Login or Register ಅತ್ಯುತ್ತಮ CarDekho experience ಗೆ
Login

ಟಾಟಾ ಹ್ಯಾರಿಯರ್‌ ಫೇಸ್‌ ಲಿಫ್ಟ್‌ ಕಾರು MG ಹೆಕ್ಟರ್‌ ವಿರುದ್ಧ ಹೇಗೆ ಮುನ್ನಡೆ ಸಾಧಿಸಿದೆ?

modified on ಅಕ್ಟೋಬರ್ 28, 2023 08:26 pm by rohit for ಟಾಟಾ ಹ್ಯಾರಿಯರ್

MG ಹೆಕ್ಟರ್‌ ವಾಹನಕ್ಕೆ ಹೋಲಿಸಿದರೆ ಹೊಸ ಟಾಟಾ ಹ್ಯಾರಿಯರ್‌ ಕಾರು ಒಂದಷ್ಟು ಹೆಚ್ಚುವರಿ ವೈಶಿಷ್ಟ್ಯಗಳನ್ನು ಹೊಂದಿದೆ ಮಾತ್ರವಲ್ಲದೆ ಒಳಗಡೆ ಮತ್ತು ಹೊರಗಡೆ ಕೆಲವೊಂದು ಆಕರ್ಷಕ ಅಂಶಗಳನ್ನು ಪಡೆದುಕೊಂಡಿದೆ

ಟಾಟಾ ಹ್ಯಾರಿಯರ್ ಕಾರನ್ನು 2019ರಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದಾಗ ಇದಕ್ಕೆ MG ಹೆಕ್ಟರ್ ಪ್ರಮುಖ ಪ್ರತಿಸ್ಪರ್ಧಿ ಎನಿಸಿತ್ತು. MG SUV ಯು ಯಾವಾಗಲೂ ತುಸು ಹೆಚ್ಚೇ ವೈಶಿಷ್ಟ್ಯಗಳೊಂದಿಗೆ ಹೊರಬಂದರೆ (ಈ ವರ್ಷದ ಆರಂಭದಲ್ಲಿ ಇನ್ನಷ್ಟು ತಂತ್ರಜ್ಞಾನವನ್ನು ಪಡೆದುಕೊಂಡಿದೆ), ಇತ್ತೀಚಿನ ಹ್ಯಾರಿಯರ್‌ ಫೇಸ್‌ ಲಿಫ್ಟ್‌ ಮೂಲಕ ಟಾಟಾ ಸಂಸ್ಥೆಯು ಇದರ ವಿಶೇಷತೆಗಳನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ. ಅಷ್ಟೇ ಅಲ್ಲದೆ, ಟಾಟಾ SUV ಯು ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿದ್ದು, ಹೆಕ್ಟರ್‌ ಕಾರಿಗೆ ಹೋಲಿಸಿದರೆ ಕೆಲವೊಂದು ವಿಶಿಷ್ಟ ಸಾಧನಗಳನ್ನು ಇದು ಅಳವಡಿಸಿಕೊಂಡಿದೆ. ಈ ಪಟ್ಟಿಯನ್ನು ಇನ್ನಷ್ಟು ವಿವರವಾಗಿ ನೋಡೋಣ:

ಡ್ಯುವಲ್‌ ಝೋನ್‌ AC

  • ಹ್ಯಾರಿಯರ್‌ ಕಾರು ಮೊದಲ ಬಾರಿಗೆ ಡ್ಯುವಲ್‌ ಝೋನ್‌ ಕ್ಲೈಮೇಟ್‌ ಕಂಟ್ರೋಲ್‌ ಅನ್ನು ಪಡೆದಿದ್ದು, ಈ ಕಾರಿನ ಹೊಸ ವೈಶಿಷ್ಟ್ಯಗಳಲ್ಲಿ ಇದೂ ಒಂದಾಗಿದೆ.

  • ಟಾಟಾ ಸಂಸ್ಥೆಯು ಈ ಅನುಕೂಲತೆ ಮತ್ತು ಆರಾಮದಾಯಕತೆಯನ್ನು ಈ SUV ಯ ಹೈಯರ್‌ ಸ್ಪೆಕ್‌ ಫಿಯರ್‌ ಲೆಸ್‌ ವೇರಿಯಂಟ್‌ ಗಳಲ್ಲಿ ಒದಗಿಸುತ್ತಿದೆ.

  • ಹ್ಯಾರಿಯರ್‌ ಫಿಯರ್‌ ಲೆಸ್‌ ಟ್ರಿಮ್‌ ಕಾರಿನ ಬೆಲೆಯು ರೂ. 22.99 ಲಕ್ಷದಿಂದ ಪ್ರಾರಂಭವಾಗುತ್ತದೆ.

7 ಏರ್‌ ಬ್ಯಾಗುಗಳು

  • ಹ್ಯಾರಿಯರ್‌ ಫೇಸ್‌ ಲಿಫ್ಟ್‌ ಕಾರು 7 ಏರ್‌ ಬ್ಯಾಗುಗಳೊಂದಿಗೆ ರಸ್ತೆಗಿಳಿಯಲಿದ್ದು, ಇದೇ ಮೊದಲ ಬಾರಿಗೆ ಟಾಟಾದ ಕಾರೊಂದು ಈ ವೈಶಿಷ್ಟ್ಯವನ್ನು ಪಡೆದುಕೊಂಡಿದೆ.
  • ಟಾಟಾದ ಈ ಮಿಡ್‌ ಸೈಜ್ SUV‌ ಯು ಈಗ ಪ್ರಮಾಣಿತ 6 ಏರ್‌ ಬ್ಯಾಗುಗಳ ಜೊತೆಗೆ ಚಾಲಕನ ಪಕ್ಕದ ಕ್ನೀ ಏರ್‌ ಬ್ಯಾಗ್‌ ಅನ್ನು ಸಹ ಹೊಂದಿದ್ದು, MG ಹೆಕ್ಟರ್‌ ಕಾರಿಗೆ ಹೋಲಿಸಿದರೆ ಇದೊಂದು ಹೆಚ್ಚುವರಿ ವೈಶಿಷ್ಟ್ಯ ಎನಿಸಿದೆ.
  • ಈ SUV ಯ ಸಂಪೂರ್ಣ ಸುಸಜ್ಜಿತ ಫಿಯರ್‌ ಲೆಸ್+ ವೇರಿಯಂಟ್‌ ಗಳಲ್ಲಿ SUV ಈ ಸುರಕ್ಷಾ ಸಾಧನವು ದೊರೆಯಲಿದ್ದು, ಈ ವೇರಿಯಂಟ್‌ ಗಳ ಬೆಲೆಯು ರೂ. 24.49 ಲಕ್ಷದಿಂದ ಪ್ರಾರಂಭಗೊಳ್ಳಲಿದೆ.

ಇದನ್ನು ಸಹ ಓದಿರಿ: 2023 ಟಾಟಾ ಹ್ಯಾರಿಯರ್‌ ಡಾರ್ಕ್‌ ಎಡಿಷನ್‌ 5 ಚಿತ್ರಗಳಲ್ಲಿ ಕಂಡಂತೆ

10 ಸ್ಪೀಕರ್‌ ಮ್ಯೂಸಿಕ್‌ ಸಿಸ್ಟಂ

  • ಫೇಸ್‌ ಲಿಫ್ಟ್‌ ಮೂಲಕ ಟಾಟಾ ಸಂಸ್ಥೆಯು ಸ್ಪೀಕರ್‌ ಗಳ ಸಂಖ್ಯೆಯನ್ನು ಹೆಚ್ಚಿಸಿದ್ದು, ಈ ಸಂಖ್ಯೆಯು 10ಕ್ಕೆ ತಲುಪಿದೆ. ಈ SUV ಯು ಈಗ ತನ್ನ JBL ಸೌಂಡ್‌ ಸಿಸ್ಟಂಗೆ 5 ಸ್ಪೀಕರ್‌ ಗಳು, 4 ಟ್ವೀಟರ್‌ ಗಳು ಮತ್ತು 1 ಸಬ್‌ ವೂಪರ್‌ ಅನ್ನು ಹೊಂದಿದ್ದು, ಈ ವ್ಯವಸ್ಥೆಯು ಫಿಯರ್‌ ಲೆಸ್+‌ ವೇರಿಯಂಟ್‌ ಗಳಲ್ಲಿ ಲಭ್ಯ.

  • ಇನ್ನೊಂದೆಡೆ MG SUV ಯು 8 ಸ್ಪೀಕರ್‌ ಇನ್ಫಿನಿಟಿ ಸಿಸ್ಟಂ ಅನ್ನು ಹೊಂದಿದೆ.

ಚಾಲಕನಿಗಾಗಿ ದೊಡ್ಡ ಡಿಜಿಟಲ್‌ ಡಿಸ್ಪ್ಲೆ

  • ಹ್ಯಾರಿಯರ್‌ ಕಾರು 2023ರಲ್ಲಿ ರೆಡ್‌ ಡಾರ್ಕ್‌ ಎಡಿಷನ್‌ ನಲ್ಲಿ ಈ ಹಿಂದೆ 7 ಇಂಚಿನ ಚಾಲಕನ ಡಿಜಿಟಲ್‌ ಡಿಸ್ಪ್ಲೇಯನ್ನು ನೀಡಿದ್ದು, ಟಾಟಾ ಸಂಸ್ಥೆಯು ಈಗ 10.25 ಇಂಚಿನ ಡಿಜಿಟಲ್‌ ಕ್ಲಸ್ಟರ್‌ ಅನ್ನು ಪರಿಚಯಿಸುವ ಮೂಲಕ ಇನ್ನೊಂದು ಹೆಜ್ಜೆ ಮುಂದಕ್ಕೆ ಇಟ್ಟಿದೆ.

  • ಇದು ಇಡೀ ಸ್ಕ್ರೀನ್‌ ನಲ್ಲಿ ಮ್ಯಾಪ್‌ ನೇವಿಗೇಶನ್‌ ಅನ್ನು ತೋರಿಸುತ್ತಿದ್ದು, ಇದು ಐಷಾರಾಮಿ ಕಾರುಗಳಲ್ಲಿ ಇರುವ ಅನುಕೂಲಕರ ವೈಶಿಷ್ಟ್ಯವೆನಿಸಿದೆ.

  • ಟಾಟಾ ಸಂಸ್ಥೆಯು ಹೊಸ ಹ್ಯಾರಿಯರ್‌ ನ 1-ಎಬೋವ್-ಬೇಸ್‌ ಪ್ಯೂರ್‌ ಟ್ರಿಮ್‌ ನಲ್ಲಿ ಈ ದೊಡ್ಡದಾದ ಇನ್ಸ್‌ ಟ್ರುಮೆಂಟಲ್‌ ಕ್ಲಸ್ಟರ್‌ ಅನ್ನು ನೀಡಲಿದ್ದು, ಇದರ ಬೆಲೆಯು ರೂ. 16.99 ಲಕ್ಷದಿಂದ ಪ್ರಾರಂಭಗೊಳ್ಳಲಿದೆ.

ಇದನ್ನು ಸಹ ನೋಡಿರಿ: ಮಹೀಂದ್ರಾ XUV700 ಕಾರಿನಲ್ಲಿ ಇಲ್ಲದ, ಆದರೆ 2023 ಟಾಟಾ ಹ್ಯಾರಿಯರ್‌ ಮತ್ತು ಸಫಾರಿಯಲ್ಲಿ ಇರುವ 8 ವೈಶಿಷ್ಟ್ಯಗಳು

ಚಾಲಕನ ಆಸನಕ್ಕೆ ಮೆಮೊರಿ ಫಂಕ್ಷನ್

  • ಇಲ್ಲಿ ಉಲ್ಲೇಖಿಸಲಾಗಿರುವ ಟಾಟಾ ಮತ್ತು MG SUV ಗಳೆರಡೂ 6-ವೇ ಪವರ್ಡ್‌ ಚಾಲಕನ ಸೀಟನ್ನು ಹೊಂದಿರಲಿವೆ. ಆದರೂ ಹ್ಯಾರಿಯರ್‌ ಕಾರು ಈ ವಿಚಾರದಲ್ಲಿ ಮುನ್ನಡೆಯನ್ನು ಹೊಂದಿದೆ. ಚಾಲಕನ ಸೀಟಿಗೆ ಮೆಮೊರಿ ಫಂಕ್ಷನ್‌ ಅನ್ನು ಇದು ಹೊಂದಿದ್ದು, 3ರಷ್ಟು ನಿಮ್ಮ ಆದ್ಯತೆಯ ಚಾಲಕನ ಭಂಗಿಗಳನ್ನು ಇದು ಸೇವ್‌ ಮಾಡಿ ಇಡುತ್ತದೆ.

  • ಇದು ಫಿಯರ್‌ ಲೆಸ್‌ ಟ್ರಿಮ್‌ ನಿಂದ ಲಭ್ಯ.

ಡೀಸೆಲ್‌ ಆಟೋ ಆಯ್ಕೆ

  • ಅನೇಕ ವರ್ಷಗಳಿಂದ, ಹೆಕ್ಟರ್‌ ಕಾರಿಗೆ ಹೋಲಿಸಿದರೆ ಹ್ಯಾರಿಯರ್‌ ಕಾರು ಹೊಂದಿರುವ ಒಂದು ಅನುಕೂಲತೆಯೆಂದರೆ, ಇದು ಡೀಸೆಲ್‌ - ಅಟೋಮ್ಯಾಟಿಕ್‌ ಸಂಯೋಜನೆಯನ್ನು (6 - ಸ್ಪೀಡ್‌ ಘಟಕ) ಹೊಂದಿದ್ದು, ಹೆಕ್ಟರ್‌ ಕಾರಿನಲ್ಲಿ ಇದು ದೊರೆಯುವುದಿಲ್ಲ.

  • ಆದರೂ ಎರಡೂ SUV ಗಳು 170PS ಮತ್ತು 350Nm ಉಂಟು ಮಾಡುವ 2 ಲೀಟರ್‌ ಡೀಸೆಲ್‌ ಯೂನಿಟ್‌ ಅನ್ನೇ ನೀಡುತ್ತಿವೆ.

  • ಟಾಟಾ ಸಂಸ್ಥೆಯು ಈ SUV ಯ ಮಿಡ್‌ ಸ್ಪೆಕ್‌ ಪ್ಯೂರ್+‌ ವೇರಿಯಂಟ್‌ ನಿಂದ ಈ ಸಂಯೋಜನೆಯನ್ನು ನೀಡುತ್ತಿದೆ.

  • ಹ್ಯಾರಿಯರ್‌ ಕಾರಿನ ಅಟೋಮ್ಯಾಟಿಕ್‌ ವೇರಿಯಂಟ್‌ ಗಳ ಬೆಲೆಯು ರೂ. 19.99 ಲಕ್ಷದಿಂದ ಪ್ರಾರಂಭಿಸುತ್ತದೆ.

ಸಂಬಂಧಿತ: 2023 ಟಾಟಾ ಹ್ಯಾರಿಯರ್ vs ಪ್ರತಿಸ್ಪರ್ಧಿಗಳು: ಬೆಲೆಗಳ ವಿವರ

ವಿಶೇಷ ಅನುಭವ ನೀಡುವ ವೈಶಿಷ್ಟ್ಯಗಳು

ಮೇಲೆ ಉಲ್ಲೇಖಿಸಿರುವ ವೈಶಿಷ್ಟ್ಯಗಳು ಅತ್ಯಂತ ಉಪಯುಕ್ತವೆನಿಸಿದ್ದು, ಹ್ಯಾರಿಯರ್‌ ಗೆ MG ಹೆಕ್ಟರ್‌ ಕಾರಿಗಿಂತ ಮುನ್ನಡೆಯನ್ನು ಒದಗಿಸಿವೆ. ಆದರೆ ಇನ್ನೂ ಅನೇಕ ವೈಶಿಷ್ಟ್ಯಗಳನ್ನು ಈ ವಾಹನದಲ್ಲಿ ಕಾಣಬಹುದಾಗಿದೆ. ಗೆಶ್ಚರ್‌ ಕಂಟ್ರೋಲ್ಡ್‌ ಟೇಲ್‌ ಗೇಟ್‌, ಮಲ್ಟಿ ಕಲರ್‌ ಆಂಬಿಯೆಂಟ್‌ ಲೈಟಿಂಗ್‌, LED DRL ಗಳಿಗೆ ವೆಲ್ಕಂ ಮತ್ತು ಗುಡ್‌ ಬೈ ಅನಿಮೇಶನ್‌ ಫಂಕ್ಷನ್‌ ಮತ್ತು ಡಾರ್ಕ್‌ ಎಡಿಷನ್‌ ನಲ್ಲಿರುವ ದೊಡ್ಡದಾದ 19 ಇಂಚಿನ ಅಲೋಯ್‌ ವೀಲ್‌ ಗಳು ಇತ್ಯಾದಿಗಳು ಇದರಲ್ಲಿ ಸೇರಿವೆ.

ಒಟ್ಟಾರೆಯಾಗಿ ̄2023 ಟಾಟಾ ಹ್ಯಾರಿಯರ್ ಕಾರು ರೂ. 15.49 ರಿಂದ ರೂ. 27.34 ಲಕ್ಷದ ವರೆಗಿನ ಬೆಲೆಯಲ್ಲಿ ಲಭ್ಯ (ಎಕ್ಸ್-‌ಶೋರೂಂ ದೆಹಲಿ). ‌MG ಹೆಕ್ಟರ್‌ ನಂತೆಯೇ, ಈ ಮಾದರಿಯೂ ಸಹ ದೊಡ್ಡ ಟಚ್‌ ಸ್ಕ್ರೀನ್‌, ADA̧S ಲೆದರೆಟ್‌ ಅಪೋಲ್ಸ್ಟರಿ ಮತ್ತು ಇಮ್ಮರ್ಸ್‌ ರೋಡ್‌ ಪ್ರೆಸೆನ್ಸ್‌ ಮುಂತಾದ ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಮೇಲೆ ತಿಳಿಸಿದ ಕಾರಣಗಳಿಗಾಗಿ ನೀವು ಹೆಕ್ಟರ್‌ ಬದಲಿಗೆ ಹ್ಯಾರಿಯರ್‌ ಅನ್ನು ಪ್ರೀಮಿಯಂ ಬೆಲೆಗೆ ಆರಿಸುತ್ತೀರಾ? ನಿಮ್ಮ ಪ್ರತಿಕ್ರಿಯೆಗಳನ್ನು ನಮಗೆ ತಿಳಿಸಿರಿ.

ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್-ಶೋರೂಂ ಬೆಲೆಗಳಾಗಿವೆ

ಇಲ್ಲಿ ಇನ್ನಷ್ಟು ಮಾಹಿತಿ ಪಡೆಯಿರಿ: ಹ್ಯಾರಿಯರ್‌ ಡೀಸೆಲ್

r
ಅವರಿಂದ ಪ್ರಕಟಿಸಲಾಗಿದೆ

rohit

  • 25 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಟಾಟಾ ಹ್ಯಾರಿಯರ್

Read Full News

explore similar ಕಾರುಗಳು

ಎಂಜಿ ಹೆಕ್ಟರ್

ಡೀಸಲ್13.79 ಕೆಎಂಪಿಎಲ್
ಪೆಟ್ರೋಲ್13.79 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಎಲೆಕ್ಟ್ರಿಕ್ಫೇಸ್ ಲಿಫ್ಟ್
ಫೇಸ್ ಲಿಫ್ಟ್
Rs.67.65 - 71.65 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ