2024 ಕಿಯಾ ಸೋನೆಟ್ ಫೇಸ್‌ಲಿಫ್ಟ್ ಕಾರನ್ನು ನಿಮ್ಮ ಸಮೀಪದ ಡೀಲರ್‌ಶಿಪ್‌ಗಳಲ್ಲಿ ನೀವೇ ಖುದ್ದಾಗಿ ಹೋಗಿ ನೋಡಬಹುದು
ಕಿಯಾ ಸೊನೆಟ್ ಗಾಗಿ shreyash ಮೂಲಕ ಜನವರಿ 10, 2024 04:46 pm ರಂದು ಪ್ರಕಟಿಸಲಾಗಿದೆ
- 31 Views
- ಕಾಮೆಂಟ್ ಅನ್ನು ಬರೆಯಿರಿ
ಕಿಯಾ ಈಗಾಗಲೇ ಸೋನೆಟ್ ಫೇಸ್ಲಿಫ್ಟ್ಗಾಗಿ ಆರ್ಡರ್ಗಳನ್ನು ಸ್ವೀಕರಿಸುತ್ತಿದೆ ಮತ್ತು ಅದರ ಬೆಲೆಗಳನ್ನು ಜನವರಿ ತಿಂಗಳ ಮಧ್ಯದ ವೇಳೆಗೆ ಪ್ರಕಟಿಸುವ ನಿರೀಕ್ಷೆಯಿದೆ.
ಕಿಯಾ ಈಗಾಗಲೇ ತನ್ನ ಸೋನೆಟ್ ಫೇಸ್ಲಿಫ್ಟ್ ಕಾರಿನ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಿದೆ. ಅದರ ಬೆಲೆಗಳನ್ನು ಜನವರಿ ಮಧ್ಯದ ವೇಳೆಗೆ ಘೋಷಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ. ಗ್ರಾಹಕರು ಅಪ್ಡೇಟ್ ಆಗಿರುವ SUV ಅನ್ನು ಅಧಿಕೃತ ಬಿಡುಗಡೆಗೆ ಮುಂಚಿತವಾಗಿ 25,000 ರೂಪಾಯಿಗಳ ಟೋಕನ್ ಮೊತ್ತವನ್ನು ಪಾವತಿ ಮಾಡಿ ಪ್ರೀ-ಬುಕ್ ಮಾಡಬಹುದು. ಕಾರುಗಳು ಡೀಲರ್ಶಿಪ್ಗಳಿಗೆ ಈಗಾಗಲೇ ಆಗಮಿಸಿರುವುದರಿಂದ ನೀವು ಈಗ 2024 ಕಿಯಾ ಸೋನೆಟ್ ಅನ್ನು ಖುದ್ದಾಗಿ ಹೋಗಿ ನೋಡಬಹುದು.
ಇದು ಕಿಯಾ ಸೋನೆಟ್ ಫೇಸ್ಲಿಫ್ಟ್ನ ಟಾಪ್-ಸ್ಪೆಕ್ GTX+ ವೇರಿಯಂಟ್ ಎಂದು ಚಿತ್ರವು ಸ್ಪಷ್ಟವಾಗಿ ಸೂಚಿಸುತ್ತದೆ. ನೀವು ಮೂರು ವಿಧದ ಟ್ರಿಮ್ಗಳಿಂದ ಆಯ್ಕೆ ಮಾಡಿಕೊಳ್ಳಬಹುದು: ಟೆಕ್ ಲೈನ್, ಜಿಟಿ ಲೈನ್ (ಇಲ್ಲಿ ಚಿತ್ರಿಸಿದಲ್ಲಿ ತೋರಿಸಿದಂತೆ), ಮತ್ತು ಎಕ್ಸ್-ಲೈನ್. ಡಿಸೈನ್ ಬದಲಾವಣೆಗಳಲ್ಲಿ ಅಪ್ಡೇಟ್ ಆಗಿರುವ ಫಾಸಿಯಾ ಮತ್ತು ಉದ್ದವಾದ ಫಾಂಗ್-ಆಕಾರದ LED DRL ಗಳನ್ನು ಒಳಗೊಂಡಿವೆ. ಇದರ ಜೊತೆಗೆ, ಬಂಪರ್ ಡಿಸೈನ್ ಅನ್ನು ಪರಿಷ್ಕರಿಸಲಾಗಿದೆ ಮತ್ತು ಫಾಗ್ ಲ್ಯಾಂಪ್ ಗಳು ಈಗ ಮೊದಲಿಗಿಂತ ಹೆಚ್ಚು ಸ್ಲೀಕ್ ಆಗಿವೆ.
ಇದನ್ನು ಕೂಡ ಓದಿ: ಹೋಂಡಾ ಎಲಿವೇಟ್ ನ ಪರಿಚಯಾತ್ಮಕ ಬೆಲೆಗಳ ಕೊಡುಗೆ ಮುಕ್ತಾಯಗೊಂಡಿವೆ, ಮತ್ತು ಹೋಂಡಾ ಸಿಟಿ ಕಾರಿನ ಬೆಲೆಗಳನ್ನು ಕೂಡ ಏರಿಕೆ ಮಾಡಲಾಗಿದೆ
ಪ್ರೊಫೈಲ್ ಬಗ್ಗೆ ಹೇಳುವುದಾದರೆ, ರಿಫ್ರೆಶ್ ಮಾಡಿದ ಅಲಾಯ್ ವೀಲ್ ಡಿಸೈನ್ ಅನ್ನು ಹೊರತುಪಡಿಸಿ ಇದು ಕಿಯಾ ಸೋನೆಟ್ನ ಹಳೆಯ ವರ್ಷನ್ ನಂತೆ ಕಾಣುತ್ತದೆ. ಹಿಂಭಾಗದಲ್ಲಿ, ಕನೆಕ್ಟ್ ಆಗಿರುವ LED ಟೈಲ್ಲೈಟ್ಗಳು ಮತ್ತು ಪರಿಷ್ಕೃತಗೊಂಡಿರುವ ಹಿಂಭಾಗದ ಬಂಪರ್ ಅನ್ನು ಒಳಗೊಂಡಿದೆ.
ಕಿಯಾ ಸೋನೆಟ್ ಫೇಸ್ಲಿಫ್ಟ್ನ ಡ್ಯಾಶ್ಬೋರ್ಡ್ ಡಿಸೈನ್ ನಲ್ಲಿ ಯಾವುದೇ ಬದಲಾವಣೆಯಾಗಿಲ್ಲ, ಕೇವಲ ಹೊಸ ಕ್ಲೈಮೇಟ್ ಕಂಟ್ರೋಲ್ ಪ್ಯಾನೆಲ್ ಮತ್ತು ಅಪ್ಹೋಲಿಸ್ಟ್ರೀಯಲ್ಲಿ ಮಾತ್ರ ಅಪ್ಡೇಟ್ ಗಳಾಗಿವೆ. SUV ನಲ್ಲಿ ನೀಡಲಾಗಿರುವ ಹೊಸ ಫೀಚರ್ ಗಳಲ್ಲಿ 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು ವೆಂಟಿಲೆಟ್ ಆಗಿರುವ ಮುಂಭಾಗದ ಸೀಟುಗಳು ಸೇರಿವೆ. ಸೋನೆಟ್ ನಲ್ಲಿ ಈಗಾಗಲೇ ಸಿಂಗಲ್-ಪೇನ್ ಸನ್ರೂಫ್ ಲಭ್ಯವಿದೆ ಮತ್ತು ಹಳೆ ಮಾಡೆಲ್ ನಲ್ಲಿ ಇರುವಂತಹ ವೈರ್ಲೆಸ್ ಚಾರ್ಜಿಂಗ್ ಅನ್ನು ಪಡೆದುಕೊಂಡಿದೆ.
ಸುರಕ್ಷತೆಯ ವಿಷಯವನ್ನು ನೋಡಿದರೆ, 2024 ಸೋನೆಟ್ 6 ಏರ್ಬ್ಯಾಗ್ಗಳು, 360-ಡಿಗ್ರಿ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC), ಮತ್ತು ಲೇನ್-ಕೀಪ್ ಅಸಿಸ್ಟ್, ಫಾರ್ವರ್ಡ್ ಕೊಲಿಷನ್ ವಾರ್ನಿಂಗ್ ಮತ್ತು ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಸೇರಿದಂತೆ ಲೆವೆಲ್ 1 ಸುಧಾರಿತ ಡ್ರೈವರ್ ಎಸ್ಸಿಟನ್ಸ್ ಸಿಸ್ಟಮ್ ಅನ್ನು (ADAS) ಹೊಂದಿದೆ.
ಇದನ್ನು ಕೂಡ ಓದಬಹುದು: ಸ್ಕೋಡಾ ಎನ್ಯಾಕ್ EV ಯ ವಿವರಗಳನ್ನು 2024 ರಲ್ಲಿ ಸಂಭವನೀಯ ಬಿಡುಗಡೆಗೆ ಮುಂಚೆ ಸ್ಪೈ ಮಾಡಲಾಗಿದೆ
-
ನಿಮ್ಮ ಬಾಕಿ ಇರುವ ಚಲನ್ ಅನ್ನು ಪರಿಶೀಲಿಸಿ
-
ಉಪಯೋಗಿಸಿದ ಕಾರಿನ ಮೌಲ್ಯಮಾಪನ
ಡೀಲರ್ಶಿಪ್ಗೆ ಆಗಮಿಸಿದ ಸೋನೆಟ್ ಡೀಸೆಲ್-ಆಟೋಮ್ಯಾಟಿಕ್ ವೇರಿಯಂಟ್ ನ ಚಿತ್ರವಿದುs. ಇದು 1.5-ಲೀಟರ್ ಡೀಸೆಲ್ ಎಂಜಿನ್ ಆಗಿದ್ದು ಅದು 116 PS ಮತ್ತು 250 Nm ಅನ್ನು ಹೊಂದಿದೆ ಮತ್ತು ಮೂರು ಟ್ರಾನ್ಸ್ಮಿಷನ್ ಆಯ್ಕೆಗಳೊಂದಿಗೆ ನೀಡಲಾಗುತ್ತಿದೆ: 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್, 6-ಸ್ಪೀಡ್ iMT (ಕ್ಲಚ್ಲೆಸ್ ಮ್ಯಾನ್ಯುವಲ್) ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್. ಇತರ ಎಂಜಿನ್ ಆಯ್ಕೆಗಳಲ್ಲಿ 1.2-ಲೀಟರ್ ನಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ (83 PS / 115 Nm) 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ನೊಂದಿಗೆ ಜೋಡಿಸಲಾಗಿದೆ ಮತ್ತು ಮತ್ತು 1-ಲೀಟರ್ ಟರ್ಬೊ-ಪೆಟ್ರೋಲ್ ಯುನಿಟ್ (120 PS / 172 Nm) ಜೊತೆಗೆ 6-ಸ್ಪೀಡ್ iMT (ಕ್ಲಚ್ಲೆಸ್ ಮ್ಯಾನ್ಯುವಲ್) ಅಥವಾ 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್ಮಿಷನ್ (DCT).
ನಿರೀಕ್ಷಿಸಬಹುದಾದ ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಕಿಯಾ ಸೋನೆಟ್ ಫೇಸ್ಲಿಫ್ಟ್ ಬೆಲೆಯೂ ರೂ 8 ಲಕ್ಷದಿಂದ (ಎಕ್ಸ್ ಶೋರೂಂ) ಶುರುವಾಗುವ ನಿರೀಕ್ಷೆಯಿದೆ. ಇದು ಟಾಟಾ ನೆಕ್ಸಾನ್, ಮಾರುತಿ ಬ್ರೆಝಾ, ಹ್ಯುಂಡೈ ವೆನ್ಯೂ ಮತ್ತು ಮಹೀಂದ್ರಾ XUV300 ನಂತಹ ಕಾರುಗಳೊಂದಿಗೆ ಸ್ಪರ್ಧಿಸಲಿದೆ.
ಇನ್ನಷ್ಟು ಓದಿ: ಕಿಯಾ ಸೋನೆಟ್ ಆಟೋಮ್ಯಾಟಿಕ್