Honda Elevate CVT ವರ್ಸಸ್‌ Maruti Grand Vitara AT: ವಾಸ್ತವಿಕ ಇಂಧನ ದಕ್ಷತೆ ಹೋಲಿಕೆ

published on ಮಾರ್ಚ್‌ 22, 2024 07:45 pm by shreyash for ಮಾರುತಿ ಗ್ರಾಂಡ್ ವಿಟರಾ

  • 34 Views
  • ಕಾಮೆಂಟ್‌ ಅನ್ನು ಬರೆಯಿರಿ

ಇವೆರಡೂ ನ್ಯಾಚುರಲಿ ಎಸ್ಪಿರೇಟೆಡ್‌ ಪೆಟ್ರೋಲ್ ಎಂಜಿನ್ ಅನ್ನು ಹೊಂದಿವೆ, ಆದರೆ ಗ್ರ್ಯಾಂಡ್ ವಿಟಾರಾ ಮೈಲ್ಡ್‌-ಹೈಬ್ರಿಡ್ ತಂತ್ರಜ್ಞಾನವನ್ನು ಸಹ ಒಳಗೊಂಡಿದೆ

Honda Elevate and Maruti Grand Vitara

 2023 ರಲ್ಲಿ ಹೋಂಡಾ ಎಲಿವೇಟ್ ಕಾಂಪ್ಯಾಕ್ಟ್ ಎಸ್‌ಯುವಿಯನ್ನ ಹೋಂಡಾದಿಂದ ಎಲ್ಲಾ-ಹೊಸ ಉತ್ಪನ್ನವಾಗಿ ಬಿಡುಗಡೆ ಮಾಡಲಾಗಿದ್ದು, ಇದು ಮಾರುತಿ ಗ್ರ್ಯಾಂಡ್ ವಿಟಾರಾದೊಂದಿಗೆ ನೇರವಾಗಿ ಸ್ಪರ್ಧಿಸುತ್ತದೆ. ಎರಡೂ ಎಸ್‌ಯುವಿಗಳು 1.5-ಲೀಟರ್ ನ್ಯಾಚುರಲಿ ಎಸ್ಪಿರೇಟೇಡ್‌ ಪೆಟ್ರೋಲ್ ಎಂಜಿನ್‌ನೊಂದಿಗೆ ಸಜ್ಜುಗೊಂಡಿವೆ ಮತ್ತು ವಾಸ್ತವದ ಚಾಲನಾ ಪರಿಸ್ಥಿತಿಗಳಲ್ಲಿ ಅವು ಎಷ್ಟು ಇಂಧನ ದಕ್ಷತೆಯನ್ನು ಹೊಂದಿವೆ ಎಂಬುದನ್ನು ನೋಡಲು ನಾವು ಈ ಕಾಂಪ್ಯಾಕ್ಟ್ SUV ಗಳ ಆಟೋಮ್ಯಾಟಿಕ್‌ ಆವೃತ್ತಿಗಳನ್ನು ಪರೀಕ್ಷಿಸಿದ್ದೇವೆ.

ನಾವು ಮೈಲೇಜ್ ಪರೀಕ್ಷೆಯ ಫಲಿತಾಂಶಗಳ ವಿವರಗಳನ್ನು ಪಡೆಯುವ ಮೊದಲು, ನಾವು ಪರೀಕ್ಷಿಸಿದ ಕಾಂಪ್ಯಾಕ್ಟ್ ಎಸ್‌ಯುವಿಗಳ ಆವೃತ್ತಿಗಳ ಪವರ್‌ಟ್ರೇನ್ ವಿಶೇಷಣಗಳನ್ನು ನೋಡೋಣ.

ವಿಶೇಷಣಗಳು

ಹೋಂಡಾ ಎಲಿವೇಟ್

ಮಾರುತಿ ಗ್ರ್ಯಾಂಡ್ ವಿಟಾರಾ

ಎಂಜಿನ್‌

  1. 1.5-ಲೀಟರ್ 4 ಸಿಲಿಂಡರ್‌ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್

1.5-ಲೀಟರ್ 4 ಸಿಲಿಂಡರ್‌ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ (ಮೈಲ್ಡ್ ಹೈಬ್ರಿಡ್ )

ಪವರ್‌

121 ಪಿಎಸ್

103 ಪಿಎಸ್

ಟಾರ್ಕ್

145 ಎನ್ಎಂ

137 ಎನ್ಎಂ

ಟ್ರಾನ್ಸ್‌ಮಿಷನ್‌

ಸಿವಿಟಿ

6-ಸ್ಪೀಡ್‌ ಆಟೋಮ್ಯಾಟಿಕ್‌

ಘೋಷಿಸಿರುವ ಇಂಧನ ದಕ್ಷತೆ

ಪ್ರತಿ ಲೀ.ಗೆ 16.92 ಕಿ.ಮೀ

ಪ್ರತಿ ಲೀ.ಗೆ 20.58 ಕಿ.ಮೀ

ಪರೀಕ್ಷಿತ ಇಂಧನ ದಕ್ಷತೆ (ಸಿಟಿ)

ಪ್ರತಿ ಲೀ.ಗೆ 12.60 ಕಿ.ಮೀ

ಪ್ರತಿ ಲೀ.ಗೆ 13.72 ಕಿ.ಮೀ

ಪರೀಕ್ಷಿತ ಇಂಧನ ದಕ್ಷತೆ (ಹೈವೇ)

ಪ್ರತಿ ಲೀ.ಗೆ 16.40 ಕಿ.ಮೀ

ಪ್ರತಿ ಲೀ.ಗೆ 19.05 ಕಿ.ಮೀ

Maruti Grand Vitara

ಹೋಂಡಾ ಎಲಿವೇಟ್‌ನ ಎಂಜಿನ್ ಮಾರುತಿ ಗ್ರ್ಯಾಂಡ್ ವಿಟಾರಾಗಿಂತ 18 PS ಮತ್ತು 8 Nm ನಷ್ಟು ಹೆಚ್ಚು ಔಟ್‌ಪುಟ್‌ ಅನ್ನು ಉತ್ಪಾದಿಸುತ್ತದೆ. ಆದಾಗಿಯೂ, ಗ್ರ್ಯಾಂಡ್ ವಿಟಾರಾ ಅದರ ಮೈಲ್ಡ್‌ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಹೆಚ್ಚಿನ ಇಂಧನ ಆರ್ಥಿಕತೆಗಾಗಿ ಪ್ರಯೋಜನವನ್ನು ಹೊಂದಿದೆ, ಇದು ನಮ್ಮ ಪರೀಕ್ಷೆಗಳಲ್ಲಿಯೂ ಕಂಡುಬಂದಿದೆ. ನಗರದ ರಸ್ತೆಗಳಲ್ಲಿ, ಈ ಎರಡು ವಾಹನಗಳ ನಡುವಿನ ಇಂಧನ ದಕ್ಷತೆಯ ವ್ಯತ್ಯಾಸವು ಕೇವಲ 1 ಕಿ.ಮೀ ಆಗಿದೆ. ಆದರೂ, ಹೈವೇಯಲ್ಲಿನ ಡ್ರೈವಿಂಗ್‌ ಚಾಲನೆಯ ಸಮಯದಲ್ಲಿ, ಹೋಂಡಾ ಎಲಿವೇಟ್‌ಗೆ ಹೋಲಿಸಿದರೆ ಗ್ರಾಂಡ್ ವಿಟಾರಾ ಸುಮಾರು 3 ಕಿ.ಮೀ ಹೆಚ್ಚಿನ ಇಂಧನ ದಕ್ಷತೆಯನ್ನು ನೀಡುತ್ತದೆ.

ಆದರೆ ಎಲಿವೇಟ್ ಮತ್ತು ಗ್ರ್ಯಾಂಡ್ ವಿಟಾರಾ ಎರಡರಲ್ಲೂ ಹೈವೇ ಡ್ರೈವಿಂಗ್ ಪರಿಸ್ಥಿತಿಗಳಲ್ಲಿಯೂ ಸಹ ತಾವು ಘೋಷಿಸಿರುವ ಅಂಕಿಅಂಶಗಳಿಗಿಂತ ಕಡಿಮೆ ಇಂಧನ ದಕ್ಷತೆಯನ್ನು ಹೊಂದಿದೆ ಎಂಬುವುದನ್ನು ನಾವಿಲ್ಲಿ ಗಮನಿಸುವುದು ಮುಖ್ಯವಾಗಿದೆ.

ಇದನ್ನೂ ಪರಿಶೀಲಿಸಿ: Honda Elevate ಸಿವಿಟಿ ವರ್ಸಸ್‌  Honda City ಸಿವಿಟಿ: ವಾಸ್ತವದಲ್ಲಿನ ಕಾರ್ಯಕ್ಷಮತೆ ಹೋಲಿಕೆ

ಮೈಲೇಜ್

ಸಿಟಿ:ಹೈವೇ (50:50)

ಸಿಟಿ:ಹೈವೇ (25:75)

ಸಿಟಿ:ಹೈವೇ (75:25)

ಹೋಂಡಾ ಎಲಿವೇಟ್ ಸಿವಿಟಿ

ಪ್ರತಿ ಲೀ.ಗೆ 14.25 ಕಿ.ಮೀ

ಪ್ರತಿ ಲೀ.ಗೆ 15.25 ಕಿ.ಮೀ

ಪ್ರತಿ ಲೀ.ಗೆ 13.37 ಕಿ.ಮೀ

ಮಾರುತಿ ಗ್ರ್ಯಾಂಡ್ ವಿಟಾರಾ ಆಟೋಮ್ಯಾಟಿಕ್

ಪ್ರತಿ ಲೀ.ಗೆ 15.95 ಕಿ.ಮೀ

ಪ್ರತಿ ಲೀ.ಗೆ 17.36 ಕಿ.ಮೀ

ಪ್ರತಿ ಲೀ.ಗೆ 14.75 ಕಿ.ಮೀ

Honda Elevate

ಅಂತಿಮವಾಗಿ, ಮಾರುತಿ ಗ್ರ್ಯಾಂಡ್ ವಿಟಾರಾ ಮತ್ತೊಮ್ಮೆ ಎಲ್ಲಾ ಮೂರು ಡ್ರೈವಿಂಗ್ ಪರಿಸ್ಥಿತಿಗಳಲ್ಲಿ ಹೋಂಡಾ ಎಲಿವೇಟ್‌ನ ಹಿಂದಿಕ್ಕಿ ವಿಜೇತರಾಗಿ ಹೊರಹೊಮ್ಮುತ್ತದೆ. ನಿಮ್ಮ ಡ್ರೈವಿಂಗ್‌ ಪ್ರಾಥಮಿಕವಾಗಿ ನಗರ ಪ್ರಯಾಣವನ್ನು ಒಳಗೊಂಡಿದ್ದರೆ, ಎರಡೂ ಕಾರುಗಳ ಇಂಧನ ದಕ್ಷತೆಯ ನಡುವಿನ ವ್ಯತ್ಯಾಸವು ಕೇವಲ 1 kmpl ಆಗಿದೆ. ಆದರೆ, ಹೈವೇ ಡ್ರೈವಿಂಗ್‌ನಲ್ಲಿ ಈ ವ್ಯತ್ಯಾಸವು 2 kmpl ಗಿಂತ ಹೆಚ್ಚಾಗುತ್ತದೆ. ಮಿಶ್ರ ಡ್ರೈವಿಂಗ್ ಪರಿಸ್ಥಿತಿಗಳಲ್ಲಿಯೂ ಸಹ, ಮಾರುತಿ 2 kmpl ಗಿಂತ ಸ್ವಲ್ಪ ಕಡಿಮೆ ನೀಡಿದರೂ ಹೋಂಡಾಗಿಂತ ಇಲ್ಲಿಯೂ ಹೆಚ್ಚು ನೀಡುತ್ತದೆ.   

ಸ್ಪಷ್ಟಣೆ: ನಿಮ್ಮ ಡ್ರೈವಿಂಗ್‌ ಸ್ಟೈಲ್‌, ಚಾಲ್ತಿಯಲ್ಲಿರುವ ರಸ್ತೆಯ ಸ್ಥಿತಿ ಮತ್ತು ಕಾರಿನ ಒಟ್ಟಾರೆ ಸ್ಥಿತಿಯನ್ನು ಅವಲಂಬಿಸಿ ಕಾರಿನ ಇಂಧನ ದಕ್ಷತೆಯು ಬದಲಾಗಬಹುದು.

ಗಮನಿಸಿದ ಅಂಶಗಳು

ಗ್ರ್ಯಾಂಡ್ ವಿಟಾರಾ ಎಲಿವೇಟ್‌ಗಿಂತ ಹೆಚ್ಚು ಮೈಲೇಜ್‌ ಅನ್ನು ಹೊಂದಿದೆ ಎಂದು ಕಂಡುಹಿಡಿದಾಗ ಆಶ್ಚರ್ಯವಾಗದಿದ್ದರೂ, ಅವುಗಳ ದಕ್ಷತೆಯಲ್ಲಿನ ನಿಜವಾದ ಅಂತರವು ದೊಡ್ಡದಲ್ಲ. ನಿಮ್ಮ ಆದ್ಯತೆಯು ಇಂಧನ ದಕ್ಷತೆಯಾಗಿದ್ದರೆ, ಗ್ರ್ಯಾಂಡ್ ವಿಟಾರಾ ಬಹಳಷ್ಟು ಅರ್ಥವನ್ನು ನೀಡುತ್ತದೆ. ಆದಾಗಿಯೂ, ಇಂಧನ ದಕ್ಷತೆಗಿಂತ ಫ್ರೀ-ರಿವ್ವಿಂಗ್ ಎಂಜಿನ್‌ನಿಂದ ಹೆಚ್ಚಿನ ಶಕ್ತಿಯನ್ನು ನೀವು ಬಯಸಿದರೆ, ನೀವು ಎಲಿವೇಟ್ ಅನ್ನು ಆರಿಸಿಕೊಳ್ಳಬಹುದು. ಜೊತೆಗೆ, ನೀವು ಇನ್ನೂ ಹೆಚ್ಚಿನ ಇಂಧನ ಮೈಲೇಜ್‌ ಅನ್ನು ಬಯಸಿದರೆ, ನೀವು ಮಾರುತಿ ಕಾಂಪ್ಯಾಕ್ಟ್ ಎಸ್‌ಯುವಿಯ ಪ್ರಬಲ ಹೈಬ್ರಿಡ್ ಆವೃತ್ತಿಯನ್ನು ಸಹ ಪರಿಗಣಿಸಬಹುದು.

ಬೆಲೆ

 

ಹೋಂಡಾ ಎಲಿವೇಟ್

ಮಾರುತಿ ಗ್ರ್ಯಾಂಡ್ ವಿಟಾರಾ

ಎಲ್ಲಾ ವೇರಿಯೆಂಟ್‌ಗಳು

11.58 ರಿಂದ 16.20 ಲಕ್ಷ ರೂ

10.80 ಲಕ್ಷದಿಂದ 20.09 ಲಕ್ಷ ರೂ

ಪೆಟ್ರೋಲ್-ಆಟೋಮ್ಯಾಟಿಕ್‌ ವೇರಿಯೆಂಟ್‌ಗಳು

13.48 ಲಕ್ಷದಿಂದ 16.20 ಲಕ್ಷ ರೂ

13.60 ಲಕ್ಷದಿಂದ 16.91 ಲಕ್ಷ ರೂ

ಎಲಿವೇಟ್ ಸಿವಿಟಿಯು ಗ್ರ್ಯಾಂಡ್ ವಿಟಾರಾ ಆಟೋಮ್ಯಾಟಿಕ್‌ಗಿಂತ ಸ್ವಲ್ಪ ಹೆಚ್ಚು ಕೈಗೆಟುಕುವ ಬೆಲೆಯಲ್ಲಿದೆ. ಈ ಎರಡೂ ಕಾಂಪ್ಯಾಕ್ಟ್ ಎಸ್‌ಯುವಿಗಳು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಟೊಯೋಟಾ ಹೈರೈಡರ್, ವೋಕ್ಸ್‌ವ್ಯಾಗನ್ ಟೈಗುನ್, ಸ್ಕೋಡಾ ಕುಶಾಕ್ ಮತ್ತು ಸಿಟ್ರೊಯೆನ್ ಸಿ3 ಏರ್‌ಕ್ರಾಸ್‌ಗಳ ವಿರುದ್ಧ ಸ್ಪರ್ಧೆಯನ್ನು ಒಡ್ಡುತ್ತದೆ.  

ಹೆಚ್ಚು ಓದಿ : ಮಾರುತಿ ಗ್ರಾಂಡ್ ವಿಟಾರಾ ಆನ್ ರೋಡ್ ಬೆಲೆ

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment ನಲ್ಲಿ ಮಾರುತಿ Grand Vitara

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience