Login or Register ಅತ್ಯುತ್ತಮ CarDekho experience ಗೆ
Login

ಈ ಜುಲೈನಲ್ಲಿ ರೆನಾಲ್ಟ್ ಕಾರುಗಳ ಮೇಲೆ ಗ್ರಾಹಕರಿಗೆ ರೂ 77,000 ತನಕ ಉಳಿತಾಯದ ಅವಕಾಶ

published on ಜುಲೈ 18, 2023 09:52 pm by shreyash for ರೆನಾಲ್ಟ್ ಕ್ವಿಡ್

ಎಲ್ಲಾ ಮಾಡೆಲ್ ಗಳ MY22 ಮತ್ತು MY23 ಘಟಕಗಳಲ್ಲಿ ಕಾರು ತಯಾರಕರು ಇನ್ನೂ ಪ್ರಯೋಜನಗಳನ್ನು ನೀಡುತ್ತಿದ್ದಾರೆ

  • ರೆನಾಲ್ಟ್ ಕೈಗರ್ ಮೇಲೆ ರೂ 77,000 ತನಕದ ಗರಿಷ್ಠ ಉಳಿತಾಯ

  • ರೂ 62,000 ತನಕದ ರಿಯಾಯಿತಿಯೊಂದಿಗೆ ಟ್ರೈಬರ್ ಅನ್ನು ನೀಡಲಾಗುತ್ತಿದೆ.

  • ರೆನಾಲ್ಟ್ ಕ್ವಿಡ್ ಮೇಲೆ ರೂ 57,000 ತನಕದ ಉಳಿತಾಯವನ್ನು ನೀಡಲಾಗುತ್ತಿದೆ.

  • ಎಲ್ಲಾ ಮೂರು ಮಾಡೆಲ್‌ಗಳ MY23 ಯೂನಿಟ್‌ಗಳಿಗೆ ರೂ 20,000 ತನಕದ ಹೆಚ್ಚುವರಿ ಲಾಯಲ್ಟಿ ಬೋನಸ್‌ ನೀಡಲಾಗುತ್ತಿದೆ.

  • ಎಲ್ಲಾ ಆಫರ್‌ಗಳು ಜುಲೈ ಅಂತ್ಯದ ತನಕ ಮಾನ್ಯವಾಗಿರುತ್ತವೆ.

MY22 ಮತ್ತು MY23 ಯೂನಿಟ್‌ಗಳನ್ನು ಒಳಗೊಂಡಂತೆ ಜುಲೈನಲ್ಲಿ ರೆನಾಲ್ಟ್ ತನ್ನ ಎಲ್ಲಾ ಮಾಡೆಲ್‌ಗಳಲ್ಲಿಯೂ ವಿವಿಧ ಶ್ರೇಣಿಯ ಪ್ರಯೋಜನಗಳನ್ನು ನೀಡುತ್ತಿದೆ. ಹೆಚ್ಚಿನ ಪರ್ಕ್‌ಗಳನ್ನು ಕೈಗರ್‌ ಮೇಲೆ ನೀಡಲಾಗುತ್ತಿದ್ದು ನಂತರದ ಸ್ಥಾನದಲ್ಲಿ ಟ್ರೈಬರ್ ಮತ್ತು ಕ್ವಿಡ್ ಬರುತ್ತವೆ. ಅಲ್ಲದೇ ಈ ಎಲ್ಲಾ ಮಾಡೆಲ್‌ಗಳಲ್ಲಿ ಗ್ರಾಮೀಣ ಮತ್ತು ಸ್ಕ್ರಾಪೇಜ್ ರಿಯಾಯಿತಿಗಳನ್ನೂ ನೀಡಲಾಗುತ್ತಿದೆ. ಆಫರ್‌ಗಳ ಮಾಡೆಲ್‌ವಾರು ವಿವರಗಳನ್ನು ಈ ಕೆಳಗೆ ನೀಡಲಾಗಿದೆ.

ಹಕ್ಕುತ್ಯಾಗ: MY22 ಯೂನಿಟ್‌ಗಳು (2022ರಲ್ಲಿ ತಯಾರಿಸಲಾದ) MY23 ಯೂನಿಟ್‌ಗಳಿಗಿಂತ ಕಡಿಮೆ ರಿಸೇಲ್ ಮೌಲ್ಯವನ್ನು ಹೊಂದಿವೆ.

ಕ್ವಿಡ್

ಆಫರ್‌ಗಳು

ಮೊತ್ತ

BS6 ಹಂತ I MY22

BS6 ಹಂತ II MY23

ನಗದು ರಿಯಾಯಿತಿ

ರೂ 25,000 ತನಕ

ರೂ 15,000 ತನಕ

ವಿನಿಮಯ ಬೋನಸ್

ರೂ 20,000 ತನಕ

ರೂ 20,000 ತನಕ

ಕಾರ್ಪೋರೇಟ್ ರಿಯಾಯಿತಿ

ರೂ 12,000 ತನಕ

ರೂ 12,000 ತನಕ

ಲಾಯಲ್ಟಿ ಬೋನಸ್

ಅನ್ವಯವಾಗುವುದಿಲ್ಲ

ರೂ 10,000 ತನಕ

ಒಟ್ಟು ಪ್ರಯೋಜನಗಳು

ರೂ 57,000 ತನಕ

ರೂ 57,000 ತನಕ

  • ಬೇಸ್-ಸ್ಪೆಕ್ ರೆನಾಲ್ಟ್ ಕ್ವಿಡ್ RXEಯ MY23ರ ಯೂನಿಟ್‌ಗಳು ಮಾತ್ರವೇ ರೂ.10,000 ದಷ್ಟು ಲಾಯಲ್ಟಿ ರಿಯಾಯಿತಿಯನ್ನು ಹೊಂದಿವೆ.

  • ಕ್ವಿಡ್‌ನ BS6 ಹಂತ I MY22 ಯೂನಿಟ್‌ಗಳಿಗೆ ಟೇಬಲ್‌ನಲ್ಲಿ ಉಲ್ಲೇಖಿಸಲಾದ ರೂ 25,000 ಕ್ಯಾಶ್ ರಿಯಾಯಿತಿಯು ಕೇವಲ ಈ ಹ್ಯಾಚ್‌ಬ್ಯಾಕ್‌ನ AMT ಟ್ರಿಮ್‌ಗಳಿಗೆ ಅನ್ವಯವಾಗುತ್ತದೆ. ಮ್ಯಾನುವಲ್ ಟ್ರಾನ್ಸ್‌ಮಿಷನ್ ವೇರಿಯೆಂಟ್‌ಗಳಿಗೆ ಇದನ್ನು ರೂ 20,000ಕ್ಕೆ ಇಳಿಸಲಾಗಿದೆ.

  • ರೆನಾಲ್ಟ್ ಈ ಕ್ವಿಡ್ ಅನ್ನು ರೂ 4.70 ಲಕ್ಷದಿಂದ ರೂ 6.33 ಲಕ್ಷದ ತನಕ ಮಾರಾಟ ಮಾಡುತ್ತದೆ.

ಇದನ್ನೂ ಪರಿಶೀಲಿಸಿ: ಮೊತ್ತ ಮೊದಲ ರೆನಾಲ್ಟ್ ರಫೇಲ್ ಕೌಪ್ SUVಯ 5 ಗಮನಾರ್ಹ ವಿವರಗಳು

ಟ್ರೈಬರ್

ಆಫರ್‌ಗಳು

ಮೊತ್ತ

BS6 ಹಂತ I MY22

BS6 ಹಂತ I MY23

BS6 ಹಂತ II MY23

ನಗದು ರಿಯಾಯಿತಿ

ರೂ 25,000 ತನಕ

ರೂ 15,000 ತನಕ

ರೂ 10,000 ತನಕ

ವಿನಿಮಯ ಬೋನಸ್

ರೂ 25,000 ತನಕ

ರೂ 25,000 ತನಕ

ರೂ 20,000 ತನಕ

ಕಾರ್ಪೋರೇಟ್ ರಿಯಾಯಿತಿ

ರೂ 12,000 ತನಕ

ರೂ 12,000 ತನಕ

ರೂ 12,000 ತನಕ

ಲಾಯಲ್ಟಿ ಬೋನಸ್

ಅನ್ವಯವಾಗುವುದಿಲ್ಲ

ಅನ್ವಯವಾಗುವುದಿಲ್ಲ

ರೂ 10,000 ತನಕ

ಒಟ್ಟು ಪ್ರಯೋಜನಗಳು

ರೂ 62,000 ತನಕ

ರೂ 52,000 ತನಕ

ರೂ 52,000 ತನಕ

  • ಇಲ್ಲೂ ಕೂಡಾ, ರೆನಾಲ್ಟ್ ಟ್ರೈಬರ್ MPVಯ ಆರಂಭಿಕ ವೇರಿಯೆಂಟ್ ಇತ್ತೀಚಿನ ಯೂನಿಟ್‌ಗಳೊಂದಿಗೆ ನೀಡಲಾದ ಲಾಯಲ್ಟಿ ರಿಯಾಯಿತಿಯ ಪ್ರಯೋಜನವನ್ನು ಮಾತ್ರ ಪಡೆಯುತ್ತದೆ. ಆದಾಗ್ಯೂ, ಅವುಗಳು ರೂ 10,000ದ ಕನಿಷ್ಠ ನಗದು ರಿಯಾಯಿತಿಯನ್ನು ಪಡೆಯುತ್ತದೆ.

  • ರೆನಾಲ್ಟ್ ಟ್ರೈಬರ್‌ನ BS6 ಹಂತ I MY22 ಯೂನಿಟ್‌ಗಳು ಅತ್ಯಂತ ಹೆಚ್ಚಿನ ಪ್ರಯೋಜನಗಳನ್ನು ಹೊಂದಿದ್ದು, ಇದು ರೂ 25,000 ದ ಅತ್ಯಂತ ಹೆಚ್ಚಿನ ನಗದು ರಿಯಾಯಿತಿಯನ್ನು ಪಡೆದಿದೆ.

  • BS6 ಹಂತ I MY23 ಮಾಡೆಲ್‌ಗಳಿಗೆ ನಗದು ರಿಯಾಯಿತಿಯನ್ನು ರೂ 15,000ಕ್ಕೆ ಇಳಿಸಲಾಗಿದ್ದು, ಇತರ ಪ್ರಯೋಜನಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

  • ರೆನಾಲ್ಟ್ ಟ್ರೈಬರ್ ಬೆಲೆಯನ್ನು ರೂ 6.33 ಲಕ್ಷದಿಂದ ರೂ 8.97 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಕೈಗರ್

ಆಫರ್‌ಗಳು

ಮೊತ್ತ

BS6 ಹಂತ I (MY22 ಮತ್ತು MY23)

BS6 ಹಂತ II MY23

ನಗದು ರಿಯಾಯಿತಿ

ರೂ 25,000 ತನಕ

ರೂ 25,000 ತನಕ

ವಿನಿಮಯ ಬೋನಸ್

ರೂ 25,000 ತನಕ

ರೂ 20,000 ತನಕ

ಕಾರ್ಪೋರೇಟ್ ರಿಯಾಯಿತಿ

ರೂ 12,000 ತನಕ

ರೂ 12,000 ತನಕ

ಲಾಯಲ್ಟಿ ಬೋನಸ್

ಅನ್ವಯವಾಗುವುದಿಲ್ಲ

ರೂ 20,000 ತನಕ

ಒಟ್ಟು ಪ್ರಯೋಜನಗಳು

ರೂ 62,000 ತನಕ

ರೂ 77,000 ತನಕ

  • ರೆನಾಲ್ಟ್ ಕೈಗರ್ ಸಬ್‌ಕಾಂಪ್ಯಾಕ್ಟ್ SUVಯ ಇತ್ತೀಚಿನ ಯೂನಿಟ್‌ಗಳಿಗೆ ಈ ತಿಂಗಳು ಅತ್ಯಂತ ಹೆಚ್ಚಿನ ಉಳಿತಾಯ ಇರುವಂತೆ ತೋರುತ್ತದೆ.

  • ಕೈಗರ್‌ನ BS6 ಹಂತ II ಯೂನಿಟ್‌ಗಳು ಕೂಡಾ ರೂ 20,000ದಷ್ಟು ಅತ್ಯಂತ ಹೆಚ್ಚಿನ ಬೋನಸ್‌ನೊಂದಿಗೆ ಬರುತ್ತದೆ.

  • BS6 ಹಂತ II ಅನುಸರಣಾ ಮಾಡೆಲ್‌ಗಳ RXT ಮತ್ತು RXT(O) ಟರ್ಬೋ ವೇರಿಯೆಂಟ್‌ಗಳಿಗೆ ಮಾತ್ರ ರೂ 25,000ದ ನಗದು ರಿಯಾಯಿತಿ ಮಾತ್ರ ಅನ್ವಯವಾಗುತ್ತದೆ ಮತ್ತು RXZ ಟ್ರಿಮ್‌ಗಳಿಗೆ ರೂ 10,000ಕ್ಕೆ ಕಡಿಮೆಯಾಗುತ್ತದೆ.

  • BS6 ಹಂತ I ಮಾಡೆಲ್‌ಗಳಿಗೆ ಉಲ್ಲೇಖಿಸಲಾದ ನಗದು ರಿಯಾಯಿತಿಯು ಎನರ್ಜಿ AMT ವೇರಿಯೆಂಟ್‌ಗಳಿಗೆ ಮಾತ್ರ ಮಾನ್ಯವಾಗಿರುತ್ತದೆ ಮತ್ತು ಎನರ್ಜಿ ಹಾಗೂ ಟರ್ಬೋ ವೇರಿಯೆಂಟ್‌ಗಳಿಗೆ ರೂ 15,000 ಕ್ಕೆ ಇಳಿದಿದೆ.

  • ವಾಡಿಕೆಯಂತೆ, ಆರಂಭಿಕ ಹಂತದ RXE ಟ್ರಿಮ್ ಕೇವಲ ಲಾಯಲ್ಟಿ ಬೋನಸ್‌ಗೆ ಮಾತ್ರ ಅರ್ಹವಾಗಿರುತ್ತದೆ.

  • ಕೈಗರ್ ಬೆಲೆಯನ್ನು ರೂ 6.50 ಲಕ್ಷದಿಂದ ರೂ 11.23 ಲಕ್ಷದ ತನಕ ನಿಗದಿಪಡಿಸಲಾಗಿದೆ.

ಇದನ್ನೂ ಓದಿ: 16 ವರ್ಷಗಳಲ್ಲಿ ರೆನಾಲ್ಟ್ ಮುಟ್ಟುತ್ತಿದೆ 10 ಲಕ್ಷ ಉತ್ಪಾದನೆಯ ಮೈಲುಗಲ್ಲು

ಗಮನಿಸಿ

  • ರೆನಾಲ್ಟ್ ಎಲ್ಲಾ ಕಾರುಗಳ ಮೇಲೆ ರೂ 5,000 ಗ್ರಾಮೀಣ ಆಫರ್‌ಗಳನ್ನೂ ನೀಡುತ್ತಿದೆ, ಆದರೆ ಇದನ್ನು ಕಾರ್ಪೋರೇಟ್ ರಿಯಾಯಿತಿಯೊಂದಿಗೆ ಜೋಡಿಸಲಾಗುವುದಿಲ್ಲ.

  • ಮೇಲೆ ಉಲ್ಲೇಖಿಸಿದ ಎಲ್ಲಾ ಆಫರ್‌ಗಳು ಆಯ್ಕೆ ಮಾಡಿದ ವೇರಿಯೆಂಟ್‌ಗಳನ್ನು ಆಧರಿಸಿ ವ್ಯತ್ಯಾಸವಾಗುತ್ತದೆ.

  • ಅಲ್ಲದೇ ಸ್ಕ್ರಾಪೇಜ್ ಪ್ರಯೋಜನವಾಗಿ ಎಲ್ಲಾ ಕಾರುಗಳ ಮೇಲೆ ರೂ 10,000 ರಿಯಾಯಿತಿಯನ್ನು ನೀಡಲಾಗಿದೆ.

  • ಖರೀದಿಸುವ ರಾಜ್ಯ ಮತ್ತು ನಗರವನ್ನು ಆಧರಿಸಿ ಮೇಲೆ ಉಲ್ಲೇಖಿಸಲಾದ ಆಫರ್‌ಗಳಲ್ಲಿ ವ್ಯತ್ಯಾಸ ಉಂಟಾಗುತ್ತದೆ, ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಿಮ್ಮ ಹತ್ತಿರದ ರೆನಾಲ್ಟ್ ಡೀಲರ್‌ಶಿಪ್ ಅನ್ನು ಸಂಪರ್ಕಿಸಿ

  • ಎಲ್ಲಾ ಬೆಲೆಗಳು ಎಕ್ಸ್-ಶೋರೂಂ ದೆಹಲಿ ಪ್ರಕಾರ

ಇನ್ನಷ್ಟು ಓದಿ: ಕ್ವಿಡ್ ಆಟೋಮ್ಯಾಟಿಕ್

s
ಅವರಿಂದ ಪ್ರಕಟಿಸಲಾಗಿದೆ

shreyash

  • 22 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ರೆನಾಲ್ಟ್ ಕ್ವಿಡ್

Read Full News

explore similar ಕಾರುಗಳು

trendingಹ್ಯಾಚ್ಬ್ಯಾಕ್ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ