• English
  • Login / Register

ಸಿಟ್ರೊಯೆನ್ C3 ಏರ್‌ಕ್ರಾಸ್ ಯು Vs ಮಾರುತಿ ಗ್ರ್ಯಾಂಡ್ ವಿಟಾರಾ ಸಿಗ್ಮಾ: ಅತ್ಯಂತ ಕೈಗೆಟಕುವ ಈ ಕಾಂಪ್ಯಾಕ್ಟ್‌ SUVಗಳಲ್ಲಿ ಯಾವುದು ಮೇಲು ?

ಸಿಟ್ರೊನ್ aircross ಗಾಗಿ rohit ಮೂಲಕ ಸೆಪ್ಟೆಂಬರ್ 27, 2023 02:41 pm ರಂದು ಪ್ರಕಟಿಸಲಾಗಿದೆ

  • 38 Views
  • ಕಾಮೆಂಟ್‌ ಅನ್ನು ಬರೆಯಿರಿ

ಸಿಟ್ರೊಯೆನ್ C3 ಏರ್‌ಕ್ರಾಸ್ ಈಗ ಅತ್ಯಂತ ಕೈಗೆಟಕುವ ಕಾಂಪ್ಯಾಕ್ಟ್ SUV ಎಂಬುದೇನೋ ನಿಜ. ಆದರೆ ಇದೇ ಸೆಗ್ಮೆಂಟ್‌ನ ಇನ್ನೊಂದು ಅತ್ಯಂತ ಕೈಗೆಟುಕುವ ಪ್ರತಿಸ್ಪರ್ಧಿ - ಮಾರುತಿ ಗ್ರ್ಯಾಂಡ್ ವಿಟಾರಾ ಸಿಗ್ಮಾ ಇದಕ್ಕೆ ಸರಿಸಾಟಿ ಆಗಬಲ್ಲದೇ?

Citroen C3 Aircross vs Maruti Grand Vitara

ಕಾಂಪ್ಯಾಕ್ಟ್ SUV ವಿಭಾಗಕ್ಕೆ ಇತ್ತೀಚಿನ ಸೇರ್ಪಡೆ ಎಂದರೆ ಸಿಟ್ರೊಯೆನ್ C3 ಏರ್‌ಕ್ರಾಸ್. ಜೊತೆಗೆ, ಬೇಸ್ ವೇರಿಯಂಟ್‌ಗೆ ರೂ 9.99 ಲಕ್ಷ (ಎಕ್ಸ್ ಶೋ ರೂಂ) ಇಂಟ್ರೊಡಕ್ಟರಿ ಪ್ರೈಸ್ ಹೊಂದಿರುವ ಈ ಕಾರು, ಈ ವಲಯದ ಅತ್ಯಂತ ಕೈಗೆಟುಕುವ ಆಯ್ಕೆಯೂ ಹೌದು. ಅದಲ್ಲದೇ, ಈ ಸೆಗ್ಮೆಂಟ್‌ನಲ್ಲಿ 5 ಅಥವಾ 7 ಸೀಟ್‌ಗಳ ಆಯ್ಕೆ ಹೊಂದಿರುವ ಏಕೈಕ ಕಾರ್ ಇದಾಗಿದ್ದು, 7-ಸೀಟರ್‌ ಕಾರಿನಲ್ಲಿ ಮೂರನೇ ಸಾಲಿನ ಸೀಟುಗಳನ್ನು ತೆಗೆಯಬಹುದಾಗಿದೆ. ಆದರೆ, ಬೇಸ್-ಸ್ಪೆಕ್ ಯು ವೇರಿಯಂಟ್ 5-ಸೀಟರ್‌ನಲ್ಲಿ ಮಾತ್ರ ಸಿಗುತ್ತದೆ.

C3 ಏರ್‌ಕ್ರಾಸ್ ಪಾದಾರ್ಪಣೆ ಮಾಡುವ ಮೊದಲು, ಮಾರುತಿ ಗ್ರ್ಯಾಂಡ್ ವಿಟಾರಾದ ಬೇಸ್‌ ವೇರಿಯಂಟ್‌ ಕಾರು ಅತ್ಯಂತ ಕೈಗೆಟುಕುವ ಕಾಂಪ್ಯಾಕ್ಟ್ SUV ಆಯ್ಕೆಯಾಗಿತ್ತು. ಇದರ ಬೆಲೆ ರೂ 10.70 ಲಕ್ಷ (ಎಕ್ಸ್ ಶೋ ರೂಂ ದೆಹಲಿ). ಹಾಗಾದರೆ, ಮಾರುತಿಯ SUV ವಿಗಿಂತ 71,000 ರೂ.ಗಳಷ್ಟು ಕಡಿಮೆ ಬೆಲೆಯಲ್ಲಿ ಸಿಗುವ ಈ ಫ್ರೆಂಚ್ SUV ಯಲ್ಲಿ ಏನೇನಿದೆ ಹಾಗೂ ಏನೇನಿಲ್ಲ ಎಂದು ವಿವರವಾಗಿ ನೋಡೋಣ ಬನ್ನಿ:

 

ಯಾವುದು ದೊಡ್ಡದು?

ಅಳತೆ

ಸಿಟ್ರೊಯೆನ್ C3 ಏರ್‌ಕ್ರಾಸ್

ಮಾರುತಿ ಗ್ರ್ಯಾಂಡ್ ವಿಟಾರಾ

ವ್ಯತ್ಯಾಸ

ಉದ್ದ

4323 ಎಂಎಂ

4345ಎಂಎಂ

(22ಎಂಎಂ)

ಅಗಲ

11796ಎಂಎಂ (ORVM ಇಲ್ಲದೇ)

1795ಎಂಎಂ

+1ಎಂಎಂ

ಎತ್ತರ

1665ಎಂಎಂ

1645ಎಂಎಂ

+20ಎಂಎಂ

ವೀಲ್‌ ಬೇಸ್

2671ಎಂಎಂ

2600ಎಂಎಂ

+71ಎಂಎಂ

ವೀಲ್ ಗಾತ್ರ

17-ಇಂಚ್ ವೀಲ್‌ಗಳು

17-ಇಂಚ್ ವೀಲ್‌ಗಳು

  • ಉದ್ದ ಸ್ವಲ್ಪ ಕಮ್ಮಿ ಎಂಬುದನ್ನು ಬಿಟ್ಟರೆ, ಮಾರುತಿ ಗ್ರ್ಯಾಂಡ್ ವಿಟಾರಾಕ್ಕಿಂತ C3 ಏರ್‌ಕ್ರಾಸ್ ಬೇರೆ ಎಲ್ಲಾ ಅಳತೆಗಳಲ್ಲೂ ದೊಡ್ಡದಾಗಿದೆ.
  • 5-ಸೀಟರ್‌ SUV ಗಳೇ ತುಂಬಿರುವ ಈ ಸೆಗ್ಮೆಂಟ್‌ನಲ್ಲಿ, ಹೆಚ್ಚುವರಿ ಎತ್ತರ ಮತ್ತು ವೀಲ್‌ಬೇಸ್‌ನಿಂದಾಗಿ ಇದು 3-ಸಾಲಿನ ಸೀಟ್‌ಗಳ ಆಯ್ಕೆಯೊಂದಿಗೆ ಉನ್ನತ ಸ್ಥಾನದಲ್ಲಿದೆ.

 

ಪರ್ಫಾರ್ಮೆನ್ಸ್ ಹೋಲಿಕೆ

ವಿಷಯಾಂಶ

 ಸಿಟ್ರೋಜನ್ C3 ಏರ್‌ಕ್ರಾಸ್

 ಮಾರುತಿ ಗ್ರ್ಯಾಂಡ್ ವಿಟಾರಾ

 ಎಂಜಿನ್

1.2-ಲೀಟರ್ ಟರ್ಬೋ-ಪೆಟ್ರೋಲ್

1.5-ಲೀಟರ್ ಪೆಟ್ರೋಲ್

ಪವರ್

110ಪಿಎಸ್

103ಪಿಎಸ್

ಟಾರ್ಕ್

190Nm

137Nm

ಟ್ರಾನ್ಸ್‌ಮಿಶನ್

6-ಸ್ಪೀಡ್ ಎಂ.ಟಿ.

5-ಸ್ಪೀಡ್ ಎಂ.ಟಿ.

ಕ್ಲೇಮ್ ಮಾಡಲಾದ ಎಫ್‌ಇ

18.5kmpl

21.11kmpl

 ಡ್ರೈವ್ ಟ್ರೈನ್

FWD

FWD

Citroen C3 Aircross turbo-petrol engine

  • ಸಿಟ್ರೊಯೆನ್ SUV ಯಲ್ಲಿ ಕೇವಲ ಒಂದು ಇಂಜಿನ್-ಗೇರ್‌ಬಾಕ್ಸ್ ಆಯ್ಕೆ ಇದ್ದರೆ, ಮಾರುತಿ ಗ್ರ್ಯಾಂಡ್ ವಿಟಾರಾದಲ್ಲಿ ಮೈಲ್ಡ್ ಹಾಗೂ ಸ್ಟ್ರಾಂಗ್ ಹೈಬ್ರಿಡ್ ಪವರ್‌ಟ್ರೈನ್ ಆಯ್ಕೆಗಳಿವೆ.
  • ಪರ್ಫಾರ್ಮೆನ್ಸ್ ವಿಷಯದಲ್ಲಿ, C3 ಏರ್‌ಕ್ರಾಸ್ ಗ್ರ್ಯಾಂಡ್ ವಿಟಾರಾವನ್ನು ಹಿಂದಿಕ್ಕುತ್ತದೆ. ಆದರೆ ಇಂಧನ ದಕ್ಷತೆಯ ವಿಷಯದಲ್ಲಿ ಹಿಂದೆ ಬೀಳುತ್ತದೆ. ಏಕೆಂದರೆ ಅಲ್ಲಿ ವಿಟಾರಾದ ಇಂಟೆಲಿಜೆಂಟ್ ಸ್ಟಾರ್ಟರ್ ಮೋಟರ್‌ ಮೇಲುಗೈ ಸಾಧಿಸುತ್ತದೆ.
  • ಇದೊಂದೇ ಎಂಜಿನ್ ಇರುವ ಕಾರಣ, ಸಿಟ್ರೊಯೆನ್ SUV ಯ ಈ ಗುಣವು ಅದರ ಎಲ್ಲಾ ವೇರಿಯಂಟ್‌ಗಳಲ್ಲೂ ಕಂಡುಬರುತ್ತದೆ. ಆದರೆ ಮಾರುತಿ ಗ್ರ್ಯಾಂಡ್ ವಿಟಾರಾದ ಮ್ಯಾನುವಲ್ ಗೇರ್‌ಬಾಕ್ಸ್‌ ಹೊಂದಿರುವ ಟಾಪ್-ಸ್ಪೆಕ್ ಆಲ್ಫಾ ವೇರಿಯಂಟ್‌ನಲ್ಲಿ ಆಲ್-ವೀಲ್ ಡ್ರೈವ್‌ಟ್ರೇನ್ (AWD) ಆಯ್ಕೆ ಇದೆ.
  • ಇದಲ್ಲದೇ ಗ್ರಾಂಡ್ ವಿಟಾರಾದಲ್ಲಿ, 116PS 1.5-ಲೀಟರ್ ಸ್ಟ್ರಾಂಗ್-ಹೈಬ್ರಿಡ್ ಸೆಟಪ್ ಆಯ್ಕೆಯನ್ನು ಸಹ ಮಾರುತಿ ನೀಡುತ್ತಿದ್ದು, ಇದು 27.97kmpl ಫ್ಯುಯೆಲ್ ಎಕಾನಮಿ ಹೊಂದಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಸಿಟ್ರೋಜನ್ C3 ಏರ್‌ಕ್ರಾಸ್‌ನ ವೇರಿಯಂಟ್‌ಗಳ ಚಿತ್ರಗಳು: ಯು, ಪ್ಲಸ್, ಹಾಗೂ ಮ್ಯಾಕ್ಸ್

 

ಎರಡೂ ಕಾರುಗಳಲ್ಲಿ ಏನೆಲ್ಲಾ ಇವೆ?

ಪ್ರಮುಖ ಗುಣಲಕ್ಷಣಗಳು

ಸಿಟ್ರೋಯೆನ್ C3 ಏರ್‌ಕ್ರಾಸ್ ಯು

 ಮಾರುತಿ ಗ್ರಾಂಡ್ ವಿಟಾರಾ ಸಿಗ್ಮಾ

ಹೊರಭಾಗ

ಬಾಡಿ ಕಲರ್‌ನ ಬಂಪರ್‌ಗಳು ಮತ್ತು ಹೊರಗಿನ ಡೋರ್ ಹ್ಯಾಂಡಲ್‌ಗಳು,ಟರ್ನ್ ಇಂಡಿಕೇಟರ್‌ ಹೊಂದಿರುವ ಕಪ್ಪು ಬಣ್ಣದ ORVM ಗಳು, ಸಂಪೂರ್ಣ ಕವರ್‌ ಹೊಂದಿರುವ ಸ್ಟೀಲ್ ವೀಲ್‌ಗಳು ಮತ್ತು ಹ್ಯಾಲೊಜೆನ್ ಹೆಡ್‌ಲೈಟ್‌ಗಳು

ಬಾಡಿ ಕಲರ್‌ನ ಬಂಪರ್‌ಗಳು ಮತ್ತು ಡೋರ್ ಹ್ಯಾಂಡಲ್‌ಗಳು, LED DRL ಹೊಂದಿರುವ ಹ್ಯಾಲೊಜೆನ್ ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, ಎಲ್‌ಇಡಿ ಟೈಲ್‌ಲೈಟ್‌ಗಳು, ಟರ್ನ್ ಇಂಡಿಕೇಟರ್‌ ಹೊಂದಿರುವ ORVM ಗಳು ಮತ್ತು ಸಂಪೂರ್ಣ ಕವರ್‌ ಹೊಂದಿರುವ ಸ್ಟೀಲ್‌ ವೀಲ್‌ಗಳು

ಇಂಟೀರಿಯರ್

ಬ್ಲ್ಯಾಕ್ ಆಂಡ್ ಗ್ರೇ ಕ್ಯಾಬಿನ್ ಥೀಮ್, 2-ಟೋನ್ ಫ್ಯಾಬ್ರಿಕ್ ಅಪ್‌ಹೋಲೆಸ್ಟ್ರಿ, ಕಪ್ಪು ಬಣ್ಣದ ಡೋರ್ ಹ್ಯಾಂಡಲ್‌ಗಳು, ಎಲ್ಲಾ ಪ್ರಯಾಣಿಕರಿಗೆ ಫಿಕ್ಸೆಡ್ ಹೆಡ್‌ರೆಸ್ಟ್‌ಗಳು ಮತ್ತು ಎರಡನೇ ಸಾಲಿನಲ್ಲಿ ಫ್ಲಾಟ್-ಫೋಲ್ಡಿಂಗ್ ಸೀಟ್‌ಗಳು

2-ಟೋನ್ ಕ್ಯಾಬಿನ್ ಥೀಮ್, ಕ್ರೋಮ್ ಡೋರ್ ಹ್ಯಾಂಡಲ್‌ಗಳು, ಫ್ರಂಟ್‌ ಸ್ಲೈಡಿಂಗ್ ಆರ್ಮ್‌ರೆಸ್ಟ್, ಹಿಂದಿನ ಸೀಟ್‌ನಲ್ಲಿ ಕಪ್‌ಹೋಲ್ಡರ್‌ ಹೊಂದಿರುವ ಸೆಂಟರ್ ಆರ್ಮ್‌ರೆಸ್ಟ್, 2-ಟೋನ್ ಫ್ಯಾಬ್ರಿಕ್ ಸೀಟ್‌ಗಳು, 60:40 ಸ್ಪ್ಲಿಟ್ ಫೋಲ್ಡಿಂಗ್ ಹಿಂಬದಿ ಸೀಟುಗಳು ಮತ್ತು ಎಲ್ಲಾ ಪ್ರಯಾಣಿಕರಿಗೆ ಅಡ್ಜಸ್ಟಿಬಲ್ ಹೆಡ್‌ರೆಸ್ಟ್‌ಗಳು

ಕಂಫರ್ಟ್ ಹಾಗೂ

ಅನುಕೂಲತೆ

ಮ್ಯಾನುಯಲ್ AC, 1-ಟಚ್ ಡೌನ್‌ ಹೊಂದಿರುವ ನಾಲ್ಕು ಪವರ್ ವಿಂಡೋಗಳು, ಕೀಲೆಸ್ ಎಂಟ್ರಿ, ಡೇ-ನೈಟ್ IRVM, 7-ಇಂಚಿನ ಡಿಜಿಟಲ್ ಡ್ರೈವರ್‌ ಡಿಸ್‌ಪ್ಲೇ, ಟಿಲ್ಟ್ ಸ್ಟೀರಿಂಗ್ ಮತ್ತು ಡ್ರೈವರ್‌ ಡಿಸ್‌ಪ್ಲೇಗಾಗಿ ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್‌ಗಳು, ಪವರ್ ಅಡ್ಜಸ್ಟಿವಲ್ ORVM ಗಳು

ಟಿಲ್ಟ್ ಮತ್ತು ಟೆಲಿಸ್ಕೋಪಿಕ್ ಸ್ಟೀರಿಂಗ್ ವೀಲ್, ಕೀಲೆಸ್ ಎಂಟ್ರಿ, ಸ್ಟೀರಿಂಗ್-ಮೌಂಟೆಡ್ ಆಡಿಯೊ ಕಂಟ್ರೋಲ್‌ಗಳು, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ಹಿಂಬದಿಯ ವೆಂಟ್ ಹೊಂದಿರುವ ಆಟೋ AC, ಹೈಟ್-ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್, ಎಲ್ಲಾ ನಾಲ್ಕು ಪವರ್ ವಿಂಡೋಗಳು ಮತ್ತು ಪವರ್ಡ್ ORVM ಗಳು (ಫೋಲ್ಡ್ ಆಂಡ್ ಅಡ್ಜಸ್ಟ್)

ಇನ್ಫೋಟೇನ್‌ಮೆಂಟ್

ಲಭ್ಯವಿಲ್ಲ

ಲಭ್ಯವಿಲ್ಲ

ಸುರಕ್ಷತ

ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಹಿಲ್-ಹೋಲ್ಡ್ ಅಸಿಸ್ಟ್ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳು

ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ESP, ಹಿಲ್-ಹೋಲ್ಡ್ ಅಸಿಸ್ಟ್, ಎಲ್ಲಾ ಪ್ರಯಾಣಿಕರಿಗೆ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು, ISOFIX ಚೈಲ್ಡ್ ಸೀಟ್ ಆಂಕರೇಜ್‌ಗಳು ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳು

Maruti Grand Vitara Sigma LED DRLs

  • ಎರಡೂ ಎಸ್‌ಯುವಿಗಳ ಬೇಸ್‌ ವೇರಿಯಂಟ್‌ಗಳು ಹೊರಗಿನ ಮತ್ತು ಒಳಗಿನ ವೈಶಿಷ್ಟ್ಯಗಳ ವಿಷಯದಲ್ಲಿ ಒಂದಕ್ಕೊಂದು ಕಠಿಣ ಪೈಪೋಟಿ ನೀಡಿದರೂ, ಮಾರುತಿ ಗ್ರ್ಯಾಂಡ್ ವಿಟಾರಾ ಸಿಗ್ಮಾ ಅದರ ಹೆಚ್ಚುವರಿ ಬೆಲೆಯಿಂದಾಗಿ, ಒಂದು ಹೆಜ್ಜೆ ಮುಂದೆ ಇದೆ. ಇದರಲ್ಲಿ LED DRL ಗಳು, LED ಟೈಲ್‌ಲೈಟ್‌ಗಳು, ಫ್ರಂಟ್ ಮತ್ತು ರೇರ್ ಆರ್ಮ್‌ರೆಸ್ಟ್‌ಗಳು ಮತ್ತು ಅಡ್ಜಸ್ಟಿಬಲ್ ಹೆಡ್‌ರೆಸ್ಟ್‌ಗಳಂತಹ ವೈಶಿಷ್ಟ್ಯಗಳಿದ್ದು, ಸಿಟ್ರೊಯೆನ್ C3 ಏರ್‌ಕ್ರಾಸ್‌ನಲ್ಲಿ ಇವು ಸಿಗುವುದಿಲ್ಲ.

Citroen C3 Aircross digital driver's display

  • ಕಂಫರ್ಟ್ ಮತ್ತು ಅನುಕೂಲತೆಯ ವಿಷಯದಲ್ಲೂ ಕೂಡಾ, ಆಟೋ AC, ವಿದ್ಯುತ್-ಚಾಲಿತ ORVM ಗಳು ಮತ್ತು ಸೀಟ್-ಅಡ್ಜಸ್ಟಿಬಲ್ ಡ್ರೈವರ್ ಸೀಟ್‌ನಂತಹ ಹೆಚ್ಚುವರಿ ಸೌಕರ್ಯಗಳೊಂದಿಗೆ ಮಾರುತಿ SUV ಮುನ್ನಡೆ ಸಾಧಿಸುತ್ತದೆ. ಗ್ರ್ಯಾಂಡ್ ವಿಟಾರಾ ಸಿಗ್ಮಾದ ಮೇಲೆ C3 ಏರ್‌ಕ್ರಾಸ್ ಸಾಧಿಸುವ ಏಕೈಕ ಉಪಯುಕ್ತ ಪ್ರಯೋಜನವೆಂದರೆ 7-ಇಂಚಿನ ಡಿಜಿಟಲ್ ಡ್ರೈವರ್‌ ಡಿಸ್‌ಪ್ಲೇ ನೀಡಿರುವುದು.
  • ಎರಡೂ ಬೇಸ್ ವೇರಿಯಂಟ್‌ಗಳಲ್ಲಿ ಯಾವುದೇ ಇನ್ಫೋಟೇನ್ಮೆಂಟ್ ಸಿಸ್ಟಮ್ ಇಲ್ಲ.
  • ಈ ಎರಡೂ SUVಗಳ ಬೇಸ್-ಸ್ಪೆಕ್ ವೇರಿಯಂಟ್‌ಗಳ ನಡುವಿನ ಸಾಮಾನ್ಯ ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ESP ಮತ್ತು ಹಿಲ್-ಹೋಲ್ಡ್ ಅಸಿಸ್ಟ್ ಸೇರಿವೆ. ಅದರ ಹೊರತಾಗಿ, C3 ಏರ್‌ಕ್ರಾಸ್ TPMS ಸೌಲಭ್ಯ ಒದಗಿಸಿದರೆ, ಗ್ರ್ಯಾಂಡ್ ವಿಟಾರಾದಲ್ಲಿ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು ಮತ್ತು ISOFIX ಚೈಲ್ಡ್ ಸೀಟ್ ಆಂಕರೇಜ್‌ಗಳ ಪ್ರಯೋಜನ ದೊರೆಯುತ್ತದೆ.

 

ತೀರ್ಮಾನ

Citroen C3 Aircross You variant rear

ಸೌಕರ್ಯಗಳು ಸ್ವಲ್ಪ ಕಡಿಮೆ ಎನಿಸಿದರೂ ಸಹ, ಚುರುಕಾದ ಎಂಜಿನ್ ಹಾಗೂ 9.99 ಲಕ್ಷ ರೂಪಾಯಿಗಳ (ಎಕ್ಸ್-ಶೋ ರೂಂ ದೆಹಲಿ) ಆಕರ್ಷಕ ಆರಂಭಿಕ ಬೆಲೆ ಹೊಂದಿರುವ C3 ಏರ್‌ಕ್ರಾಸ್‌ ಮೂಲಕ ಒಂದು ವಿಶಾಲವಾದ ಫ್ಯಾಮಿಲಿ SUV ಯನ್ನು ಒದಗಿಸುವ ಭರವಸೆಯನ್ನು ಸಿಟ್ರೊಯೆನ್ ನೀಡುತ್ತಿದೆ. 

Maruti Grand Vitara Sigma rear

ತನಗಿಂತ ಸ್ವಲ್ಪವೇ ಕಡಿಮೆ ಬೆಲೆಯ ನಿಕಟ ಪ್ರತಿಸ್ಪರ್ಧಿಗೆ ಹೋಲಿಸಿದರೆ, ಹೆಚ್ಚುವರಿ ಅನುಕೂಲಗಳು ಮತ್ತು ಸೌಕರ್ಯಗಳೊಂದಿಗೆ ಮಾರುತಿ ಗ್ರಾಂಡ್ ವಿಟಾರಾ ಉತ್ತಮವಾದ ಪ್ಯಾಕೇಜ್ ನೀಡುತ್ತಿದೆ. ಇದರಲ್ಲಿ ಹಲವಾರು ಪವರ್‌ಟ್ರೇನ್ ಆಯ್ಕೆಗಳು, ಹೆಚ್ಚಿನ ಮೈಲೇಜ್ ಮತ್ತು ಇನ್ನಷ್ಟು ಬೆಲೆ ತೆರಲು ಸಿದ್ಧಿವಿದ್ದರೆ ಮತ್ತಷ್ಟು ಉತ್ಕೃಷ್ಟ ಸೌಲಭ್ಯಗಳ ಪ್ರಯೋಜನವೂ ಸಿಗುತ್ತದೆ.

ಇದನ್ನೂ ವೀಕ್ಷಿಸಿ: ನೋಡಿ: ಆಡಿ A8L ಸೆಕ್ಯೂರಿಟಿಯು ವಿಐಪಿಗಳಿಗೆ ಯಾಕೆ ಸರಿಹೊಂದುತ್ತದೆ?

ಇನ್ನಷ್ಟು ತಿಳಿಯಿರಿ: C3 ಏರ್‌ಕ್ರಾಸ್ ಆನ್‌ರೋಡ್ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Citroen aircross

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience