Choose your suitable option for better User experience.
  • English
  • Login / Register

11.82 ಲಕ್ಷ ರೂ.ಗೆ Citroen C3 Aircross ಧೋನಿ ಎಡಿಷನ್‌ ಬಿಡುಗಡೆ, ಬುಕಿಂಗ್‌ಗಳು ಈಗಾಗಲೇ ಪ್ರಾರಂಭ

published on ಜೂನ್ 18, 2024 08:04 pm by ansh for ಸಿಟ್ರೊನ್ ಸಿ3 ಏರ್‌ಕ್ರಾಸ್‌

  • 71 Views
  • ಕಾಮೆಂಟ್‌ ಅನ್ನು ಬರೆಯಿರಿ

ಈ ಸ್ಪೇಷಲ್‌ ಎಡಿಷನ್‌ನ 100 ಕಾರುಗಳು ಮಾತ್ರ ಲಭ್ಯವಿರುತ್ತವೆ ಮತ್ತು ಈ ಕಾರುಗಳಲ್ಲಿ ಒಂದಕ್ಕೆ ಎಂಎಸ್ ಧೋನಿ ಸಹಿ ಮಾಡಿದ ಜೋಡಿ ವಿಕೆಟ್ ಕೀಪಿಂಗ್ ಗ್ಲೌಸ್‌ಗಳನ್ನು ಸಹ ನೀಡಲಾಗುತ್ತದೆ

Citroen C3 Aircross Dhoni Edition Launched

ಸಿಟ್ರೊಯೆನ್ ಸಿ3 ಏರ್‌ಕ್ರಾಸ್ ಧೋನಿ ಸ್ಪೇಷಲ್‌ ಎಡಿಷನ್‌ ಅಂತಿಮವಾಗಿ 11.82 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುವ ಬೆಲೆಗಳೊಂದಿಗೆ ಬಿಡುಗಡೆಯಾಗಿದೆ . ಇದು ಸೀಮಿತ-ರನ್ ಎಡಿಷನ್‌ ಆಗಿದೆ ಮತ್ತು ದೇಶಾದ್ಯಂತ ಕೇವಲ 100 ಯೂನಿಟ್‌ಗಳು ಮಾತ್ರ ಲಭ್ಯವಿದೆ, ಇವುಗಳನ್ನು ಎಮ್‌ಎಸ್‌ ಧೋನಿ-ಪ್ರೇರಿತ ಸ್ಟಿಕ್ಕರ್‌ಗಳು ಮತ್ತು ಎಕ್ಸಸ್ಸರಿಗಳೊಂದಿಗೆ ಕಸ್ಟಮೈಸ್ ಮಾಡಲಾಗಿದೆ. ಧೋನಿ ಎಡಿಷನ್‌ ಏನನ್ನು ನೀಡುತ್ತದೆ ಎಂಬುದು ಇಲ್ಲಿದೆ.

ಕಾಸ್ಮೆಟಿಕ್ ಆಪ್‌ಡೇಟ್‌ಗಳು ಮತ್ತು ಎಕ್ಸಸ್ಸರಿಗಳು

Citroen C3 Aircross Dhoni Edition Accessories

C3 ಏರ್‌ಕ್ರಾಸ್‌ನ ಧೋನಿ ಎಡಿಷನ್‌ ಎಲ್ಲಾ ಬಣ್ಣ ಆಯ್ಕೆಗಳೊಂದಿಗೆ ಲಭ್ಯವಿದೆ ಮತ್ತು ಹೊರಭಾಗದಲ್ಲಿ ಇದು ಬಾನೆಟ್, ಟೈಲ್‌ಗೇಟ್ ಮತ್ತು ಹಿಂಬದಿಯ ಬಾಗಿಲುಗಳಲ್ಲಿ '7' ಸಂಖ್ಯೆಯನ್ನು ಹೊಂದಿದೆ ಮತ್ತು ಇದು ಮುಂಭಾಗದ ಬಾಗಿಲುಗಳಲ್ಲಿ, ಅಂದರೆ ORVM ಗಳ ಅಡಿಯಲ್ಲಿ "ಧೋನಿ ಎಡಿಷನ್‌ನ" ಡೀಕಾಲ್ ಅನ್ನು ಪಡೆಯುತ್ತದೆ.

ಇದನ್ನೂ ಓದಿ: 2024ರ ಮೇ ತಿಂಗಳಿನಲ್ಲಿಯೂ ಕಾಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಪ್ರಾಬಲ್ಯ ಸಾಧಿಸುವುದನ್ನು ಮುಂದುವರೆಸಿದ ಹ್ಯುಂಡೈ ಕ್ರೆಟಾ  

ಒಳಭಾಗದಲ್ಲಿ, ವಿಶೇಷ ಆವೃತ್ತಿಯು ಕಪ್ಪು ಮತ್ತು ಮರಳು ಬಣ್ಣದ ಡ್ಯುಯಲ್-ಟೋನ್ ಸೀಟ್ ಕವರ್‌ಗಳನ್ನು ನೀಲಿ ಮತ್ತು ಆರೆಂಜ್‌ ಬಣ್ಣದ ಇನ್ಸರ್ಟ್‌ನೊಂದಿಗೆ ಪಡೆಯುತ್ತದೆ, ಚಾಲಕ ಸೀಟಿನಲ್ಲಿ "7" ಸಂಖ್ಯೆಯನ್ನು ಕೆತ್ತಲಾಗಿದೆ ಮತ್ತು ಮುಂಭಾಗದ ಪ್ರಯಾಣಿಕರ ಸೀಟಿನಲ್ಲಿ ಧೋನಿಯ ಸಹಿಯನ್ನು ಕೆತ್ತಲಾಗಿದೆ. ಇದರ  ಕುಶನ್‌ಗಳು, ಇಲ್ಯುಮಿನೇಟೆಡ್ ಸಿಲ್ ಪ್ಲೇಟ್‌ಗಳು ಮತ್ತು ಸೀಟ್‌ಬೆಲ್ಟ್ ಕವರ್‌ಗಳು ಸಹ ಧೋನಿಯ ಜರ್ಸಿ ಸಂಖ್ಯೆ ಮತ್ತು ಸಹಿಯನ್ನು ಪಡೆಯುತ್ತದೆ. ಈ ಸ್ಪೇಷಲ್‌ ಎಡಿಷನ್‌ ಮುಂಭಾಗದ ಡ್ಯಾಶ್‌ಕ್ಯಾಮ್ ಅನ್ನು ಸಹ ಪಡೆಯುತ್ತದೆ.

Citroen C3 Aircross Dhoni Edition Interiors

ಈ ಬದಲಾವಣೆಗಳ ಹೊರತಾಗಿ, ಪ್ರತಿ ವಿಶೇಷ ಆವೃತ್ತಿಯ ಮೊಡೆಲ್‌ ಧೋನಿ ಗೂಡಿ ಬ್ಯಾಗ್ ಅನ್ನು ಪಡೆಯುತ್ತದೆ ಮತ್ತು 100 ಲಿಮಿಟೆಡ್‌ ಎಡಿಷನ್‌ಗಳ ಒಂದರಲ್ಲಿ ಎಂಎಸ್ ಧೋನಿ ಸಹಿ ಮಾಡಿದ ಜೋಡಿ ವಿಕೆಟ್ ಕೀಪಿಂಗ್ ಗ್ಲೌಸ್‌ಗಳನ್ನು ಹೊಂದಿರುತ್ತದೆ. 

ಇದನ್ನೂ ಓದಿ: Tata Punch Pure ವರ್ಸಸ್‌ Hyundai Exter EX: ನೀವು ಯಾವ ಬೇಸ್ ಆವೃತ್ತಿಯನ್ನು ಖರೀದಿಸಬೇಕು?

ಡ್ಯಾಶ್‌ಕ್ಯಾಮ್‌ ಅನ್ನು ಹೊರತುಪಡಿಸಿ, ಯಾವುದೇ ವೈಶಿಷ್ಟ್ಯದ ಸೇರ್ಪಡೆಗಳಿಲ್ಲ, ಮತ್ತು ಈ ಎಸ್‌ಯುವಿಯು 10.2-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, ಮ್ಯಾನುಯಲ್ ಕ್ಲೈಮೇಟ್ ಕಂಟ್ರೋಲ್, 7-ಇಂಚಿನ ಡಿಜಿಟಲ್ ಡ್ರೈವರ್‌ಸ್ ಡಿಸ್ಪ್ಲೇ, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, EBD ಜೊತೆಗೆ ಎಬಿಎಸ್‌, ಹಿಲ್ ಹೋಲ್ಡ್ ಅಸಿಸ್ಟ್, ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಮತ್ತು ರಿಯರ್‌ವ್ಯೂ ಕ್ಯಾಮೆರಾದಂತಹ ವೈಶಿಷ್ಟ್ಯಗಳನ್ನು ಹೊಂದಿದೆ. 

ಪವರ್‌ಟ್ರೈನ್‌

Citroen C3 Aircross Dhoni Edition Exterior

ಸಿ3 ಏರ್‌ಕ್ರಾಸ್ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ ಅದು 110 ಪಿಎಸ್‌ ಮತ್ತು 205 ಎನ್‌ಎಮ್‌ನಷ್ಟು ಔಟ್‌ಪುಟ್‌ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್‌ಗೆ ಜೋಡಿಸಲಾಗಿದೆ.

ಬೆಲೆಗಳು

Citroen C3 Aircross Dhoni Edition Front

 ಸದ್ಯಕ್ಕೆ, ಸಿಟ್ರೊಯೆನ್ ಸಿ3 ಏರ್‌ಕ್ರಾಸ್ ಧೋನಿ ಎಡಿಷನ್‌ನ ಆರಂಭಿಕ ಬೆಲೆಯನ್ನು ಮಾತ್ರ ಬಹಿರಂಗಪಡಿಸಲಾಗಿದೆ, ಇದು 11.82 ಲಕ್ಷ ರೂ.ನಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತದೆ. ರೆಗುಲರ್‌ ಸಿಟ್ರೊಯೆನ್ ಎಸ್‌ಯುವಿಯು ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಹೈರೈಡರ್‌, ವೋಕ್ಸ್‌ವ್ಯಾಗನ್ ಟೈಗನ್, ಸ್ಕೋಡಾ ಕುಶಾಕ್ ಮತ್ತು ಎಂಜಿ ಆಸ್ಟರ್ ಮುಂತಾದವುಗಳಿಗೆ ಸ್ಪರ್ಧೆಯನ್ನು ಒಡ್ಡುತ್ತದೆ. 

ಇನ್ನಷ್ಟು ಓದಿ: C3 ಏರ್‌ಕ್ರಾಸ್ ಆಟೋಮ್ಯಾಟಿಕ್‌

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಸಿಟ್ರೊನ್ ಸಿ3 Aircross

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience