ಹ್ಯುಂಡೈ ಎಕ್ಸ್‌ಟರ್‌ನ ಯಾವ ವೇರ ಿಯಂಟ್ನಲ್ಲಿ, ಯಾವ ಎಂಜಿನ್-ಗೇರ್ ಬಾಕ್ಸ್ ಆಯ್ಕೆಯು ಲಭ್ಯವಿದೆ?
ಹುಂಡೈ ಎಕ್ಸ್‌ಟರ್ ಗಾಗಿ rohit ಮೂಲಕ ಮೇ 12, 2023 02:00 pm ರಂದು ಪ್ರಕಟಿಸಲಾಗಿದೆ
- 23 Views
- ಕಾಮೆಂಟ್ ಅನ್ನು ಬರೆಯಿರಿ
ಹ್ಯುಂಡೈನ ಎಕ್ಸ್‌ಟರ್ ಮಾಡೆಲ್ ನ ಎಂಟ್ರಿ-ಲೆವೆಲ್ ನಲ್ಲಿ ಪೆಟ್ರೋಲ್ ಇಂಜಿನ್ ಮಾತ್ರ ಆಫರ್ ಮಾಡುವ ಎಸ್‌ಯುವಿ ಆಗಿದೆ ಮತ್ತು ಬುಕಿಂಗ್‌ಗಳು ಈಗಾಗಲೇ ಪ್ರಾರಂಭವಾಗಿವೆ
- ಹ್ಯುಂಡೈ ಎಕ್ಸ್‌ಟರ್ ಎಸ್‌ಯುವಿಯ ಬುಕಿಂಗ್‌ಗಳನ್ನು ರೂ. 11,000 ಗೆ ಸ್ವೀಕರಿಸುತ್ತಿದೆ.
- ಎಕ್ಸ್‌ಟರ್ ಅನ್ನು EX, S, SX, SX (O) ಮತ್ತು SX (O) ಕನೆಕ್ಟ್ ಎಂಬ ಐದು ವಿಶಾಲವಾದ ವೇರಿಯಂಟ್‌ಗಳಲ್ಲಿ ಮಾರಾಟ ಮಾಡಲಾಗುತ್ತದೆ.
- MT ಮತ್ತು AMT ಎರಡೂ ಆಯ್ಕೆಗಳೊಂದಿಗೆ 1.2-ಲೀಟರ್ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳುತ್ತದೆ.
- ಇದು ಐಚ್ಛಿಕ ಸಿಎನ್‌ಜಿ ಕಿಟ್‌ನೊಂದಿಗೆ ಕೂಡ ಲಭ್ಯವಿದೆ.
- ಎಎಂಟಿ ಅನ್ನು ಮಿಡ್-ಸ್ಪೆಕ್ ಮತ್ತು ಹೈಯರ್ ವೇರಿಯಂಟ್‌ಗಳಲ್ಲಿ ಮಾತ್ರ ನೀಡಲಾಗುತ್ತದೆ.
- ಇದು ಮಿಡ್-ಸ್ಪೆಕ್ S ಮತ್ತು SX ವೇರಿಯಂಟ್‌ಗಳಲ್ಲಿ ಮಾತ್ರ ಐಚ್ಛಿಕ ಸಿಎನ್‌ಜಿ ಕಿಟ್ ಅನ್ನು ಪಡೆಯುತ್ತದೆ.
- ಸನ್‌ರೂಫ್, ಆಟೋ ಎಸಿ ಮತ್ತು ವೈರ್‌ಲೆಸ್ ಫೋನ್ ಚಾರ್ಜಿಂಗ್‌ನಂತಹ ವೈಶಿಷ್ಟ್ಯಗಳನ್ನು ಪಡೆಯಬಹುದೆಂದು ನಿರೀಕ್ಷಿಸಲಾಗಿದೆ.
- ಬೆಲೆಗಳು ರೂ. 6 ಲಕ್ಷದಿಂದ ಪ್ರಾರಂಭವಾಗುವ ನಿರೀಕ್ಷೆಯಿದೆ (ಎಕ್ಸ್ ಶೋರೂಂ).
ಇತ್ತೀಚೆಗೆ ಬಿಡುಗಡೆಯಾದ ಅಧಿಕೃತ ಫೋಟೋಗಳ ಮೂಲಕ ನಾವು ಹ್ಯುಂಡೈ ಎಕ್ಸ್‌ಟರ್‌ನ ಮೊದಲ ನೋಟವನ್ನು ಪಡೆದುಕೊಂಡಿದ್ದೇವೆ. ಕಂಪನಿಯು ಈ ವಾಹನದ ಬುಕಿಂಗ್ ಅನ್ನು ಸಹ ಪ್ರಾರಂಭಿಸಿದೆ, ಆಸಕ್ತ ಗ್ರಾಹಕರು 11,000 ರೂಪಾಯಿಗಳ ಟೋಕನ್ ಮೊತ್ತವನ್ನು ಪಾವತಿಸಿ ಬುಕ್ ಮಾಡಬಹುದು. ಈ ಮೈಕ್ರೋ ಎಸ್‌ಯುವಿಯ ವೇರಿಯಂಟ್‌ಗಳು, ಎಂಜಿನ್-ಗೇರ್‌ಬಾಕ್ಸ್ ಕಾಂಬೊಗಳು ಮತ್ತು ಬಣ್ಣ ಆಯ್ಕೆಗಳ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಲಾಗಿದೆ. ಈಗ ಕಂಪನಿಯು ವೇರಿಯಂಟ್ ವಾರು ಎಂಜಿನ್-ಗೇರ್‌ಬಾಕ್ಸ್ ಆಯ್ಕೆಯ ವಿವರಗಳನ್ನು ಹಂಚಿಕೊಂಡಿದೆ, ಅದು ಈ ಕೆಳಕಂಡಂತಿದೆ:
ವೇರಿಯಂಟ್‌ವಾರು ಎಂಜಿನ್-ಗೇರ್‌ಬಾಕ್ಸ್ ಆಯ್ಕೆಗಳು:
ಪವರ್‌ಟ್ರೇನ್ |
EX |
EX (O) |
S |
S (O) |
SX |
SX (O) |
SX (O) ಕನೆಕ್ಟ್ |
1.2-ಲೀಟರ್ MT |
ಇದೆ |
ಇದೆ |
ಇದೆ |
ಇದೆ |
ಇದೆ |
ಇದೆ |
ಇದೆ |
1.2- ಲೀಟರ್ AMT |
ಇಲ್ಲ |
ಇಲ್ಲ |
ಇದೆ |
ಇಲ್ಲ |
ಇದೆ |
ಇದೆ |
ಇದೆ |
1.2-ಲೀಟರ್ ಸಿಎನ್‌ಜಿ MT |
ಇಲ್ಲ |
ಇಲ್ಲ |
ಇದೆ |
ಇಲ್ಲ |
ಇದೆ |
ಇಲ್ಲ |
ಇಲ್ಲ |
ಎಕ್ಸ್‌ಟರ್ ಎಸ್‌ಯುವಿಯಲ್ಲಿ ಪೆಟ್ರೋಲ್-ಮ್ಯಾನ್ಯುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ಎಲ್ಲಾ ವೇರಿಯಂಟ್‌ಗಳಿಗೆ ನೀಡಲಾಗುತ್ತದೆ. ಆದರೆ, ಹ್ಯುಂಡೈ AMT ಆಯ್ಕೆಯನ್ನು ಮಿಡ್-ಸ್ಪೆಕ್ S ಮತ್ತು ಹೈಯರ್-ಸ್ಪೆಕ್ SX, SX (O) ಮತ್ತು SX (O) ಕನೆಕ್ಟ್ ಟ್ರಿಮ್‌ಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಹಾಗೆಯೇ, ಸಿಎನ್‌ಜಿ ಕಿಟ್ ಮಿಡ್-ಸ್ಪೆಕ್ S ಮತ್ತು SX ವೇರಿಯಂಟ್‌ಗಳಿಗೆ ಮಾತ್ರ ಲಭ್ಯವಿರುತ್ತದೆ, ಇದು ಮ್ಯಾನುಯಲ್ ಟ್ರಾನ್ಸ್ಮಿಷನ್‌ಗೆ ಸೀಮಿತವಾಗಿರುತ್ತದೆ.
ಇದನ್ನೂ ನೋಡಿ: ಚಾರ್ಜ್ ಮಾಡುತ್ತಿರುವಾಗ ಕಂಡುಬಂದ ಹ್ಯುಂಡೈ ಕ್ರೆಟಾದ ಎಲೆಕ್ಟ್ರಿಕ್ ಆವೃತ್ತಿ.
ಪವರ್‌ಟ್ರೇನ್ ವಿವರ
ಎಕ್ಸ್‌ಟರ್ ಗ್ರ್ಯಾಂಡ್ i10 ನಿಯೋಸ್‌ನಂತೆಯೇ 1.2-ಲೀಟರ್ ಪೆಟ್ರೋಲ್ ಯೂನಿಟ್ (83PS/114Nm) ಜೊತೆಗೆ 5-ಸ್ಪೀಡ್ ಎಂಟಿ ಮತ್ತು ಎಎಂಟಿ ಆಯ್ಕೆಗಳೊಂದಿಗೆ ಲಭ್ಯವಿರುತ್ತದೆ ಎಂದು ಹ್ಯುಂಡೈ ಈಗಾಗಲೇ ಬಹಿರಂಗಪಡಿಸಿದೆ. ಮೈಕ್ರೋ ಎಸ್‌ಯುವಿ ಕಾರಿನ ಸಿಎನ್‌ಜಿ ಆವೃತ್ತಿಯಲ್ಲಿ ಅದೇ ಎಂಜಿನ್ ಅನ್ನು ನೀಡಲಾಗುವುದು, ಇದರ ಸಾಮರ್ಥ್ಯ 69PS/95Nm ಆಗಿದೆ, ಮಧ್ಯಮ ಗಾತ್ರದ ಹ್ಯಾಚ್‌ಬ್ಯಾಕ್‌ನಲ್ಲಿ ಕಂಡುಬರುವಂತೆ ಅದರ ಸಿಎನ್‌ಜಿ ಆವೃತ್ತಿಯು 5-ಸ್ಪೀಡ್ MT ಗೇರ್‌ಬಾಕ್ಸ್ ಅನ್ನು ಮಾತ್ರ ಪಡೆಯುತ್ತದೆ.
ವಿನ್ಯಾಸ ಮತ್ತು ಫೀಚರ್‌ಗಳ ಪಟ್ಟಿ
ಹ್ಯುಂಡೈನ ಹೊಸ ಎಂಟ್ರಿ ಲೆವೆಲ್ ಎಸ್‌ಯುವಿ ಕಾರು ಎಕ್ಸ್‌ಟರ್ ಬೋಲ್ಡ್ ನೋಟವನ್ನು ಹೊಂದಿದ್ದು ಬಾಕ್ಸ್ ವಿನ್ಯಾಸದಲ್ಲಿ ಬರಲಿದೆ. ಇದು ಅಗಲವಾದ ವೀಲ್ ಆರ್ಚ್‌ಗಳು, ಬಾಡಿ ಕ್ಲಾಡಿಂಗ್ ಮತ್ತು ರೂಫ್ ರೈಲ್‌ಗಳನ್ನು ಪಡೆಯಲಿದೆ. ಇತರ ಆಸಕ್ತಿದಾಯಕ ಬಾಹ್ಯ ವೈಶಿಷ್ಟ್ಯಗಳಲ್ಲಿ H- ಆಕಾರದ ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಟೈಲ್‌ಲೈಟ್‌ಗಳಲ್ಲಿ ಹಲವಾರು ಗಮನ ಸೆಳೆಯುವ ಅಂಶಗಳು, ದೊಡ್ಡ ಸ್ಕಿಡ್ ಪ್ಲೇಟ್‌ಗಳು ಮತ್ತು ಪ್ರೊಜೆಕ್ಟರ್ ಹೆಡ್‌ಲೈಟ್‌ಗಳಲ್ಲಿ ಕ್ರೋಮ್ ಸರೌಂಡ್ ಸೇರಿವೆ.
ಹ್ಯುಂಡೈ ಎಕ್ಸ್‌ಟರ್‌ನ ವೈಶಿಷ್ಟ್ಯಗಳ ಪಟ್ಟಿಯನ್ನು ಇನ್ನೂ ಬಹಿರಂಗಪಡಿಸದಿದ್ದರೂ, ಇದು ಸಿಂಗಲ್-ಪೇನ್ ಸನ್‌ರೂಫ್, ಆಟೋ ಕ್ಲೈಮೇಟ್ ಕಂಟ್ರೋಲ್, ಗ್ರ್ಯಾಂಡ್ i10 ನಿಯೋಸ್‌ಗಿಂತ ದೊಡ್ಡ ಟಚ್‌ಸ್ಕ್ರೀನ್ ಯುನಿಟ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಕ್ರೂಸ್ ಕಂಟ್ರೋಲ್ ಅನ್ನು ಹೊಂದಿರುವ ನಿರೀಕ್ಷೆಯಿದೆ. ಸುರಕ್ಷತೆಯ ದೃಷ್ಟಿಯಿಂದ, ಇದು ಪ್ರಮಾಣಿತವಾಗಿ ನಾಲ್ಕು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಮತ್ತು ರಿವರ್ಸಿಂಗ್ ಕ್ಯಾಮೆರಾವನ್ನು ಪಡೆಯುವ ಸಾಧ್ಯತೆಯಿದೆ.
ಇದನ್ನೂ ಓದಿ: ಏಪ್ರಿಲ್ 2023 ರಲ್ಲಿ ಅತ್ಯಂತ ಹೆಚ್ಚು ಮಾರಾಟವಾದ 15 ಕಾರುಗಳ ಪಟ್ಟಿ ಇಲ್ಲಿದೆ
ಯಾವಾಗ ಪ್ರಾರಂಭಿಸಲಾಗುತ್ತದೆ?
ಎಕ್ಸ್‌ಟರ್ ಜೂನ್‌ನಲ್ಲಿ ಮಾರಾಟಕ್ಕೆ ಲಭ್ಯವಾಗುವ ನಿರೀಕ್ಷೆಯಿದೆ, ಬೆಲೆಗಳು 6 ಲಕ್ಷ ರೂ.ದಿಂದ ಪ್ರಾರಂಭವಾಗುವ ಸಾಧ್ಯತೆಯಿದೆ (ಎಕ್ಸ್ ಶೋರೂಂ). ಇದು ಟಾಟಾ ಪಂಚ್, ಸಿಟ್ರಾನ್ C3 ಮತ್ತು ಮಾರುತಿ ಫ್ರಾಂಕ್ಸ್, ರೆನಾಲ್ಟ್ ಕೈಗರ್ ಮತ್ತು ನಿಸ್ಸಾನ್ ಮ್ಯಾಗ್ನೈಟ್‌ಗಳೊಂದಿಗೆ ಸ್ಪರ್ಧಿಸಲಿದೆ.
0 out of 0 found this helpful