Citroen C3 Aircross: ಈ ಕಾರಿನಲ್ಲಿ ಏನೆಲ್ಲಾ ವೈಶಿಷ್ಟ್ಯಗಳು ಪಡೆಯಲಿದ್ದೀರಿ ? ಇಲ್ಲಿದೆ ಪಟ್ಟಿ

modified on ಆಗಸ್ಟ್‌ 04, 2023 01:48 pm by tarun for ಸಿಟ್ರೊನ್ ಸಿ3 ಏರ್‌ಕ್ರಾಸ್‌

  • 18 Views
  • ಕಾಮೆಂಟ್‌ ಅನ್ನು ಬರೆಯಿರಿ

ಬಿಡುಗಡೆಯಾಗಲಿರುವ ಸಿಟ್ರಾನ್ C3 ಏರ್‌ಕ್ರಾಸ್‌ನ ಬೆಲೆಗಳನ್ನು ಹೊರತುಪಡಿಸಿ, ಅದರ ಟೆಕ್ನಿಕಲ್ ಸ್ಪೆಸಿಫಿಕೇಷನ್ ಮತ್ತು ಫೀಚರ್‌ಗಳನ್ನು ಒಳಗೊಂಡ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗಿದೆ.

Citroen C3 Aircross

  • C3 ಏರ್ ಕ್ರಾಸ್ ಐದು ಮತ್ತು ಏಳು-ಆಸನಗಳ ಸಂರಚನೆಗಳಲ್ಲಿ ವೇರಿಯೆಂಟ್ ಗಳನ್ನು ಹೊಂದಿದೆ. 

  • ಇದು ತೆಗೆಯಬಹುದಾದ ಮೂರನೇ ಸಾಲಿನ ಸೀಟುಗಳನ್ನು ಮತ್ತು ಎರಡನೇ ಸಾಲಿನ ಸೀಟುಗಳಿಗೆ 60:40 ಸ್ಪ್ಲಿಟ್ ಸೆಟಪ್ ಅನ್ನು ಪಡೆಯುತ್ತದೆ.

  • 10.2-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಡ್ಯುಯಲ್ ಏರ್‌ಬ್ಯಾಗ್‌ಗಳು, TPMS ಮತ್ತು ರಿಯರ್ ಕ್ಯಾಮೆರಾವನ್ನು ಒಳಗೊಂಡಿದೆ.

  • 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ 110PS 1.2-ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದೆ.

  • ಇದರ ಬೆಲೆ ಸುಮಾರು ರೂ. 9 ಲಕ್ಷ  (ಎಕ್ಸ್ ಶೋರೂಂ) ಇರಬಹುದು ಎಂದು ನಿರೀಕ್ಷಿಸಲಾಗಿದೆ.

ಫ್ರಾನ್ಸ್ ಮೂಲದ ಕಾರು ತಯಾರಿಕಾ ಕಂಪೆನಿಯಾಗಿರುವ ಸಿಟ್ರಾನ್ ನಿಂದ C3 ಏರ್‌ಕ್ರಾಸ್ ಭಾರತದಲ್ಲಿ ಪರಿಚಯಿಸುತ್ತಿರುವ ನಾಲ್ಕನೇ ಮಾದರಿಯಾಗಿದ್ದು, ಇದು  ಕಾಂಪ್ಯಾಕ್ಟ್ SUV  ವಿಭಾಗದಲ್ಲಿ ಸ್ಪರ್ಧಿಸುತ್ತದೆ. ಸಿಟ್ರೊಯೆನ್ ಈಗ SUV ಯ ಎಲ್ಲಾ ತಾಂತ್ರಿಕ ವಿಶೇಷಣಗಳನ್ನು ಬಹಿರಂಗಪಡಿಸಿದೆ ಮತ್ತು ಅದರೊಂದಿಗೆ ಬರುವ ಎಲ್ಲಾ ವೈಶಿಷ್ಟ್ಯಗಳು ಇಲ್ಲಿವೆ:

ವೈಶಿಷ್ಟ್ಯಗಳ ವಿವರ 

Citroen C3 Aircross Cabin

 

ಎಕ್ಸ್ ಟಿರಿಯರ್

ಇಂಟೀರಿಯರ್

ಕಂಫರ್ಟ್ ಮತ್ತು ಸೌಕರ್ಯ 

ಇನ್ಫೋಟೈನ್ಮೆಂಟ್

ಸುರಕ್ಷತೆ

  • ಬಾಡಿ ಬಣ್ಣದ ಬಂಪರ್‌ಗಳು

  • ಬಾಡಿ ಬಣ್ಣದ ಹೊರಗಿನ ಬಾಗಿಲಿನ ಹ್ಯಾಂಡಲ್ ಗಳು

  • ವೀಲ್ ಆರ್ಚ್ ಕ್ಲಾಡಿಂಗ್

  • ಹ್ಯಾಲೊಜೆನ್ ಹೆಡ್‌ಲ್ಯಾಂಪ್‌ಗಳು

  • 17-ಇಂಚಿನ ಅಲ್ಲೋ ವೀಲ್ ಗಳು

  • ORVM-ಮೌಂಟೆಡ್ ಸೈಡ್ ಟರ್ನ್ ಇಂಡಿಕೇಟರ್ಸ್

  • ಎಲ್ಇಡಿ ಡಿಆರ್ಎಲ್ಗಳು

  • ಮುಂಭಾಗದ ಫಾಗ್ ಲ್ಯಾಂಪ್ ಗಳು 

  • ಡ್ಯುಯಲ್-ಟೋನ್ ಕಪ್ಪು ಮತ್ತು ಗ್ರೇ ಬಣ್ಣದ ಇಂಟೀರಿಯರ್ ಥೀಮ್ 

  •  ಲೆದರ್ ಕವರ್ ಇರುವ ಸ್ಟೇರಿಂಗ್ ವೀಲ್

  • ಲೆಥೆರೆಟ್-ಫ್ಯಾಬ್ರಿಕ್ ಸೀಟ್ ಅಪ್ಹೋಲ್ಸ್ಟರಿ

  • ಅಡ್ಜಸ್ಟ್ ಮಾಡಬಹುದಾದ ಹೆಡ್‌ರೆಸ್ಟ್‌ಗಳು

  • 60:40 ಸ್ಪ್ಲಿಟ್ ಮಾಡಬಹುದಾದ ಎರಡನೇ ಸಾಲಿನ  ಸೀಟುಗಳು

  • 50:50 ಸ್ಪ್ಲಿಟ್ ಮಾಡಬಹುದಾದ ಮೂರನೇ ಸಾಲಿನ ಸೀಟುಗಳು

 

 

  • ಮ್ಯಾನುಯಲ್ ಎಸಿ

  • ಹಿಂದಿನ ರೂಫ್ ನಲ್ಲಿ AC ದ್ವಾರಗಳು

  • ಮುಂಭಾಗ ಮತ್ತು ಹಿಂಭಾಗದ ಪವರ್ ವಿಂಡೋಗಳು

  • ಎಲ್ಲಾ ವಿಂಡೋಗಳಿಗೆ ಒಂದು ಟಚ್ ನಲ್ಲಿ ಆಟೋ ಅಪ್-ಡೌನ್

  • ಕೀ ಇಲ್ಲದೆ ರಿಮೋಟ್ ಬಳಸಿ ಪ್ರವೇಶ

  • ಅಡ್ಜಸ್ಟ್ ಮಾಡಬಹುದಾದ ORVM ಗಳು

  • ಮಾನ್ಯುಯಲ್ ಹಗಲು/ರಾತ್ರಿ ಇರ್ವ್ಮ್

  • ಹಿಂದಿನ ಡಿಫೊಗರ್

  • ಮುಂಭಾಗ ಮತ್ತು ಹಿಂಭಾಗದ ಆರ್ಮ್ ರೆಸ್ಟ್

  • ಹಿಂದಿನ ವೈಪರ್ ಮತ್ತು ವಾಷರ್

  • ಎಲ್ಲಾ ಸಾಲುಗಳಿಗೆ USB ಚಾರ್ಜರ್

  • 10.25-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್ 3

  • ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ

  • 6 ಸ್ಪೀಕರ್‌ಗಳು

  • 35 ಕನೆಕ್ಟೆಡ್ ಕಾರು ತಂತ್ರಜ್ಞಾನ

  • ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು

  • EBD ಜೊತೆಗೆ ABS

  • ESP

  • ಹಿಲ್ ಹೋಲ್ಡ್ ಅಸಿಸ್ಟ್

  • ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್

  • ಹಿಂದಿನ ಪಾರ್ಕಿಂಗ್ ಸೆನ್ಸಾರ್ 

  • ಹಿಂಬದಿಯಲ್ಲಿ ಕ್ಯಾಮೆರಾ

C3 ಏರ್‌ಕ್ರಾಸ್‌ನಲ್ಲಿರುವ ವೈಶಿಷ್ಟ್ಯಗಳ ಪಟ್ಟಿಯಲ್ಲಿ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ  ಜೊತೆಗೆ 10.2-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, 7-ಇಂಚಿನ ಡಿಜಿಟಲ್ ಡ್ರೈವರ್‌ಸ್ ಡಿಸ್ಪ್ಲೇ, ಮ್ಯಾನ್ಯುವಲ್ AC, ರೂಫ್-ಮೌಂಟೆಡ್ AC ವೆಂಟ್‌ಗಳು, ಕೀಲೆಸ್ ಎಂಟ್ರಿ, ಎಲೆಕ್ಟ್ರಿಕಲ್ ಅಡ್ಜಸ್ಟ್ ಮಾಡಬಹುದಾದ ORVM ಗಳು ಮತ್ತು ಎಲ್ಲ ಸೀಟ್ ನ ಸಾಲುಗಲ್ಲಿ USB ಚಾರ್ಜಿಂಗ್ ಪೋರ್ಟ್‌ಗಳನ್ನು ಒಳಗೊಂಡಿದೆ.

ಸುರಕ್ಷತೆಯ ದೃಷ್ಟಿಯಿಂದ, ಇದು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಇಎಸ್‌ಪಿ, ಹಿಲ್ ಹೋಲ್ಡ್ ಅಸಿಸ್ಟ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ರಿಯರ್ ಪಾರ್ಕಿಂಗ್ ಕ್ಯಾಮೆರಾವನ್ನು ಹೊಂದಿದೆ.

ಸೀಟಿಂಗ್ ಕಾನ್ಫಿಗರೇಷನ್

Citroen C3 Aircross Third-row Folded

C3 ಏರ್‌ಕ್ರಾಸ್ ಮೂರನೇ ಸಾಲಿನಲ್ಲಿ ತೆಗೆಯಬಹುದಾದ ಆಸನಗಳನ್ನು ಪಡೆಯುತ್ತದೆ, ಇದರಿಂದಾಗಿ ಗ್ರಾಹಕರು ಅದರಲ್ಲಿ ಸಾಕಷ್ಟು ಬೂಟ್ ಸ್ಥಳವನ್ನು ಪಡೆಯಲು ಸಾಧ್ಯವಾಗುತ್ತದೆ. ಇದರ ಐದು-ಆಸನಗಳ ಆಯ್ಕೆಯು 511 ಲೀಟರ್‌ಗಳವರೆಗಿನ ಕ್ಲಾಸ್-ಲೀಡಿಂಗ್ ಬೂಟ್ ಸಾಮರ್ಥ್ಯವನ್ನು ಪಡೆಯುತ್ತದೆ.  ಎರಡನೇ ಸಾಲಿನ ಆಸನಗಳನ್ನು 60:40 ಅನುಪಾತದಲ್ಲಿ ಸ್ಪ್ಲಿಟ್ ಫೋಲ್ಡ್ ಮಾಡಬಹುದಾಗಿದೆ, ಮೂರು-ಸಾಲಿನ ಆವೃತ್ತಿಯಲ್ಲಿ ಅವುಗಳನ್ನು ಒರಗಿಸಬಹುದು. ಫೀಚರ್ ಭರಿತ ಈ ಏಕೈಕ ವೇರಿಯಂಟ್ ಹೆಚ್ಚು ಪ್ರೀಮಿಯಂ ಕ್ಯಾಬಿನ್ ಅನುಭವವನ್ನು ಒದಗಿಸಲು ಸೆಮಿ-ಲೆಥೆರೆಟ್ ಸೀಟ್ ಅಪ್‌ಹೋಲೆಸ್ಟರಿಯನ್ನು  ಹೊಂದಿದೆ.

 ಇದನ್ನೂ ಓದಿ:  ಹೋಂಡಾ ಎಲಿವೇಟ್ vs ಹುಂಡೈ ಕ್ರೆಟಾ vs ಕಿಯಾ ಸೆಲ್ಟೋಸ್ vs ಮಾರುತಿ ಗ್ರ್ಯಾಂಡ್ ವಿಟಾರಾ vs ಟೊಯೋಟಾ ಹೈರೈಡರ್: ನಿರ್ದಿಷ್ಟ ವಿವರಣೆಗಳ ಹೋಲಿಕೆ 

ಪವರ್‌ಟ್ರೇನ್‌ಗಳು

Citroen C3 Aircross Engine

C3 ಏರ್‌ಕ್ರಾಸ್‌ 1.2 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದ್ದು, ಇದು 110PS ಪವರ್ ಮತ್ತು 190Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಸದ್ಯಕ್ಕೆ 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಅನ್ನು ಪಡೆಯುತ್ತದೆ, ಭವಿಷ್ಯದಲ್ಲಿ ಕಂಪನಿಯು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಸಹ ಸೇರಿಸಬಹುದು ಎಂದು ಅಂದಾಜಿಸಲಾಗಿದೆ.

 ಇದನ್ನೂ ಓದಿ:  ಸಿಟ್ರಾನ್ C3 ಏರ್‌ಕ್ರಾಸ್ vs ಪ್ರತಿಸ್ಪರ್ಧಿಗಳು: ಇಂಧನ ದಕ್ಷತೆಯ ಹೋಲಿಕೆ 

 C3 ಏರ್‌ಕ್ರಾಸ್ ಬೆಲೆಯು ಸುಮಾರು 12 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗಬಹುದು ಎಂದು ಅಂದಾಜಿಸಲಾಗಿದೆ. ಇದು  ಹ್ಯುಂಡೈ ಕ್ರೆಟಾ ,  ಕಿಯಾ ಸೆಲ್ಟೋಸ್ ,  ಫೋಕ್ಸ್‌ವ್ಯಾಗನ್ ಟೈಗನ್ , ಸ್ಕೋಡಾ ಕುಶಾಕ್ , MG  ಆಸ್ಟರ್ , ಮಾರುತಿ ಗ್ರ್ಯಾಂಡ್ ವಿಟಾರಾ,  ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್  ಮತ್ತು ಹೋಂಡಾ ಎಲಿವೇಟ್‌‌ನೊಂದಿಗೆ ಈ ವಿಭಾಗದಲ್ಲಿ ಸ್ಪರ್ಧಿಸಲಿದೆ. ಬಿಡುಗಡೆಯಾಗಲಿರುವ ಈ ಕಾರಿನ ಬೆಲೆಯನ್ನು ಈ ಕಾಂಪ್ಯಾಕ್ಟ್ ಕಾರುಗಳ ಫೀಚರ್ ಭರಿತ  ವೇರಿಯಂಟ್‌ಗಳಿಗಿಂತ ಕಡಿಮೆ ಇರಿಸುವ ನಿರೀಕ್ಷೆಯಿದೆ.

 ಇನ್ನಷ್ಟು ಓದಿ:  ಸಿಟ್ರಾನ್ C3 ಆನ್‌ರೋಡ್ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಸಿಟ್ರೊನ್ ಸಿ3 Aircross

Read Full News

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience