ಅಧಿಕ ಫೀಚರ್‌ಗಳು ಮತ್ತು ಹೆಚ್ಚು ಶಕ್ತಿಯುತ ಟರ್ಬೋ ಎಂಜಿನ್ ಅನ್ನು ಹೊಂದಿರುವ ನವೀಕೃತ ಹ್ಯುಂಡೈ ಕ್ರೆಟಾ ರೂ. 11 ಲಕ್ಷಕ್ಕೆ ಬಿಡುಗಡೆ
ಹುಂಡೈ ಕ್ರೆಟಾ ಗಾಗಿ rohit ಮೂಲಕ ಜನವರಿ 16, 2024 06:34 pm ರಂದು ಪ್ರಕಟಿಸಲಾಗಿದೆ
- 229 Views
- ಕಾಮೆಂಟ್ ಅನ್ನು ಬರೆಯಿರಿ
ನವೀಕೃತ ಹ್ಯುಂಡೈ ಕ್ರೆಟಾ ಹೆಚ್ಚು ಬೋಲ್ಡ್ ಆದ ನೋಟವನ್ನು ಹೊಂದಿದ್ದು ADAS ಮತ್ತು 360-ಡಿಗ್ರಿ ಕ್ಯಾಮೆರಾದಂತಹ ಆಧುನಿಕ ತಂತ್ರಜ್ಞಾನವನ್ನು ಪಡೆಯುತ್ತದೆ
-
ಇದು ಏಳು ವಿಶಾಲವಾದ ವೇರಿಯೆಂಟ್‌ಗಳಲ್ಲಿ ಲಭ್ಯ: E, EX, S, S (O), SX, SX ಟೆಕ್, ಮತ್ತು SX (O).
-
ಎಕ್ಸ್‌ಟೀರಿಯರ್‌ನಲ್ಲಿ ಸಂಪರ್ಕಿತ ಲೈಟಿಂಗ್ ಸೆಟಪ್‌ಗಳು, ಮರುವಿನ್ಯಾಸಗೊಳಿಸಲಾದ ಮುಂಭಾಗ ಮತ್ತು ಹಿಂಭಾಗದ ಪ್ರೊಫೈಲ್‌ಗಳನ್ನು ಹೊಂದಿರುತ್ತದೆ.
-
ಕ್ಯಾಬಿನ್ ಈಗ ಪರಿಷ್ಕೃತ ಡ್ಯಾಶ್‌ಬೋರ್ಡ್ ವಿನ್ಯಾಸ ಮತ್ತು ಡ್ಯುಯಲ್ 10.25-ಇಂಚಿನ ಡಿಸ್‌ಪ್ಲೇಗಳನ್ನು ಹೊಂದಿದೆ.
-
ಈಗ ಹೊಸ ಕ್ಲೈಮ್ಯಾಟ್ ಕಂಟ್ರೋಲ್ ಪ್ಯಾನಲ್‌ನೊಂದಿಗೆ ಡ್ಯುಯಲ್-ಝೋನ್ AC ಅನ್ನು ಪಡೆಯುತ್ತದೆ.
-
1.5-ಲೀಟರ್ ಪೆಟ್ರೋಲ್ ಮತ್ತು ಡಿಸೇಲ್ ಎಂಜಿನ್‌ಗಳನ್ನು ನಿರ್ಗಮಿತ ಮಾದರಿಯಿಂದ ಉಳಿಸಿಕೊಂಡಿದ್ದು, ಈಗ ವರ್ನಾದ 1.5-ಲೀಟರ್ ಟರ್ಬೋ ಘಟಕದೊಂದಿಗೆ ಲಭ್ಯವಿದೆ.
-
ಬೆಲೆಗಳು ಈಗ ರೂ. 11 ಲಕ್ಷದಿಂದ ಪ್ರಾರಂಭವಾಗುತ್ತವೆ (ಪರಿಚಯಾತ್ಮಕ, ಎಕ್ಸ್-ಶೋರೂಮ್ ಪ್ಯಾನ್ ಇಂಡಿಯಾ)
ಹ್ಯುಂಡೈ ಎರಡನೇ ಪೀಳಿಗೆಯ ಕ್ರೆಟಾವನ್ನು 2020 ರ ಆರಂಭದಿಂದ ಭಾರತದಲ್ಲಿ ಮಾರಾಟ ಮಾಡುತ್ತಿದ್ದು, 2024 ಕ್ಕೆ ಇದರ ನವೀಕೃತ ಆವೃತ್ತಿಯನ್ನು ನೀಡಿದೆ. ಹೊಸ ಹ್ಯುಂಡೈ ಕ್ರೆಟಾವು ಹೊರಭಾಗ ಮತ್ತು ಒಳಭಾಗದಲ್ಲಿ ಪರಿಷ್ಕೃತ ವಿನ್ಯಾಸವನ್ನು ಪಡೆದಿದ್ದು ಹೆಚ್ಚುವರಿ ಫೀಚರ್‌ಗಳನ್ನು ಹೊಂದಿದೆ. ಇದರ ಬೆಲೆಗಳು ಈಗ ರೂ. 11 ಲಕ್ಷದಿಂದ ಆರಂಭಗೊಳ್ಳಲಿವೆ (ಪರಿಚಯಾತ್ಮಕ, ಎಕ್ಸ್-ಶೋರೂಮ್, ಪ್ಯಾನ್ ಇಂಡಿಯಾ)
ಹೊರಭಾಗದ ಬದಲಾವಣೆ
A post shared by CarDekho India (@cardekhoindia)
ನವೀಕರಣದಲ್ಲಿ, ಈ 2024 ರ ಹ್ಯುಂಡೈ ಕ್ರೆಟಾ ಹೆಚ್ಚು ಗಟ್ಟಿಮುಟ್ಟಾದ ನೋಟವನ್ನು ಪಡೆದುಕೊಂಡಿದೆ. ನವೀಕರಣದಲ್ಲಿ ಮರುವಿನ್ಯಾಸಗೊಳಿಸಲಾದ ಗ್ರಿಲ್‌ನೊಂದಿಗೆ ಪರಿಷ್ಕೃತ ಮುಂಭಾಗ, ಉದ್ದನೆಯ ಎಲ್‌ಇಡಿ ಡಿಆರ್‌ಎಲ್ ಸ್ಟ್ರಿಪ್ ಮತ್ತು ಎಲ್‌ಇಡಿ ಹೆಡ್‌ಲೈಟ್‌ಗಳ ಸೆಟ್ ಸೇರಿವೆ. ಕೆಳಗಿನ ಭಾಗವು ಹೆಚ್ಚು ದೃಢವಾದ ಸಿಲ್ವರ್ ಸ್ಕಿಡ್ ಪ್ಲೇಟ್ ಅನ್ನು ಹೊಂದಿದೆ.
ಈ ಎಸ್‌ಯುವಿಯ ಪ್ರೊಫೈಲ್ ಬಹುತೇಕ ಒಂದೇ ಆಗಿರುತ್ತದೆಯಾದರೂ ಒಂದು ವ್ಯತ್ಯಾಸವೆಂದರೆ ಹೊಸ ಅಲಾಯ್ ವ್ಹೀಲ್‌ಗಳು. ಹಿಂಭಾಗದಲ್ಲಿ ರಿಫ್ರೆಶ್ ಮಾಡಲಾದ ಕ್ರೆಟಾ ಮತ್ತು ಮುಂಭಾಗದಲ್ಲಿ ಸ್ವಲ್ಪ ವ್ಯತ್ಯಾಸವನ್ನು ಹೊಂದಿರುವ ಎಲ್-ಆಕಾರದ ವಿನ್ಯಾಸವನ್ನು ಪ್ರತಿಬಿಂಬಿಸುವ ಸಂಪರ್ಕಿತ ಎಲ್‌ಇಡಿ ಟೈಲ್ ಲ್ಯಾಂಪ್‌ಗಳನ್ನು ಹೊಂದಿದೆ. ಇದು ಟ್ವೀಕ್ ಮಾಡಲಾದ ಬಂಪರ್ ಅನ್ನು ಸಹ ಹೊಂದಿದ್ದು, ಈಗ ಸಿಲ್ಪರ್ ಸ್ಕಿಡ್ ಪ್ಲೇಟ್ ಅನ್ನು ಒಳಗೊಂಡಿದೆ.
ಅನೇಕ ಕ್ಯಾಬಿನ್ ಮತ್ತು ಫೀಚರ್ ಅಪ್‌ಡೇಟ್‌ಗಳು
ಈ 2024 ಕ್ರೆಟಾದ ಇಂಟೀರಿಯರ್ ಸಮಗ್ರ ಮರುವಿನ್ಯಾಸವನ್ನು ಪಡೆದಿದ್ದು, ಒಂದು ಇನ್‌ಫೊಟೇನ್‌ಮೆಂಟ್ ಸಿಸ್ಟಮ್ ಮತ್ತು ಇನ್ನೊಂದು ಇನ್‌ಸ್ಟ್ರುಮೆಂಟೇಷನ್‌ಗಾಗಿ ಎರಡು ಡ್ಯುಯಲ್ ಇಂಟಿಗ್ರೇಟೆಡ್ 10.25-ಇಂಚಿನ ಡಿಸ್‌ಪ್ಲೇ ಅನ್ನು ಒಳಗೊಂಡಿರುತ್ತದೆ. ಪ್ರಯಾಣಿಕರ ಬದಿಯ ಡ್ಯಾಶ್‌ಬೋರ್ಡ್‌ನ ಮೇಲಿನ ವಿಭಾಗವು ಈಗ ಪಿಯಾನೋ ಬ್ಲ್ಯಾಕ್ ಪ್ಯಾನೆಲ್ ಹೊಂದಿದೆ ಮತ್ತು ಅದರ ಕೆಳಗೆ ಆ್ಯಂಬಿಯೆಂಟ್ ಲೈಟಿಂಗ್‌ನೊಂದಿಗೆ ತೆರೆದ ಶೇಖರಣಾ ಸ್ಥಳವಿದೆ.
ಹೊಸ 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯ ಹೊರತಾಗಿ, ನವೀಕೃತ ಕ್ರೆಟಾ ಪರಿಷ್ಕೃತ ಕ್ಲೈಮೆಟ್ ಕಂಟ್ರೋಲ್ ಪ್ಯಾನಲ್, 360-ಡಿಗ್ರಿ ಕ್ಯಾಮರಾ, ಮತ್ತು ಸುಧಾರಿತ ಚಾಲಕ ಸಹಾಯ ವ್ಯವಸ್ಥೆ (ADAS) ಜೊತೆಗೆ ಡ್ಯುಯಲ್ ಝೋನ್ AC ಅನ್ನು ಪಡೆದಿದೆ. ಇದು ತನ್ನ ನಿರ್ಗಮಿತ ಮಾದರಿಯಿಂದ ವಿಹಂಗಮ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ವೆಂಟಿಲೇಟೆಡ್ ಮುಂಭಾಗದ ಸೀಟುಗಳು, ಮತ್ತು 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್ ಅನ್ನು ಉಳಿಸಿಕೊಂಡಿದೆ. ಇದರ ಸುರಕ್ಷತಾ ಫೀಚರ್‌ಗಳು ಆರು ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ISOFIX ಚೈಲ್ಡ್ ಸೀಟ್ ಆ್ಯಕರೇಜ್‌ಗಳು ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC) ಗಳನ್ನು ಹೊಂದಿದೆ.
ಹ್ಯುಂಡೈ ಹಲವಾರು ಎಂಜಿನ್-ಗೇರ್‌ಬಾಕ್ಸ್‌ಗಳ ಆಯ್ಕೆಯೊಂದಿಗೆ ನವೀಕೃತ ಕ್ರೆಟಾವನ್ನು ಈ ಕೆಳಗಿನಂತೆ ನೀಡುತ್ತಿದೆ:
ವಿಶೇಷಣಗಳು |
1.5-ಲೀಟರ್ ಪೆಟ್ರೋಲ್ |
1.5-ಲೀಟರ್ ಟರ್ಬೋ-ಪೆಟ್ರೋಲ್ |
1.5-ಲೀಟರ್ ಡಿಸೇಲ್ |
ಪವರ್ |
115 PS |
160 PS |
116 PS |
ಟಾರ್ಕ್ |
144 Nm |
253 Nm |
250 Nm |
ಟ್ರಾನ್ಸ್‌ಮಿಷನ್ |
6-ಸ್ಪೀಡ್ MT, CVT |
7-ಸ್ಪೀಡ್ DCT |
6-ಸ್ಪೀಡ್ MT, 6-ಸ್ಪೀಡ್ AT |
ಟರ್ಬೋ ಪೆಟ್ರೋಲ್ ಎಂಜಿನ್‌ನೊಂದಿಗೆ 6-ಸ್ಪೀಡ್ MT ಮತ್ತು 7-ಸ್ಪೀಡ್ DCT ಎರಡನ್ನೂ ಪಡೆಯುವ ಹೊಸ ವೆರ್ನಾಗಿಂತ ಭಿನ್ನವಾಗಿ, ಅದೇ ಎಂಜಿನ್ ಎಸ್‌ಯುವಿ ನಲ್ಲಿ DCT ಗೇರ್‌ಬಾಕ್ಸ್‌ನೊಂದಿಗೆ ಮಾತ್ರ ಲಭ್ಯವಿರುತ್ತದೆ.
ಇದನ್ನೂ ಪರಿಶೀಲಿಸಿ: ನವೀಕೃತ ಹ್ಯುಂಡೈ ಕ್ರೆಟಾದ ವೇರಿಯೆಂಟ್‌ಗಳು ಮತ್ತು ಪವರ್‌ಟ್ರೇನ್ ಆಯ್ಕೆಗಳು ಬಹಿರಂಗ
ಪ್ರತಿಸ್ಪರ್ಧಿಗಳು
ನವೀಕೃತ ಹ್ಯುಂಡೈ ಕ್ರೆಟಾ ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್ , ಹೋಂಡಾ ಎಲಿವೇಟ್, ಸ್ಕೋಡಾ ಕುಶಾಕ್, ಎಂಜಿ ಆಸ್ಟರ್, ಫೋಕ್ಸ್‌ವ್ಯಾಗನ್ ಟೈಗನ್, ಮತ್ತು ಸಿಟ್ರಾನ್ C3 ಏರ್‌ಕ್ರಾಸ್‌ಗಳಿಗೆ ಪ್ರತಿಸ್ಪರ್ಧೆಯನ್ನು ಒಡ್ಡುತ್ತದೆ.
ಇನ್ನಷ್ಟು ಇಲ್ಲಿ ಓದಿ : ಕ್ರೆಟಾ ಆಟೋಮ್ಯಾಟಿಕ್