ಹೊಸ ಲುಕ್ ಮತ್ತು ಇನ್ನಷ್ಟು ಸುರಕ್ಷತಾ ಫೀಚರ್‌ಗಳೊಂದಿಗೆ ನವೀಕೃತಗೊಂಡಿದೆ ಹ್ಯುಂಡೈ ಔರಾ
ಈ ಸಬ್‌ಕಾಂಪ್ಯಾಕ್ಟ್ ಸೆಡಾನ್ ಇತರ ಸೇಫ್ಟಿ ಬಿಟ್‌ಗಳೊಂದಿಗೆ ಪ್ರಮಾಣಿತವಾಗಿ ವಿಭಾಗದಲ್ಲೇ ಮೊದಲು ಪಡೆಯುತ್ತಿದೆ ನಾಲ್ಕು ಏರ್‌ಬ್ಯಾಗ್‌ಗಳು
-
ಔರಾ ಬೆಲೆ ರೂ. 6.30 ಲಕ್ಷದಿಂದ 8.87 ಲಕ್ಷದವರೆಗೆ (ಎಕ್ಸ್-ಶೋರೂಂ).
-
ಹೊಸ ಮುಂಭಾಗ ಹೊಂದಿದೆ; ಸೈಡ್ ಮತ್ತು ರಿಯರ್ ಲುಕ್ ಅದೇ ರೀತಿಯಲ್ಲಿದೆ.
-
ಕ್ಯಾಬಿನ್ ‘ಔರಾ’ ಬ್ಯಾಡ್ಜಿಂಗ್‌ನೊಂದಿಗೆ ಹೊಸ ಲೈಟ್ ಗ್ರೇ ಸೀಟ್ ಅಪ್‌ಹೋಲ್‌ಸ್ಟೆರಿಯನ್ನು ಹೊಂದಿದೆ.
-
ಹೆಡ್‌ಲ್ಯಾಂಪ್‌ಗಳು, ಅನಲಾಗ್ ಕ್ಲಸ್ಟರ್, ಪೂಟ್‌ವೆಲ್ ಲೈಟಿಂಗ್ ಮತ್ತು C-ಟೈಪ್ ಚಾರ್ಜರ್‌ನೊಂದಿಗೆ ಫ್ರಂಟ್ USB ಯಂತಹ ಹೊಸ ಫೀಚರ್‌ಗಳು
-
ನಾಲ್ಕು ಏರ್‌ಬ್ಯಾಗ್‌ಗಳು ಈಗ ಸ್ಟಾಂಡರ್ಡ್ ಆಗಿವೆ; ಆರು ಏರ್‌ಬ್ಯಾಗ್‌ಗಳು, ESC, ಹಿಲ್‌ಹೋಲ್ಡ್ ಅಸಿಸ್ಟ್ ಮತ್ತು TPMS ಅನ್ನೂ ನೀಡಲಾಗಿದೆ.
-
ತನ್ನ1.2-ಲೀಟರ್ ಪೆಟ್ರೋಲ್ ಮತ್ತು ಸಿಎನ್‌ಜಿ ಆಯ್ಕೆಗಳನ್ನು ಉಳಿಸಿಕೊಂಡಿದೆ.
ನವೀಕೃತ ಗ್ರ್ಯಾಂಡ್ i10 Nios ಬಿಡುಗಡೆಗೊಂಡ ಬೆನ್ನಲ್ಲೇ ಹ್ಯುಂಡೈ ನವೀಕೃತ ಔರಾ ಅನ್ನು ಬಿಡುಗಡೆಗೊಳಿಸಿದೆ. ಸಬ್‌ಕಾಂಪ್ಯಾಕ್ಟ್ ಸೆಡಾನ್‌ನ ಹೊಸ ಮುಂಭಾಗ ಮತ್ತು ಹೆಚ್ಚಿನ ಸೇಫ್ಟಿ ಫೀಚರ್‌ಗಳಿಗೆ ಸಂಬಂಧಿಸಿದಂತೆ ಅದೇ ರೀತಿಯಾದ ನವೀಕರಣಗಳನ್ನು ಪಡೆಯುತ್ತದೆ. ಈಗ ಕೆಲವು ಸಮಯದವರೆಗೆ ಬುಕಿಂಗ್‌ಗಳನ್ನು ಮಾಡಬಹುದು ಮತ್ತು ಬೆಲೆಗಳು ರೂ. 6.30 ಲಕ್ಷದಿಂದ ಪ್ರಾರಂಭವಾಗುತ್ತದೆ (ಎಕ್ಸ್-ಶೋರೂಂ).
ವೇರಿಯೆಂಟ್‌ವಾರು ಬೆಲೆಗಳು
ವೇರಿಯೆಂಟ್‌ಗಳು |
ಪೆಟ್ರೋಲ್-MT |
ಪೆಟ್ರೋಲ್-AMT |
ಸಿಎನ್‌ಜಿ |
E |
ರೂ 6.30 ಲಕ್ಷ |
- |
- |
S |
ರೂ 7.15 ಲಕ್ಷ |
- |
ರೂ 8.10 ಲಕ್ಷ |
SX |
ರೂ 7.92 ಲಕ್ಷ |
ರೂ 8.73 lakh |
ರೂ 8.87 ಲಕ್ಷ |
SX (O) |
ರೂ 8.58 ಲಕ್ಷ |
- |
- |
ನವೀಕೃತ ಪೂರ್ವ ಮಾಡೆಲ್‌ಗೆ ಹೋಲಿಸಿದರೆ, ಈ ವೇರಿಯೆಂಟ್‌ಗಳು ಈಗ ರೂ 11,000 ರಿಂದ ರೂ. 32,000 ದಷ್ಟು ಹೆಚ್ಚಳವಾಗಿದೆ.
ನವೀನ ಹಾಗೂ ಹೆಚ್ಚು ಪ್ರೀಮಿಯಂ ಆಗಿ ಕಾಣುತ್ತದೆ
ಹೊಸ ಲೋ-ಪೊಸಿಶನ್‌ನ ಗ್ರಿಲ್, ಮರುವಿನ್ಯಾಸಗೊಳಿಸಿದ ಬಂಪರ್ ಮತ್ತು ಎಲ್ಇಡಿ ಡಿಆರ್‌ಎಲ್‌ಗಳೊಂದಿಗೆ ನವೀಕೃತ ಔರಾ ಹೊರಗಿನಿಂದ ಗಮನಾರ್ಹವಾಗಿ ವಿಭಿನ್ನ ನೋಟ ಹೊಂದಿದೆ. ಇವು ಕೇವಲ ಡಿಸೈನ್ ಬದಲಾವಣೆಗಳಷ್ಟೆ, ಆದಾಗ್ಯೂ ಹೆಡ್‌ಲ್ಯಾಂಪ್‌ಗಳು, ಸೈಡ್ ಪ್ರೊಫೈಲ್, ಮತ್ತು ರಿಯರ್ ಪ್ರೊಫೈಲ್‌ಗಳಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ.
ಒಳಭಾಗದಲ್ಲಿ ಕನಿಷ್ಠ ಬದಲಾವಣೆಗಳು
ಕ್ಯಾಬಿನ್ ಹೊಸ ಲೈಟ್ ಗ್ರೇ ಸೀಟ್ ಅಪ್‌ಹೋಲ್ಸ್ಟ್ರಿ ಮತ್ತು ಹೆಡ್‌ರೆಸ್ಟ್ ಮೇಲೆ ‘ಔರಾ’ ಬ್ಯಾಡ್ಜಿಂಗ್‌ನಂತಹ ಸೂಕ್ಷ್ಮ ಬದಲಾವಣೆಗಳನ್ನು ಪಡೆದಿದೆ. ನವೀಕೃತ ಔರಾ ಡ್ಯುಯಲ್-ಟೋನ್ ಇಂಟೀರಿಯರ್ ಲೇಔಟ್ ಅನ್ನು ಹಿಂದಿನಂತೆಯೇ ಹೊಂದಿದೆ.
ಇದನ್ನೂ ಓದಿ: ಮಾರುತಿ ಸ್ವಿಫ್ಟ್‌ನಲ್ಲಿ ಇಲ್ಲದ ಈ 7 ಫೀಚರ್‌ಗಳನ್ನು ನೀವು ಕಾಣಬಹುದು ಹ್ಯುಂಡೈ ಗ್ರ್ಯಾಂಡ್ i10 Nios ನಲ್ಲಿ
ಹೊಸ ಫೀಚರ್‌ಗಳು
ಹ್ಯುಂಡೈನಲ್ಲಿ ಸೇರ್ಪಡೆಗೊಳಿಸಲಾದ ಫೀಚರ್‌ಗಳಾದ ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು, ಫೂಟ್‌ವೆಲ್ ಲೈಟಿಂಗ್, ಮತ್ತು ಫ್ರಂಟ್ USB C-ಟೈಪ್ ಚಾರ್ಜರ್ ಔರಾಗೆ ಹೊಸದು. ಇದು ಎಂಟು-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ, ವಯರ್‌ಲೆಸ್ ಚಾರ್ಜಿಂಗ್, ಕ್ರೂಸ್ ಕಂಟ್ರೋಲ್ ಮತ್ತು ಆಟೋಮ್ಯಾಟಿಕ್ ಎಸಿಯಂಥ ಬಿಟ್‌ಗಳನ್ನೂ ಹೊಂದಿದೆ. ಇನ್ಸ್‌ಟ್ರುಮೆಂಟ್ ಕ್ಲಸ್ಟರ್ ಅನ್ನು ತುಸು ಹೊಂದಿಸಲಾಗಿದ್ದು, ಆದರೂ ಮೊದಲಿನಂತೆ 3.5-ಇಂಚು MID ಅನ್ನು ಪಡೆದಿದೆ.
ಇದು ಸುರಕ್ಷಿತ
ಸುರಕ್ಷತೆಗೆ ಸಂಬಂಧಿಸಿದಂತೆ, ಔರಾ ಅನೇಕ ನವೀಕರಣಗಳನ್ನು ಹೊಂದಿದೆ. ನಾಲ್ಕು ಏರ್‌ಬ್ಯಾಗ್‌ಗಳು ಎಲ್ಲಾ ವೇರಿಯೆಂಟ್‌ಗಳಲ್ಲಿಯೂ ಸ್ಟಾಂಡರ್ಡ್ ಆಗಿದ್ದು, ಟಾಪ್-ಎಂಡ್ ವೇರಿಯೆಂಟ್‌ಗಳಲ್ಲಿ ಆರು ಏರ್‌ಬ್ಯಾಗ್‌ಗಳು ಲಭ್ಯವಿದೆ. ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಹಿಲ್-ಸ್ಟಾರ್ಟ್ ಅಸಿಸ್ಟ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಕೂಡಾ ಸುಡಾನ್‌ನೊಂದಿಗೆ ಲಭ್ಯವಿದ್ದು ಇದರ ಸುರಕ್ಷತಾ ಅಂಶವನ್ನು ಹೆಚ್ಚಿಸಿದೆ.
ಹೊಸ ಬಣ್ಣದ ಆಯ್ಕೆ
ಹ್ಯುಂಡೈ ಪ್ರಸ್ತುತ ಇರುವಂಹ ಶೇಡ್‌ಗಳು- ಪೋಲಾರ್ ವೈಟ್, ಟೈಟನ್ ಗ್ರೇ, ಟೈಫೂನ್ ಸಿಲ್ವರ್,ಟೀ ಬ್ಲೂ ಮತ್ತು ಫೆರ್ರಿ ರೆಡ್ ಇವುಗಳೊಂದಿಗೆ ಹೊಸ ಔರಾಗೆ ‘ಸ್ಟೇರಿ ನೈಟ್’ ಹೊಸ ಬಣ್ಣದ ಆಯ್ಕೆಯನ್ನು ಪರಿಚಯಿಸಿದೆ.
ನವೀಕೃತ ಪವರ್‌ಟ್ರೈನ್‌ಗಳು
ಔರಾ ಅದೇ 83PS/113Nm, 1.2-ಲೀಟರ್ ಪೆಟ್ರೋಲ್ ಇಂಜಿನ್ ಹೊಂದಿದ್ದು, ಈಗ ಅದು E20 (20 ಶೇಕಡಾ ಇಥೆನಾಲ್ ಬ್ಲೆಂಡ್) ಮತ್ತು BS6 ಫೇಸ್ 2-ಕಂಪ್ಲಾಯೆಂಟ್ ಆಗಿದೆ. ಇಲ್ಲಿ ನೀವು ಫೈವ್-ಸ್ಪೀಡ್ ಮ್ಯಾನುವಲ್ ಮತ್ತು ಟ್ರಾನ್ಸ್‌ಮಿಶನ್‌ಗಳ ನಡುವೆ ಆಯ್ಕೆ ಮಾಡಬಹುದು.
ಹ್ಯುಂಡೈ ಔರಾ ಡೀಸಿಲ್ ಅನ್ನು ಕಳೆದ ವರ್ಷ ಸ್ಥಗಿತಗೊಳಿಸಿದ್ದು; ಮತ್ತೆ ಈಗ,1-ಲೀಟರ್ ಟರ್ಬೋ-ಪೆಟ್ರೋಲ್ ಇಂಜಿನ್ ಅನ್ನೂ ಸ್ಥಗಿತಗೊಳಿಸಿದಂತೆ ತೋರುತ್ತದೆ. AMT ಆಯ್ಕೆಯನ್ನು ಟಾಪ್ SXನ ಕೆಳಗಿನ ಒಂದು ವೇರಿಯೆಂಟ್‌ಗೆ ಸೀಮಿತಗೊಳಿಸಲಾಗಿದೆ.
ಪ್ರತಿಸ್ಪರ್ಧಿಗಳು
ಔರಾಗೆ ಸ್ಪರ್ಧೆ ಮುಂದುವರಿಸಬೇಕಾಗಿದೆ ಇವುಗಳ ಜೊತೆಗೆ: ಹೋಂಡಾ ಅಮೇಝ್, ಟಾಟಾ ಟಿಗೋರ್ ಮತ್ತು ಮಾರುತಿ ಸುಝುಕಿ ಡಿಝೈರ್.
ಇನ್ನಷ್ಟು ಓದಿ : ಔರಾದ ಆನ್ ರೋಡ್ ಬೆಲೆ