ಹೊಸ Mahindra Thar Earth Edition ಅನ್ನು ಈ 5 ಚಿತ್ರಗಳಲ್ಲಿ ವಿವರಿಸಲಾಗಿದೆ
ಅರ್ಥ್ ಎಡಿಷನ್ ಗೆ ಡೆಸರ್ಟ್ ನಿಂದ ಸ್ಫೂರ್ತಿ ಪಡೆದ ಲುಕ್ ಅನ್ನು ನೀಡಲಾಗಿದೆ ಮತ್ತು ಕ್ಯಾಬಿನ್ ಒಳಗೆ ಬೀಜ್ ಟಚ್ ನೊಂದಿಗೆ ಹೊರಭಾಗದಲ್ಲಿ ತಾಜಾ ಬೀಜ್ ಪೈಂಟ್ ಅನ್ನು ಪಡೆಯುತ್ತದೆ.
ಮಹೀಂದ್ರಾ ಥಾರ್ ಇತ್ತೀಚೆಗೆ 'ಅರ್ಥ್ ಎಡಿಷನ್' ಎಂಬ ವಿಶೇಷ ಎಡಿಷನ್ ಅನ್ನು ಪಡೆದುಕೊಂಡಿದೆ, ಇದು ಟಾಪ್-ಸ್ಪೆಕ್ LX ಟ್ರಿಮ್ ಅನ್ನು ಆಧರಿಸಿದೆ, ಮತ್ತು ರೆಗ್ಯುಲರ್ ವೇರಿಯಂಟ್ ಗಳಿಗೆ ಹೋಲಿಸಿದರೆ ರೂ. 40,000 ಗಳ ಪ್ರೀಮಿಯಂ ಬೆಲೆಯನ್ನು ಪಡೆದಿದೆ. ಥಾರ್ ಅರ್ಥ್ ಎಡಿಷನ್ ಈಗ ಡೀಲರ್‌ಶಿಪ್‌ಗಳಲ್ಲಿ ಲಭ್ಯವಿದೆ, ಮತ್ತು ಅದು ಹೇಗೆ ಕಾಣುತ್ತದೆ ಮತ್ತು ಇದರಲ್ಲಿ ಏನೇನಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ:
ಮುಂಭಾಗ
SUVಯ ಮುಂಭಾಗದಲ್ಲಿ ಮಾಡಲಾಗಿರುವ ಏಕೈಕ ಬದಲಾವಣೆಯೆಂದರೆ ಗ್ರಿಲ್‌ನಲ್ಲಿರುವ ಕ್ರೋಮ್ ಸ್ಲ್ಯಾಟ್‌ಗಳಿಗೆ ಹೊಸ ಬೀಜ್ ಫಿನಿಶ್. ಅದರ ಹೊರತಾಗಿ, ಇದು ಹಳೆಯ ಮಾಡೆಲ್ ನಲ್ಲಿ ಇರುವ ರೌಂಡ್ ಹ್ಯಾಲೊಜೆನ್ ಹೆಡ್‌ಲೈಟ್‌ಗಳನ್ನು ಮತ್ತು ದಪ್ಪ ಬಂಪರ್ ಅನ್ನು ಹೊಂದಿದೆ.
ಸೈಡ್
ಸೈಡ್ ನಲ್ಲಿ B-ಪಿಲ್ಲರ್‌ನಲ್ಲಿನ 'ಅರ್ಥ್ ಎಡಿಷನ್' ಬ್ಯಾಡ್ಜ್‌ಗಳು, ಅಲೊಯ್ ವೀಲ್ಸ್ ನಲ್ಲಿರುವ ಬೀಜ್ ಇನ್‌ಸರ್ಟ್‌ಗಳು ಮತ್ತು ಡೋರ್ ಗಳ ಮೇಲೆ ಡ್ಯೂನ್ ನಿಂದ ಸ್ಪೂರ್ತಿ ಪಡೆದ ಡಿಕಾಲ್‌ಗಳ ರೂಪದಲ್ಲಿ ವಿಶೇಷ ಎಡಿಷನ್ ಗೆ ಹೆಚ್ಚು ಪ್ರಮುಖವಾದ ಟಚ್ ಗಳನ್ನು ನೀವು ನೋಡಬಹುದು.
ಹಿಂಭಾಗ
ಮಹೀಂದ್ರ ಥಾರ್‌ನ ಹಿಂಬದಿಯ ಪ್ರೊಫೈಲ್‌ಗೆ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ, ಮತ್ತು ಇದು ಅದೇ ಹಳೆ ರೀತಿಯ ಟೈಲ್‌ಗೇಟ್-ಮೌಂಟೆಡ್ ಸ್ಪೇರ್ ವೀಲ್ ಮತ್ತು 'ಥಾರ್' ಮಾನಿಕರ್‌ನೊಂದಿಗೆ ಆಯತಾಕಾರದ ಟೈಲ್‌ಲೈಟ್‌ಗಳನ್ನು ಹೊಂದಿದೆ.
ಇದಕ್ಕೆ ಸಂಬಂಧಿಸಿದ ಲೇಖನ: ಮಹೀಂದ್ರ ತನ್ನ ಅರ್ಧದಷ್ಟು ಸೇಲ್ಸ್ ಅನ್ನು ಥಾರ್ ರಿಯರ್-ವೀಲ್-ಡ್ರೈವ್ ವೇರಿಯಂಟ್ ಗಳಿಂದ ಪಡೆಯುತ್ತದೆ
ಕ್ಯಾಬಿನ್
ಒಳಭಾಗದಲ್ಲಿ ಆಗಿರುವ ಅತ್ಯಂತ ಸ್ಪಷ್ಟವಾದ ಬದಲಾವಣೆಯೆಂದರೆ ಕಾಂಟ್ರಾಸ್ಟ್ ಬೀಜ್ ಸ್ಟಿಚಿಂಗ್ ನೊಂದಿಗೆ ಡ್ಯುಯಲ್-ಟೋನ್ ಲೆಥೆರೆಟ್ ಸೀಟ್ ಅಪ್ಹೋಲ್ಸ್ಟರಿ. ಇದು ಹೆಡ್‌ರೆಸ್ಟ್‌ಗಳ ಮೇಲೆ ಡ್ಯೂನ್ ನಂತಹ ಆಕಾರವನ್ನು ಕೂಡ ಪಡೆದಿದೆ. ಡೋರ್ ಪ್ಯಾನೆಲ್‌ಗಳ ಮೇಲೆ ಇರುವ 'ಥಾರ್' ಮಾನಿಕರ್‌ಗೆ ಬೀಜ್ ಫಿನಿಶ್ ನೀಡಿರುವುದನ್ನು ಕೂಡ ನೀವು ಗಮನಿಸಬಹುದು. ಥಾರ್ ಅರ್ಥ್ ಎಡಿಷನ್ AC ವೆಂಟ್ ಸರೌಂಡ್‌ಗಳನ್ನು, ಸೆಂಟರ್ ಕನ್ಸೋಲ್ ಮತ್ತು ಸ್ಟೀರಿಂಗ್ ವೀಲ್‌ನಲ್ಲಿ ಬೀಜ್ ಹೈಲೈಟ್‌ಗಳೊಂದಿಗೆ ಪಡೆಯುತ್ತದೆ.
ಮಹೀಂದ್ರಾ ತನ್ನ ಥಾರ್ ಅರ್ಥ್ ಎಡಿಷನ್ ಅನ್ನು 7-ಇಂಚಿನ ಟಚ್‌ಸ್ಕ್ರೀನ್, ಕ್ರೂಸ್ ಕಂಟ್ರೋಲ್, ಕೀಲೆಸ್ ಎಂಟ್ರಿ ಮತ್ತು ಎತ್ತರ-ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್‌ನೊಂದಿಗೆ ನೀಡಿದೆ. ಇದರ ಸುರಕ್ಷತಾ ಕಿಟ್‌ನಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ ಗಳನ್ನು ಪಡೆದಿದೆ.
ಎರಡು ಎಂಜಿನ್ ಆಯ್ಕೆಗಳು
ಥಾರ್ ಸ್ಪೆಷಲ್ ಎಡಿಷನ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಎರಡೂ ಆಯ್ಕೆಗಳೊಂದಿಗೆ ಲಭ್ಯವಿದೆ:
-
2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ (152 PS/300 Nm) ಜೊತೆಗೆ 6-ಸ್ಪೀಡ್ MT ಮತ್ತು 6-ಸ್ಪೀಡ್ AT
-
2.2-ಲೀಟರ್ ಡೀಸೆಲ್ ಎಂಜಿನ್ (132 PS/300 Nm) ಜೊತೆಗೆ 6-ಸ್ಪೀಡ್ MT ಮತ್ತು 6-ಸ್ಪೀಡ್ AT
ಮಹೀಂದ್ರಾ ತನ್ನ ಥಾರ್ ಅರ್ಥ್ ಎಡಿಷನ್ ಅನ್ನು 4-ವೀಲ್-ಡ್ರೈವ್ (4WD) ವರ್ಷನ್ ನೊಂದಿಗೆ ಮಾತ್ರ ನೀಡುತ್ತಿದೆ. SUV ಯ ರೆಗ್ಯುಲರ್ ವೇರಿಯಂಟ್ ಗಳು ಕೂಡ ರಿಯರ್-ವೀಲ್-ಡ್ರೈವ್ (RWD) ವರ್ಷನ್ ಅನ್ನು ಪಡೆಯುತ್ತವೆ, ಇವುಗಳನ್ನು ಚಿಕ್ಕದಾದ 1.5-ಲೀಟರ್ ಡೀಸೆಲ್ ಎಂಜಿನ್ ಮತ್ತು 2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಒದಗಿಸಲಾಗಿದೆ.
ಬೆಲೆ ಮತ್ತು ಸ್ಪರ್ಧಿಗಳು
ಮಹೀಂದ್ರ ಥಾರ್ ಬೆಲೆಯು 11.25 ಲಕ್ಷದಿಂದ ಶುರುವಾಗಿ 17.60 ಲಕ್ಷದವರೆಗೆ (ಎಕ್ಸ್ ಶೋರೂಂ ಪ್ಯಾನ್-ಇಂಡಿಯಾ) ಇದೆ. ಇದು ಫೋರ್ಸ್ ಗೂರ್ಖಾ ಮತ್ತು ಮಾರುತಿ ಜಿಮ್ನಿಗೆ ಪ್ರತಿಸ್ಪರ್ಧಿಯಾಗಿದೆ.
ಇದನ್ನು ಕೂಡ ಓದಿ: ಮಹೀಂದ್ರಾ XUV300 ಬುಕಿಂಗ್ ಸ್ಥಗಿತಗೊಂಡಿದೆ ಮತ್ತು ಫೇಸ್‌ಲಿಫ್ಟ್ ಆಗಿರುವ ವರ್ಷನ್ ನೊಂದಿಗೆ ಮತ್ತೆ ಶುರುವಾಗಲಿದೆ
ಇನ್ನಷ್ಟು ಓದಿ: ಥಾರ್ ಆಟೋಮ್ಯಾಟಿಕ್