ಕ್ ಆವೃತ್ತಿಯ ಸಂಪೂರ್ಣ ವಿವರಗಳು

published on ಅಕ್ಟೋಬರ್ 25, 2023 03:07 pm by ansh for ಟಾಟಾ ಹ್ಯಾರಿಯರ್

  • 37 Views
  • ಕಾಮೆಂಟ್‌ ಅನ್ನು ಬರೆಯಿರಿ

ಟಾಟಾ ಹ್ಯಾರಿಯರ್‌ನ ಡಾರ್ಕ್ ಆವೃತ್ತಿಯು ದೊಡ್ಡದಾದ ಅಲಾಯ್ ವ್ಹೀಲ್‌ ಆಯ್ಕೆಯೊಂದಿಗೆ ಸಂಪೂರ್ಣ ಬ್ಲ್ಯಾಕ್ ಇಂಟೀರಿಯರ್ ಮತ್ತು ಎಕ್ಸ್‌ಟೀರಿಯರ್ ಹೊಂದಿರಲಿದೆ

2023 Tata Safari Dark Edition

2023 ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್ ಅನ್ನು ಇತ್ತೀಚೆಗಷ್ಟೆ ಬಿಡುಗಡೆ ಮಾಡಲಾಗಿದ್ದು, ಇದು ಡಿಸೈನ್, ಫೀಚರ್‌ಗಳು ಮತ್ತು ಸುರಕ್ಷತೆ ಸೇರಿದಂತೆ ಅನೇಕ ಹೊಸ ವಿಷಯಗಳೊಂದಿಗೆ ಬಂದಿದೆ, ಆದರೆ ಡಾರ್ಕ್ ಆವೃತ್ತಿಯ ಆಯ್ಕೆಯಲ್ಲಿ ಮಾತ್ರ ಯಾವುದೇ ಬದಲಾವಣೆ ಇರುವುದಿಲ್ಲ. ಈ ನವೀಕೃತ SUV ಸಂಪೂರ್ಣ ಬ್ಲ್ಯಾಕ್ ಆವೃತ್ತಿಯಲ್ಲೂ ಲಭ್ಯವಿದ್ದು, ಇದರ ವಿವರಗಳನ್ನು ನಮ್ಮ ಗ್ಯಾಲರಿಯಲ್ಲಿ ಪರಿಶೀಲಿಸಬಹುದಾಗಿದೆ.

  

ಮುಂಭಾಗ

2023 Tata Harrier Dark Edition Front

 ಈ ಡಾರ್ಕ್ ಹ್ಯಾರಿಯರ್ ಬ್ಲ್ಯಾಕ್ ಗ್ರಿಲ್, ಬ್ಲ್ಯಾಕ್ ಬಂಪರ್ ಮತ್ತು ಬ್ಲ್ಯಾಕ್ ಸ್ಕಿಡ್ ಪ್ಲೇಟ್‌ನೊಂದಿಗೆ ಸಂಪೂರ್ಣ ಬ್ಲ್ಯಾಕ್ ಎಕ್ಸ್‌ಟೀರಿಯರ್ ಶೇಡ್ ಅನ್ನು ಪಡೆದಿದೆ. ಆದರೆ ಕ್ರೋಮ್ ಟಾಟಾ ಲೋಗೋ ಒಂದಕ್ಕೆ ಮಾತ್ರ ಬ್ಲ್ಯಾಕ್ ಕೋಟ್ ಮಾಡಲಾಗಿಲ್ಲ.

 ಇದನ್ನೂ ನೋಡಿ: ಟಾಟಾ ಕರ್ವ್ ವಾಹನದ ಕೂಪೆ ವಿನ್ಯಾಸದ ಕುರಿತು ಮಾಹಿತಿ ಹೊರಗೆಡಹಿರುವ ಸ್ಪೈ ಶಾಟ್‌ಗಳು

 

ಪಾರ್ಶ್ವ

2023 Tata Harrier Dark Edition Side

 ಇದರ ಸೈಡ್ ಪ್ರೊಫೈಲ್‌ ಕೂಡಾ ಬ್ಲ್ಯಾಕ್‌ ಆಗಿರುತ್ತದೆ. ಇಲ್ಲಿ ರೂಫ್ ರೈಲ್‌ಗಳು, ORVMಗಳು ಮತ್ತು ಡೋರ್ ಹ್ಯಾಂಡಲ್‌ಗಳಿಗೆ ಬ್ಲ್ಯಾಕ್ ಪೈಂಟ್ ನೀಡಲಾಗಿದ್ದು, ಹ್ಯಾರಿಯರ್ ಅಕ್ಷರಗಳಿಗೆ ಕ್ರೋಮ್ ಫಿನಿಷಿಂಗ್ ನೀಡಲಾಗಿದೆ. ಅಲ್ಲದೇ ಮುಂಭಾಗದ ಡೋರ್ ಬಳಿ #ಡಾರ್ಕ್ ಬ್ಯಾಡ್ಜಿಂಗ್ ನೀಡಲಾಗಿದೆ.

2023 Tata Harrier Dark Edition Alloy Wheel

 ಈ ಡಾರ್ಕ್ ಆವೃತ್ತಿಯೊಂದಿಗೆ, ಸಂಪೂರ್ಣ ಬ್ಲ್ಯಾಕ್ ಅಲಾಯ್ ವ್ಹೀಲ್‌ಗಳು ಎರಡು ಗಾತ್ರಗಳಲ್ಲಿ ಲಭ್ಯವಿರುತ್ತದೆ. ಆರಂಭಿಕ-ಸ್ಪೆಕ್ ಡಾರ್ಕ್ ಎಡಿಷನ್ 18-ಇಂಚು ಅಲಾಯ್ ವ್ಹೀಲ್‌ಗಳನ್ನು ಪಡೆದಿದ್ದರೆ, ಟಾಪ್-ಸ್ಪೆಕ್ ವೇರಿಯೆಂಟ್‌ಗಳು 19-ಇಂಚುಗಳಲ್ಲಿ ಲಭ್ಯವಿರುತ್ತದೆ.

 

ಡ್ಯಾಶ್‌ಬೋರ್ಡ್

2023 Tata Harrier Dark Edition Dashboard

 ಎಕ್ಸ್‌ಟೀರಿಯರ್‌ನಂತೆ ಇಂಟೀರಿಯರ್ ಕೂಡಾ ಬ್ಲ್ಯಾಕ್ ಥೀಮ್ ಅನ್ನೇ ಹೊಂದಿದೆ. ಡ್ಯಾಶ್‌ಬೋರ್ಡ್ ಮೂರು ಬ್ಲ್ಯಾಕ್ ಸ್ತರಗಳನ್ನು ಪಡೆದಿದ್ದು, ಇವುಗಳಲ್ಲಿ ಒಂದು ಕಾರ್ಬನ್ ಫೈಬರ್‌ನಂತಹ ಫಿನಿಶಿಂಗ್ ಪಡೆದಿರುತ್ತದೆ, ಸಾಮಾನ್ಯ ವೇರಿಯೆಂಟ್‌ಗಳಲ್ಲಿ ಇದು ವಿವಿಧ ಬಣ್ಣಗಳಲ್ಲಿ ಲಭ್ಯವಿರುತ್ತದೆ.

2023 Tata Harrier Dark Edition Centre Console

 ಡೋರ್‌ಗಳು, ಗ್ರ್ಯಾಬ್ ಹ್ಯಾಂಡಲ್‌ಗಳು ಮತ್ತು ಸೆಂಟರ್ ಕನ್ಸೋಲ್ ಕೂಡಾ ಪಿಯಾನೋ ಬ್ಲ್ಯಾಕ್ ಫಿನಿಶಿಂಗ್ ಅನ್ನು ಪಡೆದಿವೆ.

 ಇದನ್ನೂ ಓದಿ:  2023 ಟಾಟಾ ಸಫಾರಿ ಡಾರ್ಕ್ ಆವೃತ್ತಿ ಹಳೆಯ ಸಫಾರಿ ರೆಡ್ ಡಾರ್ಕ್ ಎಡಿಷನ್‌ಗಿಂತ ಹೇಗೆ ವಿಭಿನ್ನ  

 

ಸೀಟುಗಳು

2023 Tata Harrier Dark Edition Rear Seats

 ಡಾರ್ಕ್ ಆವೃತ್ತಿಯ ಸೀಟುಗಳು ಬ್ಲ್ಯಾಕ್ ಮತ್ತು ಗ್ರೇ ಶೇಡ್ ಜೊತೆಗೆ ತ್ರಿಕೋನಾಕಾರದ ಡಿಸೈನ್ ಅಂಶಗಳೊಂದಿಗೆ ಬರುತ್ತವೆ. ಹಿಂಭಾಗದ ಸೀಟುಗಳಲ್ಲೂ ಇದೇ ಮಾದರಿಯನ್ನು ಕಾಣಬಹುದು.

 

ಬೆಲೆಗಳು

ಟಾಟಾ ಹ್ಯಾರಿಯರ್ ಬೆಲೆಯನ್ನು ರೂ 15.49 ಲಕ್ಷದಿಂದ ರೂ 27.35 ಲಕ್ಷದ ತನಕ ನಿಗದಿಪಡಿಸಲಾಗಿದ್ದು ಡಾರ್ಕ್ ಎಡಿಷನ್ ಬೆಲೆಯು ಮಿಡ್-ಸ್ಪೆಕ್ ಪ್ಯೂರ್+ S ವೇರಿಯೆಂಟ್‌ನ ರೂ 19.99 ಲಕ್ಷದಿಂದ (ಆರಂಭಿಕ, ಎಕ್ಸ್-ಶೋರೂಂ) ಪ್ರಾರಂಭವಾಗುತ್ತದೆ. ನವೀಕೃತ ಹ್ಯಾರಿಯರ್ ಮಹೀಂದ್ರಾ XUV700, ಎಂಜಿ ಹೆಕ್ಟರ್ ಮತ್ತು ಜೀಪ್ ಕಾಂಪಸ್‌ಗೆ ಪೈಪೋಟಿ ನೀಡುತ್ತದೆ.

ಇನ್ನಷ್ಟು ಓದಿ : ಟಾಟಾ ಹ್ಯಾರಿಯರ್ ಡೀಸೆಲ್

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಟಾಟಾ ಹ್ಯಾರಿಯರ್

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience