Login or Register ಅತ್ಯುತ್ತಮ CarDekho experience ಗೆ
Login

ಟಾಟಾ ತನ್ನ Nexonನಲ್ಲಿ ಮಾಡಿದ ತಂತ್ರವನ್ನು ಮುಂಬರುವ Carens ಫೇಸ್‌ಲಿಫ್ಟ್‌ನಲ್ಲಿ ಅನುಸರಿಸಿದ Kia

ಕಿಯಾ ಕೆರೆನ್ಸ್ ಗಾಗಿ anonymous ಮೂಲಕ ಜನವರಿ 28, 2025 06:20 pm ರಂದು ಪ್ರಕಟಿಸಲಾಗಿದೆ

ಕ್ಯಾರೆನ್ಸ್‌ನ ಮುಂಬರುವ ಫೇಸ್‌ಲಿಫ್ಟ್ ಒಳಗೆ ಮತ್ತು ಹೊರಭಾಗದಲ್ಲಿ ಭಾರೀ ಪರಿಷ್ಕರಣೆಗಳನ್ನು ಪಡೆಯುತ್ತದೆ ಮತ್ತು ಇದರೊಂದಿಗೆ ಯಾವುದೇ ಎಕ್ಸ್‌ಟೀರಿಯರ್‌ ಅಥವಾ ಇಂಟೀರಿಯರ್‌ ಆಪ್‌ಡೇಟ್‌ಗಳಿಲ್ಲದೆ ಪ್ರಸ್ತುತ ಕ್ಯಾರೆನ್ಸ್ ಅನ್ನು ಸಹ ಮಾರಾಟ ಮಾಡಲಾಗುತ್ತದೆ

ಕಿಯಾ ಕಂಪನಿಯು ಕ್ಯಾರೆನ್ಸ್‌ಗೆ ಪ್ರಮುಖ ಆಪ್‌ಡೇಟ್‌ ಅನ್ನು ನೀಡಲು ಸಜ್ಜಾಗಿದೆ, ಇದು 2022ರಲ್ಲಿ ಬಿಡುಗಡೆಯಾದ ನಂತರ ಮೊದಲ ಬಾರಿಗೆ ಆಪ್‌ಡೇಟ್‌ ಅನ್ನು ಪಡೆಯುತ್ತಿದೆ. ಆದರೆ, ವಿನ್ಯಾಸ ಮತ್ತು ಇಂಟೀರಿಯರ್‌ನಲ್ಲಿ ಗಮನಾರ್ಹ ಬದಲಾವಣೆಗಳ ಹೊರತಾಗಿಯೂ, ಇದು ಜನರೇಶನ್‌ನ ಆಪ್‌ಡೇಟ್‌ ಅನ್ನು ಪಡೆಯುವುದಿಲ್ಲ ಮತ್ತು ಇದನ್ನು ಪ್ರಸ್ತುತ ಮೊಡೆಲ್‌ನ ಜೊತೆಗೆ ಮಾರಾಟ ಮಾಡಲಾಗುತ್ತದೆ. ಈ ವಿಧಾನವು ಹೊಸದಲ್ಲ, ನಾವು ಇತ್ತೀಚೆಗೆ ಫೇಸ್‌ಲಿಫ್ಟೆಡ್ ಟಾಟಾ ನೆಕ್ಸಾನ್ ಮತ್ತು ಮಾರುತಿ ಬಲೆನೊದಂತಹ ಮೊಡೆಲ್‌ಗಳಲ್ಲಿ ನೋಡಿದ್ದೇವೆ, ಅಲ್ಲಿ ಎರಡೂ ಕಾರುಗಳು ಭಾರೀ ವಿನ್ಯಾಸ ಪರಿಷ್ಕರಣೆಗಳನ್ನು ಪಡೆದರೂ, ಅವು ಹೊಸ ಜನರೇಶನ್‌ನ ಮೊಡೆಲ್‌ಗಳಲ್ಲ

ಈ ವರದಿಯಲ್ಲಿ, 2025ರ ಕಿಯಾ ಕ್ಯಾರೆನ್ಸ್ ಇದೇ ರೀತಿಯ ತಂತ್ರವನ್ನು ಹೇಗೆ ಅನುಸರಿಸುತ್ತದೆ ಎಂಬುದನ್ನು ಅನ್ವೇಷಿಸೋಣ.

2025 ಕಿಯಾ ಕ್ಯಾರೆನ್ಸ್ ವಿನ್ಯಾಸದ ಆಪ್‌ಡೇಟ್‌ಗಳು

ಹಿಂದಿನ ಸ್ಪೈ ಶಾಟ್‌ಗಳ ಆಧಾರದ ಮೇಲೆ, ಮುಂಬರುವ ಕ್ಯಾರೆನ್ಸ್ ಫೇಸ್‌ಲಿಫ್ಟ್ ನಯವಾದ ಎಲ್‌ಇಡಿ ಡಿಆರ್‌ಎಲ್‌ಗಳು, ಆಪ್‌ಡೇಟ್‌ ಮಾಡಲಾದ ಹೆಡ್‌ಲೈಟ್‌ಗಳು, ಮರುವಿನ್ಯಾಸಗೊಳಿಸಲಾದ ಅಲಾಯ್ ವೀಲ್‌ಗಳು ಮತ್ತು ಟ್ವೀಕ್ ಮಾಡಲಾದ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳೊಂದಿಗೆ ರಿಫ್ರೆಶ್ ಮಾಡಿದ ಹೊರಭಾಗವನ್ನು ಹೊಂದಿರುತ್ತದೆ. ಈ ಆಪ್‌ಡೇಟ್‌ಗಳು 2025 ಕ್ಯಾರೆನ್ಸ್ ಅನ್ನು ಪ್ರಸ್ತುತ ಮೊಡೆಲ್‌ಗಿಂತ ಸಂಪೂರ್ಣವಾಗಿ ಭಿನ್ನವಾಗಿ ಕಾಣುವಂತೆ ಮಾಡುತ್ತದೆ, ಆದರೆ ಈ ಎಮ್‌ಪಿವಿಯು ಹೊಸ ಜನರೇಶನ್‌ನಂತೆ ಕಾಣುವುದಿಲ್ಲ.

2023 ರಲ್ಲಿ, ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್‌ನೊಂದಿಗೆ ಇದೇ ರೀತಿಯ ವಿಧಾನವನ್ನು ಮಾಡಿತ್ತು, ಇದು ಸ್ಪ್ಲಿಟ್ ಹೆಡ್‌ಲೈಟ್‌ಗಳು, ಸ್ಪೋರ್ಟಿಯರ್ ಅಲಾಯ್ ವೀಲ್‌ಗಳು ಮತ್ತು ಕನೆಕ್ಟೆಡ್‌ ಎಲ್‌ಇಡಿ ಟೈಲ್‌ಲೈಟ್‌ಗಳೊಂದಿಗೆ ಆಧುನಿಕ ವಿನ್ಯಾಸವನ್ನು ಒಳಗೊಂಡಿತ್ತು. ಅದೇ ರೀತಿ, 2022 ರ ಮಾರುತಿ ಬಲೆನೊ ಆಪ್‌ಡೇಟ್‌ ವಿನ್ಯಾಸ ಬದಲಾವಣೆಗಳನ್ನು ಪರಿಚಯಿಸಿತು, ಅದು ಹೆಚ್ಚು ಆಕ್ರಮಣಕಾರಿಯಾಗಿ ಕಾಣುವಂತೆ ಮಾಡಿತು, ಆದರೆ ಅದನ್ನು ಹೊಸ-ಜನರೇಶನ್‌ನ ಮೊಡೆಲ್‌ ಎಂದು ಪರಿಗಣಿಸಲಾಗಿಲ್ಲ.

2025 ಕಿಯಾ ಕ್ಯಾರೆನ್ಸ್ ಇಂಟೀರಿಯರ್ ಆಪ್‌ಡೇಟ್‌ಗಳು

2025ರ ಕಿಯಾ ಕ್ಯಾರೆನ್ಸ್ ಒಳಗಿನಿಂದ ಹೇಗೆ ಕಾಣುತ್ತದೆ ಎಂದು ನಮಗೆ ನಿಖರವಾಗಿ ತಿಳಿದಿಲ್ಲವಾದರೂ, ಹೊರಭಾಗದ ವಿನ್ಯಾಸದಂತೆಯೇ ಇದು ಇಂಟೀರಿಯರ್‌ನಲ್ಲಿ ಪ್ರಮುಖ ಆಪ್‌ಡೇಟ್‌ಗಳನ್ನು ಪಡೆಯುವ ನಿರೀಕ್ಷೆಯಿದೆ. ಇವುಗಳಲ್ಲಿ ಮರುವಿನ್ಯಾಸಗೊಳಿಸಲಾದ ಸೆಂಟರ್ ಕನ್ಸೋಲ್ ಮತ್ತು ಡ್ಯಾಶ್‌ಬೋರ್ಡ್, ದೊಡ್ಡ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಹೆಚ್ಚಿನ ಫೀಚರ್‌ಗಳನ್ನು ಒಳಗೊಂಡಿರುವ ಸಾಧ್ಯತೆಯಿದೆ. ಇತರ ಬದಲಾವಣೆಗಳಲ್ಲಿ ನವೀಕರಿಸಿದ ಇಂಟೀರಿಯರ್‌ ಕಲರ್‌ ಥೀಮ್‌ ಮತ್ತು ಮರುವಿನ್ಯಾಸಗೊಳಿಸಲಾದ ಸ್ಟೀರಿಂಗ್ ವೀಲ್ ಸೇರಿವೆ ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಸಹ ಓದಿ: ವೀಕ್ಷಿಸಿ: ರೆಗ್ಯುಲರ್‌ Kia Carnivalಗಿಂತ Hi-Limousine ಹೇಗೆ ಭಿನ್ನವಾಗಿದೆ ? ಸಂಪೂರ್ಣ ಚಿತ್ರಣ ಇಲ್ಲಿದೆ.

2025 ಕಿಯಾ ಕ್ಯಾರೆನ್ಸ್ ಫೀಚರ್‌ ಸೇರ್ಪಡೆಗಳು

2025 ರ ಕ್ಯಾರೆನ್ಸ್ ಇತ್ತೀಚೆಗೆ ಅನಾವರಣಗೊಳಿಸಿದ ಕಿಯಾ ಸಿರೋಸ್‌ನಿಂದ ಹೊಸ ಫೀಚರ್‌ಗಳನ್ನು ಎರವಲು ಪಡೆಯುವ ನಿರೀಕ್ಷೆಯಿದೆ, ಉದಾಹರಣೆಗೆ 12.3-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, 12.3-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಎರಡನೇ ಸಾಲಿನ ಪ್ರಯಾಣಿಕರಿಗೆ ಸೀಟ್ ವೆಂಟಿಲೇಷನ್, ಬಹುಶಃ ಪನೋರಮಿಕ್ ಸನ್‌ರೂಫ್, 360-ಡಿಗ್ರಿ ಕ್ಯಾಮೆರಾ ಮತ್ತು ಲೆವೆಲ್-2 ADAS ಆಗಿವೆ. ವೈರ್‌ಲೆಸ್ ಫೋನ್ ಚಾರ್ಜರ್, 8-ಸ್ಪೀಕರ್ BOSE ಸೌಂಡ್ ಸಿಸ್ಟಮ್, ಏರ್ ಪ್ಯೂರಿಫೈಯರ್, ಹಿಂಬದಿಯ ಸೀಟ್‌ಗಾಗಿ ಇಂಫೋಟೈನ್‌ಮೆಂಟ್‌ ಸಿಸ್ಟಮ್‌ ಮತ್ತು ಆಂಬಿಯೆಂಟ್‌ ಲೈಟಿಂಗ್‌ನಂತಹ ಸೌಕರ್ಯಗಳನ್ನು ಪ್ರಸ್ತುತ ಕ್ಯಾರೆನ್ಸ್‌ನಿಂದ ಮುಂದುವರಿಸುವ ಸಾಧ್ಯತೆಯಿದೆ.

ಸುರಕ್ಷತೆಯ ದೃಷ್ಟಿಯಿಂದ, 2025 ಕ್ಯಾರೆನ್ಸ್ ಆರು ಏರ್‌ಬ್ಯಾಗ್‌ಗಳನ್ನು ಪ್ರಮಾಣಿತವಾಗಿ, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸೆನ್ಸಾರ್‌ಗಳು, ಎಲೆಕ್ಟ್ರಾನಿಕ್ ಸ್ಟೇಬಿಲಿಟಿ ಕಂಟ್ರೋಲ್‌ ಮತ್ತು ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್‌ನೊಂದಿಗೆ ಮುಂದುವರಿಸುವ ನಿರೀಕ್ಷೆಯಿದೆ. ಅಲ್ಲದೆ, ಕ್ಯಾರೆನ್ಸ್ ಫೇಸ್‌ಲಿಫ್ಟ್ ಅದರ ಚಾಸಿಸ್‌ಗೆ ಮಾಡಲಾದ ಸಂಭಾವ್ಯ ಬಲವರ್ಧನೆಗಳೊಂದಿಗೆ ಉತ್ತಮ ಸುರಕ್ಷತಾ ರೇಟಿಂಗ್ ಅನ್ನು ಪಡೆಯುವ ಸಾಧ್ಯತೆಯಿದೆ.

2025ರ ಕಿಯಾ ಕ್ಯಾರೆನ್ಸ್ ಎಂಜಿನ್ ಆಯ್ಕೆಗಳು

ಕಿಯಾ 2025ರ ಕ್ಯಾರೆನ್ಸ್‌ಗಳನ್ನು ಪ್ರಸ್ತುತ ಮೊಡೆಲ್‌ನಂತೆಯೇ ಎಂಜಿನ್ ಆಯ್ಕೆಗಳೊಂದಿಗೆ ನೀಡುವ ಸಾಧ್ಯತೆಯಿದೆ, ಇದರಲ್ಲಿ 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್‌ ಪೆಟ್ರೋಲ್, 1.5-ಲೀಟರ್ ಟರ್ಬೊ-ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ಗಳು ಸೇರಿವೆ. ಮೂರು ಎಂಜಿನ್ ಆಯ್ಕೆಗಳ ವಿಶೇಷಣಗಳನ್ನು ಕೆಳಗಿನ ಕೋಷ್ಟಕದಲ್ಲಿ ವಿವರಿಸಲಾಗಿದೆ.

ಎಂಜಿನ್ ಆಯ್ಕೆ

1.5-ಲೀಟರ್ N/A ಪೆಟ್ರೋಲ್

1.5-ಲೀಟರ್ ಟರ್ಬೊ-ಪೆಟ್ರೋಲ್

1.5-ಲೀಟರ್ ಡೀಸೆಲ್

ಪವರ್‌/ ಟಾರ್ಕ್‌

115 ಪಿಎಸ್/ 144 ಎನ್ಎಂ

160 ಪಿಎಸ್/ 253 ಎನ್ಎಂ

116 ಪಿಎಸ್/ 250 ಎನ್ಎಂ

ಗೇರ್‌ಬಾಕ್ಸ್‌

6-ಸ್ಪೀಡ್ ಮ್ಯಾನ್ಯುವಲ್‌

6-ಸ್ಪೀಡ್ ಮ್ಯಾನ್ಯುವಲ್‌, 7-ಸ್ಪೀಡ್ ಡಿಸಿಟಿ

6-ಸ್ಪೀಡ್ ಮ್ಯಾನ್ಯುವಲ್‌, 6-ಸ್ಪೀಡ್ ಆಟೋಮ್ಯಾಟಿಕ್‌

2025ರ ಕಿಯಾ ಕ್ಯಾರೆನ್ಸ್ ಬೆಲೆ

2025 ರ ಕಿಯಾ ಕ್ಯಾರೆನ್ಸ್ ಫೇಸ್‌ಲಿಫ್ಟ್‌ನ ಬೆಲೆಗಳು 11.50 ಲಕ್ಷ ರೂ.ನಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುವ ನಿರೀಕ್ಷೆಯಿದೆ. ಮೇಲೆ ಹೇಳಿದಂತೆ, ಇದನ್ನು ಪ್ರಸ್ತುತ ಲಭ್ಯವಿರುವ ಕ್ಯಾರೆನ್ಸ್ ಜೊತೆಗೆ ನೀಡಲಾಗುವುದು, ಇದರ ಬೆಲೆ 10.60 ಲಕ್ಷ ರೂ.ನಿಂದ 19.70 ಲಕ್ಷ ರೂ. (ಎಕ್ಸ್-ಶೋರೂಂ)ವರೆಗೆ ಇರುತ್ತದೆ.

ಕಿಯಾವು 2025ರ ಆಗಸ್ಟ್ ವೇಳೆಗೆ ಕ್ಯಾರೆನ್ಸ್ ಫೇಸ್‌ಲಿಫ್ಟ್ ಅನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಇದು ಮಾರುತಿ ಎರ್ಟಿಗಾ, ಮಾರುತಿ XL6, ಮತ್ತು ಟೊಯೋಟಾ ರೂಮಿಯನ್ ಗಳಿಗೆ ಪ್ರತಿಸ್ಪರ್ಧಿಯಾಗಲಿದ್ದು, ಟೊಯೋಟಾ ಇನ್ನೋವಾ ಕ್ರಿಸ್ಟಾ, ಟೊಯೋಟಾ ಇನ್ನೋವಾ ಹೈಕ್ರಾಸ್ ಮತ್ತು ಮಾರುತಿ ಇನ್ವಿಕ್ಟೊಗಳಿಗೆ ಕೈಗೆಟುಕುವ ಪರ್ಯಾಯವಾಗಲಿದೆ.

ಕಾರುಗಳ ಲೋಕದ ನಿರಂತರ ಆಪ್‌ಡೇಟ್‌ಗಳನ್ನು ಪಡೆಯಲು ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ

Share via

Write your Comment on Kia ಕೆರೆನ್ಸ್

P
prafull kumar
Jan 27, 2025, 2:35:35 PM

test coments

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

Enable notifications to stay updated with exclusive offers, car news, and more from CarDekho!

trending ಎಮ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಎಲೆಕ್ಟ್ರಿಕ್
Rs.26.90 - 29.90 ಲಕ್ಷ*
ಎಲೆಕ್ಟ್ರಿಕ್ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
ಹೊಸ ವೇರಿಯೆಂಟ್
Rs.10.60 - 19.70 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ