Hyundai Creta CVT ವರ್ಸಸ್ Honda Elevate CVT: ಆನ್ ರೋಡ್ ಪರ್ಫಾರ್ಮೆನ್ಸ್ ನ ಹೋಲಿಕೆ
ಕ್ರೆಟಾ ಮತ್ತು ಎಲಿವೇಟ್ ಎರಡರಲ್ಲೂ 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್-CVT ಲಭ್ಯವಿದೆ, ಆದರೆ ಆಕ್ಸಿಲರೇಷನ್ ಮತ್ತು ಬ್ರೇಕಿಂಗ್ ಟೆಸ್ಟ್ ನಲ್ಲಿ ಅವುಗಳ ಪರ್ಫಾರ್ಮೆನ್ಸ್ ಹೇಗಿದೆ ಎಂಬುದನ್ನು ನೋಡೋಣ
ಕಾಂಪ್ಯಾಕ್ಟ್ SUV ಸೆಗ್ಮೆಂಟ್ ನಲ್ಲಿ ಹ್ಯುಂಡೈ ಕ್ರೆಟಾ ಹಲವು ವರ್ಷಗಳಿಂದ ಜನಪ್ರಿಯ ಆಯ್ಕೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ, ಕೇವಲ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುವ ಹೋಂಡಾ ಎಲಿವೇಟ್‌ನಂತಹ ಹೊಸ ಮತ್ತು ಆಧುನಿಕ ಪ್ರತಿಸ್ಪರ್ಧಿಗಳು ಮಾರುಕಟ್ಟೆಯನ್ನು ಪ್ರವೇಶಿಸಿವೆ. ಈ ಎರಡೂ ಕಾಂಪ್ಯಾಕ್ಟ್ SUVಗಳು CVT ಆಟೋಮ್ಯಾಟಿಕ್ ನೊಂದಿಗೆ ನ್ಯಾಚುರಲಿ ಆಸ್ಪಿರೇಟೆಡ್ ಪೆಟ್ರೋಲ್ ಯೂನಿಟ್ ಅನ್ನು ಪಡೆಯುತ್ತವೆ. ನಾವು ಎರಡೂ SUVಗಳನ್ನು ಅವುಗಳ CVT ಆಟೋಮ್ಯಾಟಿಕ್ ವರ್ಷನ್ ನೊಂದಿಗೆ ಟೆಸ್ಟ್ ಮಾಡಿದ್ದೇವೆ ಮತ್ತು ನಿಜವಾದ ಪರಿಸ್ಥಿತಿಗಳಲ್ಲಿ ಯಾವುದು ಉತ್ತಮವಾಗಿ ಕೆಲಸ ಮಾಡುತ್ತದೆ ಎಂಬುದನ್ನು ನೋಡಲು ಅವುಗಳ ಪರ್ಫಾರ್ಮೆನ್ಸ್ ಅನ್ನು ಹೋಲಿಸಿದ್ದೇವೆ.
ಪವರ್‌ಟ್ರೇನ್ ಕುರಿತು..
ಸ್ಪೆಕ್ಸ್ |
ಹುಂಡೈ ಕ್ರೆಟಾ |
ಹೋಂಡಾ ಎಲಿವೇಟ್ |
ಇಂಜಿನ್ |
1.5-ಲೀಟರ್ N/A ಪೆಟ್ರೋಲ್ l |
1.5-ಲೀಟರ್ N/A ಪೆಟ್ರೋಲ್ |
ಪವರ್ |
115 PS |
121 PS |
ಟಾರ್ಕ್ |
144 Nm |
145 Nm |
ಟ್ರಾನ್ಸ್‌ಮಿಷನ್ |
6-ಸ್ಪೀಡ್ MT/CVT |
6-ಸ್ಪೀಡ್ MT/CVT |
ನಾವು ಎರಡೂ SUV ಗಳ 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಎಂಜಿನ್‌ಗಳನ್ನು ಹೋಲಿಸಿದ್ದೇವೆ. ಇಲ್ಲಿ ಹೋಂಡಾ SUV ಸ್ವಲ್ಪ ಹೆಚ್ಚು ಶಕ್ತಿಶಾಲಿ ಎಂಜಿನ್ ಹೊಂದಿದೆ ಎಂದು ಟೇಬಲ್ ತೋರಿಸುತ್ತದೆ. ಟ್ರಾನ್ಸ್‌ಮಿಷನ್ ಆಯ್ಕೆಯನ್ನು ನೋಡಿದರೆ, ಎರಡೂ SUVಗಳು ನ್ಯಾಚುರಲಿ ಆಸ್ಪಿರೇಟೆಡ್ ಎಂಜಿನ್‌ಗಳೊಂದಿಗೆ 6-ಸ್ಪೀಡ್ ಮ್ಯಾನ್ಯುವಲ್ ಮತ್ತು CVT ನಡುವೆ ಆಯ್ಕೆಯನ್ನು ನೀಡುತ್ತವೆ.
ಆಕ್ಸಿಲರೇಷನ್ ಟೆಸ್ಟ್
ಟೆಸ್ಟ್ ಗಳು |
ಹುಂಡೈ ಕ್ರೆಟಾ CVT |
ಹೋಂಡಾ ಎಲಿವೇಟ್ CVT |
ವ್ಯತ್ಯಾಸ |
ಪ್ರತಿ ಗಂಟೆಗೆ 0-100 ಕಿ.ಮೀ |
13.36 ಸೆಕೆಂಡುಗಳು |
12.35 ಸೆಕೆಂಡುಗಳು |
+1.01 ಸೆಕೆಂಡುಗಳು |
ಕ್ವಾರ್ಟರ್ ಮೈಲ್ |
19.24 ಸೆಕೆಂಡುಗಳಲ್ಲಿ ಗಂಟೆಗೆ 119.92 ಕಿ.ಮೀ |
18.64 ಸೆಕೆಂಡುಗಳಲ್ಲಿ ಗಂಟೆಗೆ 125.11 ಕಿ.ಮೀ |
+0.6 ಸೆಕೆಂಡುಗಳು |
ಕಿಕ್‌ಡೌನ್ (ಗಂಟೆಗೆ 20-80 ಕಿ.ಮೀ) |
7.3 ಸೆಕೆಂಡುಗಳು |
7.2 ಸೆಕೆಂಡುಗಳು |
+0.1 ಸೆಕೆಂಡುಗಳು |
ಗಂಟೆಗೆ 0-100 ಕಿ.ಮೀ ಆಕ್ಸಿಲರೇಷನ್ ಟೆಸ್ಟ್ ನಲ್ಲಿ, ಹೋಂಡಾದ ಕಾಂಪ್ಯಾಕ್ಟ್ SUV ಕ್ರೆಟಾಗಿಂತ 1.01 ಸೆಕೆಂಡುಗಳಷ್ಟು ವೇಗವಾಗಿದೆ ಎಂದು ಕಂಡುಬಂದಿದೆ. ಕ್ವಾರ್ಟರ್ ಮೈಲ್ ಟೆಸ್ಟ್ ನಲ್ಲಿ ಕೂಡ, ಎಲಿವೇಟ್ ಕೇವಲ 0.6 ಸೆಕೆಂಡ್‌ಗಳ ಅಂತರದಿಂದ ಕ್ರೆಟಾಗಿಂತ ಮುಂದಿದೆ. ಆದರೆ, ಗಂಟೆಗೆ 20 ರಿಂದ 80 ಕಿ.ಮೀ ಕಿಕ್‌ಡೌನ್‌ನಲ್ಲಿ ಅವುಗಳ ಸಮಯದ ನಡುವಿನ ವ್ಯತ್ಯಾಸವು ಬಹುತೇಕ ಶೂನ್ಯವಾಗಿತ್ತು.
ಇದನ್ನು ಕೂಡ ಓದಿ: ಹ್ಯುಂಡೈ ಕ್ರೆಟಾ EV ಕಿಯಾ EV3 ಯಿಂದ ಪಡೆಯಬಹುದಾದ 5 ಫೀಚರ್ ಗಳು
ಬ್ರೇಕಿಂಗ್ ಟೆಸ್ಟ್
ಟೆಸ್ಟ್ ಗಳು |
ಹುಂಡೈ ಕ್ರೆಟಾ CVT |
ಹೋಂಡಾ ಎಲಿವೇಟ್ CVT |
ವ್ಯತ್ಯಾಸ |
ಪ್ರತಿ ಗಂಟೆಗೆ 100-0 ಕಿ.ಮೀ |
38.12 ಮೀಟರ್ |
37.98 ಮೀಟರ್ |
+0.14 ಮೀಟರ್ |
ಪ್ರತಿ ಗಂಟೆಗೆ 80-0 ಕಿ.ಮೀ |
24.10 ಮೀಟರ್ |
23.90 ಮೀಟರ್ |
+0.2 ಮೀಟರ್ |
ಬ್ರೇಕಿಂಗ್ ಟೆಸ್ಟ್ ನಲ್ಲಿ, ಹೋಂಡಾ ಎಲಿವೇಟ್ ಗಂಟೆಗೆ 100 ಕಿ.ಮೀನಿಂದ ಸಂಪೂರ್ಣವಾಗಿ ನಿಲ್ಲಲು 37.98 ಮೀಟರ್ ದೂರ ತೆಗೆದುಕೊಂಡರೆ, ಕ್ರೆಟಾ 38.12 ಮೀಟರ್ ತೆಗೆದುಕೊಂಡಿತು, ಇಲ್ಲಿ ವ್ಯತ್ಯಾಸ ಕೇವಲ 0.14 ಮೀಟರ್. ಗಂಟೆಗೆ 80 ಕಿ.ಮೀನಿಂದ 0 ಗೆ ಬರಲು, ಅವುಗಳ ನಡುವಿನ ವ್ಯತ್ಯಾಸವು ಕೇವಲ 0.2 ಮೀಟರ್ ಆಗಿತ್ತು ಆದರೆ ಎಲಿವೇಟ್ ಕ್ರೆಟಾಕ್ಕಿಂತ ಕಡಿಮೆ ದೂರವನ್ನು ತೆಗೆದುಕೊಂಡಿದೆ. ಎರಡೂ SUVಗಳು 17-ಇಂಚಿನ ವೀಲ್ ಗಳನ್ನು ಪಡೆದಿವೆ ಆದರೆ ಕ್ರೆಟಾ ಆಲ್-ಡಿಸ್ಕ್ ಬ್ರೇಕ್ ಗಳನ್ನು ಹೊಂದಿದೆ ಮತ್ತು ಎಲಿವೇಟ್ ಮುಂಭಾಗದ ವೀಲ್ ಗಳಲ್ಲಿ ಮಾತ್ರ ಡಿಸ್ಕ್ ಬ್ರೇಕ್ ಗಳನ್ನು ಪಡೆಯುತ್ತದೆ.
ಬೆಲೆ ಹೋಲಿಕೆ
ಹುಂಡೈ ಕ್ರೆಟಾ CVT |
ಹೋಂಡಾ ಎಲಿವೇಟ್ CVT |
ರೂ. 15.86 ಲಕ್ಷದಿಂದ 18.88 ಲಕ್ಷ |
ರೂ. 13.71 ಲಕ್ಷದಿಂದ 16.51 ಲಕ್ಷ |
ಬೆಲೆಯ ವಿಷಯಕ್ಕೆ ಬಂದರೆ, ಎಲಿವೇಟ್ ಪೆಟ್ರೋಲ್-CVT ಕ್ರೆಟಾ ಪೆಟ್ರೋಲ್-CVT ಗಿಂತ 2.15 ಲಕ್ಷ ರೂಪಾಯಿ ಕಡಿಮೆ ಬೆಲೆಯಲ್ಲಿ ಸಿಗುತ್ತದೆ. ಎರಡೂ SUVಗಳು ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೋಟಾ ಹೈರ್ಡರ್, ಸ್ಕೋಡಾ ಕುಶಾಕ್, ಫೋಕ್ಸ್‌ವ್ಯಾಗನ್ ಟೈಗನ್ ಮತ್ತು ಸಿಟ್ರೊಯೆನ್ C3 ಏರ್‌ಕ್ರಾಸ್‌ಗಳಿಗೆ ಪ್ರತಿಸ್ಪರ್ಧಿಯಾಗಿವೆ.
ಇನ್ನಷ್ಟು ಓದಿ: ಹ್ಯುಂಡೈ ಕ್ರೆಟಾ ಆನ್ ರೋಡ್ ಬೆಲೆ