• English
  • Login / Register

ಎಕ್ಸ್‌ಕ್ಲೂಸಿವ್: ಇಂದು ಬಿಡುಗಡೆಯಾದ BYD Atto 3ಯ ಎರಡು ಹೊಸ ಲೋವರ್ ಎಂಡ್ ವೇರಿಯಂಟ್‌ಗಳ ವಿವರಗಳು ಬಹಿರಂಗ

ಬಿವೈಡಿ ಆಟ್ಟೋ 3 ಗಾಗಿ samarth ಮೂಲಕ ಜುಲೈ 11, 2024 02:18 pm ರಂದು ಪ್ರಕಟಿಸಲಾಗಿದೆ

  • 20 Views
  • ಕಾಮೆಂಟ್‌ ಅನ್ನು ಬರೆಯಿರಿ

ಹೊಸ ಬೇಸ್‌ ಆವೃತ್ತಿಯು ಚಿಕ್ಕದಾದ 50 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್ ಅನ್ನು ಹೊಂದಿರುತ್ತದೆ ಮತ್ತು ಕೆಲವು ಫೀಚರ್‌ಗಳನ್ನು ಕಳೆದುಕೊಳ್ಳುತ್ತದೆ

BYD Atto 3 Lower-end Variants Details Revealed

  • ಬಿವೈಡಿ ಆಟ್ಟೋ 3 ಯು ಡೈನಾಮಿಕ್ ಮತ್ತು ಪ್ರೀಮಿಯಂ ಎಂಬ ಹೊಸ ಎರಡು ಪ್ರವೇಶ ಮಟ್ಟದ ಆವೃತ್ತಿಗಳನ್ನು ಗಳನ್ನು ಪಡೆಯುವುದರೊಂದಿಗೆ ಸುಪೀರಿಯರ್ ಎಂಬ ಟಾಪ್-ಸ್ಪೆಕ್ ಆವೃತ್ತಿಯನ್ನು ಹೊಂದಿದೆ.

  • ಡೈನಾಮಿಕ್ ಆವೃತ್ತಿಯು ಚಾಲಿತ ಟೈಲ್‌ಗೇಟ್ ಮತ್ತು ಅಡಾಪ್ಟಿವ್ ಎಲ್‌ಇಡಿ ಹೆಡ್‌ಲೈಟ್‌ಗಳಂತಹ ಫೀಚರ್‌ಗಳನ್ನು ಪಡೆಯುವುದಿಲ್ಲ. 

  • ಇದು ಫೀವರ್‌ ಸ್ಪೀಕರ್‌ಗಳನ್ನು ಹೊಂದಿರುತ್ತದೆ ಮತ್ತು ಏಕ-ಬಣ್ಣದ ಆಂಬಿಯೆಂಟ್ ಲೈಟಿಂಗ್‌ನೊಂದಿಗೆ ಬರುತ್ತದೆ.

  • ಬೇಸ್‌ ವೇರಿಯೆಂಟ್‌ 50 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್ ಅನ್ನು ಹೊಂದಿರುತ್ತದೆ ಮತ್ತು 468 ಕಿಮೀಗಳ ಕ್ಲೈಮ್ ಮಾಡಲಾದ-ARAI ರೇಂಜ್‌ ಅನ್ನು ನೀಡುತ್ತದೆ. 

  • ಇತರ ಎರಡು ಆವೃತ್ತಿಗಳು 60 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತವೆ ಮತ್ತು 521 ಕಿಮೀ ಕ್ಲೈಮ್‌ ಮಾಡಲಾದ ರೇಂಜ್‌ ಅನ್ನು ನೀಡುತ್ತವೆ.

  • ಹೊಸ ಆವೃತ್ತಿಗಳ ಬೆಲೆಗಳು 24.99 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ.

ಬಿವೈಡಿ ಇಂಡಿಯಾವು Atto 3 ಯ ಹೊಸ, ಹೆಚ್ಚು ಕೈಗೆಟುಕುವ ಆವೃತ್ತಿಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು, ಜುಲೈ 10 ರಂದು ಬಿಡುಗಡೆಗೊಂಡಿದೆ. ಪರಿಷ್ಕೃತ ಅಟ್ಟೊ 3 ರ ಪರಿಚಯಕ್ಕೆ ಮುಂಚಿತವಾಗಿ ನಾವು ಈಗ ಎಕ್ಸ್‌ಕ್ಲೂಸಿವ್‌ ಆಗಿ ವಿವರಗಳನ್ನು ಪಡೆದುಕೊಂಡಿದ್ದೇವೆ. ಈ ಹಿಂದೆ ಒಂದೇ ಆವೃತ್ತಿಯಲ್ಲಿ ಮಾತ್ರ ಲಭ್ಯವಿತ್ತು, ಅಟ್ಟೊ 3 ಅನ್ನು ಈಗ ಮೂರು ಆವೃತ್ತಿಗಳಲ್ಲಿ ನೀಡುತ್ತಿದೆ, ಅವುಗಳೆಂದರೆ, ಡೈನಾಮಿಕ್, ಪ್ರೀಮಿಯಂ ಮತ್ತು ಸುಪೀರಿಯರ್. ಪ್ರತಿ ಹೊಸ ಆವೃತ್ತಿಗಳ ವಿವರವಾದ ವಿಶೇಷಣಗಳು ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ: 

ಪವರ್‌ಟ್ರೈನ್‌

ಅಟ್ಟೊ 3 ರ ಬೇಸ್-ಸ್ಪೆಕ್ ಡೈನಾಮಿಕ್ ಆವೃತ್ತಿಯು ಈಗ ಚಿಕ್ಕದಾದ 50 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್ ಅನ್ನು ಹೊಂದಿರುತ್ತದೆ, ಆದರೆ ಇ-ಮೋಟರ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ, ಆದರೆ ಇದು ತನ್ನ ಟಾಪ್‌ ಆವೃತ್ತಿಯಂತೆ ಅದೇ ಪವರ್‌ ಮತ್ತು ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಹೊಸ ಬೇಸ್‌ ಆವೃತ್ತಿಯು 468 ಕಿಮೀ (ARAI) ರೇಂಜ್‌ ಅನ್ನು ನೀಡುತ್ತದೆ. ಮಿಡ್-ಸ್ಪೆಕ್ ಆವೃತ್ತಿಯು ಟಾಪ್ ಟ್ರಿಮ್‌ನಂತೆಯೇ ಅದೇ ಬ್ಯಾಟರಿ ಪ್ಯಾಕ್ ಅನ್ನು ಉಳಿಸಿಕೊಂಡಿದೆ, ಇದು ಕ್ಲೈಮ್ ಮಾಡಲಾದ 521 ಕಿಮೀ ರೇಂಜ್‌ ಅನ್ನು ನೀಡುತ್ತದೆ.

ಎಲೆಕ್ಟ್ರಿಕ್ SUV ಯ ಮುಂಬರುವ ಹೊಸ ಆವೃತ್ತಿಗಳ ಬಗ್ಗೆ ವಿವರವಾದ ವಿಶೇಷಣಗಳು ಇಲ್ಲಿವೆ:

ವಿಶೇಷಣಗಳು

ಡೈನಾಮಿಕ್‌(ಹೊಸ)

ಪ್ರೀಮಿಯಮ್‌ (ಹೊಸ)

ಸುಪಿರೀಯರ್‌ 

ಬ್ಯಾಟರಿ ಪ್ಯಾಕ್‌

50 ಕಿವ್ಯಾಟ್‌

60 ಕಿ.ವ್ಯಾಟ್‌

60 ಕಿವ್ಯಾಟ್‌

ಪವರ್‌

204 ಪಿಎಸ್‌

204 ಪಿಎಸ್‌

204 ಪಿಎಸ್‌

ಟಾರ್ಕ್‌

310 ಎನ್‌ಎಮ್‌

310 ಎನ್‌ಎಮ್‌

310 ಎನ್‌ಎಮ್‌

ಕ್ಲೈಮ್‌ ಮಾಡಲಾದ ರೇಂಜ್‌ (ARAI)

468 ಕಿ.ಮೀ

521 ಕಿ.ಮೀ

521 ಕಿ.ಮೀ

ಇದನ್ನೂ ಓದಿ: ಬೆಂಝ್‌ನ ಕೈಗೆಟಕುವ ಬೆಲೆಯ ಲಕ್ಷುರಿ ಇವಿ Mercedes-Benz EQA ಬಿಡುಗಡೆ

BYD Atto 3 Charging Port

ಆಟ್ಟೋ 3 ಯು ಬಿವೈಡಿಯ ಬ್ಲೇಡ್ ಬ್ಯಾಟರಿಯೊಂದಿಗೆ ಬರುತ್ತದೆ, ಇದು ಡಿಸಿ ಚಾರ್ಜರ್ ಅನ್ನು ಬಳಸಿಕೊಂಡು ಕೇವಲ 50 ನಿಮಿಷಗಳಲ್ಲಿ 0 ದಿಂದ 80 ಪ್ರತಿಶತದವರೆಗೆ ಚಾರ್ಜ್ ಮಾಡಬಹುದಾಗಿದೆ. ಡೈನಾಮಿಕ್ ಆವೃತ್ತಿಯು 70 ಕಿ.ವ್ಯಾಟ್‌ ಡಿಸಿ ಚಾರ್ಜಿಂಗ್ ಆಯ್ಕೆಯನ್ನು ಬೆಂಬಲಿಸುತ್ತದೆ, ಆದರೆ ಪ್ರೀಮಿಯಂ ಮತ್ತು ಸುಪೀರಿಯರ್ ಆವೃತ್ತಿಗಳು 80 ಕಿ.ವ್ಯಾಟ್‌ ಚಾರ್ಜಿಂಗ್ ಆಯ್ಕೆಯನ್ನು ಬೆಂಬಲಿಸುತ್ತದೆ.

ಫೀಚರ್‌ಗಳು ಮತ್ತು ಸುರಕ್ಷತೆ

BYD Atto 3 Interior

ಲೋವರ್‌ ವೇರಿಯೇಂಟ್‌ ಆದ ಡೈನಾಮಿಕ್ ಚಾಲಿತ ಟೈಲ್‌ಗೇಟ್, ಬಹು-ಬಣ್ಣದ ಆಂಬಿಯೆಂಟ್ ಲೈಟಿಂಗ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿರುವುದಿಲ್ಲ ಮತ್ತು ಎಂಟು-ಸ್ಪೀಕರ್ ಸೌಂಡ್ ಸಿಸ್ಟಮ್‌ಗೆ ವಿರುದ್ಧವಾಗಿ ಕೇವಲ 6 ಸ್ಪೀಕರ್‌ಗಳನ್ನು ಹೊಂದಿರುತ್ತದೆ. ಇದು ಅಡಾಪ್ಟಿವ್ ಎಲ್‌ಇಡಿ ಹೆಡ್‌ಲೈಟ್‌ಗಳು ಮತ್ತು ADAS (ಈಗ ಟಾಪ್‌ ಮೊಡೆಲ್‌ಗೆ ಸೀಮಿತವಾಗಿದೆ) ಅನ್ನು ಕಳೆದುಕೊಳ್ಳುತ್ತದೆ.

BYD Atto 3 Panoramic Sunroof

ಆದಾಗ್ಯೂ, ಎಲ್ಲಾ ಮೂರು ಆವೃತ್ತಿಗಳು ಪ್ಯಾನರೋಮಿಕ್‌ ಸನ್‌ರೂಫ್, 6-ವೇ ಪವರ್-ಹೊಂದಾಣಿಕೆ ಮಾಡಬಹುದಾದ ಚಾಲಕ ಸೀಟ್, 60:40 ಸ್ಪ್ಲಿಟ್ ಹಿಂಬದಿ ಸೀಟುಗಳು, 5-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು 12.8-ಇಂಚಿನ ತಿರುಗುವ ಟಚ್‌ಸ್ಕ್ರೀನ್‌ನೊಂದಿಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇಯೊಂದಿಗೆ ಬರುತ್ತವೆ.

ಸುರಕ್ಷತೆಯ ದೃಷ್ಟಿಯಿಂದ, ಎಲ್ಲಾ ಆವೃತ್ತಿಗಳು ಎಲೆಕ್ಟ್ರಾನಿಕ್ ಸ್ಟೇಬಿಲಿಟಿ ಪ್ರೋಗ್ರಾಂ (ESP), ಹಿಲ್ ಡಿಸೆಂಟ್ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), 360-ಡಿಗ್ರಿ ಕ್ಯಾಮೆರಾ ಮತ್ತು ISOFIX ಚೈಲ್ಡ್-ಸೀಟ್ ಆಂಕಾರೇಜ್‌ಗಳ ಜೊತೆಗೆ ಏಳು ಏರ್‌ಬ್ಯಾಗ್‌ಗಳನ್ನು ಪ್ರಮಾಣಿತವಾಗಿ ಅಳವಡಿಸಿಕೊಂಡಿವೆ.  

ಬೆಲೆಗಳು ಮತ್ತು ಪ್ರತಿಸ್ಪರ್ಧಿಗಳು

BYD Atto 3

ಬಿವೈಡಿಯು ಜುಲೈ 10ರಂದು ಆಟ್ಟೋ 3 ನ ಹೊಸ ಆವೃತ್ತಿಗಳ ಬೆಲೆಗಳನ್ನು ಬಹಿರಂಗಪಡಿಸಿದೆ. ಪ್ರಸ್ತುತ, Atto 3 ಬೆಲೆಗಳು 24.99 ಲಕ್ಷ ರೂ.ನಿಂದ 34.49 ಲಕ್ಷ ರೂ.ಗಳ (ಎಕ್ಸ್ ಶೋ ರೂಂ) ನಡುವೆ ಇರುತ್ತದೆ. ಇದು ಎಮ್‌ಜಿ ಜೆಡ್‌ಎಸ್‌ ಇವಿ ಮತ್ತು ಮುಂಬರುವ ಟಾಟಾ ಕರ್ವ್‌ ಇವಿ, ಮಾರುತಿ ಸುಜುಕಿ ಇವಿಎಕ್ಸ್‌ ಮತ್ತು ಹ್ಯುಂಡೈ ಕ್ರೆಟಾ ಇವಿ ಗಳನ್ನು ಪ್ರತಿಸ್ಪರ್ಧಿಯಾಗಿ ಮಾಡುತ್ತದೆ.

ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸಾಪ್‌ ಚಾನೆಲ್‌ಅನ್ನು ಫಾಲೋ ಮಾಡಿ

ಇನ್ನಷ್ಟು ಓದಿ: ಆಟ್ಟೋ 3 ಆಟೋಮ್ಯಾಟಿಕ್‌  

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on BYD ಆಟ್ಟೋ 3

Read Full News

explore ಇನ್ನಷ್ಟು on ಬಿವೈಡಿ ಆಟ್ಟೋ 3

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಲೆಕ್ಟ್ರಿಕ್ ಕಾರುಗಳು

  • ಪಾಪ್ಯುಲರ್
  • ಉಪಕಮಿಂಗ್
×
We need your ನಗರ to customize your experience