ಎಕ್ಸ್‌ಕ್ಲೂಸಿವ್:ನವೀಕೃತ ಹ್ಯುಂಡೈ i20 ನ ಸ್ಪೈ ಶಾಟ್ ಭಾರತದಲ್ಲೂ ಸಿಕ್ತು!
ಹಬ್ಬದ ಸೀಸನ್‌ನಲ್ಲಿ ಮಾರಾಟಕ್ಕೆ ಬರುವ ನಿರೀಕ್ಷೆಯಿದೆ
- ಹ್ಯುಂಡೈ 2020 ಅಂತ್ಯದಿಂದ ಜಾಗತಿಕವಾಗಿ ನವೀಕೃತ i20 ಅನ್ನು ಪರೀಕ್ಷಿಸುತ್ತಿದೆ.
- ಭಾರತದ ಸ್ಪೈ ಶಾಟ್‌ಗಳು, ಹೊಸ ಅಲಾಯ್ ವ್ಹೀಲ್‌ಗಳನ್ನು ಬಹಿರಂಗಪಡಿಸಿವೆ; ಇದು ಹಿಂಭಾಗ ಮತ್ತು ಮುಂಭಾಗದಲ್ಲಿ ಸ್ವಲ್ಪ ಮಟ್ಟಿಗೆ ಮರೆಮಾಚಲ್ಪಟ್ಟಿತ್ತು.
- ಒಳಭಾಗದಲ್ಲಿ, ಇದು 10.25-ಇಂಚಿನ ಟಚ್‌ಸ್ಕ್ರೀನ್ ಮತ್ತು ಡ್ಯಾಶ್‌ಕ್ಯಾಮ್‌ನೊಂದಿಗೆ (ಹೊಸ) ಕಂಡುಬಂದಿದೆ.
- ಆ್ಯಂಬಿಯೆಂಟ್ ಲೈಟ್‌ಗಳು ಮತ್ತು ವೆಂಟಿಲೇಟೆಡ್ ಮುಂಭಾಗದ ಸೀಟುಗಳು ಇದರಲ್ಲಿನ ಹೆಚ್ಚುವರಿ ಫೀಚರ್‌ಗಳಾಗಿರಬಹುದು.
- ಪ್ರಸ್ತುತ ಮಾದರಿಯಂತೆ, 1.2-ಲೀಟರ್ಎನ್.ಎ ಮತ್ತು 1-ಲೀಟರ್ ಟರ್ಬೋ-ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಪಡೆಯುವ ನಿರೀಕ್ಷೆಯಿದೆ.
- ಹ್ಯುಂಡೈ ಇದನ್ನು 8 ಲಕ್ಷದ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಬಹುದು (ಎಕ್ಸ್-ಶೋರೂಮ್).
2022 ರ ಅಂತ್ಯದ ವೇಳೆಗೆ, ಈನವೀಕೃತ ಹ್ಯುಂಡೈ i20 ಯ ಮೊದಲ ಕೆಲವು ಸ್ಪೈ ಚಿತ್ರಗಳು ಅದರ ತಾಯ್ನಾಡಿನಲ್ಲಿ ಆನ್‌ಲೈನನಲ್ಲಿ ಕಾಣಿಸಿಕೊಂಡವು. ಈಗ, ಭಾರತದಲ್ಲಿಯೇ ನವೀಕೃತ ಹ್ಯಾಚ್‌ಬ್ಯಾಕ್‌ನ ಮೊದಲ ಸ್ಪೈ ಚಿತ್ರಗಳು ನಮಗೆಎಕ್ಸ್‌ಕ್ಲೂಸಿವ್ ಆಗಿ ದೊರೆತಿವೆ.
ಏನನ್ನು ನೋಡಬಹುದು?
ನವೀಕೃತ i20ಯು ಹಿಂಭಾಗ ಮತ್ತು ಮುಂಭಾಗಗಳಲ್ಲಿ ಕಪ್ಪು ಹೊದಿಕೆಯಿಂದ ಮರೆಮಾಚಲ್ಪಟ್ಟಿದ್ದರೂ ಇದು ಸಿಲ್ವರ್ ಪೇಂಟ್‌ನ ಫಿನಿಶಿಂಗ್ ಪಡೆದಿರುವುದನ್ನು ನಾವು ಕಂಡುಕೊಂಡಿದ್ದೇವೆ. ಈ ಸ್ಪೈ ಚಿತ್ರಗಳು ನವೀಕೃತ i20ಯ ಪರಿಷ್ಕೃತ ಅಲಾಯ್ ವ್ಹೀಲ್ ವಿನ್ಯಾಸದ ನೋಟವನ್ನು ನೀಡುತ್ತದೆ. ಇತ್ತೀಚಿನ ಚಿತ್ರಗಳಲ್ಲಿ ಮುಂಭಾಗವು ಗೋಚರಿಸದಿದ್ದರೂ, ಜಾಗತಿಕವಾಗಿ ಬಹಿರಂಗಪಡಿಸಿದ ನವೀಕೃತ i20 ನಲ್ಲಿ ಕಂಡುಬರುವ ಬದಲಾವಣೆಗಳಿಗೆ ಅನುಗುಣವಾಗಿ ಅದರ ಬದಲಾವಣೆಗಳನ್ನು ನಿರೀಕ್ಷಿಸಬಹುದು. ಇದು ಟ್ವೀಕ್ ಮಾಡಲಾದ ಗ್ರಿಲ್ ಡಿಸೈನ್, ನವೀಕೃತ ಎಲ್‌ಇಡಿ ಲೈಟಿಂಗ್ ಮತ್ತು ಟ್ವೀಕ್ ಮಾಡಲಾದ ಬಂಪರ್‌ಗಳನ್ನು ಹೊಂದಿರಬಹುದಾಗಿದೆ.
ಇಂಟೀರಿಯರ್ ಅಪ್‌ಡೇಟ್‌ಗಳು
ನವೀಕೃತ i20ಯ ಇಂಟೀರಿಯರ್ ಸ್ಪಷ್ಟ ಚಿತ್ರಣ ದೊರೆಯದಿದ್ದರೂ, ಹ್ಯುಂಡೈ ಇದಕ್ಕೆ ಹೊಸ ಮೇಲ್ಗವಸು ಮತ್ತು ಹೊಸ ಕ್ಯಾಬಿನ್ ಥೀಮ್ ಅನ್ನು ನೀಡಬಹುದೆಂದು ನಾವು ಭಾವಿಸುತ್ತೇವೆ.ಅಂದರೆ, ಟಚ್‌ಸ್ಕ್ರೀನ್ ಸಿಸ್ಟಮ್ (ಪ್ರಸ್ತುತ ಮಾಡೆಲ್‌ನಂತೆಯೇ 10.25-ಇಂಚಿನ ಯೂನಿಟ್) ಮತ್ತು ಡ್ಯಾಶ್‌ಕ್ಯಾಮ್ (ಹೊಸ ಫೀಚರ್) ಗಳನ್ನು ಇದು ಪಡೆಯಬಹುದು. ವೆನ್ಯು ಎನ್ ಲೈನ್ ಮತ್ತು ಮುಂಬರುವ ಎಕ್ಸ್‌ಟರ್ ಮೈಕ್ರೋ ಎಸ್‌ಯುವಿ ನಂತರ ಭಾರತದಲ್ಲಿ ಡ್ಯಾಶ್‌ಕ್ಯಾಮ್ ಅನ್ನು ಪಡೆಯುತ್ತಿರುವ ಮೂರನೇ ಹ್ಯುಂಡೈ ಕಾರು ಈ ನವೀಕೃತ i20 ಆಗಿರಬಹುದು.
ಪ್ರಸ್ತುತi20ಯ ಕ್ಯಾಬಿನ್
ನವೀಕೃತ i20ಯಲ್ಲಿರುವ ಇತರ ಉಪಕರಣಗಳೆಂದರೆ ಆಟೋ ಕ್ಲೈಮೆಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್, ಕನೆಕ್ಟೆಡ್ ಕಾರ್ ಟೆಕ್, ಮತ್ತು ವೈರ್‌ಲೆಸ್ ಫೋನ್ ಚಾರ್ಜಿಂಗ್. ಹೊಸ ಫೀಚರ್‌ಗಳೆಂದರೆ ವೆಂಟಿಲೇಟೆಡ್ ಮುಂಭಾಗದ ಸೀಟುಗಳು ಮತ್ತು ಆ್ಯಂಬಿಯೆಂಟ್ ಲೈಟಿಂಗ್‌ಗಳನ್ನು ಇದು ಪಡೆಯಬಹುದು.
ಸುರಕ್ಷತೆಯ ವಿಷಯದಲ್ಲಿ, ಈ ನವೀಕೃತ i20 ಪ್ರಮಾಣಿತವಾಗಿ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ಇಎಸ್‌ಸಿ), ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್‌ಗಳು, ಮತ್ತು ರಿವರ್ಸಿಂಗ್ ಕ್ಯಾಮರಾಗಳನ್ನು ಹೊಂದಿದೆ.
ಇದನ್ನೂ ಓದಿ:ಎಐಪ್ರಕಾರ ರೂ. 20 ಲಕ್ಷದೊಳಗಿನ ಭಾರತದಲ್ಲಿನ ಟಾಪ್ 3 ಫ್ಯಾಮಿಲಿ ಎಸ್‌ಯುವಿಗಳು ಯಾವುವು?
ಪವರ್‌ಟ್ರೇನ್‌ನಲ್ಲಿಏನಾದರೂ ಬದಲಾವಣೆಯಿದೆಯೇ?
ಹ್ಯುಂಡೈ ತನ್ನ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ನ ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಅನಾವಶ್ಯಕ ಬದಲಾವಣೆಯನ್ನು ಮಾಡಲಾರದು. ಇದು 1.2-ಲೀಟರ್ ನೈಸರ್ಗಿಕ ಆ್ಯಸ್ಪಿರೇಟೆಡ್(83PS/114Nm) ಮತ್ತು 1-ಲೀಟರ್ ಟರ್ಬೋ-ಪೆಟ್ರೋಲ್ (120PS/172Nm) ಎಂಜಿನ್ ಆಯ್ಕೆಗಳನ್ನು ಪಡೆಯುತ್ತದೆ. ಮೊದಲನೆಯದನ್ನು 5-ಸ್ಪೀಡ್ಎಂಟಿಅಥವಾ ಸಿವಿಟಿಯೊಂದಿಗೆ ಜೋಡಿಸಲ್ಪಟ್ಟರೆ,ಎರಡನೆಯದನ್ನು 7-ಸ್ಪೀಡ್ ಡಿಸಿಟಿ (ಡ್ಯುಯಲ್-ಕ್ಲಚ್ ಟ್ರಾನ್ಸ್‌ಮಿಷನ್)ನೊಂದಿಗೆ ನೀಡಲಾಗುತ್ತದೆ.
ಭಾರತದಲ್ಲಿ ಬಿಡುಗಡೆ ಮತ್ತು ಬೆಲೆ
ಹ್ಯುಂಡೈ ಈ ನವೀಕೃತ i20 ಅನ್ನು ಭಾರತದಲ್ಲಿ ಹಬ್ಬಗಳ ಸೀಸನ್‌ನಲ್ಲಿ ಬಿಡುಗಡೆಗೊಳಿಸಬಹುದೆಂದು ನಾವು ಭಾವಿಸಿದ್ದೇವೆ. ಇದರ ಆರಂಭಿಕ ಬೆಲೆಯು ರೂ. 8 ಲಕ್ಷದಿಂದ (ಎಕ್ಸ್-ಶೋರೂಮ್) ನಿಗದಿಪಡಿಸಬಹುದು. ಈ ಪ್ರೀಮಿಯಂ ಹ್ಯಾಚ್‌ಬ್ಯಾಕ್ಮಾರುತಿ ಬಲೆನೊ,ಟಾಟಾ ಆಲ್ಟ್ರೋಸ್ಮತ್ತು ಟೊಯೋಟಾ ಗ್ಲಾನ್ಝಾಗೆ ಸ್ಪರ್ಧೆಯನ್ನು ಒಡ್ಡುತ್ತದೆ.
ಇನ್ನಷ್ಟು ಇಲ್ಲಿ ಓದಿ :i20 ಆನ್ ರೋಡ್ ಬೆಲೆ
Write your Comment on Hyundai I20
Ab Company ko isme bhi Verna wala 159bhp wala engine dena chahiye.