Login or Register ಅತ್ಯುತ್ತಮ CarDekho experience ಗೆ
Login

eC3 ನೊಂದಿಗೆ ಭಾರತದಲ್ಲಿ EV ಪವರ್ ಅನಾವರಣಗೊಳಿಸುತ್ತಿರುವ ಸಿಟ್ರಾನ್

ಸಿಟ್ರೊಯೆನ್ ಇಸಿ3 ಗಾಗಿ rohit ಮೂಲಕ ಫೆಬ್ರವಾರಿ 28, 2023 04:11 pm ರಂದು ಪ್ರಕಟಿಸಲಾಗಿದೆ

ಇದು 320km ನ ARAI-ಕ್ಲೈಮ್ ರೇಂಜ್‌ ಹೊಂದಿರುವ 29.2kWh ಬ್ಯಾಟರಿ ಪ್ಯಾಕ್‌ನೊಂದಿಗೆ ಚಾಲಿತವಾಗಿದೆ.

  • ಇದು ಎರಡು ಟ್ರಿಮ್‌ಗಳಲ್ಲಿ ಬರುತ್ತದೆ: ಲೈವ್ ಮತ್ತು ಫೀಲ್.
  • ಬೆಲೆಗಳು ರೂ. 11.50 ಲಕ್ಷದಿಂದ ರೂ. 12.43 ಲಕ್ಷದವರೆಗೆ ಇರಲಿವೆ (ಆರಂಭಿಕ ಎಕ್ಸ್-ಶೋರೂಂ).
  • 57PS ಮತ್ತು 143Nm ಉತ್ಪಾದಿಸುವ ಏಕೈಕ ಇಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿದೆ
  • 10-ಇಂಚಿನ ಟಚ್ ಸ್ಕ್ರೀನ್, ಅವಳಿ ಫ್ರಂಟ್ ಏರ್‌ಬ್ಯಾಗ್‌ಗಳು ಮತ್ತು ಕೀರಹಿತ ಪ್ರವೇಶವನ್ನು ಹೊಂದಿದೆ
  • ಇದು ತನ್ನ ICE ಆವೃತ್ತಿಗಿಂತ ರೂ 5.5 ಲಕ್ಷದಷ್ಟು ಹೆಚ್ಚು ಬೆಲೆಬಾಳುತ್ತದೆ.

ಹೆಚ್ಚು ಹೆಚ್ಚು ಕಾರುತಯಾರಕರು ವಿವಿಧ ಬೆಲೆಗಳಲ್ಲಿ ಇಲೆಕ್ಟ್ರಿಕ್ ಕಾರುಗಳನ್ನು ನೀಡುವುದರೊಂದಿಗೆ ಭಾರತವು ಇಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಕ್ಷಿಪ್ರ ಬೆಳವಣಿಗೆಗೆ ಸಾಕ್ಷಿಯಾಗಿದೆ. ಸಿಟ್ರಾನ್ eC3 ಎಂಬ C3ನ ಎಲ್ಲಾ ಇಲೆಕ್ಟ್ರಿಕ್ ಆವೃತ್ತಿಯೊಂದಿಗೆ ಈಗ ಪ್ರವೇಶ ಹಂತದ ಪಟ್ಟಿಗೆ ಸೇರ್ಪಡೆಗೊಂಡಿದೆ. ಇದನ್ನು ಎರಡು ವಿಶಾಲವಾದ ಟ್ರಿಮ್‌ಗಳಲ್ಲಿ ನೀಡಲಾಗಿದೆ. ಅವುಗಳೆಂದರೆ ಲೈವ್ ಮತ್ತು ಫೀಲ್.

ಇದನ್ನೂ ಓದಿ: eC3 ಇಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ನೊಂದಿಗೆ ಫ್ಲೀಟ್ ಮಾರುಕಟ್ಟೆಗೆ ಪ್ರವೇಶಿಸಲಿದೆ ಸಿಟ್ರಾನ್

ಇದರ ವೇರಿಯೆಂಟ್‌ವಾರು ಬೆಲೆಗಳನ್ನು ಇಲ್ಲಿ ನೋಡಬಹುದು:

ವೇರಿಯೆಂಟ್

ಬೆಲೆ (ಆರಂಭಿಕ ಎಕ್ಸ್-ಶೋರೂಂ)

ಲೈವ್

ರೂ 11.50 ಲಕ್ಷ

ಫೀಲ್

ರೂ 12.13 ಲಕ್ಷ

ಫೀಲ್ ವೈಬ್ ಪ್ಯಾಕ್

ರೂ 12.28 ಲಕ್ಷ

ಫೀಲ್ ಡ್ಯುಯಲ್ ಟೋನ್ ವೈಬ್‌ ಪ್ಯಾಕ್

ರೂ 12.43 ಲಕ್ಷ

ಟಾಟಾ ಟಿಯಾಗೋ ಇವಿ’ಯ ಆರಂಭಿಕ ಮಟ್ಟಕ್ಕೆ ಹೋಲಿಸಿದರೆ, ಸಿಟ್ರಾನ್ eC3’ಯ ಪ್ರಾರಂಭಿಕ ಬೆಲೆ ರೂ. 1.31 ಲಕ್ಷದಷ್ಟು ಹೆಚ್ಚಿದೆ. ಇದೇವೇಳೆ, ಆರಂಭಿಕ-ಮಟ್ಟದ eC3 ಮತ್ತು ಕಂಬಷನ್ ಇಂಜಿನ್ C3 ನಡುವೆ ರೂ. 5.5 ಲಕ್ಷಕ್ಕೂ ಹೆಚ್ಚಿನ ವ್ಯತ್ಯಾಸವಿದೆ. eC3 ಸದ್ಯದಲ್ಲೇ ಡೆಲಿವರಿ ಆಗುವ ನಿರೀಕ್ಷೆ ಇದೆ ಮತ್ತು ಸಿಟ್ರಾನ್ ಕೂಡಾ ತನ್ನ ಗ್ರಾಹಕರಿಗೆ ಫ್ಯಾಕ್ಟರಿಯಿಂದಲೇ ಖರೀದಿಸಲು ಹಾಗೂ ಅವರ ಮನೆಬಾಗಿಲಿಗೆ ಡೆಲಿವರಿ ಮಾಡುವ ಅವಕಾಶ ನೀಡಿದೆ.

ರೇಂಜ್, ಪವರ್ ಮತ್ತು ಚಾರ್ಜಿಂಗ್

ಸಿಟ್ರಾನ್ eC3 ಅನ್ನು 320ಕಿಮೀನ ARAI-ಕ್ಲೈಮ್ ಮಾಡಿದ ರೇಂಜ್ ಜೊತೆಗೆ 29.2kWh ಬ್ಯಾಟರಿ ಪ್ಯಾಕ್ ಅನ್ನು ಸಜ್ಜುಗೊಳಿಸಿದೆ. ಈ ಇಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಸಿಂಗಲ್ ಇಲೆಕ್ಟ್ರಿಕ್ ಮೋಟರ್ (57PS/143Nm) ನೊಂದಿಗೆ ಬರುತ್ತದೆ ಮತ್ತು ಇದು ಫ್ರಂಟ್ ವ್ಹೀಲ್ ಅನ್ನು ಚಾಲನೆ ಮಾಡುತ್ತದೆ. ಇದರ ಗರಿಷ್ಠ ವೇಗ107kmph ಆಗಿದೆ. ಇದರಲ್ಲಿ ಎರಡು ಚಾರ್ಜಿಂಗ್ ಆಯ್ಕೆಗಳಿವೆ: ಒಂದು15A ಸಾಕೆಟ್ ಚಾರ್ಜರ್, ಇದು 10 ಗಂಟೆಗಳು ಮತ್ತು 30 ನಿಮಿಷಗಳಲ್ಲಿ 100 ಪ್ರತಿಶತದಷ್ಟು ಟಾಪ್ ಅಪ್ ಮಾಡಬಲ್ಲುದು ಹಾಗೂ ಒಂದು DC ಫಾಸ್ಟ್ ಚಾರ್ಜರ್ 57 ನಿಮಿಷಗಳಲ್ಲಿ 10 ರಿಂದ 80 ಪ್ರತಿಶತದಷ್ಟು ರೀಫಿಲ್ ಮಾಡಬಹುದು.

ಅತ್ಯಗತ್ಯ ಫೀಚರ್‌ಗಳು

ಈ ಸಿಟ್ರಾನ್ EV ಅವಶ್ಯ ಫೀಚರ್‌ಗಳಾದ ಮ್ಯಾನುವಲ್ AC, ಎರಡು ಫ್ರಂಟ್ ಏರ್‌ಬ್ಯಾಗ್‌ಗಳು, ಕೀರಹಿತ ಪ್ರವೇಶ, ಎತ್ತರ-ಹೊಂದಿಸಬಹುದಾದ ಡ್ರೈವರ್ ಸೀಟ್ ಮತ್ತು ಎಲ್ಲಾ ಪವರ್ ವಿಂಡೋಗಳನ್ನು ಹೊಂದಿದೆ, ಅಲ್ಲದೇ, ಇದು ವಯರ್‌ಲೆಸ್ ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ, ಕನೆಕ್ಟಡ್ ಕಾರ್ ಟೆಕ್ ಮತ್ತು ನಾಲ್ಕು-ಸ್ಪೀಕರ್ ಸೌಂಡ್ ಸಿಸ್ಟಮ್ ಅನ್ನೂ ಹೊಂದಿದೆ. ಇಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ನ ಗ್ರಾಹಕರು ಕೂಡಾ ಸಿಟ್ರಾನ್‌ನ ಕನೆಕ್ಟಡ್ ಟೆಕ್ ಫೀಚರ್‌ಗಳಿಗೆ ಏಳು-ವರ್ಷಗಳ ಸಬ್‌ಸ್ಕ್ರಿಪ್ಷನ್ ಅನ್ನು ಪಡೆಯುತ್ತಾರೆ. ಅದರ ICE ಆವೃತ್ತಿಯಲ್ಲಿ ಫೀಚರ್ ಸೇರ್ಪಡೆಗಳು ಇಲ್ಲ.

ವಾರಂಟಿ ಕವರೇಜ್

eC3ಯ ಬ್ಯಾಟರಿಯು ಏಳು ವರ್ಷಗಳು ಅಥವಾ 1.4 ಲಕ್ಷ ಕಿಮೀಗಳ ವಾರಂಟಿಯನ್ನು ನೀಡುತ್ತಿದ್ದು, ಇದು ಟಾಟಾ ನೀಡುವ ಎಂಟು ವರ್ಷಗಳ ಸಾಮಾನ್ಯ EV ಬ್ಯಾಟರಿ ಹಾಗೂ 1.6 ಲಕ್ಷ ಕಿಮೀಗಿಂತ ಕಡಿಮೆ ಇದೆ. ಇದೇ ವೇಳೆ, ಇಲೆಕ್ಟ್ರಿಕ್ ಮೋಟರ್ ಐದು ವರ್ಷಗಳು ಅಥವಾ ಒಂದು ಲಕ್ಷ ಕಿಮೀಗಳು ಮತ್ತು ವಾಹನವು ಮೂರು ವರ್ಷಗಳು ಅಥವಾ 1.25 ಲಕ್ಷ ಕಿಮೀ ವಾರಂಟಿಯನ್ನು ಪಡೆಯುತ್ತದೆ. ಅಲ್ಲದೇ ಸಿಟ್ರಾನ್ eC3ಗೆ ಏಳು ವರ್ಷಗಳ ತನಕ ಅಥವಾ ಎರಡು ಲಕ್ಷ ಕಿಮೀಗಳ ವಿಸ್ತರಿಸಿದ ವಾರಂಟಿಯನ್ನು ನೀಡಿದೆ.

ಅದರ ಪ್ರತಿಸ್ಪರ್ಧಿಗಳತ್ತ ಒಂದು ನೋಟ

ಇದು ಟಾಟಾ ಟಿಯಾಗೋ EV ಹಾಗೂ ಟಿಗಾರ್ EVಗೆ ಪ್ರತಿಸ್ಪರ್ಧಿಯಾಗಿದ್ದು ಟಾಟಾ ನೆಕ್ಸಾನ್ EV ಪ್ರೈಮ್/ಮ್ಯಾಕ್ಸ್ ಹಾಗೂ ಮಹೀಂದ್ರಾ XUV400 ನಂತೆಯೇ ಕೈಗೆಟುಕುವ ಆಯ್ಕೆಯಾಗಿದೆ. ಈ ಫ್ರೆಂಚ್ ಕಾರು ತಯಾರಕರು ಫ್ಲೀಟ್ ಖರೀದಿದಾರರಿಗಾಗಿ eC3 ಅನ್ನೂ ನೀಡುತ್ತಿದ್ದು, ಇದು ಟಾಟಾದ ಟಿಗಾರ್ EV ಎಕ್ಸ್‌ಪ್ರೆಸ್-T ಗೆ ಸ್ಪರ್ಧೆಯೊಡ್ಡಲಿದೆ.

ಇನ್ನಷ್ಟು ಓದಿ : eC3 ಆಟೋಮ್ಯಾಟಿಕ್

Share via

Write your Comment on Citroen ಇಸಿ3

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ