ಸನ್‌ರೂಫ್‌ನೊಂದಿಗೆ Hyundai Exter ನ್ಯೂ ಎಸ್ ಪ್ಲಸ್ ಮತ್ತು ಎಸ್(ಒ) ಪ್ಲಸ್ ವೇರಿಯಂಟ್ ಬಿಡುಗಡೆ
ಈ ಹೊಸ ಆವೃತ್ತಿಗಳ ಬಿಡುಗಡೆಯೊಂದಿಗೆ ಎಕ್ಸ್‌ಟರ್‌ನಲ್ಲಿ ಸಿಂಗಲ್-ಪೇನ್ ಸನ್‌ರೂಫ್ ಅನ್ನು ಹಿಂದಿಗಿಂತ ಸುಮಾರು 46,000 ರೂ.ಗಳಷ್ಟು ಕಡಿಮೆ ಬೆಲೆಯಲ್ಲಿ ನೀಡಲಾಗುತ್ತಿದೆ
-
ಈ ಹೊಸ ಸನ್‌ರೂಫ್ ಅನ್ನು ಪಡೆಯುತ್ತವೆ, ಇದು ಎಕ್ಸ್‌ಟರ್‌ಗೆ ಫೀಚರ್ ಅನ್ನು ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ.
-
ಎಕ್ಸ್‌ಟರ್ ಎಸ್(ಒಪ್ಶನಲ್) ಪ್ಲಸ್ ಬೆಲೆ 7.86 ಲಕ್ಷ ರೂ.ಗಳಾಗಿದ್ದು, ಎಸ್ ಪ್ಲಸ್ ಬೆಲೆ 8.44 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ.
-
ಹೊಸ ಎರಡೂ ಆವೃತ್ತಿ 1.2-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತವೆ, ಎಸ್(ಒಪ್ಶನಲ್) ಪ್ಲಸ್ ಮ್ಯಾನುಯಲ್ ಅನ್ನು ಪಡೆಯುತ್ತದೆ ಮತ್ತು ಎಸ್ ಪ್ಲಸ್ ಎಎಮ್‌ಟಿ ಅನ್ನು ಪಡೆಯುತ್ತದೆ.
-
ಇತರ ಫೀಚರ್‌ಗಳಲ್ಲಿ 8-ಇಂಚಿನ ಟಚ್‌ಸ್ಕ್ರೀನ್, ಸೆಮಿ-ಡಿಜಿಟಲ್ ಡ್ರೈವರ್‌ನ ಡಿಸ್‌ಪ್ಲೇ ಮತ್ತು ಹಿಂಭಾಗದ ವೆಂಟ್‌ನಲ್ಲಿ ಮ್ಯಾನುಯಲ್ ಎಸಿ ಸೇರಿವೆ.
-
ಸುರಕ್ಷತಾ ಫೀಚರ್‌ಗಳಲ್ಲಿ ಆರು ಏರ್‌ಬ್ಯಾಗ್‌ಗಳು ಮತ್ತು TPMS ಸೇರಿವೆ.
-
ದೆಹಲಿಯಲ್ಲಿ ಹ್ಯುಂಡೈ ಎಕ್ಸ್‌ಟರ್‌ನ ಬೆಲೆಗಳು 6 ಲಕ್ಷ ರೂ.ನಿಂದ 10.43 ಲಕ್ಷ ರೂ.ವರೆಗೆ(ಎಕ್ಸ್ ಶೋರೂಂ) ಇರಲಿದೆ.
ಎರಡು ಹೊಸ ಆವೃತ್ತಿಗಳಾದ ಎಸ್ ಪ್ಲಸ್ (ಎಎಮ್‌ಟಿ) ಮತ್ತು ಎಸ್(ಒಪ್ಶನಲ್) ಪ್ಲಸ್ (ಮ್ಯಾನುಯಲ್ ಟ್ರಾನ್ಸ್‌ಮಿಶನ್) ಅನ್ನು ಹ್ಯುಂಡೈ ಎಕ್ಸ್‌ಟರ್‌ನ ಆವೃತ್ತಿಗಳ ಪಟ್ಟಿಗೆ ಸೇರಿಸಲಾಗಿದೆ. ಈ ಆವೃತ್ತಿಗಳ ಬೆಲೆಗಳು ಈ ಕೆಳಗಿನಂತಿವೆ:
ವೇರಿಯೆಂಟ್ |
ಬೆಲೆ |
ಹ್ಯುಂಡೈ ಎಕ್ಸ್‌ಟರ್ ಎಸ್(ಒಪ್ಶನಲ್) ಪ್ಲಸ್ (ಮ್ಯಾನುಯಲ್) |
7.86 ಲಕ್ಷ ರೂ. |
ಹ್ಯುಂಡೈ ಎಕ್ಸ್‌ಟರ್ ಎಸ್ ಪ್ಲಸ್ (ಎಎಮ್‌ಟಿ) |
8.44 ಲಕ್ಷ ರೂ. |
ಹೊಸ ಆವೃತ್ತಿಗಳು ಸನ್‌ರೂಫ್ ಅನ್ನು ಪಡೆಯುತ್ತವೆ ಮತ್ತು 1.2-ಲೀಟರ್ ನ್ಯಾಚುರಲಿ ಎಸ್ಪಿರೇಟೆಡ್ ಪೆಟ್ರೋಲ್ ಎಂಜಿನ್‌ಗಳೊಂದಿಗೆ ಲಭ್ಯವಿವೆ ಮತ್ತು 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಎಎಮ್‌ಟಿ (ಆಟೋಮೆಟೆಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್) ನೊಂದಿಗೆ ಬರುತ್ತವೆ. ಹೊಸ ಆವೃತ್ತಿಗಳೊಂದಿಗೆ, ಮೈಕ್ರೊ ಎಸ್‌ಯುವಿಯಲ್ಲಿನ ಸನ್‌ರೂಫ್ ಅನ್ನು ಮ್ಯಾನುವಲ್ ಲೈನ್‌ಅಪ್‌ನಲ್ಲಿ 37,000 ರೂ. ಮತ್ತು ಎಎಮ್‌ಟಿ ರೇಂಜ್‌ನಲ್ಲಿ 46,000 ರೂ. ನಷ್ಟು ಬೆಲೆ ಕಡಿತದೊಂದಿಗೆ ಪಡೆಯಬಹುದಾಗಿದೆ.
ಈ ಎರಡೂ ಹೊಸ ಆವೃತ್ತಿಗಳನ್ನು ನಾವು ವಿವರವಾಗಿ ನೋಡೋಣ:
ಹೊಸ ಹ್ಯುಂಡೈ ಎಕ್ಸ್‌ಟರ್ ಎಸ್(ಒ) ಪ್ಲಸ್ ಮತ್ತು ಎಕ್ಸ್‌ಟರ್ ಎಸ್ ಪ್ಲಸ್ ಆವೃತ್ತಿಗಳು
ಹೊಸ ಎಕ್ಸ್‌ಟರ್ ಎಸ್(ಒಪ್ಶನಲ್) ಪ್ಲಸ್ ಅವೃತ್ತಿಯು ಮಿಡ್-ಸ್ಪೆಕ್ ಎಸ್(ಒಪ್ಶನಲ್) ಮತ್ತು ಎಸ್‌ಎಕ್ಸ್ ಆವೃತ್ತಿಗಳ ನಡುವೆ ಸ್ಥಾನ ಪಡೆದಿದ್ದು, ಇವುಗಳ ಬೆಲೆಗಳು ಕ್ರಮವಾಗಿ 7.65 ಲಕ್ಷ ರೂ. ಮತ್ತು 8.23 ಲಕ್ಷ ರೂ.ಗಳಷ್ಟು ಇರಲಿದೆ. ಈ ಹೊಸ ಆವೃತ್ತಿಯು 1.2-ಲೀಟರ್ ಪೆಟ್ರೋಲ್ ಎಂಜಿನ್ (83 ಪಿಎಸ್ ಮತ್ತು 114 ಎನ್‌ಎಮ್) ನೊಂದಿಗೆ ಮಾತ್ರ ಬರುತ್ತದೆ, ಎಕ್ಸ್‌ಕ್ಲೂಸಿವ್ ಆಗಿ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ. ಹೊಸ ಎಕ್ಸ್‌ಟರ್ ಎಸ್(ಒಪ್ಶನಲ್) ಪ್ಲಸ್ ನಲ್ಲಿ ಯಾವುದೇ ಸಿಎನ್‌ಜಿ ಪವರ್‌ಟ್ರೇನ್ ಇಲ್ಲ.
ಮತ್ತೊಂದೆಡೆ, ಹೊಸ ಎಕ್ಸ್‌ಟರ್ ಎಸ್ ಪ್ಲಸ್ ಆವೃತ್ತಿಯು ಮಿಡ್-ಸ್ಪೆಕ್ ಎಸ್ ಮತ್ತು ಎಸ್‌ಎಕ್ಸ್ ಆವೃತ್ತಿಗಳ ನಡುವೆ ಸ್ಲಾಟ್‌ಗಳನ್ನು ಹೊಂದಿದೆ, ಇದರ ಬೆಲೆ ಕ್ರಮವಾಗಿ 8.23 ಲಕ್ಷ ರೂ. ಮತ್ತು 8.90 ಲಕ್ಷ ರೂ. ನಷ್ಟು ಇದೆ. ಈ ಆವೃತ್ತಿಯು 1.2-ಲೀಟರ್ ಪೆಟ್ರೋಲ್ ಎಂಜಿನ್ (83 ಪಿಎಸ್ ಮತ್ತು 114 ಎನ್‌ಎಮ್) ನೊಂದಿಗೆ ಬರುತ್ತದೆ ಆದರೆ 5-ಸ್ಪೀಡ್ ಎಎಮ್‌ಟಿ (ಆಟೋಮೆಟೆಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್) ನೊಂದಿಗೆ ಜೋಡಿಸಲಾಗಿದೆ. ಈ ಆವೃತ್ತಿಯಲ್ಲಿ ಯಾವುದೇ ಸಿಎನ್‌ಜಿ ಆಯ್ಕೆಯು ಲಭ್ಯವಿಲ್ಲ.
ಇದನ್ನೂ ಓದಿ: 2024 Hyundai Creta Knight ಎಡಿಷನ್ ಬಿಡುಗಡೆ, ಬೆಲೆಗಳು 14.51 ಲಕ್ಷ ರೂ.ನಿಂದ ಪ್ರಾರಂಭ
ಫೀಚರ್‌ಗಳು ಮತ್ತು ಸುರಕ್ಷತೆ
ಈ ಹೊಸ ವೇರಿಯಂಟ್‌ಗಳಿಗೆ ಅವುಗಳು ಆಧರಿಸಿದ ಟ್ರಿಮ್‌ನಲ್ಲಿ ಸೇರಿಸಲಾದ ಏಕೈಕ ಫೀಚರ್ ಎಂದರೆ ಸಿಂಗಲ್-ಪೇನ್ ಸನ್‌ರೂಫ್. ಹ್ಯುಂಡೈ ಎಕ್ಸ್‌ಟರ್ ಎಸ್ ಟ್ರಿಮ್‌ನಿಂದ ಪಡೆಯಲಾದ ಫೀಚರ್‌ಗಳ ಸೂಟ್ 8-ಇಂಚಿನ ಟಚ್‌ಸ್ಕ್ರೀನ್ ಮತ್ತು ಸೆಮಿ-ಡಿಜಿಟಲ್ ಡ್ರೈವರ್‌ಗಳ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಇತರ ಅಗತ್ಯ ಫೀಚರ್‌ಗಳಲ್ಲಿ ಹಿಂಭಾಗದ ವೆಂಟ್ಸ್‌ನಲ್ಲಿ ಮ್ಯಾನುಯಲ್ ಎಸಿ, ಕ್ರೂಸ್ ನಿಯಂತ್ರಣ, ವಿದ್ಯುತ್ ಹೊಂದಾಣಿಕೆಯ ORVM ಗಳು (ಓಟ್‌ಸೈಡ್ ರಿಯರ್ ವ್ಯೂ ಮಿರರ್) ಮತ್ತು ಎಲ್ಲಾ ಪವರ್ ವಿಂಡೋಗಳು ಸೇರಿವೆ. ಎಸ್ ಪ್ಲಸ್ ಆವೃತ್ತಿಯು ಎಸ್ (ಒಪ್ಶನಲ್) ಪ್ಲಸ್ ಆವೃತ್ತಿಯಲ್ಲಿ ನೀಡಲಾದ ಪೀಚರ್‌ಗಳಿಗಿಂತ ಹೆಚ್ಚುವರಿಯಾಗಿ ಬಟನ್‌ನಲ್ಲಿ ಪೋಲ್ಡ್ ಮಾಡಬಹುದಾದ ORVM ಗಳನ್ನು ಪಡೆಯುತ್ತದೆ.
ಸುರಕ್ಷತೆಯ ದೃಷ್ಟಿಯಿಂದ, ಎರಡೂ ಆವೃತ್ತಿಗಳು ಆರು ಏರ್‌ಬ್ಯಾಗ್‌ಗಳನ್ನು (ಎಲ್ಲಾ ಆವೃತ್ತಿಗಳಲ್ಲಿ ಲಭ್ಯ), ಎಲ್ಲಾ ಸೀಟ್‌ಗಳಿಗೆ 3-ಪಾಯಿಂಟ್ ಸೀಟ್‌ಬೆಲ್ಟ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) ಮತ್ತು ಹಿಲ್-ಸ್ಟಾರ್ಟ್ ಅಸಿಸ್ಟ್ ಅನ್ನು ಪಡೆಯುತ್ತವೆ.
ಬೆಲೆ ಮತ್ತು ಪ್ರತಿಸ್ಪರ್ಧಿಗಳು
ಹ್ಯುಂಡೈ ಎಕ್ಸ್‌ಟರ್‌ನ ಬೆಲೆಗಳು 6 ಲಕ್ಷದಿಂದ 10.43 ಲಕ್ಷ ರೂ.ವರೆಗೆ ಇದೆ. ಹ್ಯುಂಡೈ ಎಕ್ಸ್‌ಟರ್ ಮಾರುಕಟ್ಟೆಯಲ್ಲಿ ಟಾಟಾ ಪಂಚ್, ಮಾರುತಿ ಇಗ್ನಿಸ್, ನಿಸ್ಸಾನ್ ಮ್ಯಾಗ್ನೈಟ್, ರೆನಾಲ್ಟ್ ಕಿಗರ್ ಮತ್ತು ಸಿಟ್ರೊಯೆನ್ ಸಿ3, ಹಾಗೆಯೇ ಟೊಯೊಟಾ ಟೈಸರ್ ಮತ್ತು ಮಾರುತಿ ಫ್ರಾಂಕ್ಸ್‌ನಂತಹ ಸಬ್ -4 ಮೀ ಕ್ರಾಸ್‌ಒವರ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ.
ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ಆಗಿದೆ.
ಎಲ್ಲಾ ಇತ್ತೀಚಿನ ಆಟೋಮೋಟಿವ್ ಆಪ್‌ಡೇಟ್‌ಗಳಿಗಾಗಿ ಕಾರ್‌ದೇಖೋದ ವಾಟ್ಸ್ಆಪ್ ಚಾನಲ್ ಅನ್ನು ಫಾಲೋ ಮಾಡಿ
ಇನ್ನಷ್ಟು ಓದಿ: ಹುಂಡೈ ಎಕ್ಸ್‌ಟರ್ ಎಎಮ್‌ಟಿ