• English
  • Login / Register

ಗ್ರ್ಯಾಂಡ್ i10 ನಿಯೋಸ್‌ಗೆ ಹೋಲಿಸಿದರೆ 5 ಹೆಚ್ಚುವರಿ ಫೀಚರ್‌ಗಳನ್ನು ಹೊಂದಿರುವ ಎಕ್ಸ್‌ಟರ್

ಹುಂಡೈ ಎಕ್ಸ್‌ಟರ್ ಗಾಗಿ rohit ಮೂಲಕ ಜೂನ್ 19, 2023 02:33 pm ರಂದು ಪ್ರಕಟಿಸಲಾಗಿದೆ

  • 23 Views
  • ಕಾಮೆಂಟ್‌ ಅನ್ನು ಬರೆಯಿರಿ

ಅಲ್ಲದೇ ಹ್ಯುಂಡೈ ಎಕ್ಸ್‌ಟರ್ ತನ್ನ ಹ್ಯಾಚ್‌ಬ್ಯಾಕ್ ತದ್ರೂಪಿಯೊಂದಿಗೆ ಕೆಲವು ಸಾಮಾನ್ಯ ವಿಷಯಗಳನ್ನೂ ಹೊಂದಿದೆ

Hyundai Exter and Grand i10 Nios

ಹ್ಯುಂಡೈ ಎಕ್ಸ್‌ಟರ್‌ನ ಕ್ಯಾಬಿನ್‌ ಚಿತ್ರಗಳ ಮೊದಲ ವಿವರವಾದ ನೋಟ ನಮಗೀಗ ದೊರೆತಿದೆ. ಈ ಕಾರುತಯಾರಕರು ಮೈಕ್ರೋ SUVಯಲ್ಲಿ ಆಫರ್‌ನಲ್ಲಿ ಇರುವ ಅನೇಕ ಫೀಚರ್‌ಗಳನ್ನು ದೃಢಪಡಿಸಿದ್ದಾರೆ. ಲೈನ್ಅಪ್‌ನಲ್ಲಿ ಎಕ್ಸ್‌ಟರ್ ಗ್ರ್ಯಾಂಡ್ i10 ನಿಯೋಸ್‌ಗಿಂತ ಮೇಲಿನ ಸ್ಥಾನದಲ್ಲಿರುವುದರಿಂದ, ಇದು ತನ್ನ ಭಾವಿಸಲಾದ ತದ್ರೂಪಿಗಿಂತ ಹೊಸ ಫೀಚರ್‌ಗಳನ್ನು ಪಡೆದಿದೆ.

 ಗ್ರ್ಯಾಂಡ್ i10 ನಿಯೋಸ್‌ಗೆ ಹೋಲಿಸಿದರೆ ಈ ಎಕ್ಸ್‌ಟರ್ ನೀಡುವ ಟಾಪ್ ಐದು ಫೀಚರ್‌ಗಳನ್ನು ನಾವು ಪರಿಶೀಲಿಸೋಣ:

 ಡಿಜಿಟಲೈಸ್ ಆಗಿರುವ ಡ್ರೈವರ್ ಡಿಸ್‌ಪ್ಲೇ

Hyundai Exter digitised driver display

2023 Hyundai Grand i10 Nios

 ಗ್ರ್ಯಾಂಡ್ i10 ನಿಯೋಸ್‌ನ ಇನ್ಸ್‌ಟ್ರುಮೆಂಟ್ ಕ್ಲಸ್ಟರ್

 ಹ್ಯುಂಡೈ, ಈ ಎಕ್ಸ್‌ಟರ್‌ ಅನ್ನು ನವೀಕೃತ ವೆನ್ಯೂನಲ್ಲಿರುವಂತೆ ಡಿಜಿಟಲೈಸ್ ಆದ ಇನ್ಸ್‌ಟ್ರುಮೆಂಟ್ ಕ್ಲಸ್ಟರ್‌ನಿಂದ ಸಜ್ಜುಗೊಳಿಸಿದೆ. ಅಲ್ಲದೇ ಇದು ಟೈರ್ ಪ್ರೆಶರ್‌ಗಳು, ಓಡೋಮೀಟರ್ ರೀಡಿಂಗ್ ಮತ್ತು ಖಾಲಿಯಾಗಲು ಇರುವ ದೂರ ಮುಂತಾದ ಪ್ರಮುಖ ಮಾಹಿತಿಯನ್ನು ತೋರಿಸಲು ಮಧ್ಯದಲ್ಲಿ ಬಣ್ಣದ TFT MID ಅನ್ನೂ ಪಡೆದಿದೆ. ಇದೇವೇಳೆ, ಈ ಗ್ರ್ಯಾಂಡ್ i10 ನಿಯೋಸ್  ಮಾತ್ರ ಎರಡು ಅನಾಲಾಗ್ ಡಯಲ್‌ಗಳ ಮಧ್ಯದಲ್ಲಿ ಬಣ್ಣದ TFT ಡಿಸ್‌ಪ್ಲೇ ಅನ್ನು ಪಡೆದಿದೆ.

 ಸ್ಟಾಂಡರ್ಡ್ ಆಗಿ ಆರು ಏರ್‌ಬ್ಯಾಗ್‌ಗಳು

Hyundai Exter cabin

ನವೀಕೃತ ಗ್ರ್ಯಾಂಡ್ i10 ನಿಯೋಸ್ ನಾಲ್ಕನ್ನು ಸ್ಟಾಂಡರ್ಡ್ ಆಗಿ ಹೊಂದಿರುವ ಆರರ ತನಕ ಏರ್‌ಬ್ಯಾಗ್‌ಗಳನ್ನು ನೀಡಿದರೆ, ಹ್ಯುಂಡೈ ಒಂದು ಹೆಜ್ಜೆ ಮುಂದೆ ಹೋಗಿ ಎಕ್ಸ್‌ಟರ್‌ಗೆ ಆರು ಏರ್‌ಬ್ಯಾಗ್‌ಗಳನ್ನು ಸ್ಟಾಂಡರ್ಡ್ ಆಗಿ ನೀಡುತ್ತದೆ. ತನ್ನ ನೇರ ಪ್ರತಿಸ್ಪರ್ಧಿ ಟಾಟಾ ಪಂಚ್‌ಗೆ ಹೋಲಿಸಿದರೆ ಎಕ್ಸ್‌ಟರ್‌ಗೆ ಹೊಂದಿರುವ ಅನುಕೂಲಗಳಲ್ಲಿ ಇದು ಕೂಡಾ ಒಂದು.

 ಡ್ಯುಯಲ್-ಕ್ಯಾಮರಾ ಡ್ಯಾಶ್‌ಕ್ಯಾಮ್

Hyundai Exter dashcam

ವೆನ್ಯೂ N ಲೈನ್, ಡ್ಯಾಶ್‌ಕ್ಯಾಮ್ ಸೆಟಪ್ ಅನ್ನು ಆ್ಯಕ್ಸಸರಿ ಆಗಿ ಅಲ್ಲ, ಬದಲಾಗಿ ಅಧಿಕೃತ ಫೀಚರ್‌ಗಳ ಪಟ್ಟಿಯಲ್ಲೇ ಹೊಂದಿರುವ ಭಾರತದಲ್ಲಿ ಹ್ಯುಂಡೈನ ಮೊದಲ ಕಾರಾಗಿದೆ. ತುರ್ತು ಸಂದರ್ಭಗಳಲ್ಲಿ ಕೈಗೆಟುಕುವಂತಹ ಎರಡು ಡಿಸ್‌ಪ್ಲೇ ಯೂನಿಟ್‌ಗಳನ್ನು ಎಕ್ಸ್‌ಟರ್‌ ಪಡೆದಿದೆ ಎಂದು ಹ್ಯುಂಡೈ ದೃಢಪಡಿಸಿದ್ದು ಇದು ನಿಮ್ಮ ಪ್ರಯಾಣಗಳನ್ನು ರೆಕಾರ್ಡ್ ಮಾಡುತ್ತದೆ ಹಾಗೂ ದೀರ್ಘ ಮತ್ತು ಸಾಹಸದ ಪ್ರಯಾಣಗಳನ್ನು ದಾಖಲಿಸುತ್ತದೆ.

 ಇದನ್ನೂ ನೋಡಿ: ನವೀಕೃತ ಹ್ಯುಂಡೈ i20 N ಲೈನ್ ಮೊದಲ ಬಾರಿಗೆ ಕ್ಯಾಮರಾದಲ್ಲಿ  ಸೆರೆಸಿಕ್ಕಿದೆ

 ಸಿಂಗಲ್-ಪೇನ್ ರೂಫ್

Hyundai Exter sunroof

 ಹ್ಯುಂಡೈನ ಹೊಸ ಸಿಂಗಲ್ ಪೇನ್ ಸನ್‌ರೂಫ್‌ನಿಂದಾಗಿ ಪ್ರವೇಶ-ಹಂತದ SUVಯ ಆಕರ್ಷಣೆಯು ಹೆಚ್ಚಾಗಿದ್ದು, ಗ್ರ್ಯಾಂಡ್ i10 ನಿಯೋಸ್ ಮಾತ್ರವಲ್ಲದೇ ಪಂಚ್‌ನಿಂದಲೂ ಇದನ್ನು ಪ್ರತ್ಯೇಕಿಸುತ್ತದೆ. ಭಾರತದಲ್ಲಿ ಇದು ಸನ್‌ರೂಫ್ ಹೊಂದಿರುವ ಅತ್ಯಂತ ಸಣ್ಣ ಆಫರಿಂಗ್ ಆಗಿರಬಹುದು.

 ಸೆಮಿ-ಲೆದರೆಟ್ ಅಪ್‌ಹೋಲ್ಸ್‌ಟ್ರಿ

Hyundai Exter semi-leatherette upholstery

 ತನ್ನ ಟಾಪ್-ಸ್ಪೆಕ್‌ ವೇರಿಯೆಂಟ್‌ಗಳಲ್ಲಿಯೂ ಫ್ಯಾಬ್ರಿಕ್ ಸೀಟುಗಳನ್ನು ಹೊಂದಿರುವ ಗ್ರ್ಯಾಂಡ್ i10 ನಿಂಯೋಸ್‌ಗೆ ಭಿನ್ನವಾಗಿರುವ ಎಕ್ಸ್‌ಟರ್ ಸೆಮಿ-ಲೆದರೆಟ್ ಅಪ್‌ಹೋಲ್ಸ್‌ಟ್ರಿಯನ್ನು ಪಡೆದಿದೆ. ಎಕ್ಸ್‌ಟರ್ ಆಲ್-ಬ್ಲ್ಯಾಕ್ ಕ್ಯಾಬಿನ್ ಥೀಮ್ ಹೊಂದಿರುವ ಈ ಹ್ಯಾಚ್‌ಬ್ಯಾಕ್ ಡ್ಯುಯಲ್-ಟೋನ್ ಇಂಟೀರಿಯರ್‌ ಆಯ್ಕೆಯನ್ನೂ ಹೊಂದಿದೆ.

 ಸಂಬಂಧಿತ: ಹ್ಯುಂಡೈ ಎಕ್ಸ್‌ಟರ್: ಇದಕ್ಕಾಗಿ ನೀವು ಕಾಯಬೇಕೆ ಅಥವಾ ಅದರ ಪ್ರತಿಸ್ಪರ್ಧಿಗಳನ್ನು ಆಯ್ಕೆ ಮಾಡಬೇಕೆ?

ಪ್ರಮುಖ ಹೋಲಿಕೆಗಳು

 ಈ ಎಕ್ಸ್‌ಟರ್‌ಗೆ ಹ್ಯುಂಡೈ ಗಮನಾರ್ಹವಾಗಿ ವಿಭಿನ್ನ ಕ್ಯಾಬಿನ್ ಮತ್ತು ಎಕ್ಸ್‌ಟೀರಿಯರ್ ಡಿಸೈನ್ ನೀಡಿದ್ದರೂ ಇದು ಗ್ರ್ಯಾಂಡ್ i10 ನಿಯೋಸ್‌ನ ಕೆಲವು ಫೀಚರ್‌ಗಳನ್ನೂ ಹೊಂದಿದೆ.

Hyundai Grand i10 Nios touchscreen
Hyundai Grand i10 Nios wireless phone charging
 ಗ್ರ್ಯಾಂಡ್ i10 ನಿಯೋಸ್‍ನಲ್ಲಿರುವಂತೆಯೇ ಎಕ್ಸ್‌ಟರ್ ಕೂಡಾ 8-ಇಂಚು ಟಚ್‌ಸ್ಕ್ರೀನ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ಕ್ರೂಸ್ ಕಂಟ್ರೋಲ್, ಆಟೋ ಕ್ಲೈಮೇಟ್ ಕಂಟ್ರೋಲ್ ಮತ್ತು ಅದರಂತೆಯೇ ಸ್ಟೀರ್ ವ್ಹೀಲ್‌ನಿಂದ ಸಜ್ಜುಗೊಂಡಿದೆ. ಅಲ್ಲದೇ ಅದರಲ್ಲಿರುವ ವ್ಹೀಲ್‌ಬೇಸ್ ಮತ್ತು ಪವರ್‌ಟ್ರೇನ್ ಆಯ್ಕೆಗಳನ್ನೂ ಹೊಂದಿದೆ: 1.2-ಲೀಟರ್ ಪೆಟ್ರೋಲ್ ಇಂಜಿನ್ ಅನ್ನು ಮ್ಯಾನುವಲ್ ಮತ್ತು AMT ಜೊತೆಗೆ ಮತ್ತು CNG ಅನ್ನು ಪರ್ಯಾಯವಾಗಿ ಪಡೆದಿದೆ.

 ಬಿಡುಗಡೆ ಮತ್ತು ಬೆಲೆ ಅಪ್‌ಡೇಟ್

Hyundai Exter rear

 ಈ ಹ್ಯುಂಡೈ ಎಕ್ಸ್‌ಟರ್ ಜುಲೈ 10ಕ್ಕೆ ಬಿಡುಗಡೆಗೆ ತಯಾರಾಗಿದೆ. ಇದರ ಬೆಲೆಯು ರೂ.6 ಲಕ್ಷದಿಂದ (ಎಕ್ಸ್-ಶೋರೂಂ) ಇರಬಹುದೆಂದು ನಿರೀಕ್ಷಿಸಲಾಗಿದೆ. ಟಾಟಾ ಪಂಚ್ ಜೊತೆಗೆ ಎಕ್ಸ್‌ಟರ್, ಸಿಟ್ರನ್  C3, ಮಾರುತಿ ಫ್ರಾಂಕ್ಸ್, ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕೈಗರ್‌ಗೆ ಪೈಪೋಟಿ ನೀಡುತ್ತದೆ.

ಇನ್ನಷ್ಟು ಓದಿ : ಹ್ಯುಂಡೈ ಗ್ರ್ಯಾಂಡ್ i10 ನಿಯೋಸ್ AMT

ಅವರಿಂದ ಪ್ರಕಟಿಸಲಾಗಿದೆ
was this article helpful ?

0 out of 0 found this helpful

Write your Comment on Hyundai ಎಕ್ಸ್‌ಟರ್

Read Full News

explore similar ಕಾರುಗಳು

Similar cars to compare & consider

ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ

ಕಾರು ಸುದ್ದಿ

  • ಟ್ರೆಂಡಿಂಗ್ ಸುದ್ದಿ
  • ಇತ್ತಿಚ್ಚಿನ ಸುದ್ದಿ

trending ಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
×
We need your ನಗರ to customize your experience